1867. ರಾಯರ ಮಗ (೧೯೯೪)

ರಾಯರ ಮಗ ಚಲನಚಿತ್ರದ ಹಾಡುಗಳು 
  1. ಗಂಗಾ ಮಾಯಿ ತುಂಗಾ ಮಾಯಿ 
  2. ಸುಂದರೀ ಸುಂದರಿ ಸುಕಮಾರಿ 
  3. ಚಾಂದನಿ ಚಾಂದನಿ ಚಂದ್ರಮನ 
  4. ಅಮ್ಮಾ ಮಾಡೆನ್ನ ಪತಿರಾಯ 
  5. ಸಂಸಾರ ಸಂಸಾರ 
  6. ಜಿಂಕೆ ಬಂಗಾರ ಜಿಂಕೆ 
ರಾಯರ ಮಗ (೧೯೯೪) - ಗಂಗಾ ಮಾಯಿ ತುಂಗಾ ಮಾಯಿ 
ಸಂಗೀತ : ವಿ.ಮನೋಹರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಬಿ.ಆರ್.ಛಾಯಾ 

ಗಂಗಾಮಾಯಿ ತುಂಬಾಮಾಯಿ ಹಾಲು ನೀಡೋ ಗೋವು ತಾಯಿ 
ಕೋಲೆ ಕೋಲೆ ಕೋಲೆ ಕೋಲೆ ಕನ್ನಡದ ಕಿನ್ನರಿ ಚೆನ್ನಾ 
ಗಂಗಾಮಾಯಿ ತುಂಬಾಮಾಯಿ ಹಾಲು ನೀಡೋ ಗೋವು ತಾಯಿ 
ಕೋಲೆ ಕೋಲೆ ಕೋಲೆ ಕೋಲೆ ಕನ್ನಡದ ಕಿನ್ನರಿ ಚೆನ್ನಾ 
ಕೋಲೆ ಕೋಲೆ ಕೋಲೆ ಕೋಲೆ ಹಸುಗಳಿಗೆ ಹಚ್ಚರಿ ಬಣ್ಣಾ  
ಕೋಲೆ ಕೋಲೆ ಕೋಲೆ ಕೋಲೆ ಹಸುಗಳಿಗೆ ಹಚ್ಚರಿ ಬಣ್ಣಾ 
ಕಪಟ ಅನ್ಯಾಯ ಅರಿಯದಾ ಗೋವುಗಳಿಗೆ ಮೇವು ತನ್ನಿ 
ಹೇ ಗೋವು ಗೋವಿಂದ ಮುರುಳಿಗೆ ಸಂಕ್ರಾತಿ ಹಾರ ತನ್ನಿ..ಹೇ 
ಗಂಗಾಮಾಯಿ ತುಂಬಾಮಾಯಿ ಹಾಲು ನೀಡೋ ಗೋವು ತಾಯಿ 

ಎಳ್ಳು ಬೆಲ್ಲ ಪೈರು ತೆನೆ ಕದಳಿ ಕರ್ಪುರ ಕವಡೆ ಸರ ಬಸವನಿಗೆ 
ಕಪಿಲೆಗೆ ಹಾರಾ ಹಿಂಸೆಯಾದರು ಹಸಿವೆಯಾದರು ದೇಹಕೆ ಸವೆಸಿದೇ ಜೀವನಾ 
ಕಪಿಲೆಗೆ ಹಾರಾ ಹಿಂಸೆಯಾದರು ಹಸಿವೆಯಾದರು ದೇಹಕೆ ಸವೆಸಿದೇ ಜೀವನಾ 
ದುಡಿಸಿಕೊಳ್ಳುವ ಯಂತ್ರವೆನ್ನುವ ಇವುಗಳ ತಿಳಿದರು ಈ ಜನ 
ಹೊಲ ಉಳೋ ಋಣ ಸದಾ ಇದೆ ದಿನ 
ದುಡಿಸಿಕೊಳ್ಳುವ ಯಂತ್ರವೆನ್ನುವ ಇವುಗಳ ತಿಳಿದರು ಈ ಜನ 
ಹೊಲ ಉಳೋ ಋಣ ಸದಾ ಇದೆ ದಿನ 
ಯುಗ ಯುಗ ಅದೇ ಮುದಾ ಕೋಡೋ ಗುಣ 
ಗಂಗಾಮಾಯಿ ತುಂಬಾಮಾಯಿ ಹಾಲು ನೀಡೋ ಗೋವು ತಾಯಿ 

ಪಾರ್ವತೀ ದೇವಿಗೆ ಸೇವಂತಿಗೆ ಸಿಹಿ ಮಾತು ಹೇಳಿರಿ ಸಂಕ್ರಾಂತಿಗೆ 
ಉರಿವ ಬೇಸಿಗೆ ಛಳಿಯ ಗಾಳಿಗೆ ದುಡಿವುದು ದುಡಿವುದು ಮಡಿವುದು 
ಕೊನೆಯ ತನಕವೂ ಮೌನವಾಗಿಯೇ ಹಾಲನು ಜನರಿಗೆ ಕೊಡುವದು 
ಬಂಧು ಬಳಗ ಹಂಗೆ ಇರೋ ಹಸು ಗಂಗೆ 
ಹೊಲ ನೆಲ ದೈವ ಇದೆ ರೈತ ಜೀವ 
ಗಂಗಾಮಾಯಿ ತುಂಬಾಮಾಯಿ ಹಾಲು ನೀಡೋ ಗೋವು ತಾಯಿ 

ಮುತೈದೆ ಗೌರಿಗೆ ಸೀಮಂತ ದಿನ ಅರಿಶಿನ ಕುಂಕುಮ ಗಂಧ ಚಂದನ 
ರಾಯರ ಮನೆಯ ನಂದಾದೀಪಕೆ ಎತ್ತಿರಿ ಆರತಿ ಆನಂದ ದೀಪ 
ಗುಣದಲ್ಲಿ ಗಣಪನು ಬುದ್ದಿಲಿ ಷಣ್ಮುಖನು ಶೌರ್ಯದ ವೀರಭಧ್ರ ಬರಲವ್ವಾ 
ತಾಯಾಗಿ ಚೆಂದದಿ ಬಾಳವ್ವಾ 
ಗಂಗಾಮಾಯಿ ತುಂಬಾಮಾಯಿ ಹಾಲು ನೀಡೋ ಗೋವು ತಾಯಿ 
ಕೋಲೆ ಕೋಲೆ ಕೋಲೆ ಕೋಲೆ ಕನ್ನಡದ ಕಿನ್ನರಿ ಚೆನ್ನಾ 
ಕೋಲೆ ಕೋಲೆ ಕೋಲೆ ಕೋಲೆ ಹಸುಗಳಿಗೆ ಹಚ್ಚರಿ ಬಣ್ಣಾ  
ಕೋಲೆ ಕೋಲೆ ಕೋಲೆ ಕೋಲೆ ಹಸುಗಳಿಗೆ ಹಚ್ಚರಿ ಬಣ್ಣಾ 
------------------------------------------------------------------------------------------------
 
ರಾಯರ ಮಗ (೧೯೯೪) - ಸುಂದರೀ ಸುಂದರಿ ಸುಕಮಾರಿ 
ಸಂಗೀತ : ವಿ.ಮನೋಹರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಬಿ.ಆರ್.ಛಾಯಾ 

ಸುಂದರಿ ಸುಂದರಿ ಸುಕುಮಾರಿ ಕನ್ಯಾಕುಮಾರಿ 
ನಾರಿ ಮುನಿದರೆ ಮಾರಿ ನೀ ಮುನಿದೇ ಇದ್ದರೂ ಮಾರಿ 
ನಾರಿ ಮುನಿದರೆ ಮಾರಿ ನೀ ಮುನಿದೇ ಇದ್ದರೂ ಮಾರಿ 
ಸುಂದರಿ ಸುಂದರಿ ಸುಕುಮಾರಿ ಕನ್ಯಾಕುಮಾರಿ 

ಊರಿಗೊಂದು ಮಾರಿ ದೇವತೆ ಇದ್ದರೇನೇ ಕ್ಷೇಮ ಊರಿಗೇ 
ನೀನು ಬಂದ ಮೇಲೆ ದೇವತೆ ಊರು ಬಿಟ್ಟು ಹೋಯ್ತು ಕಾಡಿಗೆ 
ನೀ ಬಂದು ಊರಿಗೆ ಮಳೆಯಿಲ್ಲ ನಾಡಿಗೆ ಹೊಲವೆಲ್ಲ ಬಂಜರವಾಯಿತು 
ಊರೆಲ್ಲ ಹುಡುಗರ ನಿಂತೋಯ್ತು ಸಡಗರ ವ್ಯಾಪಾರ ಪಂಚರವಾಯಿತು 
ಸುಂದರಿ ಸುಂದರಿ ಸುಕುಮಾರಿ ಕನ್ಯಾಕುಮಾರಿ 
 
ಕೋಳಿ ಕೂಗೋದನ್ನ ಬಿಟ್ಟಿದೆ ನಾಯಿ ಬೋಗೋಳದಕ್ಕೆ ಹೆದರಿದೆ 
ನಿನ್ನ ನೆರಳು ಬಿದ್ದ ಕೇರಿಲಿ ಮಕ್ಕಳೆಲ್ಲ ನಗುವ ನಿಲ್ಲಿಸಿದೆ 
ಹಾಡಲ್ಲ ಕೋಗಿಲೆ ಅರಳಲ್ಲ ನೈದಿಲೇ ನಿನ್ನನ್ನ ಕಂಡಮ್ಯಾಲೆ 
ಧೂಮಕೇತು ದರ್ಶನ ಅಮಾವಾಸ್ಯೆ ಪ್ರತಿದಿನ ಎಲ್ಲನೂ ನಿನ್ನ ಲೀಲೆ 
ಸುಂದರಿ ಸುಂದರಿ ಸುಕುಮಾರಿ ಕನ್ಯಾಕುಮಾರಿ 
ನಾರಿ ಮುನಿದರೆ ಮಾರಿ ನೀ ಮುನಿದೇ ಇದ್ದರೂ ಮಾರಿ 
ನಾರಿ ಮುನಿದರೆ ಮಾರಿ ನೀ ಮುನಿದೇ ಇದ್ದರೂ ಮಾರಿ 
ಸುಂದರಿ ಸುಂದರಿ ಸುಕುಮಾರಿ ಕನ್ಯಾಕುಮಾರಿ 
-------------------------------------------------------------------------------------------------
 
ರಾಯರ ಮಗ (೧೯೯೪) - ಚಾಂದನಿ ಚಾಂದನಿ ಚಂದ್ರಮನ 
ಸಂಗೀತ : ವಿ.ಮನೋಹರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಮಂಜುಳಗುರುರಾಜ 

ಕವಿ ಸಮ್ಮೇಳನದ ಚರ್ಚೆಯ ಗ್ರಾಸಾ ನಿನ್ನ ಮುಖ ಬಣ್ಣಿಸಲು ಸಿಕ್ಕದು ಪ್ರಾಸಾ 
ಹೀಗೆಯೇ ಮಾತಾಡುತಲೇ ಕಳೆಯಿತು ಮಾಸಾ 
ಕವಿ ಸಮ್ಮೇಳನದ ಚರ್ಚೆಯ ಗ್ರಾಸಾ ನಿನ್ನ ಮುಖ ಬಣ್ಣಿಸಲು ಸಿಕ್ಕದು ಪ್ರಾಸಾ 
ಹೀಗೆಯೇ ಮಾತಾಡುತಲೇ ಕಳೆಯಿತು ಮಾಸಾ 
ಚಾಂದನೀ ಚಾಂದನೀ ಚಂದ್ರಮನಾ ಚಾಂದನೀ ಚುಂಬನದಾ ಮಳೆ ತರ್ತೀಯಾ 
ಕಾದೈತೆ ತುಟಿ ಮುತ್ತಿನ ಬಿತ್ತನೆಗೆ     

ಹೇಳು ಪ್ರಿಯೇ ಏನು ನಿನಗಾಗಿ ಕೊಡಲಿ ನಾ 
ರಾಜ್ಯವಿಡೀ ನಂದೇ ನೀ ಕೇಳು ಉಡುಗೊರೆ 
ನಂದಿಬೆಟ್ಟ ಬೇಕು ಹನಿಮೂನು ಮಾಡೋಕೆ 
ವಿಧಾನಸೌಧ ಬೇಕು ನಾವ್ ವಾಸ ಮಾಡೋಕೆ 
ನಂದಿಬೆಟ್ಟ ತುಂಬಾ ಬರಿ ಕೆಟ್ಟ ಚಳಿ
ಆ ವಿಧಾನಸೌಧದಲ್ಲಿ ಬರೀ ಕೆಟ್ಟ ಚಾಳೀ 
ನನ್ನ ಹೃದಯಾನೇ ಸಾಕು ನಿಂಗೆ ಹಾಯಾಗಿರೋಕೆ 

ಜಾಣ ನೀ ಜಾಣ ಈ ಹುಡುಗಿ ಪ್ರಾಣ ನೀ 
ರಾಕೆಟ್ಟು ಉಡಾಯ್ಸಿ ಆಕಾಶಕ್ಕೆ ಹಾರಿ 
ಅಲ್ಲೇ ಮನೆಮಾಡಿ ಹಾಯಾಗಿ ಇರೋಣ 
ಬೇಡ ಕಣೇ ಅಲ್ಲಿ ಉಪಗ್ರಹಗಳ ಕಾಟ 
ಇಲ್ಲೇ ಸರಿ ನಮಗೆ ಚೆಲ್ಲಾಟ ಬೊಂಬಾಟ್ 
ಇತ್ತಾ ನೆಂಟರ ಕಾಟ ಅತ್ತಾ ಅತ್ತೆಯ ಕಾಟಾ 
ಪೋಲಿ ಪುಂಟರ ಕಾಟ ಒಂದಾ ಎರಡಾ ಕಾಟ  
ಇಂಥ ನೂರಾರು ನಾವ್ ಹೇಳುವ ಟಾಟಾ 
------------------------------------------------------------------------------------------------
 
ರಾಯರ ಮಗ (೧೯೯೪) - ಅಮ್ಮಾ ಮಾಡೆನ್ನ ಪತಿರಾಯ 
ಸಂಗೀತ : ವಿ.ಮನೋಹರ, ಸಾಹಿತ್ಯ : ಕಲ್ಯಾಣ, ಗಾಯನ : ಮಂಜುಳಗುರುರಾಜ, ಕವಿತಾ ಕೃಷ್ಣಮೂರ್ತಿ 

ಅಮ್ಮನ ಮಾಡೆನ್ನ ಪತಿರಾಯ ಸುಮ್ಮನೆ ಕೂಡದು ರತಿಪ್ರಾಯ 
ಹಾಲಿನ್ನು ಆರಿಲ್ಲ ಹೂವಿನ್ನ ಬಾಡಿಲ್ಲ ಪಲ್ಲಂಗ ಕಾದೈತಯ್ಯಾ ಮಹರಾಯ 

ಸೋಬಾನೆ ಹಾಡು ಸುವ್ವಾಲಿಯಾಯ್ತು ತಾಳಕ್ಕೆ ಕೈ ಜೋಡಿಸು 
ಈ ಮೈಯಿ ಪೂರ ಜೋಕಾಲಿಯಾಯ್ತು ತೂಗಾಡೋ ಮೈ ಜೋಡಿಸೂ 
ದೊಂಬಿಯ ಮಾಡೋಕೆ ದುಂಬಿಗೆ ಆಹ್ವಾನ ಅಂಗಾಂಗವೇ ನನ್ನ ಬಹುಮಾನ 
ಅಮ್ಮನ ಮಾಡೆನ್ನ ಪತಿರಾಯ ಸುಮ್ಮನೆ ಕೂಡದು ರತಿಪ್ರಾಯ 
ಹಾಲಿನ್ನು ಆರಿಲ್ಲ ಹೂವಿನ್ನ ಬಾಡಿಲ್ಲ ಪಲ್ಲಂಗ ಕಾದೈತಯ್ಯಾ ಮಹರಾಯ 

ತಂಗಾಳಿ ಬಂತು ಮುತ್ತನ್ನು ತಂತು ಮುದ್ದಾಡು ಬಾರೇ ಪ್ರಿಯೇ 
ಹೆಜ್ಜೇನೂ ಗೂಡು ಈ ಮೈಯ್ಯಿ ಬೀಡು ಸಿಹಿಯೆಲ್ಲಾ ನಿಂಗಾಗಿಯೇ 
ಅಂದಾನಾ ದೋಚಕೆ ನಾ ಬಂದೆ ಹಿಂದಿಂದೆ ಶೃಂಗಾರ ಚೆಲ್ಲಾಟವಾ ನೋಡಮ್ಮ 
ಅಮ್ಮನ ಮಾಡೆನ್ನ ಪತಿರಾಯ ಸುಮ್ಮನೆ ಕೂಡದು ರತಿಪ್ರಾಯ 
ಹಾಲಿನ್ನು ಆರಿಲ್ಲ ಹೂವಿನ್ನ ಬಾಡಿಲ್ಲ ಪಲ್ಲಂಗ ಕಾದೈತಯ್ಯಾ ಮಹರಾಯ 
------------------------------------------------------------------------------------------------
 
ರಾಯರ ಮಗ (೧೯೯೪) - ಸಂಸಾರ ಸಂಸಾರ 
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ರಾಜೇಶ ಕೃಷ್ಣನ್ 

ಸಂಸಾರ ಸಂಸಾರ ಸಾರವು ತುಂಬಿದಾಗಲೇ ಸೌಹಾರ್ದ ಸೇರಿದಾಗಲೇ 
ಮೂರೇ ದಿನ ಇರೋ ಬಾಳಲ್ಲಿ ಇರಬೇಕು ಅನುರಾಗ ಅನುರಾಗ 
ಸಂಸಾರ ಸಂಸಾರ ಸಾರವು ತುಂಬಿದಾಗಲೇ ಸೌಹಾರ್ದ ಸೇರಿದಾಗಲೇ 
ಮೂರೇ ದಿನ ಇರೋ ಬಾಳಲ್ಲಿ ಇರಬೇಕು ಅನುರಾಗ ಅನುರಾಗ 

ನಂಜು ಮಂಜು ಮುಸುಕಿದ ಹೃದಯ ಕತ್ತಲು ಪ್ರೀತಿ ಕಿರಣ ಇದ್ದರೆ ಬೆಳಕು ಸುತ್ತಲೂ 
ದರ್ಪವೆಂಬ ಸರ್ಪದ ಹುತ್ತವಾಗದೆ ಮನದ ಒಳಗೆ ತೆರಬೇಕು ಪ್ರೇಮ ಕಂಗಳು 
ಸಂಸಾರ ಕಣ್ಣು ಹೆಣ್ಣು ಆದ ಕಾಯೋ ರೆಪ್ಪೆ ಗಂಡು 
ಹಾಡಿಗೆ ಜೀವ ಸ್ವರವಮ್ಮ ಬಾಳಿಗೆ ಪ್ರೇಮ ವರವಮ್ಮಾ 
ಎಳ್ಳು ಬೆಲ್ಲ ಸ್ನೇಹ ಬೆರೆತಾಗ ಬದುಕಲ್ಲಿ ಸಂಕ್ರಾಂತಿ ಸಂಕ್ರಾಂತಿ  
------------------------------------------------------------------------------------------------
 
ರಾಯರ ಮಗ (೧೯೯೪) - ಜಿಂಕೆ ಬಂಗಾರ ಜಿಂಕೆ 
ಸಂಗೀತ : ವಿ.ಮನೋಹರ, ಸಾಹಿತ್ಯ : ಶ್ಯಾಮಸುಂದರ ಕುಲಕರ್ಣಿ, ಗಾಯನ : ಮಂಜುಳಗುರುರಾಜ 

ಜಿಂಕೆ ಬಂಗಾರ ಜಿಂಕೆ ಮಾವಾ ಹಿಡ್ಕ ಹೆಂಗಾರ ಮಾಡಿ ಮಾವಾ 
ಜಿಂಕೆ ಬಂಗಾರ ಜಿಂಕೆ ಮಾವಾ ಹಿಡ್ಕ ಹೆಂಗಾರ ಮಾಡಿ ಮಾವಾ 
ಏರಿ ಮ್ಯಾಲಕ್ಕ ಹಾರಿ ಬಂದಿತ್ತ ಹಂಗೆ ಬಿಟ್ಟರ ಓದಿ ಹೋದಾತ 
ಹಿಂದಾ ಮುಂದಾ ಹಿಡ್ಕ ಮಾವ 
ಜಿಂಕೆ ಬಂಗಾರ ಜಿಂಕೆ ಮಾವಾ ಹಿಡ್ಕ ಹೆಂಗಾರ ಮಾಡಿ ಮಾವಾ 
 
ಬಿಡಬ್ಯಾಡ ಪಂಚಬಾಣ ಬಾಣ ಜಾಣಾ ಜಾಣಾ 
ಹೋದಾತು ಪಂಚಪ್ರಾಣ ಪ್ರಾಣಾ ಪ್ರಾಣಾ ಜಾಣಾ 
ಬಿಡಬ್ಯಾಡ ಪಂಚಬಾಣ ಬಾಣ ಜಾಣಾ ಜಾಣಾ 
ಹೋದಾತು ಪಂಚಪ್ರಾಣ ಪ್ರಾಣಾ ಪ್ರಾಣಾ ಜಾಣಾ 
ಚುಕ್ಕಿ ಸವೆದು ಹೋಗದ ಹಾಂಗ ತಿಕ್ಕೋ ಮೆಲ್ಲ ಇದರಂಗಾಂಗ 
ಹಳ್ಳ ದಿಣ್ಣೆ ಕಣಿವೆಯಾ ಕೆಳಗೆ ವಿಹಾರಕ ಕರೆದುಕೊ ಹುಡುಗ 
ಎಣ್ಣೆ ಬರದ ಕಾಲದಾಗ ಕಣ್ಣಾಮುಚ್ಚೆ ಕೂರಬ್ಯಾಡ 
ಅಂಗೈಯಾಗ ಬೆಣ್ಣೆ ಇತ್ತು ತುಪ್ಪಕ್ಕಾ ಪರದಾಡಬೇಡ 
ಜಿಂಕೆ ಬಂಗಾರ ಜಿಂಕೆ ಮಾವಾ ಹಿಡ್ಕ ಹೆಂಗಾರ ಮಾಡಿ ಮಾವಾ 

ಚಲೋ ಐತಿ ಕಾಯ ಕಾಯ ನೀಳ ಕಾಯ 
ಆಯಾ ತಪೈತೇ ಪ್ರಾಯ ಪ್ರಾಯಾ ಪ್ರಾಯಾ ಜೀಯಾ 
ತೋಳಗಳ ಕಾಟಕ್ಕ ಹೆದರಿ ನಿನ್ನ ತೋಳ ತಕ್ಕೆಲಿ ಬಿತ್ತ 
ಬಿದ್ದ ಬಿದ್ದು ನೋಡಿದ ಮ್ಯಾಲಾ ಮೈಯ್ಯಿ ಪೂರಾ ಮನ್ಮಥ ಮುತ್ತ 
ಹಣ್ಣು ಮಾಗಿದ ಮ್ಯಾಲ ಬಾಯಿ ತುಂಬಾ ಸವಿಬೇಕಾ 
ಕಾದ ಸಲಾಕಿಯನ್ನ ಕೆಂಪೆಗಾದಾಗ ಬಡಿಬೇಕ 
ಜಿಂಕೆ ಬಂಗಾರ ಜಿಂಕೆ ಮಾವಾ ಹಿಡ್ಕ ಹೆಂಗಾರ ಮಾಡಿ ಮಾವಾ 
ಜಿಂಕೆ ಬಂಗಾರ ಜಿಂಕೆ ಮಾವಾ ಹಿಡ್ಕ ಹೆಂಗಾರ ಮಾಡಿ ಮಾವಾ 
ಏರಿ ಮ್ಯಾಲಕ್ಕ ಹಾರಿ ಬಂದಿತ್ತ ಹಂಗೆ ಬಿಟ್ಟರ ಓದಿ ಹೋದಾತ 
ಹಿಂದಾ ಮುಂದಾ ಹಿಡ್ಕ ಮಾವ 
ಜಿಂಕೆ ಬಂಗಾರ ಜಿಂಕೆ ಮಾವಾ ಹಿಡ್ಕ ಹೆಂಗಾರ ಮಾಡಿ ಮಾವಾ 
-------------------------------------------------------------------------------------------------

No comments:

Post a Comment