1880. ಹೃದಯ ಬಂಧನ (೧೯೯೩)


ಹೃದಯ ಬಂಧನ ಚಲನಚಿತ್ರದ ಹಾಡುಗಳು 
  1. ಪಿಂಕಿ ಬಲೇ ಪಿಂಕಿ 
  2. ಕುಡಿದರೇ ಮಾಲಾಶ್ರೀ 
  3. ಕಾವೇರಿ ಮೇಲಾಣೆ 
  4. ನೆನಪಿಡು ದಿನವನು 
  5. ಏನಿದು ಏನಿದು 
ಹೃದಯ ಬಂಧನ (೧೯೯೩) - ಪಿಂಕಿ ಬಲೇ ಪಿಂಕಿ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ 

ಪಿಂಕಿ ಪಿಂಕಿ ಈ ಪಿಂಕಿ ಭಲೇ ತುಂಟಿ 
ತುಂಟಿ ತುಂಟಿ ಈ ತುಂಟಿ ಜಗಳಗಂಟಿ 
ಚೂಟಿ ಮಗು ಓದುವಾಗ ಘಾಟಿ ಮಗು ಆಡುವಾಗ 
ಒಳ್ಳೆ ಮಗು ಹಾಡು ಕೇಳುವಾಗ 
ಪಿಂಕಿ ಪಿಂಕಿ ಈ ಪಿಂಕಿ ಭಲೇ ತುಂಟಿ 
ತುಂಟಿ ತುಂಟಿ ಈ ತುಂಟಿ ಜಗಳಗಂಟಿ 

ಪಾಪ ಪಾಪ ನಿನ್ನ ಕೋಪ ಸೊಗಸಂತೇ 
ಡ್ಯಾಡಿ ಎನಲು ಮಂಗಮಾಯ ನನ್ನ ಚಿಂತೇ 
ಉರಿದು ಸಿಡಿದೇ ಅನ್ಯಾಯ ಕಹಿ ಎದುರೂ 
ಕರಗಿ...ಹ್ಹೀಹ್ಹೀ  ನಗುವೇ ನಿನ್ನ ಕೋಮಲ ಮುಖದೆದುರು 
ಚೂಟಿ ಮಗು (ಓದುವಾಗ) ಘಾಟಿ ಮಗು (ಆಡುವಾಗ) 
ಒಳ್ಳೆ ಮಗು (ಹಾಡು ಕೇಳುವಾಗ) 
ಹೇ.. ಪಿಂಕಿ ಪಿಂಕಿ ಈ ಪಿಂಕಿ ಭಲೇ ತುಂಟಿ... ಅಹ್ಹಹ್ 
(ಡ್ಯಾಡೀ .. ಡ್ಯಾಡೀ ಈ ಜೋಡಿ ಭಲೇ ಜೋಡಿ) 

ಇಂದೋ ನಾಳೇ ನಿನ್ನ ಅಮ್ಮನು ಬರುತಾಳೇ 
ಅಲ್ಲಿ ವರೆಗೂ ದಿನ ಕಾಗದ ಬರೀತಾಳೆ 
ಮಗುವೇ.. ಮಗುವೇ.. ನಿನ್ನ ಮಾತಿಗೇ ಎದುರಿಲ್ಲ.. 
ಜಗವೇ ಜಗವೇ .. ಅಹ್ಹಹ್ ನಿನ್ನ ನಗುವಿಗೆ ಸಮವಿಲ್ಲ 
ಚೂಟಿ ಮಗು (ಓದುವಾಗ) ಹ್ಹಾ.. ಘಾಟಿ ಮಗು (ಆಡುವಾಗ) 
ಒಳ್ಳೆ ಮಗು (ಹಾಡು ಕೇಳುವಾಗ) 
ಹೇ.. ಪಿಂಕಿ ಪಿಂಕಿ ಈ ಪಿಂಕಿ ಭಲೇ ತುಂಟಿ... 
(ಡ್ಯಾಡೀ .. ಡ್ಯಾಡೀ ) 
ಇಬ್ಬರು : ಈ ಜೋಡಿ ಭಲೇ ಜೋಡಿ 
----------------------------------------------------------------------------
 
ಹೃದಯ ಬಂಧನ (೧೯೯೩) ಕುಡಿದರೇ ಮಾಲಾಶ್ರೀ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಬೇಬಿ ರೇಖಾ ಅಂಜನಾ 

ಕುಡಿದರೇ ಮಾಲಾಶ್ರೀ ಕುಣಿದರೇ ವಾಣಿಶ್ರೀ 
ಕುಡಿಯುವ ಚಾಳಿ ಅಪ್ಪನಿಂದ..  ಅಪ್ಪನಿಂದ.. 
ನಮ್ಮಪ್ಪನಿಂದ... ನಮ್ಮಪ್ಪನಿಂದ 
ಕುಡಿದರೇ ಮಾಲಾಶ್ರೀ ಕುಣಿದರೇ ವಾಣಿಶ್ರೀ 
ಕುಣಿಯುವ ಚಾಳಿ ಅಕ್ಕನಿಂದ..  ಅಕ್ಕನಿಂದ.. 
ಮಾಲಕ್ಕನಿಂದ... ಮಾಲಕ್ಕನಿಂದ... 

ಬಾಟಲಿಗೆ ಬಾಯಿಟ್ಟಿ ಬೀದಿಯಲ್ಲಿ ಗಿರಗೇಟ್ಟೇ 
ತಿರುಗುತೈತೆ ಬರಿ ಹೊಟ್ಟೇ ಅಯ್ಯೋ ಅಪ್ಪ ನಾನು ಕೆಟ್ಟೇ 
ಈ ಕಷ್ಟ ಇಷ್ಟಪಟ್ಟು ಜನ ಯಾಕೇ ಕುಡೀತಾರೋ 
ಈ ಚಟ ಹಿಡಿದು ಹೆಂಡ್ತಿ ಮಕ್ಕಳನ್ ಯಾಕೇ ಕೊಲ್ಲತ್ತಾರೋ 
ಕುಡಿದರೇ ಮಾಲಾಶ್ರೀ ಕುಣಿದರೇ ವಾಣಿಶ್ರೀ 
ಕುಡಿಯುವ ಚಾಳಿ ಅಪ್ಪನಿಂದ..  ಅಪ್ಪನಿಂದ.. 
ನಮ್ಮಪ್ಪನಿಂದ... ನಮ್ಮಪ್ಪನಿಂದ 
ಕುಡಿದರೇ ಮಾಲಾಶ್ರೀ ಕುಣಿದರೇ ವಾಣಿಶ್ರೀ 
ಕುಣಿಯುವ ಚಾಳಿ ಅಕ್ಕನಿಂದ..  ಅಕ್ಕನಿಂದ.. 
ಮಾಲಕ್ಕನಿಂದ... ಮಾಲಕ್ಕನಿಂದ... 

ಖಾಕಿ ಬಟ್ಟೆ ಹಾಕುತಾನೇ ಕುಡುಕರನ್ ಹಿಡಿಯುತಾನೇ 
ಖಾಕಿ ಬಟ್ಟೆ ಬಿಚ್ಚಿ ಅಪ್ಪಾ.. ಕಂಠ ಪೂರ್ತಿ ಕುಡಿಯುತಾನೇ 
ಆ ಡ್ಯೂಟಿಲೊಂದು  ಪಾರ್ಟಿಲೊಂದು ನೀತಿ ಸರೀ ನಾ 
ಅಪ್ಪ ಹೇಳಿದೆಲ್ಲಾ ಸರಿ ಅನ್ನೋಕೆ ನಾನೇ ಕುರಿ ನಾ..  
ಕುಡಿದರೇ ಮಾಲಾಶ್ರೀ ಕುಣಿದರೇ ವಾಣಿಶ್ರೀ 
ಕುಡಿಯುವ ಚಾಳಿ ಅಪ್ಪನಿಂದ..  ಅಪ್ಪನಿಂದ.. 
ನಮ್ಮಪ್ಪನಿಂದ... ನಮ್ಮಪ್ಪನಿಂದ 
ಕುಡಿದರೇ ಮಾಲಾಶ್ರೀ ಕುಣಿದರೇ ವಾಣಿಶ್ರೀ 
ಕುಣಿಯುವ ಚಾಳಿ ಅಕ್ಕನಿಂದ..  ಅಕ್ಕನಿಂದ.. 
ಮಾಲಕ್ಕನಿಂದ... ಮಾಲಕ್ಕನಿಂದ... ಆ 
----------------------------------------------------------------------------
 
ಹೃದಯ ಬಂಧನ (೧೯೯೩) ಕಾವೇರಿ ಮೇಲಾಣೆ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ರಾಜೇಶ, ಎಸ್.ಜಾನಕೀ 

ಗಂಡು : ಓಓಓ ಓ ಓ ಓ ಓ...ಓ ಓ ಓ ಓ  
ಹೆಣ್ಣು : ಲಾ..ಲಾ... ಆ ಆ ಆ ಆ ಆಆಆ  
ಗಂಡು : ಓಓಓ ಓ ಓ ಓ ಓ...ಓ ಓ ಓ ಓ  
ಹೆಣ್ಣು : ಲಾ..ಲಾ... ಆ ಆ ಆ ಆ ಆಆಆ  
ಗಂಡು : ಕಾವೇರಿ ಮೇಲಾಣೆ (ಕಾವೇರಿ ಮೇಲಾಣೆ) 
              ಇನ್ನೂ ನಾನು ಮರೆಯೋಲ್ಲ (ಇನ್ನೂ ನಾನು ಮರೆಯೋಲ್ಲ)
              ನಿನ್ನನೂ ನಾನು ಮರೆಯೋಲ್ಲ  (ನಿನ್ನನೂ ನಾನು ಮರೆಯೋಲ್ಲ)
              ಕಾವೇರಿ ಮೇಲಾಣೆ (ಕಾವೇರಿ ಮೇಲಾಣೆ) 
              ಕಾಪಾಡು ಈ ಆಣೆ (ಕಾಪಾಡು ಈ ಆಣೆ) 
              ನಿನ್ನನೂ ನಾನು ಮರೆಯೋಲ್ಲ  (ನಿನ್ನನೂ ನಾನು ಮರೆಯೋಲ್ಲ)
              ನಿನ್ನನೂ ನಾನು ಮರೆಯೋಲ್ಲ  (ನಿನ್ನನೂ ನಾನು ಮರೆಯೋಲ್ಲ)

ಗಂಡು : ಈ ರಾಜರಾಣಿಯರ ಸ್ನೇಹ ರಮ್ಯರಮಣೀಯ ಆಆಆ.... 
ಹೆಣ್ಣು : ಆ ಜೋಗ ಜೋಗುಳದ ರಾಜ ಈಗ ಪ್ರೇಮಮಯ.ಓಓಓಓಓ 
ಗಂಡು : ಕೂಗೋ ಈ ಸಂತಸಕೆ ಕಣ್ಣಾಣೆ ... 
ಹೆಣ್ಣು : ಹರಿಯೋ ಈ ಕಲರವಕೆ ಹೆಣ್ಣಾನೇ ... 
ಗಂಡು : ಓಓಓ ಓ ಓ ಓ ಓ...ಓ ಓ ಓ ಓ  
ಹೆಣ್ಣು : ಆ ಆ ಆ ಆ ಆಆಆ  
ಗಂಡು : ಕಾವೇರಿ ಮೇಲಾಣೆ (ಕಾವೇರಿ ಮೇಲಾಣೆ) 
              ಕಾಪಾಡು ಈ ಆಣೆ (ಕಾಪಾಡು ಈ ಆಣೆ) 
              ನಿನ್ನನೂ ನಾನು ಮರೆಯೋಲ್ಲ  (ನಿನ್ನನೂ ನಾನು ಮರೆಯೋಲ್ಲ)
              ನಿನ್ನನೂ ನಾನು ಮರೆಯೋಲ್ಲ  (ನಿನ್ನನೂ ನಾನು ಮರೆಯೋಲ್ಲ)

ಗಂಡು : ಕಾವೇರಿ ಕಡಲಲ್ಲಿ ಸೇರೋ ತವಕ ನೀ ನೋಡು.. ಆಆಆ 
ಹೆಣ್ಣು: ರೆಕ್ಕೆ ಇರದೇ ಈ ಮೋಡ ತೇಲೋ ಆಟ ನೀ ನೋಡು... ಆಆಆ 
ಗಂಡು : ತೇಜೋ ಈ ಸಂಭ್ರಮಕೆ ಮಣ್ಣಾನೇ 
ಹೆಣ್ಣು : ಬೀರಿಯೋ ಈ ಆತುರಕೆ ನಿನ್ನಾಣೆ... 
ಗಂಡು : ಓಓಓ ಓ ಓ ಓ ಓ...ಓ ಓ ಓ ಓ  
ಹೆಣ್ಣು : ಓಓಓ ಆ ಆ ಆ ಆ ಲಾಲಾಲಾ 
ಗಂಡು : ಕಾವೇರಿ ಮೇಲಾಣೆ (ಕಾವೇರಿ ಮೇಲಾಣೆ) 
              ಕಾಪಾಡು ಈ ಆಣೆ (ಕಾಪಾಡು ಈ ಆಣೆ) 
              ನಿನ್ನನೂ ನಾನು ಮರೆಯೋಲ್ಲ  (ನಿನ್ನನೂ ನಾನು ಮರೆಯೋಲ್ಲ)
              ನಿನ್ನನೂ ನಾನು ಮರೆಯೋಲ್ಲ  (ನಿನ್ನನೂ ನಾನು ಮರೆಯೋಲ್ಲ)
---------------------------------------------------------------------------
 
ಹೃದಯ ಬಂಧನ (೧೯೯೩) ನೆನಪಿಡು ದಿನವನು 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ  


ಗಂಡು : ನೆನಪಿಡು ಈ ದಿನವನೂ ... ಓಓಓ ಬರೆದಿಡು ಈ ನುಡಿಯನು 
ಹೆಣ್ಣು : ತೆರೆದಿಡು ಈ ಮನಸನೂ .. ಓಓಓ ಹಿಡಿದಿಡು ಈ ನಗುವನು 
ಗಂಡು : ಆನಂದ ತಂದ ಈ ಕಂದ 
ಹೆಣ್ಣು : ಈ ಕಂದ ತಂದ ಸಂಬಂಧ 
ಗಂಡು : ಬಂಧ ಅನುಬಂಧ... 
ಹೆಣ್ಣು : ನೆನಪಿಡು ಈ ದಿನವನೂ ... ಓಓಓ ಬರೆದಿಡು ಈ ನುಡಿಯನು 
ಗಂಡು : ತೆರೆದಿಡು ಈ ಮನಸನೂ .. ಓಓಓ ಹಿಡಿದಿಡು ಈ ನಗುವನು 
ಹೆಣ್ಣು : ಆನಂದ ತಂದ ಈ ಕಂದ 
ಗಂಡು : ಈ ಕಂದ ತಂದ ಸಂಬಂಧ 
ಹೆಣ್ಣು : ಬಂಧ ಅನುಬಂಧ... 
ಗಂಡು : ನೆನಪಿಡು ಈ ದಿನವನೂ ... ಓಓಓ 
ಹೆಣ್ಣು : ಬರೆದಿಡು ಈ ನುಡಿಯನು 
                   
ಗಂಡು : ನೈದಿಲೆ ಚಂದ್ರನ ನಡುವೆ ಬೀಸಿತು ತಂಗಾಳಿ 
               ಸಂತಸದ ಜೊತೆಗೇ .. ಸಂಭ್ರಮದ ಬೆಸುಗೆ 
ಹೆಣ್ಣು : ತಾವರೆ ಸೂರ್ಯನ ನಡುವೆ ಮಂಜಿನ ಪನ್ನಿರೂ 
               ಸುರಿದವು ಮುತ್ತುಗಳ...  ಬೀರಿದವು ಕಮಲಗಳ 
ಗಂಡು : ನಿನ್ನೆಗೂ ಇಂದಿಗೂ ನಾಳೆಗೂ ಪ್ರೀತಿಯ ನೆರಳಾಗಿ..  
ಹೆಣ್ಣು : ಬಾಳಲಿ ಸೇರಿತು ನಲಿಯಿತು ಚೈತ್ರದ ಹಾಡಾಗಿ... 
ಗಂಡು : ನೆನಪಿಡು ಈ ದಿನವನೂ ... ಓಓಓ 
ಹೆಣ್ಣು : ಬರೆದಿಡು ಈ ನುಡಿಯನು 
                
ಗಂಡು : ಜೇನಿನ ಹೊಳೆಯಲಿ ಸಾಗಲು ಹೂವಿನ ದೋಣಿಯಿದೆ 
              ತೇಲಿದರೂ ಸಿಹಿಯೇ.. ಮುಳುಗಿದರೂ ಸಿಹಿಯೇ  
ಹೆಣ್ಣು : ಹೃದಯದ ದೀಪದ ಬೆಳಕಲೀ ಚೆಂದದ ಸಂಸಾರ... 
               ಇರುಳಿನ ಭಯವಿಲ್ಲಾ .. ಮೌನದ ಮುನಿಸಿಲ್ಲ... 
ಗಂಡು : ನಿನ್ನೆಗೂ ಇಂದಿಗೂ ನಾಳೆಗೂ ಪ್ರೀತಿಯ ನೆರಳಾಗಿ..  
ಹೆಣ್ಣು : ಬಾಳಲಿ ಸೇರಿತು ನಲಿಯಿತು ಚೈತ್ರದ ಹಾಡಾಗಿ... 
ಗಂಡು : ನೆನಪಿಡು ಈ ದಿನವನೂ ... ಓಓಓ ಬರೆದಿಡು ಈ ನುಡಿಯನು 
ಹೆಣ್ಣು : ತೆರೆದಿಡು ಈ ಮನಸನೂ .. ಓಓಓ ಹಿಡಿದಿಡು ಈ ನಗುವನು 
ಗಂಡು : ಆನಂದ ತಂದ ಈ ಕಂದ 
ಹೆಣ್ಣು : ಈ ಕಂದ ತಂದ ಸಂಬಂಧ 
ಗಂಡು : ಬಂಧ ಅನುಬಂಧ... 
ಮಗು  : ನೆನಪಿಡು ಈ ದಿನವನೂ ... ಓಓಓ ಬರೆದಿಡು ಈ ನುಡಿಯನು 
----------------------------------------------------------------------------
 
ಹೃದಯ ಬಂಧನ (೧೯೯೩) ಏನಿದು ಏನಿದು 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ 

ಏನಿದು ಏನಿದು ಯಂತ್ರ ಜೀವನ
ನೋವಿನ ನೂಲದಿ ಹೃದಯ ಬಂಧನ 
ಪ್ರೇಮದ ಕಥೆಗೆ ಆಸೆಯ ಲತೆಗೆ ಚಿಂತೆಯ ಬೆಸುಗೆ.. ಚಿಂತೆಯ ಬೆಸುಗೆ  
ಏನಿದು ಏನಿದು ಯಂತ್ರ ಜೀವನ
ನೋವಿನ ನೂಲದಿ ಹೃದಯ ಬಂಧನ 

ನಂಬಿಕೆ ಹೋದರೆ ಜೀವನ ಸಾಗದು 
ಹಂಬಲ ಕುಸಿದರೆ ಪ್ರೇಮವು ಬಾಡದು 
ಸ್ವಾಗತದಲ್ಲಿ ಆದರವಿಲ್ಲ ಆನಂದದಲ್ಲಿ ಆತುರವಿಲ್ಲ 
ಮರಳ ಮನೆಯೊಳಗೇ.... ಇರುಳು ಭಯದೊಳಗೆ 
ಪ್ರೇಮದ ಕಥೆಗೆ ಆಸೆಯ ಲತೆಗೆ ಚಿಂತೆಯ ಬೆಸುಗೆ.. ಚಿಂತೆಯ ಬೆಸುಗೆ  
ಏನಿದು ಏನಿದು ಯಂತ್ರ ಜೀವನ
ನೋವಿನ ನೂಲಲಿ ಹೃದಯ ಬಂಧನ 

ಹಾರದ ಮೈಯ್ಯಲ್ಲಿ ದಾರದ ಎಳೆಯಿದೆ 
ಬೆಳ್ಳನೇ ಹಾಲಲಿ ಏನಿದೆ ತಿಳಿವುದೇ 
ಹೆಣ್ಣಿಗೇ ಗಂಡು ಸೋಲುದೇಕೆ 
ಸೋಲಿನ ಮೇಲೂ ಮೋಸವಿದೇಕೆ   
ಬರಡು ಬಾಳಿನಲಿ..  ಎರಡು ದಾರಿಯಲೀ... 
ಪ್ರೇಮದ ಕಥೆಗೆ ಆಸೆಯ ಲತೆಗೆ ಚಿಂತೆಯ ಬೆಸುಗೆ.. ಚಿಂತೆಯ ಬೆಸುಗೆ  
ಏನಿದು ಏನಿದು ಯಂತ್ರ ಜೀವನ
ನೋವಿನ ನೂಲಲಿ ಹೃದಯ ಬಂಧನ 
ಪ್ರೇಮದ ಕಥೆಗೆ ಆಸೆಯ ಲತೆಗೆ ಚಿಂತೆಯ ಬೆಸುಗೆ.. ಚಿಂತೆಯ ಬೆಸುಗೆ  
------------------------------------------------------------------------------------

No comments:

Post a Comment