70. ಸವಾರಿ ೨ (೨೦೧೪ )

ಸವಾರಿ ೨ ಚಲನಚಿತ್ರದ ಹಾಡುಗಳು 
  1. ನಿನ್ನ ದನಿಗಾಗಿ ನಿನ್ನ ಕರೆಗಾಗಿ 
  2. ಪಿಪಿ ಸಾಂಗ್ 
  3. ಸಿಂಪಲ್ ಆಗಿದೇ 
  4. ಎಲ್ಲೋ ಮರೆಯಾಗಿ 
  5. ಯಾವ ಮೋಹನ ಮುರುಳಿ 
  6. ಥೀಮ್ 
  7. ನಿನ್ನ ದನಿಗಾಗಿ ನಿನ್ನ ಕರೆಗಾಗಿ 
ಸವಾರಿ ೨ (೨೦೧೪ ) - ನಿನ್ನ ದನಿಗಾಗಿ ನಿನ್ನ ಕರೆಗಾಗಿ 
ಸಂಗೀತ : ಮಣಿಕಂಠ ಕದ್ರಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಸಂತೋಷ ವೆಂಕಿ, ಸುಪ್ರಿಯಾ ಲೋಹಿತ್ 
 
ಮೆಹೆರಬಾನ್... ಮೆಹೆರಬಾನ್...
ನಿನ್ನ ದನಿಗಾಗಿ ನಿನ್ನ ಕರೆಗಾಗಿ ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದೆ ನೀನು ನನಗೊಂದು ಸೋಜಿಗದಂತೆ ಕಾಣುವೆ

ಒಂಟಿ ಇರುವಾಗ ಕುಂಟು ನೆಪ ತೋರಿ ಬಂದ ಕನಸೆಲ್ಲ ನಿನ್ನದು
ನಾನು ಅನುರಾಗಿ ನೀನೆ ನನಗಾಗಿ ಎನ್ನುವ ಭಾವನೆ ನನ್ನದು
ಕಣ್ಣಿನಲ್ಲೇನೇ ಹೊಮ್ಮಿದೆ ಕೋಮಲ ಕೋರಿಕೆ
ಮುತ್ತಿನ ಅಂಕಿತ ಬೇಕಲ್ಲ ಒಪ್ಪಂದಕೆ
ನಿನ್ನ ದನಿಗಾಗಿ ನಿನ್ನ ಕರೆಗಾಗಿ ನಿನ್ನ ಸಲುವಾಗಿ ಕಾಯುವೆ

ತೀರ ಬಳಿ ಬಂದೆ ನೀನು ನನಗೊಂದು ಸೋಜಿಗದಂತೆ ಕಾಣುವೆ
ಹೆದರುತ ಅರಳಿವೆ ನಾನಾ ಹಂಬಲ ನಿನ್ನನೇ ತಲುಪಲು
ಮನಸಲಿ ಸವಿಗನಸಿನ ಸಾಲೇ ನಿಂತಿದೆ ಅಂಗಡಿ ತೆರೆಯಲು
ಎಲ್ಲೇ ನಾ ಹೋದರೂ ಗಮನ ಇಲ್ಲೇ ಇದೆ
ಸನಿಹವೇ ನೀ ಬೇಕೆನ್ನುವ ಹಟವೂ ಹೆಚ್ಚಾಗಿದೆ
ಈಗ ಚಂದ್ರನ ಒಪ್ಪಿಗೆ ಬೇಕೇನು ಸಲ್ಲಾಪಕೆ

ನೆನಪಿನ ಬೀದಿಯ ಎಲ್ಲಾ ಗೋಡೆಗೂ ನಿನ್ನದೇ ಮೊಗವಿದೆ
ಸಲಿಗೆಯ ತಕರಾರಿನ ಸಣ್ಣ ಕೋಪಕೂ ಬೇರೆಯೆ ಸುಖವಿದೆ
ಇನ್ನೂ ಇಂಪಾಗಿದೆ ಕರೆವ ನಿನ್ನ ಸ್ವರ
ಹೃದಯದಲಿ ಎಂದೆಂದಿಗೂ ಇರಲಿ ಹಸ್ತಾಕ್ಷರ
ಬೇಗ ಮೂಡಲಿ ಮತ್ಸರ ಈ ಭೂಮಿ ಆಕಾಶಕೆ
ನಿನ್ನ ದನಿಗಾಗಿ ನಿನ್ನ ಕರೆಗಾಗಿ ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದೆ ನೀನು ನನಗೊಂದು ಸೋಜಿಗದಂತೆ ಕಾಣುವೆ
ಮೆಹೆರಬಾನ್...
----------------------------------------------------------------------------------------------

ಸವಾರಿ ೨ (೨೦೧೪ ) - ಪಿಪಿ ಸಾಂಗ್
ಸಂಗೀತ : ಮಣಿಕಂಠ ಕದ್ರಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಪುನೀತ ರಾಜಕುಮಾರ

ಮೋಟು ಬೀಡಿ ಹಚ್ಚಿಕೊಂಡು ಲುಂಗಿ ಟೈಟು ಮಾಡಿಕೊಂಡು
ನಾಲ್ಕು ಸ್ಟೆಪ್ ಹಾಕೋಣ ಹೊಂಟೈತೆ ಸವಾರಿ
ಕೂಲಿಂಗ್ ಗ್ಲಾಸ್ ಹಾಕೊಂಡು ಕೂಲ್ ಡ್ರಿಂಕ್ಸ್ ಕುಡುಕೊಂಡು
ಪೀಪಿ ಸಾಂಗ್ ಹಾಡೋಣ

ಬರುತೈತೆ ಸವಾರಿ ಓಲ್ಡ್ ಮಾಡೆಲ್ ತಂಬೂರಿ
ಮಾಡ್ಕೊಂಡು ರಿಪೇರಿ ಹಾಡೋಣ ದರ್ಬಾರಿ ಒಂದೇ ಟೇಕಲ್ಲಿ
ಲವ್ವು ಸರೂರಿ ಪಾರು ಮಜಬೂರಿ ಲೈಫು ದುಬಾರಿ ಓಕೆ ಮುನ್ವರಿ
ಬ್ಲ್ಯಾಕ್ ಕಲರ್ ರೋಡ್ ಅಲ್ಲಿ ಕಲರ್ ಫುಲ್ ಸವಾರಿ
ಎರ್ರ ಬಿರ್ರಿ ಎರ್ರ ಬಿರ್ರಿ ಹೋ ಎರ್ರ ಬಿರ್ರಿ ಸ್ಪೀಡ್ ಅಲ್ಲಿ
ಅಣ್ಣ ಬಾಂಡ್ ಬೈಕಲ್ಲಿ ಎಮ್ ಜಿ ರೋಡಲ್ಲಿ ಮಾಡೋಣ ಸವಾರಿ
ಪೀಪಿ ಪೀಪಿ ಊದುತ ಪೆಪ್ಪರ್ ಮಿಂಟ್ ತಿನ್ನುತ
ಚಿಣ್ಣಿ ದಾಂಡು ಆಡುತ್ತ ಮಾಡೋಣ ಸವಾರಿ

ಆನೆ ಕರಡಿ ಮದುವೆ ಆಗ್ತಾ ಐತೆ ಇನ್ವಿಟೇಶನ್ ಈ -ಮೈಲ್ ಮಾಡ್ಬಿಟೈತೆ 
ನವಿಲುಗರಿಗೆ ಹಚ್ಚು ನೈಲ್ ಫಾಲಿಶ್ ಸೊಳ್ಳೆ ಹಿಡಿದು ಮಾಡು ಎಣ್ಣೆ ಮಾಲಿಶ್
ಅ ಆ ಇ ಈ ಸಾಕು ಅದುವೆ ಸ್ವರ್ಗ ಬೇರೆ ಭಾಷೆಗೆಲ್ಲಾ ಚೂರು ಹಾಕು ಬೀಗ
ಗಂಡಸರಿಗೆ ಬಿಳಿ ಕಾಪೌಂಡ್ ಹಚ್ಚಿ ಮೇಮೂಳೆ ಮುರಿಯಂಗೆ ಬಿಡ್ದೆ ಜಜ್ಜಿ
ಪಿರಿ ಪಿರಿ ಹೇ ಪಿರಿ ಪಿರಿ ಪಿರಿ ಪಿರಿ ಮಳೆಯಲ್ಲಿ
ಕರಿ ಕರಿ ಕೊಡೆ ಹಿಡಿದು ಬ್ರೇಕ್ ಡ್ಯಾನ್ಸ್ ಮಾಡೋಣ
ಬರ್ತೈತೆ ಸವಾರಿ ತರ ತುರಿ ಲೈಫ್ ಅಲ್ಲಿ
ತಿನ್ಕೊಂಡು ಚುರುಮುರಿ ಊದುತ್ತ ತುತ್ತೂರಿ
ಮಾಡೋಣ ಸವಾರಿ

ಎರ್ರ ಬಿರ್ರಿ ಸ್ಪೀಡ್ ಅಲ್ಲಿ ಅಣ್ಣ ಬಾಂಡ್ ಬೈಕಲ್ಲಿ
ಎಮ್ ಜಿ ರೋಡಲ್ಲಿ ಮಾಡೋಣ ಸವಾರಿ
ಪೀಪಿ ಪೀಪಿ ಊದುತ ಪೆಪ್ಪರ್ ಮಿಂಟ್ ತಿನ್ನುತ
ಚಿಣ್ಣಿ ದಾಂಡು ಆಡುತ್ತ ಮಾಡೋಣ ಸವಾರಿ
ಬುರ್ ಬುರ್ ಬುರ್ ಸವಾರಿ ಬುರ್ ಬುರ್ ಬುರ್ ಸವಾರಿ
ಬುರ್ ಬುರ್ ಬುರ್ ಸವಾರಿ
----------------------------------------------------------------------------------------------
ಸವಾರಿ ೨ (೨೦೧೪ ) - ಸಿಂಪಲ್ ಆಗಿದೇ 
ಸಂಗೀತ : ಮಣಿಕಂಠ ಕದ್ರಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ರಮಣ ಮಹಾದೇವನ್, ಶಾಲ್ಮಲಿ  

----------------------------------------------------------------------------------------------

ಸವಾರಿ ೨ (೨೦೧೪ ) - ಎಲ್ಲೋ ಮರೆಯಾಗಿ 
ಸಂಗೀತ : ಮಣಿಕಂಠ ಕದ್ರಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಆಶ್ ಕಿಂಗ್ 

----------------------------------------------------------------------------------------------

ಸವಾರಿ ೨ (೨೦೧೪ ) - ಯಾವ ಮೋಹನ ಮುರುಳಿ 
ಸಂಗೀತ : ಮಣಿಕಂಠ ಕದ್ರಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ರವಿ ಮರೂರ್ 

----------------------------------------------------------------------------------------------

ಸವಾರಿ ೨ (೨೦೧೪ ) - ಥೀಮ್ 
ಸಂಗೀತ : ಮಣಿಕಂಠ ಕದ್ರಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಮಣಿಕಂಠ ಕದ್ರಿ

----------------------------------------------------------------------------------------------

ಸವಾರಿ ೨ (೨೦೧೪ ) - ನಿನ್ನ ದನಿಗಾಗಿ ನಿನ್ನ ಕರೆಗಾಗಿ
ಸಂಗೀತ : ಮಣಿಕಂಠ ಕದ್ರಿ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಕಾರ್ತೀಕ, ಯಾಝಿನ್ ನಿಜರ್, ಹಂಸಿಕಾ ಅಯ್ಯರ್

ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
ತೀರ ಬಳಿ ಬಂದ ನೀನು ನನಗೊಂದು
ಸೋಜಿಗದಂತೆ ಕಾಣುವೆ.

ಒಂಟಿ ಇರುವಾಗ ಕುಂಟು ನೆಪ ತೋರಿ ಬಂದ ಕನಸೆಲ್ಲ ನಿನ್ನದು
ನಾನೆ ಅನುರಾಗಿ ನೀನು ನನಗಾಗಿ ಎನ್ನುವ ಭಾವನೆ ನನ್ನದು
ಕಣ್ಣಿನಲ್ಲೇನೆ ಹೊಮ್ಮಿದೆ ಕೋಮಲ ಕೋರಿಕೆ
ಮುತ್ತಿನ ಅಂಕಿತ ಬೇಕಲ್ಲ ಒಪ್ಪಂದಕೆ
ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ

ಹೆದರುತ ಅರಳಿವೆ ನಾನಾ ಹಂಬಲ ನಿನ್ನನ್ನೇ ತಲುಪಲು
ಮನಸಲಿ ಸವಿಗನಸಿನ ಸಾಲೇ ನಿಂತಿದೆ ಅಂಗಡಿ ತೆರೆಯಲು
ಎಲ್ಲೇ ನಾ ಹೋದರೂ ಗಮನ ಇಲ್ಲೇ ಇದೆ
ಸನಿಹವೇ ನೀ ಬೇಕೆನ್ನುವ ಹಠವೂ ಹೆಚ್ಚಾಗಿದೆ
ಈಗ ಚಂದ್ರನ ಒಪ್ಪಿಗೆ ಬೇಕೆನಿಸಿದಾಗ ಸಲ್ಲಾಪಕೆ.

ನೆನಪಿನ ಬೀದಿಯ ಎಲ್ಲಾ ಗೋಡೆಗೂ ನಿನ್ನದೇ ಮೊಗವಿದೆ
ಸಲಿಗೆಯಿಂದ ತಕರಾರಿನ ಸಣ್ಣ ಕೋಪಕೂ ಬೇರೆಯೇ ಸುಖವಿದೆ
ಇನ್ನೂ ಇಂಪಾಗಿದೆ ಕರೆವ ನಿನ್ನ ಸ್ವರ
ಹೃದಯದಲಿ ಎಂದೆಂದಿಗೂ ಇರಲೀ ಹಸ್ತಾಕ್ಷರ
ಬೇಗ ಮೂಡಲಿ ಮತ್ಸರ ಈ ಭೂಮಿ ಆಕಾಶಕೆ
ನಿನ್ನ ದನಿಗಾಗಿ ನಿನ್ನ ಕರೆಗಾಗಿ
ನಿನ್ನ ಸಲುವಾಗಿ ಕಾಯುವೆ
------------------------------------------------------------------------

No comments:

Post a Comment