68. ತಾಯಿಗಿಂತ ದೇವರಿಲ್ಲ (೧೯೭೭)


ತಾಯಿಗಿಂತ ದೇವರಿಲ್ಲ ಚಲನಚಿತ್ರದ ಹಾಡುಗಳು 
  1. ನೀ ತಂದ ಭಾಗ್ಯ ನನ್ನದಾಗಿದೆ  ಜೀವ ನೋವ ಮರೆತು ಹಾಡಿದೆ
  2. ಅಮ್ಮಾ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ
  3. ಮದುವೆಯಾಗೋ ಹೆಣ್ಣೇ 
  4. ನಗಲಾರದೇ ಅಳಲಾರದೇ 
ತಾಯಿಗಿಂತ ದೇವರಿಲ್ಲ (1977) - ನೀ ತಂದ ಭಾಗ್ಯ ನನ್ನದಾಗಿದೆ  
ಸಾಹಿತ್ಯ: ಚಿ.ಉದಯಶಂಕರ್   ಸಂಗೀತ: ರಾಜನ್-ನಾಗೇಂದ್ರ  ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ


ಹೆಣ್ಣು : ನೀ ತಂದ ಭಾಗ್ಯ ನನ್ನದಾಗಿದೆ  ಜೀವ ನೋವ ಮರೆತು ಹಾಡಿದೆ
          ಜೀವ ನೋವ ಮರೆತು ಹಾಡಿದೆ
ಗಂಡು : ಸ್ನೇಹ ತೋರಿದೆ ನನ್ನ ಸೇರಿದೆ ಪ್ರೀತಿ ತುಂಬಿದೆ ಬಾಳು ಬೆಳಗಿದೆ.. ಓಓಓ
            ನೀ ತಂದ ಭಾಗ್ಯ ನನ್ನದಾಗಿದೆ ಒಲವು ಗೆಲುವು ಮನವಾ ತುಂಬಿದೆ
            ಒಲವು ಗೆಲುವು ಮನವಾ ತುಂಬಿದೆ

ಹೆಣ್ಣು : ಮುಳ್ಳಿನಲಿ ನರಳುತಿಹ ಸುಮವ ನೋಡಿದೆ ಕರುಣೆಯಲಿ ಸ್ವೀಕರಿಸಿ ಜೀವಾ ನೀಡಿದೆ
ಗಂಡು : ಕಣ್ಣೀರು ಬಿಸಿಯುಸಿರು ಇನ್ನೂ ಏತಕೆ ಹೂವೆಂದೂ ನಗಲೆಂದು ನನ್ನ ಬೇಡಿಕೆ
ಹೆಣ್ಣು : ನಿನ್ನ ಜೇನ ನುಡಿಯು ಇಂದು ನನ್ನಾ ಉಳಿಸಿದೆ
ಗಂಡು : ನೀ ತಂದ ಭಾಗ್ಯ ನನ್ನದಾಗಿದೆ ಒಲವು ಗೆಲುವು ಮನವಾ ತುಂಬಿದೆ
           ಒಲವು ಗೆಲುವು ಮನವಾ ತುಂಬಿದೆ
ಹೆಣ್ಣು  : ಸ್ನೇಹ ತೋರಿದೆ ನನ್ನ ಸೇರಿದೆ ಪ್ರೀತಿ ತುಂಬಿದೆ ಬಾಳು ಬೆಳಗಿದೆ.. ಓಓಓ
            ನೀ ತಂದ ಭಾಗ್ಯ ನನ್ನದಾಗಿದೆ ಒಲವು ಗೆಲುವು ಮನವಾ ತುಂಬಿದೆ
            ಒಲವು ಗೆಲುವು ಮನವಾ ತುಂಬಿದೆ

ಗಂಡು : ಇವನಿಂದು ಹಸು ಕಂದ ನಾಳೆ ಹಿರಿಯನು ಮುದಿತನದಿ ಆಧಾರ ನಮ್ಮಾ ಮರೆಯನು
ಹೆಣ್ಣು : ನಿಮ್ಮಂತೇ ಇವಳೆಂದು ನಾನು ಬಲ್ಲೆನು ಆನಂದ ಪಡಲೆಂದೇ ಇವಳಾ ಪಡೆದೆನು
ಗಂಡು : ನಿನ್ನಾ ಮಾತು ಕೇಳಿ ನನ್ನ ಹೃದಯಾ ತುಂಬಿದೆ
ಹೆಣ್ಣು : ನೀ ತಂದ ಭಾಗ್ಯ ನನ್ನದಾಗಿದೆ  ಒಲವು ಗೆಲುವು ಮನವಾ ತುಂಬಿದೆ
          ಒಲವು ಗೆಲುವು ಮನವಾ ತುಂಬಿದೆ
ಗಂಡು : ಸ್ನೇಹ ತೋರಿದೆ ನನ್ನ ಸೇರಿದೆ ಪ್ರೀತಿ ತುಂಬಿದೆ ಬಾಳು ಬೆಳಗಿದೆ.. ಓಓಓ
ಇಬ್ಬರು : ಲಲಲಲಾ ಲಲಲಲಾ ಲಲಲಲಾ ಆಆಆ.. ಆಆಆ... 
--------------------------------------------------------------------------------------------------------------

ತಾಯಿಗಿಂತ ದೇವರಿಲ್ಲ (೧೯೭೭) .......ಅಮ್ಮಾ ಎಂದರೆ
ಗೀತ ರಚನೆ : ಚಿ.ಉದಯಶಂಕರ್   ಸಂಗೀತ : ರಾಜನ್ - ನಾಗೇಂದ್ರ   ಗಾಯನ : ಎಸ್.ಜಾನಕಿ


ಅಮ್ಮಾ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ
ಎರಡಕ್ಷರದಲಿ ಏನಿದೆ ಶಕ್ತಿ ಹೇಳುವರಾರಮ್ಮಾ... ಹೇಳುವರಾರಮ್ಮಾ... ಅಮ್ಮಾ..  ಅಮ್ಮಾ

ತಾಯಿಗೆ ಮಿಂಚಿದ ದೇವರೇ ಇಲ್ಲಾ.....
ತಾಯಿಗೆ ಮಿಂಚಿದ ದೇವರೇ ಇಲ್ಲಾ ಎನ್ನುವರೂ ಎಲ್ಲಾ
ತಾಯಿಯ ಹಾಲಿನ ಅಮೃತವನ್ನು ಸವಿದವರೇ ಎಲ್ಲಾ
ಹೊನ್ನಿನ ಬೆಲೆಯ ಬಡವರಿಗಿಂತ ಬಲ್ಲವರೂ ಇಲ್ಲಾ
ತಾಯಿಯ ಆಸರೆ ತಬ್ಬಲಿಗಿಂತ ಬಯಸುವರಾರಿಲ್ಲಾ.. ಬಯಸುವರಾರಿಲ್ಲಾ
ಕoದನು ನುಡಿವ ಮೊದಲನೇ ಮಾತೇ ಅಮ್ಮಾ... ಅಮ್ಮಾ
ನೋವೋ ನಲಿವೋ ಹೊರಡುವ ದನಿಯೇ ಅಮ್ಮಾ.. ಅಮ್ಮಾ
ಅಮ್ಮಾ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ.. ಅಮ್ಮಾ ಅಮ್ಮಾ

ಎಂದೋ ಒಮ್ಮೆ ಕನಸಲೂ ಬಂದು ಕಂದಾ ಎನ್ನುವಳು
ಕಣ್ಣಲಿ ಕಣ್ಣ ಬೆರೆಸುವ ಮೊದಲೇ ಕರಗೇ ಹೋಗುವಳು
ಹoಬಲಿಸಿದರೂ ಬಾರಳು ಅವಳು ಬಯಕೆಯ ಸಲ್ಲಿಸಲು
ಕಂಬನಿ ಮಿಡಿದರೂ ಅಮ್ಮನ ಕಾಣೆನು ಎಂದೂ ಸನಿಹದೊಳು... ಎಂದೂ ಸನಿಹದೊಳು
ಅಮ್ಮನ ಕಾಣದ ಕಣ್ಣುಗೆಳೇಕೆ ನೀನೇ ಹೇಳಮ್ಮಾ..
ಅಮ್ಮನಿಗೇಕೇ ಕೋಪವೂ ಅರಿಯೇ ಹೇಳುವರಿಲ್ಲಮ್ಮಾ..
ಅಮ್ಮಾ ಎಂದರೆ ಮೈಮನವೆಲ್ಲಾ ಹೂವಾಗುವುದಮ್ಮಾ
ಎರಡಕ್ಷರದಲಿ ಏನಿದೆ ಶಕ್ತಿ ಹೇಳುವರಾರಮ್ಮಾ.. ಹೇಳುವರಾರಮ್ಮಾ... ಅಮ್ಮಾ..  ಅಮ್ಮಾ
ಅಮ್ಮಾ..  ಅಮ್ಮಾ ಅಮ್ಮಾ..  ಅಮ್ಮಾ ಅಮ್ಮಾ..  ಅಮ್ಮಾ
--------------------------------------------------------------------------------------------------------------------------

ತಾಯಿಗಿಂತ ದೇವರಿಲ್ಲ (೧೯೭೭) .......ಮದುವೆಯಾಗೋ ಹೆಣ್ಣೇ
ಸಂಗೀತ : ರಾಜನ್ - ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಜಾನಕಿ, ವಸಂತ

ಜಾನಕೀ  : ಮದುವೆಯಾಗು ಹೆಣ್ಣೇ ಬಿಗುಮಾನವೇಕೆ ಜಾಣೆ
              ಮದುವೆಯಾಗು ಹೆಣ್ಣೇ ಬಿಗುಮಾನವೇಕೆ ಜಾಣೆ
              ನಾಚಿಕೇ ಕಣ್ಣಲೀ ನೂರಾಸೇ ನಿನ್ನಲೀ
ವಸಂತ : ನಾಚಿಕೇ ಕಣ್ಣಲೀ ನೂರಾಸೇ ನಿನ್ನಲೀ
ಎಲ್ಲರು : ಮದುವೆಯಾಗು ಹೆಣ್ಣೇ ಬಿಗುಮಾನವೇಕೆ ಜಾಣೆ..
            ಮದುವೆಯಾಗು ಹೆಣ್ಣೇ...

ಜಾನಕೀ : ತಾಳಗಳು ಮೇಳಗಳೂ ಮಂತ್ರಗಳೂ ಸೇರಿ
ವಸಂತ : ನಾರಿಯರ ಆರತಿಯ ಹಾಡುಗಳ ಮೀರಿ
              ಹೇಳುವ ಕಾಲದಲಿ ಉಲ್ಲಾಸ ಎಲ್ಲಿ ಆ ಶುಭವೇಳೆಯಲೀ ಸಂತೋಷ ತೋರಿ
ಜಾನಕೀ : ಕಾಣದ ಕಾತರವೂ ಮೋಹದ ಸವಿ ನೋವೂ
              ಕಾಣದ ಕಾತರವೂ ಮೋಹದ ಸವಿ ನೋವೂ 
ಎಲ್ಲರು : ಹೊಸತನದ ವೈಭವವೂ ಹರುಷ ಹರುಷ ಅನುಕ್ಷಣವೂ
            ಮದುವೆಯಾಗು ಹೆಣ್ಣೇ ಬಿಗುಮಾನವೇಕೆ ಜಾಣೆ..
            ಮದುವೆಯಾಗು ಹೆಣ್ಣೇ ಬಿಗುಮಾನವೇಕೆ ಜಾಣೆ..
           ನಾಚಿಕೇ ಕಣ್ಣಲೀ ನೂರಾಸೇ ನಿನ್ನಲೀ
           ನಾಚಿಕೇ ಕಣ್ಣಲೀ ನೂರಾಸೇ ನಿನ್ನಲೀ
           ಮದುವೆಯಾಗು ಹೆಣ್ಣೇ ಬಿಗುಮಾನವೇಕೆ ಜಾಣೆ..
            ಮದುವೆಯಾಗು ಹೆಣ್ಣೇ...

ವಸಂತ : ಹಿರಿಯರೂ ಬಂದಾಗ          ಎಲ್ಲರು : ವಿನಯದಿಂದಿರು
ವಸಂತ : ಹಿರಿಯರು ಕಂಡಾಗ            ಎಲ್ಲರು :  ಪ್ರೀತಿಯ ತೋರು
ಜಾನಕೀ : ಹುಟ್ಟಿದ ಮನೆಗೆಂದೂ          ಎಲ್ಲರು : ಕೀರ್ತಿಯಾಗಿರೂ ...
ವಸಂತ : ಮೆಟ್ಟಿದ ಮನೆಯಲ್ಲಿ            ಎಲ್ಲರು : ಜೋಡಿಯಾಗಿರೂ            
              ಎಲ್ಲರೂ ಹೊಗಳಲಿ ಗುಣವತೀ ಎನ್ನಲಿ
              ಎಲ್ಲರೂ ಹೊಗಳಲಿ ಗುಣವತೀ ಎನ್ನಲಿ
ಎಲ್ಲರು : ಮುತ್ತಂಥ ಹೆಣ್ಣೆಂದೂ ನಿನ್ನವರೂ  ಹೇಳಲೀ ..
            ಮದುವೆಯಾಗು ಹೆಣ್ಣೇ ಬಿಗುಮಾನವೇಕೆ ಜಾಣೆ..
            ಮದುವೆಯಾಗು ಹೆಣ್ಣೇ ಬಿಗುಮಾನವೇಕೆ ಜಾಣೆ..
           ನಾಚಿಕೇ ಕಣ್ಣಲೀ ನೂರಾಸೇ ನಿನ್ನಲೀ
           ನಾಚಿಕೇ ಕಣ್ಣಲೀ ನೂರಾಸೇ ನಿನ್ನಲೀ
           ಮದುವೆಯಾಗು ಹೆಣ್ಣೇ ಬಿಗುಮಾನವೇಕೆ ಜಾಣೆ..
--------------------------------------------------------------------------------------------------------------------------

ತಾಯಿಗಿಂತ ದೇವರಿಲ್ಲ (೧೯೭೭) - ನಗಲಾರದೇ ಅಳಲಾರದೇ
ಸಂಗೀತ : ರಾಜನ್ - ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಜಾನಕಿ, 

ಜಯಂತಿ : ನಗಲಾರದೇ ಅಳಲಾರದೇ ಜೀವ ನೋವಲಿ ಬೆಂದಿದೆ
               ನಗಲಾರದೇ ಅಳಲಾರದೇ ಜೀವ ನೋವಲಿ ಬೆಂದಿದೆ
               ಉಳಿವಾಸೇ ದೂರಕೆ ಓಡಿದೆ ಬಳಿ ಸಾವು ಬಾರದೇ ಕಾಡಿದೇ
               ಉಳಿವಾಸೇ ದೂರಕೆ ಓಡಿದೆ ಬಳಿ ಸಾವು ಬಾರದೇ ಕಾಡಿದೇ
               ನಗಲಾರದೇ ಅಳಲಾರದೇ ಜೀವ ನೋವಲಿ ಬೆಂದಿದೆ
               ನಗಲಾರದೇ ಅಳಲಾರದೇ ಜೀವ ನೋವಲಿ ಬೆಂದಿದೆ 

ಜಯಂತಿ : ಪತಿದೇವರ ಮೊಗ ಕಾಣುವ ಸೌಭಾಗ್ಯ ಉಳಿಯದೇ ನೊಂದೆನೂ 
               ಮಗಳೋಡುತ ಬಳಿ ಬಂದರೂ ನಾ ಅಮ್ಮನಾಗದೇ ಹೋದೆನು 
               ಹೇಗೆ ಮೌನದಿ ಬಾಳಲಿ ಹೇಗೆ ನಾ ನಿಜ ಹೇಳಲೀ.. ನಿಜ ಹೇಳಲೀ ... ನಿಜ ಹೇಳಲೀ  
               ನಗಲಾರದೇ ಅಳಲಾರದೇ ಜೀವ ನೋವಲಿ ಬೆಂದಿದೆ
               ಉಳಿವಾಸೇ ದೂರಕೆ ಓಡಿದೆ ಬಳಿ ಸಾವು ಬಾರದೇ ಕಾಡಿದೇ
               ನಗಲಾರದೇ ಅಳಲಾರದೇ ಜೀವ ನೋವಲಿ ಬೆಂದಿದೆ
               ನಗಲಾರದೇ ಅಳಲಾರದೇ
               
ಜಯಂತಿ : ಬಳಿ ಸೇರಿದ ಗಿಳಿಯಾದೆನೇ ಹಾರಾಡಿ ದಾರಿ ಕಾಣೇನೇ 
                ಮನದಾಸೆಯ ವೇದನೇ ನಾ ಹೇಳಲಾರದೇ ಸೋತೆನೇ 
                ಯಾರ ಕಾಲಿಗೇ ಬೀಳಲಿ  ಯಾರ ಆಸರೇ ಬೇಡಲಿ.. ನಾ ಬೇಡಲಿ ... ಯಾರ ಬೇಡಲಿ  
               ನಗಲಾರದೇ ಅಳಲಾರದೇ ಜೀವ ನೋವಲಿ ಬೆಂದಿದೆ
               ಉಳಿವಾಸೇ ದೂರಕೆ ಓಡಿದೆ ಬಳಿ ಸಾವು ಬಾರದೇ ಕಾಡಿದೇ
               ನಗಲಾರದೇ ಅಳಲಾರದೇ ಜೀವ ನೋವಲಿ ಬೆಂದಿದೆ
               ಜೀವ ನೋವಲಿ ಬೆಂದಿದೆ ... ಜೀವ ನೋವಲಿ ಬೆಂದಿದೆ .. ಜೀವ ನೋವಲಿ ಬೆಂದಿದೆ
--------------------------------------------------------------------------------------------------------------------------

No comments:

Post a Comment