ವಜ್ರಾಯುಧ ಚಲನಚಿತ್ರದ ಹಾಡುಗಳು
- ಜಗ ಉರುಳುತಿದೆ
- ಮೋಹಿನಿ ಮೋಹಿನಿ
- ತೂರು ತೂರು
- ಕಾಲೇಜಿನ ಕನಸಿನ ರಾಣಿ
ವಜ್ರಾಯುಧ (೧೯೯೨) - ಜಗ ಉರುಳುತಿದೆ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಮಂಜುಳಾಗುರುರಾಜ, ಕೋರಸ್
ಜಗ ಉರುಳುತಿದೆ ಯುಗ ಮರಳುತಿದೆ ಸಿಡಿದೇಳಲಿ ಮಹಿಳಾ ಲೋಕ
ನರ ಭಕ್ಷಕರ ಜೂಜಾಟದಲಿ ಕಣ್ಣಿಲ್ಲದ ನ್ಯಾಯವು ಮೂಕ ಸ್ತ್ರೀ ಶೋಷಣೆ
ನಾನಾ ವಿಧ ಹೆಣ್ಣಾಗಲೀ ವಜ್ರಾಯುಧ...
ಜಗ ಉರುಳುತಿದೆ ಯುಗ ಮರಳುತಿದೆ ಸಿಡಿದೇಳಲಿ ಮಹಿಳಾ ಲೋಕ
ನರ ಭಕ್ಷಕರ ಜೂಜಾಟದಲಿ ಕಣ್ಣಿಲ್ಲದ ನ್ಯಾಯವು ಮೂಕ ಸ್ತ್ರೀ ಶೋಷಣೆ
ನಾನಾ ವಿಧ ಹೆಣ್ಣಾಗಲೀ ವಜ್ರಾಯುಧ...
ಓದೋ ಮಹಿಳೆಗೆ ದೇಶದಲಿ ದಿನ ಪರಿಹಾಸ
ಬರಿ ಅಪಹಾಸ್ಯ ದುಡಿಯೋ ಮಹಿಳೆಗೆ ಬದುಕಿನಲಿ
ಬರಿ ಉಪದೇಶ ದಿನ ಉಪವಾಸ
ಏನೀ ಗಂಡಿನ ಧೋರಣೆ ಇನ್ನೂ ಮುಗಿಯಿತು
ಸೈರಣೆ ಮಹಿಳಾ ಯುಗದಲ್ಲಿ ಮುಂದಕೆ ಹೆಣ್ಣೇ ಹೆಣ್ಣಿಗೆ ರಕ್ಷಣೆ
ಕುರುಡಾಗಿದೆ ಬರಡಾಗಿದೆ ದೌರ್ಜನ್ಯಕೆ ವಜ್ರಾಯುಧ...
ಜಗ ಉರುಳುತಿದೆ ಯುಗ ಮರಳುತಿದೆ ಸಿಡಿದೇಳಲಿ ಮಹಿಳಾ ಲೋಕ
ನರ ಭಕ್ಷಕರ ಜೂಜಾಟದಲಿ ಕಣ್ಣಿಲ್ಲದ ನ್ಯಾಯವು ಮೂಕ ಸ್ತ್ರೀ ಶೋಷಣೆ
ನಾನಾ ವಿಧ ಹೆಣ್ಣಾಗಲೀ ವಜ್ರಾಯುಧ...
ತಾಳ್ಮೆ ಕಲಿಯುವ ಕೊನೆತನಕ ಕಹಿ ನುಂಗುವುದು ಉರಿ ಸಹಿಸುವುದು
ಧೂಮಿ ಹಾಕುವ ಕಡೆತನಕ ಶಿರ ಬಾಗುವುದು ಕೆರ ಹಿಡಿಯುವುದು
ಮಾನ ಕಳೆಯುವ ಮೂರ್ಖರು ಪ್ರಾಣ ಕಸಿಯುವ ಅಸುರರು
ಬೇರೆ ಹೆಣ್ಣನು ಹಿಂಸಿಸಿ ತಾಯಿ ತಂಗಿಯ ಮರೆಯುವರು
ಮರ್ಯಾದೆಗೆ ಮಾರ್ಯಾದೆಯ ಅಪಮಾನಕೆ ಅಪಮಾನವು
ಅನ್ಯಾಯಕೆ ಅನ್ಯಾಯವೇ ವಜ್ರಾಯುಧ...
ಜಗ ಉರುಳುತಿದೆ ಯುಗ ಮರಳುತಿದೆ ಸಿಡಿದೇಳಲಿ ಮಹಿಳಾ ಲೋಕ
ನರ ಭಕ್ಷಕರ ಜೂಜಾಟದಲಿ ಕಣ್ಣಿಲ್ಲದ ನ್ಯಾಯವು ಮೂಕ ಸ್ತ್ರೀ ಶೋಷಣೆ
ನಾನಾ ವಿಧ ಹೆಣ್ಣಾಗಲೀ ವಜ್ರಾಯುಧ...
---------------------------------------------------------------------------------------
ವಜ್ರಾಯುಧ (೧೯೯೨) - ಮೋಹಿನಿ ಮೋಹಿನಿ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ
ಮೋಹಿನಿ ಮೋಹಿನಿ ಮಾಯೆ ನಾನು ಮೋಹಿನಿ ಆಟದ ಬೊಂಬೆ ನೀನು
ನಾನು ಹೇಳಿದಂತೆ ಕೇಳು ಈಗ ವಾಸಿ ಮಾಡು ನನ್ನ ಪ್ರೇಮ ರೋಗ
ಮೋಹಿನಿ ಮೋಹಿನಿ ಮಾಯೆ ನಾನು ಮೋಹಿನಿ ಆಟದ ಬೊಂಬೆ ನೀನು
ಕೇಳೋ ಗಂಡು ಒಮ್ಮೆಯೇ ಲೋಕ ಮೆಚ್ಚೋ ರಂಭೆಯೇ
ನಿನ್ನ ನೋಡಿ ಬಂದಿರೇ ಕಣ್ಣ ಮುಂದೆ ನಿಂತಿರೇ
ಪ್ರೇಮ ಸೂತ್ರ ಹೇಳೋ ಹಾದಿ ಕೂಡಿ ಆಡು ಎಂದಿದೆ ಮಂದಹಾಸ ತೋರಿಸು
ಕಣ್ಣು ಕಣ್ಣು ಸೇರಿಸು ಅಂತರಂಗ ನಿನ್ನಂದು ಇನ್ನೂ ಮೇಲೆ ನನ್ನದು
ಒಂದೇ ಕೊನೆ ಒಂದೇ ಮಂಚ ಇನ್ನೂ ಮುಂದೆ ನಮ್ಮದು ಬಾರೋ ಪ್ರಿಯ ಪ್ರಿಯ
ವಿರಹವಿರಲು ಭಯ ನಯ ವಿನಯಗಳು ಏಕೆ ಸರಸದಲಿ ಈ ಹರೆಯದಲಿ
ಮೋಹಿನಿ ಮೋಹಿನಿ ಮಾಯೆ ನಾನು ಮೋಹಿನಿ ಆಟದ ಬೊಂಬೆ ನೀನು
ನಾನು ಹೇಳಿದಂತೆ ಕೇಳು ಈಗ ವಾಸಿ ಮಾಡು ನನ್ನ ಪ್ರೇಮ ರೋಗ
ಮೋಹಿನಿ ಮೋಹಿನಿ ಮಾಯೆ ನಾನು ಮೋಹಿನಿ ಆಟದ ಬೊಂಬೆ ನೀನು
ಒಂದು ಒಳ್ಳೇ ಚುಂಬನ ನೀಡಿ ತಾರೋ ಕಂಪನ
ಒಂದು ಮುದ್ದು ಮಾತಲಿ ಅಪ್ಪಿಕೊಂಡು ತೊಳಲಿ
ಚಂದಮಾಮ ನಾಚೊ ಹಾಗೆ ಪೋಲಿ ಗಾದೆ ಹೇಳು ಬಾ
ಏನೋ ಒಂದು ಯೋಚನೆ ಕೇಳು ಪ್ರೇಮ ಯಾಚನೆ
ಇಂದು ಒಂದು ರಾತ್ರಿಯ ಸ್ನೇಹ ಬೇಡ ಗೆಳೆಯ
ಮುಂದೆವಿಂದೂ ನೀನೇ ಬಂಧು ನನ್ನ ಬಾಳ ಒಡೆಯ
ಬಾರೋ ಪ್ರಿಯ ಪ್ರಿಯ ಬಯಕೆ ಇರಲು ಭಯ ನಯ ವಿನಯಗಳು
ಏಕೆ ಪ್ರಣಯದಲಿ ಈ ಪ್ರಥಮದಲಿ
ಮೋಹಿನಿ ಮೋಹಿನಿ ಮಾಯೆ ನಾನು ಮೋಹಿನಿ ಆಟದ ಬೊಂಬೆ ನೀನು
ನಾನು ಹೇಳಿದಂತೆ ಕೇಳು ಈಗ ವಾಸಿ ಮಾಡು ನನ್ನ ಪ್ರೇಮ ರೋಗ
ಮೋಹಿನಿ ಮೋಹಿನಿ ಮಾಯೆ ನಾನು ಮೋಹಿನಿ ಆಟದ ಬೊಂಬೆ ನೀನು
--------------------------------------------------------------------------------------
ವಜ್ರಾಯುಧ (೧೯೯೨) - ತೂರು ತೂರು
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಚಿತ್ರಾ
ಇಬ್ಬರು : ಟೂರು ಟೂರು ನಮ್ಮ ಟೂರು ನಾವೆಂದೂ ಮರೆಯದ ಟೂರು
ಗಂಡು : ಹಾಡಿ ಕುಣಿದೆವು ಆಗ ಜಾಲಿ ನೆನೆದರೆ ಈಗ
ಹೆಣ್ಣು : ಕುಡಿ ಮೆರೆದೆವು ಅಂದು ಜಾಲಿ ನೆನೆದರೆ ಇಂದು
ಇಬ್ಬರು : ಟೂರು ಟೂರು ನಮ್ಮ ಟೂರು ನಾವೆಂದೂ ಮರೆಯದ ಟೂರು
ಗಂಡು : ಹದಿ ಹರೆಯದ ವಯಸ್ಸಿಗೆ ತುದಿ ಅರಿಯದೆ ಕನಸಿಗೆ
ಅಂಕೆ ಇಲ್ಲ ಆ ದಿನ ಶಂಕೆ ಇಲ್ಲ ಆ ಕ್ಷಣ
ಹೆಣ್ಣು : ಭಯವರಿಯದ ಮನಸಿಗೆ ಜೊತೆ ಬಯಸುವ ಸೊಗಸಿಗೆ
ಚಿಂತೆ ಇಲ್ಲ ಆ ದಿನ ಬೆರೆವುದು ಈ ಮನ
ಗಂಡು : ಸ್ವರ್ಗಕ್ಕೆ ಕಿಚ್ಚು ಹಚ್ಚುವ
ಹೆಣ್ಣು : ಈ ನಮ್ಮ ಸ್ನೇಹದುತ್ಸವ
ಇಬ್ಬರು : ಟೂರು ಟೂರು ನಮ್ಮ ಟೂರು ನಾವೆಂದೂ ಮರೆಯದ ಟೂರು
ಗಂಡು : ಒಲವಿಗೆ ನೀನೇ ಗುರು ಜೊತೆಯಲಿ ಎಂದೂ ಇರು
ಪಾಠ ಮಾತ್ರ ನಿನ್ನದು ಗೆಲುವು ಮಾತ್ರ ನನ್ನದೂ
ಹೆಣ್ಣು : ನಯನಗಳು ಕರೆದರೆ ಹೃದಯಗಳು ಬೆರೆತರೆ
ಅದರ ಹೆಸರೇ ಪ್ರೇಮವೂ ಅದಕೆ ಗುರುವೇ ಮೇಳವು
ಗಂಡು : ಇಬ್ಬರು ಹೀಗೆ ಇರುವ ಊರಿಗೆ ಪಾಠವ ಹೇಳುವಾ....
ಇಬ್ಬರು : ಟೂರು ಟೂರು ನಮ್ಮ ಟೂರು ನಾವೆಂದೂ ಮರೆಯದ ಟೂರು
ಟೂರು ಟೂರು ನಮ್ಮ ಟೂರು ನಾವೆಂದೂ ಮರೆಯದ ಟೂರು
---------------------------------------------------------------------------------------
ವಜ್ರಾಯುಧ (೧೯೯೨) - ಕಾಲೇಜಿನ ಕನಸಿನ ರಾಣಿ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಲತಾಹಂಸಲೇಖ, ಕೋರಸ್
ಗಂಡು : ಕಾಲೇಜಿನ ಕನಸಿನ ರಾಣಿ ಸುಂದರವೇ ನೀ ಕಿನ್ನರ ವಾಣಿ
ಗಾಳಕ್ಕೆ ಸಿಕ್ಕಿ ಬಿದ್ದ ಮೀನು ಇನ್ನೂ ನೀನು
ನಾವೆಲ್ಲ ಮೆಚ್ಚಿಕೊಳ್ಳೋ ರಂಭೆ ನೀನೂ
ಹೆಣ್ಣು : ಮೈಸೂರು ಸಿರಿ ನಾನು ಮಡಿಕೇರಿ ಕಿತ್ತಳೆ ನಾನು
ಬೇಲೂರ ಬೊಂಬೆ ನಾ ಕೋಲಾರ ಚಿನ್ನ ನಾ
ಕಿತ್ತೂರ ಚೆನ್ನಮ್ಮ ನಾ ಕನ್ಯೆಯು ನಾ...
ಗಂಡು : ಕಾಲೇಜಿನ ಕನಸಿನ ರಾಣಿ ಸುಂದರವೇ ನೀ ಕಿನ್ನರ ವಾಣಿ
ಗಂಡು : ಮೈಗೆ ಹುಣ್ಣಿಮೆ ಧಗೆ ನೀ ನೋಡದಿದ್ದರೆ ಮಾತಾಡದಿದ್ದರೆ
ಮಲ್ಲಿಗೆಯು ಹೊಗೆ ನೀ ಸೋಕದಿದ್ದರೆ ಭೂಮಿ ನಿಂತು ಹೋಯಿತು
ನೀನಿತ್ತ ಬಾನದೇ ಈ ಚಿತ್ತ ಓಡದೇ ಕಾಯುತ್ತ ಕಾಯುತ್ತ ಬಾ ಪಿತ್ತ ಏರಿದೆ
ಹೆಣ್ಣು : ನಿತ್ಯ ಕಾಲೇಜು ಬೀದಿಯಲ್ಲಿ ನಿಮ್ಮ ಕಾಟ ಮರ ಕೋತಿ ಆಟ ನಾ ತಾಳೇನಲ್ಲ
ಎಲ್ಲ ಬೀದಿಗೂ ನಿನ್ನ ಹಾಗೆ ಪೋಲಿ ಸಲಗ ಕಾಮಣ್ಣ ಬಳಗ ನಾ ತಾಳೆ ನಲ್ಲ
ಗಂಡು : ಕಾಲೇಜಿನ ಕನಸಿನ ರಾಣಿ ಸುಂದರವೇ ನೀ ಕಿನ್ನರ ವಾಣಿ
ಗಂಡು : ಬೆಳ್ಳಿ ಬೆಟ್ಟದ ಮೇಲೆ ಬಂಗಾರದುಯ್ಯಾಲೆ ನಾ ತಂದು ಕಟ್ಟಲೇ
ನೀ ಬಂದು ಕೂತರೆ ನಾ ಮೆಲ್ಲಗೆ ತೂಗುಲೇ
ದುಂಬಿ ತೋಟದೊಳಗೆ ಚಿನ್ನದ ನಾಡಿನ ಗೀಜಗ ಗೂಡಿನ
ಪಲ್ಲಂಗವೇರಿಸಿ ಕಾಯಲೇ ಚಿನ್ನ ನಾ
ಹೆಣ್ಣು : ಎಲ್ಲ ಕವಿಯಾಗಿ ಹೋದರಿಲ್ಲಿ ಹಾದಿಯಲ್ಲಿ ನಡುಬೀದಿಯಲ್ಲಿ
ಹುಡ್ಗಿರ ಕಂಡು ಎಲ್ಲ ಕಪಿಯಾಗಿ ಹೋದರಲ್ಲಿ
ಕ್ಲಾಸಿನಲ್ಲಿ ಹೊಸ ಪಾಠದಲ್ಲಿ ಸೋಮಾರಿ ದಂಡು
ಗಂಡು : ಕಾಲೇಜಿನ ಕನಸಿನ ರಾಣಿ ಸುಂದರವೇ ನೀ ಕಿನ್ನರ ವಾಣಿ
ಗಾಳಕ್ಕೆ ಸಿಕ್ಕಿ ಬಿದ್ದ ಮೀನು ಇನ್ನೂ ನೀನು
ನಾವೆಲ್ಲ ಮೆಚ್ಚಿಕೊಳ್ಳೋ ರಂಭೆ ನೀನೂ
ಹೆಣ್ಣು : ಮೈಸೂರು ಸಿರಿ ನಾನು ಮಡಿಕೇರಿ ಕಿತ್ತಳೆ ನಾನು
ಬೇಲೂರ ಬೊಂಬೆ ನಾ ಕೋಲಾರ ಚಿನ್ನ ನಾ
ಕಿತ್ತೂರ ಚೆನ್ನಮ್ಮ ನಾ ಕನ್ಯೆಯು ನಾ...
ಗಂಡು : ಕಾಲೇಜಿನ ಕನಸಿನ ರಾಣಿ ಸುಂದರವೇ ನೀ ಕಿನ್ನರ ವಾಣಿ
-------------------------------------------------------------------------------------
No comments:
Post a Comment