ಬನ್ನಿ ಒಂದ್ಸಲ ನೋಡಿ ಚಲನಚಿತ್ರದ ಹಾಡುಗಳು
- ನಾ ಬರೆದ ಗೀತೆಯ
- ಎಲ್ಲಿ ನೋಡಲಲ್ಲಿ
- ಹಾಡೋಣ ಹೊಸ ಹಾಡನು
- ಪ್ರೀತಿ ನಮಗಾಗಿ
- ಬಾರೋ ಪ್ರಿಯ ಬಾರೋ
ಬನ್ನಿ ಒಂದ್ಸಲ ನೋಡಿ (೧೯೯೨) - ನಾ ಬರೆದ ಗೀತೆಯ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಂ.ಡಿ. ಹಷಮ್ ಗಾಯನ : ಎಸ್.ಪಿ.ಬಿ, ಸಂಗೀತ ಕಟ್ಟಿ
ಗಂಡು : ನಾ ಬರೆದ ಗೀತೆಯ ಭಾವವು ನೀನೇ ನಾ ಹಾಡೋ ಗೀತೆಯ ರಾಗವು ನೀನೇ
ನಿನ್ನ ಪ್ರೀತಿ ಪ್ರೇಮ ಶೃತಿ ತಾಳವಾಗಿ ಈ ಬಾಳ ಮೇಳ ಸಂಗೀತವಾಗಿ
ಒಂದೊಂದು ಕ್ಷಣವೂ ರೋಮಾಂಚನವಾಗಿ ಎದೆ ತುಂಬಾ ಚೈತ್ರ ಮೂಡಿ ಬಂತು
ಓಹೋಹೊಹೋ..
ಹೆಣ್ಣು : ನಾ ಬರೆದ ಗೀತೆಯ ಭಾವವು ನೀನೇ ನಾ ಹಾಡೋ ಗೀತೆಯ ರಾಗವು ನೀನೇ
ನಿನ್ನ ಪ್ರೀತಿ ಪ್ರೇಮ ಶೃತಿ ತಾಳವಾಗಿ ಈ ಬಾಳ ಮೇಳ ಸಂಗೀತವಾಗಿ
ಒಂದೊಂದು ಕ್ಷಣವೂ ರೋಮಾಂಚನವಾಗಿ ಎದೆ ತುಂಬಾ ಚೈತ್ರ ಮೂಡಿ ಬಂತು
ಓಹೋಹೊಹೋ..
ಗಂಡು : ಈ ಸೃಷ್ಟಿಯಾ ಸೌಂದರ್ಯವು ಸೋತಿಹುದು
ನಿನ್ನ ಮುಂದೆ ತಲೆ ಬಾಗಿದೆ ಸಿರಿ ಇಂದೇ.. ನನ್ನ ವಿಧಿ ಬರಹದ ಸುಖ ನಿಧಿ ನೀನು
ಹೆಣ್ಣು : ನನ್ನ ವಿಧಿ ಬರಹದ ಸುಖ ನಿಧಿ ನೀನು
ಗಂಡು : ಪ್ರತಿ ಜನ್ಮದಲ್ಲೂ ಜೋಡಿ ನೀನು ಓಹೋಹೋಹೊಹೋ
ಹೆಣ್ಣು : ಪ್ರತಿ ಜನ್ಮದಲ್ಲೂ ಜೋಡಿ ನೀನು ಓಹೋಹೋಹೊಹೋ
ಗಂಡು : ನಾ ಬರೆದ ಗೀತೆಯ ಭಾವವು ನೀನೇ ನಾ ಹಾಡೋ ಗೀತೆಯ ರಾಗವು ನೀನೇ
ಹೆಣ್ಣು : ತನು ಮನದಲಿ ಉಸಿರೂಸಿರಲಿ ತಂದಿಹುದು ನವಚೇತನ ನಿನ್ನ ಸ್ನೇಹ ಸಂಗಮ
ಒಡನಾಡಿ ನಿನ್ನಯ ಬಾಹು ಬಂಧನ
ಗಂಡು : ಒಡನಾಡಿ ನಿನ್ನಯ ಬಾಹು ಬಂಧನ
ಹೆಣ್ಣು : ಸೌಭಾಗ್ಯವಾಯಿತು ಬಾಳಿಗಿಂದು ಓಹೋಹೋಹೊಹೋ
ಗಂಡು : ಸೌಭಾಗ್ಯವಾಯಿತು ಬಾಳಿಗಿಂದು ಓಹೋಹೋಹೊಹೋ
ನಾ ಬರೆದ ಗೀತೆಯ ಭಾವವು ನೀನೇ ನಾ ಹಾಡೋ ಗೀತೆಯ ರಾಗವು ನೀನೇ
ನಿನ್ನ ಪ್ರೀತಿ ಪ್ರೇಮ ಶೃತಿ ತಾಳವಾಗಿ ಈ ಬಾಳ ಮೇಳ ಸಂಗೀತವಾಗಿ
ಒಂದೊಂದು ಕ್ಷಣವೂ ರೋಮಾಂಚನವಾಗಿ ಎದೆ ತುಂಬಾ ಚೈತ್ರ ಮೂಡಿ ಬಂತು
ಓಹೋಹೊಹೋ..
ಹೆಣ್ಣು : ನಾ ಬರೆದ ಗೀತೆಯ ಭಾವವು ನೀನೇ ನಾ ಹಾಡೋ ಗೀತೆಯ ರಾಗವು ನೀನೇ
ನಿನ್ನ ಪ್ರೀತಿ ಪ್ರೇಮ ಶೃತಿ ತಾಳವಾಗಿ ಈ ಬಾಳ ಮೇಳ ಸಂಗೀತವಾಗಿ
ಒಂದೊಂದು ಕ್ಷಣವೂ ರೋಮಾಂಚನವಾಗಿ ಎದೆ ತುಂಬಾ ಚೈತ್ರ ಮೂಡಿ ಬಂತು
ಓಹೋಹೊಹೋ..
-------------------------------------------------------------
ಬನ್ನಿ ಒಂದ್ಸಲ ನೋಡಿ (೧೯೯೨) - ಎಲ್ಲಿ ನೋಡಲಲ್ಲಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಂ.ಡಿ. ಹಷಮ್ ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ
ಗಂಡು : ಎಲ್ಲಿ ನೋಡಲಲ್ಲಿ ನನಗೆ ನಿನ್ನ ರೂಪ ಕಾಣುತೈತೆ
ಕುಂತರೂ ನಿಂತರೂ ಮನದಲೆಲ್ಲ ನಿನ್ನ ನೆನಪ ಕಾಡುತೈತೆ
ಎಲ್ಲಿ ನೋಡಲಲ್ಲಿ ನನಗೆ ನಿನ್ನ ರೂಪ ಕಾಣುತೈತೆ
ಗಂಡು : ನಿನ್ನ ಸಂಗವ ಜೀವ ಬೇಡೈತೆ ಹೆಣ್ಣು : ನಿನ್ನಿಂದಲೇ ಉಸಿರಾಡೈತೆ
ಎಲ್ಲರು : ಎಲ್ಲೂ ... ಎಲ್ಲೂ ...
ಗಂಡು : ಚೆಲುವೆ ನೀನು ಮೈಸೂರ ಮಲ್ಲೆ ನೀನು ಒಲವೇ ನೀನು ಕಬ್ಬಿನ ಜಲ್ಲೆ ನೀನು
ಹೆಣ್ಣು : ಚೆಲುವ ನೀನು ಮೋಡಿ ಮಾಡೋ ಚೋರ ನೀನು ಚತುರ ನೀನು ನನ್ನ ಗೆದ್ದ ಹೀರೊ ನೀನು
ಗಂಡು : ನನ್ನ ಎದೆಯಲ್ಲಿ ನಲ್ಲೆ ನಿನ್ನ ಹೃದಯ ಡವ ಡವ ಗುಡುತೈತೆ ಕಣಕಣ ಮಿಸುಕೈತೆ
ಹೆಣ್ಣು ಜೀವ ಎನದ ಜೀವನವು ನೀನೇ ಎಂದು ಹೇಳೈತೆ
ಗಂಡು : ಲೋಕ ಪರಲೋಕದಲೂ ಸೇರುವೇನು ಎಂದೈತೇ
ಎಲ್ಲಿ ನೋಡಲಲ್ಲಿ ನನಗೆ ನಿನ್ನ ರೂಪ ಕಾಣುತೈತೆ
ಕುಂತರೂ ನಿಂತರೂ ಮನದಲೆಲ್ಲ ನಿನ್ನ ನೆನಪ ಕಾಡುತೈತೆ
ಎಲ್ಲಿ ನೋಡಲಲ್ಲಿ ನನಗೆ ನಿನ್ನ ರೂಪ ಕಾಣುತೈತೆ
ಹೆಣ್ಣು : ಚಂದ್ರ ನೀನು ಚಕೋರ ಪಕ್ಷಿಯಂತೆ ನಾನು ಬ್ರಹ್ಮ ಬರೆದ ಸಿಂಧೂರ ಭಾಗ್ಯ ನೀನು
ಗಂಡು : ಕೃಷ್ಣ ನಾನು ರೂಪರಾಣಿ ರಾಧೆ ನೀನು ನನ್ನ ಕೊಳಲ ಉಸಿರು ಸಪ್ತಸ್ವರವು ನೀನು
ಹೆಣ್ಣು : ಬಾಳ ಹೊಲದಲ್ಲಿ ಮುತ್ತನ್ನು ಬೆಳೆಯಲು ಜೋಡಿ ಎತ್ತಿನಂತೆ ನಮ್ಮ ಪ್ರೀತಿ ಪ್ರೇಮವೂ
ಗಂಡು : ನಾನು ನೀನು ಉಳಿಮೆಯ ಮೊಗವು ನೇಗಿಲಾಗುವ
ಹೆಣ್ಣು : ಸುಖದ ಬಂಡಿ ಚಲಿಸಲು ಜೋಡಿ ಚಕ್ರವಾಗುವ...
ಗಂಡು : ಎಲ್ಲಿ ನೋಡಲಲ್ಲಿ ನನಗೆ ನಿನ್ನ ರೂಪ ಕಾಣುತೈತೆ
ಕುಂತರೂ ನಿಂತರೂ ಮನದಲೆಲ್ಲ ನಿನ್ನ ನೆನಪ ಕಾಡುತೈತೆ
ಎಲ್ಲಿ ನೋಡಲಲ್ಲಿ ನನಗೆ ನಿನ್ನ ರೂಪ ಕಾಣುತೈತೆ
------------------------------------------------------------
ಬನ್ನಿ ಒಂದ್ಸಲ ನೋಡಿ (೧೯೯೨) - ಹಾಡೋಣ ಹೊಸ ಹಾಡನು
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಸಂಗೀತ ಕಟ್ಟಿ
ಗಂಡು : ಹಾಡೋಣ ಹೊಸ ಹಾಡನು ನಾವು ಸೇರಿ
ಹಾಡೋಣ ಹೊಸ ಸಂತಸದಿಂದ ಕೂಡಿ
ನವ ಯೌವ್ವನ ತನುವ ತುಂಬಿದೆ ಮನವ ತುಂಬಿ ಕೂಗಿದೆ
ಹೊಸ ಬಯಕೆಯ ಎದೆಯ ತುಂಬಿದೆ ಜೋಡಿ ಬೇಡಿ ಕಾಡಿದೆ
ಹಾಡೋಣ ಹೊಸ ಹಾಡನು ನಾವು ಸೇರಿ
ಹಾಡೋಣ ಹೊಸ ಸಂತಸದಿಂದ ಕೂಡಿ
ಗಂಡು : ಅರಳಿದ ಹೂವಿನಲಿ ಹೊರಳುವ ದುಂಬಿಯಾಗಿ ಸುಖದಲಿ ಚಿನ್ನ ಮೈ ಮರೆವೆ
ಹೆಣ್ಣು : ಪ್ರಣಯದ ಮತ್ತಿನಲ್ಲಿ ತಿಳಿಸಿಹೆ ಮುತ್ತಿನಲಿ ಗೆಳೆಯನೇ ನಾನು ತೇಲಾಡುವೇ
ಗಂಡು : ಹೇ..ಹೇ.. ಕನಸು ನನಸಾಗಿ ಮನಸು ಹಗುರಾಗಿ ತೇಲಿ ತೇಲಾಡುವ
ಹೆಣ್ಣು : ಹೃದಯ ಹೂವಾಗಿ ಜೋಡಿ ಮೀನಾಗಿ ನಾವು ಈಜಾಡುವಾ
ಹಾಡೋಣ ಹೊಸ ಹಾಡನು ನಾವು ಸೇರಿ
ಹಾಡೋಣ ಹೊಸ ಸಂತಸದಿಂದ ಕೂಡಿ
ಹೆಣ್ಣು : ಬೆರೆಯುತ ಸ್ನೇಹದಿಂದ ಮರೆಯುವೆ ಲೋಕವನ್ನೇ ಸುಖವನು ನೀನು ಕೊಡುತಿರಲು
ಗಂಡು : ಸನ್ನಿಹದಿ ಸೇರಿ ಸೇರಿ ಹೊಸ ಹೊಸ ದಾರಿ ದಾರಿ ಹುಡುಕುವ ಪ್ರೇಮ ಕೆರಳಿರಲು
ಹೆಣ್ಣು : ಹೇ..ಹೇ.. ಹಗಲು ಇರುಳೇನು ನಮಗೆ ಧಿಗಿಳೇನು ಹೀಗೆ ಒಂದಾಗಲೂ
ಗಂಡು : ಕಡಲು ಮುಗಿಲೇನು ಗಿರಿಯು ಕಾಡೇನು ಜೀವ ಕುಣಿದಾಡಲೂ
ಹಾಡೋಣ ಹೊಸ ಹಾಡನು ನಾವು ಸೇರಿ
ಹಾಡೋಣ ಹೊಸ ಸಂತಸದಿಂದ ಕೂಡಿ
ನವ ಯೌವ್ವನ ತನುವ ತುಂಬಿದೆ ಮನವ ತುಂಬಿ ಕೂಗಿದೆ
ಹೊಸ ಬಯಕೆಯ ಎದೆಯ ತುಂಬಿದೆ ಜೋಡಿ ಬೇಡಿ ಕಾಡಿದೆ
ಹಾಡೋಣ ಹೊಸ ಹಾಡನು ನಾವು ಸೇರಿ
ಹಾಡೋಣ ಹೊಸ ಸಂತಸದಿಂದ ಕೂಡಿ
-------------------------------------------------------------
ಬನ್ನಿ ಒಂದ್ಸಲ ನೋಡಿ (೧೯೯೨) - ಪ್ರೀತಿ ನಮಗಾಗಿ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಂ.ಏನ್.ವ್ಯಾಸರವ, ಗಾಯನ : ಎಸ್.ಪಿ.ಬಿ, ಸಂಗೀತ ಕಟ್ಟಿ, ಕುಸುಮಾ
ಗಂಡು : ಪ್ರೀತಿ ನಮಗಾಗಿ ಕಾದಿರಲು ಜಗವೇ ದೂಡಿದರೂ ಹೆದರಿ ಬಾಳೋದಿಲ್ಲ
ಹೆಣ್ಣು : ಯಾರೇ ತಡೆಹಾಕಿ ಕೂಡಿದರು ಮನಸು ಹಿಂಡಿದರೂ ಹಿಂದೇ ಸರಿಯೋದಿಲ್ಲ
ಗಂಡು : ಮದುವೆ ಗಡಿಯ ದಾಟಿ ತುಡಿವ ಹೃದಯ ಇಂದು ಬೆಸೆದು
ಕೂಡಿ ಒಲವು ತುಳುಕಿ ಮೇರೇ ಮೀರಿದೆ
ಪ್ರೀತಿ ನಮಗಾಗಿ ಕಾದಿರಲು ಜಗವೇ ದೂಡಿದರೂ ಹೆದರಿ ಬಾಳೋದಿಲ್ಲ
ಗಂಡು : ಬಾನು ಬೀಳೊಲ್ಲ ಯಾರು ಕೇಳೋಲ್ಲ
ಬಾನು ಬೀಳೊಲ್ಲ ಯಾರು ಕೇಳೋಲ್ಲ ನಾವು ಜೊತೆಗೂಡಿ ಒಂದಾದ ಮೇಲೆ
ಹೆಣ್ಣು : ನೀನೇ ಆಕಾಶ ನಾನೇ ಈ ಭೂಮಿ ನಮ್ಮ ಈ ಮಿಲನ ಯುಗ ಧಾರ್ಮ ತಾನೇ
ಗಂಡು : ಬಾಳು ಸರಾಗ ಇರಲು ಪರಾಗ ಇಲ್ಲ ವಿಷಾದ ನಾಳೆಗೆ
ಹೆಣ್ಣು : ಪ್ರೀತಿ ನೀನಾದ ತರಲಿ ವಿನೋದ ಅದುವೇ ಪಲ್ಲವಿ ಬಾಳಿಗೆ
ಗಂಡು : ಪ್ರೀತಿ ನಮಗಾಗಿ ಕಾದಿರಲು ಜಗವೇ ದೂಡಿದರೂ ಹೆದರಿ ಬಾಳೋದಿಲ್ಲ
ಹೆಣ್ಣು : ಯಾರೇ ತಡೆಹಾಕಿ ಕೂಡಿದರು ಮನಸು ಹಿಂಡಿದರೂ ಹಿಂದೇ ಸರಿಯೋದಿಲ್ಲ
ಗಂಡು : ಮಂಜು ಮುತ್ತಾಗಿ ನಿನ್ನ ಸೊತ್ತಾಗಿ
ಮಂಜು ಮುತ್ತಾಗಿ ನಿನ್ನ ಸೊತ್ತಾಗಿ ತರುವೆ ಮಳೆ ಬಿಲ್ಲ ಈ ಮುದ್ದು ಬೆಡಗಿಗೆ
ಹೆಣ್ಣು : ಸಂಜೆ ಕೆಂಪಲ್ಲಿ ಗಾಳಿ ಇಂಪಲ್ಲಿ ಕುಣಿವ ನವಿಲಾದೆ ನಾ ನಿನ್ನ ಕರೆಗೆ
ಗಂಡು : ನಿನ್ನ ಕೆನ್ನಗೆ ದುಂಬಿ ಮುತ್ತಿದೆ ಜೇನು ಬಿಡಾರ ಹೂವಿಗೆ
ಹೆಣ್ಣು : ನಿನ್ನ ಕಣ್ಣಲಿ ಕಂಡೆ ಹುಣ್ಣಿಮೆ ಪ್ರೇಮ ಸಂಕೇತ ಹೇಳಿದೆ
ಗಂಡು : ಪ್ರೀತಿ ನಮಗಾಗಿ ಕಾದಿರಲು ಜಗವೇ ದೂಡಿದರೂ ಹೆದರಿ ಬಾಳೋದಿಲ್ಲ
ಹೆಣ್ಣು : ಯಾರೇ ತಡೆಹಾಕಿ ಕೂಡಿದರು ಮನಸು ಹಿಂಡಿದರೂ ಹಿಂದೇ ಸರಿಯೋದಿಲ್ಲ
ಗಂಡು : ಮದುವೆ ಗಡಿಯ ದಾಟಿ ತುಡಿವ ಹೃದಯ ಇಂದು ಬೆಸೆದು
ಕೂಡಿ ಒಲವು ತುಳುಕಿ ಮೇರೇ ಮೀರಿದೆ
ಪ್ರೀತಿ ನಮಗಾಗಿ ಕಾದಿರಲು ಜಗವೇ ದೂಡಿದರೂ ಹೆದರಿ ಬಾಳೋದಿಲ್ಲ
------------------------------------------------------------
ಬನ್ನಿ ಒಂದ್ಸಲ ನೋಡಿ (೧೯೯೨) - ಬಾರೋ ಪ್ರಿಯ ಬಾರೋ
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಎಂ.ಡಿ. ಹಷಮ್ ಗಾಯನ : ಮಂಜುಳಗುರುರಾಜ, ಕೋರಸ್
ಬಾರೋ ನೀ ಬಾರೋ ಪ್ರಿಯ ನೋಡೋ ನೀ ಸೇರೋ
ನನ್ನ ಈ ರೂಪ ಈ ಪ್ರಾಯ ಮೈಮಾಟ ಸ್ವರ್ಗದಾ ಸುಖ ಸಿರಿ
ಬಾರೋ ನೀ ಬಾರೋ ಪ್ರಿಯ ನೋಡೋ ನೀ ಸೇರೋ
ಏರೀ.. ಮೇಲೇರಿ ಒಳಸೇರಿ ತೇಲಾಡಲೂ
ಹಕ್ಕಿಯ ರೆಕ್ಕೆಯಂಥ ಈ ಕೈಗಳು ಬಳಸಾಡಲು
ಹಾಯಾಗಿ ಹಾರಾಡಿ ನಲಿದಾಡಿದಂತೆ
ಒಂದಾಗಿ ಹೂಡಲಿ ಬೆರೆತಿರುವಂತೇ ...
ಬಾರೋ ನೀ ಬಾರೋ ಪ್ರಿಯ ನೋಡೋ ನೀ ಸೇರೋ
ನನ್ನ ಈ ರೂಪ ಈ ಪ್ರಾಯ ಮೈಮಾಟ ಸ್ವರ್ಗದಾ ಸುಖ ಸಿರಿ
ಬಾರೋ ನೀ ಬಾರೋ ಪ್ರಿಯ ನೋಡೋ ನೀ ಸೇರೋ
ಲೀಲೆ... ಈ ರತಿಲೀಲೆ ರಸಾಮ್ಯವೋ ರಮಿಸಲೂ
ಕಾಮನಾ ಬಿಲ್ಲಿನಿಂದ ಪ್ರೇಮಬಾಣ ನೀ ಹೂಡಲು
ಮಧುಹಿರಿ ಮದವೇರಿ ಕುಣಿದಾಡಿದಂತೆ
ಜುಮ್ಮ್ ಎಂದೂ ಜಗವನೇ ಮರೆತಿರುವಂತೇ
ಬಾರೋ ನೀ ಬಾರೋ ಪ್ರಿಯ ನೋಡೋ ನೀ ಸೇರೋ
ನನ್ನ ಈ ರೂಪ ಈ ಪ್ರಾಯ ಮೈಮಾಟ ಸ್ವರ್ಗದಾ ಸುಖ ಸಿರಿ
ಬಾರೋ ನೀ ಬಾರೋ ಪ್ರಿಯ ನೋಡೋ ನೀ ಸೇರೋ
------------------------------------------------------------
No comments:
Post a Comment