ಪೋಲೀಸ್ ಫೈಲ್ ಚಲನಚಿತ್ರದ ಹಾಡುಗಳು
- ನಾನು ಒಂದು ಕಾದಂಬರಿ
- ಕನಕ ಕನಕ ಓ ಕನಕ
- ಮಿಣುಕು ದೀಪ
- ಚಿರಂಜೀವೀ ಆಗಿ
ಪೋಲೀಸ್ ಫೈಲ್ (೧೯೯೨) - ನಾನು ಒಂದು ಕಾದಂಬರಿ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಚಿತ್ರಾ
ಹೆಣ್ಣು : ನಾನು ಒಂದು ಕಾದಂಬರಿ ಓದು ನನ್ನ ಎತ್ತಿಕೊಂಡು ಓದು ಓದು
ಓದಿ ಆದ ಮೇಲೆ ನೋಡು ನನ್ನ ಜಾದು
ತಳ ತಳ ಹೊದಿಕೆಯೂ ಜುಮ ಜುಮ
ವಿಷಯದ ಮದನ ರಾಜಾ ವಿಳಾಸ ತುಂಬಿದೆ
ಗಂಡು : ಬೇಡ ನಿನ್ನ ಕಾದಂಬರಿ ಸಾಲು ಸಾಲು ಮಾಸಿ ಮಾಸಿ ಖಾಲಿ ಖಾಲಿ
ಕಷ್ಟ ಪಟ್ಟು ಓದಿದರೆ ಪೋಲಿ ಪೋಲಿ ನಿನ್ನ ಜೊತೆ ಆಕಳಿಕೆ ನಿನ್ನ ಕಥೆ ಬೇಸರಿಕೆ
ತಲೆಯ ಕೆಡಿಸುವ ಖಾಲಿ ಹಾಳೆ ತರಲೇ ಪುಸ್ತಕ ನೀನು
ನೀ ಇದಾಳೆ ಬಾಯಿಗೆ ಜೇನು ಹೊರಗೆ ಥಳಕು ಬಳಕು ನೀ ಒಳಗೆ ಹರಕು ಮುರುಕು
ಹೆಣ್ಣು : ಪಾಠ ಕಲಿ ದುಡುಕಬೇಡವೋ ಓದಿಗೆ ಜರಿಯ ಬೇಡವೋ
ರತಿಪುಟ ಓ ರತಿ ಪುಟ ರಸದೂಟ ಪ್ರೇಮ ಸಂಪುಟ ದಯಮಾಡಿ ನೋಡು ಮುಖಪುಟ
ಗಂಡು : ಮನಸ್ಸನೇ ಮಂಗ ಮಾಡುವ ಮೋಸದ ಜಾಹಿರಾತು
ಪುಟ ಪುಟ ವಟ ವಟ ಇಂದು ಒಂದು ರತಿಯ ಪುಸ್ತಕ
ಸರಿ ಬರದು ಇದರ ಜಾತಕ
ಹೆಣ್ಣು : ನಾನು ಒಂದು ಕಾದಂಬರಿ ಓದು ನನ್ನ ಎತ್ತಿಕೊಂಡು ಓದು ಓದು
ಓದಿ ಆದ ಮೇಲೆ ನೋಡು ನನ್ನ ಜಾದು
ಹೆಣ್ಣು : ಹೊಗಳೋ ರಸಿಕನಾಗು ನೀ ಸವಿಯ ಭ್ರಮರನಾಗು
ಮಲಗೋ ಆಸೆ ಮರೆತು ನೀ ಓದು ವಿಷಯ ಕುಳಿತು
ಗಂಡು : ಇರುಳ ಈ ಕಥೆಯ ತೆಗೆದರೆ ಓದಲು ನಾನು ಹೊರಟರೇ
ಶಿವ ಶಿವ ಹೂಂ ಹರ ಹರ ಶಿವರಾತ್ರಿ ಜಾಗರಣೆ ಕಣೆ ನನ್ನ ಮೇಲೆ ಬೇಡ ಶೋಷಣೆ
ಹೆಣ್ಣು : ನವರಸ ತುಂಬಿ ತುಳುಕುವ ಕಚಗುಳಿ ಇಟ್ಟು ನಗಿಸುವ
ನನ್ನ ಈ ಗಂಟವೇ ಶೃಂಗಾರಕ್ಕೊಂದು ಕೈಪಿಡಿ ದಯಮಾಡಿ ಓದು ಮುನ್ನುಡಿ
ನಾನು ಒಂದು ಕಾದಂಬರಿ ಓದು ನನ್ನ ಎತ್ತಿಕೊಂಡು ಓದು ಓದು
ಓದಿ ಆದ ಮೇಲೆ ನೋಡು ನನ್ನ ಜಾದು
ತಳ ತಳ ಹೊದಿಕೆಯೂ ಜುಮ ಜುಮ
ವಿಷಯದ ಮದನ ರಾಜಾ ವಿಳಾಸ ತುಂಬಿದೆ
ಗಂಡು : ಬೇಡ ನಿನ್ನ ಕಾದಂಬರಿ ಸಾಲು ಸಾಲು ಮಾಸಿ ಮಾಸಿ ಖಾಲಿ ಖಾಲಿ
ಕಷ್ಟ ಪಟ್ಟು ಓದಿದರೆ ಪೋಲಿ ಪೋಲಿ ನಿನ್ನ ಜೊತೆ ಆಕಳಿಕೆ ನಿನ್ನ ಕಥೆ ಬೇಸರಿಕೆ
ತಲೆಯ ಕೆಡಿಸುವ ಖಾಲಿ ಹಾಳೆ ತರಲೇ ಪುಸ್ತಕ ನೀನು
ನೀ ಇದಾಳೆ ಬಾಯಿಗೆ ಜೇನು ಹೊರಗೆ ಥಳಕು ಬಳಕು ನೀ ಒಳಗೆ ಹರಕು ಮುರುಕು
-----------------------------------------------------------------------
ಪೋಲೀಸ್ ಫೈಲ್ (೧೯೯೨) - ಕನಕ ಕನಕ ಓ ಕನಕ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ
ಗಂಡು : ಕನಕ ಕನಕಾ ಕನಕ ಕನಕ ಓ ಕನಕ ಬಾರೇ ನನ್ನ ಮನೆತನಕ
ಕನಕ ಕನ ಕನಕ ಹಿಡಿ ನನ್ನ ಧನಕನಕ
ಹೆಣ್ಣು : ಹೇ.. ಮಜನು ಮಜುನು ಈ ಮಜುನು ಸಿನಿಮಾ ಹುಚ್ಚು ಹಿಡಿಸಿದನು
ತಾರೇ ನವತಾರೆ ಎಂದೂ ತಲೆಯ ಕೆಡಿಸಿದನು
ಗಂಡು : ಜಲಪಾತದ ಹೆಣ್ಣು : ಚಂ ಚ ಚಂ
ಗಂಡು : ನೀರಡಿಯಲಿ ಹೆಣ್ಣು : ಚಂ ಚ ಚಂ
ಗಂಡು : ಮಂದಾಕಿನಿ ಹೆಣ್ಣು : ಚಂ ಚ ಚಂ
ಗಂಡು : ಮಿಂದಾಗಿನಿ ಹೆಣ್ಣು : ಚಂ ಚ ಚಂ
ಗಂಡು : ನಾ ತೆಗೆಯುವಾ ಸಿನಿಮಾದಲ್ಲಿ ಹೀರೋಯಿನಿ ನೀನೇ ಗಿಣಿ
ಹೆಣ್ಣು : ಈಜಾಡಲೇ ಗಂಡು : ಚಂ ಚ ಚಂ
ಹೆಣ್ಣು : ಮೈ ಕುಣಿಸಲೇ ಗಂಡು : ಚಂ ಚ ಚಂ
ಹೆಣ್ಣು : ಜಿಗಿದಾಡಲೇ ಗಂಡು : ಚಂ ಚ ಚಂ
ಗಂಡು : ಮುದ್ದಾಡಲೇ ಗಂಡು : ಚಂ ಚ ಚಂ
ಹೆಣ್ಣು : ಸ್ಟಾರಗಲು ಛಾನ್ಸು ಕೊಡಿ ಚಳಿಯಿಲ್ಲದೆ ನಾನು ರೆಡಿ
ಗಂಡು : ಬಾ ನಾಯಕಿ ನೀನೇ ನನ್ನ ರೋಮಾಂಚಕಿ ಹೇಹೇಹೇ
ಹೆಣ್ಣು : ಈ ನಾಯಕೀ ಎಂದು ನಿನ್ನ ಪ್ರಾಣಾ ಸಖೀ ಹೇಹೇಹೇ
ಗಂಡು : ಪ್ರಾಣೇಶ್ವರೀ... ಪ್ರಾಣೇಶ್ವರೀ ಜಾಣೇಶ್ವರಿ ಬಾರೇ ಚಿಗರಿ
ಕನಕ ಕನಕಾ ಕನಕ ಕನಕ ಓ ಕನಕ ಬಾರೇ ನನ್ನ ಮನೆತನಕ
ಕನಕ ಕನ ಕನಕ ಹಿಡಿ ನನ್ನ ಧನಕನಕ
ಹೆಣ್ಣು : ಹೇ.. ಮಜನು ಮಜುನು ಈ ಮಜುನು ಸಿನಿಮಾ ಹುಚ್ಚು ಹಿಡಿಸಿದನು
ತಾರೇ ನವತಾರೆ ಎಂದೂ ತಲೆಯ ಕೆಡಿಸಿದನು
ಗಂಡು : ಆ.. ಮಾಧುರಿ ಹೆಣ್ಣು : ಚಂ ಚ ಚಂ
ಗಂಡು : ಜೂಲಿ ಕಿಮ್ಮಿ ಹೆಣ್ಣು : ಚಂ ಚ ಚಂ
ಗಂಡು : ಜಯ ಭಾರತಿ ಹೆಣ್ಣು : ಚಂ ಚ ಚಂ
ಗಂಡು : ಮೀನಾಕ್ಷಿಯು ಹೆಣ್ಣು : ಚಂ ಚ ಚಂ
ಗಂಡು : ನನ್ನಿಂದಲೇ ಸ್ಟಾರ್ಸ್ ಆದರೂ ನಾ ಬೆಳೆಸಿದ ಹೂವಾದರೂ
ಹೆಣ್ಣು : ಈ ಐಡಿಯಾ ಗಂಡು : ಚಂ ಚ ಚಂ
ಹೆಣ್ಣು : ನೀ ಹೇಳೇನು ಗಂಡು : ಚಂ ಚ ಚಂ
ಹೆಣ್ಣು : ನಾನಾಗುವೆ ಗಂಡು : ಚಂ ಚ ಚಂ
ಹೆಣ್ಣು : ಮಿಸ್ ಇಂಡಿಯಾ ಗಂಡು : ಚಂ ಚ ಚಂ
ಹೆಣ್ಣು : ಟಾಪದರೂ ಟೋಪಾದರು ನೀನೇ ಗತಿ ಕೇಳೋ ಪ್ರಿಯ
ಗಂಡು : ಸ್ಟಾಟ್ ಕ್ಯಾಮೇರಾ ಯಾಕ್ಷನ್ ಯಾಕ್ಷನ್ ಓ ಹೀರೋಯಿನ್ ಹೇಹೇಹೇಹೇ
ಹೆಣ್ಣು : ಓ ಪ್ರಿಯಕರ ವೆಲ್ಡನ್ ವೆಲ್ಡನ್ ಬಾ ಚಾಂಪಿಯನ್ ಹೇಹೇಹೇ
ಗಂಡು : ಬ್ಯೂಟೀಶ್ವರೀ ರೂಪೇಶ್ವರೀ ಕಾಮೇಶ್ವರೀ ಬಾರೇ ಕುವರಿ
ಕನಕ ಕನಕಾ ಕನಕ ಕನಕ ಓ ಕನಕ ಬಾರೇ ನನ್ನ ಮನೆತನಕ
ಕನಕ ಕನ ಕನಕ ಹಿಡಿ ನನ್ನ ಧನಕನಕ
ಹೆಣ್ಣು : ಹೇ.. ಮಜನು ಮಜುನು ಈ ಮಜುನು ಸಿನಿಮಾ ಹುಚ್ಚು ಹಿಡಿಸಿದನು
ತಾರೇ ನವತಾರೆ ಎಂದೂ ತಲೆಯ ಕೆಡಿಸಿದನು
----------------------------------------------------------------------
ಪೋಲೀಸ್ ಫೈಲ್ (೧೯೯೨) - ಮಿಣುಕು ದೀಪ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಲತಾಹಂಸಲೇಖ
ಗಂಡು : ರೂಬಿ ಹೆಣ್ಣು : ಓಓಓಓಓಓಓಓಓ
ಗಂಡು : ರೂಬಿ ಹೆಣ್ಣು : ಓಓಓಓಓಓಓಓಓ
ಹೆಣ್ಣು : ಮಿಣುಕು ದೀಪ ದೀಪ ಮಿನುಗು ರೂಪ ರೂಪ ನೋಡೆಯಾ ನೋಡೆಯಾ ಗೆಳೆಯ
ಗಂಡು : ರೂಬಿ ಹೆಣ್ಣು : ಓಓಓಓಓಓಓಓಓ
ಗಂಡು : ರೂಬಿ ಹೆಣ್ಣು : ಓಓಓಓಓಓಓಓಓ
ಹೆಣ್ಣು : ಆಗಸಕ್ಕೆ ಏಣಿ ಇದ್ದರೇ ಕಾಲು ತಪ್ಪಿ ಬೀಳಬಹುದು
ಮೋಹದಲ್ಲಿ ಸಿಕ್ಕಿ ಬಿದ್ದರೆ ಕಣ್ಣು ಕತ್ತಲಾಗಬಹುದು
ಆಸೆಯನ್ನು ಕುಡಿ ಇತ್ತು ಯಾಕೆ ತೋರುವೆ
ಬಾರೋ ಬಾರೋ ಬಾರೋ ಮುಂದಕ್ಕೆ ಅಂಜಿಯಂತೆ ನಿಂತೇ ಯಾತಕ್ಕೆ
ನನ್ನಲ್ಲಿ ತುಂಬಾ ಹಣ್ಣುಗಳ ಗೋಂಚಲಿದೆಯೋ ಸರಿಸ ಬರದೇಯೋ
ಗಂಡು : ರೂಬಿ ಹೆಣ್ಣು : ಓಓಓಓಓಓಓಓಓ
ಗಂಡು : ರೂಬಿ ಹೆಣ್ಣು : ಓಓಓಓಓಓಓಓಓ
ಹೆಣ್ಣು : ರಾತ್ರಿಯೆಲ್ಲ ಜಾತ್ರೆ ಮಾಡುವಾ ಪ್ರೇಮ ಮೂರ್ತಿ ಪೂಜೆ ಮಾಡುವಾ
ಸ್ವಪ್ನದಲ್ಲಿ ಹಕ್ಕಿ ಬಂದರೂ ಅರ್ಧ ರಾತ್ರಿಗಾಗಿ ಕಾಯುವಾ
ರೋಮಿಯೋ ಆಗು ಪ್ರೇಮಿಯಾಗೋ ಆಸೆ ಬಂದದ್ದು
ಜೀನಿನಂತೇ ಮುತ್ತಿಂದ ಕವನದಂತ ಮುದ್ದು ಮತ್ತಿಂದ
ಕವನದಂತ ಮದ್ದು ಮತ್ತಿಂದ ಅರಳಿದವು
ಬಣ್ಣ ಬಣ್ಣ ಕಂಡು ಕಣ್ಣಲ್ಲೂ ಕಾಮನಬಿಲ್ಲು ಓಓಓಓಓ
ಮಿಣುಕು ದೀಪ ದೀಪ ಮಿನುಗು ರೂಪ ರೂಪ ನೋಡೆಯಾ ನೋಡೆಯಾ ಗೆಳೆಯ
ಗಂಡು : ರೂಬಿ ಹೆಣ್ಣು : ಓಓಓಓಓಓಓಓಓ
ಗಂಡು : ರೂಬಿ ಹೆಣ್ಣು : ಓಓಓಓಓಓಓಓಓ
-----------------------------------------------------------------------
ಪೋಲೀಸ್ ಫೈಲ್ (೧೯೯೨) - ಚಿರಂಜೀವೀ ಆಗಿ
ಸಂಗೀತ ಹಾಗೂ ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ
ಚಿರಂಜೀವಿಯಾಗಿ ಮಹಾರಾಜನಾಗಿ ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು
ಜಗದ ಜಾಣನಾಗಿ ಯುಗದ ಜ್ಞಾನಿಯಾಗಿ ಕಲಿತು ಕಲಿಸಲೆಂದು ಹರಸುವೆ
ದಯದ ದಾಸನಾಗಿ ಶಾಂತಿದೂತನಾಗಿ ಜಯಿಸಿ ಎಂದು ನಾನು ಬಯಸುವೆ
ಈಸಬೇಕು ಇದ್ದು ಇಲ್ಲಿಯೇ ಜಯಿಸಬೇಕಯ್ಯ ಲೋಕವೆಲ್ಲಾ ಮೆಚ್ಚಿ ಹಾಡಲು ತಾಳ ಬೇಕಯ್ಯಾ
ಚಿರಂಜೀವಿಯಾಗಿ ಮಹಾರಾಜನಾಗಿ ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು
ಹಸಿವಿಗಿಲ್ಲ ಕರುಣೆ ಸಾಲಕಿಲ್ಲ ಸಹನೆ ಕರುಣೆ ಸಹನೆ ನಮ್ಮ ಆಸ್ತಿಯು
ಬಡವರಾದರೇನು ಬದುಕ ಬಾರದೇನು ಬರದೇ ನಮಗೆ ಒಳ್ಳೇ ಕಾಲವೂ
ರನ್ನ ಚಿನ್ನದಂತೆ ನಿನ್ನ ನಾ ಸಾಕಿ ಸಲುಹುವೆ
ಬಾಳ ಚಂದ್ರನಂತೆ ನಿತ್ಯ ನೀ ಬೆಳೆದು ಬೆಳಗುವೆ
ಚಿರಂಜೀವಿಯಾಗಿ ಮಹಾರಾಜನಾಗಿ ಬಾಳಬೇಕು ಬಾಳಬೇಕು ನೀನು
ಕಣ್ಣತುಂಬ ನೋಡಬೇಕು ನಾನು
----------------------------------------------------------------------
No comments:
Post a Comment