1781. ರಂಜಿತಾ (೧೯೯೩)

ರಂಜಿತಾ ಚಲನಚಿತ್ರದ ಹಾಡುಗಳು
  1. ನನ್ನಲ್ಲಿ ನಿನ್ನಲ್ಲಿ 
  2. ಸಂಗಾತಿಯೇ
  3. ಎತ್ತ ನೋಡು  
  4. ನಿನ್ನ ಜೀವನ 
  5. ಏನಿದ್ದರೇನು ಹೆಣ್ಣಾದ ಬಳಿಕ 
 ರಂಜಿತಾ (೧೯೯೩) - ನನ್ನಲ್ಲಿ ನಿನ್ನಲ್ಲಿ 
ಸಂಗೀತ : ಅಗಸ್ತ್ಯ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಮಂಜುಳಾ  

ನನ್ನಲ್ಲಿ ನಿನ್ನಲ್ಲಿ ಕಣ್ತುಂಬಾ ಒಲವಿದೆ 
ನಮ್ಮ ನಡೆಯಲ್ಲಿ ನುಡಿಯಲ್ಲಿ ಒಲವಿನ ಗೆಲುವಿದೇ ... 
ಮುಗಿಯದಾ ಪ್ರೀತಿ... ಹರಿಯುವ ರೀತಿ.. 
ದಿನ ಜೀವ ಭಾವ ಕುಣಿಸಿದೆ... ತಣಿಸಿದೆ... 
ನನ್ನಲ್ಲಿ ನಿನ್ನಲ್ಲಿ ಕಣ್ತುಂಬಾ ಒಲವಿದೆ 
ನಮ್ಮ ನಡೆಯಲ್ಲಿ ನುಡಿಯಲ್ಲಿ ಒಲವಿನ ಗೆಲುವಿದೇ ... 
  
ನೋಟ ಸೆಳೆದು... ಪ್ರೀತಿ ಬೆಳೆದು... ಆಸೆ ವರಸೆ ಬಲು ಮಾಗಿರೇ ... 
ರಾಗ ಮಿಡಿದು ಮೋಹ ಮೆರೆದು ಸ್ನೇಹ ಮೋಹ ಸಿರಿ ತೂಗಿರೇ ... 
ಋತುಮಾನ ಹೂವೂ ಹಾಸಿದೇ ... 
ಅನುರಾಗ ಕೈಯ್ ಬೀಸಿದೆ... 
ಹೊಸ ದಾರಿ ಹಿಡಿದು ಹೊಸ ಕನಸು ಬರೆದು 
ಬದುಕೆಲ್ಲಾ ಹೊಸದಾಗಿದೇ... ಕ್ಷಣ... ಕ್ಷಣ... 
ನನ್ನಲ್ಲಿ ನಿನ್ನಲ್ಲಿ ಕಣ್ತುಂಬಾ ಒಲವಿದೆ 
ನಮ್ಮ ನಡೆಯಲ್ಲಿ ನುಡಿಯಲ್ಲಿ ಒಲವಿನ ಗೆಲುವಿದೇ ... 
  
ಸಂಗ ಸುಖದ ರಂಗು ಕರೆದು ಪ್ರೀತಿ ದಾಹ ನನ್ನ ಕಾಡಿದೆ... 
ನಿನ್ನೆ ನಾಳೆ ಎಲ್ಲಾ ಮರೆತು ಪ್ರೇಮ ಮೈತ್ರಿ ಸುಖ ತಂದಿದೇ ... 
ಒಡಲಾಳ ತಾ ಕೂಗಿದೆ... ಅನುಬಂಧ ಹಿತವಾಗಿದೇ... 
ನಿಜ ನಂಟು ಬೆಸೆದು... ನಗೆ ಹೂವು ಬಿರಿದು 
ಜಗವೆಲ್ಲ ಚೆಲುವಾಗಿದೇ ... ದಿನ... ದಿನ... 
ನನ್ನಲ್ಲಿ ನಿನ್ನಲ್ಲಿ ಕಣ್ತುಂಬಾ ಒಲವಿದೆ 
ನಮ್ಮ ನಡೆಯಲ್ಲಿ ನುಡಿಯಲ್ಲಿ ಒಲವಿನ ಗೆಲುವಿದೇ ... 
ಮುಗಿಯದಾ ಪ್ರೀತಿ... ಹರಿಯುವ ರೀತಿ.. 
ದಿನ ಜೀವ ಭಾವ ಕುಣಿಸಿದೆ... ತಣಿಸಿದೆ... 
ನನ್ನಲ್ಲಿ ನಿನ್ನಲ್ಲಿ ಕಣ್ತುಂಬಾ ಒಲವಿದೆ 
ನಮ್ಮ ನಡೆಯಲ್ಲಿ ನುಡಿಯಲ್ಲಿ ಒಲವಿನ ಗೆಲುವಿದೇ ... 
-------------------------------------------------------------------------------------

ರಂಜಿತಾ (೧೯೯೩) - ಸಂಗಾತಿಯೇ
ಸಂಗೀತ : ಅಗಸ್ತ್ಯ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಮಂಜುಳಾ  

ಹೆಣ್ಣು : ಸಂಗಾತಿಯೇ... ಸಂಪ್ರೀತಿಯೇ... ನನ್ನಾಸೆ ಕಂಡ ಕನಸು ಕರಗಿತೇ.. 
ಗಂಡು :  ಬಂಗಾರಿಯೇ... ಸಿಂಗಾರಿಯೇ.. ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೇ.. 
ಹೆಣ್ಣು : ಜೀವನವೆಲ್ಲ ಗೋಳಲಿ ಕಳೆಯೇ ಸಂಸಾರದಲ್ಲಿ ಸುಖವಿಹುದೇ.. 
          ಸಂಗಾತಿಯೇ... ಸಂಪ್ರೀತಿಯೇ... ನನ್ನಾಸೆ ಕಂಡ ಕನಸು ಕರಗಿತೇ.. 
ಗಂಡು :  ಬಂಗಾರಿಯೇ... ಸಿಂಗಾರಿಯೇ.. ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೇ.. 

ಹೆಣ್ಣು : ನೂರಾಸೆ ಕಾಣುತ ನಾ ಬಂದೆ ಇಲ್ಲಿಗೆ ನನ್ನಾಸೆಯು ಕಮರಿದೆ ಮೆಲ್ಲಗೆ  
ಗಂಡು : ಹೀಗೇಕೆ ಕೊರಗುವೇ ... ನೀ ಬಂದ ಬಾಳಿಗೆ  ಸಂಬಂಧವು ಮುಗಿಯದು ಇಲ್ಲಿಗೆ 
ಹೆಣ್ಣು : ಒಲುಮೆ ಸಂಸಾರ ಮುರಿಯೇ ಮನ ಭಾರ 
ಗಂಡು : ಸರಿಯೇ ನೀ ದೂರ ಇರದು ಪರಿಹಾರ 
ಹೆಣ್ಣು : ಏತಕೆ ನಮ್ಮಲ್ಲಿ ಈ ಅಂತರ.. 
ಗಂಡು :  ಬಂಗಾರಿಯೇ... ಸಿಂಗಾರಿಯೇ.. ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೇ.. 
ಹೆಣ್ಣು : ಸಂಗಾತಿಯೇ... ಸಂಪ್ರೀತಿಯೇ... ನನ್ನಾಸೆ ಕಂಡ ಕನಸು ಕರಗಿತೇ.. 

ಗಂಡು : ನಿನ್ನಂತೇ ನಡೆಯಲು ಏನೇನೋ ಅಡಚಣೆ ಕಣ್ಣಾರೆ ನೀ ಕಂಡಿಹೆ ವೇದನೆ.. 
ಹೆಣ್ಣು : ಸಂಕಷ್ಟ ಸಹಿಸುತ  ನಾ ಸುರಿಸೇ ಬೆವರಲಿ ಎಂದೆಂದಿಗೂ ತುಂಬಿದೆ ಚಿಂತನೇ ... 
ಗಂಡು : ಪ್ರೀತಿ ರಥಕ್ಕಿಂದು ನಾವೇ ಗಾಲಿಗಳು 
ಹೆಣ್ಣು : ಒಂಟಿ ಇರಲಾಗಿ ದಿನವೂ ನೋವುಗಳು 
ಗಂಡು : ಸಮರಸ ಒಲವಿರೇ ಸಿರಿ ಸುಂದರ 
ಹೆಣ್ಣು : ಸಂಗಾತಿಯೇ... ಸಂಪ್ರೀತಿಯೇ... ನನ್ನಾಸೆ ಕಂಡ ಕನಸು ಕರಗಿತೇ.. 
ಗಂಡು :  ಬಂಗಾರಿಯೇ... ಸಿಂಗಾರಿಯೇ.. ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೇ.. 
ಹೆಣ್ಣು : ಜೀವನವೆಲ್ಲ ಗೋಳಲಿ ಕಳೆಯೇ ಸಂಸಾರದಲ್ಲಿ ಸುಖವಿಹುದೇ.. 
ಗಂಡು :  ಬಂಗಾರಿಯೇ... ಸಿಂಗಾರಿಯೇ.. ಚೆಂದುಳ್ಳಿ ಪ್ರೀತಿ ಹಕ್ಕಿ ಸೊರಗಿತೇ.. 
ಹೆಣ್ಣು : ಸಂಗಾತಿಯೇ...  
-------------------------------------------------------------------------------------

ರಂಜಿತಾ (೧೯೯೩) - ಎತ್ತ ನೋಡು  
ಸಂಗೀತ : ಅಗಸ್ತ್ಯ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಮಂಜುಳಾ  

ಎತ್ತ ನೋಡು ಅತ್ತ ಬೇಲಿ ಇದೆ ಹೆಣ್ಣಿಗೆ 
ಕತ್ತು ಕೊಯ್ವಾ... ಅತ್ತೆ ಮಾವಯಿರೇ ಒಮ್ಮೆಗೇ 
ಸಂಗಾತಿ ಸಪ್ತಪದಿಯು ಹುಸಿಯೇನೇ 
ಹೆಣ್ಣು ಮಗಳು ತವರು ಮನೆಯ ಬಿಟ್ಟ ಮೇಲೆ ಕಣ್ಣಿರೇನೇ... 
ಎತ್ತ ನೋಡು ಅತ್ತ ಬೇಲಿ ಇದೆ ಹೆಣ್ಣಿಗೆ 
ಎತ್ತ ನೋಡು ಅತ್ತ ಬೇಲಿ ಇದೆ ಹೆಣ್ಣಿಗೆ 

ನಲ್ಲನಂತೆ ನಡೆದು ಬಯಕೆಯ ಕೊಂದು 
ನೆಚ್ಚುವಾ ಇದಿರೇ  ದುಗುಡ ನೂರು 
ಹೃದಯಕಾರು ಅಳಲ ಪೂರವೇ... 
ಎಲ್ಲರಂತೆ ಇರದೇ ತಾಯ್ತನ ಬರದೇ 
ಮನವು ಒಲಿದರೆ ಕಂಡ ಕನಸು ಚೂರು ಚೂರು 
ಸುಖವೇ ದೂರವೇ ಈ ಥರ ನಡುವೆ 
ನಂಬಿಕೆ ನಲುಗಿ ಹೋಗಿ ಸಂಬಂಧ ಬಿರಿದು ಬಾಳು ಗೋಳಾಯಿತು 
ಎತ್ತ ನೋಡು ಅತ್ತ ಬೇಲಿ ಇದೆ ಹೆಣ್ಣಿಗೆ 
ಎತ್ತ ನೋಡು ಅತ್ತ ಬೇಲಿ ಇದೆ ಹೆಣ್ಣಿಗೆ 

ಯಾರದೋ ದುಡಿಮೆ ಯಾರದೋ ಹಿರಿಮೆ ಭವಣೆ ತುಂಬಿರೇ ... 
ಮನಸು ಮನಸು ಬೇರೆ ಬೇರೆ ಅಡ್ಡಗೋಡೆಯೇ... 
ಮಗಳಿಗೆ ಮುದ್ದು ಸೊಸೆಗೆ ಹಿಂಸೆ ಮನೆಯು ಒಡೆದಿರೇ ... 
ಯಂತ್ರದಂತೆ ದುಡಿದರುನೂ ಮುಳ್ಳು ದಾರಿಯೇ... 
ಸಂಸಾರ ಕಡಲ ಅಲೆಗಳ ಮೇರೇ ಮೀರಿ 
ದಾಂಪತ್ಯ ದೋಣಿ ಬಿರುಕು ನೂರಾಯಿತು 
ಎತ್ತ ನೋಡು ಅತ್ತ ಬೇಲಿ ಇದೆ ಹೆಣ್ಣಿಗೆ 
ಕತ್ತು ಕೊಯ್ವಾ... ಅತ್ತೆ ಮಾವಯಿರೇ ಒಮ್ಮೆಗೇ 
ಸಂಗಾತಿ ಸಪ್ತಪದಿಯು ಹುಸಿಯೇನೇ 
ಹೆಣ್ಣು ಮಗಳು ತವರು ಮನೆಯ ಬಿಟ್ಟ ಮೇಲೆ ಕಣ್ಣಿರೇನೇ... 
ಎತ್ತ ನೋಡು ಅತ್ತ ಬೇಲಿ ಇದೆ ಹೆಣ್ಣಿಗೆ 
ಎತ್ತ ನೋಡು ಅತ್ತ ಬೇಲಿ ಇದೆ ಹೆಣ್ಣಿಗೆ ಅಹ್ಹಹ್ಹಹ್ಹಹಾ 
-------------------------------------------------------------------------------------

ರಂಜಿತಾ (೧೯೯೩) - ನಿನ್ನ ಜೀವನ 
ಸಂಗೀತ : ಅಗಸ್ತ್ಯ, ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಮಂಜುಳಾ  

ನಿನ್ನ ಜೀವನ ತಿದ್ದಿ ತೀಡುವ ಶಿಲ್ಪಿ ನೀನೇ 
ಬಿದ್ದ ಬಾಳನು ಎತ್ತಿ ನಿಲ್ಲಿಸೋ ಶಕ್ತಿ ನೀನೇ 
ಹಣಕು ಮಿಗಿಲು ಹಿರಿದೋ ಕಾಲ ಗೆಲುವ ಬಲಕೆ... ದುಡಿಮೆ ಮೂಲ 
ದುಡ್ಡಿದ್ರೆ  ನೀನೇ ದೇವರು ದುಡ್ಡಿರೋ ಜನರೇ ದೊಡ್ಡೋರು 
ನಿನ್ನ ಸಂಕಲ್ಪಕೆ ನಿನ್ನ ವಿಶ್ವಾಸಕೆ ದಿನವೂ ನಿನಗೆ ಜಯವೇ... 
ನಿನ್ನ ಜೀವನ ತಿದ್ದಿ ತೀಡುವ ಶಿಲ್ಪಿ ನೀನೇ 
ಬಿದ್ದ ಬಾಳನು ಎತ್ತಿ ನಿಲ್ಲಿಸೋ ಶಕ್ತಿ ನೀನೇ 

ಟೈಮ್ ಇಸ್ ಮನೀ ... ವರ್ಕ ಹಾರ್ಡ್ 
ಶೃದ್ಧೆಯ ಬಿಟ್ರೇ ಕೆಟ್ಟೆ ದಿನ ತುಂಬದು ನಿನ್ನಯ ಹೊಟ್ಟೆ 
ಶೃದ್ಧೆಯ ಬಿಟ್ರೇ ಕೆಟ್ಟೆ ದಿನ ತುಂಬದು ನಿನ್ನಯ ಹೊಟ್ಟೆ 
ಮುಳ್ಳಿನ ದಾರಿಯ ಮೆಟ್ಟಿ ಮುಂದೆ ಹರಿಯಲಿ ನಿನ್ನಯ ದಿಟ್ಟಿ 
ಮುಳ್ಳಿನ ದಾರಿಯ ಮೆಟ್ಟಿ ಮುಂದೆ ಹರಿಯಲಿ ನಿನ್ನಯ ದಿಟ್ಟಿ 
ಹೋರಾಡು ಛಲ ಇರಲೀ ... ಮೇಲೇರೋ ಮತಿ ಬರಲೀ 
ಗುರಿ ಹಿರಿದಾಗಿರೇ ಶುಭ ಫಲದಾ ತೊರೆ ಹಠವ ಹಿಡಿದು ಗೆಲ್ಲು... 
ನಿನ್ನ ಜೀವನ ತಿದ್ದಿ ತೀಡುವ ಶಿಲ್ಪಿ ನೀನೇ 
ಬಿದ್ದ ಬಾಳನು ಎತ್ತಿ ನಿಲ್ಲಿಸೋ ಶಕ್ತಿ ನೀನೇ 

ಟೈಮ್ ಇಸ್ ಪಾವರ್ ಕ್ಯಾಪ್ಚರ್ ಇಟ್ 
ಚಿಂತೆಯ ಆಚೆಯ ನೂಕು ನೀ ಮುನ್ನಡೆ ಹೆಜ್ಜೆ ಹಾಕು 
ಚಿಂತೆಯ ಆಚೆಯ ನೂಕು ನೀ ಮುನ್ನಡೆ ಹೆಜ್ಜೆ ಹಾಕು 
ಮೆಟ್ಟಿಲು ಮೆಟ್ಟಿಲು ಏರು ನೀ ಹೆಮ್ಮೆಯ ಪ್ರಗತಿ ತೋರು 
ಮೆಟ್ಟಿಲು ಮೆಟ್ಟಿಲು ಏರು ನೀ ಹೆಮ್ಮೆಯ ಪ್ರಗತಿ ತೋರು 
ನೀ ಹರಿಸು ಮೈಯ್ ಬೆವರು.. ಕೈ ಕೆಸರಾದರೇ ಬಾಯಿ ಮೊಸರು 
ಗತ್ತು ಬಿಡದೆ ನಡೆ...  ಇಟ್ಟ ಯಶವ ಪಡೆ... ಕೀರ್ತಿ ಗಳಿಸಿ ಬದುಕು 
ನಿನ್ನ ಜೀವನ ತಿದ್ದಿ ತೀಡುವ ಶಿಲ್ಪಿ ನೀನೇ 
ಬಿದ್ದ ಬಾಳನು ಎತ್ತಿ ನಿಲ್ಲಿಸೋ ಶಕ್ತಿ ನೀನೇ 
ಹಣಕು ಮಿಗಿಲು ಹಿರಿದೋ ಕಾಲ ಗೆಲುವ ಬಲಕೆ... ದುಡಿಮೆ ಮೂಲ 
ದುಡ್ಡಿದ್ರೆ  ನೀನೇ ದೇವರು ದುಡ್ಡಿರೋ ಜನರೇ ದೊಡ್ಡೋರು 
ನಿನ್ನ ಸಂಕಲ್ಪಕೆ ನಿನ್ನ ವಿಶ್ವಾಸಕೆ ದಿನವೂ ನಿನಗೆ ಜಯವೇ... 
ನಿನ್ನ ಜೀವನ ತಿದ್ದಿ ತೀಡುವ ಶಿಲ್ಪಿ ನೀನೇ 
ಬಿದ್ದ ಬಾಳನು ಎತ್ತಿ ನಿಲ್ಲಿಸೋ ಶಕ್ತಿ ನೀನೇ 
------------------------------------------------------------------------------------

ರಂಜಿತಾ (೧೯೯೩) - ಏನಿದ್ದರೇನು ಹೆಣ್ಣಾದ ಬಳಿಕ 
ಸಂಗೀತ : ಅಗಸ್ತ್ಯ, ಸಾಹಿತ್ಯ : ಮಹಾದೇವ ಬಣಕಾರ, ಗಾಯನ : ಚಂದ್ರಿಕಾ ಗುರುರಾಜ 

ಏನಿದ್ದರೇನು ಹೆಣ್ಣಾದ ಬಳಿಕ ಗಂಡಾ ಇರಬೇಕಾ... 
ಏನಿದ್ದರೇನು ಹೆಣ್ಣಾದ ಬಳಿಕ ಗಂಡಾ ಇರಬೇಕಾ... 
ಅರವತ್ತೇನೂ... ನೂರಾದರೇನೂ ಕೂಡಿ ಇರಬೇಕಾ...  ಕೂಡಿ ಇರಬೇಕಾ... 

ಅರಿಶಿನ ಕುಂಕುಮ ಕಡಗ ಕಾಲುಂಗುರ 
ಭಾಗ್ಯ ಕೊಟ್ಟವನು ತಾಳಿಯ ಭಾಗ್ಯ ಕೊಟ್ಟವನು 
ಹಾಲು ಜೇನು ಬೆರೆತಿರೋ ಹಾಂಗ್ ಪ್ರೇಮ ಇಟ್ಟವನು 
ಹಾಂಗ್ ಪ್ರೇಮ ಇಟ್ಟವನು
ಏನಿದ್ದರೇನು ಹೆಣ್ಣಾದ ಬಳಿಕ ಗಂಡಾ ಇರಬೇಕಾ... 
ಪ್ರೀತಿ ಪ್ರೇಮ ಅನ್ನೋದಕ್ಕ ವಯಸ್ಯಾಕ್ ಬೇಕ್... ವಯಸ್ಯಾಕ್ ಬೇಕ್ 

ಮಾತು ಮಾತಿಗೆ ನಕ್ಕು ನಗಿಸಿ  ಮುತ್ತ ಕೊಟ್ಟವನೂ ... ಮುತ್ತ ಕೊಟ್ಟವನೂ ... 
ತುತ್ತ್ಯಾಗನ್ನ ಇಟ್ಟು ಕೊಟ್ಟರೇ ತುತ್ತಾನಿಟ್ಟವನು... ತುತ್ತಾನಿಟ್ಟವನು... 
ನನ್ನಂಥ ಭಾಗ್ಯ ನಿಮಗಿರಲೀ ... ಹೆಣ್ಣಿನ ಬಾಳಿಗೆ ಸುಖವಿರಲಿ... 
ಏನಿದ್ದರೇನು ಹೆಣ್ಣಾದ ಬಳಿಕ ಗಂಡಾ ಇರಬೇಕಾ... 
ಅರವತ್ತೇನೂ... ನೂರಾದರೇನೂ ಕೂಡಿ ಇರಬೇಕಾ...  ಕೂಡಿ ಇರಬೇಕಾ... 

ಇದ್ದರೇ ಇರಬೇಕು ನಿನ್ನ ಹಂಗ್ ಹೆಂಡತಿಯಾಗಬೇಕು ನನ್ನಹಂಗ್ 
ಸಾಯೋದಂಗ್ ನಾನಿರಬೇಕು ರನ್ನ ಚಿನ್ನ ಅನ್ನಬೇಕು 
ಇದ್ದರೇ ಇರಬೇಕು ನಿನ್ನ ಹಂಗ್ ಹೆಂಡತಿಯಾಗಬೇಕು ನನ್ನಹಂಗ್ 
ಸಾಯೋದಂಗ್ ನಾನಿರಬೇಕು ರನ್ನ ಚಿನ್ನ ಅನ್ನಬೇಕು... ರನ್ನ ಚಿನ್ನ ಅನ್ನಬೇಕು 
ಏನಿದ್ದರೇನು ಹೆಣ್ಣಾದ ಬಳಿಕ ಗಂಡಾ ಇರಬೇಕಾ... 
ಪ್ರೀತಿ ಪ್ರೇಮ ಅನ್ನೋದಕ್ಕ ವಯಸ್ಯಾಕ್ ಬೇಕ್... ವಯಸ್ಯಾಕ್ ಬೇಕ್ 

ಪ್ರೀತಿ ಪ್ರೇಮ ಅನ್ನೋದಕ್ಕ ಅರಮನೆ ಯಾಕ ಬೇಕ್... ಅರಮನೆ ಯಾಕ ಬೇಕ್ 
ಸ್ವರ್ಗ ಮೀರಿಸೋ ಸುಖವ ಪಡೆಯೋಕ್ ಗುಡಿಸಲಾದ್ರೆ ಸಾಕ... ಗುಡಿಸಲಾದ್ರೆ ಸಾಕ...   
ಏನಿದ್ದರೇನು ಹೆಣ್ಣಾದ ಬಳಿಕ ಗಂಡಾ ಇರಬೇಕಾ... 
ಅರವತ್ತೇನೂ... ನೂರಾದರೇನೂ ಕೂಡಿ ಇರಬೇಕಾ...  ಕೂಡಿ ಇರಬೇಕಾ... 

ಸಂಪತ್ತು ಉಕ್ಕಿ ಹರಿತ್ತಿದರೇನೂ ಎದೆಯು ಬತ್ತಿರತೈತಿ.. ಎದೆಯು ಬತ್ತಿರತೈತಿ
ಸಂಪತ್ತು ಉಕ್ಕಿ ಹರಿತ್ತಿದರೇನೂ ಎದೆಯು ಬತ್ತಿರತೈತಿ.. ಎದೆಯು ಬತ್ತಿರತೈತಿ
ಒಂದಾದ ಮನಸಿನ್ಯಾಗ ಗಂಡನ್ನ ಕೂಡಿ ಇಟ್ರೇ ಸ್ವರ್ಗ ಸುರಿತೈತಿ..  ಸ್ವರ್ಗ ಸುರಿತೈತಿ.. 
ಒಂದಾದ ಮನಸಿನ್ಯಾಗ ಗಂಡನ್ನ ಕೂಡಿ ಇಟ್ರೇ ಸ್ವರ್ಗ ಸುರಿತೈತಿ..  ಸ್ವರ್ಗ ಸುರಿತೈತಿ.. 
ಏನಿದ್ದರೇನು ಹೆಣ್ಣಾದ ಬಳಿಕ ಗಂಡಾ ಇರಬೇಕಾ... 
ಅರವತ್ತೇನೂ... ನೂರಾದರೇನೂ ಕೂಡಿ ಇರಬೇಕಾ...  ಕೂಡಿ ಇರಬೇಕಾ... 
------------------------------------------------------------------------------------

No comments:

Post a Comment