ಶಿವನಾಗ ಚಲನಚಿತ್ರದ ಹಾಡುಗಳು
- ಮುತ್ತುಗಳ ರತ್ನಗಳ
- ಒಂದು ಕೊಟ್ಟರೇ
- ಬಾರೋ ನನ್ನ
- ಮನ್ಮಥ ರತಿಯೋ
- ಹರನ ಕೊರಳಲಿ
ಶಿವನಾಗ (೧೯೯೨) - ಮುತ್ತುಗಳ ರತ್ನಗಳ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ,
ಗಂಡು : ಮುತ್ತುಗಳ ರತ್ನಗಳ ಬೇಡೆನು ನಾನಿಂದೂ
ನಿನ್ನ ಪ್ರೇಮ ಒಂದೇ ಸಾಕು ನಿನ್ನ ಸೇರಿ ಬಾಳಬೇಕು
ಹೆಣ್ಣು : ದೂರದಲ್ಲಿ ನೋಡು ಬಾನು ಬಾಗಿದೆ
ಒಲವಿಂದ ಭೂಮಿಗೆ ಮುತ್ತ ಕೊಟ್ಟಿದೆ
ನೋಡು ಮೇಲೆ ಮೋಡ ತೇಲಿ ಬಂದಿದೆ
ಪ್ರೀತಿಯಿಂದ ಗಿರಿಯ ಅಪ್ಪಿಕೊಂಡಿದೆ
ಗಂಡು : ಅರಳಿದ ಆಸೆ ಮನದಲ್ಲಿ ಕೆರಳಿದೆ ಬಯಕೆ ಎದೆಯಲ್ಲಿ
ಪ್ರಣಯದ ಲೋಕ ನಿನ್ನ ಕೂಗಿದೆ
ಸರಸದ ನಾಕ ಬಾ ಎಂದಿದೆ
ಮುತ್ತುಗಳ ರತ್ನಗಳ ಬೇಡೆನು ನಾನಿಂದೂ
ನಿನ್ನ ಪ್ರೇಮ ಒಂದೇ ಸಾಕು ನಿನ್ನ ಸೇರಿ ಬಾಳಬೇಕು
ಗಂಡು : ಸೊಗಸಾದ ನಿನ್ನ ಮೊಗ ನೋಡಲು ಹಿತವಾಗಿ ನನ್ನ ಬಳಿ ಸೇರಲು
ಹೊಸತನ ಕಂಡೆ ನಲಿದಾಡುತ ಒಲವನ್ನು ತಂದೆ ಜೊತೆಯಾಗುತ
ಹೆಣ್ಣು : ಕವಿಯಾಗಿ ನೀನು ಮಾತಾಡಲು ನಡುವನ್ನು ಸೆಳೆದು ನೀ ಅಪ್ಪಲು
ತುಟಿಯಲಿ ಮಿಂಚು ನಿನ್ನಿಂದ ಹೃದಯದಲೇನೋ ಆನಂದ
ಗಂಡು : ಮುತ್ತುಗಳ ರತ್ನಗಳ ಬೇಡೆನು ನಾನಿಂದೂ
ನಿನ್ನ ಪ್ರೇಮ ಒಂದೇ ಸಾಕು ನಿನ್ನ ಸೇರಿ ಬಾಳಬೇಕು
--------------------------------------------------------------------------------------------
ಶಿವನಾಗ (೧೯೯೨) - ಒಂದು ಕೊಟ್ಟರೇ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಚಿತ್ರಾ,
ಒಂದು ಕೊಟ್ಟರೇ ನಾನು ಒಲಿಯುವೆನು ಮತ್ತೊಂದು ಕೊಟ್ಟರೇ ನಾನು ನಲಿಯುವೆನು
ನನ ಒಪ್ಪಿಕೋ ನಡು ಅಪ್ಪಿಕೋ ಸುಖವ ಪಡಿವೆ ಇನಿಯ ಇಡು ಇಡು
ತುಟಿಗೆ ತುಟಿಯ ಬೆರೆಸಿ ನೋಡು
ಬಳಿಗೆ ನೀನು ಬರದೇ ಆನಂದ ನಾ ನಾ ಕಾಣೆನು
ಬಳಿಗೆ ನೀನು ಬರದೇ ಆನಂದ ನಾ ನಾ ಕಾಣೆನು
ನನ್ನಲ್ಲಿ ಇರುವ ಸೌಂದರ್ಯವಾ ನಿನಗಾಗಿ ನಾ ತಂದೆನು
ತಂಪು ಗಾಳಿ ಬೀಸಲು ಮೊಗ್ಗಂತೆ ನಾನದೇನು
ಈ ನಿನ್ನ ಕೈಯ್ಯಿ ಸೋಕಲು ಹೂವಾಗಿ ಹೋದೆನು
ಬೇಗನೆ ಬಾರೆಯಾ ತನುವು ಝುಮ್ಮೆನ್ನಲಿ
ಒಂದು ಕೊಟ್ಟರೇ ನಾನು ಒಲಿಯುವೆನು
ಮತ್ತೊಂದು ಕೊಟ್ಟರೇ ನಾನು ನಲಿಯುವೆನು
ನನ ಒಪ್ಪಿಕೋ ನಡು ಅಪ್ಪಿಕೋ
ಸುಖವ ಪಡಿವೆ ಇನಿಯ ಇಡು ಇಡು
ತುಟಿಗೆ ತುಟಿಯ ಬೆರೆಸಿ ನೋಡು
ಬಿಸಿಯೂ ಮೈಯೇರಲಿದೆ ನಿಂತಲ್ಲಿ ನಿಲ್ಲಲಾರೇನು
ಬಿಸಿಯೂ ಮೈಯೇರಲಿದೆ ನಿಂತಲ್ಲಿ ನಿಲ್ಲಲಾರೇನು
ನೂರಾಸೆ ತುಂಬಿ ಬಂದೆ ಮಾತಲ್ಲಿ ನಾ ಹೇಳೇನು
ಮೈನಾ ಕೂಗಿ ಕಾಡಲು ನನ್ನಾಣೆ ನಾ ನೊಂದೆನು
ಏನೇನೋ ಬೇಕು ತಾ ಎಂದು ನಿನ್ನನು ನಾ ಕೇಳೇನೂ
ಸುಮ್ಮನೆ ಕೊಟ್ಟರೆ ಬಂಗಾರ ಬೇಡೆನ್ನೆನು
ಒಂದು ಕೊಟ್ಟರೇ ನಾನು ಒಲಿಯುವೆನು
ಮತ್ತೊಂದು ಕೊಟ್ಟರೇ ನಾನು ನಲಿಯುವೆನು
ನನ ಒಪ್ಪಿಕೋ ನಡು ಅಪ್ಪಿಕೋ
ಸುಖವ ಪಡಿವೆ ಇನಿಯ ಇಡು ಇಡು
ತುಟಿಗೆ ತುಟಿಯ ಬೆರೆಸಿ ನೋಡು
---------------------------------------------------------------------------------------------
ಶಿವನಾಗ (೧೯೯೨) - ಬಾರೋ ನನ್ನ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ,
ಗಂಡು : ಬಾರೋ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ ಬಾರೋ ನನ್ನ ಮುದ್ದು ಗೋಪಾಲ ನಡುಗಡೆ ಸಿಡುಕದೆ
ಹೆಣ್ಣು : ಬಿಸಿ ಬಿಸಿ ಕಜ್ಜಾಯ ಬೇಕೇನು ಸಜ್ಜಪ್ಪ ಬೇಕೇನು ಬಾ ಇಲ್ಲಿ ನಾ ಕೊಡುವೆ
ಗಂಡು : ಸಗಣಿ ಎತ್ತೋ ಕೈಗೆ ಚಿನ್ನ ಬೇಕಾಯಿತೇ ಹಾಂ...
ಹೆಣ್ಣು : ಬೆರಣಿ ತಟ್ಟೋ ನಿನಗೆ ಬ್ರಾಂಡಿ ಬೇಕಾಯಿತೇ
ಗಂಡು : ಅರೇ ನುಂಗಿ ನೀರು ಕುಡಿದಾ ಆಸ್ತಿ ಏನಾಯಿತು
ಹೆಣ್ಣು : ಹೇಳೋ ಇಂದು ನಿನ್ನ ಮಸ್ತಿ ಎಲ್ಹೋಯಿತು
ಇಬ್ಬರು : ಮೈ ಏಕೆ ಕೆಂಪಾಯಿತು
ಗಂಡು : ಬಾರೋ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ ಬಾರೋ ನನ್ನ ಮುದ್ದು ಗೋಪಾಲ ನಡುಗಡೆ ಸಿಡುಕದೆ
ಹೆಣ್ಣು : ಬಿಸಿ ಬಿಸಿ ಕಜ್ಜಾಯ ಬೇಕೇನು ಸಜ್ಜಪ್ಪ ಬೇಕೇನು ಬಾ ಇಲ್ಲಿ ನಾ ಕೊಡುವೆ
ಹೆಣ್ಣು : ಅಜ್ಜಾ ನಿನ್ನ ಕಾಲು ಏಕೆ ಕುಂಟಾಯಿತು
ಗಂಡು : ಕುದುರೆ ರೇಸಿನಲ್ಲಿ ಪಾಪ ಸೋಲಾಯಿತು
ಹೆಣ್ಣು : ತುಂಬಾ ದುರಾಸೆಯಿಂದ ಎಲ್ಲಾ ಮಣ್ಣಾಯಿತು
ಇಬ್ಬರು : ಮೈಯೆಲ್ಲಾ ಹುಣ್ಣಾಯಿತು
ಗಂಡು : ಬಾರೋ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ ಬಾರೋ ನನ್ನ ಮುದ್ದು ಗೋಪಾಲ ನಡುಗಡೆ ಸಿಡುಕದೆ
ಹೆಣ್ಣು : ಬಿಸಿ ಬಿಸಿ ಕಜ್ಜಾಯ ಬೇಕೇನು ಸಜ್ಜಪ್ಪ ಬೇಕೇನು ಬಾ ಇಲ್ಲಿ ನಾ ಕೊಡುವೆ
ಗಂಡು : ವಯಸ್ಸೂ ಆದ ಕತ್ತೆ ಒತ್ತ ಸಾಕಾಯಿತೇ
ಹೆಣ್ಣು : ಎಮ್ಮೆ ನಿನ್ನ ಹೆಮ್ಮೆ ಕರಗಿ ನೀರಾಯಿತೇ
ಗಂಡು : ಬಡ್ಡಿ ಮಗನೇ ನಿನ್ನಾ ಕೊಬ್ಬು ಏನಾಯಿತು
ಹೆಣ್ಣು : ಕಜ್ಜಿ ನಾಯಿಯಂತೆ ನಿನ್ನ ಗತಿಯಾಯಿತು
ಇಬ್ಬರು : ತಿಂದದ್ದು ಕಕ್ಕಿದಾಯಿತು
ಗಂಡು : ಬಾರೋ ನನ್ನ ಮುದ್ದು ವೇಣುಗೋಪಾಲ
ಹೆದರದೆ ಬೆದರದೆ ಬಾರೋ ನನ್ನ ಮುದ್ದು ಗೋಪಾಲ ನಡುಗಡೆ ಸಿಡುಕದೆ
ಹೆಣ್ಣು : ಬಿಸಿ ಬಿಸಿ ಕಜ್ಜಾಯ ಬೇಕೇನು ಸಜ್ಜಪ್ಪ ಬೇಕೇನು ಬಾ ಇಲ್ಲಿ ನಾ ಕೊಡುವೆ
--------------------------------------------------------------------------------------------
ಶಿವನಾಗ (೧೯೯೨) - ಮನ್ಮಥ ರತಿಯೋ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಚಿತ್ರಾ,
ಗಂಡು : ಮನ್ಮಥ ರತಿಯು ನಮ್ಮಲಿ ನಗುತಾ ಒಂದು ಸೇರಲಿ
ಹೆಣ್ಣು : ಕಾಮ ತಂದ ಹೊಸ ದಾಹದಿಂದ ಪ್ರೇಮಲೀಲೆ ಸಾಗಲಿ
ಹೆಣ್ಣು : ತಣ್ಣನೇ ಗಾಳಿಯು ಬೀಸಿ ಗಾಳಿಯೆಯ ತಂಪನು ತಂದಿದೆ
ಚಂದ್ರನ ಕಾಂತಿಯು ತಾಕಿ ಮೈಯ್ಯಲ್ಲಿ ಬಿಸಿ ಬಿಸಿ
ಏರಿದೆ ಎದೆಯಲ್ಲಿ ನೂರಾಸೆ ಕುಣಿದಾಡಿದೆ
ಗಂಡು : ಮೈಯ್ಯಿಗೇ ಮೈಯ್ಯನು ಮಸೆದು ಮಿಂಚಿನ ಬಳ್ಳಿಯು ಮೂಡಿದೆ
ಚೆಂದುಟಿ ಚೆಂದುಟಿ ಸೇರಿ ಏನೇನೋ ಆಟವ ಆಡಿದೆ
ವಿರಹಾಗ್ನಿ ಭುಗಿಲೆಂದು ಮೇಲೆದ್ದಿದೆ ಇನ್ನೂ ತಾಳೆ ನಾನೀಗ ಅಪ್ಪಿಕೋ ಬೇಗ
ಮನ್ಮಥ ರತಿಯು ನಮ್ಮಲಿ ನಗುತಾ ಒಂದು ಸೇರಲಿ
ಹೆಣ್ಣು : ಕಾಮ ತಂದ ಹೊಸ ದಾಹದಿಂದ ಪ್ರೇಮಲೀಲೆ ಸಾಗಲಿ
ಗಂಡು : ಮರೆಯಲಿ ಕಾಡುವ ಅಂದ ನನ್ನೀ ಕಣ್ಣನು ಕಾಡಿದೆ
ತೆರೆಯನು ಸರಿಸುವ ಆಸೆ ನನ್ನೀ ಎದೆಯಲ್ಲಿ ತುಂಬಿದೆ
ಇಂದೇಕೋ ಸಂಕೋಚ ದೂರಾಗಿದೆ
ಹೆಣ್ಣು : ಕಡಲಿನ ಅಲೆಗಳ ಹಾಗೆ ಬಯಕೆ ಎದೆಯಲಿ ಹೊಮ್ಮಿದೆ
ವೀಣೆಯ ಸ್ವರಗಳ ಹಾಗೆ ಹೊಸ ಹೊಸ ರಾಗವು ಕೇಳಿದೆ
ತನುವೀಗ ಬಾನಲ್ಲಿ ತೇಲಾಡಿದೆ ಇನ್ನೂ ತಾಳೆ ನಾನೀಗ ಅಪ್ಪಿಕೋ ಬೇಗ
ಗಂಡು : ಮನ್ಮಥ ರತಿಯು ನಮ್ಮಲಿ ನಗುತಾ ಒಂದು ಸೇರಲಿ
ಹೆಣ್ಣು : ಕಾಮ ತಂದ ಹೊಸ ದಾಹದಿಂದ ಪ್ರೇಮಲೀಲೆ ಸಾಗಲಿ
-----------------------------------------------------------------------------------
ಶಿವನಾಗ (೧೯೯೨) - ಹರನ ಕೊರಳಲಿ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಚಿತ್ರಾ,
ಹರನ ಕೊರಳಲ್ಲಿ ಮೆರೆಯುತಿರುವ ಹೇ ಶಿವನಾಗ ಧರೆಗೆ ಬೇಗನೆ ಬಾ
ಕರವಾ ಮುಗಿಯುವೆ ನಿನ್ನನ್ನೇ ನಂಬಿಹೇ
ಓ ಶಿವನಾಗ ಧರೆಗೆ ಈಗಲೇ ಬಾ... ಓ ನಾಗ ನೀನೇ ಗತಿ ಈಗ
ತಂದೆ ನೀಲ ಕಂಠನ ಬೇಡಿ ಬಾರೋ ಭೂಮಿಗೆ
ತಂದೆ ನೀಲ ಕಂಠನ ಬೇಡಿ ಬಾರೋ ಭೂಮಿಗೆ
ವಿಷವ ಕಕ್ಕೋ ಪಾಪಿಗಳನ್ನು ಕೊಲ್ಲಲು ಇಲ್ಲಿಗೆ
ಇನ್ನೂ ವೇದನೆ ನಾನು ತಾಳೇನೇ ನೀ ಬಂದೆ ರಕ್ಷಿಸಬೇಕು ನಾಗರಾಜನೇ
ಬೆಳ್ಳಿ ಬೆಟ್ಟದಿಂದ ಓಡಿ ಬಾರೋ ಮೊಗವ ತೋರೋ ಬೇಗನೇ ಬಾರೋ
ಹರನ ಕೊರಳಲ್ಲಿ ಮೆರೆಯುತಿರುವ ಹೇ ಶಿವನಾಗ ಧರೆಗೆ ಬೇಗನೆ ಬಾ
ಕರವಾ ಮುಗಿಯುವೆ ನಿನ್ನನ್ನೇ ನಂಬಿಹೇ
ಓ ಶಿವನಾಗ ಧರೆಗೆ ಈಗಲೇ ಬಾ... ಓ ನಾಗ ನೀನೇ ಗತಿ ಈಗ
ನಿನ್ನ ಹೊರತು ಬೇರಾವ ದೇವರನು ಕಾಣೆನು ನಿನ್ನ ಪೂಜೆ ಒಂದನ್ನೇ ನಾನು ಬಲ್ಲೆನು
ನಿನ್ನಲಿ ಬೇಡದೆ ಯಾರನು ಬೇಡಲಿ ನೀ ಬಂದೆ ನಗುವೇ ಇವನ ಉಳಿಸಬೇಕಯ್ಯಾ
ಭೂಮಿ ಬಿರಿದರೆ ಏನು ನಿಲ್ಲದೆ ಬಾರೋ ಕರವನು ಮುಗಿಯುವೆ ನಿನ್ನನೇ ನಂಬಿಹೆ
ಓ ಶಿವನಾಗ ಧರೆಗೆ ಈಗಲೇ ಬಾ...
ಓ ಶಿವನಾಗ ಧರೆಗೆ ಈಗಲೇ ಬಾ ನೀನೇ ಕೊಟ್ಟ ಈ ಜೀವ ಎಂದು ಬಲ್ಲೆನೇ
ನೀನೇ ಬೆಸೆದ ಹೃದಯ ನಮದು ನಾಗದೇವನೇ
ನಮ್ಮ ನೋಡಿದ ತಾನೇ ಅತ್ತಿದೇ ಕಣ್ಣಲ್ಲಿ ತುಂಬಿದ ನೀರು ಈಗ ಬತ್ತಿದೆ
ಬಾರೋ ಬಾರೋ ನನ್ನ ನಾಗೇಶನೇ ನಾಗೇಂದ್ರನೇ ನಾಗರಾಜನೇ ....
ಹರನ ಕೊರಳಲ್ಲಿ ಮೆರೆಯುತಿರುವ ಹೇ ಶಿವನಾಗ ಧರೆಗೆ ಬೇಗನೆ ಬಾ
ಕರವಾ ಮುಗಿಯುವೆ ನಿನ್ನನ್ನೇ ನಂಬಿಹೇ
ಓ ಶಿವನಾಗ ಧರೆಗೆ ಈಗಲೇ ಬಾ... ಓ ನಾಗ ನೀನೇ ಗತಿ ಈಗ
--------------------------------------------------------------------------------------------
No comments:
Post a Comment