1866. ತರ್ಲೆ ನನ್ಮಗ (೧೯೯೨)


ತರ್ಲೆ ನನ್ಮಗ ಚಲನಚಿತ್ರದ ಹಾಡುಗಳು 
  1. ಸಂಗೀತ ಕಲಿಸಿ ಕೋಡಿ 
  2. ನಿನ್ನ ಜಾಡಿಸಿ ಒದಿತೀನಿ 
  3. ಹಿಂಗ್ಯಾಕೇ ನೀ ನೋಡುತೀ 
  4. ಡಗಾರ್ ಡಗಾರ್ ದಂ ದಂ ಡಗಾರ್ ಡಗಾರ್ 
ತರ್ಲೆ ನನ್ಮಗ (೧೯೯೨) - ಸಂಗೀತ ಕಲಿಸಿ ಕೋಡಿ 
ಸಂಗೀತ : ವಿ.ಮನೋಹರ, ಸಾಹಿತ್ಯ : ಉಪೇಂದ್ರ, ಗಾಯನ : ಎಲ್.ಏನ್.ಶಾಸ್ತ್ರೀ, ಉಪೇಂದ್ರ, ಚಂದ್ರಿಕಾ 

ಗಂಡು : ಓಹೋ...  ಸಂತೋಷ ಏನಪ್ಪಾ ವಿಷಯ... 
           ಸಂಗೀತ ಕಲಿಸಿ ಕೊಡಿ ಸಂಗೀತಾ 
           ಬಾ ಅಪ್ಪ ಬಾ 
           ಸಂಗೀತ ಕಲಿಸಿ ಕೊಡಿ ಸಂಗೀತಾ 
           ಸಂಗೀತ ಕಲಿಸಿ ಕೊಡಿ ಸಂಗೀತಾ 
           ಮಾವನೇ ನಿಮ್ಮ ಸಂಗೀತವನ್ನು ಧಾರೆಯೆರೆಯಿರಿ ಮಾವನಾ 
           ಸಂಗೀತ ಕಲೆಗೆ ನೀವೇ ತಂದೆ ನಾನೇ ಅಳಿಯನು (ಹಾಗಾ) 
           ಸಂಗೀತ ಕಲಿಸಿ ಕೊಡಿ ಸಂಗೀತಾ ಹಲೋ ಶಂಕರ ಶಾಸ್ತ್ರೀ 
ಕೋರಸ್ : ಹಲೋ ... ಶಂಕರ ಶಾಸ್ತ್ರೀ ಹೌ ಆರ್ ಯೂ ಮ್ಯೂಸಿಕ್ 
                ಮೇಸ್ತ್ರಿ ಪಿಟೀಲು ಕುಯ್ಯೋ ಡಬ್ಬಾ ಶಾಸ್ತ್ರಿ ನೀನು 
                ಛತ್ರಿ ನಿಂಗೆ ಒಬ್ಬಳು ಪುತ್ರಿ ನಿನ್ನ ಫ್ಯಾಮಿಲಿ ವಿಷಯ ಎಲ್ಲಾ ಗೋತ್ರಿ ಒಹೋ ಶಾಸ್ತ್ರೀ 
ಗಂಡು : ಇದೇನು ಸಭ್ಯತೆ ಇದೇನು ಸಂಸ್ಕೃತಿ 
            ನಮ್ಮ ಗುರುವು ಬಾಯಿ ಬಿಟ್ಟರೆ ಆ ಎಸ್ಪಿ.. ಬಾಯಿ ಮುಚ್ಚುತ್ತವೆ 
            ಕತ್ತೆ ಗೂಬೆಗಳು ಕೋಗಿಲೆಗೆ ಸಾಟಿಯೇ... 
ಕೋರಸ್ : ಆಹಾ ಬಂಗಾರ ಕಾಣೆ ನಮ್ಮ ಸಂತೋಷ  
ಹೆಣ್ಣು : ನಂಗೂ ಅವರನ್ನು ಕಂಡರೆ ತುಂಬಾ ಸಂತೋಷ 
          ನಂಗೂ ಅವರನ್ನು ಕಂಡರೆ ತುಂಬಾ ಸಂತೋಷ 
ಕೋರಸ್ : ಸಂಗೀತಾ ಅವಳ ಸ್ವರ ಸಂಗೀತ 
ಗಂಡು : ಡ್ಯಾಡಿ ಮಮ್ಮಿ ಟಚ್ಚಿಂಗ್ ಟಚ್ಚಿಂಗ್ ಟಚ್ಚಿಂಗ್ ಹೊರಟು 
ಹೆಣ್ಣು : ಅಪ್ಪ ಬರುವ ತನಕ ಸ್ವಲ್ಪ ಕಾಯುತ್ತೀರಾ  
          ಕಾಫಿ ಟೀ ಹಾಲು ಜ್ಯೂಸು ಏನು ಕುಡಿತ್ತೀರಾ 
ಗಂಡು : ಆಹಾ ಆಹಾ ಕೊಡಿ ಕೀಯ್ ಕೀಯ್ ಗಾಡ್ ರ್ರೇಜ್ ಕೀಯ್ 
           ಕೀಯ್ ಕೀಯ್ ಬೀರು ಕೀಯ್ ನಾವು ಬಂದೆವ ನಾವು ಬಂದೇವ 
           ನಾವು ಬಂದೇವ ಮನೆ ಲೂಟಿ ಮಾಡೋದೇ 
           ಚಿನ್ನ ಬೆಳ್ಳಿ ಕಾಸು ದೋಚಿ ಹೋಗೋದಕ್ಕ 
          ಕೊಡಿ ಕೀಯ್ ಕೀಯ್ ಗಾಡ್ ರ್ರೇಜ್ ಕೀಯ್ 
          ಹೇ ನಮ್ಮ ಗುರು ಮನೆ ಕನ್ನ ಹಾಕುತ್ತಿರೇನ್ರ ನಿಮಗ ಜಾಡಿಸಿ ಓದಿತ್ತೀನಿ 
          ಕಳ್ಳ ಆಹಾ ರೇಜರ್ ಇದ್ರೂ ಮಂಡಾಗಿ ಹಗ್ಗ ಇದ್ರೂ ಬೆಂಡಾಗಿ 
          ಯಾಕ ಮಂಜ ಇವುರನ್ನ ಕಟ್ಟಿ ಹಾಕೋ ನಂಜ ಆಹಾ... 
          ಆಹಾ ಗೀಯ್ ಗೀಯ್ ಗಾಗೀಯ್ ಗೀಯ್ 
          ಈ ಮನೇಲಿ ಏನು ಇಲ್ಲ ಕದಿಯೋದಕ್ಕ ಬರಿ ಡಬ್ಬ ಹಾರ್ಮೋನಿಯಂ ಒದೆಯೋದಕ್ಕ     
          ಬಂದ್ರು ಗೀಯ್ ಗೀಯ್ ಗಾಗೀಯ್ ಗೀಯ್ 
          ಸಂಗೀತಾ ಐ ಲವ್ ಯೂ ಸಂಗೀತಾ ಸಂತೋಷ ಐ ಲವ್ ಯೂ  
          ಸಂತೋಷ ಡವ್ವು ಹೋಗಿ ಲವ್ವು ಆಗಿ ಮನೆಗೆ ಹೊರಟಿರಾ 
--------------------------------------------------------------------------------------- 
 
ತರ್ಲೆ ನನ್ಮಗ (೧೯೯೨) - ನಿನ್ನ ಜಾಡಿಸಿ ಒದಿತೀನಿ 
ಸಂಗೀತ : ವಿ.ಮನೋಹರ, ಸಾಹಿತ್ಯ : ಉಪೇಂದ್ರ, ಗಾಯನ : ಜಗ್ಗೇಶ, ಮಂಜುಳಗುರುರಾಜ 

ಗಂಡು : ನಿನ್ನ ನಿನ್ನ ನಿನ್ನ ನಿನ್ನ ಜಾಡ್ಸಿ ಓದೀತೀನಿ 
ಹೆಣ್ಣು : ಅಮ್ಮಮ್ಮ ಅಬ್ಬಬ್ಬಾ ಅಯ್ಯಯ್ಯೋ ದಮ್ಮಯ್ಯ 
ಗಂಡು : ನಿನ್ನ ನಿನ್ನ ನಿನ್ನ ನಿನ್ನ ಜಾಡ್ಸಿ ಓದೀತೀನಿ 
ಹೆಣ್ಣು : ಅಮ್ಮಮ್ಮ ಅಬ್ಬಬ್ಬಾ ಅಯ್ಯಯ್ಯೋ ದಮ್ಮಯ್ಯ 
ಗಂಡು : ದಬ ದಬ ಗುದ್ದಿ ಬಿಡುವೆನು 
ಹೆಣ್ಣು : ಅಮ್ಮಮ್ಮ ಅಬ್ಬಬ್ಬಾ 
ಗಂಡು : ಏರಿಬಿರಿ ಚಚ್ಚಿ ಬಿಡುವೇನು 
ಹೆಣ್ಣು : ಅಮ್ಮಮ್ಮ ಅಬ್ಬಬ್ಬಾ 
ಗಂಡು : ಜಜ್ಜಿ ನಜ್ಜಿ ಗುಜ್ಜಿ ಬಜ್ಜಿ ಮಾಡುತೀನಿ 
ಹೆಣ್ಣು : ಹಾಯ್ ಬಾ ಹಾಯ್ ಬಾ ಹಾಯ್ ಬಾ 
ಗಂಡು : ನಿನ್ನ ನಿನ್ನ ನಿನ್ನ ನಿನ್ನ ಜಾಡ್ಸಿ ಓದೀತೀನಿ 
ಹೆಣ್ಣು : ಅಮ್ಮಮ್ಮ ಅಬ್ಬಬ್ಬಾ ಅಯ್ಯಯ್ಯೋ ದಮ್ಮಯ್ಯ 

ಗಂಡು : ಕಣ್ಣಿನ ರೆಪ್ಪೆನ ಮುಚ್ಚುತೀನಿ           ಹೆಣ್ಣು : ಅಯ್ಯೋ... 
ಗಂಡು : ಹಣ್ಣಿನ ಸಿಪ್ಪೇನಾ ಬಿಚ್ಚತೀನಿ          ಹೆಣ್ಣು : ಅಮ್ಮಾ... 
ಗಂಡು : ಮಾಗಿದ ಜಾಗಾನಾ ಕಚ್ಚತ್ತೀನಿ      ಹೆಣ್ಣು : ಅಬ್ಬಾ... 
ಗಂಡು : ಚೂಪಿನ ಚಾಕುನ್ ಚುಚ್ಚುತೀನಿ 
ಹೆಣ್ಣು : ಆಹಾ ಸಿಹಿ ಹಣ್ಣನು ತಿನ್ನೀರಿ ಕೆನೆ ಹಾಲನು ಕುಡಿಯಿರಿ 
          ಕೆನೆ ಹಾಲನು ಕುಡಿಯಿರಿ ಫಲ ತಾಂಬೂಲವ ಸ್ವೀಕರಿಸಿ 
ಗಂಡು : ಯಾಕೆ ಹಾಡು ನಿಲ್ಲಿಸಿದ್ದು ನೈನ್ ಟಿ ಟೂ ಸಿಕ್ಸ್ ಟಿ ಫೈವ್ ಬೇಡಿ ತನ್ನಿ 
           ನಿನ್ನ ನಿನ್ನ ನಿನ್ನ ನಿನ್ನ ಜಾಡ್ಸಿ ಓದೀತೀನಿ 
ಹೆಣ್ಣು : ಅಮ್ಮಮ್ಮ ಅಬ್ಬಬ್ಬಾ ಅಯ್ಯಯ್ಯೋ ದಮ್ಮಯ್ಯ 

ಗಂಡು : ಕತ್ತೆಯಂತೇ ಕಾಲನ್ನೆತ್ತಿ ಓದಿತ್ತೀನಿ           ಹೆಣ್ಣು : ಅಯ್ಯೋ 
ಗಂಡು : ಗೂಳಿಯಂತೆ ಜೋರಾಗಿ ತಿವಿತ್ತೀನಿ         ಹೆಣ್ಣು : ಅಮ್ಮ 
ಗಂಡು : ಉಡದಂತೆ ಒತ್ತಿ ನಿನ್ನ ಹಿಡಿತ್ತೀನಿ             ಹೆಣ್ಣು : ಅಬ್ಬಾ 
ಗಂಡು : ಹೆಬ್ಬಾವಂತೆ ಮೈಬಿಗಿದು ಮುರಿತ್ತೀನಿ 
ಹೆಣ್ಣು : ಆಂ... ಎಲ್ಲಾ ನಾ ಸಹಿಸುವೆ ನೋವ ಅನುಭವಿಸುವೆ 
          ಎಲ್ಲಾ ನಾ ಸಹಿಸುವೆ ನೋವ ಅನುಭವಿಸುವೆ   
          ತನುಅಮಾನ ನಿನ್ನದೇ ಸ್ವೀಕರಿಸಿ 
ಗಂಡು : ಹೋಯ್ ನಿನ್ನ ನಿನ್ನ ನಿನ್ನ ನಿನ್ನ ಜಾಡ್ಸಿ ಓದೀತೀನಿ 
ಹೆಣ್ಣು : ಅಮ್ಮಮ್ಮ ಅಬ್ಬಬ್ಬಾ ಅಯ್ಯಯ್ಯೋ ದಮ್ಮಯ್ಯ 
ಗಂಡು : ನಿನ್ನ ನಿನ್ನ ನಿನ್ನ ನಿನ್ನ ಜಾಡ್ಸಿ ಓದೀತೀನಿ 
ಹೆಣ್ಣು : ಅಮ್ಮಮ್ಮ ಅಬ್ಬಬ್ಬಾ ಅಯ್ಯಯ್ಯೋ ದಮ್ಮಯ್ಯ 
-----------------------------------------------------------------------------------------------------
 
ತರ್ಲೆ ನನ್ಮಗ (೧೯೯೨) - ಹಿಂಗ್ಯಾಕೇ ನೀ ನೋಡುತೀ 
ಸಂಗೀತ : ವಿ.ಮನೋಹರ, ಸಾಹಿತ್ಯ : ಉಪೇಂದ್ರ, ಗಾಯನ : ಚಂದ್ರಿಕಾ 

ಹಿಂಗ್ಯಾಕೇ ನೀ ನೋಡುತ್ತೀ.. 
ಹಿಂಗ್ಯಾಕೇ ನೀ ನೋಡುತ್ತೀ ನಾನ್ಯಾಕೆ ನೀ ಕಾಡುತೀ 
ನಾಗರ ಬಲು ಸುಂದರ ಆದರೂ ವಿಷ ಭೀಕರ 
ಸೃಷ್ಟಿಯೂ ಯಾಕೀ ಥರ 
ಹಿಂಗ್ಯಾಕೇ ನೀ ನೋಡುತ್ತೀ ನಾನ್ಯಾಕೆ ನೀ ಕಾಡುತೀ 
 
ಪರರ ಕೆಳಗೆ ನೆಟ್ಟ ಮುಳ್ಳು ನಿನ್ನ ಕಾಲಡಿಗೆ 
ನೆರದ ಒಳಗೆ ಹುಗಿದು ಇಟ್ಟಿ ನಿಧಿ ಪರರ ಬಾಳಿಗೆ   
ಬುದ್ಧ ಜನಕೆ ನುಡಿದ ಆಸೆಯೇ ದುಃಖಕ್ಕೆ ಮೂಲ 
ಮುದ್ದು ಕಂದ ಕೇಳೋ ಆಸೆ ಹೊನ್ನಿನ ಶೂಲ ಓ ಓ ಓ ಓ ಓ ಓ ಓ  
ಹೂವಲಿ ಬಲು ಕಂಪಿದೆ ಆದರೂ ಹುಳ ತುಂಬಿದೆ 
ಸೃಷ್ಟಿಯೂ ಯಾಕಿ ತರ 
ಹಿಂಗ್ಯಾಕೇ ನೀ ನೋಡುತ್ತೀ ನಾನ್ಯಾಕೆ ನೀ ಕಾಡುತೀ 

ಇಂದೋ ಮುಂದೋ ಮೇಲೆ ಹೋಗೋ ಸತ್ಯವ ಮರೆತು 
ನಂದು ನಂದು ಎನ್ನೋ ಜಗಳ ತುಂಬಾನೇ ಹಳತು 
ಮುಟ್ಟೋದೇಲ್ಲಾ ಚಿನ್ನಾ ಆದಾಗ ಎಂಥ ಆ ರಾಜ 
ತಿನ್ನೋ ಅನ್ನ ಚಿನ್ನ ಆದಾಗ ಕೆಟ್ಟ ಆ ರಾಜ ಓ ಓ ಓ ಓ ಓ ಓ ಓ   
ಬೇವಿಗೆ ಜೀವರೆದರೂ ಕಹಿಯನು ಅದು ಬಿಡುವುದೇ ಸೃಷ್ಟಿಯು ಯಾಕಿ ತರ 
ಹಿಂಗ್ಯಾಕೇ ನೀ ನೋಡುತ್ತೀ ನಾನ್ಯಾಕೆ ನೀ ಕಾಡುತೀ 
ನಾಗರ ಬಲು ಸುಂದರ ಆದರೂ ವಿಷ ಭೀಕರ 
ಸೃಷ್ಟಿಯೂ ಯಾಕೀ ಥರ 
ಹಿಂಗ್ಯಾಕೇ ನೀ ನೋಡುತ್ತೀ ನಾನ್ಯಾಕೆ ನೀ ಕಾಡುತೀ 
---------------------------------------------------------------------------------------------------
 
ತರ್ಲೆ ನನ್ಮಗ (೧೯೯೨) - ಡಗಾರ್ ಡಗಾರ್ ದಂ ದಂ ಡಗಾರ್ ಡಗಾರ್ 
ಸಂಗೀತ : ವಿ.ಮನೋಹರ, ಸಾಹಿತ್ಯ : ಉಪೇಂದ್ರ, ಗಾಯನ : ಎಲ್.ಏನ್.ಶಾಸ್ತ್ರೀ, ಉಪೇಂದ್ರ, ಲತಾಹಂಸಲೇಖಾ 

ಗಂಡು : ಡಗಾರ್ ಡಗಾರ್ ಡಂ ಡಂ ಡಗಾರ್ ಡಗಾರ್ 
            ಡಗಾರ್ ಡಗಾರ್ ಡಂ ಡಂ ಡಗಾರ್ ಡಗಾರ್ 
ಹೆಣ್ಣು : ಮಾಮಾ ಮಾಮಾ ಡಿಂಗ್ ಡಾಂಗ್ ಡಿಂಗ್ ಡಾಂಗ್ 
ಗಂಡು : ಎಂಥ ಸೊಸೆ ನೋಡಿ                  ಹೆಣ್ಣು : ಆ
ಗಂಡು : ಎಂಥ ಸೊಸೆ ನೋಡಿ ಡಂ ಡಂ ಡಗಾರ್ ಡಗಾರ್ ಡಂ ಡಂ ಡಗಾರ್ ಡಗಾರ್ 
ಹೆಣ್ಣು : ಮಾಮಾ ಮಾಮಾ ಡಿಂಗ್ ಡಾಂಗ್ ಡಿಂಗ್ ಡಾಂಗ್ 
           ಮಾಮಾ ಮಾಮಾ ಡಿಂಗ್ ಡಾಂಗ್ ಡಿಂಗ್ ಡಾಂಗ್ 

ಗಂಡು : ಇಪ್ಪತ್ತೊಂದನೇ ಶತಮಾನ ಇಲ್ಲ ನಾಚಿಕೆ ಅವಮಾನ 
           ನಡತೆಗೆ ಇಲ್ಲ ಬಹುಮಾನ ಹಣವೇ ಇಲ್ಲಿ ಯಜಮಾನ 
            ಹೇಗೆ ಇವಳು ಹೀಗೆ ಆದಾಳೋ 
ಹೆಣ್ಣು : ಇವಳು ನಮ್ಮ ಮಾನ ಕಳೆಯೊಳು 
ಗಂಡು : ಆಹಾ ಮಾಡಬೇಕು ದಿನ ಎಕ್ಸಸೈಜೂ 
ಹೆಣ್ಣು : ಬೆಳಸಬೇಕು ಬಾಡಿ ಸೈಜು 
ಗಂಡು : ಎಂಥ ಸೊಸೆ ನೋಡಿ                       ಹೆಣ್ಣು : ಯ್ಯಾ 
ಗಂಡು : ಎಂಥ ಸೊಸೆ ನೋಡಿ ಡಂ ಡಂ ಡಗಾರ್ ಡಗಾರ್ ಡಂ ಡಂ ಡಗಾರ್ ಡಗಾರ್ 
            ಲೇ ಆ ಸೊಸೆ ಮೌನ ಗೌರಿಯಾದರೇ ಇವಳಿಗೆ ನಾಚಿಕೆ ಮಾನ ಮರ್ಯಾದೆನೇ ಇಲ್ಲ ನಲ್ಲೆ    
ಹೆಣ್ಣು : ಮಾಮಾ ಮಾಮಾ ಡಿಂಗ್ ಡಾಂಗ್ ಡಿಂಗ್ ಡಾಂಗ್ 
           ಮಾಮಾ ಮಾಮಾ ಡಿಂಗ್ ಡಾಂಗ್ ಡಿಂಗ್ ಡಾಂಗ್ 

ಗಂಡು : ಬಿಕನಾಸಿ ಓ ದರಬೇಸಿ              ಹೆಣ್ಣು : ಆಡ್ ಕಾಸಿ ಓ ಪರದೇಸಿ 
ಗಂಡು : ಕುಡಿಯೋದು ಫಾರಿನ್ ಶೋಕಿ ಯಾಕೆ ಮಾಡತ್ತಿ ಚೌಕಾಸಿ        
ಹೆಣ್ಣು : ಮನಗೆಟ್ಟ ಮಂದಿ ಇವರೆಲ್ಲಾ 
ಗಂಡು : ಹಾಸ ಬೇಡಿ ಎಲ್ಲ ಮಾಡಲ್ಲಾ... ಆಹಾ ರಂಪಂಪಂ ರಂಪಂಪಂ 
ಹೆಣ್ಣು : ಕುಣಿದಾಡಿ ಓ ನಲಿದಾಡಿ 
ಗಂಡು : ಎಂಥ ಸೊಸೆ ನೋಡಿ                       ಹೆಣ್ಣು : ಯ್ಯಾ 
ಗಂಡು : ಎಂಥ ಸೊಸೆ ನೋಡಿ ಡಂ ಡಂ ಡಗಾರ್ ಡಗಾರ್ ಡಂ ಡಂ ಡಗಾರ್ ಡಗಾರ್ 
            ಲೇ ಆ ಸೊಸೆ ಮೌನ ಗೌರಿಯಾದರೇ ಇವಳಿಗೆ ನಾಚಿಕೆ ಮಾನ ಮರ್ಯಾದೆನೇ ಇಲ್ಲ ನಲ್ಲೆ    
ಹೆಣ್ಣು : ರೀ ಈ ಡಗಾರಕ್ಕಿಂತಾ ನಮ್ಮ ಸಂಗೀತನೇ ವಾಸಿ ಅಲ್ಲವೇನ್ರಿ 
           ಮಾಮಾ ಮಾಮಾ ಡಿಂಗ್ ಡಾಂಗ್ ಡಿಂಗ್ ಡಾಂಗ್ 
           ಮಾಮಾ ಮಾಮಾ ಡಿಂಗ್ ಡಾಂಗ್ ಡಿಂಗ್ ಡಾಂಗ್ 
------------------------------------------------------------------------------------------------------

No comments:

Post a Comment