ಚಿಟ್ಟೆ ಚಲನಚಿತ್ರದ ಹಾಡುಗಳು
- ನಮ್ಮ ಮನೆ ಅಂಗಳದ
- ಟ್ವಿಂಕಲ್ ಟ್ವಿಂಕಲ್
- ಯಾರಿಗೂ ಹೇಳೋನು ಬೇಡ
- ನನ್ನ ನಮನಗಳು
- ಚಿಟ್ಟೆ ಚಿಟ್ಟೆ ಹಾಡಿತು
- ಬೆಳಕು ಇರುವ ತನಕವೇ
- ಚೋರ ಚೋರಿ
- ಒಳಗಡೆ ಯಾರು ಇಲ್ಲ
ಚಿಟ್ಟೆ (೨೦೦೧) - ನಮ್ಮ ಮನೆ ಅಂಗಳದ
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ರಾಜೇಶ
ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವು ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದು ಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದು ಮಾಡಿ ಸೇರಿಸಿದ ಆ ಶಿವನು
ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವು ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದು ಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದು ಮಾಡಿ ಸೇರಿಸಿದ ಆ ಶಿವನು
ಓ ಊರುಗದ ಮರದಲಿ ನೂರಳೆಯ ಬಿಳಲಿವೆ ನೆರಳಿನ ಮರವನಿಳಿಸಿವೆ
ನಮ್ಮನೆಯ ಸೂರಡಿ ಹೊಂಗನಸು ನೂರಿವೇ
ಕನಸ್ಸಿಗೂ ಚೆಂದ ಮನಸ್ಸಿವೇ ಮನಸ್ಸಿಗೆ ಯಾವ ತಡೆಯೇ ಕಾಣೆ
ನೆನೆಸುದದೆಲ್ಲ ಎದುರೇ ತಾನೇ ದೇವರ ಪ್ರೀತಿಯ ದೇಗುಲವಿದು
ಭೂಮಿಯ ಮೇಲಿರೋ ಬಾಂದಳವಿದು
ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವು ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದು ಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದು ಮಾಡಿ ಸೇರಿಸಿದ ಆ ಶಿವನು
ಗುಬ್ಬಚ್ಚಿ ಮರಿ ಗುಬ್ಬಚ್ಚಿ ಮರಿ ಕಾಡಿಗೆ ತರಲೆ ಕೂಸುಮರಿ ಆಡಿಸಲು ಗೂಡಿಗೆ ಬರಲೇ
ಜೋಕಾಲಿ ಆಡಲಿಕ್ಕೆ ಕಡ್ಡಿ ತರಲೆ ತಂದೇವು ತಿನ್ನಲ್ಲೀಕೆ ಹುರಿಗಡಲೇ
ಪಾಯಸದಿ ಬೆರೆತಿರೋ ಸಕ್ಕರೆಯ ಸವಿತರ ಒಲವಲಿ ಮಮತೆ ಮಧುವಿದೆ
ಹಾಡಿನಲಿ ಬೆರೆತಿರೋ ವಾದ್ಯಗಳ ದನಿತರ ಹರುಷದ ರಾಗಸ್ವರವಿದೆ
ರಂಗವಲ್ಲಿ ತುಂಬ ಚುಕ್ಕಿಗಳ ಹಾಗೆ ನಮ್ಮನಿಲ್ಲಿ ಸೇರಿಸೋ ಪ್ರೀತಿಯ ರೇಖೆ
ಯಾರದು ಯಾರದು ಈ ವರಹ ಸುಂದರ ಚಂದ್ರಿಕೆಯ ತರಹ
ನಮ್ಮ ಮನೆಯ ಅಂಗಳದ ರಂಗವಲ್ಲಿ ರಂಗವಲ್ಲಿ
ಒಳಗಡೆ ಚೆಲ್ಲಿದವು ದುಂಡುಮಲ್ಲಿ ದುಂಡುಮಲ್ಲಿ
ಹೆಕ್ಕಬಹುದೇನು ಲೆಕ್ಕ ಸಿಗದೇನು
ಅಂದವಾಗಿ ಒಂದು ಮಾಡಿ ಸೇರಿಸಿದ ಆ ಶಿವನು
ಅಂದವಾಗಿ ಒಂದು ಮಾಡಿ ಸೇರಿಸಿದ ಆ ಶಿವನು
---------------------------------------------------------------------------------
ಚಿಟ್ಟೆ (೨೦೦೧) - ಟ್ವಿಂಕಲ್ ಟ್ವಿಂಕಲ್
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ಗುರುಕಿರಣ
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಚೇಂಜಾಗ್ಹೋಯ್ತು ಹುಡುಗನ ಸ್ಟಾರ್
ವೆನಿಜುಲ್ಲ ವೆನಿಜುಲ್ಲ ವೆನಿಜುಲ್ಲ ಶುರು ಶುರು ಎದೆಯಲ್ಲಿ ಚಲಬಿಲ
ಸ್ವರ್ಗದಲ್ಲೇ ಈ ಜೋಡಿ ಮ್ಯಾಚು ಫಿಕ್ಸಾಯ್ತು ಕಣ್ಣಿನಲ್ಲೇ ಡೇಟಿಂಗ್ ಜಾಗ ಫಿಕ್ಸಾಯ್ತು
ಸ್ವರ್ಗದಲ್ಲೇ ಈ ಜೋಡಿ ಮ್ಯಾಚು ಫಿಕ್ಸಾಯ್ತು ಕಣ್ಣಿನಲ್ಲೇ ಡೇಟಿಂಗ್ ಜಾಗ ಫಿಕ್ಸಾಯ್ತು
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಚೇಂಜಾಗ್ಹೋಯ್ತು ಹುಡುಗನ ಸ್ಟಾರ್
ರಾಮ ಹರೇ ರಾಮ ಪ್ರೇಮ ಲಂಘನಂ ದಿವ್ಯ ಔಷಧಂ ಟೀನೇಜ್ ಅಮೃತಂ
ಕೃಷ್ಣ ಹರೇ ಕೃಷ್ಣ ಪ್ರಥಮ ಚುಂಬನಂ ಹೃದಯಸ್ತಂಭನಂ ವಿದ್ಯೆ ನೈವೇದ್ಯಂ
ಹತ್ತಿರವಿದ್ದು ಸಿಕ್ಕಲ್ಲ ದಕ್ಕಲ್ಲ ಉದ್ದಾರವಿದು ಗೊತ್ತಿಲ್ಲ ಐಲಲ್ಲಾ...
ಕಂಪ್ಯೂಟರ ವರ್ಲ್ಡಲೀ ಕಾಸ್ಟು ಲೈಫಲೀ ಎಕ್ಸಪರಿಮೆಂಟಲೀ ಇಂಟೇಲಿಜೇನಂಟಲಿ
ವಾಟ್ ಯೂ ಗೋನ್ ಥ್ರೂ ವೀಥೌಟದ ಈಮೇಲ್ ಮ್ಯಾನ್
ಹೇ ಕಲ್ಲು ಕೋಳಿ ಕೂಗಿತ್ತೋ ಈ.. ಕಲ್ಲುಬಸವ ಎದ್ದಿತೋ
ಫಸ್ಟ್ ಇಯರ್ ಫಾಸ್ಟು ಹುಡ್ಗಿರೂ ವೇಸ್ಟು ಹುಡುಗರು ಮೆತ್ತಗೇ ಹೇಳ್ ಗುರೂ
ಹುಡುಗೀಯ ಮುಂದೆ ಹುಡುಗ ಗ್ಯಾಂಗರು ಬಟ್ಟೆ ಹ್ಯಾಂಗರು ಹುಡುಗಿ ಸ್ಟ್ರಾಂಗ್ ಗುರು
ಧೈರ್ಯವಿದ್ದರೇ ಸಕ್ಸೆಸ್ಸೂ ಸಕ್ಸೆಸ್ಸೂ ಇಲ್ಲದಿದ್ದರೇ ಸರ್ಕಸ್ಸೂ ಸರ್ಕಸ್ಸೂ
ನೈಟೆಲ್ ಚ್ಯಾಟಿಂಗಗಲ್ಲಿ ಡ್ರೀಮ್ಸಗೇ ಜಾಗ ಎಲ್ಲೀ ಲೈಫಲೀ ನ್ಯೂಸಲೀ ಕೇರಫೂಲಿ ಲವ್ವೇಲಿ
ಹೇ.. ಮೀ ಲಿಸನ್ ಟೂ ಮೀ
ಹೇ ಚಿಟ್ಟೆ ಮೊಟ್ಟೆ ಇಟ್ಟಿತು ಪ್ರೇಮ ಪ್ರೂಫ್ ಹುಟ್ಟಿತು
ವೆನಿಜುಲ್ಲ ವೆನಿಜುಲ್ಲ ವೆನಿಜುಲ್ಲ ಶುರು ಶುರು ಎದೆಯಲ್ಲಿ ಚಲಬಿಲ
ಸ್ವರ್ಗದಲ್ಲೇ ಈ ಜೋಡಿ ಮ್ಯಾಚು ಫಿಕ್ಸಾಯ್ತು ಕಣ್ಣಿನಲ್ಲೇ ಡೇಟಿಂಗ್ ಜಾಗ ಫಿಕ್ಸಾಯ್ತು
ಸ್ವರ್ಗದಲ್ಲೇ ಈ ಜೋಡಿ ಮ್ಯಾಚು ಫಿಕ್ಸಾಯ್ತು ಕಣ್ಣಿನಲ್ಲೇ ಡೇಟಿಂಗ್ ಜಾಗ ಫಿಕ್ಸಾಯ್ತು
ಸ್ವರ್ಗದಲ್ಲೇ ಈ ಜೋಡಿ ಮ್ಯಾಚು ಫಿಕ್ಸಾಯ್ತು ಕಣ್ಣಿನಲ್ಲೇ ಡೇಟಿಂಗ್ ಜಾಗ ಫಿಕ್ಸಾಯ್ತು
ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಚೇಂಜಾಗ್ಹೋಯ್ತು ಹುಡುಗನ ಸ್ಟಾರ್
-------------------------------------------------------------------------------
ಚಿಟ್ಟೆ (೨೦೦೧) - ಯಾರಿಗೂ ಹೇಳೋನು ಬೇಡ
ಸಂಗೀತ : ವಿ.ಮನೋಹರ, ಸಾಹಿತ್ಯ : ದ.ರಾ.ಬೇಂದ್ರೆ, ಗಾಯನ : ಅಶ್ವತ್ಥ
ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಯಾರಿಗೂ ಹೇಳೋಣು ಬ್ಯಾಡ
ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಯಾರಿಗೂ ಹೇಳೋಣು ಬ್ಯಾಡ
ಹಾರಗುದರಿ ಬೆನ್ನ ಏರಿ ಸ್ಟಾರರಾಗಿ ಕೂತು ಹಾಂಗ್ ದೂರ ದೂರ ಹೋಗೋಣಂತ
ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಯಾರಿಗೂ ಹೇಳೋಣು ಬ್ಯಾಡ
ಹಣ್ಣು ಹೂವು ತುಂಬಿದಂತ ನಿನ್ನ ತೋಟ ಸೇರಿ ಒಂದ್
ಹಣ್ಣು ಹೂವು ತುಂಬಿದಂತ ನಿನ್ನ ತೋಟ ಸೇರಿ ಒಂದ್ ತಿನ್ನೋಣಂತ ಅದರ ಹೆಸರು
ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಯಾರಿಗೂ ಹೇಳೋಣು ಬ್ಯಾಡ
ಕುಣಿಯೋಣಂತ ಕೂಡಿ ಕೂಡಿ ಮಣಿಯೋಣಂತ ಜಿಗಿದು ಹಾರಿ
ಕುಣಿಯೋಣಂತ ಕೂಡಿ ಕೂಡಿ ಮಣಿಯೋಣಂತ ಜಿಗಿದು ಹಾರಿ
ದಣಿಯಾದಾನ್ನ ಆಡೋಣಂತ ಯಾರಿಗೂ ಹೇಳೋನು ಬ್ಯಾಡ
ಮಲ್ಲಿಗೆ ಮಂಟಪದಾಗ ಗಲ್ಲ ಗಲ್ಲ ಹಚ್ಚಿ ಕೂತು
ಮಲ್ಲಿಗೆ ಮಂಟಪದಾಗ ಗಲ್ಲ ಗಲ್ಲ ಹಚ್ಚಿ ಕೂತು ಮೆಲ್ಲ ದನಿಲೇ ಹಾಡೋಣಾಂತ
ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಯಾರಿಗೂ ಹೇಳೋಣು ಬ್ಯಾಡ
ಹಾವಿನ ಮರಿಯಾಗಿ ಅಲ್ಲಿ ನಾವೂನೂ ಹೆಡೆಯಾಡಿಸೋಣು
ಹಾವಿನ ಮರಿಯಾಗಿ ಅಲ್ಲಿ ನಾವೂನೂ ಹೆಡೆಯಾಡಿಸೋಣು
ಹೂವೇ ಹೂವು ಹಸಿರೇ ಹಸಿರು ಯಾರಿಗೂ ಹೇಳೋಣು ಬ್ಯಾಡ
ನಿದ್ದೆ ಮಾಡಿ ಮೈಯ್ಯ ಬಿಟ್ಟು ಮುದ್ದು ಮಾಟದ ಕನಸಿನೂರಿಗೆ
ನಿದ್ದೆ ಮಾಡಿ ಮೈಯ್ಯ ಬಿಟ್ಟು ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೇ ಸಾಗೋಣಂತ
ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಯಾರಿಗೂ ಹೇಳೋಣು ಬ್ಯಾಡ
ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಯಾರಿಗೂ ಹೇಳೋಣು ಬ್ಯಾಡ
--------------------------------------------------------------------------------
ಚಿಟ್ಟೆ (೨೦೦೧) - ನನ್ನ ನಮನಗಳು
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ಚಿತ್ರಾ
ಒಲವಲ್ಲಿ ನನ್ನ ಪೊರೆದವರ ನೆನಯುವೆ ಈ ಘಳಿಗೆ
ಜನುಮವನಿತ್ತು ಸಲಹಿರುವ ಆ ದೇವರುಗಳಿಗೆ
ನನ್ನ ನಮನಗಳು ದಿನವೂ ನಮನಗಳು
ನವಮಾಸಗಳು ಸಹಿಸಿದ ಒಡನೇ ಲಾಲಿಸಿ ಕಾವಲು ಕಾದಿಹ ಕಂಗಳೇ
ನಿಮಗೆ ನಮನಗಳು ಓ ನನ್ನ ನಮನಗಳು
ಮಮತೆಯ ತುತ್ತ ತಿನ್ನಿಸಿರುವ ಪ್ರೀತಿಯ ಕೈಗಳಿಗೆ
ನನ್ನ ಆಳುವಿಗೆ ಮಿಡಿದ ಅಮ್ಮನ ಕಣ್ಣೀರ ಹನಿಗೆ
ನನ್ನ ನಮನಗಳು ನಮ್ರ ನಮನಗಳು
ಹಿತವಾದ ಎಳೆಬಿಸಿಲ ತಂದಂತ ಸೂರ್ಯನಿಗೆ ಶಿರಸ ಸಲಿಸೋ ನಮನವಿದೆ
ನೀರಾಟ ಆಡೋಕೆ ತಂದಂತ ಮುಗಿಲ ಬಳಗಕ್ಕೆ ನಮನವಿದೆ
ಹಗಲಿರುಳಿಲ್ಲ ಸಲಹಿದ ಉಸಿರೇ ಚಿರವು ನಮಗೆ ಋಣಿಯಾದೆ
ನಿಮ್ಮ ಮುಂದೆ ತೃಣವಾದೆ ನಗಿಸಿ ರಮಿಸಿ ಆಡಿಸಿದ ಅಮ್ಮನ ತೊಳಗಳಿಗೆ
ದಣಿದರು ತೊಟ್ಟಿಲ ತೂಗಿಸಿದ ಕರುಣೆಯ ಕೈಗಳಿಗೆ
ನನ್ನ ನಮನಗಳು ಸವಿನಯ ನಮನಗಳು
ನಲಿವಲ್ಲೂ ನೋವಲ್ಲೂ ಬಾಳೆಲ್ಲ ಒಂದಾದ ಪಂಚೇಂದ್ರಿಯನ್ನೇ ಮರೆಯೆನು ನಾ
ಕ್ಷಣಕೂಡ ವಿರಮಿಸದೇ ದಿನರಾತ್ರಿ ನನಗಾಗಿ ಮಿಡಿವ ಹೃದಯಕ್ಕೆ ನಮಿಸುವೆನು ನಾ
ಮನಸ್ಸಲ್ಲಿ ನಲಿದ ಹೊಂಗನಸುಗಳೇ ನಿಮಗೆ ಚಿರುವು ಋಣಿಯಾದೆ
ನಿಮ್ಮ ಮುಂದೆ ಹನಿಯಾದೆ
ಹನಿಹನಿಯು ಸುಧೆಯಾದ ಹಾಲುಣಿಸಿದೆ ಎದೆಯೇ
ಜೊತೆಯಲೇ ಒಯ್ದು ಊರೆಲ್ಲ ತೋರಿದ ಓ ಬೆರಳೇ
ನಿಮಗೆ ನಮನಗಳು ನನ್ನ ನಮನಗಳು
ಸಕ್ಕರೆ ಮುದುವ ನೀಡಿದ ಮಡಿಲೇ ಜೋಗುಳ ಹಾಡಿದ ಇಂಪಿನ ಕೊರಳೇ
ನಿಮಗೆ ನಮನಗಳು ನನ್ನ ನಮನಗಳು
---------------------------------------------------------------------------------
ಚಿಟ್ಟೆ (೨೦೦೧) - ಚಿಟ್ಟೆ ಚಿಟ್ಟೆ ಹಾಡಿತು
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ರಾಜೇಶ, ಚಿತ್ರಾ
ಚಿಟ್ಟೆ ಚಿಟ್ಟೆ ಹಾಡಿತೋ ಕಣ್ಣು ಮುಚ್ಚೇ ಆಡಿತೋ
ತಟ್ಟಿ ತಟ್ಟಿ ಕೂಗಿತೋ ಮುಟ್ಟೋ ಮುಂಚೆ ಓಡಿತೋ
ಕಾಡಿತೋ ತರವಾರಿ ತಂದಿತೋ ತರಾತುರಿ
ಕುಂತರು ತನನನ ನಿಂತರು ತನನನ ತುಂತುರು ಹನಿಗವನ
ಏನ್ ಹೇಳಲಿ ಹೇಗೆ ತಾಳಲಿ ಪ್ರೇಮ ತೋಟದಿ ಹೂವ ಹಾವಳಿ
ಚಿಟ್ಟೆ ಚಿಟ್ಟೆ ಹಾಡಿತೋ ಕಣ್ಣು ಮುಚ್ಚೇ ಆಡಿತೋ
ತಟ್ಟಿ ತಟ್ಟಿ ಕೂಗಿತೋ ಮುಟ್ಟೋ ಮುಂಚೆ ಓಡಿತೋ
ನಮ್ಮ ಹರುಷದ ಮಿಂಚು ಮಾಯವಾಗದೆಯೇ
ಇರುಳನು ಬೆಳಗಲು ತಾರೆಗೆ ತಳಮಳ
ನಿಲ್ಲು ಮೋಹದ ಮಳೆಯೇ ಪ್ರೀತಿ ನೆನೆಯುತಿದೇ
ನೆನೆದರೆ ಮೈಯ್ಯಿದು ಕರಗುವ ಕಳವಳ
ತನುವೀಗ ಭುವಿಯಾಯ್ತು ಮನವೀಗ ಮುಗಿಲಾಯ್ತು
ಮಳೆ ನೀರ ಧಾರೆಯಾಗಿ ಹರಿದೆವು
ಏನ್ ಹೇಳಲಿ ಹೇಗೆ ತಾಳಲಿ ಗಾಳಿ ಹಾಡಿದ ಪ್ರೇಮ ಚಾವಳಿ
ಚಿಟ್ಟೆ ಚಿಟ್ಟೆ ಹಾಡಿತೋ ಕಣ್ಣು ಮುಚ್ಚೇ ಆಡಿತೋ
ತಟ್ಟಿ ತಟ್ಟಿ ಕೂಗಿತೋ ಮುಟ್ಟೋ ಮುಂಚೆ ಓಡಿತೋ
ನಮ್ಮ ಕನಸಿನ ಮಾಸ ಎಲ್ಲ ಜನ ಬರಿ ಚಳಿ ಚಳಿ ದೇಹವೇ ಕಂಬಳಿ
ಇಲ್ಲ ನಮಗೆ ವಿಳಾಸ ಹೋದಕಡೆ ನಮ್ಮದೇ
ಪ್ರೀತಿಗೆ ಬಳುವಳಿ ಭುವನವೇ ಉಂಬಳಿ
ಪ್ರತಿ ವೇಳೆ ಮುಂಜಾನೇ ಪ್ರತಿ ಮಾತು ಕವಿತೆನೇ
ತುಟಿರಾಗವು ಪರಾಗವಾಯ್ತು
ಏನ್ ಹೇಳಲಿ ಹೇಗೆ ತಾಳಲಿ ಗಾಳಿ ಹಾಡಿದ ಪ್ರೇಮ ಚಾವಳಿ
ಚಿಟ್ಟೆ ಚಿಟ್ಟೆ ಹಾಡಿತೋ ಕಣ್ಣು ಮುಚ್ಚೇ ಆಡಿತೋ
ತಟ್ಟಿ ತಟ್ಟಿ ಕೂಗಿತೋ ಮುಟ್ಟೋ ಮುಂಚೆ ಓಡಿತೋ
ಕುಂತರು ತನನನ ನಿಂತರು ತನನನ ತುಂತುರು ಹನಿಗವನ
ಏನ್ ಹೇಳಲಿ ಹೇಗೆ ತಾಳಲಿ ಪ್ರೇಮ ತೋಟದಿ ಹೂವ ಹಾವಳಿ
ಚಿಟ್ಟೆ ಚಿಟ್ಟೆ ಹಾಡಿತೋ ಕಣ್ಣು ಮುಚ್ಚೇ ಆಡಿತೋ
ತಟ್ಟಿ ತಟ್ಟಿ ಕೂಗಿತೋ ಮುಟ್ಟೋ ಮುಂಚೆ ಓಡಿತೋ
--------------------------------------------------------------------------------
ಚಿಟ್ಟೆ (೨೦೦೧) - ಬೆಳಕು ಇರುವ ತನಕವೇ
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ರಾಜೇಶ, ಚಿತ್ರಾ
ಬೆಳಕು ಇರುವ ತನಕಾಣೆ ಈ ನೆರಳು
ಕನಸು ಕರಗಿ ಬರಿ ಬೊಂಬೆ ಈ ಒಡಲು
ಮುಳ್ಳಿಲ್ಲದ ಗುಲಾಬಿಯು ಉಂಟೇನು
ಹಂಸ ನೋವಿಲ್ಲದ ಆ ಪ್ರೀತಿಯು ಎಲ್ಲುಂಟು ಹಂಸ
ಬೆಳಕು ಇರುವ ತನಕಾಣೆ ಈ ನೆರಳು
ಎಳೆ ತಂಗಾಳಿ ಬರಬರುತಾ ಸುಳಿಗಾಳಿ ಥರ ಬೀಸಿತು
ಮರ ಗಿಡ ಜೊತೆಗೆ ನೆರಳುಗಳನ್ನು ಹಾರಿಸಿ ಜೊತೆಗೆ ಒಯ್ದಿತು
ಈ ಜಾಡು ಮೀನು ಚಲಿಸದ ಹಾಗೆ ನೀರೆಲ್ಲ ಘನವಾಯ್ತು
ಚಂದ್ರನ ಕಲೆಯ ಅಳಿಸಲು ಹೋದ ಚಂದ್ರಾನೆ ಮರೆಯಾಯ್ತು
ಬೆಳಕು ಇರುವ ತನಕಾಣೆ ಈ ನೆರಳು
ಕನಸು ಕರಗಿ ಬರಿ ಬೊಂಬೆ ಈ ಒಡಲು
ಬಿಸಿಲಿಗೆ ನೆರಳು ಇರುಳಿಗೆ ಬೆಳಕು ಕೊಡುತಾ ಹರಸಿದ ದೇವರು
ಬೆಂಕಿಯ ಮಳೆಯ ಪ್ರೀತಿ ಮೇಲೆ ಹೀಗೇಕೆ ಕರೆ ತಂದರು
ಇಲ್ಲೊಂದು ಬದುಕು ಅಂಕುರವಾಗಲು ವಾತ್ಸಲ್ಯವೇ
ಎರಡು ಪವಿತ್ರ ಚರಣಕೆ ನಮಿಸಲು ಇಂದು ತುಡಿಯುತ್ತದೆ ಮನಸ್ಸೂ
ಬೆಳಕು ಇರುವ ತನಕಾಣೆ ಈ ನೆರಳು
ಕನಸು ಕರಗಿ ಬರಿ ಬೊಂಬೆ ಈ ಒಡಲು
ಮುಳ್ಳಿಲ್ಲದ ಗುಲಾಬಿಯು ಉಂಟೇನು
ಹಂಸ ನೋವಿಲ್ಲದ ಆ ಪ್ರೀತಿಯು ಎಲ್ಲುಂಟು ಹಂಸ
ಬೆಳಕು ಇರುವ ತನಕಾಣೆ ಈ ನೆರಳು
---------------------------------------------------------------------------------
ಚಿಟ್ಟೆ (೨೦೦೧) - ಚೋರ ಚೋರಿ
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ಗುರುಕಿರಣ
ಚೋರ ಚೋರಿ ಚೋರ ಚೋರಿ ಲವ್ ಉಲೇಲ್ ಪೋರ ಪೋರಿ ಪೋರ್ ಪೋರಿ ಲವ್
ಕಪ್ಪು ಚಿಪ್ಪು ಕಪ್ಪು ಚಿಪ್ಪು ಲವ್ ಉಲೇಲ್ ಚುರುಮುರಿ ಪಾನೀಪುರಿ ಲವ್
ಚಕ್ಕಂದ್ ಆಡಂಗಿಲ್ಲ ಸುತ್ತ ಕಾವಲು ಸಿಕ್ಕಿಂದ ಜಾರಿಕೊಳ್ಳೋಕೆ ಬಂದೆ ಬಾಗಿಲು
ಪ್ರೀತಿಗೆ ಈಗಲೇ ಬೇಲಿಯು ಹಾಕದೆ ಹೋದರೇ ಜಾಲಿಯು
ಚೋರ ಚೋರಿ ಚೋರ ಚೋರಿ ಲವ್ ಉಲೇಲ್ ಪೋರ ಪೋರಿ ಪೋರ್ ಪೋರಿ ಲವ್
ಕಪ್ಪು ಚಿಪ್ಪು ಕಪ್ಪು ಚಿಪ್ಪು ಲವ್ ಉಲೇಲ್ ಚುರುಮುರಿ ಪಾನೀಪುರಿ ಲವ್
ಕಣ್ಣ ಮುಚ್ಚಾಲೆ ಆಟ ಚೆಂದವೋ ಮಾಯವಾಗುವ ಜಾದು ಚೆಂದವೋ
ಬಚ್ಚಿಟ್ಟುಕೊಂಡೆ ಬಿಚ್ಚಿಕೊಳ್ಳುವ ಪ್ರೀತಿ ಚೆಂದವೋ ಮಾತು ಚೆಂದವೋ
ಗೊಡ್ಡು ಪುರಾಣ ಓಲ್ದು ಜಮಾನ ಈಗ ಕೆಲಸಕ್ಕೆ ಬಾರದು
ಪ್ರೀತಿ ನೆಟ್ವರ್ಕ್ ಎಲ್ಲ ಗ್ಯಾಲಾಕ್ಸಿ ಸೇರಿ ಮಿಂಚೋ ಯುಗ ಇದು
ಪ್ರೀತಿಸಿ ಪ್ರೀತಿಸಿ ಪ್ರೀತಿಸಿ ಪ್ರೀತಿಗೆ ವೈರಸ್ ತಪ್ಪಿಸಿ
ಚೋರ ಚೋರಿ ಚೋರ ಚೋರಿ ಲವ್ ಉಲೇಲ್ ಪೋರ ಪೋರಿ ಪೋರ್ ಪೋರಿ ಲವ್
ಕಪ್ಪು ಚಿಪ್ಪು ಕಪ್ಪು ಚಿಪ್ಪು ಲವ್ ಉಲೇಲ್ ಚುರುಮುರಿ ಪಾನೀಪುರಿ ಲವ್
ಸುಪಾರಿ ಕಿಲ್ಲರ್ ಕೊಲ್ಲಲಾಗದು ಕೀಳಲಾಗದು ಪ್ರೀತಿ ಎಂಬುದು
ತಾಲಿಬಾನ್ ಜನರಿಗೆ ಅರ್ಥವಾಗದು ಪ್ರೀತಿಯಲ್ಲಿರೋ ಶಕ್ತಿ ಎಂತದೂ
ಮಹಲಿಂದ ಎಣ್ಣೆ ತೆಗಿತೀವಿ ಅಂತಾ ಇನ್ನೂ ಹಿಂಡೋಕೆ ಬಂದರ
ಶ್ಯಾವಿಗೆ ಹೊಸೆತ ಹಗ್ಗ ಮಾಡುತ ಬಂಡೇ ಹತ್ತಕ್ಕೆ ಹೋಗೋರ
ಸಂಗ್ಯವೇ ಬಂಘದ ಸಂಗತಿ ಪ್ರೇಮಿಯ ಕಾಯೋ ನೀ ಮಾರುತಿ
ಚೋರ ಚೋರಿ ಚೋರ ಚೋರಿ ಲವ್ ಉಲೇಲ್ ಪೋರ ಪೋರಿ ಪೋರ್ ಪೋರಿ ಲವ್
ಕಪ್ಪು ಚಿಪ್ಪು ಕಪ್ಪು ಚಿಪ್ಪು ಲವ್ ಉಲೇಲ್ ಚುರುಮುರಿ ಪಾನೀಪುರಿ ಲವ್
ಚಕ್ಕಂದ್ ಆಡಂಗಿಲ್ಲ ಸುತ್ತ ಕಾವಲು ಸಿಕ್ಕಿಂದ ಜಾರಿಕೊಳ್ಳೋಕೆ ಬಂದೆ ಬಾಗಿಲು
ಪ್ರೀತಿಗೆ ಈಗಲೇ ಬೇಲಿಯು ಹಾಕದೆ ಹೋದರೇ ಜಾಲಿಯು
ಚೋರ ಚೋರಿ ಚೋರ ಚೋರಿ ಲವ್ ಉಲೇಲ್ ಪೋರ ಪೋರಿ ಪೋರ್ ಪೋರಿ ಲವ್
ಕಪ್ಪು ಚಿಪ್ಪು ಕಪ್ಪು ಚಿಪ್ಪು ಲವ್ ಉಲೇಲ್ ಚುರುಮುರಿ ಪಾನೀಪುರಿ ಲವ್
--------------------------------------------------------------------------
ಚಿಟ್ಟೆ (೨೦೦೧) - ಒಳಗಡೆ ಯಾರು ಇಲ್ಲ
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ರಾಜೇಶ
ಒಳಗಡೆ ಯಾರಿಲ್ಲ ಒಳಗಡೆ
ಒಳಗಡೆ ಯಾರಿಲ್ಲ ಒಳಗಡೆ ಹೃದಯದ ಒಳಗಡೆ ಯಾರಿಲ್ಲ
ಹೃದಯದ ಒಳಗಡೆ ಯಾರಿಲ್ಲ
ಯಾರಿಗೂ ಕಾಣದೇ ನೆಲೆಸಿರುವವರ ಗಮನಿಸೋ ಜನರಿಲ್ಲ ಏನು ಹೇಳಲಿ
ಹರಿಹರ ಜನಲಕುಮಿ ಒಳಗಡೆ ಯಾರಿಲ್ಲ ಹೀಗೇಕೆ ಒಳಗಡೆ ದೇವಿ ಪವಣಿಸಿದಳು
ಕಾಣೆ ನನ್ನಾತ್ಮದ ಒಳಗಡೆ ದೇವಿ ನುಡಿಸಿರುವಳು ವೀಣೆ
ಏರುತಾ ಏರುತಾ ಕಿಟಕಿಯ ದಾಟುತ ಒಳ ಬಂದು ನೆಲೆನಿಂತಳೋ
ಭಕ್ತಿಯನ್ನುವ ಹಗ್ಗ ಏರುತ್ತ ಮಾಯೆ ಎನ್ನುವ ಕಿಂಡಿ ದಾಟುತ ಬಂದ ಲಕುಮಿ
ಒಮ್ಮೆ ಪ್ರತ್ಯಕ್ಷ ಎಂಥ ಅಲಕ್ಷ ಇವನ ಅದೃಷ್ಟ ಪ್ರಭು ಲೀಲೆ ವಿಧಿ ಲೀಲೆ
ಇದು ಕಣ್ಣ ಮುಚ್ಚಾಲೆ ಕಣ್ಣಿಟ್ಟು ಹುಡುಕಾಡಿದರೂ ಒಳಗಡೆ ಯಾರಿಲ್ಲ
ಒಳಗಡೆ ಯಾರಿಲ್ಲ ಯಾರಿಗೂ ಕಾಣದೆ
ಯಾರಿಗೂ ಕಾಣದೆ ಒಳಗಡೆ ಯಾರಿಲ್ಲ
ಒಳಗಡೆ ಯಾರಿಲ್ಲ ನಿನಿ ದಾಪ ನಿದಪಸಾ
ಒಳಗಡೆ ಯಾರಿಲ್ಲ ಒಳಗಡೆ
ಒಳಗಡೆ ಯಾರಿಲ್ಲ ಒಳಗಡೆ ಹೃದಯದ ಒಳಗಡೆ ಯಾರಿಲ್ಲ
ಹೃದಯದ ಒಳಗಡೆ ಯಾರಿಲ್ಲ
--------------------------------------------------------------------------------
No comments:
Post a Comment