1875. ದಾಸ (೨೦೦೩)

ದಾಸ ಚಲನಚಿತ್ರದ ಹಾಡುಗಳು 
  1. ದಾಸನಿಗೆ ದಿಲ್ 
  2. ಪ್ರೀತಿಸು ಬಾ ಪ್ರೀತಿಯೇ 
  3. ಕುಲುಕುಬೇಡ 
  4. ಯಾವಳಪ್ಪ ರಾಣಿ 
  5. ನನ್ನುಸಿರೇ 
ದಾಸ (೨೦೦೩) - ದಾಸನಿಗೆ ದಿಲ್ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ: ಹೇಮಂತ 

ದಾಸನಿಗೆ ದಿಲ್ ಕೊಟ್ರೇ ದೋಸ್ತಿ ಡವ್ ಮಾಡಿ ಕೈ ಕೊಟ್ಟನ್ ನಾಸ್ತಿ  
ಫ್ರಂಟಲ್ಲಿ ಬಂದ್ರೆ ರೈಟು ಬ್ಯಾಕಿಂದ ಬಂದ್ರೆ ಫೈಟು ನನಗನ್ಸೋದೊಂದೇ  ಕರೆಕ್ಟು 
ಕೊಟ್ರೆ ವರ ಕಣಮ್ಮಾ... ಹೇ.. ಇಟ್ರೆ ಶಾಪ ಕಣಮ್ಮಾ 
ದಾಸನಿಗೆ ದಿಲ್ ಕೊಟ್ರೇ ದೋಸ್ತಿ ಡವ್ ಮಾಡಿ ಕೈ ಕೊಟ್ಟನ್ ನಾಸ್ತಿ  

(ತಕಗಿಣಗಿಣ ದಾಸಸ  ತಕಗಿಣಗಿಣ ದಾಸ ದಾಸ)
ಜಾರಿಬಿದ್ದರೂ ನನಗೇನೋ ಕ್ಯಾರೇ ಇಲ್ಲ ಊರಿನಲ್ಲಿ ನನಗೋಸ್ಕರ ಬದುಕೋರು      
ಯಾರು ಕಾಣೋ ಏರಿಯಾದಲ್ಲಿ ಯಾರ ಹಂಗಿಲ್ದೇ ಬೆಳೆದೋನ ನಾನು 
ಯಾವ ಬೇಲಿ ನನಗಿಲ್ಲ ಜಾಲ್ರ ಹಿಡಿಯೋರ್ಗೆ ವೈರಿ ನಾನೂ 
ಯಾರು ಮಾತು ಕೇಳೋಲ್ಲ ಗಲ್ಲಿ ಗಲ್ಲಿ ನೋಡು ಸಿಕ್ರೆ ಚಿಂದಿ ಮಾಡು 
(ನಡಿ ನಡಿ ನಡಿ ಫೈಟು)
ನಂಗೇ ನಂದೇ ಸಂತೋಷ ಹೇ.. ಗೆದ್ರೆ ನಾನೇ ಆಕಾಶ 
ದಾಸನಿಗೆ ದಿಲ್ ಕೊಟ್ರೇ ದೋಸ್ತಿ ಡವ್ ಮಾಡಿ ಕೈ ಕೊಟ್ಟನ್ ನಾಸ್ತಿ  

(ತಕಗಿಣಗಿಣ ದಾಸ ತಕಗಿಣಗಿಣ ದಾಸ ದಾಸ)
ಈ ಭೂಮೀಲಿ ನಿಂದು ಅಂತ ಒಂದು ಗುರುತು ಮಾಡೋ ತಮ್ಮ        
ಅದಕ್ಕಾಗಿಯೋ ನಿನಗಿಂಥ ಜನ್ಮ ಕೊಟ್ರು ನಿನ್ನ ಅಮ್ಮ ಜೀವನ ಅನ್ನೋದು ಡ್ರಾಮಾ ಕಣೋ 
ಅದರ ಸುತ್ತ ದೇವ್ರು ಕಣೋ ಆಗಾ ಚಮ್ಕಾಸ್ಕೊಂಡ್  ಗೆಲ್ಲೋದೊಂದೇ 
ನನ್ನ ಎಡೆಯಲಿರೋ ಧಮ್ಮು ಕಣೋ ನನ್ನ ಸ್ಟೈಲೇ ಬೇರೆ (ಹೌದು ಹೌದು ಹೌದು ಹೌದು)
ಏ.... ನನ್ನ ರೂಟೆ ಬೇರೆ ಗುರಾಯ್ಸು (ನಿಜ ನಿಜ ನಿಜ ಗುರುವೇ ಏ ... ಧಮ್ಮ ಇದ್ರೇ ಉಡಯ್ಸು... 
ಏ ... ಧಮ್ಮ ಇದ್ರೇ ಉಡಯ್ಸು )  
ದಾಸನಿಗೆ ದಿಲ್ ಕೊಟ್ರೇ ದೋಸ್ತಿ ಡವ್ ಮಾಡಿ ಕೈ ಕೊಟ್ಟನ್ ನಾಸ್ತಿ  
ಫ್ರಂಟಲ್ಲಿ ಬಂದ್ರೆ ರೈಟು ಬ್ಯಾಕಿಂದ ಬಂದ್ರೆ ಫೈಟು ನನಗನ್ಸೋದೊಂದೇ  ಕರೆಕ್ಟು 
ಕೊಟ್ರೆ ವರ ಕಣಮ್ಮಾ... ಹೇ.. ಇಟ್ರೆ ಶಾಪ ಕಣಮ್ಮಾ 
ದಾಸನಿಗೆ ದಿಲ್ ಕೊಟ್ರೇ ದೋಸ್ತಿ ಡವ್ ಮಾಡಿ ಕೈ ಕೊಟ್ಟನ್ ನಾಸ್ತಿ  
-----------------------------------------------------------------------

ದಾಸ (೨೦೦೩) - ಪ್ರೀತಿಸು ಬಾ ಪ್ರೀತಿಯೇ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ: ರಾಜೇಶ, ನಂದಿತಾ 

ಗಂಡು :  ಪ್ರೀತಿಸು ಬಾ ಪ್ರೀತಿಯೇ ಪ್ರೀತಿಸು ಹೃದಯವೇ 
            ಪ್ರೀತಿಸು ಬಾ ಪ್ರೀತಿಯೇ ಪ್ರೀತಿಸು ಹೃದಯವೇ 
            ಈ ಹೃದಯ ಕರೆದರೂ ಇನ್ನೂ ಈ ಮೌನವೇ ಎಲ್ಲೇ ನಾನಿದ್ದರು ಅಲ್ಲೇ ಇರುವೆ 
            ನೀ ನನ ನೆರಳಲಿ ಹೊಸದು ಈ ಪ್ರೇಮದ ಜಾದು ಇದು ಏನಿದು 
            ನಿನ್ನ ಪ್ರತಿ ಹೆಜ್ಜೆಯ ಮೇಲು ನಿನ್ನಾ ಪ್ರತಿ ಸಂಜೆಯ ಕಳೆದು 
            ಹಾಡೋ ಹೊಸ ಪ್ರೀತಿಯ ಹಾಡು ಇದು... ಹೇಗಿದೆ 
            ಪ್ರೀತಿಸು ಬಾ ಪ್ರೀತಿಯೇ ಪ್ರೀತಿಸು ಹೃದಯವೇ 

ಹೆಣ್ಣು : ಗಾಳಿಯೇ ಎಲ್ಲಿ ಹೋಗುವೆ ಪ್ರೀತಿಯ ಗಂಧವ ನೀ ಹಂಚಿಕೊಳ್ಳದೇ 
ಗಂಡು : ಜಲಪಾತವೇ ಎತ್ತ ಜಾರುವ ನಮ್ಮ ಈ ಆಸೆಯನ್ನ ಹಂಚಿಕೊಳ್ಳದೇ 
ಹೆಣ್ಣು : ಪ್ರೀತಿ ಮುಂದೆ ಎಲ್ಲ ಗಂಡು ಹೆಣ್ಣು ಒಂದೇ ತಾನೇ ಅಂತ ಮನಸಿನ ಕಣ್ಣು 
          ತೆರೆದ ಹೃದಯವಾ ಬರೆಯುವೆ ನಿನ್ನನ್ನು ಪ್ರೀತಿಸು 
          ಹೇಹೇ ... ಭೂಮಿ ಬಾನು ತಲೆ ಕೆಳಗಾಗಿರಲಿ ತಾರೆ ಚುಕ್ಕಿಗಳೇ ಕಳೆದ್ಹೋಗಿರಲಿ 
          ನಿನ್ನ ಪ್ರೀತಿ ಬಿಟ್ಟು ಜಗವೇ ಬರಿ ಮಣ್ಣು ಪ್ರೀತಿಸು 
          ಪ್ರೀತಿಸು ಬಾ ಪ್ರೀತಿಯೇ ಪ್ರೀತಿಸು ಹೃದಯವೇ 

ಗಂಡು : ಸೋಲದೇ ಗೆಲ್ಲೋ ಪ್ರೇಮಕೆ ಯಾವುದೇ ಅರ್ಥವು ಇಲ್ಲ ಜಗದಲ್ಲಿ 
ಹೆಣ್ಣು : ಮೋಡದ ಒಡೆಯ ಹರಿಯೋ ನದಿ ಹನಿಗಳ ಗಾಗಿದೆ ಕನಸು ನಮ್ಮಲಿ 
ಗಂಡು : ಯಾರೇ ಬರಲಿ ಈ ಪ್ರೀತಿಯ ಮುಂದೆ ಅಂಜಲಾರೆ ಕೈಹಿಡಿಯುವೇ ಮುಂದೆ 
            ಮಾತು ಕೊಟ್ಟರೆ ಮನಸ್ಸಿಗೆ ಹತ್ತಿರ ನಾ... ಒಪ್ಪಿಕೋ 
ಹೆಣ್ಣು : ಕೂಡಿ ಕಳೆದರೂ ನೂರು ಜನುಮ ಕೂಡಿ ಬಾಳುವುದೇ ಹೃದಯದ ನಿಯಮ 
          ನನ್ನ ಉಸಿರಿನ ಏರಿಳಿತಗಳ ನೀ ಒಪ್ಪಿಕೋ 
ಗಂಡು :  ಪ್ರೀತಿಸು ಬಾ ಪ್ರೀತಿಯೇ ಪ್ರೀತಿಸು ಹೃದಯವೇ 
            ಈ ಹೃದಯ ಕರೆದರೂ ಇನ್ನೂ ಈ ಮೌನವೇ ಎಲ್ಲೇ ನಾನಿದ್ದರು ಅಲ್ಲೇ ಇರುವೆ 
            ನೀ ನನ ನೆರಳಲಿ ಹೊಸದು ಈ ಪ್ರೇಮದ ಜಾದು ಇದು ಏನಿದು 
            ನಿನ್ನ ಪ್ರತಿ ಹೆಜ್ಜೆಯ ಮೇಲು ನಿನ್ನಾ ಪ್ರತಿ ಸಂಜೆಯ ಕಳೆದು 
            ಹಾಡೋ ಹೊಸ ಪ್ರೀತಿಯ ಹಾಡು ಇದು... ಹೇಗಿದೆ 
            ಪ್ರೀತಿಸು ಬಾ ಪ್ರೀತಿಯೇ ಪ್ರೀತಿಸು ಹೃದಯವೇ 
-----------------------------------------------------------------------

ದಾಸ (೨೦೦೩) - ಕುಲುಕುಬೇಡ
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ: ಗುರುರಾಜ ಹೊಸಕೋಟೆ, ಬಿ.ಜಯಶ್ರೀ

ಮಾತು :  ಭಯಾ ಇರೋದು ಬದ್ಕೋಕ್ ಆಸೆ ಇರೋರ್ಗೆ ಸಾವಿನ್ ಜೊತೆ ಆಟ ಆಡೋ ನನಗಲ್ಲಾ
              ನಿನ್ನ ನನ್ನ ಗೇಮ್ ಅಲ್ಲಿ ನಿನಗೆ ಅಂತ ಏಮ್ ಇಟ್ಟಿರೋನು ನಾನು ಫೀಲ್ಡ್ ನಿಂದು ಗೇಮ್ ನಂದು
ಕೋರಸ್ :  ಐಯ್ಯಾ....  ಆ..ಹಾ...
ಗಂಡು : ಕುಲುಕ ಬೇಡ ಕುಲುಕ ಬೇಡ ಸಿಲ್ಕು ನೀ ಕುಲ್ಕೊಕ್ ಮುಂಚೆ ಯಾಕಂತೇಳಿ ಕುಲ್ಕು
            ಬಳುಕ ಬೇಡ ಬಳುಕ ಬೇಡ ಸಿಲ್ಕು ನೀ ಎಲ್ಲಿಂದ್ ಬಂದೆ ಹೇಳ್ಬಿಟ್ಟೊಗಿ ಬಳ್ಕು
ಹೆಣ್ಣು : ನಾ ಮೆಜೆಸ್ಟಿಕ್ಕಲ್ ಕಂಡೆ ಸಿಟಿ ಮಾರ್ಕೆಟ್ ಇಳ್ದು ಬಂದೆ ಈ ಶ್ರೀರಾಂಪುರದ ಹುಡುಗಿ
          ಎಲ್ಲಾ ಸಂದಿ ಗೊಂದಿ ಹುಡುಕಿ ತಲೆ ಸುತ್ತಿ ಸುತ್ತಿ ಸುತ್ತಿ ನಿನ್ನ ಅಡ್ಡ ಹುಡ್ಕೊಂಡ್ ಬಂದೆ.
ಗಂಡು : ಕಥೆ ಕಟ್ತಾವ್ಳೋ ಇಲ್ಲಾ ಡವ್ವು ಕಟ್ತಾವ್ಳೋ  ನಿಜ ಹೇಳ್ತಾವ್ಳೋ ಮಚ್ಚಿ ರೀಲೆ ಬಿಡ್ತಾವ್ಳೋಒಒ
ಕೋರಸ್ : ಕಥೆ ಕಟ್ತಾವ್ಳೋ ಇಲ್ಲಾ ಡವ್ವು ಕಟ್ತಾವ್ಳೋ ನಿಜ ಹೇಳ್ತಾವ್ಳೋ ಮಚ್ಚಿ ರೀಲೆ ಬಿಡ್ತಾವ್ಳೋಒಒ
               ಕುಲುಕ ಬೇಡ ಕುಲುಕ ಬೇಡ ಸಿಲ್ಕು ನೀ ಕುಲ್ಕೊಕ್ ಮುಂಚೆ ಯಾಕ್ಂತೇಳಿ ಕುಲ್ಕು

ಹೆಣ್ಣು : ಮೊನ್ನೆ ಮ್ಯಾಟ್ನಿಗೋದೆ ಥಿಯೇಟರಲಿ  ಓನ್ ಬೈಟು ಫ್ರೆಂಟು ಸೀಟಲಿ
          ನನ್ ಹತ್ರ ಯಾವನೋ ಜರ್ಗದ ಅಂತ ತಟ್ಟೆ ಬಿಟ್ಟ ಕೆನ್ನೆಲಿ....
          ತುಂಬಿತ್ತು ರೈಲ್ವೇ ಸ್ಟೇಷನು ಬ್ಯಾಗ್ ತುಂಬಾ ಇತ್ತು ರೇಷನು
          ಚೀಲಕ್ಕೊಬ್ಬ ಕೈಯಾ ಇಕ್ದ ನನ್ನೊನ್ನಾಕು ಇಕ್ಕಿದ.‌
ಗಂಡು : ಮ್ಯಾಟರು ದೊಡ್ಡದು ಮ್ಯಾಟರು ದೊಡ್ಡದು ಮೀಟರು ಚಿಕ್ಕದು
           ಕ್ವಾರ್ಟರ್ ಇಳಿಸದೆ ಮೀಟರು ಏರದು ಫಸ್ಟ್ ಸೈಟಲಿ ಎಲ್ಲಾ ಹಿಂಗೆ ಕಣಮ್ಮ
           ಒಸಿ ಒಳಗೆ ಇಳಿದು ಹೋದ ಮ್ಯಾಲೆ ಯಾರು ಬೇಡಮ್ಮ
           ಯಾವ್ದೆ ಡೀಲು ಇದ್ರೂ ನಾನು ದಿಲ್ದಾರ್ ಕಣೋ
           ಆದ್ರೂ ಹುಡ್ಗೀರ್ ಕಂಡ್ರೆ ಯಾಕೊ ಕನ್ಪ್ಯೂಸ್ ಕಣೋ.
           ಕುಲುಕ ಬೇಡ ಕುಲುಕ ಬೇಡ ಸಿಲ್ಕು
          ನೀ ಕುಲ್ಕೋಕ್ ಮುಂಚೆ ಯಾಕಂತೇಳಿ ಕುಲ್ಕು ಐಯ್ಯಾ.... ಹೇ..ಹೇ
ಹೆಣ್ಣು : ನಿನ್ ಲುಕ್ಕು ನೋಡಿ ಬಿದ್ದೆ ನಿನ್ ಖದರು ನೋಡಿ ಎದ್ದೆ
          ನಿನ್ ಸ್ಟೇಪ್ಪು ಕಂಡು ದಿನ ರಾತ್ರಿ ಮರ್ತೋಯ್ತು ನಿದ್ರೆ....
ಗಂಡು : ನಾ ಹೆಂಗೆ ನಂಬ್ಲಿ ಹುಡುಗಿ ಮೈ ಚಳಿ ಬಿಟ್ಟ ಹುಡುಗಿ ಇವ್ಳು ನಕ್ಕು ಬಿಟ್ರೆ ಸಾಕು
            ಮನಸು ತುಕ್ ಹಿಡಿತು ಕೊರಗಿ. 
ಹೆಣ್ಣು : ಅಂದವು ನಿನಗಿದೆ... ಆ ಆಂದವು ನಿನಗಿದೆ ಆಸೆಯು ನನಗಿದೆ
          ನಿನ್ನನು ಸೇರದೆ. ಆಸೆಯು ತಿರದು.
ಕೋರಸ್ : ನಿಜ ಇರ್ಬೊದು ಗುರುವೆ ನಿಜ ಇರ್ಬೊದು 
                ಈ ಹೆಣ್ಹುಡುಗಿ ಹೇಳೊದ್ ಪಾಪ ನಿಜ ಇರ್ಬೊದು
ಗಂಡು: ಬಹಳ ಹುಷಾರು ಮಗನೆ ಬಹಳ ಹುಷಾರು
           ಅಂಗಾದ್ರು ಇವ್ಳ ಸೊಕು ಕಂಡು ನಾನೇ ಡಮಾರು..
           ಕುಲುಕ ಬೇಡ ಕುಲುಕ ಬೇಡ ಸಿಲ್ಕು ನಿ ಕುಲ್ಕೊಕ್ ಮುಂಚೆ ಯಾಕಂತೇಳಿ ಕುಲ್ಕು
           ಬಳುಕ ಬೇಡ ಬಳುಕ ಬೇಡ ಸಿಲ್ಕು ನೀ ಎಲ್ಲಿಂದ್ ಬಂದೆ ಹೇಳ್ಬಿಟ್ಟೊಗಿ ಬಳ್ಕು
ಹೆಣ್ಣು : ನಾ ಮೆಜೆಸ್ಟಿಕ್ಕಲ್ ಕಂಡೆ ಸಿಟಿ ಮಾರ್ಕೆಟ್ ಇಳ್ದು ಬಂದೆ ಈ ಶ್ರೀರಾಂಪುರದ ಹುಡುಗಿ
          ಎಲ್ಲಾ ಸಂದಿ ಗೊಂದಿ ಹುಡುಕಿ ತಲೆ ಸುತ್ತಿ ಸುತ್ತಿ ಸುತ್ತಿ ನಿನ್ನ ಅಡ್ಡ ಹುಡ್ಕೊಂಡ್ ಬಂದೆ....ಯ್
ಗಂಡು : ಕಥೆ ಕಟ್ತಾವ್ಳೋ ಇಲ್ಲಾ ಡವ್ವು ಕಟ್ತಾವ್ಳೋ ನಿಜ ಹೇಳ್ತಾವ್ಳೋ ಮಚ್ಚಿ ರಿಲೇ ಬಿಡ್ತಾವ್ಳೋ
            ಕಥೆ ಕಟ್ತಾವ್ಳೋ ಅಣ್ಣ ರಿಲೇ ಬಿಡ್ತಾವ್ಳೋ ನಿಜ ಹೇಳ್ತಾವ್ಳೋ ಗುರುವೇ ರಿಲೇ ಬಿಡ್ತಾವ್ಳೋ.
------------------------------------------------------------------------

ದಾಸ (೨೦೦೩) - ಯಾವಳಪ್ಪ ರಾಣಿ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ: ರಾಜೇಶ, ಅನುರಾಧ ಶ್ರೀರಾಮ 

ಗಂಡು : ಯಾವಾಳಪ್ಪ ರಾಣಿ ರಾಣಿ ರಸಿಕರ ರಾಣಿ ಮಹಾರಾಣಿ 
            ನಾನೇ ಕಣೆ ನಿನ್ನ ವಯಸ್ಸಿಗೆ ಬಯಸಿದ ವರೆಸೆಗೆ ಅಭಿಮಾನಿ 
ಹೆಣ್ಣು : ಗುಂಡಿಗೆಯ ತುಂಬಾ ನಿನ ಬಿಂಬ ಪ್ರತಿಬಿಂಬ ನೋಡು 
          ಆಸೆಗಳ ಕಂಬ ಏರೋಣ ಹಾಡು 
ಗಂಡು : ಬಾರೆ ಬಾ...                  ಹೆಣ್ಣು : ಬಾರೆ ಬಾ... 
ಇಬ್ಬರು : ಇಬ್ಬರ ಎದೆಯಲಿ ಜೋಗದ ಜೋರು 
ಗಂಡು : ಯಾವಾಳಪ್ಪ ರಾಣಿ ರಾಣಿ ರಸಿಕರ ರಾಣಿ ಮಹಾರಾಣಿ 
            ನಾನೇ ಕಣೆ ನಿನ್ನ ವಯಸ್ಸಿಗೆ ಬಯಸಿದ ವರೆಸೆಗೆ ಅಭಿಮಾನಿ 
  
ಹೆಣ್ಣು : ಜೋಡಿ ಹೃದಯಗಳ ಪ್ರೀತಿಯ ರೈಲು ಇದು 
          ಸಾಗುವಾ ಜೊತೆ ಸಾಗುವ ಪಯಣಿಗರು ನಾವಿಲ್ಲಿ 
ಗಂಡು : ಆರಂಭ ಕಣ್ಣಿಂದ ಮುಂದಿನದು ಹೆಣ್ಣಿನ ಕಣ್ಣಿಗೆ ಸೋಲೋ ಪ್ರೀತಿ ಗಂಡಿಂದ 
ಹೆಣ್ಣು : ಜೋಡಿ ಕನಸುಗಳ ಪ್ರಣಯದ ತವರು ಇದು 
           ಮಾಯದ ಅಡಿಪಾಯದ ಪ್ರೇಮಿಗಳು ನಾವಿಲ್ಲಿ 
ಗಂಡು : ನೂರಾರು ವೇಶ          ಹೆಣ್ಣು : ನೂರೆಂಟು ದೇಶ 
ಗಂಡು : ಪ್ರೀತಿಗೆ ಮಾತ್ರ ಪ್ರೀತಿಯ ಮಾತು ಇದ್ದರೆ ಸಾಕು ಒಂದೇ ಒಂದು ನಿಮಿಷ 
            ಯಾವಾಳಪ್ಪ ರಾಣಿ ರಾಣಿ ರಸಿಕರ ರಾಣಿ ಮಹಾರಾಣಿ 
            ನಾನೇ ಕಣೆ ನಿನ್ನ ವಯಸ್ಸಿಗೆ ಬಯಸಿದ ವರೆಸೆಗೆ ಅಭಿಮಾನಿ 

ಗಂಡು : ಶಾಂತಲೆಯು ನೀನೇ ಶಾಕುಂತಲೇ ರಂಭೆಯು ನೀನೇ 
           ಆಗುಂಬೆಯು ಆ ಬೊಂಬೆಯು ನೀನೇ 
ಹೆಣ್ಣು : ಕಣ್ತುಂಬಾ ಈ ಪ್ರೀತಿ ಕರುನಾಡ ಭೂಪಟದಲ್ಲಿ ಬಾವುಟವಾಗಿ ನೆಲೆಸಿರಲಿ 
ಗಂಡು : ಕಾವೇರಿಯು ನೀನೇ ಕಲ್ಪತರು ನೀನು ಹಾರದ ಕೋಲಾರದ ಆ ಚಿನ್ನದ ಗಣಿ ನೀನೇ 
ಹೆಣ್ಣು : ಬ್ರಹ್ಮ ಬರೆಯೋ                ಗಂಡು : ಪ್ರತಿ ಸಾಲಿನಲ್ಲೂ 
ಇಬ್ಬರು : ನನ್ನೆದೆಯಿಂದ ನಿನ್ನನು ಸೇರಿ ಉಸಿರಾಗೋ ಪ್ರೀತಿಯ ಮಾತು ಇದು 
             ಯಾವಾಳಪ್ಪ ರಾಣಿ ರಾಣಿ ರಸಿಕರ ರಾಣಿ ಮಹಾರಾಣಿ 
             ನಾನೇ ಕಣೆ ನಿನ್ನ ವಯಸ್ಸಿಗೆ ಬಯಸಿದ ವರೆಸೆಗೆ ಅಭಿಮಾನಿ 
             ಗುಂಡಿಗೆಯ ತುಂಬಾ ನಿನ ಬಿಂಬ ಪ್ರತಿಬಿಂಬ ನೋಡು ಆಸೆಗಳ ಕಂಬ ಏರೋಣ ಹಾಡು 
             ಬಾರೆ ಬಾ...  ಬಾರೆ ಬಾ...  ಇಬ್ಬರ ಎದೆಯಲಿ ಜೋಗದ ಜೋರು 
            ಕಾಮನ ಬಿಲ್ಲು ಕಣ್ ಹೊಡಿಯಾಕೆ ಬಂದಾಯ್ತು 
            ಕಾಮದ ಹಿಂದೆ ಪ್ರೀತಿ ಮುಂದೆ ಹೃದಯಗಳೆರಡೂ ಒಂದಾಯ್ತು...   
 -----------------------------------------------------------------------

ದಾಸ (೨೦೦೩) - ನನ್ನುಸಿರೇ 
ಸಂಗೀತ : ಸಾಧುಕೋಕಿಲ, ಸಾಹಿತ್ಯ : ಕೆ.ಕಲ್ಯಾಣ, ಗಾಯನ: ಚಿತ್ರಾ 

ಓ ಓ ಓ ಆ ಆ ಆ ಆ 
ನನ್ನುಸಿರೇ ನನ್ನುಸಿರೇ ಜೋ ಜೋ ಜೋ ಲಾಲಿ ಹೆತ್ತವಳಾ ಎದೆಯಲಿ ನೀನೇ ತಂಗಾಳಿ 
ಕರುಳಿನ ಕಂದಮ್ಮ ದೊರೆಯಾಗೋ ಅವರಿಗೂ ಕಾಯಬಲ್ಲೆ ನಾ ತೇಯಬಲ್ಲೆ ನಾ 
ನನ್ನುಸಿರೇ ನನ್ನುಸಿರೇ ಜೋ ಜೋ ಜೋ ಲಾಲಿ ಹೆತ್ತವಳಾ ಎದೆಯಲಿ ನೀನೇ ತಂಗಾಳಿ 

ಈ ಒಂಟಿ ದಾರಿಯಲಿ ನನ್ನಾ ನಿನ್ನಾ ಜೊತೆಯಲಿ ಯಾರೋ ಬಂಧುಗಳು 
ಯಾರು ಸ್ನೇಹಿತರೋ ಯಾರಿರಲೀ ಇಲ್ಲದಿರಲಿ ನಮ್ಮ ನಡುವಲಿ 
ನಿನ್ನ ನಾಳೆಯ ಕನಸೊಂದೇ ನನ್ನಾ ಕಣ್ಣಲಿ ಜಗಕೆ ಹೆಸರಾಗೂ ನಾಡಿಗೆ ಉಸಿರಾಗು 
ನಿನ್ನ ದಾರಿಯ ಆ ದೈವ ಕಾಯಲಿ 
ನನ್ನುಸಿರೇ ನನ್ನುಸಿರೇ ಜೋ ಜೋ ಜೋ ಲಾಲಿ ಹೆತ್ತವಳಾ ಎದೆಯಲಿ ನೀನೇ ತಂಗಾಳಿ 

ನೂರಾರು ಸೇವಕರು ನಿನ್ನ ಹಿಂದೆ ನಡೆಯಲಿ ಸಾವಿರ ಸೈನಿಕರು ರಕ್ಷಣೆಗೆ ಕಾಯಲಿ 
ನನ್ನ ಆಳು ನನ್ನ ರಾಜ ಕೀರ್ತಿಶಾಲಿ ಅವನೆಲ್ಲ ಕೀರ್ತಿಯಲು ನನ್ನದೇ ಲಾಲಿಯು 
ನನಗೆ ನೀ ಸಾಕು ನಿನಗೆ ನಾ ಸಾಕು ನ್ಯೂವೆ ಬಂದರು ಮುಂದೆ ಸಾವೇ ಬಂದರು 
ನನ್ನುಸಿರೇ ನನ್ನುಸಿರೇ ಜೋ ಜೋ ಜೋ ಲಾಲಿ ಹೆತ್ತವಳಾ ಎದೆಯಲಿ ನೀನೇ ತಂಗಾಳಿ 
ಕರುಳಿನ ಕಂದಮ್ಮ ದೊರೆಯಾಗೋ ಅವರಿಗೂ ಕಾಯಬಲ್ಲೆ ನಾ ತೇಯಬಲ್ಲೆ ನಾ 
ನನ್ನುಸಿರೇ ನನ್ನುಸಿರೇ ಜೋ ಜೋ ಜೋ ಲಾಲಿ ಹೆತ್ತವಳಾ ಎದೆಯಲಿ ನೀನೇ ತಂಗಾಳಿ 
------------------------------------------------------------------------------------

No comments:

Post a Comment