1859. ರಾಜಣ್ಣ (೧೯೯೯)

ರಾಜಣ್ಣ  ಚಲನಚಿತ್ರದ ಹಾಡುಗಳು 
  1. ಈ ರಾಗದ ಪ್ರೇಮದ ಸ್ವರಗಳಿಗೆ 
  2. ಡಿಂಗೂ ಡಾಂಗು 
  3. ಮಾವ ನಾನೇ ನಿನ್ನ ರಂಗಿ 
  4. ಬೆಳ್ಳಿ ಹಕ್ಕಿ ನನ್ನ ಮನ 
  5. ನಿನ್ನಾ ನೆರಳಲಿ ಆಡುತಾ  
ರಾಜಣ್ಣ (೧೯೯೯) - ಈ ರಾಗದ ಪ್ರೇಮದ ಸ್ವರಗಳಿಗೆ 
ಸಂಗೀತ : ರಾಜ ಮೋಹನ, ಸಾಹಿತ್ಯ : ಗೋಟುರಿ, ಗಾಯನ : ಮನು 

ಈ ರಾಗದ ಪ್ರೇಮದ ಸ್ವರಗಳಿಗೆ ಈ ಭಾವವು ತಿಳಿಸುವ ನುಡಿಗಳಿಗೆ 
ಈ ಪಾದಗಳ ನಾ ಚೆಲಿಸುವೆನು ನೀಡುವೆ ನಿಮಗೆ ಹರುಷವನು 
ಆದುವೇ... ಹಾಡುವೇ ... ಎಂಥಾ ಹಾಡೇ ಆಗಲಿ ಹಾಡುವೆ... 
ಎಂಥಾ ನಾಟ್ಯನೇ ಆಗಲಿ ಆಡುವೇ ನಿಮಗಾಗಿ ಅಭಿಮಾನಿಗಳೇ 

ಬಂದೆ ಬಂದೆ ಆಡ ಬಂದ ಡಾನ್ಸು ನೀಡುವೆ ನಮಗೆ ನಿನ್ನ ಡ್ಯಾನ್ಸು 
ನೋಡು ಛಾನ್ಸು ಹಾಡ್ ಬಂದೆ ನೀವು ಮೆಚ್ಚೋ ಟ್ಯೂನ್ಸು ಗುರು 
ನಾವೇ  ನಿನ್ನ ಮೆಚ್ಚಿ ಬಂದ ಫ್ಯಾನ್ಸು 
ಈ ನನ್ನ ಬ್ರೇಕು ಎಲ್ಲರಿಗೂ ಶಾಕೂ ನಾ ಹಾಡೋ rapu ಎಲ್ಲೆಲ್ಲೂ ಟಾಪು 
ಬಂದೆ ಬಂದೆ ಆಡ ಬಂದ ಡಾನ್ಸು ನೀಡುವೆ ನಮಗೆ ನಿನ್ನ ಡ್ಯಾನ್ಸು 

ನನಗೂ ಒಂದು ಊರಿದೆ ನಮ್ಮ ನಾಡಲ್ಲಿ ನನದು ಒಳ್ಳೆ ಹೆಸರಿದೆ ನಮ್ಮ ಜನರಲ್ಲಿ 
ನಿಮ್ಮ ಬ್ಲೆಸ್ಸಿಂಗನೇ ನನಗೆ ಗ್ರೀಟಿಂಗ್ಸ್ ನನ್ನ ಲೈಫೇ ಇನ್ಸೂರೆನ್ಸು 
ಈ ನನ್ನ ಬ್ರೇಕು ಎಲ್ಲರಿಗೂ ಶಾಕೂ ನಾ ಹಾಡೋ rapu ಎಲ್ಲೆಲ್ಲೂ ಟಾಪು 
ಬಂದೆ ಬಂದೆ ಆಡ ಬಂದ ಡಾನ್ಸು ನೀಡುವೆ ನಮಗೆ ನಿನ್ನ ಡ್ಯಾನ್ಸು 

ಇರಲು ನಿನ್ನ ಆಸರೆ ನನಗೆ ಸೋಲಿಲ್ಲ 
ಇರಲು ನಿನ್ನ ಆಸರೆ ನನಗೆ ಸೋಲಿಲ್ಲ ಕೋಡಲು ನೀವು ಬೆಂಬಲ ಯಾರ ಹಂಗಿಲ್ಲಾ 
ಯಾರೇ ತುಳಿದು ಹಾಕಿದರು ಮೇಲಕ್ಕೆತ್ತಿದಿರಿ ನನ್ನನ್ನೂ ನೀವೆಲ್ಲಾ... 
ಈ ನನ್ನ ಬ್ರೇಕು ಎಲ್ಲರಿಗೂ ಶಾಕೂ ನಾ ಹಾಡೋ rapu ಎಲ್ಲೆಲ್ಲೂ ಟಾಪು 
ಬಂದೆ ಬಂದೆ ಆಡ ಬಂದ ಡಾನ್ಸು ನೀಡುವೆ ನಮಗೆ ನಿನ್ನ ಡ್ಯಾನ್ಸು 
ಈ ರಾಗದ ಪ್ರೇಮದ ಸ್ವರಗಳಿಗೆ ಈ ಭಾವವು ತಿಳಿಸುವ ನುಡಿಗಳಿಗೆ 
ಈ ಪಾದಗಳ ನಾ ಚೆಲಿಸುವೆನು ನೀಡುವೆ ನಿಮಗೆ ಹರುಷವನು 
ಆದುವೇ... ಹಾಡುವೇ ... ಎಂಥಾ ಹಾಡೇ ಆಗಲಿ ಹಾಡುವೆ... 
ಎಂಥಾ ನಾಟ್ಯನೇ ಆಗಲಿ ಆಡುವೇ ನಿಮಗಾಗಿ ಅಭಿಮಾನಿಗಳೇ 
---------------------------------------------------------------------------
 
ರಾಜಣ್ಣ (೧೯೯೯) - ಡಿಂಗೂ ಡಾಂಗು 
ಸಂಗೀತ : ರಾಜ ಮೋಹನ, ಸಾಹಿತ್ಯ : ರಮೇಶರಾವ, ಗಾಯನ : ಬಿ.ಜಯಶ್ರೀ 

ಡಿಂಗು ಡಾಂಗು ಟಾಪಿದು ಲವ್ಲೀ ಶಾಕು ನೀಡಿ ಶೇಪಿದು 
ಟೀನೇಜು ಹಾರ್ಟು ಬೀಟಿದು ನೈಸಾದ ಹಾಟು ಕೇಕಿದು 
ಕಣ್ಣಾ ಮುಚ್ಚಾಲೆ ಆಡೋದು ಬೇಡ ಬೇಡ ಹೀಗೆ ಕಣ್ಣಲ್ಲಿ ಕೊಡುದು ಬೇಡ ಬೇಡ 
ಡಿಂಗು ಡಾಂಗು ಟಾಪಿದು ಲವ್ಲೀ ಶಾಕು ನೀಡಿ ಶೇಪಿದು 

ಕುಲುಕು ಥಳುಕು ಬಳುಕು ದೇಖೋ ಪಿಯಾ ವಯಸು ಸೊಗಸು ತುಜಕೋ ಮೈ ದೀಯ 
ಕುಲುಕು ಥಳುಕು ಬಳುಕು ದೇಖೋ ಪಿಯಾ ವಯಸು ಸೊಗಸು ತುಜಕೋ ಮೈ ದೀಯ 
ರಂಗು ರಂಗಿನ ಈ ಅಂದ ಚಂದ ನೋಡು ಮೈಯ್ಯ ಮರೆಸುವ ಮತ್ತಾದ ಮಧುವ ನೀಡು 
ರಂಗು ರಂಗಿನ ಈ ಅಂದ ಚಂದ ನೋಡು ಮೈಯ್ಯ ಮರೆಸುವ ಮತ್ತಾದ ಮಧುವ ನೀಡು 
ಡಿಂಗು ಡಾಂಗು ಟಾಪಿದು ಲವ್ಲೀ ಶಾಕು ನೀಡಿ ಶೇಪಿದು 

ಗುಲ್ಲ ಗುಲ್ಲ ಗುಲ್ಲ ಗುಲ್ಲ ರಸಗುಲ್ಲ ಗಲ್ಲ ರಸಗುಲ್ಲ ಗಲ್ಲ 
ಮನಿಸು ನಲಿಸು ಮಡಿಗೆ ನಾವೆಂದುಕೊ ಇನಿಯ ಸಿಹಿಯ ಹೊಂದಲು ಎಂದುಕೋ 
ಗುಲ್ಲ ಗುಲ್ಲ ಗುಲ್ಲ ಗುಲ್ಲ ರಸಗುಲ್ಲ ಗಲ್ಲ ರಸಗುಲ್ಲ ಗಲ್ಲ 
ಮನಿಸು ನಲಿಸು ಮಡಿಗೆ ನಾವೆಂದುಕೊ ಇನಿಯ ಸಿಹಿಯ ಹೊಂದಲು ಎಂದುಕೋ 
ಮುತ್ತು ಮುತ್ತಾದ ಈ ಮೈಯ್ಯ ಮುಟ್ಟಿ ನೋಡು ನಲ್ಲ ಮೆಲ್ಲನೆ ನೀ ಗಾಳ ಹಾಕಿ ನೋಡು 
ಮುತ್ತು ಮುತ್ತಾದ ಈ ಮೈಯ್ಯ ಮುಟ್ಟಿ ನೋಡು ನಲ್ಲ ಮೆಲ್ಲನೆ ನೀ ಗಾಳ ಹಾಕಿ ನೋಡು 
ಡಿಂಗು ಡಾಂಗು ಟಾಪಿದು ಲವ್ಲೀ ಶಾಕು ನೀಡಿ ಶೇಪಿದು 
ಟೀನೇಜು ಹಾರ್ಟು ಬೀಟಿದು ನೈಸಾದ ಹಾಟು ಕೇಕಿದು 
ಕಣ್ಣಾ ಮುಚ್ಚಾಲೆ ಆಡೋದು ಬೇಡ ಬೇಡ ಹೀಗೆ ಕಣ್ಣಲ್ಲಿ ಕೊಡುದು ಬೇಡ ಬೇಡ 
ಡಿಂಗು ಡಾಂಗು ಟಾಪಿದು ಲವ್ಲೀ ಶಾಕು ನೀಡಿ ಶೇಪಿದು 
----------------------------------------------------------------------------
 
ರಾಜಣ್ಣ (೧೯೯೯) - ಮಾವ ನಾನೇ ನಿನ್ನ ರಂಗಿ 
ಸಂಗೀತ : ರಾಜ ಮೋಹನ, ಸಾಹಿತ್ಯ : ಗೋಟುರಿ, ಗಾಯನ : ವಿನೋದರಾಜ, ಮಂಜುಳಗುರುರಾಜ 

ಹೆಣ್ಣು : ಮಾವ ನಾನೇ... ನಿನ್ನಾ ರಂಗಿ ಅರೇ .. ಭಾವ ನಾನೇ ನಿನ್ನ ನಿಂಗಿ 
ಗಂಡು : ನಿನ್ನ ಬಿಟ್ಟು ನಾನು ಬಾಳಲಾರೆ ಇವಳ ಕಾಟವನ್ನು ತಾಳಲಾರೆ 
            ನನ್ನ ಚಿನಕುರುಳಿ ನೀ ಹಾಡು ಬಾರೇ ಬಾ ಪ್ರೇಮದ ಕವ್ವಾಲಿ 
            ನೀ ಸವಾಲ್ ಹಾಕಿದರೇ ನಾನೇ ಗೆಲ್ಲುವೇನು ಜುಗಲಬಂದಿನಲ್ಲಿ  
            ನೀ ಸವಾಲ್ ಹಾಕಿದರೇ ನಾನೇ ಗೆಲ್ಲುವೇನು ಜುಗಲಬಂದಿನಲ್ಲಿ  
ಕೋರಸ್ : ಓ ಮಿಸ್ ಇಂಡಿಯಾ ನೀನು ಎಲ್ಲಿದ್ದೀಯಾ ನನ್ನ ಮೊನಾಲಿಸಾ 
               ನಗು ಐಸಾ ಐಸಾ ಅರೇ ಐಸಾ ಐಸಾ ಆಹ್ ಐಸಾ ಐಸಾ 

ಹೆಣ್ಣು : ಎದೆ ಕದಕೆ ಮುಟ್ಟು ಒಮ್ಮೆ ನೋಡಯ್ಯ ನೀನು ತಟ್ಟಿ 
          ಎದೆ ಕದಕೆ ಮುಟ್ಟು ಒಮ್ಮೆ ನೋಡಯ್ಯ ನೀನು ತಟ್ಟಿ 
          ನೋಡೋಕೆ ಗಟ್ಟಿ ಮುಟ್ಟಿ ಒಳಗೆ ಏನೈತೆ ಖಾಲಿ ಬುಟ್ಟಿ 
          ನೋಡೋಕೆ ಗಟ್ಟಿ ಮುಟ್ಟಿ ಒಳಗೆ ಏನೈತೆ ಖಾಲಿ ಬುಟ್ಟಿ 
ಗಂಡು : ಅಯ್ಯೋ.. ಇವಳು ಜಗಳಗಂಟಿಯಂತೆ 
            ಇವಳು ಭಾಳ ತುಂಟಿಯಂತೆ ಯಾರ ಜೊತೆ ನಂಟ ಬೆಳೆಸಲಿ 
            ನೀ ಸವಾಲ್ ಹಾಕಿದರೆ ನಾನೇ ಗೆಲ್ಲುವೇನು ಜುಗಲ್ ಬಂದಿನಲ್ಲಿ 
            ನನ್ನ ಚಿನಕುರುಳಿ ನೀ ಹಾಡು ಬಾರೇ ಬಾ ಪ್ರೇಮದ ಕವ್ವಾಲಿ 
            ನೀ ಸವಾಲ್ ಹಾಕಿದರೇ ನಾನೇ ಗೆಲ್ಲುವೇನು ಜುಗಲಬಂದಿನಲ್ಲಿ  
ಕೋರಸ್ : ಓ ಮಿಸ್ ಇಂಡಿಯಾ ನೀನು ಎಲ್ಲಿದ್ದೀಯಾ ನನ್ನ ಮೊನಾಲಿಸಾ 
               ನಗು ಐಸಾ ಐಸಾ ಅರೇ ಐಸಾ ಐಸಾ ಆಹ್ ಐಸಾ ಐಸಾ 

ಹೆಣ್ಣು : ಮುದ್ದೆಯ ನೀಡಿ ನಿನಗೆ ನಾ ಮುದ್ದಾಗಿ ನೋಡಿಕೊಳ್ಳುವೆ 
          ಐಸಕ್ರೀಮು ನೀಡಿ ನಿನಗೆ ನಾ ನೈಸಾಗಿ ನೋಡಿಕೊಳ್ಳುವೆ 
          ಐಸಕ್ರೀಮು ನೀಡಿ ನಿನಗೆ ನಾ ನೈಸಾಗಿ ನೋಡಿಕೊಳ್ಳುವೆ 
ಗಂಡು : ಅಯ್ಯೋ ಮುದ್ದೆ ನೀಡಿ ಮುದ್ದು ಮಾಡೋ 
            ಐಸು ನೀಡಿ ನೈಸು ಮಾಡೋ ಇಬ್ಬರಲೀ ಯಾರ ಮೆಚ್ಚಲಿ                        
            ನೀ ಸವಾಲ್ ಹಾಕಿದರೆ ನಾನೇ ಗೆಲ್ಲುವೇನು ಜುಗಲ್ ಬಂದಿನಲ್ಲಿ 
            ನನ್ನ ಚಿನಕುರುಳಿ ನೀ ಹಾಡು ಬಾರೇ ಬಾ ಪ್ರೇಮದ ಕವ್ವಾಲಿ 
            ನೀ ಸವಾಲ್ ಹಾಕಿದರೇ ನಾನೇ ಗೆಲ್ಲುವೇನು ಜುಗಲಬಂದಿನಲ್ಲಿ  
ಕೋರಸ್ : ಓ ಮಿಸ್ ಇಂಡಿಯಾ ನೀನು ಎಲ್ಲಿದ್ದೀಯಾ ನನ್ನ ಮೊನಾಲಿಸಾ 
               ನಗು ಐಸಾ ಐಸಾ ಅರೇ ಐಸಾ ಐಸಾ ಆಹ್ ಐಸಾ ಐಸಾ 
----------------------------------------------------------------------------
 
ರಾಜಣ್ಣ (೧೯೯೯) - ಬೆಳ್ಳಿ ಹಕ್ಕಿ ನನ್ನ ಮನ 
ಸಂಗೀತ : ರಾಜ ಮೋಹನ, ಸಾಹಿತ್ಯ : ಗೋಟುರಿ, ಗಾಯನ : ವಿನೋದರಾಜ, ಮಂಜುಳಗುರುರಾಜ 

ಗಂಡು : ಬೆಳ್ಳಿ ಹಕ್ಕಿ ನನ್ನ ಮನ ಏರಿ ಹಾರಿ ಸೇರಿ ಬಾನ  
            ಬೆಳ್ಳಿ ಹಕ್ಕಿ ನನ್ನ ಮನ ಏರಿ ಹಾರಿ ಸೇರಿ ಬಾನ   
            ಬೆಳ್ಳಿ ಚುಕ್ಕಿ ಮುತ್ತನಿಕ್ಕಿ ಮುಗಿಲ ಅಪ್ಪಿ ತೇಲಿ ದಿನ 
ಹೆಣ್ಣು : ಕನಸುಗಳ ಹಕ್ಕಿ ಅರಮನೆಗೆ ನನ್ನವನ ಹೊತ್ತು ಮೆರವಣಿಗೆ 
ಗಂಡು : ಹತ್ತೂರ ಸುತ್ತಿದರು ನೀ ಸಿಗದಾ ಚೆಲುವೆ 
            ಒಡಲೂರ ಮಡಿಲಲ್ಲಿ ನೀ ಕುಣಿವ ನವಿಲೇ 
ಹೆಣ್ಣು : ಬೆಳ್ಳಿ ಹಕ್ಕಿ ನನ್ನ ಮನ ಏರಿ ಹಾರಿ ಸೇರಿ ಬಾನ   
            ಬೆಳ್ಳಿ ಚುಕ್ಕಿ ಮುತ್ತನಿಕ್ಕಿ ಮುಗಿಲ ಅಪ್ಪಿ ತೇಲಿ ದಿನ 
ಗಂಡು : ಕನಸುಗಳ ಹಕ್ಕಿ ಅರಮನೆಗೆ ನನ್ನವಳ ಹೊತ್ತು ಮೆರವಣಿಗೆ 
ಹೆಣ್ಣು : ಹತ್ತೂರ ಸುತ್ತಿದರು ಸಿಗದಾ ಚೆಲುವ ಒಡಲೂರ ಮಡಿಲಲ್ಲಿ ಕುಣಿವಾ ಚತುರ 

ಹೆಣ್ಣು : ಭೂಮಿಗೆ ಹಸಿರು ಹೊಲಕೆ ಪೈರು ನನಗೆ ನೀನೇ ಬಾಳ ಉಸಿರು 
          ನಗುತಿರು ನೀನು ಚಿಗುರು ತೆನೆ ನುಡಿದರೆ ನೀನು ಸ್ವರ್ಗ ಮನೆ 
ಗಂಡು : ದಾಟಬೇಕು ನೀ ನಮ್ಮ ಮನೆಯ ಹೊಸಿಲು 
ಹೆಣ್ಣು : ಮೀಟಬೇಕು ನನ್ನೆದೆಯ ಕೊಡಲು ಫಸಲು 
ಗಂಡು : ಈ ಹೃದಯ ತೇರಮ್ಮ ನಿನ್ನ ಪಯಣಕೆ 
            ನೀ ನಾಂದಿ ಹಾಕಮ್ಮ ಹೊಸ ಕವನಕೆ 
ಹೆಣ್ಣು : ಬೆಳ್ಳಿ ಹಕ್ಕಿ ನನ್ನ ಮನ ಏರಿ ಹಾರಿ ಸೇರಿ ಬಾನ   
            ಬೆಳ್ಳಿ ಚುಕ್ಕಿ ಮುತ್ತನಿಕ್ಕಿ ಮುಗಿಲ ಅಪ್ಪಿ ತೇಲಿ ದಿನ 
ಗಂಡು : ಕನಸುಗಳ ಹಕ್ಕಿ ಅರಮನೆಗೆ ನನ್ನವಳ ಹೊತ್ತು ಮೆರವಣಿಗೆ 
ಹೆಣ್ಣು : ಹತ್ತೂರ ಸುತ್ತಿದರು ಸಿಗದಾ ಚೆಲುವ ಒಡಲೂರ ಮಡಿಲಲ್ಲಿ ಕುಣಿವಾ ಚತುರ 

ಹೆಣ್ಣು : ಚಿಮ್ಮಿ ಚಿಮ್ಮಿ ಹೊಮ್ಮಿ ಹೊಮ್ಮಿ ಖುಷಿಯಾ ಬಗ್ಗೆ ಮೇಲೆ ಚಿಮ್ಮಿ 
ಗಂಡು : ಬೆಳದಿಂಗಳ ಚೆಲ್ಲೇ ಬಂದಾ ಬಾಲೆ ಸುವ್ವಿ ಸುವ್ವಾಲೇ ಪ್ರೇಮದ ಲೀಲೆ 
ಹೆಣ್ಣು : ಬಂದೆ ನೀ ಧರೆಗೆ ನನಗಾಗಿಯೇ 
ಹೆಣ್ಣು : ನಿಂದೆ ಎನ್ನ ಮನದೊಳಗೆ ಶಿಲೆಯಾಗಿಯೇ 
ಗಂಡು : ನನ್ನಂದ ಮಕರಂದ ನಿನಗಾಗಿಯೇ 
ಹೆಣ್ಣು : ನಿನ್ನಿಂದ ಆನಂದ ದಿನರಾತ್ರಿಯೇ 
ಗಂಡು : ಬೆಳ್ಳಿ ಹಕ್ಕಿ ನನ್ನ ಮನ ಏರಿ ಹಾರಿ ಸೇರಿ ಬಾನ  
            ಬೆಳ್ಳಿ ಹಕ್ಕಿ ನನ್ನ ಮನ ಏರಿ ಹಾರಿ ಸೇರಿ ಬಾನ   
            ಬೆಳ್ಳಿ ಚುಕ್ಕಿ ಮುತ್ತನಿಕ್ಕಿ ಮುಗಿಲ ಅಪ್ಪಿ ತೇಲಿ ದಿನ 
ಹೆಣ್ಣು : ಕನಸುಗಳ ಹಕ್ಕಿ ಅರಮನೆಗೆ ನನ್ನವನ ಹೊತ್ತು ಮೆರವಣಿಗೆ 
ಗಂಡು : ಹತ್ತೂರ ಸುತ್ತಿದರು ನೀ ಸಿಗದಾ ಚೆಲುವೆ 
            ಒಡಲೂರ ಮಡಿಲಲ್ಲಿ ನೀ ಕುಣಿವ ನವಿಲೇ 
---------------------------------------------------------------------------
 
ರಾಜಣ್ಣ (೧೯೯೯) - ನಿನ್ನಾ ನೆರಳಲಿ ಆಡುತಾ 
ಸಂಗೀತ : ರಾಜ ಮೋಹನ, ಸಾಹಿತ್ಯ : ರಮೇಶರಾವ, ಗಾಯನ : ಗಂಗೋತ್ರಿ ರಾಮಸ್ವಾಮಿ 

ನಿನ್ನಾ ನೆರಳಲಿ ಆಡುತಾ ಬೆಳೆದೆ ಇಂದು ನೀನಿರದೆ ನಾ ತಬ್ಬಲಿ ಅದೇ.. ಓ... ಓಓಓಓ.. 
ಮುದ್ದು ಮಾವಯ್ಯ ಬಿಟ್ಟು ಹೋದೆಯಾ ಈ ಜನರ ನಿಂದನೆಗೆ ಬಳಿ ಆದೆಯಾ 
ಬೆಳೆಸಿದ ಮನೆಯನ್ನು ಮರೆತಿಹೆಯಾ ಬೆಳೆಸಿದ ನಮ್ಮನ್ನೂ ತೊರೆದಿಹೆಯಾ 
ದೂರಾ ದೂರಾ ನೀ ಹೋದೆಯಾ ಮುದ್ದು ಮಾವಯ್ಯ ಮೌನ ಏಕಯ್ಯಾ 
ಈ ಭಾರವ ಇಳಿಸುವ ಬಗೆ ಹೇಳೆಯಾ 
ಈ ಭಾರವ ಇಳಿಸುವ ಬಗೆ ಹೇಳೆಯಾ 

ಮಮತೆಯ ಮಡಿಲಲ್ಲಿ ಕರುಣೆಯ ಗುಡಿಯಲ್ಲಿ ತಾಯಿಯ ರೂಪವನು ನೋಡಿದೆ 
ನಿನ್ನಲ್ಲಿ ನೀನಿರದೆ ಹೇಗೆ ಬಾಳಲಿ ಇಲ್ಲಿ ಏಕೆ ಹೋದೆ ಆ ದೇವರ ಬಳಿಗೆ 
ಏಕೆ ತಂದೆ ಈ ಶೋಕ ನಮಗೆ... ಓ... ಓಓಓಓ..  
ಏಕೆ ತಂದೆ ಈ ಶೋಕ ನಮಗೆ... ಓ... ಓಓಓಓ.. 
ಮುದ್ದು ಮಾವಯ್ಯ ಈ ನೋವು ಸಾಕಯ್ಯ 
ಸಿಹಿ ನೀಡಿದ ನೀನೇ ಈ ಕಹಿ ನೀಡಿದೆಯಾ 
ಸಿಹಿ ನೀಡಿದ ನೀನೇ ಈ ಕಹಿ ನೀಡಿದೆಯಾ 

ನಿನ್ನ ಪ್ರೀತಿ ಕುಡಿಯನ್ನು ನನ್ನಾಸೆ ಹೂವನ್ನು ಬಾಡದೆ ನೋಡುವೆನು 
ದಾರಿಯ ತೋರುವೆನು ಆತ್ಮಕೆ ಶಾಂತಿಯನು ನೀಡುವೆ ನಾನು 
ಅವಮಾನದ ಈ ಜ್ವಾಲೆಯ ನಾ ನಂದಿಸುವೆ 
ಮನೆಯ ಹಿರಿತನವ ನಾ ಉಳಿಸುವೆನು.. ಓ... ಓಓಓಓ.. 
ಮುದ್ದು ಮಾವಯ್ಯಾ ಮಾತ ಕೇಳಯ್ಯಾ ಈ ಭಾರವ ನಾ ಇಳಿಸುವ ಬಗೆ ಹೇಳೆಯಾ 
ಬೆಳಗಿದ ಮನೆಯನ್ನು ಮರೆತಿಹೆಯಾ... 
ಬೆಳಗಿದ ಮನೆಯನ್ನು ಮರೆತಿಹೆಯಾ... 
----------------------------------------------------------------------------

No comments:

Post a Comment