ಕಲರ್ಸ್ ಚಲನಚಿತ್ರದ ಹಾಡುಗಳು
- ಕಿಕ್ ಹೊಡೀತದೆ
- ಚಿಂದಿ ಚಿಂದಿ ಜೀನ್ಸ್
- ಸ್ನೇಹವೂ
- ನನಗಾಗಿಯೇ ಈ ಅಂದವು
- ದಾಸನಾದೇ ಹೆಜ್ಜೇ
- ಸ್ನೇಹದ ಕಡಲಲ್ಲೇ
ಕಲರ್ಸ್ (೨೦೦೩) - ಕಿಕ್ ಹೊಡೀತದೆ
ಸಂಗೀತ : ಕಲರ್ ಮಹೇಶ, ಸಾಹಿತ್ಯ : ಮಳವಳ್ಳಿ ಸಾಯಿಕೃಷ್ಣ, ಗಾಯನ : ಶಂಕರ ಶಾನಭೋಗ
ಕಾಲೇಜ್ ಕಾಲೇಜ್ ಸ್ಮೈಲ್ಸ್... ಕಾಲೇಜ್ ಕಾಲೇಜ್ ಸ್ಟೈಲ್ಸ
ಕಾಲೇಜ್ ಕಾಲೇಜ್ ಸ್ಮೈಲ್ಸ್ ಕಾಲೇಜ್ ಕಾಲೇಜ್ ಸ್ಟೈಲ್ಸ
ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್ ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್
ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್ ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್
ಚಿಂದಿ ಚಿಂದಿ ಜೀನ್ಸು ಯಮಹ ಬೈಕು ಕಾಲೇಜ್ ಕ್ಯಾಂಪಸ್ ಲೈಫ್ ಸ್ಟೈಲ್ಸು
ರೇಬಾನ್ ಗ್ಲಾಸಸ್ ರಿಬೋಕು ಶೂಸು ಟೀನೇಜು ಲೈಫಿಗೇ ಅದೇ ಸಿಂಬಲ್ಸ್
ಚಿಂದಿ ಚಿಂದಿ ಜೀನ್ಸು ಯಮಹ ಬೈಕು ಕಾಲೇಜ್ ಕ್ಯಾಂಪಸ್ ಲೈಫ್ ಸ್ಟೈಲ್ಸು
ಗ್ಲಾಸು ಅದೇ ಕಲರ್ಸದೇ ಮ್ಯೂಸಿಕ್ ಕಾಲೇಜು ಲೈಫಿಗೇ ಇದೇ ಮೆಮೋರೀಸ್
ಕಾಲೇಜು ಕ್ಯಾಂಪಸ್ ಡೇ ನಮ್ಮ ಏಂಜಲ್ ಎಲ್ಲಾರು ವೇಟಿಂಗ್ ಬಾ ಬಾ ಗೆಳೆಯ
ಚಿಂದಿ ಚಿಂದಿ ಜೀನ್ಸು ಯಮಹ ಬೈಕು ಕಾಲೇಜ್ ಕ್ಯಾಂಪಸ್ ಲೈಫ್ ಸ್ಟೈಲ್ಸು
ಗ್ಲಾಮರ್ ಗರ್ಲ್ಸು ಕ್ಯಾಟು ವಾಕ್ಸು ಎವ್ರಿಡೇ ನಮ್ಗೆ ಫ್ರೀ ಶೋಸು
ಟೇಕ್ ಇಟ್ ಈಜಿ ಪ್ರಿನ್ಸಿಪೇಲು ಚೇಸೈ gÁåಗಿಂಗೇ ನಮ್ಮ ಹ್ಯಾಬಿಟ್ಸು
ಗ್ಲಾಮರ್ ಗರ್ಲ್ಸು ಕ್ಯಾಟು ವಾಕ್ಸು ಎವ್ರಿಡೇ ನಮ್ಗೆ ಫ್ರೀ ಶೋಸು
ಟೇಕ್ ಇಟ್ ಈಜಿ ಪ್ರಿನ್ಸಿಪೇಲು ಚೇಸೈ gÁåಗಿಂಗೇ ನಮ್ಮ ಹ್ಯಾಬಿಟ್ಸು
ಗಿವ್ ಯುವರ್ ಹಾರ್ಟ್ ಯ್ಯಾನ್ಡ್ ಟೇಕ್ ಮೈ ಹಾರ್ಟ್ ಫ್ರೆಂಡ್ಸಶೀಪಗೆ ಇದೇ ಇಗ್ನೇಷನ್
ದೊಡ್ಡೋವ್ರು ಬೇಡ ಅಂತಾ ಹೇಳ್ತಿದ್ರೂನು ನಿಲ್ಲದೇ ಈ ಟೆಂಟೇಷನ್
ಚಿಂದಿ ಚಿಂದಿ ಜೀನ್ಸು ಯಮಹ ಬೈಕು ಕಾಲೇಜ್ ಕ್ಯಾಂಪಸ್ ಲೈಫ್ ಸ್ಟೈಲ್ಸು
ಕಾಲೇಜ್ ಕಾಲೇಜ್ ಸ್ಮೈಲ್ಸ್... ಕಾಲೇಜ್ ಕಾಲೇಜ್ ಸ್ಟೈಲ್ಸ
ಕಾಲೇಜ್ ಕಾಲೇಜ್ ಸ್ಮೈಲ್ಸ್ ಕಾಲೇಜ್ ಕಾಲೇಜ್ ಸ್ಟೈಲ್ಸ
ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್ ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್
ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್ ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್
ಫ್ರೆಂಡ್ಸಸೇ ನಮ್ಮ ಫ್ರೆಂಡ್ಸು ಕಾಲೇಜು ತುಂಬಾ ತುಂಟಾಟ ಹುಡ್ಗಿರ್ ನೋಟ ಡವ್ ಎಲ್ಲ ಪಾಠ
ಕಣ್ಣ ಬಾಣದಲೆಲ್ಲ ಈ ಲವ್ವೋ ಲವ್ಯೂಟ ಜೇಬಲ್ಲೇ ದುಡ್ಡು ಇಲ್ದೇ ಇದ್ರೂ
ಓದಲಿ ಕುಬೇರನಿಗೂ ಕಮ್ಮಿ ಇಲ್ಲ ನಮಗೂ ಕಲಿಸದೇ ಇದ್ರೂ ಬಾ ಮೂನೇ ಬ್ಯಾಗು ನಮಗೆಲ್ಲ
ಚಿಂದಿ ಚಿಂದಿ ಜೀನ್ಸು ಯಮಹ ಬೈಕು ಕಾಲೇಜ್ ಕ್ಯಾಂಪಸ್ ಲೈಫ್ ಸ್ಟೈಲ್ಸು
ಕಾಲೇಜ್ ಕಾಲೇಜ್ ಸ್ಮೈಲ್ಸ್... ಕಾಲೇಜ್ ಕಾಲೇಜ್ ಸ್ಟೈಲ್ಸ
ಕಾಲೇಜ್ ಕಾಲೇಜ್ ಸ್ಮೈಲ್ಸ್ ಕಾಲೇಜ್ ಕಾಲೇಜ್ ಸ್ಟೈಲ್ಸ
ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್ ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್
ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್ ಕಲರ್ ಕಲರ್ ಕಲರ್ಸ್ ಕಾಲೇಜ್ ಕಲರ್ಸ್
----------------------------------------------------------------------------------------------
ಕಲರ್ಸ್ (೨೦೦೩) - ಚಿಂದಿ ಚಿಂದಿ ಜೀನ್ಸ್
ಸಂಗೀತ : ಕಲರ್ ಮಹೇಶ, ಸಾಹಿತ್ಯ : ಮಳವಳ್ಳಿ ಸಾಯಿಕೃಷ್ಣ, ಗಾಯನ : ಗುರುಕಿರಣ್
ತಕೋ ತಕೋ ಮಡಕೆ ತಕೋ ಹುಯ್ಯೋ ಹುಯ್ಯೋ ಕಳ್ಳು ಹುಯ್ಯೋ
ತಕೋ ತಕೋ ಬಾಟ್ಲು ತಕೋ ನೆಕ್ಕೋ ನೆಕ್ಕೋ ಚಾಕ್ನಾ ನೆಕ್ಕೋ
ಕಿಕ್ ಹೊಡೀತದೆ ಕಿಕ್ ಹೊಡೀತದೆ ಘಮ್ ಗುಡುತ್ತದೆ ಕಿಂಗುಡುತದೆ
ತೆಂಗಿನ್ ನೀರಾ ರಂಗೇರತದೆ ಮೈಯ್ಯೆಲ್ಲಾ ಮುಳುಕಡ್ತಾದೆ
ಭೂಮಿಯೆಲ್ಲ ತುಳುಕಾಡ್ತದೆ ಲೋಕವೆಲ್ಲ ತೂರಾಡ್ತಾದೇ
ಕುಡಿದಾಗ ಕಳ್ ಗುಂಡೆ ಕುಣಿತೈತೆ ತಲೆ ಮುಂದೆ
ಕಣ್ಣೊಳಗೆ ಬ್ರಹ್ಮಾಂಡ ಬ್ರಹ್ಮನಿಗೆ ಹೂ ದಂಡ
ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ
ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ
ರಂಗಾ.... ಹೇ.. ವಿಠಲ.. ಕುಮಾರ
ರಂಗಾ.... ಹೇ.. ವಿಠಲ.. ಕುಮಾರ
ಹುಡುಗಿ ನೋಡು ಹುಡುಗಿ ನೋಡು ಗುಡುಗಿ ಕುಣಿವ ಮೈಯ್ಯ ನೋಡು
ಕುಲುಕಿ ಕೆಣಕೋ ನಡುವ ನೋಡು ನಡುವ ಮೇಲೆ ಲೋಕ ನೋಡು
ಲೋಕದೊಳಗೆ ಬೆಟ್ಟ ನೋಡು ಬೆಟ್ಟದೊಳಗೆ ಊರು ನೋಡು
ಊರೋಳಗೆ ಗದ್ದೆ ನೋಡು ಹುಲ್ಲು ಮೆದೆಯಲಿ ಜೋಡಿ ನೋಡು
ಜೋಡಿಯಾ ಮೈಯ್ಯಲ್ಲಿ ಕರೆಂಟ್ ಪಾಸು ಆಗುತೈತೆ
ಅವರು ಹೌಸು ಇಲ್ದೇ ಇದ್ರೂ ಊರಿಗೆಲ್ಲ ಇವಳೇ ಕವರು
ಮೈಯ್ಯಲ್ಲಿ ಸೌಗಂಧ ಹುಡುಗ್ರೆಲ್ಲಾ ಸ್ಟಾಟ್ ಔಟು
ಕಣ್ಣೊಳಗೆ ಬ್ರಹ್ಮಾಂಡ ಬ್ರಹ್ಮನಿಗೆ ಹೂದಂಡ
ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ
ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ
ಮೈಯ್ಯ ನೋಡು ಮೈಯಿ ದಂತದಂಥ ನೈಸು ನೋಡು
ಕಣ್ಣು ನೋಡು ಕಣ್ಣು ನೋಡು ಬಾಂಬಿನಂಥ ಪವರ್ ಗುಂಡು
ಈ ದಂತದಂಥ ಮೈಯ್ಯ ಕಂಡು ಕುಣಿದು ಬರುವ ವೀರಪ್ಪನ್
ಬಾಂಬಿನಂಥ ಕಣ್ಣು ಕಂಡ್ರೇ ಓಡಿ ಬರುವ ಬಿನ್ ಲಾಡೆನ್
ಜಾರ್ಜ್ಸ್ ಬೂಷ್ಯು ಇವಳ ಕಂಡ್ರೇ ಕಾಡಿಬೇಡಿ ಕರೀತಾನೆ
ಇವಳ ಮಧ್ಯೆ ಇಟ್ಟುಕೊಂಡು ಲಾಡೆನ್ಸ್ ಹಿಡೀತಾನೆ
ವೀರಪನ್ನ್ ಹಿಡಿಯಲು ಕಾಡು ಮಂತ್ರಿ ಬೇಡುತ್ತಾನೆ
ಇವಳು ಅವರ ಹಿಂದೆ ಹೋದ್ರೇ ನಮ್ಮಗತಿ ತಂಗಳನ್ನ
ಬಿಡಬ್ಯಾಡ ಬೆಳದಿಂಗಳ ಮೇಯ್ಬೇಡ ಬರಿ ಹುಲ್ಲ
ಕಿಕ್ ಹೊಡೀತದೆ ಕಿಕ್ ಹೊಡೀತದೆ ಘಮ್ ಗುಡುತ್ತದೆ ಕಿಂಗುಡುತದೆ
ತೆಂಗಿನ್ ನೀರಾ ರಂಗೇರತದೆ ಮೈಯ್ಯೆಲ್ಲಾ ಮುಳುಕಡ್ತಾದೆ
ಭೂಮಿಯೆಲ್ಲ ತುಳುಕಾಡ್ತದೆ ಲೋಕವೆಲ್ಲ ತೂರಾಡ್ತಾದೇ
ಕುಡಿದಾಗ ಕಳ್ ಗುಂಡೆ ಕುಣಿತೈತೆ ತಲೆ ಮುಂದೆ
ಕಣ್ಣೊಳಗೆ ಬ್ರಹ್ಮಾಂಡ ಬ್ರಹ್ಮನಿಗೆ ಹೂ ದಂಡ
ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ
ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ ನಿಂಗಿ ರಂಗಿ
ರಂಗಾ.... ಹೇ.. ವಿಠಲ.. ಕುಮಾರ
ರಂಗಾ.... ಹೇ.. ವಿಠಲ.. ಕುಮಾರ
----------------------------------------------------------------------------------------------
ಕಲರ್ಸ್ (೨೦೦೩) - ಸ್ನೇಹವೂ
ಸಂಗೀತ : ಕಲರ್ ಮಹೇಶ, ಸಾಹಿತ್ಯ : ಮಳವಳ್ಳಿ ಸಾಯಿಕೃಷ್ಣ, ಗಾಯನ : ಹೇಮಂತ
ಸ್ನೇಹವು ಕಣ್ಣು ಎದುರಿಗೆ ಕಾಣೋ ನಿಜದ ಎರಡನೇ ಸ್ವರ್ಗವು
ಸ್ನೇಹವು ನಾವು ನೀವು ಕಾಣದೆ ಇರುವ ಎರಡನೇ ದೈವವು
ನಾವು ನೀವು ಕಾಣದೆ ಇರುವ ನಾಲ್ಕನೇ ಲೋಕವು ಸ್ನೇಹದಲೇ ಸೃಷ್ಟಿ ಇದೆ
ಸ್ನೇಹದಲ್ಲೇ ಪ್ರೀತಿ ಇದೆ... ಹ್ಹಾಂ .. ಸ್ನೇಹದಲ್ಲೇ ವೇದ ಇದೆ
ಸ್ನೇಹದಲ್ಲೇ ನಾದ ಇದೆ ನೋವು ಮರೆಸಿ ನಲಿವನು ತರುವುದು ಸ್ನೇಹವು
ಇರಳು ತೊಳೆದು ಬೆಳಕನು ಬೆಳಗೋ ಸ್ನೇಹವು
ಸ್ನೇಹವಾ ಮರೆತು ಹೋದರೆ ಬದುಕೇ ಇಲ್ಲ ಸ್ನೇಹಿತ
ಸ್ನೇಹವು ಕಣ್ಣು ಎದುರಿಗೆ ಕಾಣೋ ನಿಜದ ಎರಡನೇ ಸ್ವರ್ಗವು
ಸ್ನೇಹವು ನಾವು ನೀವು ಕಾಣದೆ ಇರುವ ಎರಡನೇ ದೈವವು
ನಾವು ನೀವು ಕಾಣದೆ ಇರುವ ನಾಲ್ಕನೇ ಲೋಕವು ಸ್ನೇಹದಲೇ ಸೃಷ್ಟಿ ಇದೆ
ಮೋಡದಲ್ಲಿ ಮನೆ ಕಟ್ಟುವ ಸೂರ್ಯ ಚಂದ್ರರನು ಮಾಡುವ
ಓ.. ಭೂಮಿ ಬಾನಿಗೆ ಏಣಿ ಹಾಕುವ ಆ ಸೂರ್ಯ ವ್ಯೂಹ ಕೆಳಗಿಳಿಸುವ
ಹೇ.. ಸ್ನೇಹ ಮುಷ್ಟಿಯಲ್ಲಿ ಚಲಿಸೋ ಕಾಲವ ಹಿಡಿಬಹುದು
ಹ್ಹಾಂ ... ಸ್ನೇಹದ ಬಲದಲ್ಲಿ ತಿರುಗೋ ಭೂಮಿಯ ತಡಿಬಹುದು
ಸ್ನೇಹವೇ ಐಶ್ವರ್ಯವು ಸ್ನೇಹದಲೇ ತ್ಯಾಗವು
ಸ್ನೇಹವು ಕಣ್ಣು ಎದುರಿಗೆ ಕಾಣೋ ನಿಜದ ಎರಡನೇ ಸ್ವರ್ಗವು
ಸ್ನೇಹವು ನಾವು ನೀವು ಕಾಣದೆ ಇರುವ ಎರಡನೇ ದೈವವು
ನಾವು ನೀವು ಕಾಣದೆ ಇರುವ ನಾಲ್ಕನೇ ಲೋಕವು ಸ್ನೇಹದಲೇ ಸೃಷ್ಟಿ ಇದೆ
ಹಿಂಸೆ ವಾದವನು ಅಳಿಸುವ ರಾಮರಾಜ್ಯವನು ಕಟ್ಟುವಾ
ದೇಶ ದ್ರೋಹಿಗಳ ಕೊಲ್ಲುವಾ ಹ್ಹಾಂ ... ಪ್ರೇಮದೇಶವನು ಕಟ್ಟುವ
ಹೇ.. ಸ್ನೇಹದ ಗೂಡಿನಲಿ ಪ್ರೀತಿಯ ಕೋಗಿಲೆ ಹಾಡುವುದು
ಸ್ನೇಹದ ಶಕ್ತಿಯಲಿ ಶಾಂತಿಯ ಹೂಗಳು ಬೆಳೆಯುವುದು
ಸ್ನೇಹವೇ ಸರ್ವಸ್ವವೂ ಸ್ನೇಹದಲೇ ದೇವವು
ಸ್ನೇಹವು ಕಣ್ಣು ಎದುರಿಗೆ ಕಾಣೋ ನಿಜದ ಎರಡನೇ ಸ್ವರ್ಗವು
ಸ್ನೇಹವು ನಾವು ನೀವು ಕಾಣದೆ ಇರುವ ಎರಡನೇ ದೈವವು
ನಾವು ನೀವು ಕಾಣದೆ ಇರುವ ನಾಲ್ಕನೇ ಲೋಕವು ಸ್ನೇಹದಲೇ ಸೃಷ್ಟಿ ಇದೆ
ಸ್ನೇಹದಲ್ಲೇ ಪ್ರೀತಿ ಇದೆ... ಹ್ಹಾಂ .. ಸ್ನೇಹದಲ್ಲೇ ವೇದ ಇದೆ
ಸ್ನೇಹದಲ್ಲೇ ನಾದ ಇದೆ ನೋವು ಮರೆಸಿ ನಲಿವನು ತರುವುದು ಸ್ನೇಹವು
ಇರಳು ತೊಳೆದು ಬೆಳಕನು ಬೆಳಗೋ ಸ್ನೇಹವು
ಸ್ನೇಹವಾ ಮರೆತು ಹೋದರೆ ಬದುಕೇ ಇಲ್ಲ ಸ್ನೇಹಿತ
ಸ್ನೇಹವು ಕಣ್ಣು ಎದುರಿಗೆ ಕಾಣೋ ನಿಜದ ಎರಡನೇ ಸ್ವರ್ಗವು
ಸ್ನೇಹವು ನಾವು ನೀವು ಕಾಣದೆ ಇರುವ ಎರಡನೇ ದೈವವು
ನಾವು ನೀವು ಕಾಣದೆ ಇರುವ ನಾಲ್ಕನೇ ಲೋಕವು ಸ್ನೇಹದಲೇ ಸೃಷ್ಟಿ ಇದೆ
-----------------------------------------------------------------------------------------------
ಕಲರ್ಸ್ (೨೦೦೩) - ನನಗಾಗಿಯೇ ಈ ಅಂದವು
ಸಂಗೀತ : ಕಲರ್ ಮಹೇಶ, ಸಾಹಿತ್ಯ : ಮಳವಳ್ಳಿ ಸಾಯಿಕೃಷ್ಣ, ಗಾಯನ : ರಾಜೇಶ, ಕುಮಾರ ಸಾಹಿಲ್
ಹೇ... ನನಗಾಗಿಯೇ ಈ ಅಂದವು ನಿನಗಾಗಿಯೇ ಹ್ಹಾಂ .. ಈ ಜನ್ಮವು
ಮರೆವೆನೇ ಚಿನ್ನ ನಾ ಬಿಡುವೆನೆ ನಿನ್ನಾ ಎಲ್ಲೇ ನೀನೀರೂ
ಹೇ... ನನಗಾಗಿಯೇ ಅವಳಂದವೂ... ಅವಳಗಾಗಿಯೇ.. ಈ ಜನ್ಮವೂ
ಸಿಗಿಯುವೆ ನಿನ್ನ ನಾ ಕಡಿಯುವೆ ನಿನ್ನ ಅಡ್ಡಾ ಬಂದರೇ ... ಹ್ಹಾ
ಹೋಯ್ .. ಮುದ್ದು ನುಡಿಗಳು ನಾಟ್ಯ ನಡೆಗಳು ಮಿಂಚೋ ಕೆನ್ನೆಯೂ
ಜಿಂಕೆ ಕಂಗಳು ಜೇನು ತುಟಿಗಳು ನನಗೆ ಸ್ವಂತವೇ
ಮುದ್ದು ನುಡಿಗಳು ನಾಟ್ಯ ನಡೆಗಳು ಮಿಂಚೋ ಕೆನ್ನೆಯೂ
ಜಿಂಕೆ ಕಂಗಳು ಜೇನು ತುಟಿಗಳು ನನಗೆ ಸ್ವಂತವೇ
ಇಂದ್ರನಿಗೇಳಿ ಸ್ವರ್ಗವ ಕೊಡಿಸುವೆ ಸೇರು ನನ್ನನ್ನೂ ... ಅಹ್ಹಹ್ಹಹ್ಹಾ...
ಕಂಬಿ ಇಲ್ಲದೆ ರೈಲು ಬಿಡುವನು ಎಲ್ಲಾ ಡವ್ವಗಳೂ
ಎದೆಯ ಗೂಡಲಿ ಸ್ವರ್ಗ ಕಟ್ಟುವೆ ಲಾಲಿ ಹಾಡುವೆ
ಪ್ರೇಮದ ಮೇಲೆ ಆಣೆಯ ಮಾಡುವೆ ನನದೆಲ್ಲ ನಿನ್ನದೇ...
ನನಗಾಗಿಯೇ ಈ ಅಂದವು ಅವಳಗಾಗಿಯೇ ಹ್ಹಾಂ .. ಈ ಜನ್ಮವು
ಮರೆವೆನೇ ಚಿನ್ನ ನಾ ಕಡಿಯುವೆ ನಿನ್ನಾ ಅಡ್ಡಾ ಬಂದರೇ... ಹ್ಹಾ..
ನಂಬು ನನ್ನನ್ನೂ ಇವನು ಸುಳ್ಳನು ದೂರಾ ಕಳಿಸು ನೀ
ನಮ್ಮ ಪ್ರೀತಿಗೆ ಕಟ್ಟಿ ಕೊಡುವೇನು ತಾಜುಮಹಲನು
ಪ್ರೇಮದ ಮಹಲಿನ ಒಳಗಡೆ ನಾವು ಬೆರೆತು ಹೋಗುವಾ
ಸುಳ್ಳೂ ... ಪ್ರೇಮಿ ಸಾವಿನ ದುಃಖ ತುಂಬಿದೆ ತಾಜುಮಹಲಲಿ
ಡೋಂಗಿ ಮಾತಿಗೆ ಶರಣು ಹೋಗದೆ ಕೊಲ್ಲು ಅವನನು
ಈಗಲೇ ಗೋರಿಯ ಕಟ್ಟಲು ನಿನಗೆ ಸ್ಕೆಚ್ಚು ಹಾಕುವೇ ...ಹೇಹೇಹೇ
ನನಗಾಗಿಯೇ ಈ ಅಂದವು ನಿನಗಾಗಿಯೇ ಈ ಜನ್ಮವು
ನನಗಾಗಿಯೇ ಇವಳಂದವು ಇವಳಗಾಗಿಯೇ ಈ ಜನ್ಮವು
-----------------------------------------------------------------------------------------------
ಕಲರ್ಸ್ (೨೦೦೩) - ದಾಸನಾದೇ ಹೆಜ್ಜೇ
ಸಂಗೀತ : ಕಲರ್ ಮಹೇಶ, ಸಾಹಿತ್ಯ : ಮಳವಳ್ಳಿ ಸಾಯಿಕೃಷ್ಣ, ಗಾಯನ : ಕುಮಾರ ಸಾಹಿಲ್
ದಾಸನಾದೆ ಹೆಜ್ಜೆ ಲಾಸ್ಯಕ್ಕೆ ಹಂಸವಾದೆ ಗೆಜ್ಜೆ ನಾದಕ್ಕೆ ಪ್ರೇಮ ಶಾಲೆ ಎದೆಯಾ ಭೂಮಿಲಿ
ಓಓಓ .. ಪ್ರೀತಿ ಸಾಲು ಬರೆಯೋ ಪದಗಳಲಿ ಕಣ್ಣಲ್ಲೇ ಕಾವ್ಯ ನಾ ಬರೆಯೋಣ ಬಿಡುವಾದ್ರು
ಸರಿಗಮಗಳ ಲಹರಿಯ ಜಾತ್ರೆಯಲಿ
ಮಿತ್ರಳಾದೆ ಪ್ರೇಮಪಾಠಕ್ಕೆ ಆ.. ಚೈತ್ರವಾದೆ ನಿನ್ನ ಸ್ಪರ್ಶಕ್ಕೆ
ಮಾತುಗಳ ಮೊರಡಿಯಲಿ ನೋಟಗಳ ರವಳಿಯಲಿ
ಚಿಟಪಟಗಳ ನಗುವಿನ ಸೋನೆಯಲಿ
ಸಪ್ತಸ್ವರಗಳ ಪ್ರೇಮರಾಗವ ಹರಿಸಿರುವೆ ನರಗಳಲಿ
ಸ್ವಾತಿಹನಿಗಳ ಮುತ್ತು ರಾಶಿಯ ತುಂಬಿರುವೆ ತುಟಿಯಲ್ಲಿ
ಈ ಗಂಧ ಈಜಿದೆ ನಿನ್ನ ಕೆನ್ನೆಯ ಜೋಗದ ಜಲಧಾರೆಯಲ್ಲಿ
ಆರು ಋತುಗಳು ಗೂಡು ಕಟ್ಟಿವೆ ಮುಂಗುರುಳ ಗುಡಿಯಲ್ಲಿ
ನಿದಿರಾ.. ತೊಳಲಿ ಜಗದಾ ಅಂದ ಮನೆ ಮಾಡಿ ಇರುವಾಗ
ಪೃಕೃತಿಯೇ ನಿನ ಮುಂದೆ ಶರಣಾಗಿದೆ
ಈ ಪ್ರೇಮ ಶಾಲೆ ಎದೆಯಾ ಭೂಮೀಲಿ
ಹೇ.. ಇಬ್ಬನಿ ಝರಿ ನಿನ್ನ ಸೀರೆಗೆ ಸೆರಗಾಗಲು ಬಯಸುತಿದೆ
ಏಳು ಬಣ್ಣವು ನಿನ್ನ ಬೆರಳಿಗೆ ರಂಗಾಗಲು ಬೇಡುತಿದೆ
ಆಗುಂಬೆ ಸಂಜೆಯ ಸೂರ್ಯ ಕಿರಣವೂ ಈ ಹಣೆಗೆ ಬೊಟ್ಟಾಯ್ತು
ಬನವಾಸಿ ಸಾಲಿನ ಹಸಿರು ಗಿರಿಗಳು ಕೈಗಳಿಗೆ ಬಳೆಯಾಯ್ತು
ಸೊಬಗೆಲ್ಲಾ... ಈ ರಮ್ಯ ಪ್ರೇಮ ಕಂಡು ನಮ್ಮನ್ನು ಹರಿಸಿದೆ
ಶುಭ ಕೊರೋ ಶುಭ ಶಕುನ ಹಾಡಿದೆ
ಮಿತ್ರಳಾದೆ ಪ್ರೇಮಪಾಠಕ್ಕೆ ಆ.. ಚೈತ್ರವಾದೆ ನಿನ್ನ ಸ್ಪರ್ಶಕ್ಕೆ
ಮಾತುಗಳ ಮೊರಡಿಯಲಿ ನೋಟಗಳ ರವಳಿಯಲಿ
ಚಿಟಪಟಗಳ ನಗುವಿನ ಸೋನೆಯಲಿ
----------------------------------------------------------------------------------------------
ಕಲರ್ಸ್ (೨೦೦೩) - ಸ್ನೇಹದ ಕಡಲಲ್ಲೇ
ಸಂಗೀತ : ಕಲರ್ ಮಹೇಶ, ಸಾಹಿತ್ಯ : ಮಳವಳ್ಳಿ ಸಾಯಿಕೃಷ್ಣ, ಗಾಯನ : ಗುರುಕಿರಣ, ಕುಮಾರ ಸಾಹಿಲ್
ಸ್ನೇಹದ ಕಡಲಲ್ಲಿ ಸವಿ ನೆನಪಿನ ಅಲೆಗಳಲಿ
ಗೆಳೆಯರ ಗಿರಿಯಲ್ಲಿ ಪ್ರೀತಿ ಹೂವಿನ ತೋಟದಲಿ
ನಾವೆಲ್ಲಾ ಸ್ನೇಹದ ದುಂಬಿಗಳು ಕನಸುಗಳ ಕಟ್ಟೋ ಚಿಟ್ಟೆಗಳು
ಮಾತೆಲ್ಲ ರಾಗಾದ ಪರ್ವಗಳು ಹಾಡೆಲ್ಲ ಜೇನಿನ ಸಾಲುಗಳು
ಸ್ನೇಹ ಬೆಸೆದೋನು ನಮಗೆ ಆ ದೇವರು
ಪ್ರೀತಿ ಕೋಟೆಯ ಕಟ್ಟೋಣ ನಾವೆಲ್ಲರೂ
ಸ್ನೇಹದ ಕಡಲಲ್ಲಿ ಸವಿ ನೆನಪಿನ ಅಲೆಗಳಲಿ
ಗೆಳೆಯರ ಗಿರಿಯಲ್ಲಿ ಪ್ರೀತಿ ಹೂವಿನ ತೋಟದಲಿ
ನಾವೆಲ್ಲಾ ಸ್ನೇಹದ ದುಂಬಿಗಳು ಕನಸುಗಳ ಕಟ್ಟೋ ಚಿಟ್ಟೆಗಳು
ಏಹೇಹೇಹೇ ... ಆಹಾಹಾಹಾ...
ಆ ಸೂರ್ಯ ಕೂಡ ಈ ಸ್ನೇಹ ಕಂಡು ಕಾಲೇಜು ಲೋಕಕೆ ಬರ್ತಾನಮ್ಮ
ಈ ಪ್ರೀತಿ ಸ್ನೇಹ ಮೃಷ್ಟಾನ್ನ ಉಂಡು ಆಕಾಶಕ್ಕೋಗಲು ಮರೀತಾನಮ್ಮಾ
ನೂರು ಗೋಲ್ಡನ್ನು ಲೈಫು ಈ ಕಾಲೇಜು ಎನುತನಮ್ಮಾ
ಇನ್ನು ಈ ಸ್ನೇಹಲೋಕ ಬಿಟ್ಟು ಹೋಗೆನು ನನಗೆ ಇದೇ ಸ್ವರ್ಗ ಎಂದು ಹೆಳ್ತಾನಮ್ಮಾ
ರಂಗಾಯ್ತು ರಂಗಾಯ್ತು ಪ್ರೇಮದ ಲೋಕ ರಂಗಾಯ್ತು
ಎದೆ ಎಲ್ಲ ರಂಗಿನ ತೇರಾಯ್ತು ರಂಗಾಯ್ತು
ರಂಗಾಯ್ತು ರಂಗಾಯ್ತು ಪ್ರೇಮದ ಲೋಕ ರಂಗಾಯ್ತು
ಎದೆ ಎಲ್ಲ ರಂಗಿನ ತೇರಾಯ್ತು ರಂಗಾಯ್ತು
ಪ್ರೇಮದ ಬಣ್ಣದಲಿ ಕಣ್ಣ ರೆಪ್ಪೆಯ ಕುಂಚದಲಿ
ಮನಸಿನ ಹಾಳೆಯಲಿ ನಿನ್ ಅಂದ ಬರೆಯುತಲಿ
ಪ್ರೀತಿಯ ಗುಡಿಯ ಕಟ್ಟುವೇ ಪ್ರೇಮದ ಅಭಿಷೇಕ ಮಾಡುವೆ .
ಒಲವುಗಳ ಮಂತ್ರ ಘೋಷಿಸುವೆ
ಈ ತನುವನೇ ಅರ್ಚಿಸುಸಿ ಅರ್ಪಿಸುವೆ
ಪ್ರೇಮ ಓಂಕಾರವೆಲ್ಲವು ನಿನಗಾಗಿಯೇ
ಹೃದಯ ಝೇಂಕಾರವೆಲ್ಲವು ನಿನಗಾಗಿಯೇ
ಪ್ರೇಮದ ಬಣ್ಣದಲಿ ಕಣ್ಣ ರೆಪ್ಪೆಯ ಕುಂಚದಲಿ
ಮನಸಿನ ಹಾಳೆಯಲಿ ನಿನ್ ಅಂದ ಬರೆಯುತಲಿ
ಪ್ರೀತಿಯ ಗುಡಿಯ ಕಟ್ಟುವೇ ಪ್ರೇಮದ ಅಭಿಷೇಕ ಮಾಡುವೆ .
ಆಹಾ... ಆ ಚಂದಮಾಮ ಮೈಮರೆತನಮ್ಮ ಕಿರುನಗೆಯ ಬೆಳಕಿನ ತೇಜಸ್ಸಿಗೆ
ತಂಗಾಳಿ ಬಂದು ಕಿವಿಯಲ್ಲಿ ಹೇಳಿತು ಅವಳುಸಿರೇ ತಂಗಾಳಿ ನಾನೇತಕೆ
ಮಿಂಚೋ ಮಿಂಚೊಂದು ಬಂದು...
ಮಿಂಚೋ ಮಿಂಚೊಂದು ಬಂದು ಎದುರು ನಿಂತೈತಮ್ಮ
ನಿನ್ನ ಕಣ್ಣ ಮಿಂಚು ಸೋಕಿ ಮಂಕಾದೆನು ಎಂದು
ಸಿಹಿ ಚೂರು ನೀಡಿ ನಗುತೈತಮ್ಮ
ಸ್ನೇಹದ ಕಡಲಲ್ಲಿ ಸವಿ ನೆನಪಿನ ಅಲೆಗಳಲಿ
ಗೆಳೆಯರ ಗಿರಿಯಲ್ಲಿ ಪ್ರೀತಿ ಹೂವಿನ ತೋಟದಲಿ
ನಾವೆಲ್ಲಾ ಸ್ನೇಹದ ದುಂಬಿಗಳು ಕನಸುಗಳ ಕಟ್ಟೋ ಚಿಟ್ಟೆಗಳು
ಮಾತೆಲ್ಲ ರಾಗಾದ ಪರ್ವಗಳು ಹಾಡೆಲ್ಲ ಜೇನಿನ ಸಾಲುಗಳು
----------------------------------------------------------------------------------------------
No comments:
Post a Comment