ಮೊನಾಲಿಸ ಚಲನಚಿತ್ರದ ಹಾಡುಗಳು
- ಮಸ್ತಿ ಮಾಡೋಣ ಬಾ
- ಮೊನೋಲಿಸಾ
- ಓ ಪ್ರಿಯತಮೆ
- ಚೋರಿ ಚೋರಿ
- ನನ್ನುಸಿರೂ ನೀನೇ
- ಮನಸೆಲ್ಲ ನೀನೇ
- ಕುಂತರು ನಿಂತ್ರು ನಿನ್ನ ಧ್ಯಾನ
ಮೊನಾಲಿಸ (೨೦೦೪) - ಮಸ್ತಿ ಮಾಡೋಣ ಬಾ
ಸಂಗೀತ : ವಲ್ಲೀಸ್ ಸಂದೀಪ, ಸಾಹಿತ್ಯ : ನಾಗೇಂದ್ರ ಪ್ರಸಾದ, ಗಾಯನ : ವಸುಂಧರದಾಸ, ಕಾರ್ತಿಕ
ಹೆಣ್ಣು : ಕಾರ್ ಕಾರ್ ಹುಡುಗ ಬಂದ ಮಸ್ತಿ ಮಸ್ತಿ ಮಾಡೋ ಅಂದ
ಕಾರ್ ಕಾರ್ ಹುಡುಗ ಬಂದ ಮಸ್ತಿ ಮಸ್ತಿ ಮಾಡೋ ಅಂದ
ಮಸ್ತಿ ಮಾಡೋಣ ಬಾ ಕುಸ್ತಿ ಆಡೋಣ ಬಾ
ಮಸ್ತಿ ಮಾಡೋಣ ಬಾ ಕುಸ್ತಿ ಆಡೋಣ ಬಾ
ಸಸ್ತಾ ಈ ಹೆಣ್ಣು ನೋಡು ಕೊಂಡು ಕೊಂಡಾಡು
ಗಂಡು : ಅಪ್ಪಿ ಮುದ್ದಾಡು ಬಾ ಪಪ್ಪೀ ನೀ ನೀಡು ಬಾ
ಹ್ಯಾಪಿ ನೀನಾಗು ಬಾ... ಬಾ ಮಲಗೋಣ
ಹೆಣ್ಣು : ಕಾರ್ ಕಾರ್ ಹುಡುಗ ಬಂದ ಮಸ್ತಿ ಮಸ್ತಿ ಮಾಡೋ ಅಂದ
ಸಿಕ್ಸ್ಸ್ ಹೊಡೆದ ಗಂಡಿಗೆ ತಾನೇ ಸಿಕ್ಸಿಟಿನು ಸಿಕ್ಕೋದು
ಲವ್ವಿನ ಫಿಕ್ಸಿಂಗ್ ಮಾಡು ಲಕ್ಕಿ ಸಿಗಬಹುದು
ಲವ್ವಿನ ಫಿಕ್ಸಿಂಗ್ ಮಾಡು ಲಕ್ಕಿ ಸಿಗಬಹುದು
ಗಂಡು : ಅಪ್ಪಿ ಮುದ್ದಾಡು ಬಾ ಪಪ್ಪೀ ನೀ ನೀಡು ಬಾ
ಹ್ಯಾಪಿ ನೀನಾಗು ಬಾ... ಬಾ ಮಲಗೋಣ
ಗಂಡು ನೋಡು ಜಾಮೂನು ಮೈಯ್ಯಿ ಬಿಡು ಐಶ್ವರ್ಯ ಚೋರಿ ನಾವಾಗಲಿಕ್ಕೆ ಸೈಯ್ಯ ಸೈ ಸೈಯ್ಯ
ಹೆಣ್ಣು : ಕೋಕು ಕುಡಿಯೋಣ ಲೈಕು ಮಾಡ್ತೀನಿ ಬಾ ಶಾಕು ಕೊಡ್ತೀನಿ ಬಾ.. ಬಾ ಬಾ ನೀ ಬಾ ಬಾ
ಕಾರ್ ಕಾರ್ ಹುಡುಗ ಬಂದ ಮಸ್ತಿ ಮಸ್ತಿ ಮಾಡೋ ಅಂದ
ಹೆಣ್ಣು : ಲುಕ್ಕಿನಲ್ಲಿ ಇವನು ನನ್ನ ಬಾಳಿನ ಮಾಡಲ್ಲು ಅಲ್ಟ್ರಾ ಮಾಡ್ರನ್ ಬೇರೆ ಕಣ್ಣಲ್ಲೇ ಸಿಗ್ನಲ್ಲೂ
ಗಂಡು : ನೋಡು ಜಾಮೂನು ಮೈಯ್ಯಿ ಬಿಡು ಐಶ್ವರ್ಯ ಚೋರಿ ನಾವಾಗಲಿಕ್ಕೆ ಸೈಯ್ಯ ಸೈ ಸೈಯ್ಯ
ಗಂಡು : ಗುಲ್ಲು ಗುಲ್ಲಾಯಿತು ದಿಲ್ಲೆ ನಿಂದಾಯಿತು ಒಳ್ಳೆ ಹಾಡಾಯಿತು ಸೋನಾ ಓ ಸೋನಾ
ಹೆಣ್ಣು : ಯಾಕೋ ಹಿಂಗಾಯ್ತು ನಿಂದೆ ಗುಂಗಾಯ್ತು ಬಾಡಿ ಹಿಟಾಯ್ತು ಜಾಣ ಓ ಜಾಣ
ಕಾರ್ ಕಾರ್ ಹುಡುಗ ಬಂದ ಮಸ್ತಿ ಮಸ್ತಿ ಮಾಡೋ ಅಂದ
ಕೊಟ್ರೆ ನಾನು ಸಿಕ್ಕರೆ ನಿಮಗೆ ಪಟಾಯ್ಸಿ ಬಿಡ್ತೀರಾ
ನನ್ನ ನೋಡಿ ಪ್ಲೇವಿನ್ ಅಂತಾ ಜಮಾಯ್ಸಿ ಬಿಡ್ತೀರಾ
ಗಂಡು : ಗುಲ್ಲು ಗುಲ್ಲಾಯಿತು ದಿಲ್ಲೆ ನಿಂದಾಯಿತು ಒಳ್ಳೆ ಹಾಡಾಯಿತು ಸೋನಾ ಓ ಸೋನಾ
----------------------------------------------------------------------------------------------------
ಮೊನಾಲಿಸ (೨೦೦೪) - ಮೊನೋಲಿಸಾ
ಸಂಗೀತ : ವಲ್ಲೀಸ್ ಸಂದೀಪ, ಸಾಹಿತ್ಯ : ನಾಗೇಂದ್ರ ಪ್ರಸಾದ, ಗಾಯನ : ಸೋನುನಿಗಂ, ಚಿತ್ರಾ, ವಸುಂಧರದಾಸ
ಗಂಡು : ಮೊನಾಲೀಸಾ... ಹಹ ಮೊನಾಲೀಸಾ... ಮೊನಾಲೀಸಾ... ಮೊನಾಲೀಸಾ...
ಮೊನಾಲೀಸಾ... ಮೊನಾಲೀಸಾ...
ಹೆಣ್ಣು : ಈ ಮನ ಏನಿದೂ ಎಂದಿಗೂ ನಿಲ್ಲದು
ಗಂಡು : ಪ್ರೀತಿಯ ಸಂಗ ಇದು ಎಂದಿಗೂ ಸೋಲದು
ಹೆಣ್ಣು : ಮೊದ ಮೊದಲನೇ ಮೋಹವಿದು ಮನ ಮನಗಳ ದಾಹವಿದು ಗುಂಗಿಳಿಸೋ ಗಾನ ನಿನ್ನದೂ
ಗಂಡು : ಸಾಟಿ ಇಲ್ಲದ ಸ್ಟೈಲು ನಿನ್ನದೂ ... ಮೊನಾಲೀಸಾ... ಮೊನಾಲೀಸಾ...
ಮೊನಾಲೀಸಾ... ಮೊನಾಲೀಸಾ... ಮೊನಾಲೀಸಾ...
ಗಂಡು : ನನ್ನ ಮನಸು ಯಾಕೋ ಈಗ ನನ ಮಾತೆ ಕೇಳುತ್ತಿಲ್ಲ
ಗೊತ್ತಿಲ್ಲ ಶುರುವಾಗಹೋಯ್ತು ಲವ್ ಅನ್ನೋ ಊಲಾಲಾ
ಹೆಣ್ಣು : ಹೃದಯಾನಾ ಸೇರೋ ಮೊದಲು ಎಸ್.ಎಮ್.ಎಸ್ ಮಾಡಲಿಲ್ಲ
ಎದೆ ಬಾಗಿಲು ತೆರೆಯೋ ಮೊದಲು ಈ-ಮೇಲ್ ಮಾಡಲಿಲ್ಲ
ಗಂಡು : ಮೊದಲ ಲುಕ್ಕಿನಲ್ಲೇ ಹೇ... ನಾನು ಲಕ್ಕಿಯಾದೇ
ಹೆಣ್ಣು : ಮೊದಲ ಟಚ್ಚಿನಲ್ಲೇ ನಾ ನಿನ್ನ ಮೆಚ್ಚಿ ಬಂದೆ
ಗಂಡು : ಸಾಟಿ ಇಲ್ಲದ ಸ್ಟೈಲು ನಿನ್ನದು ಮೊನಾಲೀಸಾ... ಮೊನಾಲೀಸಾ...
ಮೊನಾಲೀಸಾ... ಮೊನಾಲೀಸಾ... ಮೊನಾಲೀಸಾ...
ಗಂಡು : ಹಾರ್ಟ ಅನ್ನೋ ಚಾನಲನಲ್ಲಿ ಟಾಪ್ ಟೆನ್ ನೀನೇ ನೀನೇ
ನೀನ್ ನಕ್ರೆ ಉದುರೋ ಮುತ್ತು ಆಯೋನು ನಾನೇ
ಹೆಣ್ಣು : ಓ.. ಮನಸೆನ್ನೋ ಅಂಗಡಿಯೊಳಗೆ ಎಲ್ಲೆಲ್ಲೂ ನೀನೇ ನೀನೇ
ಮುತ್ತುಗಳ ಮುದ್ರೆ ಒತ್ತಿ ಬಚ್ಚಿಡುವೆ ನಿನ್ನಾ ನಾನು
ಗಂಡು : ಜಾದು ಏನೋ ಕಾಣೆ ನಾ ನಿಂಗೆ ಸೋತೆ ಜಾಣೆ
ಹೆಣ್ಣು : ನಾನು ನನ್ನದೆಲ್ಲ ಇನ್ನೂ ನಿಂಗೆ ಸ್ವಂತ ತಾನೇ
ಗಂಡು : ಸಾಟಿ ಇಲ್ಲದ ಸ್ಟೈಲು ನಿನ್ನದು ಮೊನಾಲೀಸಾ... ಮೊನಾಲೀಸಾ...
ಮೊನಾಲೀಸಾ... ಮೊನಾಲೀಸಾ... ಮೊನಾಲೀಸಾ...
ಹೆಣ್ಣು : ಈ ಮನ ಏನಿದೂ ಎಂದಿಗೂ ನಿಲ್ಲದು
ಗಂಡು : ಪ್ರೀತಿಯ ಸಂಗ ಇದು ಎಂದಿಗೂ ಸೋಲದು
ಹೆಣ್ಣು : ಮೊದ ಮೊದಲನೇ ಮೋಹವಿದು ಮನ ಮನಗಳ ದಾಹವಿದು ಗುಂಗಿಳಿಸೋ ಗಾನ ನಿನ್ನದೂ
ಗಂಡು : ಸಾಟಿ ಇಲ್ಲದ ಸ್ಟೈಲು ನಿನ್ನದೂ ... ಮೊನಾಲೀಸಾ... ಮೊನಾಲೀಸಾ...
ಮೊನಾಲೀಸಾ... ಮೊನಾಲೀಸಾ... ಮೊನಾಲೀಸಾ...
ಮೊನಾಲೀಸಾ... ಹಹ ಮೊನಾಲೀಸಾ... ಮೊನಾಲೀಸಾ... ಮೊನಾಲೀಸಾ...
ಮೊನಾಲೀಸಾ... ಮೊನಾಲೀಸಾ...
----------------------------------------------------------------------------------------------------
ಮೊನಾಲಿಸ (೨೦೦೪) - ಓ ಪ್ರಿಯತಮೆ
ಸಂಗೀತ : ವಲ್ಲೀಸ್ ಸಂದೀಪ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ
ಓ ಪ್ರಿಯತಮೆ ಇದು ನ್ಯಾಯಾನಾ ಈ ಹೃದಯಕೆ ಅನ್ಯಾಯಾನಾ
ಓ ಪ್ರಿಯತಮೆ ಇದು ನ್ಯಾಯಾನಾ ಈ ಹೃದಯಕೆ ಅನ್ಯಾಯಾನಾ
ನಿನ್ನಿಂದ ತಾನೇ ನಾ ನನ್ನ ತಿಳಿದುಕೊಂಡೆ ಯಾರಿಟ್ಟ ಶಾಪ ನಾ ನಿನ್ನ ಕಳೆದುಕೊಂಡೆ
ದಿನ ಸನಿಹವು ದಿನ ವಿರಹವು ನಿನ್ನಿಂದಲೇ...
ಓ ಪ್ರಿಯತಮೆ ಇದು ನ್ಯಾಯಾನಾ ಈ ಹೃದಯಕೆ ಅನ್ಯಾಯಾನಾ
ನಿನ್ನ ನೋಟ ಒಂದೇ ಸಾಕು ನಾನಲ್ಲಿ ಬೆಳದಿಂಗಳಾಗಿರುವೇ
ನಿನ್ನ ಮಾತು ಒಂದೇ ಸಾಕು ನೂರಾರು ಕೋಗಿಲೆಯ ಒಳಗಿರುವೆ
ನಿನ್ನ ನೋಟ ಒಂದೇ ಸಾಕು ನಾನಲ್ಲಿ ಬೆಳದಿಂಗಳಾಗಿರುವೇ
ನಿನ್ನ ಮಾತು ಒಂದೇ ಸಾಕು ನೂರಾರು ಕೋಗಿಲೆಯ ಒಳಗಿರುವೆ
ಕೇಳು ಪ್ರೀತಿ ಕೂಗು ಪ್ರೀತಿ ಆಣೆ ಆಗು ಕ್ಷಣ ಬಂದು ಹೋಗು ನಿನ್ನಾಣೆಗೂ
ದಿನ ಸನಿಹವು ದಿನ ವಿರಹವು ನಿನ್ನಿಂದಲೇ...
ಓ ಪ್ರಿಯತಮೆ ಇದು ನ್ಯಾಯಾನಾ ಈ ಹೃದಯಕೆ ಅನ್ಯಾಯಾನಾ
ಕಣ್ಮುಂದೆ ನೂರಾರು ಪ್ರಶ್ನೆಗಳು ನಿನ್ನಿಂದ ಉತ್ತರವೇ ಬರುತ್ತಿಲ್ಲ
ಇದು ಎರಡು ಮನಸಿನ ಆತ್ಮಕಥೆ ನಾನಿನ್ನೂ ಮುನ್ನಡಿಯೇ ಬರೆದಿಲ್ಲ
ಕಣ್ಮುಂದೆ ನೂರಾರು ಪ್ರಶ್ನೆಗಳು ನಿನ್ನಿಂದ ಉತ್ತರವೇ ಬರುತ್ತಿಲ್ಲ
ಇದು ಎರಡು ಮನಸಿನ ಆತ್ಮಕಥೆ ನಾನಿನ್ನೂ ಮುನ್ನಡಿಯೇ ಬರೆದಿಲ್ಲ
ಇಷ್ಟು ದಿನದ ಮೌನ ಅದು ಇಲ್ಲಿಯವರೆಗೂ ಸಾಕು ಅರ್ಥ ಉಂಟು ನನ್ನ ನೋವೆಲ್ಲಕ್ಕೂ
ದಿನ ಸನಿಹವು ದಿನ ವಿರಹವು ನಿನ್ನಿಂದಲೇ...
ಓ ಪ್ರಿಯತಮೆ ಇದು ನ್ಯಾಯಾನಾ ಈ ಹೃದಯಕೆ ಅನ್ಯಾಯಾನಾ
ನಿನ್ನಿಂದ ತಾನೇ ನಾ ನನ್ನ ತಿಳಿದುಕೊಂಡೆ ಯಾರಿಟ್ಟ ಶಾಪ ನಾ ನಿನ್ನ ಕಳೆದುಕೊಂಡೆ
ದಿನ ಸನಿಹವು ದಿನ ವಿರಹವು ನಿನ್ನಿಂದಲೇ...
ಓ ಪ್ರಿಯತಮೆ ಇದು ನ್ಯಾಯಾನಾ ಈ ಹೃದಯಕೆ ಅನ್ಯಾಯಾನಾ
----------------------------------------------------------------------------------------------------
ಮೊನಾಲಿಸ (೨೦೦೪) - ಚೋರಿ ಚೋರಿ
ಸಂಗೀತ : ವಲ್ಲೀಸ್ ಸಂದೀಪ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಶಂಕರಮಹಾದೇವನ್, ಕಲ್ಪನಾ
ಗಂಡು : ಚೋರಿ ಚೋರಿ ಓ ನನ್ನ ಚಿತ್ತ ಚೋರಿ ಹಾಡೋಣ ಬಾ ಆಕಾಶದಾಚೆ ಹಾರಿ
ಉಸಿರಲ್ಲಿ ಉಸಿರಾ ಇಟ್ಟು ಕಾಯೋ ವೈಯ್ಯಾರಿ
ಎದೆಯಲ್ಲಿ ಕಿವಿಯ ಕೊಟ್ಟು ಕದಿಯೋ ಬಂಗಾರಿ
ನೆನಪುಗಳ ಮಾತು ಮಧುರ ಅನ್ನೋ ಸಿಂಗಾರಿ
ಕನಸುಗಳ ಅಂಗಳ ಅರಳೋ ತಿಂಗಳ ಸುಕುಮಾರಿ
ನಗುವಿಗೆ ನೀ ಹೆಸರು ಹೊಂಬಿಸಿಲಾ ಹಸಿರು
ಹೆಣ್ಣು : ಚೋರಿ ಚೋರಿ ಬಾಳಿಗೆ ನೂರು ದಾರಿ ನೀ ಎಲ್ಲೇ ಇರು ನಾ ನಿನ್ನ ಎದೆಯ ನಾರಿ
ನಾ ನೋಡೋ ಲೋಕ ಎಲ್ಲ ನಿನ್ನ ಕಣ್ಣಲ್ಲೇ ನಾನಾಡೋ ಮಾತುಗಳೆಲ್ಲ ನಿನ್ನ ಮಾತಲ್ಲೇ
ನೋವಲ್ಲು ನಾ ನಗುತಿರುವೆ ನಿನ್ನ ನೆನಪಲ್ಲೇ ನಲಿವಲ್ಲು ಹಾಯಾಗಿರುವೆ ನಿನ್ನ ನೆರಳಲ್ಲೇ
ಕೋರಸ್ : ಓ... ಪ್ರೀತಿಗೆ ಒಂದೇ ಗುಣ ತೀರದು ನಿನ್ನ ಋಣ
ಗಂಡು : ಚೋರಿ ಚೋರಿ ಓ ನನ್ನ ಚಿತ್ತ ಚೋರಿ ಹಾಡೋಣ ಬಾ ಆಕಾಶದಾಚೆ ಹಾರಿ
ಗಂಡು : ಹೇ... ಜೀವಕ್ಕೆ ಜೀವ ನೀನೇ ಜೀವದ ಮೇಲಾಣೆ ಪ್ರೀತಿಗೆ ಅರ್ಥ ನೀನೇ ಭೂಮಿಯ ಮೇಲಾಣೆ
ಎದೆಯೆಲ್ಲ ತುಂಬಿಸು ಬಾರೆ ನಿನ್ನ ಒಲವನ್ನೇ ಜಗವೆಲ್ಲ ಕಾಣುವೆ ನಾನು ನಿನ್ನ ಚೆಲುವನ್ನೇ
ಓ ನನ್ನ ಮೊನಾಲಿಸಾ ಮುಟ್ಟಲು ಪಾದರಸ ಚೋರಿ ಚೋರಿ ಚೋರಿ ಚೋರಿ
ಹೆಣ್ಣು : ಚೋರಿ ಚೋರಿ ಈ ಮನಸು ಕೈ ಜಾರಿ ಪ್ರೀತಿಸಿದೆ ನಾ ನಿನ್ನ ಎದೆಯಾ ಸೇರಿ
ನೂರಾರು ಹೂವಿನಲ್ಲೂ ಪರಿಮಳ ಬೇರೇನೇ ಓಡಾಡೋ ಮೋಡಗಳಲ್ಲಿ ತುಂತುರು ಒಂದೇನೆ
ನೂರಾರು ಮನಸುಗಳಿರಲಿ ಕನಸು ಬೇರೇನೇ ಈ ಪ್ರೀತಿ ಹೃದಯಕ್ಕೆ ಮಾತ್ರ ಮನಸು ಒಂದೇನೆ
ಕೋರಸ್ : ಓ... ಎಲ್ಲಾದರೂ ನೀನಿರು ನನ್ನನ್ನ ಮರೆಯದಿರು
ಹೆಣ್ಣು : ಚೋರಿ ಚೋರಿ ಈ ಮನಸು ಕೈ ಜಾರಿ ಪ್ರೀತಿಸಿದೆ ನಾ ನಿನ್ನ ಎದೆಯಾ ಸೇರಿ
ಗಂಡು : ಚೋರಿ ಚೋರಿ ಓ ನನ್ನ ಚಿತ್ತ ಚೋರಿ ಹಾಡೋಣ ಬಾ ಆಕಾಶದಾಚೆ ಹಾರಿ
---------------------------------------------------------------------------------------------------
ಮೊನಾಲಿಸ (೨೦೦೪) - ನನ್ನುಸಿರೂ ನೀನೇ
ಸಂಗೀತ : ವಲ್ಲೀಸ್ ಸಂದೀಪ, ಸಾಹಿತ್ಯ : ದೊಡ್ಡ ರಂಗೇಗೌಡ, ಗಾಯನ : ಚಿತ್ರಾ
ನನ್ನ ಉಸಿರು ನೀನೇನೇ ಪ್ರೀತಿ ಹಸಿರು ನೀನೇನೇ
ಬಾಳ ಬೆಳಕು ನೀನೇನೇ ಈ ಜೀವ ಭಾವ ನೀನೇ
ಪ್ರೇಮದ ಸೆಲೆಯು ನೀನೇ ನನ್ನ ಬದುಕು ಬಂಗಾರ ನೀನೇ
ಒಲವಿನ ನೆಲೆಯು ನೀನೇ ನನ್ನ ಹಣೆಯ ಸಿಂಧೂರ ನೀನೇ
ನನ್ನ ಸೌಭಾಗ್ಯ ನೀನಾಗಿರು ಸ್ನೇಹ ಸುಧೆಯಾಗಿರು
ನೀನು ನನಗಾಗಿಯೇ ನಾನು ನಿನಗಾಗಿಯೇ
ಎಂದೆಂದಿಗೂ ನೀ ನನ್ನವನಾಗಿರು ನನ್ನಲ್ಲಿ ಎಂದು ಸೇರಿ ಬೆರೆತಿರು
ನನ್ನ ಉಸಿರು ನೀನೇನೇ ಪ್ರೀತಿ ಹಸಿರು ನೀನೇನೇ
ಬಾಳ ಬೆಳಕು ನೀನೇನೇ ಈ ಜೀವ ಭಾವ ನೀನೇ
ಪ್ರೀತಿಯ ನುಡಿಯು ನೀನೇ ನನ್ನ ಸುಖದ ಸಂಬಂಧ ನೀನೇ
ಹೃದಯದಾ ನಿಧಿಯು ನೀನೇ ನನ್ನ ಮಧುರ ಸಂಗೀತ ನೀನೇ
ನನ್ನ ಆನಂದ ನೀನಾಗಿರು ನಲ್ಲೆ ನಂಟಾಗಿರು
ರಾಗ ಅನುರಾಗದಾ ರೂಪ ಅನುರೂಪದ
ಎಂದೆಂದಿಗೂ ನೀ ನನ್ನವನಾಗಿರು ನನ್ನಲ್ಲಿ ಎಂದು ಸೇರಿ ಬೆರೆತಿರು
ನನ್ನ ಉಸಿರು ನೀನೇನೇ ಪ್ರೀತಿ ಹಸಿರು ನೀನೇನೇ
ಬಾಳ ಬೆಳಕು ನೀನೇನೇ ಈ ಜೀವ ಭಾವ ನೀನೇ
---------------------------------------------------------------------------------------------------
ಮೊನಾಲಿಸ (೨೦೦೪) - ಮನಸೆಲ್ಲ ನೀನೇ
ಸಂಗೀತ : ವಲ್ಲೀಸ್ ಸಂದೀಪ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ, ಶ್ರೇಯಾಘೋಷಾಲ
ಈ ಮನಸೆಲ್ಲ ನೀನೆ ಕನಸೆ ಈ ಕನಸೆಲ್ಲ ನೀನೆ ಮನಸೆ
ಈ ಮನಸೆಲ್ಲ ನೀನೆ ಕನಸೆ ಈ ಕನಸೆಲ್ಲ ನೀನೆ ಮನಸೆ
ಕಣ್ಣ ಮುಂದೆಯೂ ನೀನೆ ರೆಪ್ಪೆ ಹಿಂದೆಯೂ ನೀನೆ
ರಾತ್ರಿ ನೆನಪಲೂ ನೀನೆ ಹಗಲಗನಸಲೂ ನೀನೆನಿನ್ನ ಮನಸು ನೂರು ಕನಸು ನಿನ್ನವಳಿಗೆ ಇರಲಿ
ನೀ ನಕ್ಕರೆ ಸಾಕು ಜಾಣೆ ನನ್ನ ಮೇಲಾಣೆ ನಿನ್ನ ಎದೆಯ ಅರಮನೆಯಲ್ಲಿ ದೊರೆಯು ನಾನೇನೆ
ನನ್ನದೆಲ್ಲ ನಿನ್ನದೆ ತಾನೆ ಕೇಳು ನಿನ್ನಾಣೆ ನಿನ್ನುಸಿರ ತಂಗಾಳಿಯಲಿ ನುಡಿಸುವೆ ವೀಣೆ
ನನ್ನದೆಲ್ಲ ನಿನ್ನದೆ ತಾನೆ ಕೇಳು ನಿನ್ನಾಣೆ ನಿನ್ನುಸಿರ ತಂಗಾಳಿಯಲಿ ನುಡಿಸುವೆ ವೀಣೆ
ಆ.. ಅನುರಾಗದ ಹಂಸಗೀತೆಯೆ ಹಗಲಿರುಳು ಕಿವಿಯ ತುಂಬಲಿ
ಕನಸುಗಳ ತೇರು ಸಾಗಲಿ ಸ್ವರ್ಗಗಳ ದಾರಿ ಸವೆಯಲಿ ನಿನ್ನ ಆಸೆ ನಿನ್ನ ಸೆಳೆತ ನಿನ್ನವಳಿಗೆ ಇರಲಿ
ನೀ ಕಾಮನಬಿಲ್ಲಿನ ಹಾಗೆ ನನ್ನ ಒಳಗಿನ್ನು ಮನಸು ಒಂದಾಗಿರಲು ಒಲವು ಹಾಲ್ಜೇನು
ಈ ಹೃದಯಕೆ ಸಾವಿರ ಬಿಂಬ ನೋಡು ಬಾ ನೀನು ಪ್ರತಿ ಕ್ಷಣವೂ ನಿನ್ನ ಪ್ರತಿಬಿಂಬ ಕಾಣೆ ಇನ್ನೇನು
ನೆನಪುಗಳ ದೋಣಿ ಸಾಗಲಿ ತೀರದಿರೊ ಆಸೆ ತೀರಲಿ

ಕನಸುಗಳ ಕಡಲು ದಾಟಲಿ ಪ್ರೀತಿಸುವ ಹೃದಯ ಸೇರಲಿ
ನಿನ್ನ ನಾಳೆ ನಿನ್ನ ವೇಳೆ ನಿನ್ನವಳಿಗೆ ಇರಲಿ
----------------------------------------------------------------------------------------------------
ನಿನ್ನ ನಾಳೆ ನಿನ್ನ ವೇಳೆ ನಿನ್ನವಳಿಗೆ ಇರಲಿ
----------------------------------------------------------------------------------------------------
ಮೊನಾಲಿಸ (೨೦೦೪) - ಕುಂತರು ನಿಂತ್ರು ನಿನ್ನ ಧ್ಯಾನ
ಸಂಗೀತ : ವಲ್ಲೀಸ್ ಸಂದೀಪ, ಸಾಹಿತ್ಯ : ನಾಗೇಂದ್ರ ಪ್ರಸಾದ, ಗಾಯನ : ಕಾರ್ತಿಕ
ಕುಂತರು ನಿಂತರು ನಿನ್ನ ಧ್ಯಾನ ಜೀವಕ್ಕಿಲ್ಲ ಸಾಮಾಧಾನ... ಆಆಆ..
ಕಣ್ಣಿನ ತುಂಬಾ ಇವ್ಳ ಫೋಟೋ ಹೊಡದಂಗಾಯ್ತು ಲಾಟ್ರಿ ಲೊಟಾ... ಆಆಆ
ಕುಂತರು ನಿಂತರು ನಿನ್ನ ಧ್ಯಾನ ಜೀವಕ್ಕಿಲ್ಲ ಸಾಮಾಧಾನ
ಹಾರ್ಟು ಈಗ ಆದಲು ಬದಲು ಮಾಡುತಾಳೆ ಅರಳು ಮರಳು
ಎಲ್ಲೆಲ್ಲೂ ಈ ಬ್ಯೂಟೀ ಎದುರಾಗುವ ಸ್ವೀಟಿ
ಎಲ್ಲೆಲ್ಲೂ ಈ ನಾಟಿ ಮನಸೆಳೆಯುವಾ ಚೂಟಿ
ಕುಂತರು ನಿಂತರು ಜಂತರ ಮಂತರ ಮಾಯಾ ಈ ಪ್ರಾಯ
ಕುಂತರು ನಿಂತರು ನಿನ್ನ ಧ್ಯಾನ ಜೀವಕ್ಕಿಲ್ಲ ಸಾಮಾಧಾನ... ಆಆಆ..
ಕಣ್ಣಿನ ತುಂಬಾ ಇವ್ಳ ಫೋಟೋ ಹೊಡದಂಗಾಯ್ತು ಲಾಟ್ರಿ ಲೊಟಾ... ಆಆಆ
ಕುಂತರು ನಿಂತರು ನಿನ್ನ ಧ್ಯಾನ ಜೀವಕ್ಕಿಲ್ಲ ಸಾಮಾಧಾನ
---------------------------------------------------------------------------------------------------
No comments:
Post a Comment