1870. ನೀಲಾಂಬರಿ (೨೦೦೧)


ನೀಲಾಂಬರಿ ಚಲನಚಿತ್ರದ ಹಾಡುಗಳು 
  1. ಇಂಚರವೇ ಇಂಚರವೇ 
  2. ಮಲ್ಲಿಗೆಯ ಮನಸಲ್ಲಿ 
  3. ದಿನ ದಿನಕೂ 
  4. ಚಾಮುಂಡಿ ತಾಯಿ 
  5. ಬ್ಯೂಟಿ ಅಂದ್ರೆ ಪ್ರಪಂಚ 
ನೀಲಾಂಬರಿ (೨೦೦೧) - ಇಂಚರವೇ ಇಂಚರವೇ
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಚಿತ್ರಾ

ಇಂಚರವೇ ಇಂಚರವೇ ಇಂಚರವೆ ಚಲ್ಲಿದ ಚಲುವಲ್ಲಿ
ಚಂದ್ರನ ಎದೆಯಲಿ ಕಚಗುಳಿ ಇಡುವೆ ನಾ
ಇಂಚರವೇ ಇಂಚರವೇ ಇಂಚರವೆ ಚೆಲ್ಲಿದ ಚಲುವಲ್ಲಿ
ಚಂದ್ರನ ಎದೆಯಲಿ ಕಚಗುಳಿ ಇಡುವೆ ನಾ

ಭೂಮಿ ನನ್ನದು, ಗಗನಾ ನನ್ನದು ಗಾಳಿ ಬೆಂಕಿ,ನೀರು ನನ್ನದು,
ನನಗಿಂತ ಯಾವ ಚಂದ ಇಲ್ಲ ಜನುಮ ಜನುಮದೊಳಗೂ
ಇಂಚರವೇ ಇಂಚರವೇ ಇಂಚರವೆ ಚಲ್ಲಿದ ಚಲುವಲ್ಲಿ
ಚಂದ್ರನ ಎದೆಯಲಿ ಕಚಗುಳಿ ಇಡುವೆ ನಾ

ತಾರೆಗಳೆಲ್ಲ ಜಾರಿ,ಹಂಚಿ ಹೋಯ್ತು ನನ್ನ ಯೌವ್ವನದ ಒಳಗೇ
ಋತುಗಳೆಲ್ಲ ತೇಲಿ,ಮುಚ್ಚಿ ಹೋಯ್ತು ನನ್ನ ವಯ್ಯಾರದ ಒಳಗೇ
ಎದೆಯ ಐಸಿರಿಯಲಿ,ಮಿಂಚು ಮಿಂಚಿ ಮರೆಯಾಯ್ತು
ಮೃದಲ ಮೈಸಿರಿಯಲಿ ಜಗದ, ಸೊಬಗು,ಸೆರೆಯಾಯಿತು
ಮಾಯದ ಕನ್ಯೆಗೆ, ಮಾಯದ ಕನಸಿದೆ 
ಸುಂದರ ಪ್ರಕೃತಿ ಬಚ್ಚಿಡೋ ಸಂಗಾತಿ ನಾನೇ ನಾನೇ..
ಇಂಚರವೇ ಇಂಚರವೇ ಇಂಚರವೆ ಚಲ್ಲಿದ ಚಲುವಲ್ಲಿ
ಚಂದ್ರನ ಎದೆಯಲಿ ಕಚಗುಳಿ ಇಡುವೆ ನಾ

ತಂಗಳಿಯು ಕೂಡ ನಾಚಿ, ನೀರಾಗೋಯ್ತು  ನನ್ನ ಥಳುಕು ಬಳುಕಿನೊಳಗೆ  
ಆಕಾಶ ಭೂಮಿ ಕೂಡ,ದಾರಿ ಕಂಡ್ರು, ನನ್ನ ಕಣ್ಣ ಬೆಳಕಿನೊಳಗೇ
ಗೆಳತಿ ನಾನೇ ಕಣೇ, ಇಲ್ಲ, ದಿಕ್ಕು ಸೊಕ್ಕುಗಳಿಗೆ.. ಒಡತಿ ನಾನೇ ಕಣೇ,ಇಂದು,
ಪಂಚ ಭೂತಗಳಿಗೆ.. ಹೃದಯದ ರಥವಿದೆ,ಚೆಲುವಿನ ಪಥವಿದೆ,
ಮಾಯದ ಲೋಕದ ಕಿನ್ನರಿ ಕಿನ್ನರಿ ನಾನೇ ನಾನೇ....
ಇಂಚರವೇ ಇಂಚರವೇ ಇಂಚರವೆ ಚಲ್ಲಿದ ಚಲುವಲ್ಲಿ
ಚಂದ್ರನ ಎದೆಯಲಿ ಕಚಗುಳಿ ಇಡುವೆ ನಾ
ಭೂಮಿ ನನ್ನದು, ಗಗನಾ ನನ್ನದೂ ಗಾಳಿ ಬೆಂಕಿ,ನೀರು ನನ್ನದು
ನನಗಿಂತ ಯಾವ ಚಂದ ಇಲ್ಲ, ಜನುಮ ಜನುಮದೊಳಗೂ..
ಇಂಚರವೇ ಇಂಚರವೇ ಇಂಚರವೇ ಚಲ್ಲಿದ ಚಲುವಲ್ಲಿ
ಚಂದ್ರನ ಎದೆಯಲಿ ಕಚಗುಳಿ ಇಡುವೆ ನಾ
ಚಂದ್ರನ ಎದೆಯಲಿ ಕಚಗುಳಿ ಇಡುವೆ ನಾ...
-----------------------------------------------------------------------------------

ನೀಲಾಂಬರಿ (೨೦೦೧) - ಮಲ್ಲಿಗೆಯ ಮನಸಲ್ಲಿ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಚಿತ್ರಾ 

ಮಲ್ಲಿಗೆಯ ಮನಸಲ್ಲಿ ಮಧು ಚೆಲ್ಲುವ ಪ್ರಣಯದಾ ಪದಗಳಿವು ನೀನದಲ್ಲವ
ಸಲಿಗೆ ಸರಸ ಕಲಿಸೋ ಅರಸ ಮಿಲನದಲಿ ಮೀರಿಸುವೆ ರತಿ ವೈಭವ 
ಓಹೋ .. ಓಹೋ .. ಓಹೋ ..  ಓಹೋ .. ಓಹೋ .. ಓಹೋ .. 
ಮಲ್ಲಿಗೆಯ ಮನಸ್ಸಲ್ಲಿಯೇ ಕಲಿತೆ ಒಲವ .... 
ಮಲ್ಲಿಗೆಯ ಮನಸ್ಸಲ್ಲಿಯೇ ಕಲಿತೆ ಒಲವ .... 

ಆಸೆಗಳ ಪಲ್ಲಕ್ಕಿ ಹೊತ್ತು ನಡೆಯೋ ಸಮಯ 
ಹೃದಯಗಳು ಮಾತಾಡೋ ಸುಖ ನಿನ್ನದು 
ಬಾನ್ಗಗಲ ಚಂದಕ್ಕಿ ಎದೆಯಗಲ ನಗೋ ಸಮಯ 
ಸಮಯಗಳ ನೆಪ ಹೇಳೋ ಮುಖ ನಿನ್ನದು 
ಉಸಿರ ಏರಿಳಿತ ನಿನ್ನ ಅನುಮತಿಗೆ ಕಾದು ಕುಳಿತ ಕಥೆ ನೂರು 
ಒಲವ ಎದೆ ಬಡಿತ ಬಹುಮಟ್ಟಿಗೆ ಸೋತು ಬರೆದ ಕಥೆ ನೂರು 
ಈ ನಿನ್ನ ತೋಳಲ್ಲಿ ಉಯ್ಯಾಲೆ ಮೇಲೆ ಜೋಗುಳ ಹಾಡು ಈ ಪ್ರೀತಿಗಿಲ್ಲಿ 
ಮಲ್ಲಿಗೆಯ ಮನಸ್ಸಲ್ಲಿಯೇ ಕಲಿತೆ ಒಲವ.. 
ಮಲ್ಲಿಗೆಯ ಮನಸ್ಸಲ್ಲಿಯೇ ಕಲಿತೆ ಒಲವ.. 
 
ತಾರೆಗಳ ಮಡಿ ಮೇಲೆ ತಾವರೆಯ ದಳವಿಟ್ಟು ಇಬ್ಬನಿಯು ನಾನಾದೆ ನಿನ್ನದೆಯಲಿ 
ಬಾಂದಳದ ಅಂಗಳಕೆ ಮುತ್ತುಗಳ ರಂಗೋಲಿ ಅದರೊಳಗೆ ಹೃದಯಗಳ ಹೊಸ ಓಕುಳಿ 
ಅಂದ ಅರಳೋದು ಬಯಕೆ ಕೆರಳೋದು ಪ್ರೀತಿ ಅಡಿಪಾಯಗಳ ಮೇಲೆ 
ಚಿತ್ತ ಚಿಗುರೋದು ಬದಕು ಉಲಿಯೋದು ಉಪಮೇ ಉಪಮೇಯಗಳ ಮೇಲೆ 
ಈ ನಿನ್ನ ನೆರಳಲ್ಲಿ ಈ ಬಾಳ ಮೇಲೆ ಜೊತೆಗೂಡು ಪ್ರೀತಿಗಿಲ್ಲಿ 
ಮಲ್ಲಿಗೆಯ ಮನಸಲ್ಲಿ ಮಧು ಚೆಲ್ಲುವ 
ಮಲ್ಲಿಗೆಯ ಮನಸಲ್ಲಿ ಮಧು ಚೆಲ್ಲುವ 
-----------------------------------------------------------------------------------
 
ನೀಲಾಂಬರಿ (೨೦೦೧) - ದಿನ ದಿನಕೂ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಬದ್ರಿಪ್ರಸಾದ, ಸೌಮ್ಯ, ಎಲ್.ಏನ್.ಶಾಸ್ತ್ರೀ  

-----------------------------------------------------------------------------------
 
ನೀಲಾಂಬರಿ (೨೦೦೧) - ಚಾಮುಂಡಿ ತಾಯಿ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಸುಜಾತದತ್ತ 

ಗಂಡು : ಮಹಿಷನ ಕಡಿದೊಗೆದು ಚಾಮುಂಡಿ ಬಂದವಳೇ ಶರಣೆನ್ನೀರೋ 
ಕೋರಸ್ : ಶರಣು ಶರಣೆನ್ನೀರೋ 
ಹೆಣ್ಣು : ಭಕುತರ ಕಾಯೋಕೆ ರಣಚೆಂಡಿ ಬಂದವಳೇ ಶರಣೆನ್ನೀರೋ 
ಕೋರಸ್ : ಶರಣು ಶರಣೆನ್ನೀರೋ 
ಹೆಣ್ಣು : ಕಾಸಗಲ ಕುಂಕುಮದ ಬೊಟ್ಟನಿಟ್ಟವ್ವಗೆ ಶರಣೆನ್ನೀರೋ 
          ನಂಜುಡನಾ ಅರಸಿ ಮಂಗಳದಾ ದೇವತೆಗೆ ಶರಣೆನ್ನೀರೋ   
ಕೋರಸ್ : ಶರಣು ಶರಣೆನ್ನೀರೋ 
ಹೆಣ್ಣು : ಮೈಸೂರಿನಲ್ಲಿ ನೆಲಸಿ ನಂಬಿದವರ ಸಲಹೋ ದುರ್ಗವ್ವಗೆ ಶರಣೆನ್ನೀರೋ 
          ಮೈಸೂರಿನಲ್ಲಿ ನೆಲಸಿ ನಂಬಿದವರ ಸಲಹೋ ದುರ್ಗವ್ವಗೆ ಶರಣೆನ್ನೀರೋ 
ಕೋರಸ್ : ಶರಣಮ್ಮ ದುರ್ಗಮ್ಮ ಶರಣಮ್ಮ ಶರಣು ಶರಣಮ್ಮ ಶುಭಾದಾತೆ ಶರಣು ಶರಣು 
                ಶರಣಮ್ಮ ದುರ್ಗಮ್ಮ ಶರಣಮ್ಮ ಶರಣು ಶರಣಮ್ಮ ಶುಭಾದಾತೆ ಶರಣು ಶರಣು 
ಹೆಣ್ಣು : ಸಾವಿರ ಕಣ್ಣುಳ್ಳ...                              ಕೋರಸ್ : ದುರ್ಗಾಂಬೆ ಇವಳು 
ಹೆಣ್ಣು : ಶರಣೆಂದು ಬಂದವರ                         ಕೋರಸ್ : ಕಾಯ್ವುಳ ಇವಳು ಓಂ 
          ಒಡೆಯರ ಕುಲಕಾದ ದೇವತೆಗೆ ಶರಣೆನ್ನೀರೋ 
ಕೋರಸ್ : ಶರಣಮ್ಮಾ 
ಹೆಣ್ಣು : ಚಂದ್ರನಾ ಮುಡಿದವನ ಸತಿಯನ್ನ ಕೊಂಡಾಡಿರೋ 
ಕೋರಸ್ : ಶರಣಮ್ಮಾ 
ಹೆಣ್ಣು : ಶರಣಮ್ಮ ದುರ್ಗಮ್ಮ ಶರಣಮ್ಮ ಶರಣು ಶರಣಮ್ಮ ವರದಾತೆ ಶರಣು ಶರಣು 
                ಶರಣಮ್ಮ ದುರ್ಗಮ್ಮ ಶರಣಮ್ಮ ಶರಣು ಶರಣಮ್ಮ ಶುಭಾದಾತೆ ಶರಣು ಶರಣು 
ಹೆಣ್ಣು : ದುಷ್ಟರಾ ಪಾಲಿಗೆ                              ಕೋರಸ್ : ಕೆಂಗಣ್ಣ ಬೀರಿ 
ಹೆಣ್ಣು : ಶಿಷ್ಟರ ಪಾಲಿಗೆ                                 ಕೋರಸ್ : ಸುಮ ನಗೆಯ ತೋರಿ 
ಕೋರಸ್ : ಓಂ ಶಕ್ತಿ ಜೈ ಶಕ್ತಿ ಓಂ ಶಕ್ತಿ ಜೈ.... ಓಂ ಶಕ್ತಿ ಜೈ ಶಕ್ತಿ ಓಂ ಶಕ್ತಿ ಜೈ 
ಹೆಣ್ಣು : ಧರೆಯನ್ನ ಬೆಳಗಲೆನ್ನ ಬಂದಿಹಳು ದುರ್ಗೇಶ್ವರೀ 
ಕೋರಸ್ : ಶರಣಮ್ಮಾ 
ಹೆಣ್ಣು : ಮಮತೆಯ ತೋರುತಲಿ ಕಾಯುವಳು ಮಾಹೇಶ್ವರೀ 
ಕೋರಸ್ : ಶರಣಮ್ಮಾ 
ಕೋರಸ್ : ಶರಣಮ್ಮ ದುರ್ಗಮ್ಮ ಶರಣಮ್ಮ ಶರಣು ಶರಣಮ್ಮ ಶುಭಾದಾತೆ ಶರಣು ಶರಣು 
ಗಂಡು : ಮಹಿಷನ ಕಡಿದೊಗೆದು ಚಾಮುಂಡಿ ಬಂದವಳೇ ಶರಣೆನ್ನೀರೋ 
ಕೋರಸ್ : ಶರಣು ಶರಣೆನ್ನೀರೋ 
ಹೆಣ್ಣು : ಭಕುತರ ಕಾಯೋಕೆ ರಣಚೆಂಡಿ ಬಂದವಳೇ ಶರಣೆನ್ನೀರೋ 
ಕೋರಸ್ : ಶರಣು ಶರಣೆನ್ನೀರೋ 
---------------------------------------------------------------------------------

ನೀಲಾಂಬರಿ (೨೦೦೧) - ಬ್ಯೂಟಿ ಅಂದ್ರೆ ಪ್ರಪಂಚ 
ಸಂಗೀತ : ರಾಜೇಶ ರಾಮನಾಥ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಗಂಗಾ, ಸೌಮ್ಯ 

-----------------------------------------------------------------------------------

No comments:

Post a Comment