66. ಈ ಜೀವ ನಿನಗಾಗಿ (1986)



ಈ ಜೀವ ನಿನಗಾಗಿ ಚಲನಚಿತ್ರದ ಹಾಡುಗಳು 
  1. ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ
  2. ಮನ್ನಿಸು ಎಂದೊಡನೇ 
  3. ಪ್ರಿತ್ರಿಯಿಂದ ಏನೇ ಕೇಳು 
  4. ಅಮ್ಮ ಅಮ್ಮ (ಹೆಣ್ಣು)
ಈ ಜೀವ ನಿನಗಾಗಿ (1986) - ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ
ಸಂಗೀತ: ವಿಜಯಾನಂದ, ಸಾಹಿತ್ಯ: ಚಿ.ಉದಯಶಂಕರ್ ಗಾಯನ : ಕೆ.ಜೆ.ಯೇಸುದಾಸ್

ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ ಅಳುವ ದನಿಯಿಂದ
ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ ಅಳುವ ದನಿಯಿಂದ

ಅಳುವ ಕಂದನ ಮುದ್ದಾದ ತುಟಿಗೆ ಮುತ್ತನು ಕೊಟ್ಟವಳು
ನಾನೆ ನಿನ್ನ ಅಮ್ಮ ಎಂದು ಲಾಲಿ ಹಾಡಿದಳು
ಅಮ್ಮ ಲಾಲಿ ಹಾಡಿದಳು, ಅಮ್ಮ ಲಾಲಿ ಹಾಡಿದಳು
ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ ಅಳುವ ದನಿಯಿಂದ

ಅಮ್ಮನ ಮನಸನು ಮಾಡಿದ ದೇವರು ಮಲ್ಲಿಗೆ ಹೂವಿಂದ
ಅರಳಿದ ಹೂವಿನ ಮನಸನು ತುಂಬಿದ ಮಮತೆಯ ಕಂಪಿಂದ
ಅಂದದ ಕಣ್ಣಲಿ ತಂಪನು ತುಂಬಿದ ಚಂದ್ರನ ಬೆಳಕಿಂದ
ಪ್ರೇಮದ ಮಾತಲಿ ರುಚಿಯ ತುಂಬಿದ ಸಿಹಿಯ ಜೇನಿಂದ
ಆನಂದ ತುಂಬಿದರೂ ಅಮ್ಮ ಎನ್ನುವೆ
ನೋವಿಂದ ನರಳಿದರೂ ಅಮ್ಮ ಎನ್ನುವೆ
ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ ಅಳುವ ದನಿಯಿಂದ

ತನ್ನ ಮಡಿಲ ತೊಟ್ಟಿಲಿನಲ್ಲಿ ಮಲಗಿಸಿ ತೂಗುವಳು
ನೀಲಾಕಾಶದಿ ಚಂದ ಮಾಮನ ತೋರಿಸಿ ನಗಿಸುವಳು
ತನ್ನ ವೇದನೆ ಏನೇ ಇರಲಿ ಯಾರಿಗು ತೋರಿಸಳು
ನಗುವ ಮಗುವ ನೋಡುತ ಎಲ್ಲ ನೋವ ಮರೆಯುವಳು
ಅಮ್ಮನಿಗೆ ಮಿಗಿಲಾದ ದೇವರು ಯಾರಿಲ್ಲ
ಸಹನೆಯಲಿ ಅಮ್ಮನಿಗೆ ಸರಿಸಮರಾರಿಲ್ಲ
ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ ಅಳುವ ದನಿಯಿಂದ
ಅಳುವ ಕಂದನ ಮುದ್ದಾದ ತುಟಿಗೆ ಮುತ್ತನು ಕೊಟ್ಟವಳು
ನಾನೆ ನಿನ್ನ ಅಮ್ಮ ಎಂದು ಲಾಲಿ ಹಾಡಿದಳು
ಅಮ್ಮ ಲಾಲಿ ಹಾಡಿದಳು, ಅಮ್ಮ ಲಾಲಿ ಹಾಡಿದಳು
ಅಮ್ಮ ಅಮ್ಮ ಅನ್ನೋ ಮಾತು ಬಂತು ಎಲ್ಲಿಂದ
ಭೂಮಿಗೆ ಬಂದ ಮೊದಲನೆ ಕಂದನ ಅಳುವ ದನಿಯಿಂದ
------------------------------------------------------------------------------------------------------------------

ಈ ಜೀವ ನಿನಗಾಗಿ (1986) - ಮನ್ನಿಸು ಎಂದೊಡನೇ 
ಸಂಗೀತ: ವಿಜಯಾನಂದ, ಸಾಹಿತ್ಯ: ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ, ಎಸ್.ಜಾನಕೀ 



---------------------------------------------------------------------------------------------------------------

ಈ ಜೀವ ನಿನಗಾಗಿ (1986) - ಪ್ರಿತ್ರಿಯಿಂದ ಏನೇ ಕೇಳು 
ಸಂಗೀತ: ವಿಜಯಾನಂದ, ಸಾಹಿತ್ಯ: ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ 



---------------------------------------------------------------------------------------------------------------

ಈ ಜೀವ ನಿನಗಾಗಿ (1986) - ಅಮ್ಮ ಅಮ್ಮ (ಹೆಣ್ಣು)
ಸಂಗೀತ: ವಿಜಯಾನಂದ, ಸಾಹಿತ್ಯ: ಚಿ.ಉದಯಶಂಕರ್ ಗಾಯನ : ಬೇಬಿ ಶಾಲಿನಿ 



---------------------------------------------------------------------------------------------------------------

No comments:

Post a Comment