1865. ಗುಂಡನ ಮದುವೆ (೧೯೯೩)

ಗುಂಡನ ಮದುವೆ ಚಲನಚಿತ್ರದ ಹಾಡುಗಳು 
  1. ಕನ್ನಡ ನಾಡಿನ 
  2. ಅಮ್ಮಮ್ಮ ಬಾರಮ್ಮ 
  3. ಆರಿಗೆ ವಧುವಾದೆ 
  4. ಮದುವೆಮನೇಲಿ ಮದುವಣಗಿತ್ತಿ 
  5. ಆರಿಗೆ ವಧುವಾದೆ (ಹೆಣ್ಣು)
  6. ಸೇವಂತಿಗೆ ಓ ಸೇವಂತಿಗೆ 
ಗುಂಡನ ಮದುವೆ (೧೯೯೩) - ಕನ್ನಡ ನಾಡಿನ 
ಸಂಗೀತ : ವಿ.ಮನೋಹರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ 

ಕನ್ನಡ ನಾಡಿನ ಸುಂದರ ಹಸಿರನು ಎಂದಿಗೂ ಬೆಳೆಸುವ ನಾವು 
ಶ್ರೀಗಂಧ ನಾಡಿನ ಹೆಮ್ಮೆಯ ಹೆಸರನು ಎಂದಿಗೂ ಉಳಿಸುವ ನಾವು 
ಗಿಡಗಳ ಬೆಳೆದರೆ ಪರಿಸರ ಉಳಿದರೆ ನಾಡಲಿ ಎಂದೂ ನಲಿವು 
(ಗಿಡವೇ ದೇವರ ಗುಡಿಯು ಗಿಡವೇ ದೇವಾ ನಿಧಿಯು 
ಗಿಡವೇ ನಾಡಿನ ಸಂಪತ್ತು ಗಿಡವನು ಕಡಿದರೇ ಆಪತ್ತೂ )
ಕನ್ನಡ ನಾಡಿನ ಸುಂದರ ಹಸಿರನು ಎಂದಿಗೂ ಬೆಳೆಸುವ ನಾವು 
ಶ್ರೀಗಂಧ ನಾಡಿನ ಹೆಮ್ಮೆಯ ಹೆಸರನು ಎಂದಿಗೂ ಉಳಿಸುವ ನಾವು 
ಗಿಡಗಳ ಬೆಳೆದರೆ ಪರಿಸರ ಉಳಿದರೆ ನಾಡಲಿ ಎಂದೂ ನಲಿವು 

ಶಾಂತ ಲಕ್ಷ್ಮಿಯ ಗಿಡವನು ನೆಟ್ಟರೆ ಮನೆಯಲಿ ಶಾಂತಿಯು ನೆಲೆಸುವುದು 
ಕಲ್ಯಾಣ ಲಕ್ಷ್ಮಿಯ ಗಿಡ ಏರಡಿದ್ದರೇ ಮಂಗಳ ಕಾರ್ಯವು ನಡೆಯುವುದು 
ಧಾನ್ಯ ಲಕ್ಷ್ಮಿಯ ಗಿಡಗಳ ಬೆಳೆದರೆ ಅನ್ನಕೆ ಕೊರತೆಯು ಇಲ್ಲ 
ಜ್ಞಾನ ಲಕ್ಷ್ಮಿಗೆ ನೀರನು ಹಾಕದೆ ವಿದ್ಯೆಯು ದಕ್ಕುವುದಿಲ್ಲ 
ಜಲ ಲಕ್ಷ್ಮಿಯ ಪೂಜೆಯಾ ಮಾಡಲು ಒಲಿದಳು ಕಾವೇರಿ 
ಧನ ಲಕ್ಷ್ಮಿಯ ಗಿಡವನು ನೆಟ್ಟರೆ ಕೊಡುವಳು ಎಲ್ಲ ಸಿರಿ 
(ಪಾರಿಜಾತ ಮಳೆ ಇತ್ತು ಹೊಲಸಲಿ ಹೊನ್ನಿನ ಬೆಳೆ ಇತ್ತು 
ನದಿಗಳು ತುಂಬಿ ಹರಿದಿತ್ತು ಕಣಜವು ತುಂಬಿ ತುಳುಕಿತ್ತು 
ಕನ್ನಡ ನಾಡಿನ ಸುಂದರ ಹಸಿರನು ಎಂದಿಗೂ ಬೆಳೆಸುವ ನಾವು 
ಶ್ರೀಗಂಧ ನಾಡಿನ ಹೆಮ್ಮೆಯ ಹೆಸರನು ಎಂದಿಗೂ ಉಳಿಸುವ ನಾವು 
ಗಿಡಗಳ ಬೆಳೆದರೆ ಪರಿಸರ ಉಳಿದರೆ ನಾಡಲಿ ಎಂದೂ ನಲಿವು 

ಗಾಂಧೀ ತಾತನ ಗಿಡಗಳ ನೆಟ್ಟರೆ ದೇಶ ಪ್ರೇಮವೂ ಹೆಚ್ಚುವುದು 
ಕುವೆಂಪು ಕಾರಂತರ ಗಿಡ ಹಚ್ಚಿದರೇ ಕನ್ನಡ ಕೆಚ್ಚದು ಉಕ್ಕುವುದು 
ರಾಜಕುಮಾರರ ವರನಟ ರಾಜಕುಮಾರರ ಗಿಡ ನೆಟ್ಟರೇ ಇಂದಿಗೂ ನಂಬರ್ ಒಂದೇ.. 
ಶ್ರೀದೇವಿಯ ಈ ಗಿಡವನು ಕೊಳ್ಳಿರಿ ಸುಂದರಿ ಬರುವಳು ಹಿಂದೆ 
ವಿಶ್ವೇಶ್ವರಯ್ಯ ಗಿಡವನು ನೆಟ್ಟರೇ ಶತಾಯುಷಿ ನೀವಾಗುವಿರಿ 
ಅವರ ಹಾಗೆಯೆ ಸಾಧನೆ ಮಾಡುತ ಶಾಶ್ವತ ಹೆಸರನು ಪಡೆಯುವಿರಿ 
ಹಚ್ಚಿ ಹಸುರಿನ ಮರವು ಹಕ್ಕಿಯ ಇಂಚರ ಸ್ವರವು ಸೇರಿಕೊಂಡಿದೆ ನೋಡಿ 
ಕಾಡನು ಕಡೆಯಲೇ ಬೇಡಿ..... 
ಕನ್ನಡ ನಾಡಿನ ಸುಂದರ ಹಸಿರನು ಎಂದಿಗೂ ಬೆಳೆಸುವ ನಾವು 
ಶ್ರೀಗಂಧ ನಾಡಿನ ಹೆಮ್ಮೆಯ ಹೆಸರನು ಎಂದಿಗೂ ಉಳಿಸುವ ನಾವು 
ಗಿಡಗಳ ಬೆಳೆದರೆ ಪರಿಸರ ಉಳಿದರೆ ನಾಡಲಿ ಎಂದೂ ನಲಿವು 
-----------------------------------------------------------------------------------------
 
ಗುಂಡನ ಮದುವೆ (೧೯೯೩) - ಅಮ್ಮಮ್ಮ ಬಾರಮ್ಮ 
ಸಂಗೀತ : ವಿ.ಮನೋಹರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ 

ಅಮ್ಮಮ್ಮ ಬಾರಮ್ಮ ಬಾರೇ ಗೌರಮ್ಮ ನಿನ್ನಂಥ ಸುಂದರಿಯೇ ಎಲ್ಲೂ ಇಲ್ಲಮ್ಮಾ 
ಜ್ಯೂಲೀ ಕಣ್ಣಿನಾ ಚೈತ್ರದ ಮೂಗಿನಾ ಮಾಧುರಿ ಮೈಯ್ಯಿನಾ ಶ್ರೀದೇವಿ ತೋಳಿನ 
ಪೂನಂ ಸೋನಂ ನೀಲಂ ಶಬನಮ್ ಎಲ್ಲ ನೀನಮ್ಮಾ 
ಮೀನಾ ರೀನಾ ನೀನಾ ಲೀನಾ ನೀನೇ ವೆಂಕಮ್ಮಾ 
ಅಮ್ಮಮ್ಮ ಬಾರಮ್ಮ ಬಾರೇ ಗೌರಮ್ಮ ನಿನ್ನಂಥ ಸುಂದರಿಯೇ ಎಲ್ಲೂ ಇಲ್ಲಮ್ಮಾ 
ಜ್ಯೂಲೀ ಕಣ್ಣಿನಾ ಚೈತ್ರದ ಮೂಗಿನಾ ಮಾಧುರಿ ಮೈಯ್ಯಿನಾ ಶ್ರೀದೇವಿ ತೋಳಿನ 
ಪೂನಂ ಸೋನಂ ನೀಲಂ ಶಬನಮ್ ಎಲ್ಲ ನೀನಮ್ಮಾ 
ಮೀನಾ ರೀನಾ ನೀನಾ ಲೀನಾ ನೀನೇ ವೆಂಕಮ್ಮಾ 

ಅರೆರೇ ಪಕ್ಕದಿಂದ ನೋಡಿದ್ರೇ ಹೇಮಮಾಲಿನಿ ತಕ್ಕದಿಂಧಿಮ್ ಕುಣಿಯುತ್ತಿದೆ ಜಯಮಾಲಿನಿ 
ಸಂಗೀತ ಬಳುಕಾಟ ಮೀನಾಕ್ಷಿ ಕುಲಕಾಟ ಮೇನಕಾಳ ಮಾಟ ನಿಂಗಮ್ಮಾ 
ಅರೆರೇ ಪಕ್ಕದಿಂದ ನೋಡಿದ್ರೇ ಹೇಮಮಾಲಿನಿ ತಕ್ಕದಿಂಧಿಮ್ ಕುಣಿಯುತ್ತಿದೆ ಜಯಮಾಲಿನಿ 
ಸಂಗೀತ ಬಳುಕಾಟ ಮೀನಾಕ್ಷಿ ಕುಲಕಾಟ ಮೇನಕಾಳ ಮಾಟ ನಿಂಗಮ್ಮಾ 
ಒಮ್ಮೇ ರೇಖಾ ಒಮ್ಮೇ ರಾಖೀ ಒಮ್ಮೇ ರೂಪಿಣೀ ಒಮ್ಮೇ ಗೀತಾ 
ಒಮ್ಮೆ ಸೀತಾ ಒಮ್ಮೆ ರೋಹಿಣಿ ನೀ ಸೂಪರ್ ಸ್ಟಾರಮ್ಮಾ ನಾ ನಿನ್ನ ಫ್ಯಾನಮ್ಮಾ 
ನೀನು ಇಲ್ಲ ಲೈಫು ಬೋರಮ್ಮಾ ... ನೀನು ಇಲ್ಲ ಲೈಫು ಬೋರಮ್ಮಾ 
ಅಮ್ಮಮ್ಮ ಬಾರಮ್ಮ ಬಾರೇ ಗೌರಮ್ಮ ನಿನ್ನಂಥ ಸುಂದರಿಯೇ ಎಲ್ಲೂ ಇಲ್ಲಮ್ಮಾ 
ಜ್ಯೂಲೀ ಕಣ್ಣಿನಾ ಚೈತ್ರದ ಮೂಗಿನಾ ಮಾಧುರಿ ಮೈಯ್ಯಿನಾ ಶ್ರೀದೇವಿ ತೋಳಿನ 
ಭವ್ಯ ಕಾವ್ಯ ದಿವ್ಯ ತಾರೇ ಎಲ್ಲ ನೀನಮ್ಮಾ 
ರೂಪ ದೀಪ ಮಾಲಾ ಶೀಲಾ ನೀನೇ ವೆಂಕಮ್ಮಾ 

ಚಿಕ್ಕದೊಂದು ಚುಕ್ಕೆ ಇಟ್ಟರೇ ನೀನೇ ಶೋಭನಾ ಪಕ್ಕನೆಂದು ನಕ್ಕುಬಿಟ್ರೇ ನೀನೇ ರವೀನಾ 
ಭಾಗ್ಯಶ್ರೀ ಸೌಮ್ಯಶ್ರೀ ವಿದ್ಯಾಶ್ರೀ ಭವ್ಯಶ್ರೀ ರೂಪಶ್ರೀಯ ಸ್ಟೈಲು ನಿಂದಮ್ಮಾ 
ಒಮ್ಮೆ ಡಿಂಪಲ್ ಒಮ್ಮೆ ಕಾಜಲ್ ಒಮ್ಮೆ ಖುಶಬು ಒಮ್ಮೆ ಪೂಜಾ ಒಮ್ಮೆ ಶಿಲ್ಪಾ 
ಪ್ರಿಯಾಂಕ್ ನಸೀಬು ನೀ ಸೂಪರ್ ಸ್ಟಾರಮ್ಮಾ ನಾ ನಿನ್ನ ಫ್ಯಾನಮ್ಮ 
ನೀ ಇಲ್ಲದ ಲೈಫು ಬೋರಮ್ಮಾ.. ನೀ ಇಲ್ಲದ ಲೈಫು ಬೋರಮ್ಮಾ.. 
ಅಮ್ಮಮ್ಮ ಬಾರಮ್ಮ ಬಾರೇ ಗೌರಮ್ಮ ನಿನ್ನಂಥ ಸುಂದರಿಯೇ ಎಲ್ಲೂ ಇಲ್ಲಮ್ಮಾ 
ಜ್ಯೂಲೀ ಕಣ್ಣಿನಾ ಚೈತ್ರದ ಮೂಗಿನಾ ಮಾಧುರಿ ಮೈಯ್ಯಿನಾ ಶ್ರೀದೇವಿ ತೋಳಿನ 
ರಮ್ಯಾ ಸೌಮ್ಯ ಲಕ್ಷ್ಮಿ ರಾಧಾ ಎಲ್ಲ ನೀನಮ್ಮಾ 
ಅಂಜು ಮಂಜು ರೋಜಾಶ್ರೀ ನೀನೇ ವೆಂಕಮ್ಮಾ 
----------------------------------------------------------------------------------------
 
ಗುಂಡನ ಮದುವೆ (೧೯೯೩) - ಆರಿಗೆ ವಧುವಾದೆ 
ಸಂಗೀತ : ವಿ.ಮನೋಹರ, ಸಾಹಿತ್ಯ : ಪುರಂದರದಾಸರು, ಗಾಯನ : ಎಸ್.ಪಿ.ಬಿ 

(ಆಆಆಅ.. ಆಆಆಅ)
ಆಆಆಅ.. ಆಆಆಅ.... ಆರಿಗೆ ವಧುವಾದೇ ... 
ಆರಿಗೆ ವಧುವಾದೆ ಅಂಬುಜಾಕ್ಷಿ ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ
ಆರಿಗೆ ವಧುವಾದೆ ಅಂಬುಜಾಕ್ಷಿ  ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ
ಆರಿಗೆ ವಧುವಾದೆ ಅಂಬುಜಾಕ್ಷಿ  

ಶರಧಿಬಂಧನ ರಾಮಚಂದ್ರ ಮೂರುತಿಗೋ
ಪರಮಾತ್ಮ ಸಿರಿ ಅನಂತಪದ್ಮನಾಭನಿಗೋ
ಸರಸಿಜನಾಭ ಜನಾರ್ದನ ಮೂರುತಿಗೋ
ಸರಸಿಜನಾಭ ಜನಾರ್ದನ ಮೂರುತಿಗೋ
ಎರಡು ಹೊಳೆಯ ರಂಗಪಟ್ಟಣವಾಸಗೋ
ಆರಿಗೆ ವಧುವಾದೇ ... 

ಚೆಲುವ ಬೇಲೂರ ಚೆನ್ನಿಗರಾಯನಿಗೋ
ಕೆಳದಿ ಹೇಳುಡುಪಿಯ ಕೃಷ್ಣರಾಯನಿಗೋ
ಇಳೆಯೊಳು ಪಂಡರಾಪುರ ವಿಠಲೇಶನಿಗೋ
ಇಳೆಯೊಳು ಪಂಡರಾಪುರ ವಿಠಲೇಶನಿಗೋ
ನಳಿನಾಕ್ಷಿ ಹೇಳು ಬದರಿ ನಾರಯಣಲೋ 
ಆರಿಗೆ ವಧುವಾದೇ ... 
ಪಮಪಮಗರಿಸ ನಿರಗರಿ ಗಮಪ ಮದನಿಸ ನಿದನಿ ನಿರದರಿ ಸನಿಸ 
ಪಮಪಮಗರಿಸ ನಿರಗರಿ ಗಮಪ ಮದನಿಸ ನಿದನಿ ನಿರದರಿ ಸನಿಸ ... ಆಆಆ  

ಮಲಯಜಗಂಧಿ ಬಿಂದುಮಾಧವ ರಾಯಗೋ
ಸುಲಭದ ವರ ಪುರುಷೋತ್ತಮನಿಗೋ
ಫಲದಾಯಕ ನಿತ್ಯ ಮಂಗಳನಾಯಕಗೋ
ಫಲದಾಯಕ ನಿತ್ಯ ಮಂಗಳನಾಯಕಗೋ
ಚೆಲುವೆ ನಾಚದೆ ಕೇಳು ಶ್ರೀವೆಂಕಟೇಶನಿಗೋ
ಆರಿಗೆ ವಧುವಾದೆ ಅಂಬುಜಾಕ್ಷಿ...   

ಶರಣಾಗತರ ಪೊರೆವ ಸಾರಂಗಪಾಣಿಗೋ
ವರಗಳನೀವ ಆ ಶ್ರೀನಿವಾಸಮೂರುತಿಗೋ
ಕುರುಕುಲಾಂತಕ ರಾಜಗೊಪಾಲ ಮೂರುತಿಗೋ
ಕುರುಕುಲಾಂತಕ ರಾಜಗೊಪಾಲ ಮೂರುತಿಗೋ
ಸ್ಥಿರವಾದ ಪುರಂದರವಿಠಲರಾಯನಿಗೋ
ಆರಿಗೆ ವಧುವಾದೆ ಅಂಬುಜಾಕ್ಷಿ  ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ
ಆರಿಗೆ ವಧುವಾದೇ..   
ಸಾ ಸನಿದನಿ ಗರಿಸನಿ ದನಿದಪ  ದಪಮ ಮದನಿಸ 
ನಿಸನಿದಪಮ ಗಮಗಮ ಗಮಗಮ ಗಪದನಿ ದನಿಸ 
ಆರಿಗೆ ವಧುವಾದೆ ಅಂಬುಜಾಕ್ಷಿ  ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ
ಆರಿಗೆ ವಧುವಾದೇ ಅಂಬುಜಾಕ್ಷಿ 
ಆರಿಗೆ ವಧುವಾದೇ.... ಆರಿಗೆ ವಧುವಾದೇ.... 
ಆರಿಗೆ ವಧುವಾದೇ.... ಅಂಬುಜಾಕ್ಷಿ... 
----------------------------------------------------------------------------------------
 
ಗುಂಡನ ಮದುವೆ (೧೯೯೩) - ಮದುವೆಮನೇಲಿ ಮದುವಣಗಿತ್ತಿ 
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ , ಗಾಯನ : ಜಗ್ಗೇಶ, ಮಂಜುಳಗುರುರಾಜ 

ಗಂಡು : ಮಧುವನದಲ್ಲಿ ಪಾತರಗಿತ್ತಿ ಮದುವೆ ಮನೇಲಿ ಮಧುವಣಗಿತ್ತಿ 
            ಮಧುವನದಲ್ಲಿ ಪಾತರಗಿತ್ತಿ ಮದುವೆ ಮನೇಲಿ ಮಧುವಣಗಿತ್ತಿ 
            ಈ ಲೋಕದಲ್ಲೇ ನೀನು ಬಿನ್ನಾಣಗಿತ್ತಿ 
            ಈ ಲೋಕದಲ್ಲೇ ನೀನು ಬಿನ್ನಾಣಗಿತ್ತಿ 
ಹೆಣ್ಣು : ಮದುವೆ ಮನೇಲಿ ಮಧುವಣಗಿತ್ತಿ ಮಧುವನದಲ್ಲಿ ಪಾತರಗಿತ್ತಿ 
          ಬಿನ್ನಾಣಗಾರ ಮನಸ ಕದ್ದಂತ ಚೋರ 
          ಬಿನ್ನಾಣಗಾರ ಮನಸ ಕದ್ದಂತ ಚೋರ 

ಗಂಡು : ಹಿಂದಿನ ಪೀಳಿಗೆ ಜನರೆಲ್ಲ ಲೈಲಾ ಮಜನೂ ನೆನೆದಂತೇ 
ಹೆಣ್ಣು : ಮುಂದಿನ ಪೀಳಿಗೆ ಜನಕೆಲ್ಲ ಪ್ರೇಮಕೆ ಸ್ಫೂರ್ತಿಯೂ ನಾವಂತೇ 
ಗಂಡು : ಹಿಂದಿನ ಪೀಳಿಗೆ ಜನರೆಲ್ಲ ಲೈಲಾ ಮಜನೂ ನೆನೆದಂತೇ 
ಹೆಣ್ಣು : ಮುಂದಿನ ಪೀಳಿಗೆ ಜನಕೆಲ್ಲ ಪ್ರೇಮಕೆ ಸ್ಫೂರ್ತಿಯೂ ನಾವಂತೇ 
ಗಂಡು :  ಬಾನಿನ ಚಪ್ಪರ ಬೀಳಲ್ಲ ತಿರುಗುವ ಭೂಮಿಯು ನಿಲ್ಲಲ್ಲ 
             ಸಾಗರ ವೇಗವದು ಬತ್ತಲ್ಲ ಪ್ರೇಮಕೆ ಎಂದಿಗೂ ಸೋಲಿಲ್ಲ 
            ಮಧುವನದಲ್ಲಿ ಪಾತರಗಿತ್ತಿ ಮದುವೆ ಮನೇಲಿ ಮಧುವಣಗಿತ್ತಿ 
            ಈ ಲೋಕದಲ್ಲೇ ನೀನು ಬಿನ್ನಾಣಗಿತ್ತಿ 
 
ಹೆಣ್ಣು : ಚೊಚ್ಚಲ ಬಸುರಿಯು ನಾನಯ್ಯಾ ಮಕ್ಕಳು ಎಷ್ಟು ಬೇಕಯ್ಯಾ 
ಗಂಡು : ಒಂದೇ ಮಗುವು ಸಾಕಮ್ಮಾ ಕುಟುಂಬ ಯೋಜನೆ ಬೇಕಮ್ಮಾ 
           ಗುಂಡನ ಮದುವೆಯು ನಡೆದೋಯ್ತು ಗುಂಡನ ಲೀಲೆಯು ಶುರುವಾಯ್ತು 
ಹೆಣ್ಣು : ಅತ್ತೆಯ ಮುದ್ದಿನ ಸೊಸೆಯಾಗು ಗಂಡನ ಮನೆಗೆ ಬೆಳಕಾಗು 
          ಮದುವೆ ಮನೇಲಿ ಮಧುವಣಗಿತ್ತಿ ಮಧುವನದಲ್ಲಿ ಪಾತರಗಿತ್ತಿ 
          ಬಿನ್ನಾಣಗಾರ ಮನಸ ಕದ್ದಂತ ಚೋರ 
ಗಂಡು : ಮಧುವನದಲ್ಲಿ ಪಾತರಗಿತ್ತಿ ಮದುವೆ ಮನೇಲಿ ಮಧುವಣಗಿತ್ತಿ 
           ಈ ಲೋಕದಲ್ಲೇ ನೀನು ಬಿನ್ನಾಣಗಿತ್ತಿ 
-----------------------------------------------------------------------------------------
 
ಗುಂಡನ ಮದುವೆ (೧೯೯೩) - ಆರಿಗೆ ವಧುವಾದೆ (ಹೆಣ್ಣು)
ಸಂಗೀತ : ವಿ.ಮನೋಹರ, ಸಾಹಿತ್ಯ : ಪುರಂದರದಾಸರು , ಗಾಯನ : ಮಂಜುಳಗುರುರಾಜ 

ಆಆಆಅ.. ಆಆಆಅ... ಆಆಆಅ.. ಆಆಆಅ.... ಆರಿಗೆ ವಧುವಾದೇ ... 
ಆರಿಗೆ ವಧುವಾದೆ ಅಂಬುಜಾಕ್ಷಿ ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ
ಆರಿಗೆ ವಧುವಾದೆ ಅಂಬುಜಾಕ್ಷಿ  ಕ್ಷೀರಾಬ್ಧಿಕನ್ನಿಕೆ ಶ್ರೀ ಮಹಾಲಕುಮಿ
ಆರಿಗೆ ವಧುವಾದೆ ಅಂಬುಜಾಕ್ಷಿ....   

ಶರಧಿಬಂಧನ ರಾಮಚಂದ್ರ ಮೂರುತಿಗೋ
ಪರಮಾತ್ಮ ಸಿರಿ ಅನಂತಪದ್ಮನಾಭನಿಗೋ
ಸರಸಿಜನಾಭ ಜನಾರ್ದನ ಮೂರುತಿಗೋ
ಸರಸಿಜನಾಭ ಜನಾರ್ದನ ಮೂರುತಿಗೋ
ಎರಡು ಹೊಳೆಯ ರಂಗಪಟ್ಟಣವಾಸಗೋ
ಆರಿಗೆ ವಧುವಾದೇ ... 

ಚೆಲುವ ಬೇಲೂರ ಚೆನ್ನಿಗರಾಯನಿಗೋ
ಕೆಳದಿ ಹೇಳುಡುಪಿಯ ಕೃಷ್ಣರಾಯನಿಗೋ
ಇಳೆಯೊಳು ಪಂಡರಾಪುರ ವಿಠಲೇಶನಿಗೋ
ಇಳೆಯೊಳು ಪಂಡರಾಪುರ ವಿಠಲೇಶನಿಗೋ
ನಳಿನಾಕ್ಷಿ ಹೇಳು ಬದರಿ ನಾರಯಣಲೋ 
ಆರಿಗೆ ವಧುವಾದೇ ... 
-----------------------------------------------------------------------------------------
 
ಗುಂಡನ ಮದುವೆ (೧೯೯೩) - ಸೇವಂತಿಗೆ ಓ ಸೇವಂತಿಗೆ 
ಸಂಗೀತ : ವಿ.ಮನೋಹರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ  

ಗಂಡು : ಸೇವಂತಿಗೆ ಓ ಸೇವಂತಿಗೆ 
            ಸೇವಂತಿಗೆ ಓ ಸೇವಂತಿಗೆ ಸೊಸೆಯಾಗಿ ನಮ್ಮಮ್ಮನಿಗೆ 
            ಜೊತೆಯಾಗಿ ಬಾ ಬಾ ನಮ್ಮ ಮನೆಗೆ 
            ಪ್ರೇಮ ಪಾತ್ರವಾಗು ನನ್ನ ಬಾಳ ಸೂತ್ರವಾಗು 
            ನನಗೆ ಮಾತ್ರವಾಗು ಓ ಚಿನ್ನ ಮುನ್ನ ಚಿನ್ನಮುನ್ನ 
ಹೆಣ್ಣು : ಸೇವಂತಿಗೆ ನಾ ಸೇವಂತಿಗೆ ವಧುವಾಗಿ ಬರುವೆ ನಾ ನಿನ್ನೆದೆಗೆ 
          ಮಧುವಾಗಿ ಬರುವೆ ನಾ ನಿನ್ನೆದೆಗೆ 
          ಪ್ರೇಮ ಪಾತ್ರವಾಗು  ನನ್ನಾ ಬಾಳ ಸೂತ್ರವಾಗು 
          ನನಗೆ ಮಾತ್ರವಾಗು ಓ ಚಿನ್ನ ಮುನ್ನ ಚಿನ್ನ ಮುನ್ನ 
ಗಂಡು : ಸೇವಂತಿಗೆ ಓ ಸೇವಂತಿಗೆ ಸೊಸೆಯಾಗಿ ನಮ್ಮಮ್ಮನಿಗೆ 

ಗಂಡು : ನಮ್ಮ ಮನೆಗೆ ತಕ್ಕವಳು ನೀನೇ ಕಣೆ ಹುಡುಗಿ 
            ಇಷ್ಟು ದಿನ ಬಳಲಿದೆ ನಿನ್ನಂಥವಳ ಹುಡುಕಿ 
ಹೆಣ್ಣು : ಜನ್ಮಗಳ ಕಡತದಲಿ ಕರೆದರೇನೇ ಯೋಗ 
          ಯಾವ ಅನ್ನದಗುಳಿನಲಿ ಯಾರ ಋಣದ ಭಾಗ 
ಗಂಡು : ಜನುಮದ ಬಂಧ ನಮಗಿರುವುದರಿಂದ ಪರಿಚಯವಾಯ್ತು 
           ಓ ಚಿನ್ನ ಮುನ್ನ ಚಿನ್ನ ಮುನ್ನ 
          ಸೇವಂತಿಗೆ ಓ ಸೇವಂತಿಗೆ ಸೊಸೆಯಾಗಿ ನಮ್ಮಮ್ಮನಿಗೆ 

ಹೆಣ್ಣು : ಸಕಲ ಕಲಾ ವಲ್ಲಭನೇ ನವರಸ ನಾಯಕನೇ 
          ನನ್ನದೆಯ ರಾಜ್ಯವನು ಆಳುವ ಅರಸ ನೀನೇ 
ಗಂಡು : ಅಂದವನು ಕೊಟ್ಟಿರುವ ದೇವರಿಗೆ ನಮಿಸು 
           ಚಂದನದೆ ಚಂದ್ರಿಕೆಯೇ ನನ್ನನ್ನು ನೀ ವರಿಸು 
ಹೆಣ್ಣು : ಪ್ರೀತಿಯ ಕನಸನಾ ಮಾಲೆಯಾ ಮಾಡಿ ತೊಡಿಸುವೆ ನಿಮಗೆ  
            ಓ ಚಿನ್ನ ಮುನ್ನ ಚಿನ್ನ ಮುನ್ನ ಸೇವಂತಿಗೆ ನಾ ಸೇವಂತಿಗೆ 
           ವಧುವಾಗಿ ಬರುವೆ ನಾ ನಿನ್ನೆದೆಗೆ ಮಧುವಾಗಿ ಬರುವೆ ನಾ ನಿನ್ನೆದೆಗೆ     
          ಪ್ರೇಮ ಪಾತ್ರವಾಗು  ನನ್ನಾ ಬಾಳ ಸೂತ್ರವಾಗು 
          ನನಗೆ ಮಾತ್ರವಾಗು ಓ ಚಿನ್ನ ಮುನ್ನ ಚಿನ್ನ ಮುನ್ನ
ಗಂಡು : ಸೇವಂತಿಗೆ ಓ ಸೇವಂತಿಗೆ 
            ಸೇವಂತಿಗೆ ಓ ಸೇವಂತಿಗೆ ಸೊಸೆಯಾಗಿ ನಮ್ಮಮ್ಮನಿಗೆ 
            ಜೊತೆಯಾಗಿ ಬಾ ಬಾ ನಮ್ಮ ಮನೆಗೆ 
            ಪ್ರೇಮ ಪಾತ್ರವಾಗು ನನ್ನ ಬಾಳ ಸೂತ್ರವಾಗು 
            ನನಗೆ ಮಾತ್ರವಾಗು ಓ ಚಿನ್ನ ಮುನ್ನ ಚಿನ್ನಮುನ್ನ 
----------------------------------------------------------------------------------------

No comments:

Post a Comment