60. ಭಲೆ ಜೋಡಿ (1970)



ಭಲೇ ಜೋಡಿ ಚಿತ್ರದ ಹಾಡುಗಳು
  1. ಆಲಿಸು ಓ ಇನಿಯಾ 
  2. ಅಮ್ಮಾ ಅಮ್ಮಾ ಎಂದಾಗ ಏನೋ ಸಂತೋಷವು 
  3. ಕನಸಿನ ರಾಣಿಯೆ 
  4. ನವಿಲೇ ನವಿಲೇ ಹೆಣ್ಣ ನವಿಲೇ 
  5. ಮಾಣಿಕ್ಯದಂತ ಮಾವಯ್ಯಾ 
ಭಲೆ ಜೋಡಿ (1970) 
ಸಂಗೀತ: ಆರ್.ರತ್ನ  ಸಾಹಿತ್ಯ : ಚಿ. ಉದಯಶಂಕರ್ ಹಾಡಿದವರು: ಎಸ್.ಜಾನಕಿ

ಆಲಿಸು ಓ ಇನಿಯ ನನ್ನೆದೆಯ ಕರೆಯ
ಕಂಬನಿ ಧಾರ ಒರೆಸಲು ಬಾರ
ಕಾದಿಹೆ ನಾ ರಾಜ

ಜನುಮ ಜನುಮದ ಈ ಅನುಬಂಧ
ನನ್ನ ನಿನ್ನ ಒಲವಿನ ಬಂಧ
ಬಾಳಲಿ ಕವಿದ ಅಂಧಕಾರ
ನೀಗಿಸಲೆಂದು ಬೇಗನೆ ಬಾರ
ಕಾದಿಹೆ ನಾ ರಾಜ

ಬಾಳಿನ ಗೆಳತಿಯ ನೆನೆಯುವುದೆಂದೊ
ಮುಗಿಯದ ಹಾಡನು ಮುಗಿಸುವುದೆಂದೊ
ಕಾಣದೆ ನಿನ್ನ ಬಳಲಿದೆ ನಯನ
ಆಗುವುದೆಂದೊ ನಮ್ಮಯ ಮಿಲನ
ಕಾದಿಹೆ ನಾ ರಾಜ...ರಾಜ...ರಾಜ
---------------------------------------------------------------------------------------------------------------------

ಭಲೇ ಜೋಡಿ (1970)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಆರ್.ರತ್ನ ಹಾಡಿದವರು: ಪಿ.ಬಿ.ಶ್ರೀನಿವಾಸ್


ಓ.... ಓ.... ಓ... ಓಓಓ...  ಓಓಓ... ಓಓಓ
ನನ್ನ ಕನಸಿನ ರಾಣಿಯೆ ನಿಲ್ಲೇ ನಿಲ್ಲೇ
ನನ್ನ ಮನಸಿನ ಮಲ್ಲಿಗೆ ನಿಲ್ಲೇ ಅಲ್ಲೇ
ನಿನ್ನ ಹೃದಯದ ಆಸೆಯನೆಲ್ಲಾ ಬಲ್ಲೇ
ನಲ್ಲೇ ನಿಲ್ಲೇ ಅಲ್ಲೇ, ನಲ್ಲೇ ನಿಲ್ಲೇ ಅಲ್ಲೇ
ನನ್ನ ಕನಸಿನ ರಾಣಿಯೆ ನಿಲ್ಲೇ ನಿಲ್ಲೇ
ನನ್ನ ಮನಸಿನ ಮಲ್ಲಿಗೆ ನಿಲ್ಲೇ ಅಲ್ಲೇ

ಬಿಡು ನಿನ್ನ ಸಿಡುಕು, ಯಾಕೀ ತಳಕು
ನನ್ನಾಸರೆಯು ನಿನಗಿರಬೇಕು
ಕೊಕ್ಕರೆ ಹಾಗೆ ನಡೆದುದು ಸಾಕು
ತೋಳಿಂದ ಬಳಸೊಂದ ಕೊಡಬೇಕು
ನಿಲ್ಲೇ ನನ್ನ ನಲ್ಲೇ, ನಿಲ್ಲೇ ನನ್ನ ನಲ್ಲೇ
ನನ್ನ ಕನಸಿನ ರಾಣಿಯೆ ನಿಲ್ಲೇ ನಿಲ್ಲೇ
ನನ್ನ ಮನಸಿನ ಮಲ್ಲಿಗೆ ನಿಲ್ಲೇ ಅಲ್ಲೇ

ನಾಚಿಕೆ ಏಕೆ, ಈ ಮೈ ಸೋಕೆ
ವದಿಸಿದೆ ಅಂದೇ, ನೀ ನನ್ನಾಕೆ
ಓಡಲು ಬಿಡೆನು ತಿಳಿದುಕೊ ಜೋಕೆ
ತುಟಿಗೊಂದು ಸಿಹಿಯ ಕಾಣಿಕೆ
ಬೇಕೇ ನನ್ನ ಜಿಂಕೆ, ಬೇಕೇ ನನ್ನ ಜಿಂಕೆ
ನನ್ನ ಕನಸಿನ ರಾಣಿಯೆ ನಿಲ್ಲೇ ನಿಲ್ಲೇ
ನನ್ನ ಮನಸಿನ ಮಲ್ಲಿಗೆ ನಿಲ್ಲೇ ಅಲ್ಲೇ
ನಿನ್ನ ಹೃದಯದ ಆಸೆಯನೆಲ್ಲಾ ಬಲ್ಲೇ
ನಲ್ಲೇ ನಿಲ್ಲೇ ಅಲ್ಲೇ, ನಲ್ಲೇ ನಿಲ್ಲೇ ಅಲ್ಲೇ
ನನ್ನ ಕನಸಿನ ರಾಣಿಯೆ ನಿಲ್ಲೇ ನಿಲ್ಲೇ
ನನ್ನ ಮನಸಿನ ಮಲ್ಲಿಗೆ ನಿಲ್ಲೇ ಅಲ್ಲೇ
------------------------------------------------------------------------------------------------------------------------

ಭಲೇ ಜೋಡಿ (೧೯೭೦)
ರಚನೆ: ಚಿ. ಉದಯಶಂಕರ್ ಸಂಗೀತ: ಆರ್. ರತ್ನ ಗಾಯಕ: ಪಿ. ಬಿ. ಶ್ರೀನಿವಾಸ್


ಅಮ್ಮಾ ಅಮ್ಮಾ
ಅಮ್ಮಾ ಅಮ್ಮಾ ನನ್ನಮ್ಮ
ಅಮ್ಮಾ ಅಮ್ಮಾ
ಅಮ್ಮಾ ಅಮ್ಮಾ ನನ್ನಮ್ಮ
ನಾನು ಅಮ್ಮ ಎಂದಾಗ ಏನೊ ಸಂತೋಷವು
ನಾನು ಅಮ್ಮ ಎಂದಾಗ ಏನೊ ಸಂತೋಷವು 
ನಿನ್ನ ಕಂಡಾಗ ಮನಕೇನೊ ಆನಂದವು
ಅಮ್ಮಾ ಅಮ್ಮಾ  ಅಮ್ಮಾ ಅಮ್ಮಾ ನನ್ನಮ್ಮ

ಹಾಲಿನ ಸುಧೆಯು ನಿನ್ನಯ ಮನಸು
ಜೇನಿನ ಸವಿಯು ನಿನ್ನ ಮಾತು
ಹಾಲಿನ ಸುಧೆಯು ನಿನ್ನಯ ಮನಸು
ಜೇನಿನ ಸವಿಯು ನಿನ್ನ ಮಾತು
ಪುಣ್ಯದ ಫಲವೊ ದೇವರ ವರವೊ
ಸೇವೆಯ ಭಾಗ್ಯ ನನಗಾಯಿತು
ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ

ತಾಯಿಯ ಮಮತೆ ಕಂಡಾ ದೇವನು
ಅಡಿಗದ ಎಲ್ಲೋ ಮರೆಯಾಗಿ
ತಾಯಿಯ ಮಮತೆ ಕಂಡಾ ದೇವನು
ಅಡಿಗದ ಎಲ್ಲೋ ಮರೆಯಾಗಿ 
ತಾಯಿಯ ಶಾಂತಿಗೆ ಧರಣಿಯು ನಾಚಿ
ಮೌನದಿ ನಿಂತಳು ತಲೆಬಾಗಿ
ಅಮ್ಮಾ ಅಮ್ಮಾ ಅಮ್ಮಾ ನನ್ನಮ್ಮ
ನಾನು ಅಮ್ಮ ಎಂದಾಗ ಏನೊ ಸಂತೋಷವು
ನಾನು ಅಮ್ಮ ಎಂದಾಗ ಏನೊ ಸಂತೋಷವು
ನಿನ್ನ ಕಂಡಾಗ ಮನಕೇನೊ ಆನಂದವು
ಅಮ್ಮಾ ಅಮ್ಮಾ ನನ್ನಮ್ಮ
------------------------------------------------------------------------------------------------------------------------

ಭಲೇ ಜೋಡಿ (೧೯೭೦)
ರಚನೆ: ಚಿ. ಉದಯಶಂಕರ್  ಸಂಗೀತ: ಆರ್. ರತ್ನ   ಗಾಯಕ:  ಎಲ್.ಆರ್.ಈಶ್ವರಿ 


ನವಿಲೇ ನವಿಲೇ ಹೆಣ್ಣವಿಲೇ ಸಿರಿ ನವಿಲೇ
ನನ್ನಲೇನೂ ನೂರು ಭಾವ
ಏಕೋ ಕಾಣೆ ಹೇಳೇ ಜಾಣೆ ಕಾರಣವಾ
ಓ..ಏಕೋ ಕಾಣೆ ಹೇಳೇ ಜಾಣೆ ಕಾರಣವಾ
ನವಿಲೇ ನವಿಲೇ ಹೆಣ್ಣವಿಲೇ ಸಿರಿ ನವಿಲೇ
ನನ್ನಲೇನೂ ನೂರು ಭಾವ
ಏಕೋ ಕಾಣೆ ಹೇಳೇ ಜಾಣೆ ಕಾರಣವಾ
ಓ..ಏಕೋ ಕಾಣೆ ಹೇಳೇ ಜಾಣೆ ಕಾರಣವಾ 
ನವಿಲೇ ನವಿಲೇ ಹೆಣ್ಣವಿಲೇ ಸಿರಿ ನವಿಲೇ 

ದೂರದ ಮರದಿ  ಬೆಳ್ಳನೆ ಹಕ್ಕಿ ಟುವ್ವಿ ಟುವ್ವಿ ಎನ್ನುತಿದೆ 
ದೂರದ ಮರದಿ  ಬೆಳ್ಳನೆ ಹಕ್ಕಿ ಟುವ್ವಿ ಟುವ್ವಿ ಎನ್ನುತಿದೆ 
ಎನ್ನದೇ ಹಕ್ಕಿ ಮರುದನಿ ನೀಡಿ ಹಾಡುತಿದೆ 
ಓ.. ಎನ್ನದೇ ಹಕ್ಕಿ ಮರುದನಿ ನೀಡಿ ಹಾಡುತಿದೆ 
ಹೂವರಳಿ ನಲಿದಾಡುತಿದೇ ನನ್ನಂತೆ ನೀ ಎನ್ನುತಿದೆ... 
ಓ ಓ...ಆಆಆ...ಓ..ಓ..
ನವಿಲೇ ನವಿಲೇ ಹೆಣ್ಣವಿಲೇ ಸಿರಿ ನವಿಲೇ

ಒಂದಡೆ ಮನವು ಅವನನು ಕಂಡು ಸೇಡು ಸೇಡು ಎನ್ನುತಿದೇ
ಒಂದಡೆ ಮನವು ಅವನನು ಕಂಡು ಸೇಡು ಸೇಡು ಎನ್ನುತಿದೇ
ಮತ್ತೇ ಏಕೋ ಕಂಗಳು ಅವನನೇ ನೋಡು ನೋಡು ಎನ್ನುತಿದೇ
ಮತ್ತೇ ಏಕೋ ಕಂಗಳು ಅವನನೇ ನೋಡು ನೋಡು ಎನ್ನುತಿದೇ
ತಂಗಾಳಿ ಬಿಸಿ ಎನಿಸುತಿದೆ ಮಿಂಚೇನಿತೋ ಸುಳಿದಾಡುತಿದೆ
ಆಆಆ...ಓ..ಓ.. ಆಆಆ.
ನವಿಲೇ ನವಿಲೇ ಹೆಣ್ಣವಿಲೇ ಸಿರಿ ನವಿಲೇ
ನನ್ನಲೇನೂ ನೂರು ಭಾವ
ಏಕೋ ಕಾಣೆ ಹೇಳೇ ಜಾಣೆ ಕಾರಣವಾ
ಓ..ಏಕೋ ಕಾಣೆ ಹೇಳೇ ಜಾಣೆ ಕಾರಣವಾ
-------------------------------------------------------------------------------------------------------------------------

ಭಲೇ ಜೋಡಿ (೧೯೭೦)
ರಚನೆ: ಚಿ. ಉದಯಶಂಕರ್  ಸಂಗೀತ: ಆರ್. ರತ್ನ   ಗಾಯಕ:  ಎಲ್.ಆರ್.ಈಶ್ವರಿ, ಪಿ.ಬಿ.ಶ್ರೀನಿವಾಸ  

ಗಂಡು: ಮಾಣಿಕ್ಯದಂಥ ಮಾವಯ್ಯ.... ಹೊಯ್
ಹೆಣ್ಣು : ಬಂಗಾರದಂಥ  ಭಾವಯ್ಯ.....  ಇಬ್ಬರು : ಕೇಳಯ್ಯಾ....
ಗಂಡು : ಥೂ...  ನಿನ್ನ ಮೋಸಕ್ಕೆ  ಹೆಣ್ಣು : ಛೀ...  ನಿನ್ನ ವೇಷಕ್ಕೆ
ಇಬ್ಬರು : ವೇಷಕ್ಕೆ ಮೋಸಕ್ಕೆ ಬಲಿಯಾಗುತಾರಯ್ಯ ಮಾವಯ್ಯಾ ಭಾವಯ್ಯಾ
             ಸತ್ಯಕೆ ಧರ್ಮಕ್ಕೆ ದೂರವಾಗುತಾರಯ್ಯಾ ಭಾವಯ್ಯಾ ಕೇಳಯ್ಯಾ
             ಭಾವಯ್ಯಾ ಕೇಳಯ್ಯಾ

ಹೆಣ್ಣು : ಕಪ್ಪೆಯ ನುಂಗಲು ಹಾವು ಬಂದಿದೆ ಹಾವು ತಿನ್ನಲು ಗರುಡ ಬರುತಿದೆ....
          ಕಪ್ಪೆಯ ನುಂಗಲು ಹಾವು ಬಂದಿದೆ ಹಾವು ತಿನ್ನಲು ಗರುಡ ಬರುತಿದೆ
ಗಂಡು : ಒಂದ ನುಂಗುತ ಒಂದು ಬದುಕಿದೇ....  
           ಒಂದ ನುಂಗುತ ಒಂದು ಬದುಕಿದೇ 
           ನಿನ್ನ ಠಕ್ಕಿಗೆ ಕೊನೆಯು ಕಾದಿದೇ
ಇಬ್ಬರು : ವೇಷಕ್ಕೆ ಮೋಸಕ್ಕೆ ಬಲಿಯಾಗು ತಾರಯ್ಯ
             ಮಾವಯ್ಯ ಭಾವಯ್ಯ ಮಾವಯ್ಯ ಭಾವಯ್ಯ

ಹೆಣ್ಣು : ಹಗಲು ಬಂದರೆ  ರಾತ್ರಿಯು ಬರವುದು 
          ನಗೆಯ ಹಿಂದೆಯೇ ಅಳುವು ಇರುವುದು 
           ಹಗಲು ಎಂದರೆ ರಾತ್ರಿಯು ಬರವುದು 
          ನಗೆಯ ಹಿಂದೆಯೇ ಅಳುವು ಇರುವುದು 
ಗಂಡು : ಪಾಪಿ ಎಂದರೆ ಶಿಕ್ಷೆ ಇರುವುದು.. ಹೇ.. ಪಾಪೀ....    
            ಪಾಪಿ ಎಂದರೆ ಶಿಕ್ಷೆ ಇರುವುದು 
           ನಾಳೆ ನೋಡು ನಿನ್ನ ಕಥೆಯು ಮುಗಿಯುವುದು 
ಇಬ್ಬರು : ಸತ್ಯಕೆ ಧರ್ಮಕ್ಕೆ ದೂರವಾಗುತಾರಯ್ಯಾ
            ಭಾವಯ್ಯಾ ಕೇಳಯ್ಯಾ  ಭಾವಯ್ಯಾ ಕೇಳಯ್ಯಾ 

ಗಂಡು : ಸತ್ಯ ಪಥ್ಯವು ಎಂದು ಕೆಡಿಸದು 
ಹೆಣ್ಣು : ನಿತ್ಯ ಪೂಜೆಗೆ ಪುಣ್ಯ ಇರುವುದು 
ಗಂಡು : ಓಹೋಯ್... ಸತ್ಯಪಥ್ಯವು ಎಂದು ಕೆಡಿಸದು 
ಹೆಣ್ಣು : ನಿತ್ಯ ಪೂಜೆಗೆ ಪುಣ್ಯ ಇರುವುದು 
ಗಂಡು : ನೀತಿ ಮರೆತರೆ ಶಾಂತಿ ಸಿಕ್ಕದೂ....  
ಇಬ್ಬರು : ನೀತಿ ಮರೆತರೆ ಶಾಂತಿ ಸಿಕ್ಕದೂ 
             ದ್ರೋಹ ಬಗೆದರೆ ಕೇಡು ತಪ್ಪದು 
ಗಂಡು : ಮೋಸಕ್ಕೆ  ಹೆಣ್ಣು : ಛೀ ನಿನ್ನ ವೇಷಕ್ಕೆ  ಗಂಡು : ಥೂ..
ಇಬ್ಬರು : ನಿನ್ನ ವೇಷಕ್ಕೆ ಮೋಸಕ್ಕೆ ಬಲಿಯಾಗುತಾರಯ್ಯ
             ಮಾವಯ್ಯ ಭಾವಯ್ಯ
             ಸತ್ಯಕೆ ಧರ್ಮಕ್ಕೆ ದೂರವಾಗುತಾರಯ್ಯಾ
             ಭಾವಯ್ಯಾ ಕೇಳಯ್ಯಾ ಭಾವಯ್ಯಾ ಕೇಳಯ್ಯಾ 
             ಭಾವಯ್ಯಾ ಕೇಳಯ್ಯಾ ಭಾವಯ್ಯಾ ಕೇಳಯ್ಯಾ 
------------------------------------------------------------------------------------------------------------------------- 


No comments:

Post a Comment