63. ತಾಯಿಯ ಮಡಿಲಲ್ಲಿ (೧೯೮೧)


ತಾಯಿಯ ಮಡಿಲಲ್ಲಿ ಚಿತ್ರದ ಹಾಡುಗಳು 
  1. ಅಲ್ಲೊಂದು ಲೋಕವುಂಟು ಇಲ್ಲೊಂದು ದಾರಿಯುಂಟು
  2. ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
  3. ಕನ್ನಡದ ರವಿ ಮೂಡಿ ಬಂದ ಮುನ್ನಡೆವ ಬೆಳಕನ್ನೆ ತಂದ
  4. ಏನೆಂದು ಹಾಡಲಿ ನಾ ನಿನ್ನ ಕೊಳಳಾಗೇ ನೀ ನನ್ನ ಉಸಿರಾಗೇ
  5. ಅಂದಗಾರ ಓ.. ಅಂದಗಾರ 
ತಾಯಿಯ ಮಡಿಲಲ್ಲಿ (೧೯೮೧) .....ಅಲ್ಲೊಂದು ಲೋಕವುಂಟು
ಸಂಗೀತ : ಸತ್ಯಂ ಗೀತ ರಚನೆ : ಚಿ.ಉದಯಶಂಕರ್ ಗಾಯನ :ಪಿ.ಸುಶೀಲಾ ಮತ್ತು ಕೋರಸ್

ಹೆಣ್ಣು : ಅಲ್ಲೊಂದು ಲೋಕವುಂಟು ಇಲ್ಲೊಂದು ದಾರಿಯುಂಟು
          ಅಲ್ಲೊಂದು ಲೋಕವುಂಟು ಇಲ್ಲೊಂದು ದಾರಿಯುಂಟು
          ಒಂದಾಗಿ ನಾವು ಹೋದರೆ ನಮಗೆ ಎಂದೆಂದೂ ಆನಂದವೇ
          ನಮಗೆ ಎಂದೆಂದೂ ಆನಂದವೇ
ಕೋರಸ್  :   ಲಲಲ......ಲಲಲ......  ಲಲಲ......ಲಲಲ......

ಹೆಣ್ಣು : ಬಡತನದಾ ಮಾತೇ ಇಲ್ಲ ಹಸಿವೆಂಬುದು ಅಲ್ಲಿ ಇಲ್ಲ
          ಬಡತನದಾ ಮಾತೇ ಇಲ್ಲ ಹಸಿವೆಂಬುದು ಅಲ್ಲಿ ಇಲ್ಲ
          ಅಲ್ಲಿರಲು ನಮಗೆ ಎಂದೆಂದೂ ತಮ್ಮಾ....!
         ಕಣ್ಣೀರು ಚಿಂತೆಯಿಲ್ಲಾ    ತಮ್ಮಾ ಕಣ್ಣೀರು ಚಿಂತೆಯಿಲ್ಲಾ
        ಅಲ್ಲೊಂದು ಲೋಕವುಂಟು ಇಲ್ಲೊಂದು ದಾರಿಯುಂಟು
        ಒಂದಾಗಿ ನಾವು ಹೋದರೆ ನಮಗೆ ಎಂದೆಂದೂ ಆನಂದವೇ
        ನಮಗೆ ಎಂದೆಂದೂ ಆನಂದವೇ
ಕೋರಸ್:    ಲಲಲ......ಲಲಲ......  ಲಲಲ......ಲಲಲ......

ಹೆಣ್ಣು : ಇಲ್ಲಾರೂ ಬಂಧುಗಳಿಲ್ಲ ನೆರಳನ್ನು ನೀಡುವರಿಲ್ಲ
         ಇಲ್ಲಾರೂ ಬಂಧುಗಳಿಲ್ಲ ನೆರಳನ್ನು ನೀಡುವರಿಲ್ಲ ಇಲ್ಲಿರಲೂ ನಮಗೆ ಎಂದೆಂದೂ ತಂಗಿ.......!
         ಈ ನೋವೂ ಮುಗಿಯೋದಿಲ್ಲ ತಂಗಿ ಈ ನೋವೂ ಮುಗಿಯೋದಿಲ್ಲ
        ಅಲ್ಲೊಂದು ಲೋಕವುಂಟು ಇಲ್ಲೊಂದು ದಾರಿಯುಂಟು
        ಒಂದಾಗಿ ನಾವು ಹೋದರೆ ನಮಗೆ ಎಂದೆಂದೂ ಆನಂದವೇ
        ನಮಗೆ ಎಂದೆಂದೂ ಆನಂದವೇ
        ಕೈ ಚಾಚಿ ನಮ್ಮನ್ನೆಲ್ಲ ನಮ್ಮಮ್ಮ ಕೂಗಿಹಳಲ್ಲಾ
       ಕೈ ಚಾಚಿ ನಮ್ಮನ್ನೆಲ್ಲ ನಮ್ಮಮ್ಮ ಕೂಗಿಹಳಲ್ಲಾ
       ಆ ತಾಯ ಮಡಿಲ ಸೇರೇ ಈಗ ಬನ್ನೀ ಹೋಗೋಣ ಎಲ್ಲಾ
      ಈಗ ಬನ್ನೀ ಹೋಗೋಣ ಎಲ್ಲಾ
--------------------------------------------------------------------------------------------------------------------------

ತಾಯಿಯ ಮಡಿಲಲ್ಲಿ (೧೯೮೧).....ಅಮ್ಮ ನೀನು ನಕ್ಕರೆ
ಸಂಗೀತ : ಸತ್ಯಂ ಗೀತ ರಚನೆ : ಚಿ.ಉದಯಶಂಕರ್ ಗಾಯನ : ಡಾ.ಎಸ್.ಪಿ.ಬಿ, ಎಸ್.ಜಾನಕಿ ಮತ್ತು ಕೋರಸ್


ಕೋರಸ್: ಅಮ್ಮ ನೀ ನಗು ಇನ್ನೂ ಇನ್ನೂ ನಗು ಅಮ್ಮ ನೀ ನಗು ಇನ್ನೂ ಇನ್ನೂ ನಗು
ಹೆಣ್ಣು : ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಕೋರಸ್:   ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಹೆಣ್ಣು :  ಸಿಡುಕದೆ ನಿನ್ನ ಮಕ್ಕಳ ಮೇಲೆ ತೋರಬಾರದೇ ಅಕ್ಕರೆ
ಗಂಡು : ಸಿಡುಕದೆ ನಿನ್ನ ಮಕ್ಕಳ ಮೇಲೆ ತೋರಬಾರದೇ ಅಕ್ಕರೆ
            ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಕೋರಸ್:  ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
                ಆ....ಆ...ಲಲಲ....ಲಲಲ....ಲಲಲ....ಲಲ....ಲಲ....

ಹೆಣ್ಣು :  ತಿಂಗಳಿಗೊಮ್ಮೆ ಸಂಬಳ ದಿನವು ನಾಳೆಯ ಗತಿಯ ಬಲ್ಲೆವು ನಾವು
ಗಂಡು: ಆಸೆಯನಿoದು ತಡೆಯದೆ ಹೋದೆವು ಎಂದಿಗೂ ಹೀಗೆ ತಪ್ಪನು ಮಾಡೆವು
ಹೆಣ್ಣು : ಕೋಪವ ಬಿಡದೇ ನಾವಿಂದು ನಿನ್ನನ್ನು ಬಿಡೆವು
ಗಂಡು: ಕೋಪವ ಬಿಡದೇ ನಾವಿಂದು ನಿನ್ನನ್ನು ಬಿಡೆವು
ಹೆಣ್ಣು : ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
          ಸಿಡುಕದೆ ನಿನ್ನ ಮಕ್ಕಳ ಮೇಲೆ ತೋರಬಾರದೇ ಅಕ್ಕರೆ
ಕೋರಸ್:  ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಕೋರಸ್:  ಆ....ಆ...ಲಲಲ....ಲಲಲ....ಲಲಲ....ಲಲ....ಲಲ....

ಹೆಣ್ಣು :  ಮುರುಕಲು ಮನೆಯೂ ನಮಗಿರಲೇನೂ ಹರುಕಲು ಬಟ್ಟೆಯ ಧರಿಸಿದರೇನು
ಕೋರಸ್:  ಲಲಲ....ಲಲಲ....ಲಲಲ....ಲಲ....ಲಲ....
ಗಂಡು: ಗಂಜಿಯ ಕುಡಿಸಿ ಬೆಳೆಸಿದರೇನು ನೀರನೇ ಕುಡಿಯುತ ಬದುಕಿದರೇನು
ಹೆಣ್ಣು :  ಅಮ್ಮನ ಪ್ರೀತಿ ವಾತ್ಸಲ್ಯ ನಮಗಿಲ್ಲವೇನು
ಗಂಡು : ಅಮ್ಮನ ಪ್ರೀತಿ ವಾತ್ಸಲ್ಯ ನಮಗಿಲ್ಲವೇನು
ಹೆಣ್ಣು : ಅಮ್ಮ..ಓ..ಅಮ್ಮ
          ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಕೋರಸ್:  ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
ಗಂಡು :  ಸಿಡುಕದೆ ನಿನ್ನ ಮಕ್ಕಳ ಮೇಲೆ ತೋರಬಾರದೇ ಅಕ್ಕರೆ
             ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
             ಅಮ್ಮ ನೀನು ನಕ್ಕರೆ ನಮ್ಮ ಬಾಳೆ ಸಕ್ಕರೆ
----------------------------------------------------------------------------------------------------------------------

ತಾಯಿಯ ಮಡಿಲಲ್ಲಿ (1981) - ಕನ್ನಡದ ರವಿ ಮೂಡಿ ಬಂದ
ಸಾಹಿತ್ಯ : ಸಿ.ವಿ.ಶಿವಶಂಕರ  ಸಂಗೀತ: ಸತ್ಯಮ್  ಗಾಯನ: ಎಸ್.ಪಿ.ಬಿ. & ಎಸ.ಜಾನಕೀ 


ಗಂಡು : ಕನ್ನಡದ ರವಿ ಮೂಡಿ ಬಂದ ಮುನ್ನಡೆವ ಬೆಳಕನ್ನೆ ತಂದ ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಹೆಣ್ಣು : ಕನ್ನಡದ ರವಿ ಮೂಡಿ ಬಂದ ಮುನ್ನಡೆವ ಬೆಳಕನ್ನೆ ತಂದ ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ :  ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ

ಕೋರಸ್ : ಆಆಆಅ... ಆಆಆ
ಗಂಡು : ನಮ್ಮ ನಾಡ ಹಿರಿಯರ ಪೌರುಷದ ತ್ಯಾಗದಿಂದ ಕೀರ್ತಿಶಿಖರ ಮುಟ್ಟಿತು ಕನ್ನಡಿಗರ ಸಂತಸ,
ಕೋರಸ್ :  ಕನ್ನಡಿಗರ ಸಂತಸ
ಗಂಡು : ನಮ್ಮ ನಾಡ ಹಿರಿಯರ ಪೌರುಷದ ತ್ಯಾಗದಿಂದ ಕೀರ್ತಿಶಿಖರ ಮುಟ್ಟಿತು ಕನ್ನಡಿಗರ ಸಂತಸ,
ಹೆಣ್ಣು : ಚಿಕ್ಕ ಚಿಕ್ಕ ಭಾಗವಾಗಿ ಚದುರಿದ್ದ ನಾಡಿದು.. ಚಿಕ್ಕ ಚಿಕ್ಕ ಭಾಗವಾಗಿ ಚದುರಿದ್ದ ನಾಡಿದು
ಗಂಡು : ಒಂದಾಗಿ ಕೂಡಿತು ಕರ್ನಾಟಕವಾಯಿತು,
ಕೋರಸ್ :  ಕರ್ನಾಟಕವಾಯಿತು
ಎಲ್ಲರೂ : ಕನ್ನಡದ ರವಿ ಮೂಡಿ ಬಂದ ಮುನ್ನಡೆವ ಬೆಳಕನ್ನೆ ತಂದ ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ :  ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ

ಗಂಡು : ವೀರರೆಲ್ಲ ವೀರಗೀತೆ ಹಾಡಿದಂಥ ನಾಡಿದು ಸಿರಿ ತಂದ ಅರಸರು ಮೆರೆದಂಥ ನಾಡಿದು,
ಕೋರಸ್ :  ಮೆರೆದಂಥ ನಾಡಿದು
ಗಂಡು : ವೀರರೆಲ್ಲ ವೀರಗೀತೆ ಹಾಡಿದಂಥ ನಾಡಿದು ಸಿರಿ ತಂದ ಅರಸರು ಮೆರೆದಂಥ ನಾಡಿದು
ಹೆಣ್ಣು : ಶ್ರೀಗಂಧ ಸೌಗಂಧ ಕಂಪಿರುವ ಬೀಡಿದು... ಶ್ರೀಗಂಧ ಸೌಗಂಧ ಕಂಪಿರುವ ಬೀಡಿದು
ಗಂಡು : ಶಿಲ್ಪಕಲೆಯ ಜೀವಂತ ಸ್ವರ್ಗವಾದ ಗೂಡಿದು, ಸ್ವರ್ಗವಾದ ಗೂಡಿದು
ಎಲ್ಲರೂ : ಕನ್ನಡದ ರವಿ ಮೂಡಿ ಬಂದ ಮುನ್ನಡೆವ ಬೆಳಕನ್ನೆ ತಂದ ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ :  ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ ಲಲಲ, ಲಲಲ ಲಲಲ, ಲಲಲ ಲಲಲ, ಲಾ ಲಾ ಲಾ

ಹೆಣ್ಣು : ನಾಟ್ಯರಾಣಿ ಶಾಂತಲೆಯ ಕೀರ್ತಿ ಕಂಡ ಕನ್ನಡ ವೀರರಾಣಿ ಚೆನ್ನಮ್ಮನ ನೆನಪು ಕೊಡುವ ಕನ್ನಡ
         ನಾಟ್ಯರಾಣಿ ಶಾಂತಲೆಯ ಕೀರ್ತಿ ಕಂಡ ಕನ್ನಡ ವೀರರಾಣಿ ಚೆನ್ನಮ್ಮನ ನೆನಪು ಕೊಡುವ ಕನ್ನಡ
ಗಂಡು : ರನ್ನ ಪಂಪ ಕವಿಗಳ ಭವ್ಯ ಕಾವ್ಯ ಕನ್ನಡ... ರನ್ನ ಪಂಪ ಕವಿಗಳ ಭವ್ಯ ಕಾವ್ಯ ಕನ್ನಡ
            ಜೀವನದಿ ನಲಿಯುತಿಹ ಪುಣ್ಯಭೂಮಿ ಕನ್ನಡ,
ಕೋರಸ್ :  ಪುಣ್ಯಭೂಮಿ ಕನ್ನಡ
ಎಲ್ಲರೂ : ಕನ್ನಡದ ರವಿ ಮೂಡಿ ಬಂದ ಮುನ್ನಡೆವ ಬೆಳಕನ್ನೆ ತಂದ ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
ಕೋರಸ್ :  ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ ರಾಜ್ಯೋತ್ಸವ ನಮ್ಮ ರಾಜ್ಯೋತ್ಸವ
-------------------------------------------------------------------------------------------------------------------------

ತಾಯಿಯ ಮಡಿಲಲ್ಲಿ (೧೯೮೧).....ಏನೆಂದು ಹಾಡಲಿ

ಸಂಗೀತ : ಸತ್ಯಂ  ಗೀತ ರಚನೆ : ಚಿ.ಉದಯಶಂಕರ್  ಗಾಯನ : ಎಸ್.ಜಾನಕಿ


ಆ........ಆ.........ಏನೆಂದು ಹಾಡಲಿ ನಾ ನಿನ್ನ ಕೊಳಲಾಗಿ ನೀ ನನ್ನ ಉಸಿರಾದೇ
ನೀ ಮನಸು ಮಾಡದೇ ಬೆರಳಿಂದ ನುಡಿಸದೇ
ಏನೆಂದು ಹಾಡಲಿ  ನಾ ನಿನ್ನ ಕೊಳಲಾಗಿ ನೀ ನನ್ನ ಉಸಿರಾದೇ
ನೀ ಮನಸು ಮಾಡದೇ ಬೆರಳಿಂದ ನುಡಿಸದೇ ಏನೆಂದು ಹಾಡಲಿ .......

(ಆಆಆ... ಆಹ್ಹ ಆಹ್ಹ ಆಹ್ಹ ಆಆಆಆ  )
ಮನೆತನಕ ನೀ ಬಂದೆ ಮನವನ್ನು ಸೆಳೆದೆ  ಮೃದುವಾದ ಮಾತಾಡಿ ಮನದಲ್ಲಿ ನಿಂತೆ
ಮನೆತನಕ ನೀ ಬಂದೆ ಮನವನ್ನು ಸೆಳೆದೆ  ಮೃದುವಾದ ಮಾತಾಡಿ ಮನದಲ್ಲಿ ನಿಂತೆ
ಮಾನಿನಿಯ.....ಮನದಾಸೆಯನು...
ಮಾನಿನಿಯ ಮನದಾಸೆಯನು  ಅರಿತು ಬೆರೆತು ಪೂರೈಸ ಬಂದವನೇ
ಏನೆಂದು ಹಾಡಲಿ .......

(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ   (ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ  (ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
(ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ  (ಲಾಲಾಲಾಲ್ಲಲ್ಲಲಾ ) ಅಹ್ಹಹ್ಹಹ್ಹ
ಬಿಸಿಲಲ್ಲಿ ನೆರಳಾಗಿ ಹಿತವನ್ನು ತಂದು ಇರುಳಲ್ಲಿ ಬೆಳಕಾಗಿ ಕಣ್ತುಂಬಿ ಬಂದು
ಬಿಸಿಲಲ್ಲಿ ನೆರಳಾಗಿ ಹಿತವನ್ನು ತಂದು  ಇರುಳಲ್ಲಿ ಬೆಳಕಾಗಿ ಕಣ್ತುಂಬಿ ಬಂದು
ಮಾಧವನೆ.....ಮಧುಸೂದನನೇ
ಮಾಧವನೆ ಮಧುಸೂದನನೇ ಬಯಸಿ ವರಿಸಿ ಬಳಿಯಲ್ಲಿ ನಿಂತಿರಲಿ
ಏನೆಂದು ಹಾಡಲಿ  ನಾ ನಿನ್ನ ಕೊಳಲಾಗಿ ನೀ ನನ್ನ ಉಸಿರಾದೇ
ನೀ ಮನಸು ಮಾಡದೇ ಬೆರಳಿಂದ ನುಡಿಸದೇ
ಏನೆಂದು ಹಾಡಲಿ ......ಆಆಆಆ... ಆಆಆಅ
--------------------------------------------------------------------------------------------------------------------------

ತಾಯಿಯ ಮಡಿಲಲ್ಲಿ (1981) - ಅಂದಗಾರ ಓ.. ಅಂದಗಾರ
ಸಂಗೀತ: ಸತ್ಯಮ್ ಸಾಹಿತ್ಯ : ಚಿ.ಉದಯಶಂಕರ ಗಾಯನ: ಎಸ್.ಪಿ.ಬಿ., ಎಸ.ಜಾನಕೀ


ಹೆಣ್ಣು : ಆಆಆಅ.. ಆಆಆಆ.. ನನನನ್ ... 
         ಅಂದಗಾರ ಅಂದಗಾರ ನಂಬಬ್ಯಾಡ ಅವನೂ ಮೋಸಗಾರ
         ಅಂದಗಾರ (ಹ್ಹೂ ) ಓ ಅಂದಗಾರ (ಹ್ಹಾ ) ನಂಬಬ್ಯಾಡ ಅವನೂ ಮೋಸಗಾರ (ಹ್ಹಾ ) 
         ಮರೆಯ ತುಂಬಾ ಸೊಗಸುಗಾರ ಕರಿಯ ಒಳ್ಳೇ ಆಟಗಾರ 
         ಇವನು ಧೀರ ಅವನು ವೀರ ಇವನೊಬ್ಬನೇ  ಹಾಡುಗಾರ 
 ಗಂಡು : ಹ್ಹಾಂ .... ನನನನನ್ ವ್ವಾವ್ ವಾವ್ವವ ವಾವ್ವವ ದನಿ  ವಾವ್ವವ ವಾವ್ವವ ಸನಿ ವಾವ್ವವ ವಾವ್ವವ
            
ಗಂಡು : (ಹೇ.. ) ಕಣ್ಣಿಂದ ಹೂಬಾಣ ಎಸೆದು ನನ್ನ ಕೊಲ್ಲಬ್ಯಾಡ (ಅಹ್ಹಹ್ಹಹ್ಹಹ್ಹ) 
           ಅಕ್ಕಪಕ್ಕ ಇರುವರನ್ನೂ ನಂಬಿ ನೀನೂ ಕೆಡಬ್ಯಾಡ (ಹ್ಹಾಂ .. ಆಂ ) 
           ಕಣ್ಣಿಂದ ಹೂಬಾಣ ಎಸೆದು ನನ್ನ ಕೊಲ್ಲಬ್ಯಾಡ (ಅಹ್ಹಹ್ಹಹ್ಹಹ್ಹ)  
           ಅಕ್ಕಪಕ್ಕ ಇರುವರನ್ನೂ ನಂಬಿ ನೀನೂ ಕೆಡಬ್ಯಾಡ
           ಹಿಡಿದ ನನ್ನ ಕೈಯ್ಯನ್ನ ಚಿನ್ನ ಇನ್ನೂ ಬೀಡಬ್ಯಾಡ 
           ಹಿಡಿದ ನನ್ನ ಕೈಯ್ಯನ್ನ ಚಿನ್ನ ಇನ್ನೂ ಬೀಡಬ್ಯಾಡ 
ಹೆಣ್ಣು : ಅಂದಗಾರ (ಹ್ಹಾ ) ಓ ಅಂದಗಾರ (ಹ್ಹಾ ) ನಂಬಬ್ಯಾಡ ಅವನೂ ಮೋಸಗಾರ 
          ನಂಬಬ್ಯಾಡ ಅವನೂ ಮೋಸಗಾರ (ಹ್ಹಾ ) ಆಆಆ ಆಹ್ಹ ಆಆಹ್ಹ ಆಆಹ್ಹ 

ಗಂಡು : ನನಗಾಗಿ ಒಂದು ಗುಟುಕೂ ಗಟಗಟನೇ ಕುಡಿದು ಬೀಡೂ (ಆಹ್ ಆಹ್ ಹೇ.. ) 
            ಒಂದುಬಾರಿ ಖಾರವಾದ ಕಂಬಿ ಸಾಸೂ ತಿಂದು ಬೀಡೂ (ಆಹ್ಹ್ ಆಹ್ಹ್ ಖಾರಾ )
           ನನಗಾಗಿ ಒಂದು ಗುಟುಕೂ ಆಹ್  ಗಟಗಟನೇ ಕುಡಿದು ಬೀಡೂ (ಆ ಆ ಆ .. ) 
           ಒಂದುಬಾರಿ ಖಾರವಾದ ಕಂಬಿ ಸಾಸೂ ತಿಂದು ಬೀಡೂ (ಆಹ್ಹ್ ಆಹ್ಹ್ ಖಾರಾ )
          ಇವರು ಬಿಟ್ಟು ನನ್ನ ಹಿಂದೆ ಚಿನ್ನ ಓಡಿ ಬಂದು ಬೀಡೂ (ಹ್ಹಾ.. )
          ಇವರು ಬಿಟ್ಟು ನನ್ನ ಹಿಂದೆ ಚಿನ್ನ ಓಡಿ ಬಂದು ಬೀಡೂ  
ಹೆಣ್ಣು : ಅಂದಗಾರ (ಹ್ಹಾ ) ಓ ಅಂದಗಾರ (ಹ್ಹಾ ) ನಂಬಬ್ಯಾಡ ಅವನೂ ಮೋಸಗಾರ 
         ಮರೆಯ ತುಂಬಾ ಸೊಗಸುಗಾರ ಕರಿಯ ಒಳ್ಳೇ ಆಟಗಾರ 
         ಇವನು ಧೀರ ಅವನು ವೀರ ಇವನೊಬ್ಬನೇ  ಹಾಡುಗಾರ 
         ಅಂದಗಾರ ಓ ಅಂದಗಾರ  ನಂಬಬ್ಯಾಡ ಅವನೂ ಮೋಸಗಾರ 
          ನಂಬಬ್ಯಾಡ ಅವನೂ ಮೋಸಗಾರ  ಆಆಆ ಆಹ್ಹ ಆಆಹ್ಹ ಆಆಹ್ಹ 
--------------------------------------------------------------------------------------------------------------------------

No comments:

Post a Comment