ಕನಸಲು ನೀನೇ ಮನಸಲು ನೀನೇ ಚಲನಚಿತ್ರದ ಹಾಡುಗಳು
- ಹಾಡು ಎಂದ ಕೂಡಲೆ ಹಾಡದು ಯಾವ ಕೋಗಿಲೆ
- ದಿಲರುಬಾ ಜಿಗದದಂಜಿಗ
- ಪ್ರೇಮದೇವಿ ಭೂಮಿಗೆಲ್ಲಾ ನೀನು
- ಅನುರಾಗದ ಅಲೆಮೇಲೆ
- ತಾನ್ ತಾನ್ ತಾನ್ ಓ ನನ್ನ ನಲ್ಲೆ
- ಚಂದನ ಸಿರಿ ಚಂದನ
- ಯಾವೂರ್ ಸುಬ್ಬೀ ಯಾವೂರ್ ಸುಬ್ಬೀ
- ಅನುರಾಗದ ಈ ಲೋಕ
ಕನಸಲೂ ನೀನೆ ಮನಸಲು ನೀನೆ (1998) - ಹಾಡು ಎಂದ ಕೂಡಲೆ ಹಾಡದು ಯಾವ ಕೋಗಿಲೆ
ಸಂಗೀತ: ಚೈತನ್ಯ(ಎಲ್.ಎನ್.ಶಾಸ್ತ್ರಿ) ಸಾಹಿತ್ಯ : ಕೆ. ಕಲ್ಯಾಣ್ ಗಾಯಕರು: ಡಾ|| ಎಸ್. ಪಿ. ಬಾಲಸುಬ್ರಹ್ಮಣ್ಯಂ
ಹಾಡು ಎಂದ ಕೂಡಲೆ ಹಾಡದು ಯಾವ ಕೋಗಿಲೆ
ಸ್ನೇಹದ ಚೈತ್ರದಲಿ, ಚಿಗುರುವ ಆಸೆಯಲಿ
ಪ್ರೀತಿಯ ಮಧುರ ಗಾನ ಅರಳಬೇಡವೆ...
ಹಾಡು ಎಂದ ಕೂಡಲೆ ಹಾಡದು ಯಾವ ಕೋಗಿಲೆ
ಹಾಡು ಎಂದ ಕೂಡಲೆ ಹಾಡದು ಯಾವ ಕೋಗಿಲೆ
ಸ್ನೇಹದ ಚೈತ್ರದಲಿ, ಚಿಗುರುವ ಆಸೆಯಲಿ
ಪ್ರೀತಿಯ ಮಧುರ ಗಾನ ಅರಳಬೇಡವೆ...
ಹಾಡು ಎಂದ ಕೂಡಲೆ ಹಾಡದು ಯಾವ ಕೋಗಿಲೆ
ಈ... ಪ್ರೀತಿಯ ಹೇಳಲು, ಪ್ರೀತಿಯ ಕೇಳಲು
ಮನುವೆ ಮಾಡನು ವಿರೋಧ
ಆ... ಪ್ರೀತಿಯ ಅರ್ಜಿಯ, ಹರಿಯುವ ವಿಸ್ಮಯ
ಅರಿಯದೆ ಹೋದರೆ ಪ್ರಮಾದ
ಪ್ರೀತಿ ಮಾಡೊ ಪ್ರವೀಣ, ತಿಳಿಯೊ ನೀನು ನಿಜಾನ
ಒಲವೆ ಕುಸುಮ ಕಿಶೋರಿ, ಅದಕೆ ಯಾಕೊ ಕಠಾರಿ,
ಜಗದ ಪ್ರೇಮ ನಿಯಮ ಮೀರಬೇಡವೊ .....
ಹಾಡು ಎಂದ ಕೂಡಲೆ ಹಾಡದು ಯಾವ ಕೋಗಿಲೆ
ಈ.... ಪ್ರೇಮದ ಪಲ್ಲವಿ, ಇದರನುಪಲ್ಲವಿ
ಧುಮುಕುವ ಧಾರೆಗೆ ಸಮಾನ
ಆ.... ಓಡೊ ನದಿಗಳ, ಅಳಿಯದ ಅಲೆಗಳ
ಅಂತರವಾಹಿನಿಗೆ ಸಮಾನ
ಎದೆಯ ತಾಳ ತಂಬೂರಿ, ದನಿಗೆ ಅರಳೊ ಮಯೂರಿ
ತನಗೆ ಪ್ರೀತಿ ಬಂದಾಗ, ಹೃದಯ ನೀಡೊ ಕಿಶೋರಿ
ಜಗದ ಪ್ರೇಮ ನಿಯಮ ಮೀರಬಲ್ಲಳೆ....
ಈ.... ಪ್ರೇಮದ ಪಲ್ಲವಿ, ಇದರನುಪಲ್ಲವಿ
ಧುಮುಕುವ ಧಾರೆಗೆ ಸಮಾನ
ಆ.... ಓಡೊ ನದಿಗಳ, ಅಳಿಯದ ಅಲೆಗಳ
ಅಂತರವಾಹಿನಿಗೆ ಸಮಾನ
ಎದೆಯ ತಾಳ ತಂಬೂರಿ, ದನಿಗೆ ಅರಳೊ ಮಯೂರಿ
ತನಗೆ ಪ್ರೀತಿ ಬಂದಾಗ, ಹೃದಯ ನೀಡೊ ಕಿಶೋರಿ
ಜಗದ ಪ್ರೇಮ ನಿಯಮ ಮೀರಬಲ್ಲಳೆ....
ಹಾಡು ಎಂದ ಕೂಡಲೆ ಹಾಡದು ಯಾವ ಕೋಗಿಲೆ
---------------------------------------------------------------------------------------------------------
ಕನಸಲೂ ನೀನೆ ಮನಸಲು ನೀನೆ (1998) - ದಿಲರುಬಾ ಜಿಗದದಂಜಿಗ
ಸಂಗೀತ: ಚೈತನ್ಯ ಸಾಹಿತ್ಯ : ಹಂಸಲೇಖ ಗಾಯಕರು: ಎಲ್.ಏನ್.ಶಾಸ್ತ್ರಿ
---------------------------------------------------------------------------------------------------------
ಕನಸಲೂ ನೀನೆ ಮನಸಲು ನೀನೆ (1998) - ಪ್ರೇಮದೇವಿ ಭೂಮಿಗೆಲ್ಲಾ ನೀನು
ಸಂಗೀತ: ಚೈತನ್ಯ ಸಾಹಿತ್ಯ : ವಿ.ಮನೋಹರ ಗಾಯಕರು: ರಮೇಶಚಂದ್ರ, ಸುಮಾಶಾಸ್ತ್ರಿ
---------------------------------------------------------------------------------------------------------
ಕನಸಲೂ ನೀನೆ ಮನಸಲು ನೀನೆ (1998) - ಅನುರಾಗದ ಅಲೆಮೇಲೆ
ಸಂಗೀತ: ಚೈತನ್ಯ ಸಾಹಿತ್ಯ : ರಮೇಶರಾವ್ ಗಾಯಕರು: ಎಲ್.ಏನ್.ಶಾಸ್ತ್ರಿ
ಅನುರಾಗದ ಅಲೆ ಮೇಲೆ ನಡೆಯೋ ಬಾಲೆ
ನಸು ನಾಚಿದ ನಗೆಯಲ್ಲೇ ಕರೆಯೋ ಓಲೆ
ಮಾತುಗಳು ಬೇಕಿಲ್ಲ ಸನ್ನೆಗಳು ಬೇಕಿಲ್ಲ
ನೋಡಿದರೇ ಸಾಕೂ ಆಹಾ ಸಾಕು ತಲೆ ಬಾಗಲು
ಅನುರಾಗದ ಅಲೆ ಮೇಲೆ ನಡೆಯೋ ಬಾಲೆ
ಕಣ್ಣು ಮುಚ್ಚಿದರೆ ಕನಸನು ತೆರೆಯೋಳು
ಕನಸಿನ ಹೆಣ್ಣಿವಳಮ್ಮ ಕಣ್ಣನು ತೆರೆದಾಗ
ಮನಸನು ತೆರೆಯೋಳು ಮನಸಿನ ಕಣ್ಣಿವಳಮ್ಮಾ
ಬಿಸಿಲಿಗೆ ನೆರಳಿಡುವಳು ಇರುಳಿಗೆ ಬೆಳಕಿಡುವಳು
ಕನಸನು ನನಸಾಗಿಸಿ ನನಸನೇ ಬರೆದಿಡುವಳು
ಈ ಕಣ್ಣ ಕಡಲಲ್ಲಿ ಹೊಯ್ಯದಾಡುವಳು
ಬೆಳದಿಂಗಳ ಅಲೆ ಮೇಲೆ ನಡೆಯೋ ಬಾಲೆ
ಇರುಳಲ್ಲಿಯೂ ಹಗಲಿಡುವ ಗೆಳತೀ ಇವಳೇ
ಕಿಲಕಿಲ ಹೊನಲು ನಗೆ ಕಲಕಲ ಮುಗುಳುನಗೆ ಇವಳಿಗೆ ಆಹಾರವೇ
ನಗುವುದೇ ಕಲೆಯೆಂದು ಕಲಿಸುವ ಮಲ್ಲಿಗೆಗೇ ಚೈತ್ರದ ಆಧಾರವೇ
ಕೈಯ್ಯ ಬಳೆ ಘಲ್ಲೆಂದರೇ ಋತುಗಳೇ ಝಲ್ಲೆನ್ನುವುದೂ
ಇವಳೊಮ್ಮೆ ನಗು ತಂದರೇ ಎಲ್ಲ ಋತು ಘಲ್ಲೆನ್ನುವುದು
ನಮ್ಮೆಲ್ಲಾ ನಗೆಯಲ್ಲೂ ಸ್ಫೂರ್ತಿ ಇವಳೇ
ಅನುರಾಗದ ಅಲೆ ಮೇಲೆ ನಡೆಯೋ ಬಾಲೆ
ನಸು ನಾಚಿದ ನಗೆಯಲ್ಲೇ ಕರೆಯೋ ಓಲೆ
ಮಾತುಗಳು ಬೇಕಿಲ್ಲ ಸನ್ನೆಗಳು ಬೇಕಿಲ್ಲ
ನೋಡಿದರೇ ಸಾಕೂ ಆಹಾ ಸಾಕು ತಲೆ ಬಾಗಲು
---------------------------------------------------------------------------------------------------------
ಕನಸಲೂ ನೀನೆ ಮನಸಲು ನೀನೆ (1998) - ತಾನ್ ತಾನ್ ತಾನ್ ಓ ನನ್ನ ನಲ್ಲೆ
ಸಂಗೀತ: ಚೈತನ್ಯ ಸಾಹಿತ್ಯ : ಹಂಸಲೇಖ ಗಾಯಕರು: ಎಸ್.ಪಿ.ಬಿ
---------------------------------------------------------------------------------------------------------
ಕನಸಲೂ ನೀನೆ ಮನಸಲು ನೀನೆ (1998) - ಚಂದನ ಸಿರಿ ಚಂದನ
ಸಂಗೀತ: ಚೈತನ್ಯ ಸಾಹಿತ್ಯ : ಹಂಸಲೇಖ ಗಾಯಕರು: ರಾಜೇಶ
---------------------------------------------------------------------------------------------------------
ಕನಸಲೂ ನೀನೆ ಮನಸಲು ನೀನೆ (1998) - ಯಾವೂರ್ ಸುಬ್ಬೀ ಯಾವೂರ್ ಸುಬ್ಬೀ
ಸಂಗೀತ: ಚೈತನ್ಯ ಸಾಹಿತ್ಯ : ಹಂಸಲೇಖ ಗಾಯಕರು: ಎಲ್.ಏನ್.ಶಾಸ್ತ್ರಿ, ಮಂಜುಳಾ
---------------------------------------------------------------------------------------------------------
ಕನಸಲೂ ನೀನೆ ಮನಸಲು ನೀನೆ (1998) - ಅನುರಾಗದ ಈ ಲೋಕ
ಸಂಗೀತ: ಚೈತನ್ಯ ಸಾಹಿತ್ಯ : ಹಂಸಲೇಖ ಗಾಯಕರು: ಎಲ್.ಏನ್.ಶಾಸ್ತ್ರಿ
ಅನುರಾಗದ ಈ ಲೋಕ ಸೊಗಸೂ ... ಸೊಗಸೂ ..
ಅವಳಿಲ್ಲದ ಈ ಸೊಗಸೂ ಕನಸು... ಕನಸೂ
ಪ್ರೀತಿಸುವ ಹಾಡಿಲ್ಲ ಆಲಿಸುವ ಎದೆಯಿಲ್ಲ
ಸೇರದಿರೋ ಓಲೆ ನನಗೇಕೇ ಅವಳಾದಳೋ.... ಓಓಓಓಓ
ಮರೆಯಾದಳು ತರದೇನೆ ಒಲವಾ ಓಲೆ...
ಅವಳಾದಳು ನನಗೀಗ ಸಿಗದ ಬಾಲೇ
ಪ್ರೀತಿಸುವ ಹಾಡಿಲ್ಲ ಆಲಿಸುವ ಮನಸಿಲ್ಲ
ದಾರಿಯಲ್ಲಿ ನಿಂತ ಕಿರುದೀಪ ಅವಳಾದಳೋ.... ಓಓಓಓಓ
---------------------------------------------------------------------------------------------------------
No comments:
Post a Comment