1869. ಜೋಡಿ (೨೦೦೧)


ಜೋಡಿ ಚಲನಚಿತ್ರದ ಹಾಡುಗಳು 
  1. ಓ ಪ್ರೀತಿಯೇ 
  2. ಮಿಂಚಿ ನಿನ್ನವ 
  3. ನೀಲಗಿರಿಯ ಮೇಲೆ 
  4. ಜೆಂಟಲಮ್ಯಾನ್ 
  5. ಡಾರ್ಲಿಂಗ್ ಡಾರ್ಲಿಂಗ್ 
ಜೋಡಿ (೨೦೦೧) - ಓ ಪ್ರೀತಿಯೇ ನೀನೆಷ್ಟು ದೂರವೇ 
ಸಂಗೀತ : ಎಸ್.ಏ.ರಾಜಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಚಿತ್ರಾ

ಗಂಡು : ಓ ಪ್ರೀತಿಯೇ ನಿನೆಷ್ಟು ದೂರವೇ
ಹೆಣ್ಣು :ಈ ದೂರವು ಒಂದು ಕ್ಷಣವೂ ಮಾತ್ರವೇ
ಗಂಡು :ಮಾತಿನಲೆ ಈ ಪ್ರೀತಿಯು ಕನಸುಗಳ ತೆರೆದಾಯಿತು
ಹೆಣ್ಣು :ಕಾತರದ ಕಣ್ಣಂಚಲೀ ಮನಸುಗಳು ಬೆರೆತಾಯಿತು
ಗಂಡು : ಈಗಾದ್ರೂ ಹೇಳೇ ಬೇಗ ಮುಖಾಮುಖಿ ಯಾವಾಗ.
            ಓ ಪ್ರೀತಿಯೇ ನಿನೆಷ್ಟು ದೂರವೇ
ಹೆಣ್ಣು :ಈ ದೂರವು ಒಂದು ಕ್ಷಣವೂ ಮಾತ್ರವೇ

ಹೆಣ್ಣು : ನಾನೊಂದು ತೀರ ನೀನೊಂದು ತೀರ ಇಬ್ಬರ ಮನಸು ಭಾರ ಭಾರ
ಗಂಡು : ಈ ಒಂಟಿತನವೂ ಶಾಶ್ವತವಲ್ಲ ನಂಬಿಕೆಯೊಂದೆ ನಮಗಾಧಾರ
ಹೆಣ್ಣು : ನಿಂತಲ್ಲಿ ಕುಂತಲ್ಲಿ ನಿರೀಕ್ಷೆಯೂ ಸಹಜ
ಗಂಡು :ಪ್ರತಿಯೊಂದು ಹೆಜ್ಜೆಯಲು ಪರೀಕ್ಷೆಯು ಸಹಜ
ಹೆಣ್ಣು : ದಯಮಾಡಿ ಬಾ ಹತ್ತಿರ ತಾಳೆನು ಈ ಕಾತರ
ಗಂಡು :ನಿನಗಾಗಿ ಜೀವಾ ಕೊಡಲು ಕಾಯುತಿರುವೆ ಎಲ್ಲಿರುವೆ
ಹೆಣ್ಣು : ಓ ಪ್ರೀತಿಯೇ ನಿನೆಷ್ಟು ದೂರವೇ
ಗಂಡು :ಈ ದೂರವು ಒಂದು ಕ್ಷಣವೂ ಮಾತ್ರವೇ

ಗಂಡು :ಒಂದೊಂದು ನಿಮಿಷ ವರುಷದ ಹಾಗೆ ಕಾಯಲು ಕಷ್ಟ ಬೇಗ ಕೂಗೆ
ಹೆಣ್ಣು : ಒಂದು ಸರತಿ ಸಿಗಲು ನೀನು ಏನೇ ಕಷ್ಟ ಬಂದರೂ ಸರಿಯೇ
ಗಂಡು: ಈ ಪ್ರೀತಿಯ ತಳಮಳವು ಎಲ್ಲಿಂದ ಶುರುವಾಯ್ತು
ಹೆಣ್ಣು : ಅಲ್ಲಿಂದಲ್ಲೇ ಈ ಜೀವಕೆ ನಿದಿರೆಯು ಮರೆತೋಯ್ತು
ಗಂಡು : ಗಾಳಿಯಲು ನಿನ್ನ ಸ್ಪರ್ಶವ ಹುಚ್ಚನಂತೆ ಹುಡುಕಾಡಿದೆ
ಹೆಣ್ಣು : ಪ್ರಿತ್ಸೋರು ನಾವು ಇರಲು ಸೋಲೇ ಇಲ್ಲ ಪ್ರೀತಿಗೆ
ಗಂಡು : ಓ ಪ್ರೀತಿಯೇ ನಿನೆಷ್ಟು ದೂರವೇ
ಹೆಣ್ಣು :ಈ ದೂರವು ಒಂದು ಕ್ಷಣವೂ ಮಾತ್ರವೇ
ಗಂಡು :ಮಾತಿನಲೆ ಈ ಪ್ರೀತಿಯು ಕನಸುಗಳ ತೆರೆದಾಯಿತು
ಹೆಣ್ಣು :ಕಾತರದ ಕಣ್ಣಂಚಲಿ ಮನಸುಗಳು ಬೆರೆತಾಯಿತು
ಗಂಡು :ಈಗಾದ್ರು ಹೇಳೇ ಬೇಗ ಮುಖಾಮುಖಿ ಯಾವಾಗ.
           ಓ ಪ್ರೀತಿಯೇ ನಿನೆಷ್ಟು ದೂರವೇ
ಹೆಣ್ಣು :ಈ ದೂರವು ಒಂದು ಕ್ಷಣವೂ ಮಾತ್ರವೇ
--------------------------------------------------------------------------------------------------------   

ಜೋಡಿ (೨೦೦೧) - ಮಿಂಚಿ ನಿನ್ನವ 
ಸಂಗೀತ : ಎಸ್.ಏ.ರಾಜಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಮನು, ಅನುರಾಧ ಶ್ರೀರಾಮ್ 

ಹೆಣ್ಣು : ಮಿಂಚಿ ನಿನ್ನವ ನಾನು ಅಂತೂ ಕಣ್ಣ ಪ್ರೇಮದ ಪತ್ರ 
ಗಂಡು : ಕೆನ್ನೆ ಮಿಂಚಲಿ ನಾನು ಕಂಡೆ ನೂರು ರಂಗಿನ ಚಿತ್ರ 
ಹೆಣ್ಣು : ಮಧುರ ಮಧುರ ಈ ಕ್ಷಣ ಮೊದಲ ಮೊದಲ ನಮ್ಮ ಮಿಲನ 
ಗಂಡು : ಮರೆಯೆ ನಾನು ಎಂದಿಗೂ ಎದಿರು ನೀನು ಬಂದಾ ಸುದಿನ 
ಹೆಣ್ಣು : ಎಲ್ಲಿಂದ ಬಂತೀಗ ನಾನು ಕಾಣೆ ಈ ಪ್ರೇಮ ಸಂಭಾಷಣೆ 
ಗಂಡು : ಕವಿಯಾದೆ ನೀ ತಂದ ಸ್ಪೂರ್ತಿಯಿಂದ ನೀನಂತೂ ನನ್ನಾಣೆ 

ಗಂಡು : ನಗುವಿರುವೆ ನವರಸದ ಕೈಪಿಡಿ ಪ್ರೀತಿ ಮುನ್ನಡಿ 
ಹೆಣ್ಣು : ಕಣ್ಣುಗಳೇ ಹೃದಯದ ಈ ಚಿತ್ರಕೆ ನಿಜ ಕನ್ನಡಿ 
ಗಂಡು : ಬಗೆ ಬಗೆಯ ರಾಗಗಳ ನುಡಿಸುವೆ ನಿನ್ನ ಒಡಲಲಿ 
ಹೆಣ್ಣು : ಸುಖ ಕ್ಷಣದ ಮುತ್ತುಗಳ ಸರವನೇ ತಂದೆ ಒಲವಲಿ 
ಗಂಡು : ಅನುಭದ ಹೊಸ ಕವಿತೆಗಳೋ ನಾಳೆ ಬರಲಿರುವ ಸಿಹಿ ಘಳಿಗೆಗಳೋ 
ಹೆಣ್ಣು : ಬಿಸಿಲಿರಲಿ ಇಲ್ಲ ಮಳೆಯಿರಲಿ ನಿನ್ನ ಜೊತೆಯಿರುವೆ ಎಂದು ನೆನಪಿರಲಿ 
ಗಂಡು : ಎಂದೆಂದೂ ಈ ಪ್ರೇಮ ಅರಳುತ ನಗುತಿರಲಿ 
ಹೆಣ್ಣು : ಮಿಂಚಿ ನಿನ್ನವ ನಾನು ಅಂತೂ ಕಣ್ಣ ಪ್ರೇಮದ ಪತ್ರ 
ಗಂಡು : ಕೆನ್ನೆ ಮಿಂಚಲಿ ನಾನು ಕಂಡೆ ನೂರು ರಂಗಿನ ಚಿತ್ರ 
  
ಹೆಣ್ಣು : ಒಳಗೊಳಗೇ ನಗು ನಗುತ ಕೆಣಕಿದ ನನ್ನ ಕೆಣಕಿದೆ 
ಗಂಡು : ಬೆವರಿನಲಿ ಕುಂಕುಮವು ಕರಗಿದೆ ಗುಟ್ಟು ತಿಳಿಸಿದೆ 
ಹೆಣ್ಣು : ಕುದಿಯುತಿಹ ಬಯಕೆಗಳು ತಳೆದಿದೆ ರೂಪ ತಳೆದಿದೆ 
ಗಂಡು : ಬಿಡುತಿರುವ ಬಿಸಿ ಉಸಿರು ತಿಳಿಸಿವೆ ಆಸೆ ತಿಳಿಸಿವೆ 
ಹೆಣ್ಣು : ಮನಸ್ಸಿದನ್ನು ನಿನ್ನ ಗುಡಿ ಮಾಡಿ ನಾ ಅರ್ಚಿಸುವೆ ನಿನ್ನ ಪೂಜಿಸುವೆ 
ಗಂಡು : ಕಂಗಳಲಿ ನನ್ನ ತೊಳಿನಲಿ ನಿನ್ನ ಮುಚ್ಚಿಡುವೆ ಎಂದೂ ಬಚ್ಚಿಡುವೆ 
ಹೆಣ್ಣು : ಎಂದೆಂದೂ ಈ ಪ್ರೇಮ ಅರಳುತ ನಗುತಿರಲಿ 
          ಮಿಂಚಿ ನಿನ್ನವ ನಾನು ಅಂತೂ ಕಣ್ಣ ಪ್ರೇಮದ ಪತ್ರ 
ಗಂಡು : ಕೆನ್ನೆ ಮಿಂಚಲಿ ನಾನು ಕಂಡೆ ನೂರು ರಂಗಿನ ಚಿತ್ರ 
ಹೆಣ್ಣು : ಮಧುರ ಮಧುರ ಈ ಕ್ಷಣ ಮೊದಲ ಮೊದಲ ನಮ್ಮ ಮಿಲನ 
ಗಂಡು : ಮರೆಯೆ ನಾನು ಎಂದಿಗೂ ಎದಿರು ನೀನು ಬಂದಾ ಸುದಿನ 
ಹೆಣ್ಣು : ಎಲ್ಲಿಂದ ಬಂತೀಗ ನಾನು ಕಾಣೆ ಈ ಪ್ರೇಮ ಸಂಭಾಷಣೆ 
ಗಂಡು : ಕವಿಯಾದೆ ನೀ ತಂದ ಸ್ಪೂರ್ತಿಯಿಂದ ನೀನಂತೂ ನನ್ನಾಣೆ 
--------------------------------------------------------------------------------------------------------
   
ಜೋಡಿ (೨೦೦೧) - ನೀಲಗಿರಿಯ ಮೇಲೆ 
ಸಂಗೀತ : ಎಸ್.ಏ.ರಾಜಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಅರ್ಚನಾ, ಹೇಮಂತ 

ಗಂಡು : ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ ನೀಲಿ ಕಣ್ಣ ಹೆಣ್ಣೇ ನೀ ತಂದೆ ಪ್ರೀತಿ ನಂಗೆ 
            ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ ನೀಲಿ ಕಣ್ಣ ಹೆಣ್ಣೇ ನೀ ತಂದೆ ಪ್ರೀತಿ ನಂಗೆ 
ಹೆಣ್ಣು : ಥಂಡಿ ಗಾಳಿ ಚಳಿಯಂತೆ ಹ್ಹಾ... ಟೋಕಿನ ಬಿಸಿ ಬೇಕಂತೇ 
ಗಂಡು : ನೀ ಕೇಳದೆ ಮುತ್ತು ಅದು ಸಿಕ್ಕರೆ ಒಡಲಿ ಒತ್ತು 
ಹೆಣ್ಣು : ಅನುಭವ ಹೊಸದಲ್ಲ 
ಗಂಡು : ಹ್ಹಾಂ ... ಸುಖ ಸುಖ ದಿನವೆಲ್ಲ 
            ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ ನೀಲಿ ಕಣ್ಣ ಹೆಣ್ಣೇ ನೀ ತಂದೆ ಪ್ರೀತಿ ನಂಗೆ 

ಗಂಡು : ಈ ಮನಸಿದುವೇ ಗಾಳಿ ಪಟದ ಹಾಗೆ ಆ ಗಗನದಲಿ ಹಾರಾಡಿದೆ 
ಹೆಣ್ಣು : ನನ್ನಾಸೆಗಳೂ ಕಾಡು ಕುದುರೆ ಹಾಗೆ ಮನ ಬಂದ ಕಡೆ ಓಡಿದೆ 
ಗಂಡು : ನೀ ಎಲ್ಲೋ ಹೇಗೋ ನಾನು ಕಾಣೆ ನನ್ನಲಿ ಒಂದಾದೆ 
ಹೆಣ್ಣು : ಈ ನನ್ನ ನಾಡಿ ಜೀವ ಎಲ್ಲ ನೀನೇ ನೋಡೆಂದೇ 
ಗಂಡು : ಕನಸಿದು ಓ ಕವಿತೆ ಇದೋ 
ಹೆಣ್ಣು : ಮಿಲನವು ಬಲು ಚೆಂದ 
ಗಂಡು : ಹೇ.. ಬಲು ಸುಖ ಆನಂದ 
            ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ ನೀಲಿ ಕಣ್ಣ ಹೆಣ್ಣೇ ನೀ ತಂದೆ ಪ್ರೀತಿ ನಂಗೆ 

ಹೆಣ್ಣು : ಈ ಕುಂಕುಮವು ಮೈಯ್ಯ ಬೆವರಿನಲ್ಲಿ ತಾಕಲು ನೀರಾಗಿದೆ 
ಗಂಡು : ಈ ಬಿಸಿ ಉಸಿರು ತನ್ನ ವೇಗದಲ್ಲಿ ನಿನ್ನೊಳಗಿರುವ ಗುಟ್ಟು ಹೇಳಿದೆ 
ಹೆಣ್ಣು : ಕರ್ಪೂರದಂತೆ ಹೋದೆ ಕರಗಿ ಕೇಳಿ ನಿನ ಮಾತು 
ಗಂಡು : ನನ್ನಲ್ಲಿ ಹೊಮ್ಮಿ ಬಂತು ದುಮ್ಮಿಕ್ಕಿ ಆಸೆಯ ಜಲಪಾತ 
ಹೆಣ್ಣು : ಮರೆತಿದೆ ಜಗವೆಲ್ಲ ಖುಷಿ ಖುಷಿ ಬಾಳೆಲ್ಲ 
ಗಂಡು : ಮಿಲನವು ಬಲು ಚೆಂದ 
ಹೆಣ್ಣು : ಬಲು ಸುಖ ಆನಂದ 
ಗಂಡು : ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ ನೀಲಿ ಕಣ್ಣ ಹೆಣ್ಣೇ ನೀ ತಂದೆ ಪ್ರೀತಿ ನಂಗೆ 
ಹೆಣ್ಣು : ಥಂಡಿ ಗಾಳಿ ಚಳಿಯಂತೆ ಹ್ಹಾ... ಟೋಕಿನ ಬಿಸಿ ಬೇಕಂತೇ 
ಗಂಡು : ನೀ ಕೇಳದೆ ಮುತ್ತು ಅದು ಸಿಕ್ಕರೆ ಒಡಲಿ ಒತ್ತು 
ಹೆಣ್ಣು : ಅನುಭವ ಹೊಸದಲ್ಲ 
ಗಂಡು : ಹ್ಹಾಂ ... ಸುಖ ಸುಖ ದಿನವೆಲ್ಲ 
            ನೀಲಗಿರಿ ಮೇಲೆ ಆ ಥಂಡಿ ಗಾಳಿ ಹಂಗೆ ನೀಲಿ ಕಣ್ಣ ಹೆಣ್ಣೇ ನೀ ತಂದೆ ಪ್ರೀತಿ ನಂಗೆ 
-------------------------------------------------------------------------------------------------------

ಜೋಡಿ (೨೦೦೧) - ಜೆಂಟಲಮ್ಯಾನ್ 
ಸಂಗೀತ : ಎಸ್.ಏ.ರಾಜಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ದೇವನ್ 

ಕೋರಸ್ :ಹಾಯೇ ಸೂಕು ಸೂಕು ಹಾಯಾಯೇ.. ಹಾಯೇ ಸೂಕು ಸೂಕು ಹಾಯಾಯೇ 
ಗಂಡು : ಜಂಟಲ್ ಮೆನ್ ವೆಲ್ಕಮ್ ಮ್ಯಾನ್  ಜಂಟಲ್ ಮೆನ್ ವೆಲ್ಕಮ್ ಮ್ಯಾನ್  
            ಜಂಟಲ್ ಮೆನ್ ವೆಲ್ಕಮ್ ಮ್ಯಾನ್  ನಾನು ನಿನ್ನಯ ಸೂಪರ್ ಫ್ಯಾನ್ 
            ಈ ದೋಸ್ತು ನಿನ್ ಪ್ರಾಣ ಹೌದೋ ಅಲ್ವೋ ಟೆಲ್ ಮೀ ಮ್ಯಾನ್ 
            ಚಡ್ಡಿ ದೋಸ್ತಿನಾ ನಾನು ಎಂದೂ ಮರೆಯೋಲ್ಲ 
            ಈ ನಮ್ಮ ಸ್ನೇಹ ಜೋಡಿ ಸಾಟಿ ಯಾರಿಲ್ಲ 
           ಕಲರು ನೋಡು ಏನು ಗ್ಲಾಮರೂ ಶೇಪು ಸ್ಟೈಲು ಭಾರಿ ಸೂಪರೂ 
           ಥಳಕು ಬಳುಕಿನ ಬಣ್ಣ ಚಿಟ್ಟೆಯು ಕಣ್ಣು ಕುಕ್ಕಿದೆ ಮಿನಿ ಬಟ್ಟೆಯು   
           ನಂಗಾಗಿ ಬ್ರಹ್ಮ ಸೃಷ್ಟಿ ಮಾಡಿದ ಬ್ಯೂಟಿಯು 
ಕೋರಸ್ :ಹಾಯೇ ಸೂಕು ಸೂಕು ಹಾಯಾಯೇ.. ಹಾಯೇ ಸೂಕು ಸೂಕು ಹಾಯಾಯೇ 

ಗಂಡು : ಹೋಲ್ಡಾನ್ನು ತಮ್ಮಯ್ಯ ಭಾರಿ ಸ್ಪೀಡು ಬೇಡ ನಮ್ಮೂರ ಹುಡುಗೀರ ಅಂದ ಚೆಂದವೇ ಮೇಲಯ್ಯ 
            ಹೋಲ್ಡಾನ್ನು ತಮ್ಮಯ್ಯ ಭಾರಿ ಸ್ಪೀಡು ಬೇಡ ನಮ್ಮೂರ ಹುಡುಗೀರ ಅಂದ ಚೆಂದವೇ ಮೇಲಯ್ಯ  
            ಕಾರಲ್ಲಿ ಲೈಫು ಕೊಟ್ಟರೇ ಪಾರ್ಟಿ ಕೊಟ್ಟರೆ ಸಾಕು ಈ ನಾನು ಹಾಕೋ ಗಾಳಕ್ಕೆ ಸಿಕ್ಕಿ ಬಿಟ್ಟು ಮೀನು 
            ಈ ಯೌವ್ವನ ಈ ಜೀವನ ಹುಡುಗಾಟವಲ್ಲ ಕಾಣ ಈ ಬಾಳಿನ ನಿಜ ಕಾರಣ ನೀ ತಿಳಿಯಬೇಕು ಜಾಣ 
            ಓ.. ಮೈ ಫ್ರೆಂಡ್ ಡೋಂಟ್ ವರೀ ನೀ ಯಾಕ್ ಆಗ್ತೀ ಗಾಬರಿ 
            ಇದನೆಲ್ಲ ನೋಡಿ ನಿಂಗೆ ಯಾಕೆ ಕಣ್ಣುರಿ 
ಕೋರಸ್ :ಹಾಯೇ ಸೂಕು ಸೂಕು ಹಾಯಾಯೇ.. ಹಾಯೇ ಸೂಕು ಸೂಕು ಹಾಯಾಯೇ 
ಗಂಡು : ಹೋಲ್ಡಾನು ತಮ್ಮಯ್ಯ ಗ್ಲಾಮರು ಡೇಂಜರ್ ಬೇಡಯ್ಯಾ 
            ನಮ್ಮೂರ ಹುಡುಗೀರ ಲಜ್ಜೆ ವಿಲಿಯುವ ನೋಡಯ್ಯ 
 
ಗಂಡು : ಈ ನನ್ನ ಮನಸು ನಿನ್ನದು ಮನೆಯು ನಿನ್ನದು ಬಾರೋ 
            ನಿನಗಿಂತ ನನಗೆ ಹತ್ತಿರ ಬೇರೆ ಉಂಟು ಯಾರೋ 
            ನನಗಾಗಿಯೇ ಉಸಿರಾಡುವ ನಿನ್ನಂಥವರಾರಿಲ್ಲ 
            ಈ ಸ್ನೇಹವು ಬಲು ಶಾಶ್ವತ ಎಂದೆಂದಿಗೂ ಮುರಿಯೋಲ್ಲ 
            ಎರಡೇ ಆದರೂ ದೇಹವು ಒಂದೇ ನಮ್ಮ ಪ್ರಾಣವು 
            ನಮ್ಮನ್ನೂ ಬೇರೆ ಮಾಡೋ ಶಕ್ತಿ ಇನಿಲ್ಲ 
ಕೋರಸ್ :ಹಾಯೇ ಸೂಕು ಸೂಕು ಹಾಯಾಯೇ.. ಹಾಯೇ ಸೂಕು ಸೂಕು ಹಾಯಾಯೇ 
ಗಂಡು : ಜಂಟಲ್ ಮೆನ್ ವೆಲ್ಕಮ್ ಮ್ಯಾನ್  ನಾನು ನಿನ್ನಯ ಸೂಪರ್ ಫ್ಯಾನ್ 
            ಈ ದೋಸ್ತು ನಿನ್ ಪ್ರಾಣ ಹೌದೋ ಅಲ್ವೋ ಟೆಲ್ ಮೀ ಮ್ಯಾನ್ 
            ಚಡ್ಡಿ ದೋಸ್ತಿನಾ ನಾನು ಎಂದೂ ಮರೆಯೋಲ್ಲ 
            ಈ ನಮ್ಮ ಸ್ನೇಹ ಜೋಡಿ ಸಾಟಿ ಯಾರಿಲ್ಲ 
           ಕಲರು ನೋಡು ಏನು ಗ್ಲಾಮರೂ ಶೇಪು ಸ್ಟೈಲು ಭಾರಿ ಸೂಪರೂ 
           ಥಳಕು ಬಳುಕಿನ ಬಣ್ಣ ಚಿಟ್ಟೆಯು ಕಣ್ಣು ಕುಕ್ಕಿದೆ ಮಿನಿ ಬಟ್ಟೆಯು   
           ನಂಗಾಗಿ ಬ್ರಹ್ಮ ಸೃಷ್ಟಿ ಮಾಡಿದ ಬ್ಯೂಟಿಯು 
--------------------------------------------------------------------------------------------------------
   
ಜೋಡಿ (೨೦೦೧) - ಡಾರ್ಲಿಂಗ್ ಡಾರ್ಲಿಂಗ್ 
ಸಂಗೀತ : ಎಸ್.ಏ.ರಾಜಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ದೇವನ್ 

ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ 
ಡ್ರೀಮ್ ಗರ್ಲ್... ಡ್ರೀಮ್ ಗರ್ಲ್...  ಡ್ರೀಮ್ ಗರ್ಲ್...   
ಹಗಲು ಕನಸಲಿ ಬರುವವಳು ಇರುಳು ನಿದಿರೆಯನು ಕೆಡಿಸುವಳು 
ನುಡಿ ಕೇಳಲು ಅಂದ ಹೊಸ ಸಿಂಪಿನಿಯೋ 
ಪ್ರೀತಿ ಮಳೆ ತಂದ ಯುವ ಕಂಪನಿಯೋ ಆ ಮೊನಾಲಿಸಾ ತರ ನಗೆ ತಂತು 
ಐಶ್ವರ್ಯರಾಯ್ ಥರ ಕಣ್ ಇತ್ತು 
ಆ ಶಿಲ್ಪಿ ಕಲ್ಪನೆಗೆ ಎಂದೂ ಎಟುಕದ ಸೌಂದರ್ಯ 
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ 
ಡ್ರೀಮ್ ಗರ್ಲ್... ಡ್ರೀಮ್ ಗರ್ಲ್...  ಡ್ರೀಮ್ ಗರ್ಲ್...   
  
ಜೊತೆಯಲ್ಲಿ ಬಾರದೆ ಹೃದಯಕ್ಕೆ ಬಂದಳು ಯಾವುದೋ ಜನ್ಮ ತಂದ ಸಂಬಂಧ 
ಕಣ್ಣೆಂಬ ಕ್ಯಾಮರಾ ತೆಗೆದಂಥ ಚಿತ್ರವೂ ನಿಂತಿದೆ ಕಣ್ಣ ತುಂಬಾ ಆ ಚೆಂದ 
ಇನ್ನೆಂದೋ ಕಾಣೆ ನನ್ನ ಅವಳ ಭೇಟಿ ಮರೆಯಲ್ಲೇ ಮೋಡಿ ನನ್ನ ಮನದ ಲೂಟಿ 
ಆ ಪ್ರೀತಿ ಚೆನ್ನ ಸ್ಟೆಫಿಗ್ರಾಫ್ ನಕ್ಕು ಹಾಕಿದಳು ಆಟೋಗ್ರಾಫ್ಪ್ 
ಹೊಸ ಸ್ಟೈಲು ನಮ್ಮ ಬೊಂಬಾಟು ಪ್ರೇಮ ಅದು ಎಂದೆಂದೂ 
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ 
ಡ್ರೀಮ್ ಗರ್ಲ್... ಡ್ರೀಮ್ ಗರ್ಲ್...  ಡ್ರೀಮ್ ಗರ್ಲ್...   
ಈ ಬಾಳ ಡೈರಿಯ ಪುಟದಲ್ಲಿ ಬರೆದಳು ಪ್ರೀತಿಯ ಪೆನ್ನಿನಿಂದ ಹೆಸರನ್ನ 
ಟೈಟಾನಿಕ್ ನಾಯಕಿ ರೊಮ್ಯಾಂಟಿಕ್ ಬ್ಯೂಟಿಯ ಇವಳಲ್ಲಿ ಕಂಡು ಕೊಟ್ಟೆ ನನ್ನನ್ನ 
ಏನೆಂದು ಹೇಳಲಿ ಹಾವ ಭಾವ ನಾನು ಮನಸೆಂಬ ಕಣ್ಣು ಆಹ್ ಕಂಡ ಅಂದವನ್ನು 
ಮಿಸ್ ವರ್ಲ್ಡ್ ಗೇ ನಿಂತರೆ ಫಸ್ಟ್ ಪ್ರೈಸು ಆಗ್ಬೇಕು ಅವಳ ನಾ ಮ್ಯಾರೇಜು 
ಆ ಬ್ರಹ್ಮ ಸೃಷ್ಟಿಯಲಿ ಬಂದ ಕೋಟೆಯಲಿ ಇವಳೇ ಬೆಸ್ಟು 
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ 
ಡ್ರೀಮ್ ಗರ್ಲ್... ಡ್ರೀಮ್ ಗರ್ಲ್...  ಡ್ರೀಮ್ ಗರ್ಲ್...   
ಹಗಲು ಕನಸಲಿ ಬರುವವಳು ಇರುಳು ನಿದಿರೆಯನು ಕೆಡಿಸುವಳು 
ನುಡಿ ಕೇಳಲು ಅಂದ ಹೊಸ ಸಿಂಪಿನಿಯೋ 
ಪ್ರೀತಿ ಮಳೆ ತಂದ ಯುವ ಕಂಪನಿಯೋ ಆ ಮೊನಾಲಿಸಾ ತರ ನಗೆ ತಂತು 
ಐಶ್ವರ್ಯರಾಯ್ ಥರ ಕಣ್ ಇತ್ತು 
ಆ ಶಿಲ್ಪಿ ಕಲ್ಪನೆಗೆ ಎಂದೂ ಎಟುಕದ ಸೌಂದರ್ಯ 
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ 
ಡ್ರೀಮ್ ಗರ್ಲ್... ಡ್ರೀಮ್ ಗರ್ಲ್...  ಡ್ರೀಮ್ ಗರ್ಲ್...   
-------------------------------------------------------------------------------------------------------

No comments:

Post a Comment