ರೋಲ್‌ಕಾಲ್ ರಾಮಕೃಷ್ಣ ಚಲನಚಿತ್ರದ ಹಾಡುಗಳು
- ಲೋ ರೋಲುಕಾಲು
- ಬಾರೇ ನನ್ನ ಐಸ್ ಕ್ರೀಮ್
- ಮಾಲೀಶು ಮಾಡುತಿನೋ ಮಾವ
- ಆಯ್ ಲವ್ ಯೂ ನಿಂಗಾಗಿ
ರೋಲ್‌ಕಾಲ್ ರಾಮಕೃಷ್ಣ (೧೯೯೧) - ಲೋ ರೋಲುಕಾಲು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ
ಹೆಣ್ಣು : ಲೋ.. ರೋಲುಕಾಲು...
ಲೋ ರೋಲುಕಾಲು ಬಾರೋ ನಂಗೇ ತಾಳಿ ಕಟ್ಟೋಕೆ ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ
ಲೋ ರೋಲುಕಾಲು ಬಾರೋ ನಂಗೇ ತಾಳಿ ಕಟ್ಟೋಕೆ ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ
ನೀ ಹೀಗೇಕೆ ಹೆದರುತಿಯೋ ನನ್ನ ಮುಟ್ಟೋಕೆ ಪಟಾಪಟ್ಟು ಧೈರ್ಯ ಮಾಡು ಅಪ್ಪಿಕೊಳ್ಳೋಕೇ ..
ಅಂದವಾದ ಹೆಣ್ಣಿದೇ ಆಸೇ ತುಂಬಿ ನಿಂತಿದೆ ತನ್ನ ಅಸೆ ತೀರಲು ಬಾಯಿ ಬಿಟ್ಟು ಕೇಳಿದೆ
ನಿನ್ನ ಮಗು ಸಾಕು ಬಾರೋ ಮದುವೆ ಆಗೋಕೆ..
ಗಂಡು : ಲೇ.. ಗಂಡುಭೀರಿ...
ಲೇ.. ಗಂಡುಭೀರಿ... ಯಾಕೇ ಆತ್ರ್ ತಾಳಿ ಕೊಟ್ಟೋಕೆ ನಂಗೇ ಈಗ ಟೈಮೂ ಇಲ್ಲ ಪ್ರೀತಿ ಮಾಡೋಕೆ
ಲೇ.. ಗಂಡುಭೀರಿ... ಯಾಕೇ ಆತ್ರ್ ತಾಳಿ ಕೊಟ್ಟೋಕೆ ನಂಗೇ ಈಗ ಟೈಮೂ ಇಲ್ಲ ಪ್ರೀತಿ ಮಾಡೋಕೆ
ನೀ ಹುಲಿಯಲ್ಲ ಕರಡಿಯಲ್ಲ ಹೆದರಿಕೊಳ್ಳೋಕೆ ಸನ್ಯಾಸಿನೂ ಅಲ್ಲ ನಾನು ದೂರ ಇರೋಕೆ
ಮಾಘಮಾಸ ತನಕವೂ ಮೂರ್ಹತವೇ ಇಲ್ಲವೂ ಅಲ್ಲೀತನಕ ತಾಳಿಕೋ ಸುಮ್ನೆ ಬಾಯಿ ಮುಚ್ಚುಕೋ
ಬೆನ್ನ ಹಿಂದೆ ಬೀಳಬೇಡ ಮದುವೇ ಆಗೋಕೇ ...
ಹೆಣ್ಣು : ಲೋ ರೋಲುಕಾಲು ಬಾರೋ ನಂಗೇ ತಾಳಿ ಕಟ್ಟೋಕೆ ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ
ಹೆಣ್ಣು : ಮನಸಿದೂ.. ನಿಲ್ಲದೂ ... ಚೆನ್ನ ನೀ ಬಂದರೇ ... ನಿನ್ನನೂ ನೆನೆದರೇ .. ಬೇರೇನೋ ತೊಂದರೆ
ಮನಸಿದೂ.. ನಿಲ್ಲದೂ ... ಚೆನ್ನ ನೀ ಬಂದರೇ ... ನಿನ್ನನೂ ನೆನೆದರೇ .. ಬೇರೇನೋ ತೊಂದರೆ
ಗಂಡು : ಬೆಳೆಯೂ... ಬೇಯದೂ... ಹೀಗೆಲ್ಲಾ ಅಂದರೇ ಜಾರೀ ನಾ... ಹ್ಹಾ.. ಹ್ಹಾ.. ಬೀಳೇನೂ ಸೀರೆಯಾ ಕಂಡರೇ
ಹೆಣ್ಣು : ಗಾಳಿ ಬೀಸುತ್ತಿದ್ದಾಗ ಕಾಳು ತೂರಿಕೋಬೇಕು ಹೆಣ್ಣು ಒಪ್ಪಿ ಬಂದಾಗ ಮದುವೇ ಮಾಡಿಕೋಬೇಕು
ಹೆಣ್ಣು : ಲೋ ರೋಲುಕಾಲು
ಲೋ ರೋಲುಕಾಲು ಬಾರೋ ನಂಗೇ ತಾಳಿ ಕಟ್ಟೋಕೆ ಚಳಿ ಬಿಟ್ಟು ಒಂದು ಕೊಟ್ಟು ಪ್ರೀತಿ ಮಾಡೋಕೆ
ಗಂಡು : ಲೇ.. ಗಂಡುಭೀರಿ... ಯಾಕೇ ಆತ್ರ್ ತಾಳಿ ಕೊಟ್ಟೋಕೆ ನಂಗೇ ಈಗ ಟೈಮೂ ಇಲ್ಲ ಪ್ರೀತಿ ಮಾಡೋಕೆ....
ಹೆಣ್ಣು : ಬಾರದೂ.. ನಿದ್ದೆಯೂ.. ಹಾಳಾದ ಕಣ್ಣಿಗೇ.. ಊಟವೇ.. ಸೇರದೂ.. ನಿನ್ನಿಂದ ನನಗೇ ..
ಬಾರದೂ.. ನಿದ್ದೆಯೂ.. ಹಾಳಾದ ಕಣ್ಣಿಗೇ.. ಊಟವೇ.. ಸೇರದೂ.. ನಿನ್ನಿಂದ ನನಗೇ ..
ಗಂಡು : ಗುಳಿಗೆಯಾ.. ತೆಗೆದುಕೋ.. ಗೊರಕೆಯಾ ಹೊಡೆಯುವೇ.. ಊಟವಾ.. ಬಿಟ್ಟರೇ.. ಆರೋಗ್ಯ ಪಡೆಯುವೇ
ಹೆಣ್ಣು : ನಿನ್ನ ಗುದ್ದಿ ಬಿಡೋಷ್ಟು ಕೋಪ ನಂಗೇ ಬರುತ್ತೇ ಆದ್ರೇ ಪ್ರೀತಿ ಹಾಳಾದ್ದೂ ಅಡ್ಡ ಬಂದು ನಿಲ್ಲತ್ತೇ
ಲೋ ರೋಲುಕಾಲು
ರೋಲುಕಾಲು ಬಾರೋ ನಂಗೇ ತಾಳಿ ಕಟ್ಟೋಕೆ
ಗಂಡು : ಲೇ.. ಸಾಕಮ್ಮಾ ಟೈಮೂ ಇಲ್ಲ ಪ್ರೀತಿ ಮಾಡೋಕೆ....
ಹೆಣ್ಣು : ನೀ ಹೀಗೇಕೆ ಹೆದರುತಿಯೋ ನನ್ನ ಮುಟ್ಟೋಕೆ
ಗಂಡು : ನೀ ಹುಲಿಯಲ್ಲ ಕರಡಿಯಲ್ಲ ಹೆದರಿಕೊಳ್ಳೋಕೆ
ಹೆಣ್ಣು : ಅಂದವಾದ ಹೆಣ್ಣಿದೇ ಆಸೇ ತುಂಬಿ ನಿಂತಿದೆ
ಗಂಡು : ಮಾಘಮಾಸ ತನಕವೂ ಮೂರ್ಹತವೇ ಇಲ್ಲವೂ
ಹೆಣ್ಣು : ನಿನ್ನ ಮಗು ಸಾಕು ಬಾರೋ ಮದುವೆ ಆಗೋಕೆ..
ಗಂಡು : ಬೆನ್ನ ಹಿಂದೆ ಬೀಳಬೇಡ ಮದುವೇ ಆಗೋಕೇ ...
ಹೆಣ್ಣು : ಲೋ ರೋಲುಕಾಲು...
ಲೋ ರೋಲುಕಾಲು ಬಾರೋ ನಂಗೇ ತಾಳಿ ಕಟ್ಟೋಕೆ
ಗಂಡು : ಲೇ.. ಸಾಕಮ್ಮಾ ಟೈಮೂ ಇಲ್ಲ ಪ್ರೀತಿ ಮಾಡೋಕೆ....
ಹೆಣ್ಣು : ಲೋ ರೋಲುಕಾಲು ಬಾರೋ ನಂಗೇ ತಾಳಿ ಕಟ್ಟೋಕೆ
ಗಂಡು : ಲೇ.. ಸಾಕಮ್ಮಾ ಟೈಮೂ ಇಲ್ಲ ಪ್ರೀತಿ ಮಾಡೋಕೆ....
---------------------------------------------------------------------------------------------------------------
ರೋಲ್‌ಕಾಲ್ ರಾಮಕೃಷ್ಣ (೧೯೯೧) - ಬಾರೇ ನನ್ನ ಐಸ್ ಕ್ರೀಮ್
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಸಂಗೀತ ಕಟ್ಟಿ
ಗಂಡು : ಹೇ... ಹೇಹೇಹೇಹೇ... ಹೇ.. ಹೇಹೇಹೇಹೇ
ಬಾರೇ ನನ್ನ ಐಸಕ್ರೀಮ್ ನಿನ್ನದೇ ನನಗೆ ಸ್ವೀಟ್ ಡ್ರೀಮ್
ನೀನು ಕೊಡೋ ಮುತ್ತಿಗೆ ಹಾಕಿದೆ ನಾ ಮುತ್ತಿಗೆ
ಪ್ರೀತಿ ಎಂಬ ನಶೆಯಲ್ಲಿ ಹಾಡು ಬಂತು ಮನಸ್ಸಿನಲ್ಲಿ
ಸ್ವಪ್ನ... ಸ್ವಪ್ನ... ಸ್ವಪ್ನ... ಸ್ವಪ್ನ... ಬಳಿ ಓಡಿ ಬಾ...
ಬಾರೇ ನನ್ನ ಐಸಕ್ರೀಮ್ ನಿನ್ನದೇ ನನಗೆ ಸ್ವೀಟ್ ಡ್ರೀಮ್
ನೀನು ಕೊಡೋ ಮುತ್ತಿಗೆ ಹಾಕಿದೆ ನಾ ಮುತ್ತಿಗೆ
ಪ್ರೀತಿ ಎಂಬ ನಶೆಯಲ್ಲಿ ಹಾಡು ಬಂತು ಮನಸ್ಸಿನಲ್ಲಿ
ಸ್ವಪ್ನ... ಸ್ವಪ್ನ... ಸ್ವಪ್ನ... ಸ್ವಪ್ನ... ಬಳಿ ಓಡಿ ಬಾ...
ಗಂಡು : ನಿನ್ನ ಜೋರು ನಾನು ಕಂಡೆ ನಿನ್ನ ಡೊಂಕು ನಡೆ ಕಂಡೇ
ನಿನ್ನ ಮೇಲೆ ಮೋಹಗೊಂಡೇ ನೂರು ಕನಸು ನಾನು ಕಂಡೇ
ಕನಸು ನಿಜ ಮಾಡಲೆಂದೇ ನನ್ನ ಮನಸು ನಿನಗೆ ತಂದೆ ನಾ...
ನನ್ನ ಮೇಲೆ ಪ್ರೀತಿ ಇದ್ದು ನನ್ನ ಅಪ್ಪಿಕೊಳ್ಳಲೇ ಚಿನ್ನ
ಹೆಣ್ಣು : ರೌಡಿಗಳ ಗ್ಯಾಂಗಿನಲ್ಲಿ ರಾಜ ನೀನು ಬಲ್ಲೆ ನಾ
ನೀನು ಮಾಡೋ ಅತ್ಯಾಚಾರ ಆಟಕೆ ಎಲ್ಲೇ ಇಲ್ಲವೇನು
ನನ್ನ ಮೇಲೆ ಪ್ರೀತಿ ಇದ್ದ ಹಾಗೆ ವೇಷ ಹಾಕಿ ಬಂದೆ ನೀ
ನಿನ್ನ ಧೋರ ಬೆಣ್ಣೆಯಂಥ ಮಾತಿಗೆಲ್ಲ ಮೋಸ ಹೋಗೆ ನಾ
ಗಂಡು : ಬೇಡ ಚಿನ್ನ ನಾನು ಎಂದೂ ಅಪ್ಪಟ ಚಿನ್ನ ತಿಳಿಯೋ ಇನ್ನೂ ನನ್ನನೂ ನೀ ಪ್ರೀತಿಸು
ಬಾರೇ ನನ್ನ ಐಸಕ್ರೀಮ್ ನಿನ್ನದೇ ನಂಗೇ ಸ್ವೀಟ್ ಡ್ರೀಮ್
ಬಾರೇ ನನ್ನ ಐಸಕ್ರೀಮ್ ನಿನ್ನದೇ ನಂಗೇ ಸ್ವೀಟ್ ಡ್ರೀಮ್
ಗಂಡು : ರಾತ್ರಿ ಹೊತ್ತು ನಿನ್ನ ಮುತ್ತು ಕೆನ್ನೆ ಮೇಲೆ ತಂಪಾಗಿತ್ತು
ಹಗಲ ಹೊತ್ತು ನೀನು ಬೈದು ಕಿವಿಗಂತೂ ಇಂಪಾಗಿತ್ತು
ಕೋಪದಿಂದ ಕೆನ್ನೆ ಕೆಂಪು ನೋಡಕಂತೂ ಸೊಂಪಾಗಿತ್ತು... ಹ್ಹಾ...
ಅಪ್ಪಿಕೊಂಡು ಕೆನ್ನೆಯನ್ನ ಕಚ್ಚಿ ತೀಡೋ ಆಸೆ ಬಂತು ಹ್ಹಾ...
ಹೆಣ್ಣು : ನಿನ್ನ ಗುಣ ಅರ್ಥವಾಯಿತು ಕೋಪ ಎಲ್ಲ ಮಾಯವಾಯಿತು
ಮಂಜಿನಂತೆ ಮನಸು ಕರಗಿ ಪ್ರೀತಿ ಚಿಮ್ಮಿ ಚಿಮ್ಮಿ ಬಂತು
ನಿನ್ನ ಕೈ ಸೋಕಿ ಮೈಯಲ್ಲಿ ನೂರು ಮಿಂಚೂ ಒಟ್ಟಿಗೆ ಬಂತು ಹ್ಹಾ...
ಅಪ್ಪಿಕೊಂಡು ರಾಶಿ ಮುತ್ತು ಕೊಟ್ಟು ಬಿಡೋ ಆಸೆ ಬಂತು ಹ್ಹಾ...
ಗಂಡು : ನನ್ನ ನಿನ್ನ ಪ್ರೀತಿ ಇನ್ನ ಹೀಗೆ ನಗಲೀ ಎಂದೂ ಚಿನ್ನ
ಹೆಣ್ಣು : ನನ್ನನ್ನೂ ನೀ ಪ್ರಿತಿಸೂ
ಗಂಡು : ಬಾರೇ ನನ್ನ ಐಸಕ್ರೀಮ್ (ಹ್ಹಾ..ಹ್ಹಾ..) ನಿನ್ನದೇ ನಂಗೇ ಸ್ವೀಟ್ ಡ್ರೀಮ್ (ಹೂಂ.. ಹೂಂ)
ನೀನು ಕೊಡೋ ಮುತ್ತಿಗೆ (ಹೇ..ಹೇ..ಹೇಹೇ) ಹಾಕಿದೆ ನಾ ಮುತ್ತಿಗೆ (ಓ..ಓ..ಓಹೋ)
ಪ್ರೀತಿ ಎಂಬ ನಶೆಯಲ್ಲಿ ಹಾಡು ಬಂತು ಮನಸ್ಸಿನಲ್ಲಿ
ಸ್ವಪ್ನ... ಸ್ವಪ್ನ... ಸ್ವಪ್ನ... ಸ್ವಪ್ನ...
ಇಬ್ಬರು : ಬಳಿ ಓಡಿ ಬಾ...
--------------------------------------------------------------------------------------------------------------
ರೋಲ್‌ಕಾಲ್ ರಾಮಕೃಷ್ಣ (೧೯೯೧) - ಮಾಲೀಶು ಮಾಡುತಿನೋ ಮಾವ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಕುಸುಮಾ
ಹೆಣ್ಣು : ಮಾಲೀಶು ಮಾಡುತ್ತಿನೋ ಮಾವಾ ...
ಮಾಲೀಶು ಮಾಡುತ್ತಿನೋ ಮಾವಾ ...ಹ್ಹಾ.. ಮೈಯ್ಯಗೇ ತಂಪಗೆ ಕಣ್ಣಿಗೇ ಸೊಂಪಗೇ
ಮಾಲೀಶು ಮಾಡುತ್ತಿನೋ ಮಾವಾ ...ಮೈಯ್ಯಗೇ ತಂಪಗೆ ಕಣ್ಣಿಗೇ ಸೊಂಪಗೇ
ಗಂಡು : ಮಾಲೀಶು ಮಾಡು ಎಣ್ಣೇ ಹಾಕೀ... ಅತ್ತೆಯ ಕಂಗಳು ಆಗಲೀ ಕೆಂಪಗೇ
ಘಮ್ಮತ್ತೂ .. ಮೈಯ್ ಜುಮ್ಮಂತೂ ಆತ್ತೆಗೆ ತಲೆ ಧಿಮ್ಮಂತೂ ಬಿಪಿಯೂ ಹೆಚ್ಚಾಗಿ ಪಡಕೊಳ್ಳಿ ಸುಮ್ಕೆ
ಒತ್ತುವಾ ಮೆತ್ತಗೇ ಹ್ಯಾಪಿಯಾ ಹೊತ್ತಿಗೇ
ಒತ್ತುವಾ ಮೆತ್ತಗೇ ಹ್ಯಾಪಿಯಾ ಹೊತ್ತಿಗೇ
ಮಾಲೀಶು ಮಾಡು ಬಾರೇ ಸಾಕೀ... ಮೈಯ್ಯಗೇ ತಂಪಗೆ ಕಣ್ಣಿಗೇ ಸೊಂಪಗೇ
ಹೆಣ್ಣು : ಮಾಲೀಶು ಮಾಡುತ್ತಿನೋ ಮಾವಾ ...ಹ್ಹಾ.. ಮೈಯ್ಯಗೇ ತಂಪಗೆ ಕಣ್ಣಿಗೇ ಸೊಂಪಗೇ
ಗಂಡು : ಈ ಮನೆ ಉದ್ದಾರಕೇ ನಾ ಎಮರ್ಜೆನ್ಸಿ ತರಲೇಬೇಕೂ ಎಲ್ಲಾರಾ ರಿಪೇರಿಗೇ ನಾ ರಿಂಗ್ ಮಾಸ್ಟರ್ ಆಗಲೇಬೇಕು
ಈ ಮನೆ ಉದ್ದಾರಕೇ ನಾ ಎಮರ್ಜೆನ್ಸಿ ತರಲೇಬೇಕೂ ಎಲ್ಲಾರಾ ರಿಪೇರಿಗೇ ನಾ ರಿಂಗ್ ಮಾಸ್ಟರ್ ಆಗಲೇಬೇಕು
ಕಸಬರೂಕಿ ಹಿಡೀರಿ ಅತ್ತೆಮ್ಮಾ.. ಮನೆಯೆಲ್ಲ ಗುಡಿಸಲೇ ಬೇಕಮ್ಮಾ ಹಾಗೇಕೇ ನೋಡ್ತೀ ಮಾತ್ರಮ್ಮಾ
ಇಡ್ಲಿ ಹಿಟ್ಟು ರುಬ್ಬಲೇ ಬೇಕಮ್ಮಾ ಈ ನಿಮ್ಮ ಅಳಿಯನೂ ನಿಮ್ಮ ಮನೆ ತೊಳೆಯನೂ
ನಿಮ್ಮಿಂದಲೇ ತಗೆಸುವಾ ನಿಮ್ಮ ಮನದ ಕೊಳೆಯನೂ ನನ್ನಿಂದ ತಪ್ಪಸೋಕೇ ಆಗಲ್ಲ ಕಣೇ
ನನ್ನ ಈ ನೋಟಕೆ ಜಿಂಕೆಯ ಅಂಜಿಕೆ
ನನ್ನ ಈ ನೋಟಕೆ ಜಿಂಕೆಯ ಅಂಜಿಕೆ
ಮಾಲೀಶು ಮಾಡು ಬಾರೇ ಸಾಕೀ... ಮೈಯ್ಯಗೇ ತಂಪಗೆ ಕಣ್ಣಿಗೇ ಸೊಂಪಗೇ
ಹೆಣ್ಣು : ಮಾಲೀಶು ಮಾಡುತ್ತಿನೋ ಮಾವಾ ...ಓಯ್ ಓಯ್.. ಮೈಯ್ಯಗೇ ತಂಪಗೆ ಕಣ್ಣಿಗೇ ಸೊಂಪಗೇ
ಗಂಡು : ಬಾರಮ್ಮಾ ಹೀರೋಯಿನ್ ನಾ ನಿಂಗೇ ಗಂಡಾ ಇನ್ನೂ ನೀ ನಂಗೇ ಕಾಲ್ ಒತ್ತಲೂ ಈ ಲೈಫ್ ಎಂಥಾ ಚೆನ್ನೂ
ಬಾರಮ್ಮಾ ಹೀರೋಯಿನ್ ನಾ ನಿಂಗೇ ಗಂಡಾ ಇನ್ನೂ ನೀ ನಂಗೇ ಕಾಲ್ ಒತ್ತಲೂ ಈ ಲೈಫ್ ಎಂಥಾ ಚೆನ್ನೂ
ದುರುಗುಟ್ಟು ನೋಟ ಬೇಡಮ್ಮಾ.. ಇವಳ ನಿನ್ನ ಸವತಿ ಅಲ್ಲಮ್ಮಾ.. ನಿನ್ನ ಮೇಲೆ ಪ್ರೇಮ ನನಗಮ್ಮಾ
ಅದಕೆ ಈ ಸರ್ಕಸ್ಸೂ ಕೇಳಮ್ಮಾ.. ಮನೆಮಗನೇ ಬಾರಯ್ಯಾ... ಹೆಂಡ್ತಿ ಸೀರೆ ಒಗೆಯುವೇಯಾ
ಅವಳ ಮೇಲೆ ದರ್ಬಾರೂ ಮಾಡೋ ಇನ್ನೂ ಸಾಧ್ಯೆಯಾ ಪೋಲೀಸು ಕರೆಯೋಕೆ ನೋಡ್ಬೇಡಾ ಕಣೋ
ಮಾಡೇನಾ ಲೂಟಿಯಾ ಮಾಡಿ ಏಟ್ ತಿಂತೀಯಾ
ಮಾಡೇನಾ ಲೂಟಿಯಾ ಮಾಡಿ ಎಟ್ ತಿಂತೀಯಾ
ಹೆಣ್ಣು : ಮಾಲೀಶು ಮಾಡುತ್ತಿನೋ ಮಾವಾ ...ಹ್ಹಾ.. ಮೈಯ್ಯಗೇ ತಂಪಗೆ ಕಣ್ಣಿಗೇ ಸೊಂಪಗೇ
ಗಂಡು : ಮಾಲೀಶು ಮಾಡು ಎಣ್ಣೇ ಹಾಕೀ... ಅತ್ತೆಯ ಕಂಗಳು ಆಗಲೀ ಕೆಂಪಗೇ
ಘಮ್ಮತ್ತೂ .. ಮೈಯ್ ಜುಮ್ಮಂತೂ ಆತ್ತೆಗೆ ತಲೆ ಧಿಮ್ಮಂತೂ ಬಿಪಿಯೂ ಹೆಚ್ಚಾಗಿ ಪಡಕೊಳ್ಳಿ ಸುಮ್ಕೆ
ಒತ್ತುವಾ ಮೆತ್ತಗೇ ಹ್ಯಾಪಿಯಾ ಹೊತ್ತಿಗೇ
ಒತ್ತುವಾ ಮೆತ್ತಗೇ ಹ್ಯಾಪಿಯಾ ಹೊತ್ತಿಗೇ
ಮಾಲೀಶು ಮಾಡು ಬಾರೇ ಸಾಕೀ... ಮೈಯ್ಯಗೇ ತಂಪಗೆ ಕಣ್ಣಿಗೇ ಸೊಂಪಗೇ
--------------------------------------------------------------------------------------------------------------
ರೋಲ್‌ಕಾಲ್ ರಾಮಕೃಷ್ಣ (೧೯೯೧) - ಆಯ್ ಲವ್ ಯೂ ನಿಂಗಾಗಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಮಂಜುಳಾಗುರುರಾಜ
ಹೆಣ್ಣು : ಐ ಲವ್ ಯೂ ನಿನಗಾಗಿ ಮುಡುಪಾಗಿ ಈ ಜೀವ ಕಾದಿದೆ
ಅನುರಾಗ ಹೂವಾಗಿ ಮಧುವನು ತಂದಿದೇ
ನನಗಾಗಿ ಬಳಿ ಬಾರೋ ಒಲವಿಂದ ಎಂದಿದೆ
ಐ ಲವ್ ಯೂ... ಓ.. ಎದೆ ಹಾಡುತ್ತಿಗ ಹೊಸ ಪ್ರೇಮ ರಾಗ
ಓ.. ಎದೆ ಹಾಡುತ್ತಿಗ ಹೊಸ ಪ್ರೇಮ ರಾಗ ಅದ ಕೇಳಿ ಬೇಗ ಬಾರೆಯಾ
ಗಂಡು : ಐ ಲವ್ ಯೂ....
ನಿನಗಾಗಿ ಓಡೋಡಿ ಈ ಜೀವ ಬಂದಿದೆ
ಎದೆಯಲ್ಲಿ ಮನೆಯೊಂದು ಒಲವಿಂದ ತಂದಿದೆ
ನೀ ತಂದ ಮನಸನು ಜೋಪಾನ ಮಾಡಿದೆ
ಐ ಲವ್ ಯೂ.... ಹೆಣ್ಣು : ಐ ಲವ್ ಯೂ
ಗಂಡು : ಓ.. ನೀ ಹಾಡಿದಂತ ಹೊಸ ಪ್ರೇಮರಾಗ
ಓ.. ನೀ ಹಾಡಿದಂತ ಹೊಸ ಪ್ರೇಮರಾಗ ಸೆಳೆದೆನ್ನ ಇಲ್ಲಿ ತಂದಿದೆ
ಹೆಣ್ಣು : ಐ ಲವ್ ಯೂ.... ಗಂಡು : ಐ ಲವ್ ಯೂ
ಹೆಣ್ಣು : ಕನಸುಗಳ ಹೂಮಾಲೆ ಹೆಣೆದಿರುವೆ ಪ್ರಿಯ ನಿನಗೆ
ಆಸೆಗಳ ಉಯ್ಯಾಲೆ ಮೇಲೆ ತೂಗಿ ಆಡು ಬಾ...
ಗಂಡು : ಹೃದಯವನೇ ಹಾಸಿರುವೇ ನೀ ಬರುವ ದಾರಿಯಲಿ
ಪಾದಗಳ ನೋಯಿಸದೆ ಹೆಜ್ಜೆ ಇಟ್ಟು ನೀನು ಬಾ
ಹೆಣ್ಣು : ಮೃದು ಕರ ತೊಳಲಿ ಹಿಡಿಯುವೆ ನಲ್ಲ ನಾ ನಿನ್ನ
ಗಂಡು : ಕಿರುನಗೆ ಹೂ ಚೆಲ್ಲೋ ತುಟಿಗಳ ಹೀರ ಬೇಕಿನ್ನ
ಹೆಣ್ಣು : ಸವಿಯೋಣ ಬಾಳಜೇನನೂ
ಗಂಡು : ಐ ಲವ್ ಯೂ ಹೆಣ್ಣು : ಐ ಲವ್ ಯೂ....
ಗಂಡು : ನಿನಗಾಗಿ ಓಡೋಡಿ ಈ ಜೀವ ಬಂದಿದೆ
ಹೆಣ್ಣು : ಅನುರಾಗ ಹೂವಾಗಿ ಮಧುವನು ತಂದಿದೇ
ಗಂಡು : ನೀ ತಂದ ಮನಸನು ಜೋಪಾನ ಮಾಡಿದೆ
ಇಬ್ಬರು : ಐ ಲವ್ ಯೂ....
ಕೋರಸ್ : ಲಾ ಲಾಲಾ ಲಾ ಲಾಲಾ ಲಾ ಲಾಲಾ ಲಾ ಲಾಲಾ
ಹೆಣ್ಣು : ಶೃತಿಯೊಳಗೆ ಕಲೆಯುವೆನಾ ಉಸಿರೊಳಗೆ ಬೆರೆಯುವೆನಾ
ತನುಮನವ ಮರೆಯುವೆನಾ ಬೆರೆತಿರೆ ನಿನ್ನ ಪ್ರೀತಿಯೂ (ಆಆಆಅ)
ಶೃತಿಯೊಳಗೆ ಕಲೆಯುವೆನಾ ಉಸಿರೊಳಗೆ ಬೆರೆಯುವೆನಾ
ತನುಮನವ ಮರೆಯುವೆನಾ ಬೆರೆತಿರೆ ನಿನ್ನ ಪ್ರೀತಿಯೂ
ಗಂಡು : ಪ್ರತಿ ನಿಮಿಷ ಹೊಸ ಹರುಷ ಪ್ರತಿ ಕ್ಷಣವೂ ಹೊಸ ನೆನೆಪು
ಪ್ರತಿ ಕಣದಿ ತರುತಲಿದೆ ಪ್ರಿಯತಮೆ ನಿನ್ನ ಪ್ರೇಮವೂ
ಹೆಣ್ಣು : ಒಲವಿನ ಈ ಬಂಧ ಬೆಸೆದಿದೆ ನಿನ್ನ ನನ್ನನೂ
ಗಂಡು : ತೀರದ ಆನಂದ ತುಂಬಲಿ ನಮ್ಮ ಬಾಳನ್ನು ಸವಿಯೋಣ ಬಾಳ ಜೇನನು
ಹೆಣ್ಣು : ಐ ಲವ್ ಯೂ (ಐ ಲವ್ ಯೂ) ನಿನಗಾಗಿ ಮುಡುಪಾಗಿ ಈ ಜೀವ ಕಾದಿದೆ
ಗಂಡು : ಎದೆಯಲ್ಲಿ ಮನೆಯೊಂದು ಒಲವಿಂದ ತಂದಿದೆ
ಹೆಣ್ಣು : ನನಗಾಗಿ ಬಳಿ ಬಾರೋ ಒಲವಿಂದ ಎಂದಿದೆ.. ಐ ಲವ್ ಯೂ...
ಗಂಡು : ನಿನಗಾಗಿ ಓಡೋಡಿ ಈ ಜೀವ ಬಂದಿದೆ
ಹೆಣ್ಣು : ಅನುರಾಗ ಹೂವಾಗಿ ಮಧುವನು ತಂದಿದೇ
ಗಂಡು : ನೀ ತಂದ ಮನಸನ್ನು ಜೋಪಾನ ಮಾಡಿದೆ
ಹೆಣ್ಣು : ಐ ಲವ್ ಯೂ ಗಂಡು : ಐ ಲವ್ ಯೂ....
ಹೆಣ್ಣು : ಐ ಲವ್ ಯೂ ಗಂಡು : ಐ ಲವ್ ಯೂ....
--------------------------------------------------------------------------------------------------------------
No comments:
Post a Comment