ಅಗ್ನಿ ಪರೀಕ್ಷೆ ಚಲನಚಿತ್ರದ ಹಾಡುಗಳು
- ನಗುವ ಹೂವೇ
- ಮಮತೆ ಎಂಬಂಥ
- ಮಮತೆ ಎಂಬಂಥ (ದುಃಖ)
- ತಂದೆ ಇಲ್ಲಿ
- ಪೊಲೀಸ್ ಪೊಲೀಸ್
ಅಗ್ನಿ ಪರೀಕ್ಷೆ (೧೯೮೬) - ನಗುವ ಹೂವೇ
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ನಗುವ ಹೂವೆ ಒಲವ ತೆರೆ
ನಗುವ ಹೂವೆ ಒಲವ ತೆರೆ ದೇವಲೋಕದ ಚೆಲುವಾದ ರೂಪಸಿ
ಬಾಳ ಹಾಡಿಗೆ ಶ್ರುತಿಯಾದ ಪ್ರೇಯಸೀ ಈ ಜೀವಕೆ ನೀನೇನೇ ಆಸರೆ
ನಗುವ ಹೂವೆ ಒಲವ ತೆರೆ ದೇವಲೋಕದ ಚೆಲುವಾದ ರೂಪಸಿ
ಬಾಳ ಹಾಡಿಗೆ ಶ್ರುತಿಯಾದ ಪ್ರೇಯಸೀ ಈ ಜೀವಕೆ ನೀನೇನೇ ಆಸರೆ
ಗಂಡು : ಹೂವಿನ ಪಲ್ಲಕಿ ತಂದಾಗ ನಿನ್ನನ್ನೂ ನಿನ್ನಂದ ಕಂಡಾಗ ತಂದೆ ನಾ ನನ್ನನೂ
ಹೆಣ್ಣು : ಮುಂಜಾನೆ ಮಂಜಲು ಬಂದೆ ನೀ ಬಾಳಲಿ ಸಂತೋಷ ಸಾವಿರ ಈ ನಿನ್ನ ತೋಳಲಿ
ಗಂಡು : ಈ ನಮ್ಮ ಪ್ರೇಮ ನೌಕೆ ಹೀಗೆ ಸಾಗಲಿ
ನಗುವ ಹೂವೆ ಒಲವ ತೆರೆ ದೇವಲೋಕದ ಚೆಲುವಾದ ರೂಪಸಿ
ಬಾಳ ಹಾಡಿಗೆ ಶ್ರುತಿಯಾದ ಪ್ರೇಯಸೀ ಈ ಜೀವಕೆ ನೀನೇನೇ ಆಸರೆ
ಹೆಣ್ಣು : ಬಾನಾಚೇ ಲೋಕ ನೋಡಲ್ಲಿ ಕಾದಿದೆ ಹೂ ಹಾಸಿ ಕೈಬೀಸಿ ನಮ್ಮನ್ನೂ ಕೂಗಿದೆ
ಗಂಡು : ಶೃಂಗಾರ ಆಲಯ ಈ ಪ್ರೇಮ ಮಾಡಿದೆ ನಾನೇನೇ ರಾಜನು ರಾಣಿಯು ಇಲ್ಲಿದೇ
ಹೆಣ್ಣು : ಎಂದೆಂದೂ ನಮ್ಮ ಜೋಡಿ ಇಲ್ಲಿ ಕಾಣಲಿ
ನಗುವ ಹೂವೆ ಒಲವ ತೆರೆ ದೇವಲೋಕದ ಚೆಲುವಾದ ರೂಪಸಿ
ಬಾಳ ಹಾಡಿಗೆ ಶ್ರುತಿಯಾದ ಪ್ರೇಯಸೀ ಈ ಜೀವಕೆ ನೀನೇನೇ ಆಸರೆ
--------------------------------------------------------------------------------------------------------
ಅಗ್ನಿ ಪರೀಕ್ಷೆ (೧೯೮೬) - ಮಮತೆ ಎಂಬಂಥ
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ಮಮತೆ ಎಂಬಂಥ ತೋಟದೆ ಹೂವಾದ ಮಲ್ಲಿಗೆ ವರಮಾಲೆ ಆಗಿ ಸೇರಿದೆ
ಒಲವಿಂದ ದೇವಗೆ ನಗಲೆಂದು ನಿಮ್ಮ ಬಾಳಲಿ ಸುಖವೆಂಬ ದೀವಿಗೆ
ಹೆಣ್ಣು : ಮುತ್ತು ಮಾಣಿಕ್ಯ ಮಂಟಪಕ್ಕೆ ಬಂದು ನೀ ಕೂರಲು
ಮಿಂಚು ಕಣ್ಣಲ್ಲಿ ನೂರು ಮಾತು ಆಗ ನೀ ಆಡಲು
ಗಂಡು : ಭೂಮಿಗಿಳಿದ ಚಂದಿರನು ಬಾಳ ಬೆಳಗೋ ಸುಂದರನು
ತಾಳಿ ನೀಡೆ ಬಂದಿಹನು ಪ್ರೀತಿ ಮಾಲೆ ತಂದಿಹನು
ಹೆಣ್ಣು : ಯಾವ ಅನುಬಂಧವೋ ಗಂಡು : ದಿವ್ಯ ಸಂಬಂಧವೋ
ಗಂಡು : ಮಮತೆ ಎಂಬಂಥ ತೋಟದೆ ಹೂವಾದ ಮಲ್ಲಿಗೆ ವರಮಾಲೆ ಆಗಿ ಸೇರಿದೆ
ಒಲವಿಂದ ದೇವಗೆ ನಗಲೆಂದು ನಿಮ್ಮ ಬಾಳಲಿ ಸುಖವೆಂಬ ದೀವಿಗೆ
ಗಂಡು : ಯಾವ ನೋವನು ಕಾಣದಂಥ ಕೋಮಲ ಹೂವಿದು
ಮೋಸ ಸುಳ್ಳೆಂದು ನೋಡದಂಥ ಹೂ ಮನ ನೋಡಿದು
ಮಾತು ಬಾರದ ಗಿಣಿ ಇವಳು ಒಳ್ಳೆ ಗುಣದ ಗಣಿ ಇವಳು
ಆಸೆ ಅರಿತು ನೀ ನೋಡಿಕೋ ಕಣ್ಣ ಹಾಗೆ ಕಾಪಾಡಿಕೋ
ಬಾಳು ಜೇನಾಗಲೀ ಸ್ವರ್ಗ ನಿಮದಾಗಲಿ
ಮಮತೆ ಎಂಬಂಥ ತೋಟದೆ ಹೂವಾದ ಮಲ್ಲಿಗೆ ವರಮಾಲೆ ಆಗಿ ಸೇರಿದೆ
ಒಲವಿಂದ ದೇವಗೆ ನಗಲೆಂದು ನಿಮ್ಮ ಬಾಳಲಿ ಸುಖವೆಂಬ ದೀವಿಗೆ
-------------------------------------------------------------------------------------------------------
ಅಗ್ನಿ ಪರೀಕ್ಷೆ (೧೯೮೬) - ಮಮತೆ ಎಂಬಂಥ (ದುಃಖ)
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ,
---------------------------------------------------------------------------------------------------------
ಅಗ್ನಿ ಪರೀಕ್ಷೆ (೧೯೮೬) - ತಂದೆ ಇಲ್ಲಿ
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ,
ತಂದೆ ಇಲ್ಲಿ ನ್ಯಾಯಾಧೀಶ ಅಲ್ಲಿ ಸತ್ಯವೊಂದೇ ನಿಲ್ಲುವುದಲ್ಲಿ
ನ್ಯಾಯದ ತೀರ್ಪು ದೇವರ ತೀರ್ಪು ಮಮತೆ ಪ್ರೀತಿ ಅರಿಯದು ನೀತಿ
ಸ್ವಂತವನು ಬಂಧವನು ತಿಳಿಯದು ಕಣ್ಣುಗಳ ಕಟ್ಟಿಹಳು ಧರ್ಮದ ದೇವತೇ ...
ಪ್ರೇಮದ ಪಾಶ ನನಗಿಲ್ಲವೇ ನಾ ಕಂಬನಿ ಸುರಿಸಿಲ್ಲವೇ
ಹೆತ್ತ ಕರುಳಿಗೆ ಸೆರೆ ನೀಡಲು ಮನ ಕಲ್ಲಾಗಿ ಹೋಗಿಲ್ಲವೇ
ವಿಧಿಯ ಚೆಲ್ಲಾಟವಮ್ಮಾ ನಾವು ಕೈಗೊಂಬೆಯಮ್ಮ
ಸತ್ಯ ಮರೆಯಾದ ವೇಳೆ ಸುಳ್ಳು ಮರೆದಾಡಿತಮ್ಮಾ
ನಾನು ಒಬ್ಬ ಬಂಧಿ ನ್ಯಾಯ ಫೀಠದಲ್ಲಿ ನಿಮ್ಮ ಮಾತು ಕೇಳಿ ನೊಂದೆ ತಂದೆ ಇಲ್ಲಿ
ತಂದೆ ಇಲ್ಲಿ ನ್ಯಾಯಾಧೀಶ ಅಲ್ಲಿ ಸತ್ಯವೊಂದೇ ನಿಲ್ಲುವುದಲ್ಲಿ
ನ್ಯಾಯದ ತೀರ್ಪು ದೇವರ ತೀರ್ಪು ಮಮತೆ ಪ್ರೀತಿ ಅರಿಯದು ನೀತಿ
ಸ್ವಂತವನು ಬಂಧವನು ತಿಳಿಯದು ಕಣ್ಣುಗಳ ಕಟ್ಟಿಹಳು ಧರ್ಮದ ದೇವತೇ ...
ಹರಿಶ್ಚಂದ್ರನು ಸುಡುಗಾಡು ಕಾದ ಸತ್ಯವ ಕಾಪಾಡಲು
ಅಣ್ಣ ತಮ್ಮರ ಕಾದಾಡಿದ ಕರ್ಣ ಮಾತು ಈಡೇರಲು
ತನ್ನ ಕರ್ತವ್ಯಕ್ಕಾಗಿ ಕಾಡಿಗೆ ಹೋದ ರಾಮ
ಅವರ ಆದರ್ಶವೆಲ್ಲ ನಮಗೆ ದೃಷ್ಟಾಂತವಮ್ಮಾ
ನ್ಯಾಯ ನೀತಿ ಮುಂದೆ ನಾನು ನೀನು ಒಂದೇ
ಸತ್ಯ ಧರ್ಮ ಎಂದೂ ನಮ್ಮ ತಾಯಿ ತಂದೆ
ತಂದೆ ಇಲ್ಲಿ ನ್ಯಾಯಾಧೀಶ ಅಲ್ಲಿ ಸತ್ಯವೊಂದೇ ನಿಲ್ಲುವುದಲ್ಲಿ
ನ್ಯಾಯದ ತೀರ್ಪು ದೇವರ ತೀರ್ಪು ಮಮತೆ ಪ್ರೀತಿ ಅರಿಯದು ನೀತಿ
ಸ್ವಂತವನು ಬಂಧವನು ತಿಳಿಯದು ಕಣ್ಣುಗಳ ಕಟ್ಟಿಹಳು ಧರ್ಮದ ದೇವತೇ ...
--------------------------------------------------------------------------------------------------------
ಅಗ್ನಿ ಪರೀಕ್ಷೆ (೧೯೮೬) - ಪೊಲೀಸ್ ಪೊಲೀಸ್
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಸ್.ಪಿ.ಬಿ,
ಪೊಲೀಸ್ ಪೊಲೀಸ್ ದಾರಿ ಬಿಡು ಮಾವ ಮಾವ ದಾರಿ ಬಿಡು
ಪ್ರೀತಿ ಜೋಡಿ ನಾವು ಅರೆ ಮಧ್ಯೆ ನೀ ಏತಕೋ
ಜಾಗ ಖಾಲಿ ಮಾಡಿ ತೆಪ್ಪಗೆ ನೀ ಸೇರಿಕೋ
ಮಾಳಿಯೂ ಇಲ್ಲಿರೇ ಬೇಲಿಯೂ ಏತಕೆ...
ಗಾಳಿ ಗಂಧ ಸೇರಲು ಯಾರು ತಡೆಯುವರು ಹೆಣ್ಣು ಗಂಡು ಪ್ರೀತಿಸೆ ಎಲ್ಲಾ ಕರಗೋದು
ಬಾ ಇಲ್ಲಿಗೆ ಚಿನ್ನ ನೀಡೊಂದು ಕೊಡುಗೆ ನೀ ಅಪ್ಪಿಕೋ ನನ್ನ ಸಂತೋಷ ನನಗೆ
ಗಾಡಿಗೆ ತಕ್ಕಂಥ ಡ್ರೈವರ್ ನಾ ಬಾಡಿಗೆ ತಕ್ಕಂಥ ನಂಬರ ನಾ
ಪ್ರೀತಿಯಾ ಆಟಕೆ ಅಂಪೈರ್ ಮಾವನೇ
ಪೊಲೀಸ್ ಪೊಲೀಸ್ ದಾರಿ ಬಿಡು ಮಾವ ಮಾವ ದಾರಿ ಬಿಡು
ಪ್ರೀತಿ ಜೋಡಿ ನಾವು ಅರೆ ಮಧ್ಯೆ ನೀ ಏತಕೋ
ಜಾಗ ಖಾಲಿ ಮಾಡಿ ತೆಪ್ಪಗೆ ನೀ ಸೇರಿಕೋ
ಮಾಳಿಯೂ ಇಲ್ಲಿರೇ ಬೇಲಿಯೂ ಏತಕೆ...
ಬ್ರಹ್ಮ ತಂದ ಗಂಟಿದು ಏಕೆ ಯೋಚನೆ ಬಾ ಬಾ ಬಾ
ನೂರು ಜನ್ಮ ನಂಟಿದು ಧಾರೆ ಎರೆಯಲು ಬಾ
ಒಂದಾದ ಓ ಜೀವ ಈ ಮಾಡು ಮದುವೆ
ಸಂದೇಹವೇ ಮಾವ ಬೇಕಿಲ್ಲ ಒಡವೆ
ಲೈಸನ್ಸು ಕೊಟ್ಟರೇ ಜಾಣತನ ನಾನ್ಸೆನ್ಸು ಅಂದರೆ ಮೂಢತನ
ಮೊಮ್ಮಗು ಆಡಿಸೆ ಕಾದಿರು ನಾಳೆ ನೀ
ಪೊಲೀಸ್ ಪೊಲೀಸ್ ದಾರಿ ಬಿಡು ಮಾವ ಮಾವ ದಾರಿ ಬಿಡು
ಪ್ರೀತಿ ಜೋಡಿ ನಾವು ಅರೆ ಮಧ್ಯೆ ನೀ ಏತಕೋ
ಜಾಗ ಖಾಲಿ ಮಾಡಿ ತೆಪ್ಪಗೆ ನೀ ಸೇರಿಕೋ
ಮಾಳಿಯೂ ಇಲ್ಲಿರೇ ಬೇಲಿಯೂ ಏತಕೆ...
--------------------------------------------------------------------------------------------------------
No comments:
Post a Comment