- ಚಿಲಿಪಿಲಿ ಕೇಳುತ್ತಿತ್ತವ್ವಾ
- ಜೀವನದ ಕನಸೆಲ್ಲ
- ಮೇಘ ಮೇಘ
- ನಗು ನಗುತಾ
- ಯಾರಿವಳು ಯಾರಿವಳು
ಚೈತ್ರದ ಚಿಗುರು (೧೯೯೯) - ಚಿಲಿಪಿಲಿ ಕೇಳುತ್ತಿತ್ತವ್ವಾ
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಬದರಿಪ್ರಸಾದ, ಬಿ.ಆರ್.ಛಾಯಾ
ಹೆಣ್ಣು: ಚಿಲಿಪಿಲಿ ಹೇಳುತ್ತಿತ್ತವ್ವ ನನ್ನೆದೆಯೊಳಗಿನ ಗಿಳಿ ಚಿಲಿಪಿಲಿ ಹೇಳುತ್ತಿತ್ತವ್ವ....
ಕಿಲಕಿಲ ಹಾಡುತ್ತಿತ್ತವ್ವ ನನ್ನೊಲವಿನ ಅರಗಿಳಿ ಕಿಲಕಿಲ ಹಾಡುತ್ತಿತ್ತವ್ವ...
ಗಂಡು: ಎದೆಯಾಳದಲ್ಲಿ ನಿನ್ನ ಇಡುತಿನಿ ಆಳವಾಗಿ ಏನಾರು ಕೇಳು ನಿಂಗೆ ಕೊಡುತ್ತಿನಿ
ಗಾಡವಾಗಿ ನಮ್ಮ ಪ್ರೀತಿ ಪಂಚಾಮೃತ ಓ......

ಹೆಣ್ಣು: ಚಿಲಿಪಿಲಿ ಹೇಳುತ್ತಿತ್ತವ್ವ ನನ್ನೆದೆಯೊಳಗಿನ ಗಿಳಿ....ಕಿಲಕಿಲ ಹಾಡುತ್ತಿತ್ತವ್ವ
ಹೆಣ್ಣು: ಬಣ್ಣದ ಬಿಲ್ಲಿನ ಮೇಲೇರಿ ಚಿನ್ನ ಬಣ್ಣವ ಕಂಡಾಗಾ... ಬಣ್ಣಗಳೆ ಬಾಯಾ..ರಿತು...
ಗಂಡು: ಚಂದ್ರನ ಬಿಂಬದ ಮೇಲೇರಿ ನಿನ್ನನ್ನೋಮ್ಮೆ ಕಂಡಾಗ ಹುಣ್ಣಿಮೆಯೆ ಮೈ ಮರೆಯಿತು
ಹೆಣ್ಣು: ನನ್ನೆದೆಯ ಕಾವೇರಿ ನಿನ್ನೆದೆಯ ಗುಡಿ ಸೇರಿ ಹಗಲಿರುಳು ಕಾಲು ತಳಿದ ವಿಷಯ ಸುಳ್ಳಲ್ಲಾ..
ಹೆಣ್ಣು: ಚಿಲಿಪಿಲಿ ಹೇಳುತ್ತಿತ್ತವ್ವ ನನ್ನೆದೆಯೊಳಗಿನ ಗಿಳಿ ಚಿಲಿಪಿಲಿ ಹೇಳುತ್ತಿತ್ತವ್ವ....
ಕಿಲಕಿಲ ಹಾಡುತ್ತಿತ್ತವ್ವ

ಗಂಡು : ಓ ಓ....ಓಓಓಓ... ಆ...ಆಆಆಆಆಆ
ರೂಪಗಳಲ್ಲಿ ರತಿರೂಪ ದೀಪಗಳಲ್ಲಿ ನಗೆದೀಪ ನಿನ್ನ ಹಾಡೆ ದೀಪಾವಳಿ
ಹೆಣ್ಣು : ರಾಗಗಳಲ್ಲಿ ಅನುರಾಗ ಯುಗಗಳಲ್ಲಿ ಸಂಯೋಗ ನಿನ್ನ ಸಂಗ ಚೈತ್ರಾವಳಿ.....
ಗಂಡು: ಕಣ್ಣುಗಳ ಆಹ್ವಾನ ಮನಸುಗಳ ಕಲ್ಯಾಣ
ಹೃದಯಗಳ ಬಂಧ ಇಂದು ಪ್ರೇಮ ಸಂಧಾನ.....
ಹೆಣ್ಣು: ಚಿಲಿಪಿಲಿ ಹೇಳುತ್ತಿತ್ತವ್ವ ನನ್ನೆದೆಯೊಳಗಿನ ಗಿಳಿ ಚಿಲಿಪಿಲಿ ಹೇಳುತ್ತಿತ್ತವ್ವ....
ಕಿಲಕಿಲ ಹಾಡುತ್ತಿತ್ತವ್ವ
ಗಂಡು: ಎದೆಯಾಳದಲ್ಲಿ ನಿನ್ನ ಇಡುತಿನಿ ಆಳವಾಗಿ ಏನಾರು ಕೇಳು ನಿಂಗೆ ಕೊಡುತ್ತಿನಿ
ಗಂಡು: ಕಣ್ಣುಗಳ ಆಹ್ವಾನ ಮನಸುಗಳ ಕಲ್ಯಾಣ
ಹೃದಯಗಳ ಬಂಧ ಇಂದು ಪ್ರೇಮ ಸಂಧಾನ.....
ಹೆಣ್ಣು: ಚಿಲಿಪಿಲಿ ಹೇಳುತ್ತಿತ್ತವ್ವ ನನ್ನೆದೆಯೊಳಗಿನ ಗಿಳಿ ಚಿಲಿಪಿಲಿ ಹೇಳುತ್ತಿತ್ತವ್ವ....
ಕಿಲಕಿಲ ಹಾಡುತ್ತಿತ್ತವ್ವ
ಗಂಡು: ಎದೆಯಾಳದಲ್ಲಿ ನಿನ್ನ ಇಡುತಿನಿ ಆಳವಾಗಿ ಏನಾರು ಕೇಳು ನಿಂಗೆ ಕೊಡುತ್ತಿನಿ
ಗಾಡವಾಗಿ ನಮ್ಮ ಪ್ರೀತಿ ಪಂಚಾಮೃತ ಓ......
ಹೆಣ್ಣು: ಚಿಲಿಪಿಲಿ ಹೇಳುತ್ತಿತ್ತವ್ವ ನನ್ನೆದೆಯೊಳಗಿನ ಗಿಳಿ ಚಿಲಿಪಿಲಿ ಹೇಳುತ್ತಿತ್ತವ್ವ....
ಹೆಣ್ಣು: ಚಿಲಿಪಿಲಿ ಹೇಳುತ್ತಿತ್ತವ್ವ ನನ್ನೆದೆಯೊಳಗಿನ ಗಿಳಿ ಚಿಲಿಪಿಲಿ ಹೇಳುತ್ತಿತ್ತವ್ವ....
-------------------------------------------------------------------------------------------------
ಚೈತ್ರದ ಚಿಗುರು (೧೯೯೯) - ಜೀವನದ ಕನಸೆಲ್ಲ
ಸಂಗೀತ : ವಿ.ಮನೋಹರ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ರಾಜೇಶ ಕೃಷ್ಣನ್, ಪಲ್ಲವಿ,
ಜೀವನದ ಕನಸೆಲ್ಲ ಚೈತ್ರದ ಚಿಗುರಂಗೇ ಕನಸೆಲ್ಲ ನನಸಾಗಿ ಹೂವೆಲ್ಲ ಹಣ್ಣಂಗೆ
ಮನುಷ್ಯನ ಬಾಳುವೇ ಎಂದ ಮ್ಯಾಗೆ ಹಸಿರಾದ ಎಲೆ ಹಣ್ಣಾದಂಗೆ
ಹಣ್ಣಾದ ಎಲೆಯು ಬಿತ್ತ ಮ್ಯಾಗೆ ಹೊಸದಾಗಿ ಮತ್ತೇ ಮೂಡಿದಂಗೆ
ಹೆಣ್ಣಿಂದ ಸಂಸಾರ ಹೆಣ್ಣಿಂದ ಸಂತಾನ ಹೆಣ್ಣಿರದ ಮನೆಯಿಲ್ಲ ಹೆಣ್ಣಿರದ ಜಗವಿಲ್ಲ
ಹೆಣ್ಣೆನೇ ಬಾಳ ಬಂಗಾರ ಆ ಬಂಗಾರ ಸಕಲ ಸಿಂಗಾರ
ಹೆಣ್ಣಿದ್ರೆ ಗಂಡು ಸರದಾರ ಆ ಸರದಾರಗೆ ಹೆಣ್ಣೇ ಸುಖಸಾರ
ಮದುವೆಂಬುದೇನೆ ಬರಿಯ ತಾಳಿ ಗಂಟಲ್ಲ
ಹಸಿರಿನ ಚಪ್ಪರದಾಗೆ ಸುವ್ವಾಲಿ ಹೇಳೋದಲ್ಲ
ಗಂಡು ಹೆಣ್ಣೆಂದು ಬಗೆಯದೆ ನಾವೊಂದೇ ಬಾಳಿದರೆ ಮದುವೆನೇ
ಮನಸ್ಸು ಮನಸ್ನಾಗೆ ಒಂದಾದ್ರೆ ಆ ಒಂದಾದ ಬಾಳುವೆ ಮದುವೆನೇ
ಯಾವತ್ತೂ ತವರುಮನೆ ಹೆಣ್ಣಿಗೆ ಸ್ಥಿರವಲ್ಲ ಬಾಳೋಕೆ ಅಂದೋನೆ ಗಂಡನೇ ಬದುಕೆಲ್ಲ
ಚೆಂದಾನೆ ಚೆಂದ ಗಂಡನ ಮನೆ ಪ್ರೀತಿಯ ಮುಂದೆ ಬೇರಿಲ್ಲ
ಅತ್ತೆ ಮಾವಂದಿರು ಹೊಂದ್ಕೊಂಡ್ರೆ ಆ ಸ್ವರ್ಗದ ಮುಂದೆ ಇನ್ನಿಲ್ಲ
ಬಾನ ಚಂದಿರನಂಗೆ ಬಾಳಿನಲಿ ಹೊಳೆಯೊಳು
ಬಾಳೆ ಆ ಸುಳಿಯಂಗೆ ಅತ್ತಿತ್ತ ಬಳುಕೋಳು
ಹೂವಂತ ಮನಸ್ಸು ನಿಜ ಹೆಣ್ಣು ಆ ಹೆಣ್ಣೆನೇ ಸಂಸಾರದ ಕಣ್ಣು
ಲೋಕಾನೇ ಸಲುಹೋಳು ನಮ್ ಸಂಸಾರ ಸುಖದ ಸಿರಿ ಕಣ್ಣು
ನಾರೀರು ನಲಿದಾಡೋ ಮನೆಯೆನೇ ಕೈಲಾಸ ನಾರಿರು ನಡೆದಾಡೋ ಜಾಗನೇ ವೈಕುಂಠ
ಹಾಲಂತ ಮಾತ್ನಾಡೋ ಸಿರಿಗೌರಿ ನಮ್ಮ ಬಾಳನ್ನ ಬೆಳಗೋ ಬಂಗಾರಿ
ಜೇನಂತ ಮನಸ್ಸಿನ ಶ್ರೀ ಗೌರಿ ಅವಳು ಹೊಂದ್ಕೊಂಡು ಹೋದರೆ ಹೊಸ ಲಹರಿ
ಕಂಡೋರು ಯಾರಯ್ಯ ನಾಳಿನ ಬಾಳುವೆಯ ಎಲೈತೋ ಸಂಬಂಧ ಮದುವೆಯ ಸಿರಿಗಂಧ
ಯಾರಿಗೆ ಗೊತ್ತು ಹಣೆಬರಹ ಆ ದ್ಯಾವ್ರೇನೇ ಬರೆದ ಶ್ರೀಕಾರ
ಮದುವೆ ಎಂಬೋದು ಬ್ರಹ್ಮಗಂಟು ಜನುಮಜನುಮದ ಅಂಟೂನಂಟು
-------------------------------------------------------------------------------------------------
ಚೈತ್ರದ ಚಿಗುರು (೧೯೯೯) - ಮೇಘ ಮೇಘ
ಸಂಗೀತ : ವಿ.ಮನೋಹರ, ಸಾಹಿತ್ಯ : ವಿ.ಮನೋಹರ, ಗಾಯನ : ರಾಜೇಶ ಕೃಷ್ಣನ್,
ಮೇಘ ಮೇಘ ನೀನೇ ಸಂಗಾತಿ ಈಗ ಮೇಘ ಮೇಘ ನೋವೇ ಸ್ವರವಾದ ರಾಗ
ಅನುರಾಗ ಗಿರಿಯ ಏರಿ ಹಸಿರಾದ ಭುವಿಯ ಕಂಡೆ ನಾ
ಹಸಿರಲ್ಲಿ ಉಸಿರೇ ಇರಲಿಲ್ಲ ಒಲವ ಹೆಸರೇ ಇರಲಿಲ್ಲ
ಮೇಘ ಮೇಘ ನೀನೇ ಸಂಗಾತಿ ಈಗ ಮೇಘ ಮೇಘ ನೋವೇ ಸ್ವರವಾದ ರಾಗ
ಹೂವ ರಾಶಿಯ ಚೆಂದೋಟದಿ ನಾ ಬೇಡಿದ ಹೂವಲ್ಲಿದೆ
ಕೈಚಾಚಲು ಹೂ ಸೋಕದು ಮುಳ್ಳೇ ಇರೋ ಬೇಲಿಯಿದೆ
ಮೇಘ ಮೇಘ ನೀನೇ ಸಂಗಾತಿ ಈಗ ಮೇಘ ಮೇಘ ನೋವೇ ಸ್ವರವಾದ ರಾಗ
ಇಂಚರ ಇಂಚರ ಸಂಚಾರವಾದಂತೆ ಪ್ರೇಮದ ಅಂಕುರವಾಯ್ತು
ಮುಂಜಾನೆ ಹೊಂಗಿರಣ ಬೊಗಸೇಲಿ ಹಿಡಿದಾಗ ಕಣ್ತುಂಬಾ ಮುಸ್ಸಂಜೆ ಆಯ್ತು
ತೇಲಾಡೋ ಪ್ರೀತಿಯ ರೋಜಾ ಹೂವ ಬಳಿ ಹೋದೆ ಹೂವಾಯ್ತು ಹಾರೋ ಪತಂಗ
ಎಲ್ಲಾದರೂ ಸೇರಿ ಕುಳಿತೆ ನಿನಗೀಗ ಅನುರಾಗ ಮಿಡಿದ ತರಂಗ
ಮೇಘ ಮೇಘ ನೀನೇ ಸಂಗಾತಿ ಈಗ ಮೇಘ ಮೇಘ ನೋವೇ ಸ್ವರವಾದ ರಾಗ
ಅನುರಾಗ ಗಿರಿಯ ಏರಿ ಹಸಿರಾದ ಭುವಿಯ ಕಂಡೆ ನಾ
ಹಸಿರಲ್ಲಿ ಉಸಿರೇ ಇರಲಿಲ್ಲ ಒಲವ ಹೆಸರೇ ಇರಲಿಲ್ಲ
ಮೇಘ ಮೇಘ ನೀನೇ ಸಂಗಾತಿ ಈಗ ಮೇಘ ಮೇಘ ನೋವೇ ಸ್ವರವಾದ ರಾಗ
------------------------------------------------------------------------------------------------
ಚೈತ್ರದ ಚಿಗುರು (೧೯೯೯) - ನಗು ನಗು ನಗುತಾ
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಬದರಿಪ್ರಸಾದ, ಬಿ.ಆರ್.ಛಾಯಾ, ರಾಜೇಶ,
ನಗುನಗು ನಗುತಾ ಹೇಯ್ ಜಿಗಿ ಜಿಗಿ ಜಿಗಿತ ತರತರ ತರತ ಗುನುಗುನು ಗುನುಗುತ್ತ
ತಕಧಿಮಿ ತಕಧಿಮಿ ಎದೆಯಲಿ ತಕಧಿಮಿ ಹಾಡಿಕೊಳ್ಳೋಣ
ಎಲ್ಲ ಹಾಡಿಕೊಳ್ಳೋಣ ಆಟ ಆಡಿಕೊಳ್ಳೋಣ
ಸಂತೋಷನೇ ತಾನೇ ನಮ್ಮ ಸಂಗೀತ...
ಸಸರಿಗಮ ರಿರಿರಿ ಪಪಪ ರಿರಿರಿ ಪಪಪ ರಿರಿಸನಿಸ
ಎಲ್ಲ ನಂಬಿಕೊಳ್ಳೋಣ ಪ್ರೀತಿ ತುಂಬಿಕೊಳ್ಳೋಣ
ನಮಗೆ ನಾವೇ ತಾನೇ ಇಲ್ಲಿ ಎಲ್ಲ ತಟ್ಟು ಚಪ್ಪಾಳೆ
ತರಲೆ ತರಲೆ ಎಲ್ಲ ತರಲೆ ಸುಮ್ನೇ ಹಾಡಲೇ
ನಗುನಗು ನಗುತಾ ಹೇಯ್ ಜಿಗಿ ಜಿಗಿ ಜಿಗಿತ ತರತರ ತರತ ಗುನುಗುನು ಗುನುಗುತ್ತ
ತಕಧಿಮಿ ತಕಧಿಮಿ ಎದೆಯಲಿ ತಕಧಿಮಿ ಹಾಡಿಕೊಳ್ಳೋಣ
ಗಾಳಿ ನೀರು ಬೆಳಕು ನೆರಳು ನಮ್ಮ ಹಾಗೇನೇ
ಹೊಂದಿಕೊಂಡು ಬಾಳುತ್ತಾವೆ ನಮ್ಮ ಹಾಗೇನೇ
ಟಿವಿ ಸಿನೆಮಾ ವಿಡಿಯೋ ಡ್ರಾಮಾ ಎಲ್ಲೆಲ್ಲೂ
ನಮ್ಮ ಪ್ರೀತಿ ಪ್ರೇಮ ತಾನೇ ತುಂಬಿದೆ
ಎಲ್ಲಾ ಜೋಕು ಟಾಕು ಟೀಕು ಕೂಕ್ಕೂಕು
ಅಲ್ಲ ನಮ್ಮ ಹಾಗೇನೇ ಹೊಂದಿಕೊಂಡಿದೆ
ಎಲ್ಲ ಹಾಡಿಕೊಳ್ಳೋಣ ಆಟ ಆಡಿಕೊಳ್ಳೋಣ
ಸಂತೋಷನೇ ತಾನೇ ನಮ್ಮ ಸಂಗೀತ...
ಸರಿಗ ರಿಗಮ ಗಮಪ ಪದನಿ ಸರಸಸರಸರಸ
ನಗುನಗು ನಗುತಾ ಹೇಯ್ ಜಿಗಿ ಜಿಗಿ ಜಿಗಿತ ತರತರ ತರತ ಗುನುಗುನು ಗುನುಗುತ್ತ
ತಕಧಿಮಿ ತಕಧಿಮಿ ಎದೆಯಲಿ ತಕಧಿಮಿ ಹಾಡಿಕೊಳ್ಳೋಣ
ಎಲ್ಲ ಸೊಗಸು ವಯಸು ಕನಸು ನಮ್ ಕೈಯಲ್ಲೇ ನಾವು ಕೈಯ್ಯ ಇಟ್ಟರೆ ಸ್ವರ್ಗ ಕಾಲ ಬಳಿಯಲ್ಲೇ
ಓ ಪ್ರೀತಿ ಹಳಿಮೇಲೆ ಬಾಳಿನ ಈ ರೈಲು ನಿಲ್ಸೋಕಾಗೊದಿಲ್ಲ ಯಾರ ಕೈಯಲ್ಲೂ
ವೈಮನಸ್ಸಿಲ್ಲ ಮೈಮನಸ್ಸಲ್ಲು ಕನಸಲ್ಲೂ ಹಂಚಿಕೊಂಡೇ ಹಾಡ್ತೀವಿ ಯಾವಾಗಲೂ
ಎಲ್ಲ ನಂಬಿಕೊಳ್ಳೋಣ ಪ್ರೀತಿ ತುಂಬಿಕೊಳ್ಳೋಣ
ನಮಗೆ ನಾವೇ ತಾನೇ ಇಲ್ಲಿ ಎಲ್ಲ ತಟ್ಟು ಚಪ್ಪಾಳೆ
ತರಲೆ ತರಲೆ ಎಲ್ಲ ತರಲೆ ಸುಮ್ನೇ ಹಾಡಲೇ
ನಗುನಗು ನಗುತಾ ಹೇಯ್ ಜಿಗಿ ಜಿಗಿ ಜಿಗಿತ ತರತರ ತರತ ಗುನುಗುನು ಗುನುಗುತ್ತ
ತಕಧಿಮಿ ತಕಧಿಮಿ ಎದೆಯಲಿ ತಕಧಿಮಿ ಹಾಡಿಕೊಳ್ಳೋಣ
ಎಲ್ಲ ಹಾಡಿಕೊಳ್ಳೋಣ ಆಟ ಆಡಿಕೊಳ್ಳೋಣ
ಸಂತೋಷನೇ ತಾನೇ ನಮ್ಮ ಸಂಗೀತ...
ಸರಿಗ ರಿಗಮ ಗಮಪ ಪದನಿ ಸರಸಸರಸರಸ
ನಗುನಗು ನಗುತಾ ಹೇಯ್ ಜಿಗಿ ಜಿಗಿ ಜಿಗಿತ ತರತರ ತರತ ಗುನುಗುನು ಗುನುಗುತ್ತ
ತಕಧಿಮಿ ತಕಧಿಮಿ ಎದೆಯಲಿ ತಕಧಿಮಿ ಹಾಡಿಕೊಳ್ಳೋಣ
-----------------------------------------------------------------------------------------------
ಚೈತ್ರದ ಚಿಗುರು (೧೯೯೯) - ಯಾರಿವಳು ಯಾರಿವಳು
ಸಂಗೀತ : ವಿ.ಮನೋಹರ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಬದರಿಪ್ರಸಾದ, ದಿವ್ಯ ಸಂಪತ್ತ
ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ ರಪ್ಪೆಯಲಿ ಬಚ್ಚಿಡಲಾ ಇವಳ ಸ್ವಲ್ಪೇ ಸ್ವಲ್ಪ
ಯಾವ್ಯಾವ ಮುತ್ತು ಹವಳ ಇರಲಿ ಈ ಚೆಲುವೆ ಮುಂದೆ ಇದ್ದರೆ ಮಾತ್ರ ಹೊಳೆಯುತಾವೇ
ಯಾವ್ಯಾವ ರಾಶಿ ಹೂವುಗಳಿರಲಿ ತಮ್ಮೆಲ್ಲ ಜೇನಲ್ಲಿ ಇವಳ ಕಾಲು ತೊಳೆಯುತಾವೇ
ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ ರಪ್ಪೆಯಲಿ ಬಚ್ಚಿಡಲಾ ಇವಳ ಸ್ವಲ್ಪೇ ಸ್ವಲ್ಪ
ಕಣ್ಣಾರೇ ನೋಡಿದರೇ ಕಣ್ಣು ತಟ್ಟೋ ಶೃಂಗಾರ
ಮನಸ್ಸಾರೇ ಹಾಡಿದರೆ ಮೈಯ್ಯ ಮರೆಸೋ ವಯ್ಯಾರ
ಅಬ್ಬಬ್ಬಾ ಅವಳ ಹೆಜ್ಜೆಯ ನೋಡಿದರೆ ಕಾಲಡಿ ನನ್ನ ಹೃದಯ
ಆಗೊಮ್ಮೆ ಈಗೊಮ್ಮೆ ಕತ್ತೆತ್ತಿ ನೋಡಿದರೆ ಕೊರಳಲು ನನ್ನ ಹೃದಯ
ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ ರಪ್ಪೆಯಲಿ ಬಚ್ಚಿಡಲಾ ಇವಳ ಸ್ವಲ್ಪೇ ಸ್ವಲ್ಪ
ಕಲ್ಲಿನ ದೇವತೆ ಅಲ್ಲ ಇವಳು ದೇವಿಯು
ಕಲ್ಲನ್ನೂ ನೀರಾಗಿಸೋ ಪ್ರೇಮರೂಪಿ ಮಾಯೆಯು
ನಾನಲ್ಲೇ ಇದ್ದರೂ ಇಲ್ಲದೆ ಇದ್ದರೂ ಇವಳೇ ನನ್ನ ಹೊಂಬೆಳಕು
ಜೀವವ ಮರೆತರು ಜೀವನ ಮರೆತರು ದೊರೆಯಲಾರೆ ಯಾವ ಕ್ಷಣಕೂ
ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ ರಪ್ಪೆಯಲಿ ಬಚ್ಚಿಡಲಾ ಇವಳ ಸ್ವಲ್ಪೇ ಸ್ವಲ್ಪ
ಯಾವ್ಯಾವ ಮುತ್ತು ಹವಳ ಇರಲಿ ಈ ಚೆಲುವೆ ಮುಂದೆ ಇದ್ದರೆ ಮಾತ್ರ ಹೊಳೆಯುತಾವೇ
ಯಾವ್ಯಾವ ರಾಶಿ ಹೂವುಗಳಿರಲಿ ತಮ್ಮೆಲ್ಲ ಜೇನಲ್ಲಿ ಇವಳ ಕಾಲು ತೊಳೆಯುತಾವೇ
ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ ರಪ್ಪೆಯಲಿ ಬಚ್ಚಿಡಲಾ ಇವಳ ಸ್ವಲ್ಪೇ ಸ್ವಲ್ಪ
-----------------------------------------------------------------------------------------------
No comments:
Post a Comment