1856. ಕೆರಳಿದ ಸರ್ಪ (೧೯೯೪)


ಕೆರಳಿದ ಸರ್ಪ ಚಲನಚಿತ್ರದ ಹಾಡುಗಳು 
  1. ಸಂಜೆ ಕವಿದಾಗ 
  2. ಹೃದಯ ಮೀಟಿದಾಗ 
  3. ಅಸೆ ನೋಟ ಕೂಡಿ 
  4. ನಗು ನಗುತಾ ಆಡುವಾ 
  5. ಸಂಗ ಕಟ್ಟು ಬಾ 
ಕೆರಳಿದ ಸರ್ಪ (೧೯೯೪) - ಸಂಜೆ ಕವಿದಾಗ 
ಸಂಗೀತ : ಸಂಗಿತರಾಜ, ಸಾಹಿತ್ಯ : ಎಂ.ಏನ್.ವ್ಯಾಸರಾವ್, ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ, ಕೋರಸ್ 

ಹೆಣ್ಣು : ಸಂಜೆ ಕವಿದಾಗ ಮಂಜು ಸುರಿವಾಗ ಕಾವು ನೀಡುವಾಗ ಚಳಿ ಚಳಿ ನೀ ಕಾಣೆ 
          ಸಂಜೆ ಕವಿದಾಗ ಮಂಜು ಸುರಿವಾಗ ಕಾವು ನೀಡುವಾಗ ಚಳಿ ಚಳಿ ನೀ ಕಾಣೆ 

ಹೆಣ್ಣು : ಹೇಳು ಯಾವ ನೋವು ದೂರ ಮಾಡುವೆ 
ಗಂಡು : ಏಕೆ ಇಂಥ ಲವ್ ತೋರಿ ಕಾಡುವೇ 
ಹೆಣ್ಣು : ಬಳಸುತ ನೀ ನನ್ನ ಹುಡುಕುವೇ ಏನನ್ನ 
ಗಂಡು : ಅಳೆಯುವೆ ಈ ಕಣ್ಣ ಕಳೆಯುವೆ ಈ ಬಣ್ಣ 
ಹೆಣ್ಣು : ಹೀಗೇಕೆ ಕೆಣುಕುವೇ... 
          ಸಂಜೆ ಕವಿದಾಗ ಮಂಜು ಸುರಿವಾಗ ಕಾವು ನೀಡುವಾಗ ಚಳಿ ಚಳಿ ನೀ ಕಾಣೆ 

ಗಂಡು : ಯಾವ ಗಾಳದಂಚು ಕಣ್ಣು ಬೀಸಿದೆ 
ಹೆಣ್ಣು : ನೂರು ಆಸೆ ಮಿಂಚು ಮೈಯ್ಯ ಸೇರಿದೆ 
ಗಂಡು : ಒಲವಿನ ಈ ನಂಟು ಒಗ್ಗಟ್ಟಿನ ಕಗ್ಗಂಟು 
ಹೆಣ್ಣು : ಜೊತೆಯಲಿ ನಾನುಂಟು ಬಯಕೆಯು ನೂರೆಂಟು 
ಗಂಡು : ಈ ರಾತ್ರಿ ಪಡೆಯುವೆ 
          ಸಂಜೆ ಕವಿದಾಗ ಮಂಜು ಸುರಿವಾಗ ಕಾವು ನೀಡುವಾಗ ಚಳಿ ಚಳಿ ನೀ ಕಾಣೆ 
------------------------------------------------------------------------------------
   
ಕೆರಳಿದ ಸರ್ಪ (೧೯೯೪) - ಹೃದಯ ಮೀಟಿದಾಗ 
ಸಂಗೀತ : ಸಂಗಿತರಾಜ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ 

ಹೆಣ್ಣು : ಹೃದಯ ಮೀಟಿದಾಗ ಶೃತಿಯ ಕೂಡಿದಾಗ 
          ನೀನೇ ನನ್ನ ಜೀವ ನಾನೇ ನಿನ್ನ ಭಾವ  
ಗಂಡು : ಹೃದಯ ಮೀಟಿದಾಗ ಶೃತಿಯ ಕೂಡಿದಾಗ 
           ನೀನೇ ನನ್ನ ಜೀವ ನಾನೇ ನಿನ್ನ ಭಾವ  
           ಅನುರಾಗ ಬಂದಾಗ ಹಾಡಾಗಿ ನಲಿವಾಗ ಗೆಳತೀ.. 
           ಬಾಳಲಿ ಹೊಸರಾಗ ಆನಂದ.. ಜೇನಂತ ರಸ ಜೀವನ 
          ಹೃದಯ ಮೀಟಿದಾಗ ಶೃತಿಯ ಕೂಡಿದಾಗ 
          ನೀನೇ ನನ್ನ ಜೀವ ನಾನೇ ನಿನ್ನ ಭಾವ  
  
ಹೆಣ್ಣು : ಒಲವು ಸಂಗೀತದಂತೆ ಚೆಲುವು ಶೃಂಗಾರವಂತೆ 
ಗಂಡು : ಮಧುವಿನ ಸಾಗರ ಕಾವ್ಯದ ಪೂರ ಕನಸಿನ ಕಲ್ಪನೆ ಮನಸ್ಸಿನ ಭಾವನೆ            
            ಎಲ್ಲವೂ ಪ್ರೇಮದ ಆರಾಧನೆ ಗೆಳತೀ ಬಾಳಲಿ ಹೊಸರಾಗ ಆನಂದ 
            ಜೇನಂತ ರಸ ಜೀವನ 
           ಹೃದಯ ಮೀಟಿದಾಗ ಶೃತಿಯ ಕೂಡಿದಾಗ 
           ನೀನೇ ನನ್ನ ಜೀವ ನಾನೇ ನಿನ್ನ ಭಾವ   

ಗಂಡು : ಕನಸು ಕೈಗೂಡಿದಂತೆ ಮನಸ್ಸು ಒಂದಾಗುವಂತೆ 
ಹೆಣ್ಣು : ರಸಮಯ ಜೀವನ ರಸಿಕತೆ ಗಾನ 
           ಹೂವಿನ ಗಂಧದಿ ದುಂಬಿಯ ಕವನ 
           ಸೆಳೆಯುವ ಸ್ನೇಹವೇ ಮನಮೋಹನ ಗೆಳೆಯ 
           ಬಾಳಲಿ ಹೊಸರಾಗ ಆನಂದ ಜೇನಂತ ರಸಜೀವನ 
           ಹೃದಯ ಮೀಟಿದಾಗ ಶೃತಿಯ ಕೂಡಿದಾಗ 
          ನೀನೇ ನನ್ನ ಜೀವ ನಾನೇ ನಿನ್ನ ಭಾವ               
          ಅನುರಾಗ ಬಂದಾಗ ಹಾಡಾಗಿ ನಲಿವಾಗ ಗೆಳೆಯ.. 
          ಬಾಳಲಿ ಹೊಸರಾಗ ಆನಂದ.. ಜೇನಂತ ರಸ ಜೀವನ 
          ಹೃದಯ ಮೀಟಿದಾಗ ಶೃತಿಯ ಕೂಡಿದಾಗ 
          ನೀನೇ ನನ್ನ ಜೀವ ನಾನೇ ನಿನ್ನ ಭಾವ  
--------------------------------------------------------------------------------------
   
ಕೆರಳಿದ ಸರ್ಪ (೧೯೯೪) - ಅಸೆ ನೋಟ ಕೂಡಿ 
ಸಂಗೀತ : ಸಂಗಿತರಾಜ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ, ಕೋರಸ್ 

ಹೆಣ್ಣು : ಆಸೆ ನೋಟ ಕೂಡಿ ಬಂದಾಗ ಪ್ರೇಮದಾಟ ಮೋಡಿ ತಂದಾಗ 
          ರಂಗೇರಿ ರೋಮಾಂಚನ ಮೂಡಿ ಅನುರಾಗ ಆನಂದ ನೀಡಿ 
          ಜೀವನ ಹೂವಿನ ಹಾದಿ ಇಂದು ಮುಂದು 
          ಜೀವನ ಹೂವಿನ ಹಾದಿ ಇಂದು ಮುಂದು 
ಗಂಡು : ಆಸೆ ನೋಟ ಕೂಡಿ ಬಂದಾಗ ಪ್ರೇಮದಾಟ ಮೋಡಿ ತಂದಾಗ 

ಹೆಣ್ಣು : ನಾನೇ ವೀಣೆಯು ನೀನೇ ನಾದವು ಕೂಡಿ ಹಾಡು... ಕೂಡಿ ಹಾಡು  
ಗಂಡು : ನೀನೇ ಸಿರಿ ನದಿ ನಾನೇ ಸಾಗರ ನನ್ನ ಸೇರು...  ನನ್ನ ಸೇರು...  
ಹೆಣ್ಣು : ಭಾವನೇ                      ಗಂಡು : ಕೂಗಿದೆ 
ಹೆಣ್ಣು : ಕಾಮನೆ                       ಗಂಡು : ಕಾಡಿದೆ 
ಇಬ್ಬರು : ನಮ್ಮ ಜೀವನ ಕಲೆತಾಗಿದೆ 
             ಆಸೆ ನೋಟ ಕೂಡಿ ಬಂದಾಗ ಪ್ರೇಮದಾಟ ಮೋಡಿ ತಂದಾಗ 

ಗಂಡು : ಎಂದೂ ಮುಗಿಯದ ಬಾಹು ಬಂಧನ ಸ್ವರ್ಗ ತೋರು... ಸ್ವರ್ಗ ತೋರು  
ಹೆಣ್ಣು : ರಾಗ ರಂಗಿನ ಜೇನ ಚುಂಬನ ಸಿಹಿಯ ಹೀರಿ ... ಸಿಹಿಯ ಹೀರಿ ...   
ಗಂಡು : ಯೌವ್ವನ... ಯೌವ್ವನ...             ಹೆಣ್ಣು : ಮೋಹನ... ಮೋಹನ...   
ಗಂಡು : ಒಲವಿನ... ಒಲವಿನ...                ಹೆಣ್ಣು : ಚೇತನ... ಚೇತನ.. 
ಇಬ್ಬರು : ಹೃದಯ ಕೂಡಿ ಬೆರೆತಾಗಿದೆ 
             ಆಸೆ ನೋಟ ಕೂಡಿ ಬಂದಾಗ ಪ್ರೇಮದಾಟ ಮೋಡಿ ತಂದಾಗ 
             ರಂಗೇರಿ ರೋಮಾಂಚನ ಮೂಡಿ ಅನುರಾಗ ಆನಂದ ನೀಡಿ 
             ಜೀವನ ಹೂವಿನ ಹಾದಿ ಇಂದು ಮುಂದು 
             ಜೀವನ ಹೂವಿನ ಹಾದಿ ಇಂದು ಮುಂದು 
ಗಂಡು : ಆಸೆ ನೋಟ ಕೂಡಿ ಬಂದಾಗ ಪ್ರೇಮದಾಟ ಮೋಡಿ ತಂದಾಗ 
--------------------------------------------------------------------------------------
   
ಕೆರಳಿದ ಸರ್ಪ (೧೯೯೪) - ನಗು ನಗುತಾ ಆಡುವಾ 
ಸಂಗೀತ : ಸಂಗಿತರಾಜ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರೀ, ಗಾಯನ : ಎಸ್.ಪಿ.ಬಿ, ವಾಣಿಜಯರಾಂ, ಕೋರಸ್ 

ಹೆಣ್ಣು : ನಗು ನಗುತಾ ಆಡುವ ಜಿಗಿ ಜಿಗಿದು ಓಡುವ 
          ಆನಂದವೇ ಈ ದಿನ ಜೋತೆಗಿರಲೂ ನೀನು 
          ಜಗ ಮರೆವೆ ನಾನು ಈ ಲೋಕವೇ ಕೂಗಿದೆ ಪ್ರೇಮ... ಪ್ರೇಮ... 
          ನಗು ನಗುತಾ ಆಡುವ ಜಿಗಿ ಜಿಗಿದು ಓಡುವ 
          ಆನಂದವೇ ಈ ದಿನ ಜೋತೆಗಿರಲೂ ನೀನು 
          ಜಗ ಮರೆವೆ ನಾನು ಈ ಲೋಕವೇ ಕೂಗಿದೆ ಪ್ರೇಮ... ಪ್ರೇಮ... 

ಹೆಣ್ಣು : ತಂಗಾಳಿ ಬಿಸಿದಾಗಲೇ           ಗಂಡು : ನೀ ಬಂದೆ ಬಳಿಗೆ ಮೆಲ್ಲನೆ 
ಹೆಣ್ಣು : ನೂರು ಆಸೆ ತುಂಬಿ ತಂದು     ಗಂಡು : ಹಾಗೆ ಹೀಗಿ ತೂಗಿ ಬಾಗಿ 
ಇಬ್ಬರು : ಬಂದಾಗ ಆನಂದವೇ ಬಳಿಯಲ್ಲಿ ಇರಲಿ 
          ನಗು ನಗುತಾ ಆಡುವ ಜಿಗಿ ಜಿಗಿದು ಓಡುವ 
          ಆನಂದವೇ ಈ ದಿನ ಜೋತೆಗಿರಲೂ ನೀನು 
          ಜಗ ಮರೆವೆ ನಾನು ಈ ಲೋಕವೇ ಕೂಗಿದೆ ಪ್ರೇಮ... ಪ್ರೇಮ... 

ಹೆಣ್ಣು : ಮೈಯಲ್ಲಿ ಮಿಂಚು ಮೂಡಿದೆ           ಗಂಡು : ಏನೇನೋ ಸಂಚು ಮೂಡಿದೆ 
ಹೆಣ್ಣು : ನನ್ನ ತುಂಬ ನೀನೇ ತುಂಬಿ            ಗಂಡು : ನೀನೇ ಹೂವು ನಾನೇ ದುಂಬಿ 
ಇಬ್ಬರು : ಉಲ್ಲಾಸ ತಂದಾಗಲ್ಲೇ... ಅರಳಿದ ಬಯಕೆ 
          ನಗು ನಗುತಾ ಆಡುವ ಜಿಗಿ ಜಿಗಿದು ಓಡುವ 
          ಆನಂದವೇ ಈ ದಿನ ಜೋತೆಗಿರಲೂ ನೀನು 
          ಜಗ ಮರೆವೆ ನಾನು ಈ ಲೋಕವೇ ಕೂಗಿದೆ ಪ್ರೇಮ... ಪ್ರೇಮ... , 
-------------------------------------------------------------------------------------
   
ಕೆರಳಿದ ಸರ್ಪ (೧೯೯೪) - ಸಂಗ ಕಟ್ಟು ಬಾ 
ಸಂಗೀತ : ಸಂಗಿತರಾಜ, ಸಾಹಿತ್ಯ : ಎಚ್.ಏನ್.ಶಂಕರ, ಗಾಯನ : ಎಲ್.ಆರ್.ಈಶ್ವರಿ 

ಜಿಮ್ಮ ಜಿಮ್ಮ ಜಿಮ್ಮ  ರಮ್ಮ ರಮ್ಮ ರಮ್ಮ ಜಿನ್ನ ಜಿನ್ನ ಬಾರೋ 
ಸಂಗಕಟ್ಟು ಬಾಬಾ ಜಂಬ ಬಿಟ್ಟು ಹೇ..ಹೇ  ಮುತ್ತು ಕೊಟ್ಟು... ಓಓಓಓಓ 
ಬಾರೋ ಬಾರೋ ಆಹಾ... ನನಗಾಗಿ ಆಹಾ..ಆಹಾ... 
ಆಹಾಹಾ ಬಿಸಿಯಾಗಿ ನೀ ಬಾ ಬಾ ಬಾ ಬಾರೋ 
ಸೊಂಟ ಮುಟ್ಟೆ ಹೂಂ ಹೂಂ ಕೆನ್ನೇ ತಟ್ಟೆ ಹೇಹೇಹೇ ... 
ಆಟ ಕಟ್ಟೋ ಬಾ ಬಾ ಬಾರೋ... 
ಸಂಗಕಟ್ಟು ಬಾಬಾ ಜಂಬ ಬಿಟ್ಟು ಹೇ..ಹೇ  ಮುತ್ತು ಕೊಟ್ಟು... ಓಓಓಓಓ 
ಬಾರೋ ಬಾರೋ ಆಹಾ... ನನಗಾಗಿ ಆಹಾ..ಆಹಾ... 

ಉಕ್ಕಿ ನಿಂತೇ ಸೊಕ್ಕಿ ಬಂದ ಈ ನನ್ನ ಹಸಿಯಾದ ಉನ್ಮಾದ ಉಕ್ಕೇರಿ 
ಶೃಂಗಾರ ಮತ್ತೇರಿದೆ ಸಂಗಾತಿ ಬಂದಾಗ ಅಂಗಾಂಗ ಸಜ್ಜಾಗಿದೆ 
ನೀ ಬಾ ಬಾ ಬಾ ಬಾ ಬಾರೋ ... 
ಸಂಗಕಟ್ಟು ಬಾಬಾ ಜಂಬ ಬಿಟ್ಟು ಹೇ..ಹೇ  ಮುತ್ತು ಕೊಟ್ಟು... ಓಓಓಓಓ 
ಬಾರೋ ಬಾರೋ ಆಹಾ... ನನಗಾಗಿ ಆಹಾ..ಆಹಾ... 

ನೆಚ್ಚಿ ಬಂದೆ ಹಚ್ಚಿ ಕೊಂಡೆ ಈ ನಿನ್ನ ಬಿಸಿಯಾದ ಉನ್ಮಾದ ಉಕ್ಕೇರಿ 
ಶೃಂಗಾರ ಮತ್ತೇರಿದೆ ನಾ ನಿಂದು ಉಂಡೇನು 
ಸೊಂಪಾದ ಸುಖವನ್ನೇ ನೀ ಬಾ ಬಾ ಬಾ ಬಾ ಬಾರೋ 
ಸಂಗಕಟ್ಟು ಬಾಬಾ ಜಂಬ ಬಿಟ್ಟು ಹೇ..ಹೇ  ಮುತ್ತು ಕೊಟ್ಟು... ಓಓಓಓಓ 
ಬಾರೋ ಬಾರೋ ಆಹಾ... ನನಗಾಗಿ ಆಹಾ..ಆಹಾ... 
------------------------------------------------------------------------------------

No comments:

Post a Comment