775. ರಾಣಿ ಮಹಾರಾಣಿ (೧೯೯೦)

ರಾಣಿ ಮಹಾರಾಣಿ ಚಿತ್ರದ ಹಾಡುಗಳು 
  1. ಗುಂಡಿಗೆ ಕಲ್ಲ್ ಗುಂಡಿಗೆ 
  2. ಕೂಗೋ ಕೋಳಿಗೆ ಖಾರ ಮಸಾಲೆ 
  3. ಬಾರೆ ಬಿಕ್ಕಮ್ಮ 
  4. ಎದ್ದಳೊ ಎದ್ದಳೊ 
  5. ಬಂದಳೋ ಬಂದಳೋ 
ರಾಣಿ  ಮಹಾರಾಣಿ (೧೯೯೦) - ಗುಂಡಿಗೆ ಕಲ್ಲ್ ಗುಂಡಿಗೆ ಗಂಡು ನಾ ನಿಂಥರಾ ನಂಥರಾ ಅಲ್ಲಾ...
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ. ಮಂಜುಳಾ ಗುರುರಾಜ

ಗಂಡು : ಗುಂಡಿಗೆ ಕಲ್ಲ್ ಗುಂಡಿಗೆ ಗಂಡು ನಾ ನಿಂಥರಾ ನಂಥರಾ ಅಲ್ಲಾ...
           ಗುಂಡಿಗೆ ಕಲ್ಲ್ ಗುಂಡಿಗೆ ಗಂಡು ನಾ ನಿಂಥರಾ ನಂಥರಾ ಅಲ್ಲಾ...
           ನೀನು ಮೈಸೂರ ರಾಣಿಗೆ ಮಗಳ, ಯಾಕೆ ಮಾಡ್ತಿಯೇ  ಕೋಳಿಗೆ ಜಗಳ 
ಹೆಣ್ಣು : ನೀನು ಮೈಸೂರ ರಾಜಂಗೆ ಮಗನ, ಯಾಕೆ ಮಾಡ್ತಿಯೋ ಪಂಚಾಯತಿ ಮದನ 
ಗಂಡು : ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ .. 
           ಗುಂಡಿಗೆ ಕಲ್ಲ್ ಗುಂಡಿಗೆ ಗಂಡು ನಾ ನಿಂಥರಾ ನಂಥರಾ ಅಲ್ಲಾ...
ಹೆಣ್ಣು : ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು  ನಾ ಒಂಥರಾ ನಾ ನಿಂಥಾರ  ಅಲ್ಲಾ...

ಹೆಣ್ಣು : ಕೋಳಿ ಜಗಳ ಮಾಡುತ ಕೇಳಿಕೆಗಳ ಆಡುತಾ
        ಮನಸು ಅದಲು ಬದಲು ಮಾಡಿರಿ
ಗಂಡು :  ನೋಡು ಅಂದ್ರೆ ಉರಿಸುವ ಮಾಡು ಅಂದ್ರೆ ಮುರಿಯುವ
            ಇವಳ ಸಂಗ ಬೇಡ ಹರಿ ಹರಿ
ಹೆಣ್ಣು : ಹಾಡಿ ಹಾಡಿ ರಾಗವೊ ನೋಡಿ ನೋಡಿ ಪ್ರೇಮವೋ
          ಹಾರ ಬದಲಿ ಮಾಡಿಕೊಳ್ಳಿರಿ
          ಆಯೋಯೋ ಎತ್ತು ಏರಿಗೇರಿಸುವಾ ಕೋಣ ನೀರಿಗಿಳಿಸುವಾ
          ಇವನ ಜೋಡಿ ದಿನವೂ ಕಿರಿಕಿರಿ ..
ಗಂಡು : ಅಯ್ಯೋ ತಿಳಿದು ನಾ ಬೀಳಲಾರೆ ಹಾಳು ಭಾವಿಲಿ
            ಹಾವಿನ ಜೊತೆ ಮುಂಗಸಿ ಮದ್ವೆ ಇಲ್ಲ ಭೂಮಿಲಿ
ಹೆಣ್ಣು : ಅಯ್ಯೋ ತಿಳಿದು ಕೈ ಹಾಕಲಾರೆ ಇರುವೆ ಗೂಡಲ್ಲಿ
           ಕಾಗೆ ಜೊತೆ ನರಿ ಮದ್ವೆ ಇಲ್ಲ ರೂಡಿಲ್ಲಿ
            ನೀನು ಮೈಸೂರ ರಾಜಂಗೆ ಮಗನ, ಯಾಕೆ ಮಾಡ್ತಿಯೋ ಪಂಚಾಯತಿ ಮದನ 
ಗಂಡು ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ .. 
         ಗುಂಡಿಗೆ ಕಲ್ಲ್ ಗುಂಡಿಗೆ ಗಂಡು ನಾ ನಿಂಥರಾ ನಂಥರಾ ಅಲ್ಲಾ...
ಹೆಣ್ಣು : ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು  ನಾ ಒಂಥರಾ ನಾ ನಿಂಥಾರ  ಅಲ್ಲಾ...

ಹೆಣ್ಣು : ನಿಮ್ಮ ಲಗ್ನ ಕೂಡದು ನಿಮಗೆ ಮದುವೆ ಆಗದು ನನ್ನ ಕೋಳಿ ಎದ್ದು ಕೂಗದು
ಗಾಂಧಿ : ಕೊಂಡು ಸತ್ತ ಕೋಳಿಗೆ ಇಬ್ರು ಕೊಟ್ಟ ಅರ್ಜಿಗೆ ಒಬ್ಬ ದಂಡ ನೀಡಲಾಗದು
            ಕೇಳೇ ತಾಯಿ ಸುಮ್ಮನೆ ನನ್ನದೊಂದು ಪ್ರಾಥನೆ ನನ್ನ ಮೇಲೆ ಯಾಕೆ ಕಣ್ಣೂರಿ..
            ಏಏಏ ಒಂದು ಬಾಣ ಬಿಟ್ಟರೆ ಮೂರೂ ಹಣ್ಣು ಬಿದ್ದರೇ ಒಂದು ನಿನಗೆ ಎರಡು ನನ್ ಗುರಿ
ಗಂಡು : ಅರೆ ಗೊತ್ತೇ ನನಗೆಲ್ಲಾ ನಿನ್ನ ಕಳ್ಳ ವ್ಯಾಪಾರ
            ಕಿವಿಯಲ್ಲಿ ಹೂವು ಇಲ್ಲ ನಾನು ಸರದಾರ
ಹೆಣ್ಣು : ಅರೆ ಗೊತ್ತೋ ನನಗೆಲ್ಲಾ ನೀನು ಖಾಲಿ ಕುಬೇರ
           ತಲೆಯಲ್ಲಿ ಮಣ್ಣು ಇಲ್ಲ ಮಾಡು ಕರಾರ
ಗಂಡು : ನೀನು ಮೈಸೂರ ರಾಣಿಗೆ ಮಗಳ, ಯಾಕೆ ಮಾಡ್ತಿಯೇ  ಕೋಳಿಗೆ ಜಗಳ 
            ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ .. 
            ಗುಂಡಿಗೆ ಕಲ್ಲ್ ಗುಂಡಿಗೆ ಗಂಡು ನಾ ನಿಂಥರಾ ನಂಥರಾ ಅಲ್ಲಾ...
ಹೆಣ್ಣು : ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು  ನಾ ಒಂಥರಾ ನಾ ನಿಂಥಾರ  ಅಲ್ಲಾ...
ಗಂಡು :  ನೀನು ಮೈಸೂರ ರಾಣಿಗೆ ಮಗಳ, ಯಾಕೆ ಮಾಡ್ತಿಯೇ  ಕೋಳಿಗೆ ಜಗಳ 
ಹೆಣ್ಣು : ನೀನು ಮೈಸೂರ ರಾಜಂಗೆ ಮಗನ, ಯಾಕೆ ಮಾಡ್ತಿಯೋ ಪಂಚಾಯತಿ ಮದನ 
           ಜಂಭದಂಬಾರಿ ಮೇಲೇಕೆ ಜಂಬೂ ಸವಾರಿ .. 
ಗಂಡು : ಗುಂಡಿಗೆ ಕಲ್ಲ್ ಗುಂಡಿಗೆ ಗಂಡು ನಾ ನಿಂಥರಾ ನಂಥರಾ ಅಲ್ಲಾ...
ಹೆಣ್ಣು : ಗುಂಡಿಗೆ ಕಲ್ಲ್ ಗುಂಡಿಗೆ ಹೆಣ್ಣು ನಾ ಒಂಥರಾ ನಾ ನಿಂಥಾರ ಅಲ್ಲಾ...
--------------------------------------------------------------------------------------------------------------------------

ರಾಣಿ  ಮಹಾರಾಣಿ (೧೯೯೦) - ಕೂಗೋ ಕೋಳಿಗೇ ಖಾರ ಮಾಸಾಲೆ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಮಂಜುಳಾ ಗುರುರಾಜ

ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ
ಕೂಗೋ ಕೋಳಿಗೇ ಖಾರ ಮಾಸಾಲೆ...  ಖಾರ ಮಾಸಾಲೆ
ಮೇಯೋ ಮೇಕೆಗೆ ಮಿರ್ಚಿ ಮಸಾಲೆ...  ಮಿರ್ಚಿ ಮಸಾಲೆ
ತುಂಡು ಇದ್ದರೇ ಗುಂಡು ಒಳಗೆ ಹೋಗೋದು
ಗುಂಡು ಇದ್ದರೇ ತುಂಡು ನಾಲಗೆಗೆ ಹತ್ತೋದು
ಗುಂಡಣ್ಣ ಗುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ
ಕೂಗೋ ಕೋಳಿಗೇ ಖಾರ ಮಾಸಾಲೆ...  ಖಾರ ಮಾಸಾಲೆ
ಮೇಯೋ ಮೇಕೆಗೆ ಮಿರ್ಚಿ ಮಸಾಲೆ...  ಮಿರ್ಚಿ ಮಸಾಲೆ

ಕುದುರೆ ಬಾಲಾನ ಹಿಡಿದಾ ಜೂಜಣ್ಣ ಸೋತು ಕುಡಿದ
ಇಸ್ಪೀಟ್ ಆಡಾಡಿ ಕಳೆದ ಎಲೆಯನ್ನ ಬಾಟ್ಟ್ಲಿ ಹಿಡಿದ
ಸೋತೋನು ಎಂದಿಗೂ ದಾಸ ಗುಂಡಣ್ಣನಿಗೆ
ಗೆಲ್ಲೋನು ಖಾಸಾ ಖಾಸಾ ತುಂಡಣ್ಣನಿಗೆ
ಅಯ್ಯೋ..  ರಾಮಾ...  ಅಯ್ಯೋ...  ಕೃಷ್ಣಾ
ತುಂಡು ಇದ್ದರೇ ಗುಂಡು ಒಳಗೆ ಹೋಗೋದು
ಗುಂಡು ಇದ್ದರೇ ತುಂಡು ನಾಲಗೆಗೆ ಹತ್ತೋದು
ಗುಂಡಣ್ಣ ಗುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ
ಕೂಗೋ ಕೋಳಿಗೇ ಖಾರ ಮಾಸಾಲೆ...  ಖಾರ ಮಾಸಾಲೆ
ಮೇಯೋ ಮೇಕೆಗೆ ಮಿರ್ಚಿ ಮಸಾಲೆ...  ಮಿರ್ಚಿ ಮಸಾಲೆ

ಹಲೋ.... ಗುಂಡಣ್ಣ ಹೋಗಿ ಒಳಗೆ ಕುಣಿಯೇ ಅಂಥವನೇ ನನಗೆ
ಗುಂಡಣ್ಣ ಸೇರಿ ಜೊತೆಗೆ ತರ್ಲೆ ಮಾಡತವನೇ ತಲೆಗೆ
ಮೈಯೆಲ್ಲಾ ಬಿಸಿ ಬಿಸಿ ಮಾಡದ ತುಂಟ ಗುಂಡಾ
ಮನಸೆಲ್ಲಾ ಕಸಿ ವಿಸಿ ಮಾಡದ ಪೋಲಿ ತುಂಡಾ
ಅಯ್ಯೋ..  ರಾಮಾ...  ಅಯ್ಯೋ...  ಕೃಷ್ಣಾ
ತುಂಡು ಇದ್ದರೇ ಗುಂಡು ಒಳಗೆ ಹೋಗೋದು
ಗುಂಡು ಇದ್ದರೇ ತುಂಡು ನಾಲಗೆಗೆ ಹತ್ತೋದು
ಗುಂಡಣ್ಣ ಗುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ
ಕೂಗೋ ಕೋಳಿಗೇ ಖಾರ ಮಾಸಾಲೆ...  ಖಾರ ಮಾಸಾಲೆ
ಮೇಯೋ ಮೇಕೆಗೆ ಮಿರ್ಚಿ ಮಸಾಲೆ...  ಮಿರ್ಚಿ ಮಸಾಲೆ
ತುಂಡು ಇದ್ದರೇ ಗುಂಡು ಒಳಗೆ ಹೋಗೋದು
ಗುಂಡು ಇದ್ದರೇ ತುಂಡು ನಾಲಗೆಗೆ ಹತ್ತೋದು
ಗುಂಡಣ್ಣ ಗುಂಡಣ್ಣ ತುಂಬಾ ತುಂಬಾ ತುಂಬಾ ಫ್ರೆಂಡಣ್ಣ 
ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ ಅಯ್ಯಯ್ಯಯ್ಯೋ 
--------------------------------------------------------------------------------------------------------------------------

ರಾಣಿ  ಮಹಾರಾಣಿ (೧೯೯೦) - ಬಾರೆ ಬಿಂಕಮ್ಮಾ ಮುದ್ದಾಡಿ ಯಂಕಮ್ಮಾ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ರಮೇಶ, ಮಂಜುಳಾ ಗುರುರಾಜ

ಬಾರೆ ಬಿಂಕಮ್ಮಾ ಮುದ್ದಾಡಿ ಯಂಕಮ್ಮಾ
ಬಾರೋ ಯಂಕಯ್ಯಾ ಮುದ್ದಾಡೊ ಮಂಕಯ್ಯಾ
ಮಳೆಗಿಲ್ಲಾ ಬಿಂಕ ಪ್ರೀತಿಗಿಲ್ಲಾ ಸುಂಕ
ಸೊಂಟ ನಿಂದು ಡೊಂಕ ನಿಲ್ಲಸೋ ನಿನ್ನ ಕೊಂಕ
ಹಾಡೋ ಸುಮ್ನೆ ಎಂಕ್ ಮಳೆ ನಿಲ್ಲೋ ತನಕ

ಬಣ್ಣ ಹಚ್ಚಿದ ಬಾಯಿ ಕೋಲು ವೇದ ಶಾರಾಯಿ
ಅರ್ಧ ಕುಪ್ಸದ ಮಾತಾ ಅಹ ಚಪ್ಲಿ ಕೆಳಗೊಂದ ಗೂಟ
ಈ ಪ್ಯಾಟೇ ಶೋಕಿಲಿ....  ಮಿಂಚ್ತಿಯಾ ಮಿಂಚ್ತಿಯಾ ಮಿಂಚಿ ಮಿನುಗತಿಯಲ್ಲೇ
ಕೆನ್ನೇ ಮೇಲೆ ಕೂದಲು ಅಂಗಿನೋ ತೀಪುರೆ ಬಾಗ್ಲೂ
ನೀನೇ ಮಣ ತೂಕ ನಿನ್ ಸೊಂಟಕ ಒಂದ್ ಬಂದೂಕ್
ಈ ಇಂಗ್ಲಿಷ್ ಶೋಕಿಲೀ.... ಗುಡುಗ್ತಿಯಾ ಗುಡುಗ್ತಿಯಾ ಗುಡುಗಿ ಗುನುಗತಿಯಲ್ಲೋ
ಮೈಗೆ ಕೈಗೆ ಬಟ್ಟೆ ಭಾರ ಕಣೇ..
ಪ್ರೀತಿಗೆ ಎಲ್ಲಾ ಹೂವಿನ ಹಾರ ಕಣೋ
ಬಾರೆ ಬಿಂಕಮ್ಮಾ ಮುದ್ದಾಡೇ  ಯಂಕಮ್ಮಾ
ಬಾರೋ ಯಂಕಯ್ಯಾ ಮುದ್ದಾಡೊ ಮಂಕಯ್ಯಾ
ಮಳೆಗಿಲ್ಲಾ ಬಿಂಕ ಪ್ರೀತಿಗಿಲ್ಲಾ ಸುಂಕ
ಸೊಂಟ ನಿಂದು ಡೊಂಕ ನಿಲ್ಲಸೋ ನಿನ್ನ ಕೊಂಕ
ಹಾಡೋ ಸುಮ್ನೆ ಎಂಕ್ ಮಳೆ ನಿಲ್ಲೋ ತನಕ 

ಹಚ್ಚಿದ ಬಣ್ಣ ಎಲ್ಲ ಮಳೆಗೆ ಕರಗೋಯ್ತಲ್ಲಾ
ಒಳಗಿನ ಅಂದ ಎಲ್ಲಾ ಈಚೆಗೆ ಕಂಡಬುಡ್ತಾಲ್ಲಾ
ಈ ವರುಣನ ಕರುಣೆಲೀ... ಹೆಣ್ಣಿಗೂ ಮಣ್ಣಿಗೂ ಗಂಧ ಒಂದೇ ಕಣೇ
ನುಣುಚೊ ಮೀನು ನಾನು ಮಿಂಚುಳ್ಳಿ ಹಕ್ಕಿ ನೀನು
ಹಾಯ್ಗಾ ಈಜ್ತಾ  ಇದ್ದೇ ನಿನ್ ಕಣ್ಣಿನ ಗಾಳಕ್ ಬಿದ್ದೇ
ನನ್ ಕರುಣನ್ ಕರುಣೆಲೀ... ಸಾವಿರ ಜನಮದ ನಂಟು ಕಣೋ
ಪ್ರೀತಿಯ ಗಾಳಿಯ ಕುಡಿಯೋ ಪ್ರೇಮಿಗಳು
ರೆಕ್ಕೆಯೇ ಇಲ್ಲದೇ ಹಾರೋ ಪಕ್ಷಿಗಳು
ಬಾರೆ ಬಿಂಕಮ್ಮಾ ಮುದ್ದಾಡಿ ಯಂಕಮ್ಮಾ
ಬಾರೋ ಯಂಕಯ್ಯಾ ಮುದ್ದಾಡೊ ಮಂಕಯ್ಯಾ
ಮಳೆಗಿಲ್ಲಾ ಬಿಂಕ ಪ್ರೀತಿಗಿಲ್ಲಾ ಸುಂಕ
ಸೊಂಟ ನಿಂದು ಡೊಂಕ ನಿಲ್ಲಸೋ ನಿನ್ನ ಕೊಂಕ
ಹಾಡೋ ಸುಮ್ನೆ ಎಂಕ್ ಮಳೆ ನಿಲ್ಲೋ ತನಕ
-------------------------------------------------------------------------------------------------------------------------

ರಾಣಿ  ಮಹಾರಾಣಿ (೧೯೯೦) - ಎದ್ದಳೊ ಎದ್ದಳೊ ಚಂಡ ಮಾರಿ ಎದ್ದಳೊ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಮಂಜುಳಾ ಗುರುರಾಜ

ಜಗ ಜಗ ಜಗ ಜಗ ಜಗ ಜಗ ಜಗದಾಂಬಾ
ಕಾಳಿ ಕಾಳಿ ಕಾಳಿ ಕಾಳಿ ಭದ್ರ ಕಾಳಿ ಓಂ
ಕಾಳಿ ಕಾಳಿ ಕಾಳಿ ಕಾಳಿ ಛಿದ್ರ  ಕಾಳಿ ಓಂ
ಚಂಡಿ ಚಂಡಿ ಚಂಡಿ ಚಂಡಿ ಚಾಮುಂಡಿ ಓಂ
ಹೋಗಬೇಕು ರಣಚೆಂಡಿ ಓಂ
ಹ್ರೀಂ ಯಮ ಯಮ ಭ್ರೂಮ್ ಜಮ ಜಮ
ಭಬ ಭಂ ಭಬಬ ಭಂ ಭಬ ಭಂ ಭಬಬ ಭಂ
ಎದ್ದಳೊ ಎದ್ದಳೊ ಚಂಡ ಮಾರಿ ಎದ್ದಳೊ
ಎದ್ದಳೊ ಎದ್ದಳೊ ಪುಂಡ ಮಾರಿ ಎದ್ದಳೊ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೋತ್ತಮರಿ ನಾನ್ಯಾರು ಗೋತ್ತಮರಿ ನಾನ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್
ಗೋತ್ತಮರಿ ನಾನ್ಯಾರು ಗೋತ್ತಮರಿ ನಾನ್ಯಾರು
ಬಂದಳೋ ಬಂದಳೋ ಬೆನ್ನು ಮೂಳೆ ಮುರಿದಳೋ 
ಕೊಟ್ಟಳೋ ಕೊಟ್ಟಳೋ ಜಾಡಿಸಿ ವದೆ ಕೊಟ್ಟಳೋ 

ಕಂಡವರ ಆಸ್ತಿ ಕೇಳ್ತಿಯಾ... ಇಲ್ಲಕ್ಕಾ ಕೇಳಲ್ಲಕ್ಕಾ
ಮಸ್ತಿ ಜಾಸ್ತಿ ಮಾಡ್ತಿಯಾ... ಇಲ್ಲಕ್ಕಾ ಮಾಡಲ್ಲಕ್ಕಾ
ಕೂಲಿ ತಾನೇ ನೀನಿಲ್ಲಿ .... ಹೌದಕ್ಕಾ ಸುಳ್ಳಲ್ಲಕ್ಕಾ
ಜಾಲಿ ಯಾಕೆ ನಿಮಗಿಲ್ಲಿ... ಬೇಡಲ್ಲಾ ಎಲ್ಲಮ್ಮಕ್ಕಾ
ಅಣ್ಣ ಇಟ್ಟ  ಧಣಿ ಮನೆ ಜಂಟಿ ಲೆಕ್ಕ ಹಾಕೋ ಬುದ್ದಿ ಇರಬಾರದು
ನಿನ್ನ ಪುಣ್ಯದಷ್ಟೇ ನಿನ್ನ ಪಾಪದಷ್ಟೇ ಅನ್ನ ಯಕ್ಕುಟ ಮರೀಬಾರದು
ಕೊಟ್ಟಳೋ ಕೊಟ್ಟಳೋ ಜಾಡಿಸಿ ವದೆ ಕೊಟ್ಟಳೋ 
ಕೊಟ್ಟಳೋ ಕೊಟ್ಟಳೋ ಬಾಳ  ವದೆ ಕೊಟ್ಟಳೋ 
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೋತ್ತಮರಿ ನಾನ್ಯಾರು ಗೋತ್ತಮರಿ ನಾನ್ಯಾರು 
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್ 
ಗೋತ್ತಮರಿ ನಾನ್ಯಾರು ಗೋತ್ತಮರಿ ನಾನ್ಯಾರು 
--------------------------------------------------------------------------------------------------------------------------

ರಾಣಿ  ಮಹಾರಾಣಿ (೧೯೯೦) - ಬಂದಳೋ ಬಂದಳೋ ಬಂದಳಮ್ಮ ಬಂದಳೋ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಮಂಜುಳಾ ಗುರುರಾಜ

ಬಂದಳೋ ಬಂದಳೋ ಬಂದಳಮ್ಮ ಬಂದಳೋ 
ಬಂದಳೋ ಬಂದಳೋ ಬಂದಳಮ್ಮ ಬಂದಳೋ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೋತ್ತಮರಿ ನಾನ್ಯಾರು ಗೋತ್ತಮರಿ ನಾನ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್
ಬಂದಳೋ ಬಂದಳೋ ಗಂಡುಬೀರಿ ಬಂದಳೋ
ಬಂದಳೋ ಬಂದಳೋ ತಂಟೆ ಮಾರಿ ಬಂದಳೋ

ಮಂದಿ ಜೇಬು ಕುಯ್ತೀನಿ...  ಕತ್ರಿ ಹಾಕಿ ಛತ್ರಿಯಕ್ಕ
ಚಿಂದಿ ಜೇಬು ತುಂಬತೀನಿ...   ಅಣ್ಣ ಹಾಕು ಧರ್ಮಕ್ಕ
ಮಾಡೋ ಜಾಬು ಫೋರ್ ಟ್ವೆಂಟಿ...  ಫೋರ್ ಟ್ವೆಂಟಿ ಗೆ ಫೋರ್ ಟ್ವೆಂಟಿ
ಹಾಂನ್ ಲಾಭ ಮಾತ್ರ ಗ್ಯಾರಂಟೀ... ಕೈಗೂ ಕಾಲಿಗೂ ಗೋರಂಟಿ
ಪಡ್ಡೆ ಹುಡುಗರಿಗೆ ಪೋಲಿ ಹೈದರಿಗೆ... ಒಂದೇ ಒಂದು ಕಣ್ಣು ಮಿಟುಕು
ವಾಚು ಚೈನುಗಳ ಪಾಕೆಟ್ ಪರ್ಸುಗಳ .. ಕದ್ರೇ ನಮಗೆ ನಾಕು ಗುಟುಕು
ಬಂದಳೋ ಬಂದಳೋ ಮಕ್ಕಳಕ್ಕ  ಬಂದಳೋ 
ಬಂದಳೋ ಬಂದಳೋ ತಂಟೆ ತಿಂಡಿಯಕ್ಕ ಬಂದಳೋ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೋತ್ತಮರಿ ನಾನ್ಯಾರು ಗೋತ್ತಮರಿ ನಾನ್ಯಾರು
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್
ಬಂದಳೋ ಬಂದಳೋ ಗಂಡುಬೀರಿ ಬಂದಳೋ
ಬಂದಳೋ ಬಂದಳೋ ತಂಟೆ ಮಾರಿ ಬಂದಳೋ

ನಮ್ಮಕ್ಕ ಸಿನಿಮಾಕ್ಕ ಸೇರಕ್ಕ... ಸಿನಿಮಾ ಸ್ಟಾರ್ ಆಗಕ್ಕಾ
ನಮ್ಮಕ್ಕ ಸಿನಿಮಾಕ್ಕ ಸೇರಕ್ಕ..
ಒಳ್ಳೆ ಟೈಮು ಕಾಯ್ತೀನಿ ಕಾಯಕ್ಕ ನೀ ಕಾಯಕ್ಕಾ
ಸಿನೆಮಾ ಸ್ಟಾರು ಆಗ್ತೀನಿ... ಆಗಕ್ಕಾ ನೀ ಆಗಕ್ಕಾ
ಎಂಜಿ ರೋಡಿಗೆ ಬರ್ತೀನಿ... ಬಾರಕ್ಕಾ ನೀ ಬಾರಕ್ಕಾ
ಆಟೋಗ್ರಾಫ ಗೀಚಿತೀನಿ... ಗೀಚಕ್ಕಾ ದುಡ್ಡು ಬಾಚಕ್ಕಾ
ನಂದೇ ಒಂದು ಸ್ವಂತ ಸಿನಿಮಾ ತೆಗೆದು
ಕುಂತು ಸಿಲ್ವರ್ ಜುಬಿಲೀ ಹೊಡಿತೀನಿ
ಬಂದ ಲಾಭದಿಂದ ಎಲ್ಲ ಬಡವರಿಗೆ ಬಂಡೆ ಕಾರು ಹಂಚಿತಿನಿ
ಬಂದಳೋ ಬಂದಳೋ ಬಂದಳಮ್ಮಾ ಬಂದಳೋ 
ಬಂದಳೋ ಬಂದಳೋ ಬಂದಳಮ್ಮಾ ಬಂದಳೋ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಗಂಡು ವೇಷದ ರಾಣಿ ಪಂಚರಂಗಿ ಪದ್ಮಿನಿ
ಐತೇರೀಕಿ ಇಟ್ಟ ಮೇಲ್ ಅವರೆಕಾಳ್
ಗೋತ್ತಮರಿ ನಾನ್ಯಾರು ಗೋತ್ತಮರಿ ನಾನ್ಯಾರು 
ಮೂತಿ ಮ್ಯಾಲೆ ಇಟ್ರೆ ದವಡೆ ಹೋಳ್
--------------------------------------------------------------------------------------------------------------------------

No comments:

Post a Comment