1854. ವಿಶ್ವ (೧೯೯೯)

ವಿಶ್ವ ಚಲನಚಿತ್ರದ ಹಾಡುಗಳು 
  1. ಸಾಗರ ಸಾಗರ 
  2. ಅಣ್ಣ ಅಣ್ಣ 
  3. ಕೋನ್ ಐಸ್ 
  4. ವಿಶ್ವ ವಿಶ್ವ 
  5. ಹೇ... ಬುಡ್ಡ ಬುಡ್ಡ  
  6. ಅರಸಿಕರೆ 
ವಿಶ್ವ (೧೯೯೯) - ಸಾಗರ ಸಾಗರ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ, ರಾಜೇಶ 

ಕೋರಸ್ : ಹೇ... ಹೇಹೇಹೇ ... ಗರಿ ಮಗರಿ ಮಮಗರಿಮಾ ಹಾ... ಹಾ... ಆಆಆ... 
ಗಂಡು : ಸಾಗರ... ಸಾಗರ ಹೆಣ್ಣಿನ ಕಣ್ಣಿದು ಸಾಗರ 
            ಸಾಗರ... ಸಾಗರ ಹೆಣ್ಣಿನ ಮನಸಿದು ಸಾಗರ 
            ಕೋಟಿಕೋಟಿ ಕನಸುಗಳು ಲೋಕದೇಳು ಸೊಗಸುಗಳು ಕಂಡು ಕೊಂಡಳಾ 
            ನಿನ್ನ ಅಳೆಯಲೇನು ನಾನು ಬ್ರಹ್ಮನೇ 
ಹೆಣ್ಣು : ನೇಸರ... ನೇಸರ ನೀನೇ ಹೆಣ್ಣಿನ ನೇಸರ ನೇಸರ ನೇಸರ ನೀನೇ ಸಾಗರ ನೇಸರ 
          ನೇಸರ... ನೇಸರ ನೀನೇ ಹೆಣ್ಣಿನ ನೇಸರ ನೇಸರ ನೇಸರ ನೀನೇ ಸಾಗರ ನೇಸರ 

ಗಂಡು : ಈ ಅಲೆಗಳೇಕೆ ಸಾಗರ                  ಹೆಣ್ಣು : ನಿನ್ನಕರೆಯೇ ನೇಸರ 
ಗಂಡು : ಅಬ್ಬರವೇಕೆ ಸಾಗರ                       ಹೆಣ್ಣು : ವಿರಹ ಕಳೆಯ ನೇಸರ  
ಹೆಣ್ಣು : ನೀನು ಇರದ ಎಲ್ಲ ಇರುಳು ಬರಿ ಬೇಸರ...  ಬೇಸರ 
ಗಂಡು : ಕಡಲ ಕಂಯೇ ನಿನ್ನನ್ನು ಪೂರ್ತಿ ಬಳಸೋ ಕೋರಿಕೆ 
            ಹಗಲ ಮುತ್ತು ನೆತ್ತಿಗೆ ಇರುಳ ಮುತ್ತು ಪಾದಕೆ 
            ನನ್ನ ಮುತ್ತುಗಳು ನವರತ್ನಗಳು ಮೈತಾಳುವ ಮನ್ಮಥ ನೋಟವ ಕರುಣಿಸು 
            ಕೋಟಿಕೋಟಿ ಕನಸುಗಳಾ ಲೋಕದೊಳು ಸೊಗಸುಗಳು ಕಂಡುಕೊಂಡಳೋ 
            ನಿನ್ನ ಅಳೆಯಲೇನು ನಾನು ಬ್ರಹ್ಮನೇ 
ಹೆಣ್ಣು : ಸಾಗರ ಸಾಗರ ಹೆಣ್ಣಿದು ಅಂದದ ಸಾಗರ ಸಾಗರ ಸಾಗರಿ ಹೆಣ್ಣಿದು ಚೆಲುವಿನ ಸಾಗರ 

ಹೆಣ್ಣು : ನನ್ನ ನಿನ್ನ ಪ್ರೀತಿಗೆ                   ಗಂಡು : ಎಂದು ವಿಘ್ನಬಾರದೂ 
ಹೆಣ್ಣು : ನನ್ನ ನಿನ್ನ ಪ್ರೀತಿಯ                 ಗಂಡು : ಯಜ್ಞ ಎಂದೂ ನಿಲ್ಲದು 
ಗಂಡು : ಬಿಸಿಲು ಕಡಲಿನಂತೆ ಅಮರವೀ ಬಂಧನ 
ಹೆಣ್ಣು : ಪ್ರೇಮ ಸೂರ್ಯ ನಿನ್ನನ್ನು ಮುಟ್ಟಬಲ್ಲ ವರವನು 
          ನನಗೆ ಮಾತ್ರ ತಂದೆ ನೀ ಮರೆಯಲೆಂತು ನಿನ್ನನ್ನೂ 
          ಪ್ರೇಮ ಸೂರ್ಯ ನಿನ್ನನ್ನು ಮುಟ್ಟಬಲ್ಲ ವರವನು 
          ನನಗೆ ಮಾತ್ರ ತಂದೆ ನೀ ಮರೆಯಲೆಂತು ನಿನ್ನನ್ನೂ 
          ಈ ಧರೇ ಸಾಕ್ಷಿ ಈ ನಭ ಸಾಕ್ಷಿ ಈ ಪ್ರೀತಿಯ ಕಾರ್ಯಕೆ ಯುಗ ಯುಗ ಸಾಕ್ಷಿ 
          ಕೋಟಿಕೋಟಿ ಕನಸುಗಳಾ ಲೋಕದೊಳು ಸೊಗಸುಗಳು ಕಂಡುಕೊಂಡಳೋ 
            ನಿನ್ನ ಅಳೆಯಲೇನು ನಾನು ಬ್ರಹ್ಮನೇ 
ಗಂಡು  : ಸಾಗರ ಸಾಗರ ಹೆಣ್ಣಿನ ನಗುವಿದು ಸಾಗರ ಸಾಗರ ಹೆಣ್ಣಿನ ಸಂಭ್ರಮ ಸಾಗರ  
 ---------------------------------------------------------------------------
 
ವಿಶ್ವ (೧೯೯೯) - ಅಣ್ಣ ಅಣ್ಣ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ, ರಾಜೇಶ, ಮನು, ಲತಾಹಂಸಲೇಖ
  
ಗಂಡು : ಅಣ್ಣ ಅಣ್ಣ ನಿನಗಿಂತ ದೇವರಾಯ್ರೋ ವಿಶ್ವ ವಿಶ್ವ ನನಗಿಂತ ಮಕ್ಕಳ್ಯಾರೋ 
            ನೀವೇ ನನ್ನ ತಂದೆ ತಾಯಿ 
ಹೆಣ್ಣು : ನೀನೇ ನಮಗೆ ಸೂರ್ಯ ಚಂದ್ರ 
ಇಬ್ಬರು : ಪ್ರೀತಿ ನಮ್ಮ ಹಾಡು ಸ್ವರ್ಗ ನಮ್ಮಿ ಗೂಡು 
ಗಂಡು : ಅಣ್ಣ ಅಣ್ಣ ನಿನಗಿಂತ ದೇವರಾಯ್ರೋ ವಿಶ್ವ ವಿಶ್ವ ನನಗಿಂತ ಮಕ್ಕಳ್ಯಾರೋ 
            ನೀವೇ ನನ್ನ ತಂದೆ ತಾಯಿ 

ಗಂಡು : ನಿನ್ನ ಹೆಗಲಲ್ಲೇ ನನ್ನ ಕುದುರೆ ಆಟ ನಿಮ್ಮ ಮಡಿಲಲ್ಲೇ ಬೆಳದಿಂಗಳೂಟ 
            ನಾ ನಾಡಿದ ತೊದಲು ನುಡಿ ನಿಮ್ಮಿಂದಲೇ 
            ನಾ ಬರೆದ ಮೊದಲ ನುಡಿ ನಿಮ್ಮಿಂದಲೇ 
ಹೆಣ್ಣು : ಹೆತ್ತೋರ ಕಂಡಿಲ್ಲ ಆ ಲಾಲಿ ಕೇಳಿಲ್ಲ ಈ ಪ್ರೀತಿ ಕಡಲಲ್ಲಿ ಆ ಚಿಂತೆ ಕಾಡಿಲ್ಲ 
          ನನಗಾಗಿ ತಾಯಿ ತಾಯಾಗ ಬಯಸಿಲ್ಲ 
          ಈ ತಾಯಿ ತ್ಯಾಗಕ್ಕೆ ಇತಿ ಇಲ್ಲ ಮಿತಿ ಇಲ್ಲ 
          ನೂರಾರು ಜನುಮವೇ ಇರಲಮ್ಮ.. ಬರಲಮ್ಮ.. 
          ಕಂದ ಕಂದ ನಿನಗಿಂತ ಮಕ್ಕಳ್ಯಾರೋ 
ಗಂಡು : ಅಮ್ಮ ಅಮ್ಮ ನಿನಗಿಂತ ತಾಯಿ ಯಾರೋ... ಅಮ್ಮ ಅಮ್ಮ ನಿನಗಿಂತ ತಾಯಿ ಯಾರೋ...    

ಗಂಡು : ನಿನ್ನಾಸೆ ಕನಸೆಲ್ಲ ನನಸಾಗಲಿ...        ಹೆಣ್ಣು : ಕರುನಾಡೇ ನಿನ್ನನ್ನು ಕೊಂಡಾಡಲಿ 
ಗಂಡು : ವಿಶ್ವಾನೇ ನಿನ್ನನು ಹೊಗಳೋದಿಲ್ಲ..   ಹೆಣ್ಣು : ದೂರಾನೇ ಇಲ್ಲ ಅಂತೂ ನನ್ನೀ ಮನ 
ಇಬ್ಬರು : ಈ ನಾಡ ಚರಿತೇಲಿ ನಿನ್ನ ಪುಟ ಇರಬೇಕು ಹೂವಿಂದ ನಾರುನೂ ಸ್ವರ್ಗಾನ ಕಾಣಬೇಕು 
ಗಂಡು : ನೀ ನಮ್ಮ ಕನಸಮ್ಮಾ                     ಹೆಣ್ಣು : ನೀನೆಮ್ಮಾ ಬಾಳಯ್ಯ 
ಗಂಡು : ನೀ ನಮ್ಮ ಉಸಿರಯ್ಯಾ                   ಹೆಣ್ಣು : ತಲೆ ಕಾಯೋ ಮಗನಯ್ಯಾ 
ಗಂಡು : ನಿನಗೊಂದು ಜೊತೆಯಾಗಿ               ಹೆಣ್ಣು : ಜೊತೆಗೊಂದು ಮಗುವಾಗಿ 
ಗಂಡು : ಹಬ್ಬಲಿ ಪ್ರೀತಿಯ ಬಳ್ಳಿ ಮನೆಯಲ್ಲ 
ಹೆಣ್ಣು : ಚೆಂದಾ ಚೆಂದಾ ಈ ಸ್ನೇಹವೇ ಚೆಂದ.. ಚೆಂದ ಚೆಂದಾ ಈ ಪ್ರೀತಿಯ ಬಂಧ   
ಗಂಡು : ನಾಳೆ  ಏನು ಹೇಳೋರಿಲ್ಲ ನೆನ್ನೆ ತಂದು ನೀಡೋರಿಲ್ಲ 
ಇಬ್ಬರು : ನೆನ್ನೆ ನಾಳೆ ಕನಸು 
ಹೆಣ್ಣು : ಇಂದೇ ಇಂದೇ ಸೊಗಸು 
ಹೆಣ್ಣು : ಚೆಂದಾ ಚೆಂದಾ ಈ ಸ್ನೇಹವೇ ಚೆಂದ.. ಚೆಂದ ಚೆಂದಾ ಈ ಪ್ರೀತಿಯ ಬಂಧ   
ಗಂಡು : ನಾಳೆ  ಏನು ಹೇಳೋರಿಲ್ಲ ನೆನ್ನೆ ತಂದು ನೀಡೋರಿಲ್ಲ 
ಇಬ್ಬರು : ನೆನ್ನೆ ನಾಳೆ ಕನಸು 
ಹೆಣ್ಣು : ಇಂದೇ ಇಂದೇ ಸೊಗಸು 
-----------------------------------------------------------------------------

ವಿಶ್ವ (೧೯೯೯) - ಕೋನ್ ಐಸ್ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಮನು, ಸೌಮ್ಯ,  

ಕೋನ್ ಐಸೇ ... ಕೋನ್ ಐಸೇ ...  ಟೇಕ್ ಐಸೇ ... ಟೆಸ್ಟ್ ಐಸೇ 
ಕೇಸರ್ ಪಿಸ್ತಾತಿನ್ ಐಸ್ ಪ್ಲೀಸ್ ತೀನ್ ಐಸೇ... ಸೊಲ್ಲು ಮ್ಯಾಂಗೋ 
ಡ್ರಿಂಕ್ ಐಸೇ ಪ್ಲೀಸ್ ಡ್ರಿಂಕ್ ಐಸ್ ಟ್ರೂಟಿಫ್ರೂಟಿ   
ಏನ್ ಹುಡುಗಿರೋ ಯಾಕೆ ರಾಂಗು ಮಾಡ್ತಾರೋ 
ನೈಸು ಹೊಡೆದಷ್ಟು ಕೋಪ ಸ್ಟ್ರಾಂಗೂ ಮಾಡ್ತಾರೋ 
ಕೋನ್ ಐಸ್.. ಕೋನ್ ಐಸೇ ... ಸೀ ಐಸೇ ಕ್ಷಮಿಸ್ ಐಸೇ .. 
ಕೋನ್ ಐಸ್.. ಕೋನ್ ಐಸೇ ... ಸೀ ಐಸೇ ಕ್ಷಮಿಸ್ ಐಸೇ .. 

ಗಾಬರಿ ಯಾಕೇ ಡಾರ್ಲಿಂಗ್  ಡಾರ್ಲಿಂಗ್  ತಿನ್ನಿ ಸ್ಟಾರ್ ಬೇರ್ರಿ 
ತಿಂತಾ ಇದ್ರೆ ಮಾಡ್ತೀನ್ ಡಾರ್ಲಿಂಗ್ ಹೃದಯದ ರಾಬೆರ್ರೀ 
ಮೈ ಫೇರ್ ಲೇಡಿ ನೀನೇ ನಂಗೇ ಚಾಕೋಬಾರ್ 
ಚಾಕೋಬಾರ್ ಹೊಟ್ಟೆ ಒಳಗಿದ್ರೆ ಕೋಪ ಗಡಿಪಾರ್ 
ಮಾತನಾದೆ ಬಾದಾಂ ಪಿಸ್ತಾ ಬೇಗಾ 
ಆಡದಿದ್ರೆ ಸಾಯ್ತಿನ್ ಈಗ.. ಹಾ..ಹಾ..ಹಾ... 
ಕೋನ್ ಐಸೇ ಕೋನ್ ಐಸೇ  ನೋಡೈಸೇ ಹಾಡ್ ಐಸೇ .. 
ಹಾಡ್ ಐಸೇ  ಎಂಡ್ ಬೀಟ್ ಐಸೇ ಮ್ಯಾಗ್ರೋ ಡ್ಯೂಹಟ್ 
ಡಾನ್ಸ್ ಐಸೇ ಆಂಡ್ ಟೇಕ್ ಐಸೇ ಹನಿಮೂನ ಸ್ಪೆಷಲ್ 
ಓ ಕಚ್ ಐಸೇ ಯಾಂಡ್ ಗಿವ್ ಐಸೇ ಚಾಕ್ ಯಾಂಡ್ ನೈಫೂ 
(ಏನ್ ಹುಡುಗುರೋ ಯಾಕೆ ಪ್ರೀತಿ ಮಾಡ್ತಾರೋ  ಆಣೆ ಮಾಡಿನೂ ಯಾಕೆ ಮಾತು ತಪ್ತಾರೋ)
ಕೋನ್ ಐಸೇ ಹ್ಹಾ.. ಕೋನ್ ಐಸೇ  ಸ್ಟಾಪ್ ಐಸೇ ಲಾಫ್ ಐಸೇ ... ಅಯ್ಯೋ... 
ಕೋನ್ ಐಸೇ ಹ್ಹಾ.. ಕೋನ್ ಐಸೇ  ಸ್ಟಾಪ್ ಐಸೇ ಲಾಫ್ ಐಸೇ ... ಅಯ್ಯೋ... 
ಪೀಸ್ ಪೀಸ್ ಬ್ಯೂಟಿ ಫ್ರಿಡ್ಜಿನ್ ಒಳಗೆ  ಐಸಕ್ರೀಮ್ ನಿನ್ನ ಮನಸು 
ಅದರಲ್ಲಿ ಹೇಗೋ ಮಿಕ್ಸ್ ಆಯ್ತಲ್ಲ ಡಾರ್ಲಿಂಗ್ 
ಈ ಮುನಿಸು ರಾಯಲ್ ಮಿಲ್ಕ್ ಶೇಕ್ ಕುಡಿಯದೆ ಹೋದ್ರೇ   
ಶೇಕ್ ಆಗ ಹೋದರೆ ಅಯ್ಯೋ ಹೇಗೆ ಬದುಕ್ತೀ ನೀನು 
ಮಾತನಾಡೆ ಗೋಲ್ಡನ್ ಚೇರ್ರೀ  ಬೇಗ ಆಡದಿದ್ರೆ ಸಾಯ್ತಿನ್ ನಿಂಗ್.. ಹಾ... 
ಕೋನ್ ಐಸೇ ಕೋನ್ ಐಸೇ ಲಕ್ ಐಸೆ ತಿರುಗ್ ಐಸೇ 
ಐಸೇ ಐಸೇ ಟೆಕ್ ಐಸೇ ಕಬ್ಬನ್ ನಂಟೇ ಇಟ್ ಐಸೇ ಪ್ಲೀಸ್ ಇಟ್ ಐಸೇ ಅನಾಮಿಕಾ 
ಸ್ವಲ್ಪ ಕಚ್ಚಿ ಗಿವ್ ಐಸ್ ಚಾಕೊಲೇಟು 
(ಏನ್ ಹುಡುಗುರೋ ಯಾಕೆ ಪ್ರೀತಿ ಮಾಡ್ತಾರೋ  
ಏಕೇ ಎಡವತಾರೋ ಯಾಕೆ ಹಲ್ಲು ಗಿಂಚ್ತಾರೋ) 
ಕೋನ್ ಐಸೇ ಕೋನ್ ಐಸೇ ಕಮ್ ಐಸೇ ಕಿಸ್ ಐಸೇ 
-----------------------------------------------------------------------------

ವಿಶ್ವ (೧೯೯೯) - ವಿಶ್ವ ವಿಶ್ವ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಡಾ|| ರಾಜಕುಮಾರ 

ವಿಶ್ವ... ವಿಶ್ವ... ವಿಶ್ವ... ವಿಶ್ವ... ವಿಶ್ವ... ವಿಶ್ವ... ವಿಶ್ವ... ವಿಶ್ವ... ವಿಶ್ವಾಸವೇ ವಿಶ್ವ... 
ವಿಶ್ವ... ವಿಶ್ವ... ವಿಶ್ವ... ವಿಶ್ವ... ವಿಶ್ವ... ವಿಶ್ವ... ವಿಶ್ವ... ವಿಶ್ವ... ವಿಶ್ವಾಸವೇ ವಿಶ್ವ... 
ಅನುರಾಗದೆ ಉಚ್ಛಾಸವು ಅನುರಾಗದೆ ನಿಶ್ವಾಸವು 
ನ್ಯಾಯ ಇದರ ದೇಹ ಸತ್ಯ ಇದರ ದಾಹ 
ವಿಶ್ವ... ವಿಶ್ವ... ವಿಶ್ವಾಸವೇ ವಿಶ್ವ... ವಿಶ್ವ... ವಿಶ್ವ... ವಿಶ್ವಾಸವೇ ವಿಶ್ವ... 

ಸತ್ಯಾನೇ ಉಸಿರಂತೆ ನ್ಯಾಯದೇವಿಗೆ  ಅವಳೆದೆಯ ಹಾಲಂತೆ ಕಾನೂನಿಗೆ 
ಸತ್ಯಾನೇ ಉಸಿರಂತೆ ನ್ಯಾಯದೇವಿಗೆ  ಅವಳೆದೆಯ ಹಾಲಂತೆ ಕಾನೂನಿಗೆ 
ಎದೆ ಹಾಲೇ ವಿಷವಾದರೇ ಉಳಿವೆಲ್ಲಿದೆ ಕಾನೂನಿಗೆ ಕಾನೂನೇ ಕೊಲೆಯಾದರೆ 
ಕಾವಲಾರೋ ಅಪರಾಧಿಗೆ ಅಪರಾಧವೇ ದೊರೆಯಾದರೆ 
ಭಯವೆಲ್ಲಿದೆ ದಾನವತೆಗೆ ನೆಲೆ ಎಲ್ಲಿದೆ ಸಜ್ಜನರಿಗೆ ಬೆಲೆ ಎಲ್ಲಿದೆ ಮಾನವತೆಗೆ 
ನಂಬಿಕೆಗಳ ಉರುಳಾದರೆ ಅಂಜಿಕೆಗಳೇ ನೆರಳಾದರೇ 
ನಂಬಿದವರೇ ಯಮರಾದರೇ ಬರಿ ದ್ರೋಹವೇ ಜಗವಾದರೆ 
ದ್ರೋಹ ಉಸಿರ ಲೋಕದಲ್ಲಿ ನರನ ಶ್ವಾಸಕೋಶದಲ್ಲಿ ದೇವನಿರುವನೆಂಬ 
ವಿಶ್ವಾಸ ಉಳಿವುದೇ ವಿಶ್ವ... ವಿಶ್ವ... ವಿಶ್ವಾಸವೇ ವಿಶ್ವ... 
ವಿಶ್ವ... ವಿಶ್ವ... ವಿಶ್ವಾಸವೇ ವಿಶ್ವ... 

ಜಗವೊಂದು ಸೆಣಸಾಡೋ ರಂಗವೋ ಸತ್ಯಕೆ ಎಂದೆಂದೂ ಜಯಭೇರಿಯೋ 
ಸತ್ಯಕೆ ಸಾವಿಲ್ಲ ಧರ್ಮಕ್ಕೆ ದಣಿವಿಲ್ಲ ರಕ್ಕಸರ ನಿರ್ಮೂಲನ ಕದನಕ್ಕೆ ಕೊನೆಯಿಲ್ಲ 
ಆಘಾತದ ಹೃದಯಕ್ಕೂ ಅನುಕಂಪದ ಅಲೆ ಇಲ್ಲಿದೆ 
ನೋವುಗಳನು ಹೂವಾಗಿಸೋ ಒಲವೆಂಬುವ ಜೇನಿಲ್ಲಿದೆ     
ಅನ್ಯಾಯದ ಅವತಾರಕೆ ಪ್ರತಿ ಘಳಿಗೆಯ ಸಾವಿಲ್ಲಿದೆ 
ಧರ್ಮಗಳ ಪಡೆ ಇಲ್ಲಿದೆ ನಿಜ ದೈವನ ನೆರಳಿಲ್ಲಿದೆ 
ಎಲ್ಲೇ ಇರುವ ಲೋಕದಲ್ಲಿ ಕಾಣದಿರುವ ದೇವರೆಲ್ಲಿದೆ 
ವಿಶ್ವಾಸವೇ ಆತ್ಮಾಯುಧಾ... ವಿಶ್ವಾಸವೇ ಆತ್ಮಾಯುಧಾ... 
ವಿಶ್ವ... ವಿಶ್ವ... ವಿಶ್ವಾಸವೇ ವಿಶ್ವ... ವಿಶ್ವ... ವಿಶ್ವ... ವಿಶ್ವಾಸವೇ ವಿಶ್ವ... 
ಅನುರಾಗದೆ ಉಚ್ಛಾಸವು ಅನುರಾಗದೆ ನಿಶ್ವಾಸವು 
ನ್ಯಾಯ ಇದರ ದೇಹ ಸತ್ಯ ಇದರ ದಾಹ 
ವಿಶ್ವ... ವಿಶ್ವ... ವಿಶ್ವಾಸವೇ ವಿಶ್ವ... ವಿಶ್ವ... ವಿಶ್ವ... ವಿಶ್ವಾಸವೇ ವಿಶ್ವ... 
----------------------------------------------------------------------------

ವಿಶ್ವ (೧೯೯೯) - ಹೇ... ಬುಡ್ಡ ಬುಡ್ಡ  
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಬಿ.ಜಯಶ್ರೀ 

ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ 
ಹೇ.. ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ 
ಕೆಟ್ಟೋನ್ಗೆ ದುಡ್ಡಿನ ಗುಡ್ಡ ಸತ್ತೋನಗೆ ಆನೆ ಖೆಡ್ಡಾ 
ಇಲ್ಲೀಗ ಯಾಕೋ ಬಂದೆ ಹೆಡ್ಡ... 

ಕದನದ ಒಳಗೆ ಅಯ್ಯೋ ಪಾಪ ಇಲ್ಲ ತಾತಯ್ಯ 
ನೀನಾ ನಾನಾ ಅನ್ನದೆ ಹೋದರೆ ಜೇಬೇ ತೂತಯ್ಯಾ 
ಮೋಸಕ್ಕೆ ಪ್ರತಿ ಮೋಸ ಇಲ್ಲಿ ಕಟ್ಟಳೆ ತಾತಯ್ಯ 
ತಾಯಿಯ ಹೊಟ್ಟೇನ ಸೀಳ್ಕೊಂಡು ಬರುವ ಚೇಳಿನ ಮರಿಯಂತೆ 
ಕಟ್ಟೋನ್ ಕೊರಳನು ಕುಯಿದು ಕುಡಿದು ಬದುಕೋದು ಕಲಿಬೇಕಂತೆ 
ನೀನಿರದ ಈ ಲೋಕ ಏನಾದರೆ ಏನ್ .... ಏನಾದರೆ ಏನ್         
ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ 
ಹೇ.. ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ 
ಕೆಟ್ಟೋನ್ಗೆ ದುಡ್ಡಿನ ಗುಡ್ಡ ಸತ್ತೋನಗೆ ಆನೆ ಖೆಡ್ಡಾ 
ಇಲ್ಲೀಗ ಯಾಕೋ ಬಂದೆ ಹೆಡ್ಡ... 

ಹೆಣ್ಣು ಹೊನ್ನು ಮಣ್ಣು ಜೂಜಿನ ಬಂಧುಗಳಂತಯ್ಯ 
ಜೂಜಿನ ರಕ್ಕಸಿ ಹಸಿವಿಗೆ ಇವುಗಳು ಸಾಲದು ತಾತಯ್ಯ 
ದೇವ್ರೇ ಜೂಜಾಡಿದ್ರೇ ಇದು ನುಂಗುತಂತಯ್ಯ 
ನೋಡುವುದಾದರೇ ಸುಮ್ಮನೆ ನೋಡು ಶಕುನಿಗಳ ಕುಲವ 
ಸೋಕಿದೆ ಎಂದರೆ ಅಷ್ಟೇನೆ ನೀನು ಮಾರುವೇ ಮನೆ ಮಠವ 
ಇಲ್ಲಿ ಪ್ರಾರಂಭ ಉಂಟು ಕಡೆ ಇಲ್ಲಿಯ ಕೊನೆ ಇಲ್ಲಯ್ಯ.. 
ಹೇ ಬುಡ್ಡ ಬುಡ್ಡ ಇದು ಕಿಲಾಡಿಗಳ ಅಡ್ಡ 
ಹೇ.. ಬುಡ್ಡ ಬುಡ್ಡ ಇದು ಜುವಾರಿಗಳ ಅಡ್ಡ 
ಕೆಟ್ಟೋನ್ಗೆ ದುಡ್ಡಿನ ಗುಡ್ಡ ಸತ್ತೋನಗೆ ಆನೆ ಖೆಡ್ಡಾ 
ಇಲ್ಲೀಗ ಯಾಕೋ ಬಂದೆ ಹೆಡ್ಡ... 
----------------------------------------------------------------------------

ವಿಶ್ವ (೧೯೯೯) - ಅರಸಿಕರೆ 
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಬಿ.ಜಯಶ್ರೀ 

ಅರಸಿಕೆರೆ... ಅರಸಿಕೆರೆ ಅರಸಿಕೆರೆ ಬಣ್ಣದ ಓಟು 
ಅದರಾಗ್ ಹೋಗದ್ ಐದರ ನೋಟು ತಾರೋ 
ತತ್ತಾ ತತ್ತಾ ಜಲ್ದಿ ತತ್ತಾ ಇಲ್ದಿದ್ ರಟ್ಟಾ ನೀನೇ ಆತ್ತಾ ಬಾರೋ 
ನಾರೀ ಕಮಲಾ... ನಾರೀ ಕಮಲಾ... 
ಬಲು ಕೋಮಲ್ ಬಲು ಕೋಮಲ್ ಬಲ್ ಕೋಮಲ್   

ಆಸೇನಾ ತೀರಿಸ್ತೀನ್ ಅಂತಾ ತೀರಿಸ್ತೀಯಲ್ಲೋ 
ಸುಮ್ನೇ ಮೀಸೆ ನನ್ನ ಕಿರು ಗುಟತೈತಲ್ಲೋ ನನ್ನ ಆಸೆ 
ಥಳಾಂಗೂ ತಕ್ಕ ಗೆಜ್ಜೆ ಸದ್ದು ಕಿವಿಗೆ ಬಿದ್ರೆ ಬೆನ್ನಿಗೆ ಬಿದ್ದು 
ಥಳಾಂಗೂ ತಕ್ಕ ಗೆಜ್ಜೆ ಸದ್ದು ಕಿವಿಗೆ ಬಿದ್ರೆ ಬೆನ್ನಿಗೆ ಬಿದ್ದು 
ರೊಕ್ಕನಾ ಸುರಿ ಬೇಡ್ವಾ...   
ಅರಸಿಕೆರೆ... ಅರಸಿಕೆರೆ ಅರಸಿಕೆರೆ ಬಣ್ಣದ ಓಟು 
ಅದರಾಗ್ ಹೋಗದ್ ಐದರ ನೋಟು ತಾರೋ 

ಬೇಳೂರು ಹಳೇಬೀಡು ಇನ್ನೂ ನೂರಾರು ತೋರ್ತಿನ್ ಅಂದ ರಾಯ 
ಒಂದು ಪಂಚಮಿ ಕೊಡದೆ ಮಾಡಕ್ ನೋಡ್ತಾನ್ ಮಾಯ 
ಇದ್ಯಾಕೋ ರಾಯ ಕಲ್ಲಂಗೆ ನಿಂತೇ ಅದೇನು ನಿಂದು ಕಣ್ಣಿನ ಚಿಂತೆ 
ಇದ್ಯಾಕೋ ರಾಯ ಕಲ್ಲಂಗೆ ನಿಂತೇ ಅದೇನು ನಿಂದು ಕಣ್ಣಿನ ಚಿಂತೆ 
ಆನ್ ಘಳಿಗೆ ಮರಿಬಾರ್ದ... 
ಅರಸಿಕೆರೆ... ಅರಸಿಕೆರೆ ಅರಸಿಕೆರೆ ಬಣ್ಣದ ಓಟು 
ಅದರಾಗ್ ಹೋಗದ್ ಐದರ ನೋಟು ತಾರೋ 
ತತ್ತಾ ತತ್ತಾ ಜಲ್ದಿ ತತ್ತಾ ಇಲ್ದಿದ್ ರಟ್ಟಾ ನೀನೇ ಆತ್ತಾ ಬಾರೋ 
ನಾರೀ ಕಮಲಾ... ನಾರೀ ಕಮಲಾ... 
ಬಲು ಕೋಮಲ್ ಬಲು ಕೋಮಲ್ ಬಲ್ ಕೋಮಲ್   
---------------------------------------------------------------------------

No comments:

Post a Comment