1877. ತ್ರಿಶೂಲ (೧೯೮೫)

ತ್ರಿಶೂಲ ಚಲನಚಿತ್ರದ ಹಾಡುಗಳು 
  1. ಬುಗುರಿಯಂತೇ ತಿರೋಗೋಣ 
  2. ಕುಂತ್ರೇ  ನಿಂತ್ರೆ ನಿಂದೇ ಧ್ಯಾನ 
  3. ಆ ಬೆಟ್ಟದಲ್ಲಿ ಬೆಳದಿಂಗಳಲಿ 
ತ್ರಿಶೂಲ (೧೯೮೫) - ಬುಗುರಿಯಂತೆ ತಿರೋಗೋಣ 
ಸಂಗೀತ : ಕಲ್ಯಾಣ - ವೆಂಕಟೇಶ, ಸಾಹಿತ್ಯ : ಸಿದ್ದಲಿಂಗಯ್ಯ, ಗಾಯನ : ಮಂಜುಳಗುರುರಾಜ, ಎಸ್.ಪಿ.ಶೈಲಜಾ 

ಬುಗುರಿಯಂತೇ ತಿರುಗೋಣ.. ಗರಗರ...  ಹೇಯ್ ಕುದರೆಯಂತೇ ಓಡೋಣ ಸರಸರ 
ಬುಗುರಿಯಂತೇ ತಿರುಗೋಣ.. ಗರಗರ... (ತೂತುತೂ)  
ಹೇಯ್ ಕುದರೆಯಂತೇ ಓಡೋಣ ಸರಸರ (ತೂತುತೂ)
ಆಳು ಧಣಿ ಅಂಬುದೇಕೆ ನಮ್ಮಲ್ಲಿ ಡಿಂಗ್ ಡಾಂಗ್ ಆಡೋಣ 
ಡಿಂಗ್ ಡಾಂಗ್ ಆಡೋಣ ಕಣ್ಣಲ್ಲಿ 
ತುತ್ತೂರುತೂತು ಹ್ಹಾ  ತುತ್ತೂರುತೂತು ಹೇಯ್ ತುತ್ತೂರುತೂತು 
ತುತ್ತೂರಿತೂತು ತುತ್ತೂರಿತುತ್ತೂರಿತೂ ತುರಿ ತುತ್ತೂರಿತುತ್ತೂರಿತು   
ಬುಗುರಿಯಂತೇ ತಿರುಗೋಣ.. ಗರಗರ... 
ಹೇಯ್ ಕುದರೆಯಂತೇ ಓಡೋಣ ಸರಸರ 
ಆಳು ಧಣಿ ಅಂಬುದೇಕೆ ನಮ್ಮಲ್ಲಿ ಡಿಂಗ್ ಡಾಂಗ್ ಆಡೋಣ 
ಡಿಂಗ್ ಡಾಂಗ್ ಆಡೋಣ ಕಣ್ಣಲ್ಲಿ 
ತುತ್ತೂರುತೂತು ಹ್ಹಾ  ತುತ್ತೂರುತೂತು ಹೇಯ್ ತುತ್ತೂರುತೂತು 
ತುತ್ತೂರಿತೂತು ತುತ್ತೂರಿತುತ್ತೂರಿತೂ ತುರಿ ತುತ್ತೂರಿತುತ್ತೂರಿತು   

ನಾನು ನೀನೂ ಅವನು ಅವಳೂ ಸಕ್ಕತ್ತಾದ ಸ್ನೇಹಿತರೂ ಪ್ರಾಣವನ್ನೇ ಕೊಡುವವರೂ 
ಓ.. ನಾನು ನೀನೂ ಅವನು ಅವಳೂ ಸಕ್ಕತ್ತಾದ ಸ್ನೇಹಿತರೂ ಪ್ರಾಣವನ್ನೇ ಕೊಡುವವರೂ 
ನಮ್ಮ ಕಂಪನಿ ಕೆಡಿಸೋಕೆ ಬಂದ್ರೇ ... (ಬಂದ್ರೇ) ನಮ್ಮ ಬೆನ್ನಲ್ಲಿ ಇರಿಯೋಕೆ ಬಂದ್ರೇ... (ಹ್ಹಾ ) 
ಕಾಲನು ಮುರಿದು ಕೈಗೆ ಎತ್ತ ಕೊಟ್ಟು ಕುಂಟಾಬಿಲ್ಲೇ ಆಡಿಸ್ತಿವೀ... 
ತಲೆಯನು ಬೋಳಿಸಿ ನಾಮವ ಹಾಕಿ  
ತಲೆಯನು ಬೋಳಿಸಿ ನಾಮವ ಹಾಕಿ ಕತ್ತೆಯ ಮೇಲೆ ಕೂರಿಸ್ತೀವಿ 
ವೀ ಆರ್ ಬೆಸ್ಟ್ ಫ್ರೆಂಡ್ಸ್ ವೀ ಆರ್ ಬೆಸ್ಟ್ ಫ್ರೆಂಡ್ಸ್ ವಿ ಆರ್ ಫೆಂಟಾಸ್ಟಿಕ್ ಫ್ರೆಂಡ್ಸ್ 
ತುತ್ತೂರುತೂತು ಹೇ ತುತ್ತೂರುತೂತು ಹೇಯ್ ತುತ್ತೂರುತೂತು 
ತುತ್ತೂರಿತೂತು ತುತ್ತೂರಿತುತ್ತೂರಿತೂ ತುರಿ ತುತ್ತೂರಿತುತ್ತೂರಿತು   

ಲಲಲಲಾ ಲಲಲಲಾ ಲಲಲಲಾ ಲಲಲಲಾ 
ಜೊತೆಯಲಿ ಉಂಡು ಜೊತೆಯಲಿ ಆಡಿ 
ನಾವು ಜಾಲಿ ಮಾಡ್ತೀವಿ ಬೊಂಬಾಟ್ ಆಟ ಆಡ್ತೀವಿ 
ಜೊತೆಯಲಿ ಉಂಡು ಹ್ಹಾ.. ಜೊತೆಯಲಿ ಆಡಿ 
ನಾವು ಜಾಲಿ ಮಾಡ್ತೀವಿ ಬೊಂಬಾಟ್ ಆಟ ಆಡ್ತೀವಿ 
ಮೋಸ ಆಗೋ ಮಾಡೋಕೆ ಬಂದ್ರೇ (ಹಾಯ್...) 
ಬಾಲಾನಾ ಬಿಚ್ಚೋಕೆ ಬಂದ್ರೇ .. (ಹೋಯ್)  
ಜನರ ಮುಂದೇ ಅವನ ಮುಖಕೆ ಮಂಗಳಾರತಿ ಮಾಡ್ತೀವಿ.. 
ಬಟ್ಟೆಯ ಕಳಚಿ ಬೆತ್ತಲೆ ಮಾಡಿ ಏಳ್ ಕೆರೆ ನೀರ ಕುಡಿಸ್ತೀವಿ ಅಹ್ಹಹ್ಹಹ್ಹಾ ಅಹ್ಹಹ್ಹಹಾ 
ತುತ್ತೂರುತೂತು ಹೇ ತುತ್ತೂರುತೂತು ಹೇಯ್ ತುತ್ತೂರುತೂತು 
ತುತ್ತೂರಿತೂತು ತುತ್ತೂರಿತುತ್ತೂರಿತೂ ತುರಿ ತುತ್ತೂರಿತುತ್ತೂರಿತು   
ಬುಗುರಿಯಂತೇ ತಿರುಗೋಣ.. ಗರಗರ... (ತೂತುತೂ)  
ಹೇಯ್ ಕುದರೆಯಂತೇ ಓಡೋಣ ಸರಸರ (ತೂತುತೂ)
ಆಳು ಧಣಿ ಅಂಬುದೇಕೆ ನಮ್ಮಲ್ಲಿ ಡಿಂಗ್ ಡಾಂಗ್ ಆಡೋಣ 
ಡಿಂಗ್ ಡಾಂಗ್ ಆಡೋಣ ಕಣ್ಣಲ್ಲಿ 
ತುತ್ತೂರುತೂತು ಹ್ಹಾ  ತುತ್ತೂರುತೂತು ಹೇಯ್ ತುತ್ತೂರುತೂತು 
ತುತ್ತೂರಿತೂತು ತುತ್ತೂರಿತುತ್ತೂರಿತೂ ತುರಿ ತುತ್ತೂರಿತುತ್ತೂರಿತು   
ತುತ್ತೂರಿತೂತು ತುತ್ತೂರಿತುತ್ತೂರಿತೂ ತುರಿ ತುತ್ತೂರಿತುತ್ತೂರಿತು   
--------------------------------------------------------------------------------------------------------------

ತ್ರಿಶೂಲ (೧೯೮೫) - ಕುಂತ್ರೆ ನಿಂತ್ರೆ ನಿಂದೆ ಧ್ಯಾನ
ಸಂಗೀತ : ಕಲ್ಯಾಣ - ವೆಂಕಟೇಶ, ಸಾಹಿತ್ಯ : 
ಲಿತ ಕವಿ ಸಿದ್ದಲಿಂಗಯ್ಯ, ಗಾಯನ : ಮಂಜುಳಗುರುರಾಜ,

ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ ಜೀವಕ್ಕಿಲ್ಲ ಸಮಾಧಾನ
ಅವನಿಗೆ ಎಂತ...ಬಿಗುಮಾ...ನ  ಅವನೆ ನನ್ನ....ಗೆಣೆಕಾರ
ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ ಜೀವಕ್ಕಿಲ್ಲ ಸಮಾಧಾನ
ಅವನಿಗೆ ಎಂತ....ಬಿಗುಮಾ..ನ  ಅವನೆ ನನ್ನ...ಗೆಣೆಕಾ...ರ

ರೇ.... ರೇರೇರೆರೇ.... ರೇರೇರೆರಾ.... ರೆರೆರೆರೆರೇ ರೇರೇರೆರಾ 
ರೇ.... ರೇರೇರೆರೇ.... ರೇರೇರೆರಾ.... ರೆರೆರೆರೆರೇ ರೇರೇರೆರಾ 
ಇಂದ್ರ ಲೋಕ್ದಗಿಲ್ಲ ಕಣ್ರಿ ಚಂದ್ರಲೋಕ್ದಗಿಲ್ಲ ಕಣ್ರಿ
ಅಹ್ ಇಂದ್ರ ಲೋಕ್ದಗಿಲ್ಲ ಕಣ್ರಿ ಚಂದ್ರಲೋಕ್ದಗಿಲ್ಲ ಕಣ್ರಿ
ಮೂರು ಲೋಕ್ದಗಿಲ್ಲ ಕಣ್ರಿ ಹಾಂ ಹಾಂ
ಈ ಮೂರು ಲೋಕ್ದಗಿಲ್ಲ ಕಣ್ರಿ ಅವನೆ ನನ್ನ....ಗೆಣೆಕಾ...ರ
ಅವನೆ ನನ್ನ....ಗೆಣೆಕಾ...ರ 

ರೂಪ್ದಲವನು ಚಂದ್ರ ಕಣ್ರಿ ರೂಪ್ದಲವನು ಇಂದ್ರ ಕಣ್ರಿ
ಕೇರಿಗೆಲ್ಲ ಒಬ್ನೆ ಕಣ್ರೆ ಅವನೆ ನನ್ನ....ಗೆಣೆಕಾರ ಅವನೆ ನನ್ನ....ಗೆಣೆಕಾರ

ಜಾತ್ರೆಲ್ ಅವನ ಕಂಡೆ ಕಣ್ರಿ ಛತ್ರಿ ಮುಚ್ಚಿ ನಿಂತ ಕಣ್ರಿ...
ಜಾತ್ರೆಲ್ ಅವನ ಕಂಡೆ ಕಣ್ರಿ ಛತ್ರಿ ಮುಚ್ಚಿ ನಿಂತ ಕಣ್ರಿ....
ಪಕ್ಕಕೆ ಬಂದು ನಿಂತ ಕಣ್ರಿ.... ನನ್ನ ಪಕ್ಕಕೆ ಬಂದು ನಿಂತ ಕಣ್ರಿ
ಅವನೆ ನನ್ನ....ಗೆಣೆಕಾರ ಅವನೆ ನನ್ನ....ಗೆಣೆಕಾರ

ಮಲ್ಲೆ ಹೂವ ತಂದ ಕಣ್ರಿ ತುರುಬಿನಲ್ಲಿ ಇಟ್ಟ ಕಣ್ರಿ
ಮೈಯೆಲ್ಲ ಜುಂ ಜುಂ ಅಂತ್ರಿ ಅವನೆ ನನ್ನ....ಗೆಣೆಕಾರ
ಅವನೆ ನನ್ನ....ಗೆಣೆಕಾರ
ಚಾವಡಿಗ್ ಬಂದು ನಿಂತ ಕಣ್ರಿ ತಾಳಿ ಚಿನ್ನ ತಂದ ಕಣ್ರಿ
ಮೂರು ಲೊಕ್ದಲ್ಲ್ ಇಲ್ಲಾ ಕಣ್ರಿ ನಂಗು ಅವನ್ಗು ಮದುವೆ ಕಣ್ರಿ
ಅವನೆ ನನ್ನ...ಯಜಮಾನ ಅವನೆ ನನ್ನ...ಯಜಮಾನ
ಕುಂತ್ರೆ ನಿಂತ್ರೆ ಅವನ್ದೆ ಧ್ಯಾನ ಜೀವಕ್ಕಿಲ್ಲ ಸಮಾಧಾನ
ಅವನಿಗೆ ಎಂತ...ಬಿಗುಮಾ...ನ ಅವನೆ ನನ್ನ...ಯಜಮಾನ
ಅವನೆ ನನ್ನ....ಗೆಣೆಕಾರ ಹ್ಹಾ ಅವನೆ ನನ್ನ....ಗೆಣೆಕಾರ
---------------------------------------------------------------------------------------------------------------

ತ್ರಿಶೂಲ (೧೯೮೫) - ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ
ಸಂಗೀತ : ಕಲ್ಯಾಣ - ವೆಂಕಟೇಶ, ಸಾಹಿತ್ಯ : ಸಿದ್ದಲಿಂಗಯ್ಯ, ಗಾಯನ : ಸಿ.ಅಶ್ವಥ, ಶಿವಮೊಗ್ಗ ಸುಬ್ಬಣ್ಣ

ಆಆಆಅ... ಲಲಲಲಲಾ... ಹೂಂ ಹೂಂ ಹೂಂ ಹೂಂ ಹೂಂ ಹೂಂ 
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ... 
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ... 
ಚೆಲುವಾದ ನಿನ್ನ ಮೈಯ್ಯ ಮಲ್ಲಿಗೆಯ ದಳಗಳನು ಸುಟ್ಟಾವು ಬೆಳ್ಳಿ ಕಿರಣ... 
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ... 
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ... 

ನಿನ್ನೆದೆಯ ತೋಟದೊಳಗೆ ನೆಟ್ಟಂತ ಪ್ರೀತಿ ಬಳ್ಳಿ... 
ಹೂವನ್ನೂ ಬಿಡುವುದಲ್ಲ ಫಲವನ್ನು ಕೊಡುವುದಲ್ಲ 
ಕಂಡಂತಹ ಕಹಿ ನೆನಪಲ್ಲವು ಕಡಲಲ್ಲಿಯೇ ತೆರೆ ಮರೆಯಾಗಲೀ 
ತೆಂಗು ತಾಳೇ ಮೀರಿ ಮನಸು ಮುಗಿಲೇರಲಿ 
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ... 

ಆಆಆಆ..ಆಆಆಆಅ....ಆಆಆ 
ಮಾತಿರದ ಮೂಕ  ಮಾತಾ ಆಡುವರು ಹೃದಯದಲ್ಲಿ 
ದೂರದಲಿ ಇರುವ ಭಾವ ಬಲ್ಲವರು ಯಾರೇ ಗೆಳತೀ 
ಸುಖ ದುಃಖದ ಈ ಜಗದಾಟದಿ ನುಡಿಯಿದ್ದರೂ ಇಲ್ಲಿ ಹಲ ಮುಕರೂ 
ಕಾಲ ಕಾಡಿ ನಿನ್ನ ಮೌನ ಮಾತಾಗಲೀ 
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ... 
ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ... 
ಲಲಲಲಲಾ...ಲಲಲಲಲಾ...ಲಲಲಲಲಾ...
ಲಲಲಲಲಾ...ಲಲಲಲಲಾ...ಲಲಲಲಲಾ...
--------------------------------------------------------------------------------------------------------------

No comments:

Post a Comment