ಬಾರೇ ನನ್ನ ಮುದ್ದಿನ ರಾಣಿ ಚಲನಚಿತ್ರದ ಹಾಡುಗಳು
- ಗಂಡನು ಹಡೆದ
- ಹೆಣ್ಣು ಅಂದ್ರೇನೆ
- ಹೆಣ್ಣಿಂದಲೇ ಎಲ್ಲಾ
- ನೀ ಮೈಯ್ಯ ಮುಟ್ಟಿದಾಗ
ಬಾರೇ ನನ್ನ ಮುದ್ದಿನ ರಾಣಿ (೧೯೯೦) - ಗಂಡನು ಹಡೆದ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಪ್ರಕಾಶ ತ್ರಿಶೂಲಿ, ಗಾಯನ : ಮಂಜುಳಗುರುರಾಜ. ಕೋರಸ್
ಗಂಡನ್ನು ಹಡೆದಾ ದೇವರು ನೀವು ಊರೂರು ಅಲೆವ ಬೀಗರು ತಾವು
ನಿಮ್ಮಯ ಸೇವೆಗೆ ಸಿದ್ದರು ನಾವು ನಿಮ್ಮಾಸೆ ತೀರಿಸೇ ಬದ್ಧರು ನಾವು
(ಉಣ್ಣಾಕೆ ಕುಡಿಯೋಕೆ ಏನು ಇಲ್ವಾ..)
ಬಿಸಿ ಬಿಸಿ ರುಚಿಯಾ ಮೈಸೂರ ಪಾಕ ತಿನ್ನು ಬಾ ರಸಿಕ
ಹಸನಾದ ಹಣ್ಣಿನ ಪಾನಕ ನೀ ಕುಡಿಯೋ ಹೊಟ್ಟೆ ಬಾಕ
(ವಾಟ್ ಇಸ್ ಯುವರ್ ನೇಮ್)
ಆಶ್ಲೇಷಾ... (ಡ್ಯಾನ್ಸ್ ಮಾಡಾಕ್ ಬರುತ್ತಾ...) ಓಹೋ ಬರುತ್ತೇ ..
(ಹಂಗಾದ್ರೆ ಶುರು ಹಚ್ಕೋ..)
ನಮ್ಮೂರನಾಗ ನೀನೊಬ್ಬನೇ ಕೋಣಾ ಕೇಳ್ಬೇಕಾ ಕಿನ್ನರಿಯ ಗಾನ
ಡಾನ್ಸ್ ಮಾಡೋಕ್ ನಿಂತ್ಕೊಂಡರೇ...
ಡಾನ್ಸ್ ಮಾಡೋಕ್ ನಿಂತ್ಕೊಂಡರೇ... ಅನ್ಯಾಯ್ವಾಗ್ ಹೋಗುತ್ತೇ ಮೂರೂ ಜನರ ಪ್ರಾಣ
(ನಾನ್ ಗೊಟಕ್ ಅಂದ್ರು ಪರವಾಗಿಲ್ಲ ನಿನ್ನೇ ಮದುವೆ ಆಗ್ತೀನಿ)
ಹೌದಾ.. ನಾನ್ ಗೊಂಬೆ ನೀನು ಗೂಬೆ ಈಡು ಜೋಡು ನೋಡಿಕೊಂಡು
ಸೊಬಾನಾ ಮಾಡಿಕೊಳ್ಳೋ ಸೋಡಾ ಬುಡ್ಡಿ ಒದ್ದೆಂದ್ರೇ... ಒದ್ದೆಂದ್ರೇ ಉದುರತೈತೆ ನಿನ್ನ ಚೆಡ್ಡಿ
(ಆ... ಚೆಡ್ಡಿನಾ... ಉದುರಹೋಗ್ಲೀ ಡೆಡ್ ಬಾಡಿನಾದ್ರೂ ಬಿದ್ಹೋಗ್ಲೀ ವರದಕ್ಷಿಣೆ ಕೋಟ್ರೇ ಸಾಕು
ಲಕ್ಷ ಲಕ್ಷಯೇ ಬಂದ್ಬಿಡಬೇಕು ಪೈಸಾ ಕಡಿಮೆ ಆದರು ನೋ ಟಚಿಂಗ್)
ನಿನ್ನ ನೀನು ಮಾರಿಕೊಳ್ಳೋ ಭಂಡ ನೀನು ಷಂಡ್ ಸೊಸೆಯು ತರುವ ಹಣವ ಬೇಡೋ
ನೀನು ಭಾರಿ ಪುಂಡಾ ಹೆಣದ ಮೇಲೆ ಹಣವ ಹಾಯೋ ನಿನ್ನ ಬದುಕು ದಂಡ ನಾಲ್ಕಾಣೆ .. ನಾಲ್ಕಾಣೆ
ನಾನು ಮಾಡ್ಲಾ ಬೋಣಿ .. (ಭಲಾರೇ)ನಮ್ಮಪ್ಪ ನೋಡು ಜಾಣ
(ನಮ್ಮಪ್ಪಾ) ಕಲಗಚ್ಚು ಕುಡಿಯೋ ಕೋಣ (ಇಲ್ಲಿ ದೊಡ್ಡೋರಿದ್ದಿವೀ ಸುತ್ತ ಮುತ್ತ ನೋಡ್ಕೊಂಡ್ ಹಾಡು)
ಸುತ್ತಮುತ್ತ ಯಾರಿದ್ರೇನೂ ನನ್ನ ಹತ್ರ ಬಾರೋ ನೀನು
ಅಯ್ಯೋ ಮನ್ಮಥ ನಿನ್ನ ದೇಹದ ಶುದ್ದಿ ಮಾಡುತ ಕೊಡುವೆ ಲಾತವಾ
(ಈ.. ಯಾ... ಊರೇ ನಿಂದು ಹಿಂಗಾಡ್ತಿಯಾ)
ನಮ್ಮೂರೂ ಬೆಂಗಳೂರೂ ನಿಮ್ಮೂರು ಯಾವೂರು
ಎಲ್ಲಿಂದ ಬಂದೆ ನೀನು ಪರದೇಶಿ ನೀನ್ ಯೋಗ್ತೆ ನಂಗೊತ್ತಿಲ್ವಾ ಬಿಕನಾಸಿ
ನನ್ನನೂ ಕಂಡರೆ ಮದುವೆಯ ಅವಸರ ಬಂತೇನು ಹೇಳು ಬಚ್ಚಾ..
ನೀ ನನ್ನ ಆದರೆ ಮ್ಯಾರೇಜು ಆಮೇಲೆ ಹಾಕ್ತಿನೀ ನಿನ್ನ ಹರಾಜೂ ...
ಒಂದ್ ಸಾರೀ.. ಎರಡ್ ಸಾರೀ ... ಮೂರ್ ಸಾರೀ
(ಹ್ಹಾಂ.. ಏನು ಬೇಕಾದ್ರು ಹಾಕ್ಕೋ ನಾನು ಗಂಡ್ಸಲ್ವಾ ತಡ್ಕೊತೀನಿ)
ಅಯ್ಯಯ್ಯಯ್ಯೋ ವೇಷವ ನೋಡೇ ಎಂಥಾ ಗಮ್ಮತ್ತು ಮೂತಿಯ ನೋಡೇ ಒಂಬತ್ತು
(ಅಪ್ಪ ಒಂಬತ್ತು ಆದ್ರೆ ಏನು) (ಒಂಬತ್ತು ಅಂದ್ರೆ ಇಲ್ಲಿ ಬ್ಯಾಡ್ವೋ ಮನೆಗ್ ಬಾ ಹೇಳ್ತೀನಿ)
ವೇಷವ ನೋಡೇ ಎಂಥಾ ಗಮ್ಮತ್ತು ಮೂತಿಯ ನೋಡೇ ಒಂಬತ್ತು
ಅಹಹ... ಪ್ರೇತದ ಮೊಗದಲಿ ಏನೀ ಕಲೆಯು ದೇಹದ ತುಂಬಾ ನಾರುವ ಕೊಳೆಯು
(ರಾಮ ಕೃಷ್ಣ ಅನ್ನೋ ವಯಸ್ಸೂ ನಮ್ದು ದೇವಾ ನಾಮ ಹಾಡು)
ಎಲ್ಲಾ ಮಾಯಾವೋ ಪ್ರಭುವೇ ಎಲ್ಲಾ ಮಾಯಾವೋ
ಎಲ್ಲಾ ಮೋಸವೋ ಮದುವೆ ಗಂಡೇ ಮೋಸವೋ
ನಿಮ್ಮಮ್ಮ ಹಂಡೆಯು ಅಪ್ಪ ತಪ್ಪಲೆಯು ಮಗನು ಪುಟ್ಟ ಲೋಟವೂ
ಅನುಮಾನ ನಂಗೇನು ಈ ಮಂಗಾ ನಿಮ್ಮ ಮಗನಾ...
ಅಯ್ಯೋ ರಾಮ ಅಯ್ಯೋ ರಾಮ ಹಾಕ್ತಿನಿ ಪಂಗನಾಮ
ಹರೇ ಕೃಷ್ಣ ಹರೇ ಕೃಷ್ಣ ಇಳಿಸ್ತಿನಿ ನಿಮ್ಮ ಉಷ್ಣ (ಅಮ್ಮ ಗಿಲ್ತಾಳೆ)
ಗಿಲ್ ಗಿಲ್ ಗಿಲ್ ಗಿಲ್ತೀನೀ ಕೈಕಾಲು ಮುರೀತೀನಿ
ನಿನ್ನ ಹಲ್ಲು ಮುರೀತೀನಿ ಹ್ಹಾ... ಕಮಂಗಿಯೇ.. ಅಂಜುವೆ ಬೇರೇ ಕೇಡು ನಿಂಗೆ ಚಿಂಪಾಜಿಯೇ
ಕಪ್ಪೆಯಂತೆ ಹಾರಿ ಬಂದೆ ನೀ ಇಲ್ಲಿಗೆ ಇನ್ಯಾರೂ ಮುಸೋರಿಲ್ಲ ಈ ಮೂತಿಗೆ
ಇಲ್ಲಿಂದ ಬಿಡು ಗಾಡಿ ನಿಮ್ಮೂರಿಗೆ
ಗಿಲ್ ಗಿಲ್ ಗಿಲ್ ಗಿಲ್ತೀನೀ ಕೈಕಾಲು ಮುರೀತೀನಿ
ನಿನ್ನ ಹಲ್ಲು ಮುರೀತೀನಿ ಹ್ಹಾ... ಕಮಂಗಿಯೇ.. ಅಂಜುವೆ ಬೇರೇ ಕೇಡು ನಿಂಗೆ ಚಿಂಪಾಜಿಯೇ
ಕಪ್ಪೆಯಂತೆ ಹಾರಿ ಬಂದೆ ನೀ ಇಲ್ಲಿಗೆ ಇನ್ಯಾರೂ ಮುಸೋರಿಲ್ಲ ಈ ಮೂತಿಗೆ
ಇಲ್ಲಿಂದ ಬಿಡು ಗಾಡಿ ನಿಮ್ಮೂರಿಗೆ
-----------------------------------------------------------------------------------------------------
ಬಾರೇ ನನ್ನ ಮುದ್ದಿನ ರಾಣಿ (೧೯೯೦) - ಹೆಣ್ಣು ಅಂದ್ರೇನೂ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ರುದ್ರಮೂರ್ತಿ ಶಾಸ್ತ್ರೀ, ಗಾಯನ : ಮಂಜುಳಗುರುರಾಜ.
ಹೆಣ್ಣು ಅಂದರೇನು ಮಮತೆ ರೂಪ ತಾನೇ ಹೆಣ್ಣೆಂದರೆ ಏಕೆ ಇಂಥಾ ಕೀಳು ಭಾವನೇ
ಹೆಣ್ಣು ಅಂದರೇನು ಮಮತೆ ರೂಪ ತಾನೇ ಹೆಣ್ಣೆಂದರೆ ಏಕೆ ಇಂಥಾ ಕೀಳು ಭಾವನೇ
ಮಾತೆ ಮಡದಿ ಮಗಳು ತಂಗಿ ಹೆಣ್ಣಲ್ಲವೇ ಆ ಹೆಣ್ಣೇ ಎಲ್ಲ ಮಾನವರ ಕಣ್ಣಲ್ಲವೇ
ಹುಟ್ಟಿದ ಕೂಡಲೇ ಹೆಣ್ಣಿನ ಬಾಳಲಿ ಅಯ್ಯೋ ಎನ್ನುವ ಆರಂಭ
ಹೆಣ್ಣೇ.. ಛೀ.. ಎಂಬ ಮಾತುಗಳೇ ನಾಮಕರಣ ಸಮಾರಂಭ
ಹುಟ್ಟಿದ ಹೆಣ್ಣಿನ ತಪ್ಪೇ.. ಹೆಣ್ಣಿನಾ ಮುಖದಲಿ ಮಸಿಯ ಬಳಿಯುವ
ಲೋಕದ ನೀತಿಯೇ ತಪ್ಪೇ
ಹೆಣ್ಣು ಅಂದರೇನು ಮಮತೆ ರೂಪ ತಾನೇ ಹೆಣ್ಣೆಂದರೆ ಏಕೆ ಇಂಥಾ ಕೀಳು ಭಾವನೇ
ಮಾತೆ ಮಡದಿ ಮಗಳು ತಂಗಿ ಹೆಣ್ಣಲ್ಲವೇ ಆ ಹೆಣ್ಣೇ ಎಲ್ಲ ಮಾನವರ ಕಣ್ಣಲ್ಲವೇ
ತಾರುಣ್ಯದ ಸವಿಗನಸಿನ ಕಾಲ ಮಗನಿಗೆ ಸ್ವಾತಂತ್ರ್ಯದ ಆಟ
ನಾಲ್ಕು ಗೋಡೆಗಳ ಸೆರೆಮನೆಯಲ್ಲಿ ಮಗಳಿಗೆ ಮನೆಗೆಲಸವ ಪಾಠ
ಮದುವೆಯ ಹೆಸರಿನಲಿ ಕೂಗಿ ಕರೆಯಿತು ಮಂಗಳಸೂತ್ರದಾ ಉರುಳು
ತವರು ತೀರಿತು ಮುಂದೆ ಎಂದಿಂಗೂ ಗಂಡನ ಮನೆಯೇ ನೆರಳು
ಹೆಣ್ಣು ಅಂದರೇನು ಮಮತೆ ರೂಪ ತಾನೇ ಹೆಣ್ಣೆಂದರೆ ಏಕೆ ಇಂಥಾ ಕೀಳು ಭಾವನೇ
ಮಾತೆ ಮಡದಿ ಮಗಳು ತಂಗಿ ಹೆಣ್ಣಲ್ಲವೇ ಆ ಹೆಣ್ಣೇ ಎಲ್ಲ ಮಾನವರ ಕಣ್ಣಲ್ಲವೇ
ಸಾವಿರ ವೇದನೆ ನುಂಗಿ ನಗುವಳು ಗಂಡಿನ ದಾಹವಾ ತಣಿಸುವಳು
ಕರುಳಿನ ಕುಡಿಗಳಾ ಹೆತ್ತು ಹೊತ್ತು ಬಾಳಿಗೆ ಅರ್ಥವ ನೀಡುವಳು
ಕೊಟ್ಟರು ಆತನು ನೋವಾ ಗಂಡನೇ ತನ್ನ ದೈವ...
ಎನ್ನುತ್ತಾ ನಂಬಿ ಕಷ್ಟ ಸಹಿಸುತ ಬಯಸುವಳು ಮುತೈದೆ ಸಾವ...
ಹೆಣ್ಣು ಅಂದರೇನು ಮಮತೆ ರೂಪ ತಾನೇ ಹೆಣ್ಣೆಂದರೆ ಏಕೆ ಇಂಥಾ ಕೀಳು ಭಾವನೇ
ಮಾತೆ ಮಡದಿ ಮಗಳು ತಂಗಿ ಹೆಣ್ಣಲ್ಲವೇ ಆ ಹೆಣ್ಣೇ ಎಲ್ಲ ಮಾನವರ ಕಣ್ಣಲ್ಲವೇ
-----------------------------------------------------------------------------------------------------
ಬಾರೇ ನನ್ನ ಮುದ್ದಿನ ರಾಣಿ (೧೯೯೦) - ಹೆಣ್ಣಿಂದಲೇ ಎಲ್ಲಾ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ರುಧ್ರಮೂರ್ತಿ ಶಾಸ್ತ್ರೀ, ಗಾಯನ : ಮಂಜುಳಗುರುರಾಜ. ಕೆ.ಜೆ.ಏಸುದಾಸ್,
ಹೆಣ್ಣು : ಹೆಣ್ಣಿಂದಲೇ ಎಲ್ಲ ಹೆಣ್ಣಿಂದಲೇ ಈ ಲೋಕ ಬೆಳೆಯೋದು ನಮ್ಮಿಂದಲೇ
ಹೆಣ್ಣಿಂದಲೇ ಎಲ್ಲ ಹೆಣ್ಣಿಂದಲೇ ಈ ಲೋಕ ಬೆಳೆಯೋದು ನಮ್ಮಿಂದಲೇ
ಹೆಣ್ಣಿಲ್ಲದಿದ್ದರೆ ಗಂಡು ತಾನೇ ಹೇಗೆ ತಾನೇ ಬಾಳು ತಾನೇ
ಗಂಡು : ಹೇ.. ಗಂಡಿಂದಲೇ ಎಲ್ಲ ಗಂಡಿಂದಲೇ ನಿಮ ಬಾಳು ಬೆಳಗೋದು ನಮ್ಮಿಂದಲೇ
ಹೇ.. ಗಂಡಿಂದಲೇ ಎಲ್ಲ ಗಂಡಿಂದಲೇ ನಿಮ ಬಾಳು ಬೆಳಗೋದು ನಮ್ಮಿಂದಲೇ
ಹೆಣ್ಣಿಗೆ ಆಸರೆ ನೀಡು ತಾನೇ ಗಂಡು ತಾನೇ ಗೊತ್ತಾಯ್ತೆನೇ
ಹೆಣ್ಣು : ಸಂತೋಷ ಸುಖ ಸಂಪದ ಎಲ್ಲಾ ಹೆಣ್ಣಿಂದಲೇ
ಗಂಡು : ನೂರೆಂಟು ಸುಖ ಸಾಧನ ಗಂಡು ದುಡಿದಾಗಲೇ
ಹೆಣ್ಣು : ಹೆಣ್ಣು ಒಳಗೆ ಬೆಂದರೇನೇ ನಿಮಗೆ ಊಟ ಪ್ರೇಮದಾಟ ಹುಂಜದ ಜಂಭದಾಟ
ಗಂಡು : ಸಂಸಾರ ಸಂರಕ್ಷಣೆ ಎಲ್ಲಾ ಗಂಡಿಂದಲೇ
ಹೆಣ್ಣು : ಸಂತಾನ ಸೌಭಾಗ್ಯ ಪುಣ್ಯ ನಮ್ಮಿಂದಲೇ
ಗಂಡು : ತಾಳಿ ಬೊಟ್ಟು ಕಟ್ಟಿ ನಿನ್ನಾ ಕನ್ಯಾಸೆರೆ ಬಿಡಿಸಿ ತಾಂಡಾ ಹಮ್ಮಿರ ಗಂಡು ತಾನೇ
ಈ ಗಂಡಿಗೇ ಸಾಟಿ ಯಾರೇ...
ಹೇ.. ಗಂಡಿಂದಲೇ ಎಲ್ಲ ಗಂಡಿಂದಲೇ ನಿಮ ಬಾಳು ಬೆಳಗೋದು ನಮ್ಮಿಂದಲೇ
ಹೆಣ್ಣಿಗೆ ಆಸರೆ ನೀಡು ತಾನೇ ಗಂಡು ತಾನೇ ಗೊತ್ತಾಯ್ತೆನೇ
ಗಂಡು : ಗಂಡೆಂಬ ಸಿಡಿ ಗುಂಡಿಗೆ ಅಂಕೆ ಇಲ್ಲಾ ಕಣೆ ಆವೇಶ ಮೈ ತುಂಬಲು ಲಂಕೆ ಸುಟ್ಟಾ ಕಣೇ
ಹೆಣ್ಣು : ಗಂಡಿನ ಕೋತಿ ಬುದ್ದಿಯಾ ತಿದ್ದು ತಾಳೆ ಕಾಪಾಡುತ್ತಾಳೆ ತಾಳುತ್ತಾ ಬಾಳುತ್ತಾಳೆ
ಗಂಡು : ಗಂಡಿಂದ ಜಗವೆಲ್ಲವು ಹುಟ್ಟಿ ಬೆಳೆಯುವುದು
ಹೆಣ್ಣು : ಹೆಣ್ಣೆಂಬ ನೆಲವಿಲ್ಲದೇ ಬೀಜ ಮೊಳೆಯುವುದೇ
ಗಂಡು : ಜನ್ಮದಾತ ಗಂಡು ತಾನೇ
ಹೆಣ್ಣು : ಅಂಥ ಗಂಡನು ಹೆತ್ತು ಸಾಕಿದಾ ತಾಯಿಯೇ ದೈವ ತಾನೇ ಸೃಷ್ಟಿಯೇ ಹೆಣ್ಣು ತಾನೇ
ಹೆಣ್ಣು : ಹೆಣ್ಣಿಂದಲೇ ಎಲ್ಲ ಹೆಣ್ಣಿಂದಲೇ ಈ ಲೋಕ ಬೆಳೆಯೋದು ನಮ್ಮಿಂದಲೇ
ಹೆಣ್ಣಿಂದಲೇ ಎಲ್ಲ ಹೆಣ್ಣಿಂದಲೇ ಈ ಲೋಕ ಬೆಳೆಯೋದು ನಮ್ಮಿಂದಲೇ
ಹೆಣ್ಣಿಲ್ಲದಿದ್ದರೆ ಗಂಡು ತಾನೇ ಹೇಗೆ ತಾನೇ ಬಾಳು ತಾನೇ
-----------------------------------------------------------------------------------------------------
ಬಾರೇ ನನ್ನ ಮುದ್ದಿನ ರಾಣಿ (೧೯೯೦) - ನೀ ಮೈಯ್ಯ ಮುಟ್ಟಿದಾಗ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ : ಮನೋಹರ, ಗಾಯನ : ಕೆ.ಜೆ.ಏಸುದಾಸ್, ಕಸ್ತೂರಿ ಶಂಕರ
ಗಂಡು : ನೀ ಮೈಯ್ಯ ಮುಟ್ಟಿದಾಗ ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ ಅಂಗಲಾಚಿ ಬೇಡಿತು ಇದೇನು ಮೋಹ ಇದೆಂಥ ದಾಹ ತಾಳೇನಾ ಅಬ್ಬಬ್ಬಾ
ಹೆಣ್ಣು : ನೀ ಮೈಯ್ಯ ಮುಟ್ಟಿದಾಗ ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ ಅಂಗಲಾಚಿ ಬೇಡಿತು ಇದೇನು ಮೋಹ ಇದೆಂಥ ದಾಹ ತಾಳೇನಾ ಅಬ್ಬಬ್ಬಾ
ಹೆಣ್ಣು : ರಾಸಾದಾಯಿಯ ಕಬ್ಬಿಣ ಜಲ್ಲೆಯು ನಾ ದಂಡಿಸು ನೀ ನನ್ನಾ ಹಿಂಡಿಸು
ಹೀರೆನ್ನ ಆನೆ ಬಲ ತೋರಿಸಿ ಪ್ರೀತಿಸು ಬಾ
ಗಂಡು : ರಸಬಾಳೆಯೆ ಬಂದಿದೆ ಹೆಣ್ಣಾಗಿ ಮಾವಿದೆ ನಿನ್ನಲ್ಲೇ ಸೇಬಿದೆ ನಿನ್ನಲ್ಲೇ
ದ್ರಾಕ್ಷಿಗಳ ಗೊಂಚಲೇ ನಿಲ್ಲೆ ಚಂಚಲೆ
ಹೆಣ್ಣು : ನೀ ಮೈಯ್ಯ ಮುಟ್ಟಿದಾಗ ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ ಅಂಗಲಾಚಿ ಬೇಡಿತು ಇದೇನು ಮೋಹ ಇದೆಂಥ ದಾಹ ತಾಳೇನಾ ಅಬ್ಬಬ್ಬಾ
ಗಂಡು : ಮಧುಮಂಚದಿ ಮಲ್ಲಿಗೆ ಮೈಯೊಳೇ ರಂಗಿನ ರಂಗೋಲೆ ಎದೆಯಲಿ ಇಟ್ಟೋಳೆ
ಪ್ರೇಮ ಹಬ್ಬ ಮಾಡುವ ಬೇಗನೆ ಬಾ...
ಹೆಣ್ಣು : ನಿನಗಾಗಿ ತನುವು ಹೂವಾಯ್ತು ನಾಚುತ ಕೆಂಪಾಯ್ತು ನಲುಗುತ ಹಣ್ಣಾಯ್ತು
ಲಾಲಿಸುತ್ತ ಜೋಗುಳ ಹಾಡು ನಲ್ಲನೇ
ಗಂಡು : ನೀ ಮೈಯ್ಯ ಮುಟ್ಟಿದಾಗ ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ ಅಂಗಲಾಚಿ ಬೇಡಿತು ಇದೇನು ಮೋಹ ಇದೆಂಥ ದಾಹ ತಾಳೇನಾ ಅಬ್ಬಬ್ಬಾ
ಹೆಣ್ಣು : ನೀ ಮೈಯ್ಯ ಮುಟ್ಟಿದಾಗ ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ ಅಂಗಲಾಚಿ ಬೇಡಿತು ಇದೇನು ಮೋಹ ಇದೆಂಥ ದಾಹ ತಾಳೇನಾ ಅಬ್ಬಬ್ಬಾ
------------------------------------------------------------------------------------------------------
No comments:
Post a Comment