1868. ನಿನ್ನೇ ಪ್ರೀತಿಸುವೆ (೨೦೦೨)

ನಿನ್ನೇ ಪ್ರೀತಿಸುವೆ ಚಲನಚಿತ್ರದ ಹಾಡುಗಳು 
  1. ನಿನ್ನ ಪ್ರೀತಿಯ 
  2. ಪ್ರೇಮ ಪತ್ರ ಬರೆಯಿತು 
  3. ಕೋಗಿಲೆಯ ಹಾಡು 
  4. ಒಲವೇ ನನ್ನ ಒಲವೇ 
  5. ನನ್ನ ಪ್ರೀತಿಯ ದೇವತೆ 
  6. ಗುಡಿಯ ಗಂಟೆಯೂ 
ನಿನ್ನೇ ಪ್ರೀತಿಸುವೆ (೨೦೦೨) - ನಿನ್ನ ಪ್ರೀತಿಯ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಚಿತ್ರಾ 

ನಿನ್ನ ಪ್ರೀತಿಯ ದೇವತೆಯು ಬಳಿ ಬಂದಳು ನಿನ್ನ ಹೃದಯದ ಬಾಗಿಲಿಗೆ ಬೆಳಕಾದಳು
ನಿನ್ನ ಪ್ರೀತಿಯ ದೇವತೆಯು ಬಳಿ ಬಂದಳು ನಿನ್ನ ಹೃದಯದ ಬಾಗಿಲಿಗೆ ಬೆಳಕಾದಳು
ಬೆಳ್ಳಿ ಬೆಳದಿಂಗಳಿನ ನಗೆಯಂತೆ ಇಂದ್ರನ ಕುಲದ ದೊರೆ ಮಗಳಂತೆ
ಜನ್ಮಜನ್ಮದ ನೆನಪು ಕರೆದಂತೆ ಮನಸು ಬರೆದು ಕೊಟ್ಟಳು ಮಗುವಂತೆ
ನಿನ್ನೇ ಪ್ರೀತಿಸುವೆ ಎಂದು ನಿನ್ನ ಪ್ರೀತಿಯ ದೇವತೆಯು ಬಳಿ ಬಂದಳು

ಎಷ್ಟೋ ಚೈತ್ರಗಳಲ್ಲಿ ಎಷ್ಟೋ ಚಿಗುರುಗಳಲ್ಲಿ ನಿನ್ನ ಗುರುತು ಕಂಡಾಯ್ತು
ಎಷ್ಟೋ ದಿಕ್ಕುಗಳಲ್ಲಿ ಎಷ್ಟೋ ಬೆಳಕುಗಳಲ್ಲಿ ನಿನ್ನ ನೆರಳು ದೊರೆತಾಯ್ತು
ನಿನ್ನ ನಗುವೆ ತನ್ನೆದೆ್ಗೆಗೆ ಅಮೃತ ಕಳಶ ನಿನ್ನ ಸ್ಪರ್ಶವೇ ತನ್ನುಸಿರಿಗೆ ಮಾಯದ ಹರುಷ
ತನ್ನ ಹೃದಯದ ಕಲರವದಲ್ಲಿ ರಾಗವ ತೆಗೆದು ನಿನ್ನ ಹಣೆಯ ಕಂಕುಮದಲ್ಲಿ ಕವಿತೆ ಬರೆದು
ಹಾಡುತ್ತಿದೆ ತನ್ನ ಮನಸ್ಸು ನಿನ್ನೇ ಪ್ರೀತಿಸುವೆ ಎಂದು ನಿನ್ನ ಪ್ರೀತಿಯ ದೇವತೆಯು ಬಳಿ ಬಂದಳು

ಕಣ್ಣಲ್ಲಿ ಕನಸು ಅರಳಿ ಕಾಲಲಿ ಲಜ್ಜೆ ಉರಳಿ ನಡೆಯುವ ಮದುವೆಯಲ್ಲಿ
ತನ್ನ ಅರ್ಧವು ನೀನು ನಿನ್ನ ಸರ್ವವು ತಾನು ಅನ್ನೋ ಅನುರಾಗದಲ್ಲಿ
ನಕ್ಷತ್ರದ ಪಲ್ಲಕ್ಕಿಯ ಮೇಲೆ ಕುಳಿತು ಹೃದಯಗಳು ನಡಿಬೇಕು ಮೂರೂ ಹೊತ್ತು
ಇಡೀ ಸೃಷ್ಟಿಯೇ ಕೈಚಾಚಿ ದೃಷ್ಟಿ ತೆಗೆಯೋ ಅಪರೂಪದ ನಿಮ್ಮ ಜೋಡಿ ಎಂದಿಗು ಹೊಸತು
ನೀವೇ ತನಗನ್ನಬೇಕು ನಿನ್ನೇ ಪ್ರೀತಿಸುವೆ ಎಂದು ನಿನ್ನ ಪ್ರೀತಿಯ ದೇವತೆಯು ಬಳಿ ಬಂದಳು
ನಿನ್ನ ಹೃದಯದ ಬಾಗಿಲಿಗೆ ಬೆಳಕಾದಳು ಬೆಳ್ಳಿ ಬೆಳದಿಂಗಳಿನ ನಗೆಯಂತೆ
ಇಂದ್ರನ ಕುಲದ ದೊರೆ ಮಗಳಂತೆ ಜನ್ಮಜನ್ಮದ ನೆನಪು ಕರೆದಂತೆ
ಮನಸು ಬರೆದು ಕೊಟ್ಟಳು ಮಗುವಂತೆ ನಿನ್ನೇ ಪ್ರೀತಿಸುವೆ ಎಂದು
ನಿನ್ನ ಪ್ರೀತಿಯ ದೇವತೆಯು ಬಳಿ ಬಂದಳು ನಿನ್ನ ಹೃದಯದ ಬಾಗಿಲಿಗೆ ಬೆಳಕಾದಳು
------------------------------------------------------------------------------------------

ನಿನ್ನೇ ಪ್ರೀತಿಸುವೆ (೨೦೦೨) - ಪ್ರೇಮ ಪತ್ರ ಬರೆಯಿತು 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಚಿತ್ರಾ 

ಗಂಡು : ಪ್ರೇಮ ಪತ್ರ ಬರೆಯಿತು ಈ ಮನಸು ನೀ ಬರಬಾರದೇ 
           ಕಣ್ಣು ತೆರೆದು ಕನಸು ಕಂಡಿರುವೆ ಇಂದೇ ಸಿಗಬಾರದೇ 
           ಹೃದಯವಾಡೋ ಗುನು ಗುನು ಮಾತು ಕೇಳುವಾಸೆಗೆ 
           ಅಂದವಾದ ಊಹಾಲೋಕ ಅಳೆಯುವಾಸಗೆ 
           ಚಂದ್ರನಂತೆ ಮುಗುಳು ನಗುತ್ತ ಹೆಜ್ಜೆಹೆಜ್ಜೆಗೆ   
           ಕಾದು ಕಾದು ಹೇಳಿತು ಹೃದಯ ಪ್ರೀತಿಗೆ ಸ್ವಾಗತ 
           ಪ್ರೇಮ ಪತ್ರ ಬರೆಯಿತು ಈ ಮನಸು ನೀ ಬರಬಾರದೇ 
           ಕಣ್ಣು ತೆರೆದು ಕನಸು ಕಂಡಿರುವೆ ಇಂದೇ ಸಿಗಬಾರದೇ 
ಕೋರಸ್ : ಪ್ರೀತಿಗೆ ಸ್ವಾಗತ... ಪ್ರೀತಿಗೆ ಸ್ವಾಗತ 

ಕೋರಸ್ : ರೂರುರು... ಸಗರಿರಿ ನಿಸರಿ ಸಸ 
ಗಂಡು : ಕಣ್ಣಿಗೆ ಕಾಣದ ಕೈಯಿಗೇ ಸಿಕ್ಕದ ಚೆಲುವೆಯ ನಾನು ನೋಡಲು 
            ಕಲ್ಪನೆಯೊಳಗೂ ಭಾವನೆಯೊಳಗೂ ಅವಳಲೆ ಒಂದಾಗಲು 
            ಪ್ರತಿ ಸರತಿಯು ನಾ ಕೇಳುವುದೊಂದೆ ಗೆಳತಿಯ ಹೆಸರನು 
            ಆ ಗೆಳತಿಯ ಹೃದಯಕೆ ಲಗ್ಗೆಯ ಇಡಲು ದಾರಿಯು ಗೊತ್ತೇನು 
            ನನ್ನೊಳ ಕರೆಯೋ ಜೀವವ ಬೇರೆಯೋ ಪ್ರೀತಿಗೆ ಸ್ವಾಗತ 
ಕೋರಸ್ : ಪ್ರೀತಿಗೆ ಸ್ವಾಗತ... ಪ್ರೀತಿಗೆ ಸ್ವಾಗತ 
ಗಂಡು : ಪ್ರೇಮ ಪತ್ರ ಬರೆಯಿತು ಈ ಮನಸು ನೀ ಬರಬಾರದೇ 
           ಕಣ್ಣು ತೆರೆದು ಕನಸು ಕಂಡಿರುವೆ ಇಂದೇ ಸಿಗಬಾರದೇ 

ಗಂಡು : ಪದಗಳ ಮೀರಿದ ಸ್ವರಗಳ ದಾಟಿದ ಪ್ರೀತಿಯೇ ನನ್ನ ಹಾಡು 
            ಆಸೆಯ ಕಂಗಳಲಿ ರೆಪ್ಪೆಯ ನಡುವಳಿ ಕಟ್ಟಿದೆ ಎದೆಗೂಡು 
            ಓಡುವ ಮೋಡವ ಕರೆದು ಹೇಳಲೇ ಹಾಡುವ ನನ್ನ ಪ್ರೀತಿ 
            ಇಬ್ಬನಿ ಎಡೆಯಲು ಗಾಳಿಯೆಯ ಗುರುತಿಸೋ ಪ್ರೀತಿಯ ಹೊಸ ರೀತಿ 
            ಪ್ರತಿ ಭಾವದಲೂ ತನ್ನ ಪ್ರಭಾವ ಬೀರೋ ಪ್ರೀತಿಗೆ ಸ್ವಾಗತ 
ಕೋರಸ್ : ಪ್ರೀತಿಗೆ ಸ್ವಾಗತ... ಪ್ರೀತಿಗೆ ಸ್ವಾಗತ 
ಗಂಡು : ಪ್ರೇಮ ಪತ್ರ ಬರೆಯಿತು ಈ ಮನಸು ನೀ ಬರಬಾರದೇ 
           ಕಣ್ಣು ತೆರೆದು ಕನಸು ಕಂಡಿರುವೆ ಇಂದೇ ಸಿಗಬಾರದೇ 
           ಹೃದಯವಾಡೋ ಗುನು ಗುನು ಮಾತು ಕೇಳುವಾಸೆಗೆ 
           ಅಂದವಾದ ಊಹಾಲೋಕ ಅಳೆಯುವಾಸಗೆ 
           ಚಂದ್ರನಂತೆ ಮುಗುಳು ನಗುತ್ತ ಹೆಜ್ಜೆಹೆಜ್ಜೆಗೆ   
           ಕಾದು ಕಾದು ಹೇಳಿತು ಹೃದಯ ಪ್ರೀತಿಗೆ ಸ್ವಾಗತ 
           ಪ್ರೇಮ ಪತ್ರ ಬರೆಯಿತು ಈ ಮನಸು ನೀ ಬರಬಾರದೇ 
           ಕಣ್ಣು ತೆರೆದು ಕನಸು ಕಂಡಿರುವೆ ಇಂದೇ ಸಿಗಬಾರದೇ 
--------------------------------------------------------------------------------------

ನಿನ್ನೇ ಪ್ರೀತಿಸುವೆ (೨೦೦೨) - ಕೋಗಿಲೆಯ ಹಾಡು
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಚಿತ್ರಾ

ಲಾಲಲ ಲಾಲ ಲಲಲಾಲಾ ಲಾಲಾಲಾಲಾಲಾಲಾ 
ಕೋಗಿಲೆ ಹಾಡು ಚಂದಾನಾ ಕೊಂಬೆಯ ಸಿರಿ ಚಂದಾನಾ 
ಹುಣ್ಣಿಮೆ ತೋಟ ಚಂದಾನಾ ಬೆಳಕಿನ ಗರಿ ಚಂದಾನಾ 
ಕೋಗಿಲೆ ಹಾಡು ಚಂದಾನಾ ಕೊಂಬೆಯ ಸಿರಿ ಚಂದಾನಾ 
ಹುಣ್ಣಿಮೆ ತೋಟ ಚಂದಾನಾ ಬೆಳಕಿನ ಗರಿ ಚಂದಾನಾ 
ಅಂದವಾದ ಅರಳು ಮಲ್ಲೆ ಚಂದಾನಾ ಅರಳು ಮರಳು ಮೆಘ ಮಾಲೆ 
ಚಂದಾನಾ ತಂಗಾಳಿ ತಂದಾನಾ ಗಿರಗಿಟ್ಟಲೆ ಚಂದಾನಾ 
ಕೋಗಿಲೆ ಹಾಡು ಚಂದಾನಾ ಕೊಂಬೆಯ ಸಿರಿ ಚಂದಾನಾ 
ಹುಣ್ಣಿಮೆ ತೋಟ ಚಂದಾನಾ ಬೆಳಕಿನ ಗರಿ ಚಂದಾನಾ 

ಜೊರು ಮಳೆಯಲ್ಲಿ ಜಾರೊ ಮಾವಿನ ತೊಪಲ್ಲಿ ಸೇರಿ ತೂಗೋಯ್ಯಾಲೆ 
ಆಡಿದ್ಹಂಗೆ ಮಧ್ಯ ರಾತ್ರಿಲಿ ಮೈ ನವಿರಿಳಿಸಿ ಮತ್ತೆ ಬಂತೂ ನೆನಪು ಮನಸ್ಸಿಗೆ 
ಕಣ್ತೆರೆಯದ ಎದೆಯಲ್ಲಿ ಅಲೆ ಎಬ್ಬಿಸೊ ಕಡಲಂತೆ ಸಾಗಿ ಹೊಯ್ತು ಇಸವಿಗಳು 
ಮಾಗಿತು ಈ ಸವಿಗಳು ಮಾತುಗಳು ಚಂದಾನಾ ಭಾವಗಳು ಚಂದಾನಾ 
ಕೋಗಿಲೆ ಹಾಡು ಚಂದಾನಾ ಕೊಂಬೆಯ ಸಿರಿ ಚಂದಾನಾ 
ಹುಣ್ಣಿಮೆ ತೋಟ ಚಂದಾನಾ ಬೆಳಕಿನ ಗರಿ ಚಂದಾನಾ 

ಮೊಡದ ಹಿಂದೆ ಚಂದ್ರ ಬಚ್ಚಿಕೊಳ್ಳೊದು ಚುಕ್ಕಿಗಳು ಇಣುಕಿ ನೊಡಲಿಕ್ಕೆ 
ಮುದ್ದು ಗೊಂಬೆಗೆ ನಾವು ಚುಕ್ಕಿ ಇಡೊದು ಆ ಚಂದ್ರ ಇಣುಕಿ ನೊಡಲಿಕ್ಕೆ 
ಕನಸು ಕೊಡೊ ಕಣ್ಗಳಲಿ ಕಲ್ಪನೆಗಳ ಕಂಪನವು ನೀರು ಹರಿದರೆ ಕಲರವವೋ 
ಕಾಲ ಸರಿದರೆ ಅನುಭವವೋ ಈ ಒಲವು ಚಂದಾನಾ ಈ ಒಗಟು ಚಂದಾನಾ 
ಕೋಗಿಲೆ ಹಾಡು ಬಲು ಚಂದಾ ಕೊಂಬೆಯ ಸಿರಿ ಬಲು ಚಂದಾ ಹುಣ್ಣಿಮೆ ತೋಟ ಬಲು ಚಂದಾ 
ಬೆಳಕಿನ ಗರಿ ಬಲು ಚಂದಾ ಅಂದವಾದ ಅರಳು ಮಲ್ಲೆಯು ಚಂದಾ 
ಅರಳು ಮರಳು ಮೆಘ ಮಾಲೆಯು ಚಂದಾ ತಂಗಾಳಿನು ಚಂದಾ 
ಗಿರಿಗಿಟ್ಲೆನು ಚಂದಾ ಕೋಗಿಲೆ ಹಾಡು ಬಲು ಚಂದಾ ಕೊಂಬೆಯ ಸಿರಿ ಬಲು ಚಂದಾ 
ಹುಣ್ಣಿಮೆ ತೋಟ ಬಲು ಚಂದಾ ಬೆಳಕಿನ ಗರಿ ಬಲು ಚಂದಾ
-----------------------------------------------------------------------------------------

ನಿನ್ನೇ ಪ್ರೀತಿಸುವೆ (೨೦೦೨) - ಒಲವೇ ನನ್ನ ಒಲವೇ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಚಿತ್ರಾ

ಒಲವೇ ನನ್ನೊಲವೇ ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸುಗಳ ಒಲವಿಂದ ನನಸಾಗಿ ಕೊಡುವೆ ನನಗೆ
ನಾ ಬಯಸದ ಹಾಗೆ ಬಂತು ನನ್ನವಳ ಸ್ನೇಹ
ಈ ಸ್ನೇಹವೆ ಬರೆಸುವುದೀಗ ಪ್ರೇಮದ ಬರಹ
ಈ ಉಸಿರೇ ಹಾಳೆಯು ಹೃದಯವೆ ಲೇಖನಿ ಬರೆಯುವೆ ಕರೆಯೋಲೆ
ಒಲವೇ ನನ್ನೊಲವೇ ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸುಗಳ ಒಲವಿಂದ ನನಸಾಗಿ ಕೊಡುವೆ ನನಗೇ..

ಹಾಡಿನಂತೆ ಪಲುಕುತಿದೆ ಅವಳ ಪ್ರತಿ ಹೆಜ್ಜೆ 
ಹಂಸದಂತೆ ಕುಲುಕುತಿದೇ ಅವಳಂದಾದ ಗೆಜ್ಜೆ 
ಹುಣ್ಣಿಮೆಯಾ ಉರುಹೊಡೆಯೋ ಅವನ ಕಿರುನಗೆಯು
ಕತ್ತಲೆಗು ಕಣ್ಣೂ ಬರೆಯೋ.. ಆ ನೋಟವೇ ಕಲೆಯು
ಸಾವಿರ ಶಿಲ್ಪದ ಥಳುಕುಗಳಿಂದ ಹುಟ್ಟಿತು ಅವಳ ನಡೆ
ಸಾವಿರ ಜೋಗದ ಬಳುಕುಗಳಿಂದ ಹುಟ್ಟಿತು ಅವಳ ಜಡೆ
ಎಷ್ಟು ಬೆರೆತರೂ ಚೆಲುವು ಒಲವಿಗಾತುರ
ಒಲವೇ ನನ್ನೊಲವೇ ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸುಗಳ ಒಲವಿಂದ ನನಸಾಗಿ ಕೊಡುವೆ ನನಗೆ

ಹೋಯ್ ಸುಮ್ಮನೆ ನಾನಿದ್ದರೆ ಕನಸು ಕೊಡುತಾಳೆ
ಕಣ್ಣೆದುರು ನಾ ಬಂದರೆ ಸುಮ್ಮನಿರುತಾಳೆ
ರೆಪ್ಪೆಗಳ ತುಟಿ ತರೆದು ಮತ್ತನಿಡುತಾನೆ (ನಗು)
ತುಟಿಗಳ ರೆಪ್ಪೆಯಲಿ ತುಂಬಿಕೊಳುತಾ..ನೆ
ಕಾರಣವಿಲ್ಲದೆ ಬರದೂ ಪ್ರೀತಿ ಒಪ್ಪಿಕೊ ಈ ಹೃದಯಾ..
ಶ್ರಾವಣ ಮಾಸಕು ಮಾಗಿಯ ಚಳಿಗು ಬೆಸುಗೆ ಈ ಸಮಯಾ..
ಎಷ್ಟು ಬೆರೆತರೂ ಒಲವು ಚೆಲುವಿಗಾತುರ
ಒಲವೇ ನನ್ನೊಲವೇ ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸುಗಳ ಒಲವಿಂದ ನನಸಾಗಿ ಕೊಡುವೆ ನನಗೆ
ನಾ ಬಯಸದ ಹಾಗೆ ಬಂತು ನನ್ನವಳ ಸ್ನೇಹ
ಈ ಸ್ನೇಹವೆ ಬರೆಸುವುದೀಗ ಪ್ರೇಮದ ಬರಹ
ಈ ಉಸಿರೇ ಹಾಳೆಯು ಹೃದಯವೇ ಲೇಖನಿ ಬರೆಯುವೆ ಕರೆಯೋಲೆ 
ಒಲವೇ ನನ್ನೊಲವೇ ನನ್ನ ಮೇಲೆ ಎಷ್ಟೊಂದು ಒಲವೆ ನಿನಗೆ
ಒಲವಿನ ಕನಸುಗಳ ಒಲವಿಂದ ನನಸಾಗಿ ಕೊಡುವೆ ನನಗೇ..
------------------------------------------------------------------------------------------

ನಿನ್ನೇ ಪ್ರೀತಿಸುವೆ (೨೦೦೨) - ನನ್ನ ಪ್ರೀತಿಯ ದೇವತೆ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಚಿತ್ರಾ 

ಗಂಡು : ನನ್ನ ಪ್ರೀತಿಯ ದೇವತೆಯು ಬಳಿ ಬಂದಳು 
            ನನ್ನ ಹೃದಯದ ಬಾಗಿಲಿಗೆ ಬೆಳಕಾದಳು 
            ಬೆಳ್ಳಿ ಬೆಳದಿಂಗಳಿನ  ನಗೆಯಂತೆ 
            ಇಂದ್ರನ ಕುಲದಾ ದೊರೆ ಮಗಳಂತೆ 
            ಜನ್ಮ ಜನ್ಮದ ನೆನೆಪು ಕರೆದಂತೆ 
            ಅಂದೇ ಬಿಟ್ಟಳು ಮನಸು ಬರೆದಂತೆ ನಿನ್ನೇ ಪ್ರೀತಿಸುವೇ ಎಂದೂ 

ಗಂಡು : ಎಷ್ಟೋ ಚೈತ್ರಗಳಲ್ಲಿ ಎಷ್ಟೋ ಚಿಗುರುಗಳಲ್ಲಿ ಕಂಡೆ ನಿನ್ನ ಗುರುತನ್ನೂ 
            ಎಷ್ಟೋ ದಿಕ್ಕುಗಳಲ್ಲಿ ಎಷ್ಟೋ ಬೆಳಕುಗಳಲ್ಲಿ ಕಂಡೆ ನಿನ್ನ ನೆರಳನ್ನು 
            ನಿನ್ನ ನಗುವೇ ನನ್ನೆದೆಗೆ ಅಮೃತ ಕಳಶ 
            ನಿನ್ನ ಸ್ಪರ್ಶವೇ ಈ ಉಸಿರಿಗೆ ಮಾಯದ ಹರುಷ 
            ನಿನ್ನ ನೋಟದ ಹೊಂಬೆಳಕಲಿ ಒಂದು ನಿಮಿಷ    
            ನಾನಿದ್ದರೆ ಅದೇ ನನಗೆ ಸಾವಿರ ವರುಷ 
            ಎನ್ನುತಿದೆ ಈ ಮನಸು ನಿನ್ನೇ ಪ್ರೀತಿಸುವೇ ಎಂದೂ 
            ನನ್ನ ಪ್ರೀತಿಯ ದೇವತೆಯು ಬಳಿ ಬಂದಳು 
            ನನ್ನ ಹೃದಯದ ಬಾಗಿಲಿಗೆ ಬೆಳಕಾದಳು 

ಗಂಡು : ಎಷ್ಟೋ ಕನಸುಗಳಲ್ಲಿ ಆಸೆಯ ನೀರನು ಚೆಲ್ಲಿ ಬೆಳಿಸಿದೆ ಒಲವನ್ನು 
            ಎಷ್ಟೋ ವೃತಗಳ ಮಾಡಿ ಕಾಯುವ ಮಂತ್ರವ ಹಾಡಿ ಬೇಡಿಕೊಂಡೆ ಜೊತೆಯನು 
            ನಿನ್ನ ಹೃದಯಕೆ ಕಣ್ಣಿಟ್ಟು ಕಾವಲು ಇರುವೆ 
            ನನ್ನ ಹೃದಯವ ಕೈಗಿಟ್ಟು ಕಾಣಿಕೆ ಕೊಡುವೆ 
            ನಿನ್ನುಸಿರಿಗೆ ನನ್ನುಸಿರಿನ ಸ್ನಾನವ ಮಾಡಿ 
            ಪ್ರತಿ ಹನಿಯಲು ನಿನ ಹೆಸರನು ಬರೆದು ಬಿಡುವೆ 
            ಹೀಗಿದ್ದರೂ ತಿಳಿಲಿಲ್ಲ ನಿನ್ನೇ ಪ್ರೀತಿಸುವೆ ಎಂದು 
            ನನ್ನ ಪ್ರೀತಿಯ ದೇವತೆಯು ಬಳಿ ಬಂದಳು 
            ನನ್ನ ಹೃದಯದ ಬಾಗಿಲಿಗೆ ಬೆಳಕಾದಳು 
            ಬೆಳ್ಳಿ ಬೆಳದಿಂಗಳಿನ  ನಗೆಯಂತೆ 
            ಇಂದ್ರನ ಕುಲದಾ ದೊರೆ ಮಗಳಂತೆ 
            ಜನ್ಮ ಜನ್ಮದ ನೆನೆಪು ಕರೆದಂತೆ 
            ಅಂದೇ ಬಿಟ್ಟಳು ಮನಸು ಬರೆದಂತೆ ನಿನ್ನೇ ಪ್ರೀತಿಸುವೇ ಎಂದೂ 
-----------------------------------------------------------------------------------------

ನಿನ್ನೇ ಪ್ರೀತಿಸುವೆ (೨೦೦೨) - ಗುಡಿಯ ಗಂಟೆಯೂ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಚಿತ್ರಾ

ಗುಡಿ ಘಂಟೆಯು ಮೊಳಗುವ ವೇಳೆ ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ ಎಳೆ ಮನಸು ಬೆಳಗುತಿದೆ
ಗುಡಿ ಘಂಟೆಯು ಮೊಳಗುವ ವೇಳೆ ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ ಎಳೆ ಮನಸು ಬೆಳಗುತಿದೆ
ಆ ದೇವರ ಪೂಜೆಗೆ ನೀ ಬರಲು ನನ್ನ ದೇವಿಯ ನೊಡಲು ನಾ ಬರಲು
ಅದೇ ಪ್ರೀತಿಗೆ ಶುಭಕಾಲ 
ಗುಡಿ ಘಂಟೆಯು ಮೊಳಗುವ ವೇಳೆ ಎದೆ ಘಂಟೆಯು ಮೊಳಗುತಿದೆ
ಪ್ರತಿ ಸಂಜೆಯಲಿ ಮುಂಜಾನೆಯಲಿ ಎಳೆ ಮನಸು ಬೆಳಗುತೀದೆ

ಕೋರಸ್ : ಆಆಆ... ಶ್ರೀರಾಮಚಂದ್ರನ ಕರೆದನಂತೆ ಆ ಸೀತಾಮಾತೆ ಬಂದಳಂತೆ 
               ಇಬ್ಬರ ಜೋಡಿ ಹಬ್ಬದಂತೆ  ಕಾಣಲು ಕಣ್ಣು ಸಾಲದಂತೆ 
               ಆಆಆ... ಶ್ರೀರಾಮಚಂದ್ರನ ಕರೆದನಂತೆ ಆ ಸೀತಾಮಾತೆ ಬಂದಳಂತೆ 
               ಇಬ್ಬರ ಜೋಡಿ ಹಬ್ಬದಂತೆ  ಕಾಣಲು ಕಣ್ಣು ಸಾಲದಂತೆ 
ಹೆಣ್ಣು : ಕಣ್ಣೊಳಗೆ ಮುತ್ತುಗಳಾಗಿರಬೇಕು             ಕೋರಸ್ : ಇರಬೇಕು 
ಗಂಡು : ಗುಂಡಿಗೆಯ ಮೆತ್ತೆಯ ಮಾಡಿಡಬೇಕು      ಕೋರಸ್ : ಇಡಬೇಕು                                  
ಹೆಣ್ಣು : ಜೀವವನೇ ಒತ್ತೆಯ ಮಾಡಿಡಬೇಕು          ಕೋರಸ್ : ಇಡಬೇಕು  ಇಡಬೇಕು
ಗಂಡು : ನನ್ನವಳೆದೆಯಲಿ ಆಸರೆ ನಾನು ಅವಳ ಕಂಗಳ ನಿದಿರೆ ನಾನು 
            ಈ ಮಗುವಿನ ಪಾದವು ನೆಲಕೆ ಸೋಕದ ಹಾಗೆ ನಡೀಬೇಕು 
ಹೆಣ್ಣು : ಹಣೆಯ ತಿಲಕದ ಹಾಗೆ ನನ್ನಲಿ ಬೆರೆತು ಬಿಡಬೇಕು 
ಗಂಡು : ಗುಡಿ ಗಂಟೆಯು ಮೊಳಗುವ ವೇಳೆ 
ಹೆಣ್ಣು : ಕನಸನು ಕರೆದು ಸಿಹಿಯಾ ಕೊಡಬೇಕು            ಕೋರಸ್ : ಕೊಡಬೇಕು 
ಗಂಡು : ನಿರ್ಮಲ ಬಯಕೆಗೆ ಸಹಿಯ ಇಡಬೇಕು           ಕೋರಸ್ : ಇಡಬೇಕು ಇಡಬೇಕು  
ಗಂಡು : ಕಾಯುವ ಶಿಕ್ಷೆಯ ಮರೆಸಿ ಬಿಡಬೇಕು              ಕೋರಸ್ : ಬಿಡಬೇಕು 
ಹೆಣ್ಣು : ನನ್ನೀ ಬದುಕೆ ನೀನಾಗಿರಬೇಕು                       ಕೋರಸ್ : ಇರಬೇಕು ಇರಬೇಕು 
ಗಂಡು : ಹೃದಯದ ಚೀಲದ ಒಳಗಿದೆ ಶೀಲ ಶೀಲನ ಕಾಯುವೆ ಸಾವಿರ ಕಾಲ 
            ಕತ್ತಲಲಿ ಕೈ ಹಿಡಿದು ಪ್ರೀತಿಯ ಬೆಳಕು ಕೊಡಬೇಕು 
ಹೆಣ್ಣು : ನೆರಳಿಗೆ ಪ್ರತಿ ನೆರಳಾಗಿ ನಾನು ಸೇರಲೇಬೇಕು 
          ಹ್ಹಾಂ... ಗುಡಿ ಘಂಟೆಯ ಮೊಳಗುವ ವೇಳೆ 
-----------------------------------------------------------------------------------------

No comments:

Post a Comment