1860. ತಾಯಿ ಮಮತೆ (೧೯೮೫)

ತಾಯಿ ಮಮತೆ ಚಲನಚಿತ್ರದ ಹಾಡುಗಳು 
  1. ನೆಮ್ಮದಿ ನೀಡು ಜೀವಕೆ 
  2. ಹೇ ಯೌವ್ವನವು ಇರುವಾಗಲೇ 
  3. ಹುಡುಗಿಯರ ದಿನ ನೋಡುವೇನು 
  4. ಇಂದು ಎಂಥಾ ಆನಂದ 
  5. ಜೋಡಿಯಾಗೋ ಕಾಲ ಬಂದಿತು 
ತಾಯಿ ಮಮತೆ (೧೯೮೫) - ನೆಮ್ಮದಿ ನೀಡು ಜೀವಕೆ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು ಧನವನು ಬೇಡೆನು ಕೀರ್ತಿಯ ಕೇಳೆನು 
ಶಾಂತಿಯ ಕಾಣದಲೇ ನೋಂದೇನು ಶಾಂತಿಯ ಕಾಣದಲೇ 
ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು ಧನವನು ಬೇಡೆನು ಕೀರ್ತಿಯ ಕೇಳೆನು 
ಶಾಂತಿಯ ಕಾಣದಲೇ ನೋಂದೇನು ಶಾಂತಿಯ ಕಾಣದಲೇ 

ನನ್ನ ಕಣ್ಣಲಿ ನಿನ್ನಾ ರೂಪವೇ ತುಂಬಿರುವಂತೆ ನೀ ಹರಸು 
ನನ್ನೀ ಮನವಾ ಮಂದಿರದಲ್ಲಿ ಇಂದು ಸ್ವಾಮಿ ನೀ ನೆಲೆಸು 
ನಿನ್ನ ಹೊರತು ಏನನು ತಿಳಿಯೆ ಬೇರೆ ವರವ ಬೇಡಲು ಅರಿಯೆ 
ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು ಧನವನು ಬೇಡೆನು ಕೀರ್ತಿಯ ಕೇಳೆನು 
ಶಾಂತಿಯ ಕಾಣದಲೇ ನೋಂದೇನು ಶಾಂತಿಯ ಕಾಣದಲೇ 

ಎಲ್ಲ ಜೀವಿಗಳು ನಿನ್ನಾ ಪಾದವ ಸೇರಲೇಬೇಕು ಕೊನೆಯಲ್ಲಿ 
ಇರುವ ತನಕ ಚಿಂತೆಯು ಏಕೆ ನೋವನು ಕೊಡುವ ಸ್ವಾರ್ಥವು ಏಕೇ 
ನೆಮ್ಮದಿ ನೀಡು ಜೀವಕೆ ನೆಮ್ಮದಿ ನೀಡು ಧನವನು ಬೇಡೆನು ಕೀರ್ತಿಯ ಕೇಳೆನು 
ಶಾಂತಿಯ ಕಾಣದಲೇ ನೋಂದೇನು ಶಾಂತಿಯ ಕಾಣದಲೇ 
------------------------------------------------------------------------

ತಾಯಿ ಮಮತೆ (೧೯೮೫) - ಹೇ ಯೌವ್ವನವು ಇರುವಾಗಲೇ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ಹೇ... ಯೌವ್ವನವು ಇರುವಾಗಲೇ ಸುಖವನ್ನು ಕಂಡಾಗಲೇ 
ಹೊಸ ಹರೆಯದ ನವ ತರುಣಿಯ ಜೊತೆ ಬೆರೆಯುತ 
ಕುಣಿಕುಣಿಯುತ ನಲಿದಾಡು ಆನಂದದಿ 

ಹೆಣ್ಣಿನ ಕಂಗಳ ಸೆಳೆಯುತ ನೋಟದಿ ಅವಳನು ಕುಣಿಸುತ 
ಮಲ್ಲಿಗೆ ಮನವನು ಗೆಲ್ಲುತ್ತಾ ಒರಿಟಿ ಎದೆಯಲಿ ತುಂಬುತ 
ಹೆಣ್ಣಿನ ಕಂಗಳ ಸೆಳೆಯುತ ನೋಟದಿ ಅವಳನು ಕುಣಿಸುತ 
ಮಲ್ಲಿಗೆ ಮನವನು ಗೆಲ್ಲುತ್ತಾ ಒರಿಟಿ ಎದೆಯಲಿ ತುಂಬುತ 
ಸರಸಕೆ ಕೂಗುತ ಜೊತೆಯಲಿ ಆಡುತ 
ದಿನವೆಲ್ಲ ಇರಬೇಕು ಸಂತೋಷ ಕೊಡಬೇಕು 
ಯೌವ್ವನವು ಇರುವಾಗಲೇ ಸುಖವನ್ನು ಕಂಡಾಗಲೇ 
ಹೊಸ ಹರೆಯದ ನವ ತರುಣಿಯ ಜೊತೆ ಬೆರೆಯುತ 
ಕುಣಿಕುಣಿಯುತ ನಲಿದಾಡು ಆನಂದದಿ 

ಸ್ನೇಹದ ಮಾತನು ಆಡುತಾ ನೆನ್ನೆಯ ಕನಸನು ಹೇಳುತಾ 
ಕೈಗಳ ಮೆಲ್ಲಗೆ ಹಿಡಿಯುತ ನಿನ್ನನ್ನು ಬಿಟ್ಟರೆ ಎನ್ನುತ 
ಸ್ನೇಹದ ಮಾತನು ಆಡುತಾ ನೆನ್ನೆಯ ಕನಸನು ಹೇಳುತಾ 
ಕೈಗಳ ಮೆಲ್ಲಗೆ ಹಿಡಿಯುತ ನಿನ್ನನ್ನು ಬಿಟ್ಟರೆ ಎನ್ನುತ 
ಕೆನ್ನೆಯು ಮುಟ್ಟುತ ಜಡೆಯನು ಎಳೆಯುತ 
ಸರಿಯಾಗಿ ಮಾತಾಡಿ ಉಲ್ಲಾಸ ತರಬೇಕು 
ಯೌವ್ವನವು ಇರುವಾಗಲೇ ಸುಖವನ್ನು ಕಂಡಾಗಲೇ 
ಹೊಸ ಹರೆಯದ ನವ ತರುಣಿಯ ಜೊತೆ ಬೆರೆಯುತ 
ಕುಣಿಕುಣಿಯುತ ನಲಿದಾಡು ಆನಂದದಿ 
------------------------------------------------------------------------

ತಾಯಿ ಮಮತೆ (೧೯೮೫) - ಹುಡುಗಿಯರ ದಿನ ನೋಡುವೇನು 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ಹುಡುಗಿಯರ ದಿನ ನೋಡುವೆನು ನಿನ್ನಂಥ ಹುಡುಗಿಯ ಕಂಡಿಲ್ಲ 
ಪ್ರೀತಿಯ ಮಾತನು ಆಡಿಹನು ನಾ ಹೀಗೆ ಕೈಯ್ಯ ಹಿಡಿದಿಲ್ಲ 
ಮಾಲತಿ ನಿನ್ನಾ ಮೇಲೆ ಪ್ರೀತಿ ವಂದನಾ ರಾತ್ರಿ ನಿನದೆ ಧ್ಯಾನ 
ಸಾಧನ ನೀನೇ ನನ್ನ ಪ್ರಾಣ 

ಎಂಥಾ ಅಂದ ಈ ಕಣ್ಣುಗಳು ಎಂಥ ಸೊಗಸು ಈ ಅಧರಗಳು 
ನನ್ನೀ ಮಾತಲ್ಲೇ ಕೂಗಿರಲು ಮಾತೇ ನನ್ನನ್ನೂ ಕಂಡಿರಲು 
ನಾ ನಿನ್ನ ಜೋಡಿ ಆಗೋಕೆ ಬಂದೇ ನನ್ನಾಣೆ ಸುಳ್ಳು ಹೇಳೋಲ್ಲ 
ಹುಡುಗಿಯರ ದಿನ ನೋಡುವೆನು ನಿನ್ನಂಥ ಹುಡುಗಿಯ ಕಂಡಿಲ್ಲ 
ಪ್ರೀತಿಯ ಮಾತನು ಆಡಿಹನು ನಾ ಹೀಗೆ ಕೈಯ್ಯ ಹಿಡಿದಿಲ್ಲ 
ಮಾಲತಿ ನಿನ್ನಾ ಮೇಲೆ ಪ್ರೀತಿ ವಂದನಾ ರಾತ್ರಿ ನಿನದೆ ಧ್ಯಾನ 

ರಾತ್ರಿ ಕದವನು ಮುಚ್ಚದಿರು ಮಂಚ ಕಂಡು ನೀ ಬೆಚ್ಚದಿರು 
ಅಪ್ಪ ಬಂದನು ಎನ್ನದಿರೂ ದೀಪ ಹಾಕುತ ಓಡದಿರು 
ಭಯವಾದರೇನು ನಾನಿಲ್ಲವೆನು 
ಜೀವಕ್ಕೆ ಜೀವ ಕೊಟ್ಟೇನು ನಾನು ನನ್ನಾಣೆ ಸುಳ್ಳು ಹೇಳೊಲ್ಲ 
ಹುಡುಗಿಯರ ದಿನ ನೋಡುವೆನು ನಿನ್ನಂಥ ಹುಡುಗಿಯ ಕಂಡಿಲ್ಲ 
ಪ್ರೀತಿಯ ಮಾತನು ಆಡಿಹನು ನಾ ಹೀಗೆ ಕೈಯ್ಯ ಹಿಡಿದಿಲ್ಲ 
ಮಾಲತಿ ನಿನ್ನಾ ಮೇಲೆ ಪ್ರೀತಿ ವಂದನಾ ರಾತ್ರಿ ನಿನದೆ ಧ್ಯಾನ 
-------------------------------------------------------------------------

ತಾಯಿ ಮಮತೆ (೧೯೮೫) - ಎಂಥ ಆನಂದ ಇಂದು 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ಎಂಥ ಆನಂದ ಇಂದು ಎಂಥ ಆನಂದ ಗಂಟಲು ಬಿಗಿದಿದೆ ನಾಲಿಗೆ ತೊದಲಿದೆ 
ಕಂಬನಿ ಕಂಗಳ ತುಂಬಿದೆ ತುಳುಕಿದೆ ತಾಯಿಯ ಕಂಡೇ  ನಿನ್ನ ದಯೆಯಿಂದ 
ದೇವರೇ ಥ್ಯಾಂಕ್ಸ್ ಯೂ 

ಹಣೆಯಲ್ಲಿ ಕುಂಕುಮ ಕೆನ್ನೆಯಲಿ ಅರಿಶಿನ ತಲೆಯಲ್ಲಿ ಹೂವು ಸರ್ವಮಂಗಳೆಯನ್ನೇ ಕಂಡೆ 
ಇಷ್ಟು ಸುಂದರವಾಗಿರುವ ತಾಯಿಯ ಹೊಟ್ಟೆಯಲ್ಲಿ ನಾನು ಹುಟ್ಟಿದೆನಾ ಛೀ... 
ಒಂದೇ ಕ್ಷಣದಿ ಅವಳ ರೂಪ ಕಣ್ಣು ತುಂಬಿತು.. ಆಹಾ 
ಸಂತೋಷದಲ್ಲಿ ಮನವು ಹಿಗ್ಗಿ ಹೂವಂತಾಯಿತು 
ನೋಡದೇ ನೋಡದೇ ಎಷ್ಟು ನೋಡಿದ್ರೂ ತೃಪ್ತಿ ಆಗಲಿಲ್ಲ 
ಮತ್ತೆ ನನಗೆ ಮಗುವಾಗಿರುವ ಆಸೆ ಮೂಡಿತು 
ತಾಯಿ ಪ್ರೀತಿ ಹೊಂದೋ ಆಸೆ ಹೃದಯ ತುಂಬಿತು 
ಹುಟ್ಟಿದ್ದು ಸ್ವಾರ್ಥಕ ಆಯಿತು ಇನ್ನೂ ನಾನೇನಾದ್ರೂ ಪರವಾಗಿಲ್ಲ 
ಈ ಜೀವ ಹೋದ್ರೂ ಚಿಂತೆಯಿಲ್ಲ.. ಅಷ್ಟೇ... 
ಎಂಥ ಆನಂದ ಇಂದು ಎಂಥ ಆನಂದ ಗಂಟಲು ಬಿಗಿದಿದೆ ನಾಲಿಗೆ ತೊದಲಿದೆ 
ಕಂಬನಿ ಕಂಗಳ ತುಂಬಿದೆ ತುಳುಕಿದೆ ತಾಯಿಯ ಕಂಡೇ  ನಿನ್ನ ದಯೆಯಿಂದ 
ದೇವರೇ ಥ್ಯಾಂಕ್ಸ್ ಯೂ 

ನನ್ನ ತಮ್ಮ ಯಾರು ಎಂದು ಅಲ್ಲೇ ಕಂಡೇನು ಅಣ್ಣ ಎನುತ ಬರುವ ಎಂದು ಬಳಿಗೆ ಹೋದೇನು 
ಬರಲಿಲ್ಲ ಆ ಅದೃಷ್ಟ ನನಗಿಲ್ಲ ಪರವಾಗಿಲ್ಲ ತಂದೆ ಕೋಪ ಕಂಡು ನಾನು ಬೆಚ್ಚಿದೇನು  
 ಮತ್ತೇ ನೋಡೋ ಆಸೆ ಹೊತ್ತು ಓಡಿ ಬಂದೆನು ನಂಗೆ ಅಮ್ಮ ಇದ್ದಾಳೆ ಅಪ್ಪ ಇದ್ದಾನೆ 
ತಮ್ಮ ಇದ್ದಾನೆ ನಾನು ಆನಾಥ ಅಲ್ಲ ಒಂಟಿಯಲ್ಲ.. 
ಎಂಥ ಆನಂದ ಇಂದು ಎಂಥ ಆನಂದ ಗಂಟಲು ಬಿಗಿದಿದೆ ನಾಲಿಗೆ ತೊದಲಿದೆ 
ಕಂಬನಿ ಕಂಗಳ ತುಂಬಿದೆ ತುಳುಕಿದೆ ತಾಯಿಯ ಕಂಡೇ  ನಿನ್ನ ದಯೆಯಿಂದ 
ದೇವರೇ ಥ್ಯಾಂಕ್ಸ್ ಯೂ 
------------------------------------------------------------------------

ತಾಯಿ ಮಮತೆ (೧೯೮೫) - ಜೋಡಿಯಾಗೋ ಕಾಲ ಬಂದಿತು 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ 

ಜೋಡಿಯಾಗೋ ಕಾಲ ಬಂದಿತು ಬಾಳಿನಲ್ಲಿ ಸಡಗರ ತಂದಿತು 
ಬದುಕು ಬಂಗಾರವಾಯಿತು 

ಗಂಡಿಗಿಂತ ಹೆಣ್ಣು ಚೆನ್ನ ಹೆಣ್ಣಿಗಿಂತ ಗಂಡು ಚೆನ್ನ 
ನೋಡಲೆರಡು ಕಣ್ಣು ಸಾಲದು ನಾಚಿಕೊಳ್ಳುವ ಹೆಣ್ಣು ಚೆನ್ನ 
ಓರೇ ನೋಟ ಇನ್ನೂ ಚೆನ್ನ ಇಂಥ ಸಮಯ ಮತ್ತೆ ಬಾರದು 
ಮಂಗಳವಾದ್ಯವು ಶುಭವನು ಕೋರಿದೆ ಮಂತ್ರದ ಘೋಷವು ಎಲ್ಲೆಡೆ ತುಂಬಿದೆ 
ಕಂಡ ಕನಸು ನಿಜವಾಗಿ ಹಿಗ್ಗಿ ಮನಸು ಹೂವಾಗಿ ಬದುಕು ಬಂಗಾರವಾಯಿತು 
ಜೋಡಿಯಾಗೋ ಕಾಲ ಬಂದಿತು ಬಾಳಿನಲ್ಲಿ ಸಡಗರ ತಂದಿತು ಬದುಕು ಬಂಗಾರವಾಯಿತು 

ಮೊದಲ ರಾತ್ರಿ ಬಂತು ನೋಡು ಪ್ರೇಮಗೀತೆಯೊಂದ ಹಾಡು 
ದೂರ ನಿಂತು ನಾನು ಕೇಳುವೆ ನಿಮ್ಮ ನೋಡೋ ಆಸೆಯಿಂದ 
ಕಿಟಕಿಯಲ್ಲಿ ಚಂದ್ರ ಬಂದ ಅವನೀಗಿಗ ಏನು ಹೇಳುವ ಮಲ್ಲಿಗೆ ಹೂವಿನ ಹಾಸಿಗೆ ಕಾದಿದೆ 
ಮಂಚವು ನಿನ್ನನ್ನು ಸನಿಹಕೆ ಕೂಗಿದೆ  
ಇಂದು ರಾತ್ರಿ ನಿಮಗಾಗಿ ನಿಮ ಕಂಡ ನನಗಾಗಿ ಅಳೋಕೆ ಜೊತೆಯಾಯಿತು 
ನನಗೆ ಆಡೋಕೆ ಜೊತೆಯಾಯಿತು 
ಕಂಡ ಕನಸು ನಿಜವಾಗಿ ಹಿಗ್ಗಿ ಮನಸು ಹೂವಾಗಿ ಬದುಕು ಬಂಗಾರವಾಯಿತು 
ಜೋಡಿಯಾಗೋ ಕಾಲ ಬಂದಿತು ಬಾಳಿನಲ್ಲಿ ಸಡಗರ ತಂದಿತು ಬದುಕು ಬಂಗಾರವಾಯಿತು 
------------------------------------------------------------------------- 

No comments:

Post a Comment