62. ಮದುವೆ ಮದುವೆ ಮದುವೆ (1969)


ಮದುವೆ ಮದುವೆ ಮದುವೆ ಚಲನಚಿತ್ರದ ಹಾಡುಗಳು 
  1. ಅಲ್ಲಿ ಪೂರ್ಣ ಚಂದ್ರಮ ಇಲ್ಲಿ ಕಣ್ಣ ಸಂಗಮ
  2. ಜೋಡಿ ಜಡೆ ಜಮುನಇವೆರಡು ಗಂಗ ಯಮುನ
  3. ನಗುವು ಆಳುತಿದೆ ಅಳುವು ನಗುತಿದೆ
  4. ಬಾಳಲಿ ಬೆಳಕನು ಹುಡುಕುತ ನಡೆದೇ
  5. ಕಣ್ಣಿನ ನೋಟವೂ ಅಬ್ಬಾ ಅದು ಕೂಡಲು ಆಗಲೇ ಹಬ್ಬ 
  6. ಭಗವಂತನೇ ಕಸಿದಿಕೋ ಲೇಖನಿಯ 
ಮದುವೆ ಮದುವೆ ಮದುವೆ (1969) - ಅಲ್ಲಿ ಪೂರ್ಣ ಚಂದ್ರಮ ಇಲ್ಲಿ ಕಣ್ಣ ಸಂಗಮ
ಸಾಹಿತ್ಯ: ಗೀತಪ್ರಿಯ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.ಶ್ರೀನಿವಾಸ್

ಅಲ್ಲಿ ಪೂರ್ಣ ಚಂದ್ರಮ ಇಲ್ಲಿ ಕಣ್ಣ ಸಂಗಮ
ಇಂದು ನಮ್ಮ ಬಾಳಿನಲ್ಲಿ  ಮಧುರ ಮಿಲನ ಸಂಭ್ರಮ
ಪ್ರೇಮ ಪೂರ್ಣಿಮ ಪ್ರೇಮ ಪೂರ್ಣಿಮ

ನೀ ಮುಡಿದಿಹ ಮಲ್ಲಿಗೆ ಪ್ರೀತಿ ಸುಗಂಧವ ಈ ದಿನ ಚೆಲ್ಲುತಿರೆ   
ಈ ದಿನ ಚೆಲ್ಲುತಿರೆ ಕೆಂಪಗೆ ಆಗಿದೆ ಗುಲಾಬಿ ಕೆನ್ನೆ ನಾಚಿಕೆ ನಲಿಯುತಿರೆ    
ನಾಚಿಕೆ ನಲಿಯುತಿರೆ ಮುಂಗುರುಳ ಮಂಟಪದೆ ನಿನ್ನಯ ಮುಖವು ಮಿಂಚುತಿರೆ
ಪ್ರೇಮ ಪೂರ್ಣಿಮ   ಪ್ರೇಮ ಪೂರ್ಣಿಮ

ಕಾಮನಬಿಲ್ಲಿನ ಬಣ್ಣಗಳೆಲ್ಲ ನಿನ್ನಯ ಕಣ್ಣಲಿ ಮೂಡುತಿರೆ
ನಿನ್ನಯ ಕಣ್ಣಲಿ ಮೂಡುತಿರೆ ಆ ಬಣ್ಣಗಳೆಲ್ಲವ ನೀನಿಂದು
ಈ ಎನ್ನಯ ಕಣ್ಣಲಿ ತುಂಬುತಿಹೆ
ಎನ್ನಯ ಕಣ್ಣಲಿ ತುಂಬುತಿಹೆ ಒಡವೆಗಳು ನಿನಗೇಕೆ ಆಗಿದೆ ಲಜ್ಜೆಯೆ ಆಭರಣ
ಪ್ರೇಮ ಪೂರ್ಣಿಮ  ಪ್ರೇಮ ಪೂರ್ಣಿಮ ಅಲ್ಲಿ ಪೂರ್ಣ ಚಂದ್ರಮ
ಇಲ್ಲಿ ಕಣ್ಣ ಸಂಗಮ ಇಂದು ನಮ್ಮ ಬಾಳಿನಲ್ಲಿ
ಮಧುರ ಮಿಲನ ಸಂಭ್ರಮ ಪ್ರೇಮ ಪೂರ್ಣಿಮ
ಪ್ರೇಮ ಪೂರ್ಣಿಮ
--------------------------------------------------------------------------------------------------------------------

ಮದುವೆ ಮದುವೆ ಮದುವೆ(1969) - ಜೋಡಿ ಜಡೆ ಜಮುನ
ಸಂಗೀತ: ಸತ್ಯಂ ಸಾಹಿತ್ಯ: ಗೀತಪ್ರಿಯ ಗಾಯನ: ಎಸ್‍.ಪಿ. ‍ಬಾಲಸುಬ್ರಹ್ಮಣ್ಯಂ, ಬಿ.ಕೆ. ಸುಮಿತ್ರ ಸಂಗೀತ: ಸತ್ಯಂ

ಗಂಡು : ಹೋಯ್... ಜೋಡಿ ಜಡೆ ಜಮುನ ಇವೆರಡು ಗಂಗ ಯಮುನ
            ನಿಂತಲ್ಲಿ ನಲ್ಲೇ ನಾ ಬಣ್ಣ ಕಾಣಲು ಇಣಿಕಿ ಇಣಿಕಿ ಸೋತೆ
ಹೆಣ್ಣು :  ಹೋಯ್...ಎಲ್ಲಿ ನಿನ್ನ ಗಮನ ಕುಣಿಸುತಿಹನೆ ಮದನ
           ಈ ವಯಸು ತೋರುವ ಸೊಗಸು ಕಾಣಲು ಏಕೋ ಇನ್ನು ಚಿಂತೆ

ಗಂಡು : ಬೆರೆಯುವಂತಹ ವಯಸು ಬಂದಿರೆ ಮಧುವ ಕುಡಿದಿದೆ ಮನಸು
           ಬೆರೆಯುವಂತಹ ವಯಸು ಬಂದಿರೆ ಮಧುವ ಕುಡಿದಿದೆ ಮನಸು
ಹೆಣ್ಣು : ಕಣ್ಣು ಮುಚ್ಚಲು ಸಮಯವಿಲ್ಲದೆ ಕಾಣುತಿರುವೆಯ ಕನಸು
ಗಂಡು : ನನ್ನಡೆ ನೋಡಿ ತಲ್ಲಣ ನೀಡಿ ಏತಕೆ ಮಾಡಿದೆ ಮೋಡಿ
           ಹೋಯ್... ಜೋಡಿ ಜಡೆ ಜಮುನ ಇವೆರಡು ಗಂಗ ಯಮುನ
            ನಿಂತಲ್ಲಿ ನಲ್ಲೇ ನಾ ಬಣ್ಣ ಕಾಣಲು ಇಣಿಕಿ ಇಣಿಕಿ ಸೋತೆ
ಹೆಣ್ಣು :  ಹೋಯ್...ಎಲ್ಲಿ ನಿನ್ನ ಗಮನ ಕುಣಿಸುತಿಹನೆ ಮದನ
           ಈ ವಯಸು ತೋರುವ ಸೊಗಸು ಕಾಣಲು ಏಕೋ ಇನ್ನು ಚಿಂತೆ

ಹ್ರನ್ನು : ನಾಲ್ಕು ಕಣ್ಗಳು ಕೂಡಿ ಆಡಿರೆ ಕೋಟಿ ಸುಖಗಳ ಚೆಲ್ಲಿ
           ನಾಲ್ಕು ಕಣ್ಗಳು ಕೂಡಿ ಆಡಿರೆ ಕೋಟಿ ಸುಖಗಳ ಚೆಲ್ಲಿ
ಗಂಡು : ಭೂಮಿಯಲ್ಲಿನ ಸುಖವ ಸವಿಯಲು ಸ್ವರ್ಗ ಇಳಿವುದು ಇಲ್ಲಿ
ಹೆಣ್ಣು : ವರುಷಗಳೆಲ್ಲ ನಿಮಿಷಗಳಂತೆ ಹೋಗುವುದಂತೆ ಓಡಿ..ಓಡಿ
          ಹೋ...ಎಲ್ಲಿ ನಿನ್ನ ಗಮನ (ಹಹ.)..ಕುಣಿಸುತಿಹನೆ ಮದನ (ಹೋಹೋ.)
          ಈ ವಯಸು ತೋರವ ಸೊಗಸು ಕಾಣಲು ಏಕೋ ಇನ್ನು ಚಿಂತೆ
ಗಂಡು : ಹೋಯ್... ಜೋಡಿ ಜಡೆ ಜಮುನ (ಹ.).ಇವೆರಡು ಗಂಗ ಯಮುನ (ಹಹ.).
            ನಿಂತಲ್ಲಿ ನಲ್ಲೇ ನಾ ಬಣ್ಣ ಕಾಣಲು ಇಣಿಕಿ ಇಣಿಕಿ ಸೋತೆ
--------------------------------------------------------------------------------------------------------------------------

ಮದುವೆ ಮದುವೆ ಮದುವೆ(1969) -  ನಗುವು ಆಳುತಿದೆ ಅಳುವು ನಗುತಿದೆ 
ಸಂಗೀತ: ಸತ್ಯಂ  ಸಾಹಿತ್ಯ: ಗೀತಪ್ರಿಯ ಗಾಯನ: 

ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ ಒಂದು ತಿಳಿಯದಾಗಿದೆ
ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ ಒಂದು ತಿಳಿಯದಾಗಿದೆ

ಥಳಕು ತೋರಿ ಮಿಣುಕುವಂಥ ನೋಟದೇ
ಕಣ್ಣಿನಂಚು ಏನೋ ಸಂಚು ಮಾಡಿದೆ
ತಾನು ಕುಣಿದು ಕುಣಿಸುವಂಥ ಆಟದೇ
ಕುಣಿದು ದಣಿದು ಲೋಕವೆಲ್ಲ ಸೋತಿದೆ
ಮಿಂಚುವ ಕಣ್ಣೀರೇ ಹೊಂಚು ಹಾಕಿ ಸಂಚು ಮಾಡಿರುವುದೇ
ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ ಒಂದು ತಿಳಿಯದಾಗಿದೆ

ಮನ ಒಂದು ಮುಖದಿ ಒಂದು ಭಾವವು 
ಒಳಗೆ ಒಂದು ಹೊರೆಗೆ ಒಂದು ರೂಪವು 
ಹಣದ ಹೊಳಪು ಗುಣದ ತೆರೆಯ ತೆರೆದಿದೆ 
ಜಗದಿ ತಾನೇ ಹಿರಿಯದೆಂದು ಮರೆದಿದೆ.. ಮೆರೆದಿರೇ 
ಜನಗಳು ದೊಡ್ಡ ಜನರ ಸಣ್ಣ ಗುಣ ಕಂಡಿದೆ 
ನಗುವು ಆಳುತಿದೆ ಅಳುವು ನಗುತಿದೆ
ಸತ್ಯವು ಅಸತ್ಯದ ಬಣ್ಣ ಬಳಿದು ಕೊಂಡಿದೆ
ಚಿತ್ರವೋ ವಿಚಿತ್ರವೋ ಒಂದು ತಿಳಿಯದಾಗಿದೆ
------------------------------------------------------------------------------------------------------------------------- 

ಮದುವೆ ಮದುವೆ ಮದುವೆ(1969) -  ಬಾಳಲಿ ಬೆಳಕನು ಹುಡುಕುತ ನಡೆದೇ
ಸಂಗೀತ: ಸತ್ಯಂ  ಸಾಹಿತ್ಯ: ಗೀತಪ್ರಿಯ ಗಾಯನ: 

ಬಾಳಲಿ ಬೆಳಕನು ಹುಡುಕುತ ನಡೆದೇ
ಕತ್ತಲೆ ಬರೆಯಿತು ನನ್ನ ಕಥೆ
ಸುಖವು ಮುಖವನು ತಿರುಗಿಸು
ದುಃಖವು ಹರಿಯಿತು ನನ್ನ ಕಥೆ

ಶಾಂತಿಯ ಬಯಸಲು ಈ ಜಗದಿ
ಭ್ರಾಂತಿಯು ಬರೆಯಿತು ನನ್ನ ಕಥೆ
ಪ್ರೀತಿಯು ಎಲ್ಲಿಯೂ ತೋರದೆಯೇ
ಭೀತಿಯು ಬರೆಯಿತು ನನ್ನ ಕಥೆ
ದೇವರು ವರವನ್ನು ನೀಡದಿರೆ
ಶಾಪವು ಬರೆಯಿತು ನನ್ನ ಕಥೆ

ಹೂದೋಟದಲಿ ಇದ್ದರು ನಾನು
ಮುಳ್ಳೇ ಬರೆಯಿತು ನನ್ನ ಕಥೆ
ಪನ್ನೀರ ಸ್ನಾನ ನನಗಾಗಿದ್ದರು
ಕಣ್ಣೀರು ಬರೆಯಿತು ನನ್ನ ಕಥೆ
ಹಿಮದಾ ನದಿಯಲಿ ಮುಳಗಿದರೂ
ಬೆಂಕಿಯು ಬರೆಯಿತು ನನ್ನ ಕಥೆ
--------------------------------------------------------------------------------------------------------------------------

ಮದುವೆ ಮದುವೆ ಮದುವೆ(1969) - ಕಣ್ಣಿನ ನೋಟವೂ ಅಬ್ಬಾ ಕೂಡಲು ಆಗಲೇ ಹಬ್ಬ
ಸಂಗೀತ: ಸತ್ಯಂ ಸಾಹಿತ್ಯ: ಗೀತಪ್ರಿಯ ಗಾಯನ: ಎಲ್.ಆರ್.ಈಶ್ವರಿ 


ಕಣ್ಣಿನ ನೋಟವೂ ಅಬ್ಬಾ ಕೂಡಲು ಆಗಲೇ ಹಬ್ಬ ಅದ ನೆನೆಯುತಲಿದ್ದರೇ ಅಬ್ಬಾ
ನಲಿದಾಡುವ ಲೋಕಕೂ ಹಬ್ಬ ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ

ಬಟ್ಟಲಿನಿಂದಲೂ  ಕುಡಿದೆ ಕಣ್ಣುಗಳಿಂದಲೂ ಕುಡಿದೇ
ಬಟ್ಟಲಿನಿಂದಲೂ ಮಧುವೂ ಕುಡಿದೆ ಕಣ್ಣುಗಳಿಂದಲೂ ಮಧು ಕುಡಿದೇ
ಈ ದಿನ ನಿನ್ನ ದು ಎಂದು ನಗು ನಗುತಲಿ ಕಳೇ ಇಂದೂ 
ಮರಳಿ ಬಾರದು ನಾಳೆ ಈ ದಿನ ಎಂದು ನಲಿಯೋ ನೀ ಬಿಡದೇ 
ಕಣ್ಣಿನ ನೋಟವೂ ಅಬ್ಬಾ ಕೂಡಲು ಆಗಲೇ ಹಬ್ಬ ಅದ ನೆನೆಯುತಲಿದ್ದರೇ ಅಬ್ಬಾ
ನಲಿದಾಡುವ ಲೋಕಕೂ ಹಬ್ಬ ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ

ಅಡಗಿದೆಯಂತೇ ಮನದಿ ಯಾವುದೋ ಒಂದು ದಾಹ 
ಅಡಗದಂತಹ ದಾಹವಂತೆ ಅದು ಏಕೇ ಅದರ ಚಿಂತೇ 
ಹಿಂದಿನ ಯೋಚನೆ ಏಕೇ ಮುಂದಿನ ಸೂಚನೆ ಸಾಕೇ 
ಇಂದ್ರ ಜಾಲವ ಇಲ್ಲಿ ತೋರುತ ಮೋಹ ಮರೆವುದಂತೇ 
ಕಣ್ಣಿನ ನೋಟವೂ ಅಬ್ಬಾ ಕೂಡಲು ಆಗಲೇ ಹಬ್ಬ ಅದ ನೆನೆಯುತಲಿದ್ದರೇ ಅಬ್ಬಾ
ನಲಿದಾಡುವ ಲೋಕಕೂ ಹಬ್ಬ ಅಬ್ಬಬ್ಬಾ ಅಬ್ಬಬ್ಬಾ ಅಬ್ಬಬ್ಬಾ
--------------------------------------------------------------------------------------------------------------------------

ಮದುವೆ ಮದುವೆ ಮದುವೆ(1969) - ಭಗವಂತನೇ ಕಸಿದಿಕೋ ಲೇಖನಿಯ
ಸಂಗೀತ: ಸತ್ಯಂ ಸಾಹಿತ್ಯ: ಗೀತಪ್ರಿಯ ಗಾಯನ: ಪಿ.ಬಿ.ಶ್ರೀನಿವಾಸ್ 

ಭಗವಂತನೇ ಕಸಿದಿಕೋ ಲೇಖನಿಯ ವಿಧಿಯ ಕೈಯಿಂದ 
ಬಡವರ ಬಾಳಿನ ಭಾಗ್ಯವ ಬರೆಯಲು ನ್ಯಾಯದ ಮಸಿಯಿಂದ ಅಹ್ಹಹ್ಹಹಾ.. 

ನೀನೇ ಕಟ್ಟಿದ ಲೋಕದಲೀ ಆಹ್ಹ್ ನಿನ್ನಯ ನೀತಿಗೆ ಬೆಲೆಯಿಲ್ಲ 
ವಿಧಿಯೇ ಲೋಕವ ಆಳುತಿರೇ ನ್ಯಾಯಕೇ ಇಲ್ಲಿ ಬೆಲೆಯಿಲ್ಲ   
ಯೋಗ್ಯರಿಗಿಲ್ಲ ಎಲ್ಲಿಗೂ ಕಾಲ ಭೂತರಿಗೆ ಸನ್ಮಾನ 
ದೀನರಿಗೆಲ್ಲ ಜೀವನವೇ ಆಗಿದೆ ನರಕ ಸಮಾನ 
ದುಡಿಮೆಯು ಇಲ್ಲಿ ಬಡವರದು ಲಾಭವು ಮಾತ್ರ ಉತ್ತಮರು 
ಉದ್ದಿಮೆ ಇಲ್ಲಿ ಒಬ್ಬನದಾದರೇ ಕೈಗೋಡ ಆಸೆ ಒಬ್ಬರದು 
ತೇಲಿದೆ ನೆತ್ತರು ಹಾಹಾಕಾರ.. ಕಣ್ಣಿಗೆ ಸುತ್ತಲೂ ಡಂಭಾಚಾರ.. 
ಅಹ್ಹಹ್ಹಹಾ.. ಅದಕ್ಕೇ ... ಭಗವಂತನೇ ಕಸಿದಿಕೋ ಲೇಖನಿಯ ವಿಧಿಯ ಕೈಯಿಂದ 
ಬಡವರ ಬಾಳಿನ ಭಾಗ್ಯವ ಬರೆಯಲು ನ್ಯಾಯದ ಮಸಿಯಿಂದ ಹ್ಹೀ ಹ್ಹೀ ಹ್ಹೀ ಹ್ಹೀ ಹ್ಹೀ 

ದೊಡ್ಡವರೆನಿಸಲು ಇಲ್ಲೊಬ್ಬ ಎಷ್ಟೋ ಜನರನು ಮೆಟ್ಟುವನೂ 
ಎಷ್ಟೋ ಜನಗಳ ಮುಳುಗಿಸುತ ಅವರ ಕೆಟ್ಟ ಪ್ರವರ್ತಕವನೂ 
ಹಣವೇ ಮೆರೆಯುತ ಎಲ್ಲೆಲ್ಲೂ ಮನುಜರ ಗುಣಗಳ ಮುಚ್ಚುತ್ತಿರೇ 
ಸ್ವಾರ್ಥದ ಸಮಾಜದ ಸರ್ಪಗಳೂ ನಿಸ್ವಾರ್ಥಿಗಳನ್ನು ಕಚ್ಚುತೀರೇ 
ಕೆಲವರ ಬಳಿಯೇ ಹಣವೆಲ್ಲಾ.. ಕೆಲವರ ಬಳಿಯೇ ಗುಣವೆಲ್ಲಾ.. 
ಆದರೆ ಇದ್ದರೇ ಹೀಗೇಲ್ಲಾ ಆಗಲೇ ಸತ್ತವು ಜಗವೆಲ್ಲ  
ಈಗಲೂ ನ್ಯಾಯದ ಎರಕವನೂ... ಸ್ವರ್ಗವು ಬಾಳಲು ನರಕವದು   
--------------------------------------------------------------------------------------------------------------------------

No comments:

Post a Comment