696. ಮೇಯರ್ ಮುತ್ತಣ್ಣ (೧೯೬೯)



ಮೇಯರ ಮುತ್ತಣ್ಣ ಚಿತ್ರದ ಹಾಡುಗಳು 
  1. ಒಂದೇ ನಾಡು ಒಂದೇ ಕುಲವು 
  2. ಅಯ್ಯೋ ಅಯ್ಯೋ ಹಳ್ಳಿ ಮುಕ್ಕಾ 
  3. ಹಾವಿಗೆ ಮುಂಗುಸಿಯುಂಟು 
  4. ಹಳ್ಳಿಯಾದರೇನು ಶಿವಾ 
  5. ಹಲೋ ಹಲೋ 
  6. ಮೇಯರ್ ಮುತ್ತಣ್ಣ 
ಮೇಯರ್ ಮುತ್ತಣ್ಣ (೧೯೬೯)
ರಚನೆ: ಚಿ. ಉದಯಶಂಕರ್  ಸಂಗೀತ: ರಾಜನ್-ನಾಗೇಂದ್ರ  ಗಾಯಕ: ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ

ಗಂ: ಒಂದೇ ನಾಡು ... ಆಆಆ....
ಹೆ: ಒಂದೇ ಕುಲವು.. ಆಆಆ....
ಗಂ: ಒಂದೇ ದೈವವು
      ಒಂದೇ ನಾಡು ಒಂದೇ ಕುಲವು ಒಂದೇ ದೈವವು
ಹೆ: ಒಂದೇ ನಾಡು ಒಂದೇ ಕುಲವು ಒಂದೇ ದೈವವು
ಜೊ: ಒಮ್ಮನದಿಂದ ದುಡಿದರೆ ಎಲ್ಲರು ಜಗವನೆ ಗೆಲ್ಲುವೆವು
       ಒಂದೇ ನಾಡು ಒಂದೇ ಕುಲವು ಒಂದೇ ದೈವವು

ಗಂ: ಬಡವ ಬಲ್ಲಿಗನೆಂಬ ಆ ಬೇದ ದೇವರಿಗಿಲ್ಲ
ಮೇ: ಗಾಳಿ ಬೆಳಕು ನೀರು ನಮಗಾಗಿ ನೀಡಿಹನಲ್ಲ
ಹೆ: ಆತನ ಮಕ್ಕಳು ತಾನೆ ಈ ಶೃಷ್ಠಿಯ ಜೀವಿಗಳೆಲ್ಲ
ಮೇ: ಈ ನಿಜ ಅರಿತರೆ ಎಲ್ಲ ಕಷ್ಟವೆ ನಮಗಿನ್ನಿಲ್ಲ
ಗಂ: ಜಡತೆಯ ನೀಗೋಣಾ... ಆಆಆ             ಹೆ: ಏಳಿರಿ ದುಡಿಯೋಣಾ... ಆಆಆ
ಜೊ: ಎಲ್ಲರು ಶ್ರಮಿಸಿ ನಮ್ಮೀ ನೆಲವನು ಸ್ವರ್ಗವ ಮಾಡೋಣಾ
ಮೇ: ಒಂದೇ ನಾಡು ಒಂದೇ ಕುಲವು ಒಂದೇ ದೈವವು
        ಒಮ್ಮನದಿಂದ ದುಡಿದರೆ ಎಲ್ಲರು ಜಗವನೆ ಗೆಲ್ಲುವೆವು
        ಒಂದೇ ನಾಡು ಒಂದೇ ಕುಲವು ಒಂದೇ ದೈವವು 
        ಒಂದೇ ನಾಡು ಒಂದೇ ಕುಲವು ಒಂದೇ ದೈವವು
ಗಂ: ಸತ್ಯ ಧರ್ಮಗಳೆರಡು ನಮ್ಮ ಬಾಳಿನ ಕಣ್ಣಾಗಿರಲಿ
ಹೆ: ಶಾಂತಿಯೆ ಉಸಿರಾಗಿರಲಿ       ಮೇ: ಸೇವೆಯೆ ಗುರಿಯಾಗಿರಲಿ
ಗಂ: ಬದುಕಲಿ ಏನೇ ಬರಲಿ           ಮೇ: ಒಗ್ಗಟ್ಟಲಿ ನಂಬಿಕೆ ಇರಲಿ
ಗಂ: ಕನ್ನಡತನ ಬಿಡೆನೆಂಬ ಛಲವಿರಲಿ ಮನದಲ್ಲಿ
ಮೇ: ಕನ್ನಡತನ ಬಿಡೆನೆಂಬ ಛಲವಿರಲಿ ಮನದಲ್ಲಿ
ಹೆ: ಭೇದವ ಅಳಿಸೋಣಾ... ಆಆಆ                ಗಂ: ಸ್ನೇಹವ ಬೆಳೆಸೋಣಾ... ಆಆಆ
ಮೇ: ಭೇದವ ಅಳಿಸೋಣಾ,       ಸ್ನೇಹವ ಬೆಳೆಸೋಣಾ
ಜೊ: ಗುಡಿಸಲಿದಲ್ಲ ಗುಡಿಯೆ ಎಂದು ಭಾವಿಸಿ ಬಾಳೋಣಾ
ಮೇ: ಒಂದೇ ನಾಡು ಒಂದೇ ಕುಲವು ಒಂದೇ ದೈವವು
       ಒಮ್ಮನದಿಂದ ದುಡಿದರೆ ಎಲ್ಲರು ಜಗವನೆ ಗೆಲ್ಲುವೆವು
       ಒಂದೇ ನಾಡು ಒಂದೇ ಕುಲವು ಒಂದೇ ದೈವವು 
      ಒಂದೇ ನಾಡು ಒಂದೇ ಕುಲವು ಒಂದೇ ದೈವವು
------------------------------------------------------------------------------------------------------------------------

ಮೇಯರ್ ಮುತ್ತಣ್ಣ (೧೯೬೯)
ರಚನೆ: ಚಿ. ಉದಯಶಂಕರ್   ಸಂಗೀತ: ರಾಜನ್-ನಾಗೇಂದ್ರ  ಗಾಯಕ: ಪಿ. ಬಿ. ಶ್ರೀನಿವಾಸ್, ಎಲ್.ಆರ್.ಈಶ್ವರಿ 

ಹೆಣ್ಣು :ಅರೆರೇ... ಆಹ್ಹಹಾ  ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ ಯಾವಾಗ ಬಂದೆ ಬೆಂಗಳೂರ್ ಪಕ್ಕ
         ಏನು ಅಂದಾ ಏನು ಚಂದಾ ಯಾವ ಹಳ್ಳಿ ಹೈದ
ಕೋರಸ್ : ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ
         ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ
ಹೆಣ್ಣು : ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ ಯಾವಾಗ ಬಂದೆ ಬೆಂಗಳೂರ್ ಪಕ್ಕ
         ಏನು ಅಂದಾ ಏನು ಚಂದಾ ಯಾವ ಹಳ್ಳಿ ಹೈದ 

ಹೆಣ್ಣು : ಹಳ್ಳಿಯ ಬಾಳು ಸಾಕಾಯ್ತೆ, ಪಟ್ಟಣ ವಾಸ ಬೇಕಾಯ್ತೆ
          ಹಳ್ಳಿಯ ಬಾಳು ಸಾಕಾಯ್ತೆ, ಪಟ್ಟಣ ವಾಸ ಬೇಕಾಯ್ತೆ
          ಓದಿಲ್ಲಾ ಅರಿವಿಲ್ಲಾ ಹೇಗಿಲ್ಲಿರುವೆಯೋ ಗೊತ್ತಿಲ್ಲಾ
ಕೋರಸ್ : ದನಗಳ ಕಾಯಬಲ್ಲ ಸಗಣಿಯ ತಟಬಲ್ಲ
               ಕೂಲಿನಾಲಿ ಮಾಡಿಕೊಂಡಿರಬಲ್ಲ
ಹೆಣ್ಣು : ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ ಯಾವಾಗ ಬಂದೆ ಬೆಂಗಳೂರ್ ಪಕ್ಕ
         ಏನು ಅಂದಾ ಏನು ಚಂದಾ ಅಯ್ಯೋ ಮಯ್ಯೊ ಹೈದ 
          ಓ.. ಆಹಾ... ಜಿಂಗಳಕ್  ಜಿಂಗಳಕ್  ಜಿಂಗಳಕ್  ಜಿಂಗ್
          ಯ್ಯಾ ಯ್ಯಾ ಹ್ಯಾವೂ ಹ್ಯಾವೂ ಹ್ಯಾವೂ ಯಾವ್ ಯಾವ್

ಹೆಣ್ಣು : ಚಿಲಿಪಿಲಿ ನೋಡುವ ಕಣ್ಣು ಉಂಟು
           ಗಿಣಿಯಂತಿರುವ ಮುಗುಂಟು
           ಚಿಲಿಪಿಲಿ ನೋಡುವ ಕಣ್ಣು ಉಂಟು
           ಗಿಣಿಯಂತಿರುವ ಮೂಗುಂಟು 
           ಹೆಣ್ಣಂತಾ ತಲೆ ಜುಟ್ಟು ಹಿಟ್ಟನು ತಿಂದಾ ಮೈಕಟ್ಟು 
ಕೋರಸ್ : ಎಂಥ ಚಂದ ಮೈಕಟ್ಟು ಇಂಥ ಗಂಡು ಎಲ್ಲುಂಟು 
           ಕಟ್ಟಿಕೊಳ್ಳ ಭಾಗ್ಯ ಯಾರಗುಂಟು 
           ಅಯ್ಯಯ್ಯಯ್ಯೊ ಹಳ್ಳಿ ಮುಕ್ಕಾ ಯಾವಾಗ ಬಂದೆ ಬೆಂಗಳೂರ್ ಪಕ್ಕ
           ಏನು ಅಂದಾ ಏನು ಚಂದಾ ಯಾವ ಹಳ್ಳಿ ಹೈದ 
           ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ
         ತಿಪ್ಪಾರಳ್ಳಿಯಿಂದಾ ಟಿಕೆಟ್ ಇಲ್ದೇ ಬಂದಾ ಬೆಂಗಳೂರ್ ಹುಡುಗಿ ಕಂಡ ಬೆಪ್ಪಾದ

ಗಂಡು : ಏಯ್ ನಿಲ್ಲಿಸರೇ ಏನೇ ಗಂಡ್ ಬಿರಿಗಳ್ರಾ 
            ಹೆಣ್ಣೆಂದೋರ್ಯಾರೆ ನಿಮ್ಮನ್ನೆಲ್ಲಾ ಏನೆಂದು ಹೆತ್ತರೋ ದೇವ್ರೇ ಬಲ್ಲಾ  
           ಅರಿಶಿನವಿಲ್ಲಾ ಕುಂಕುಮವಿಲ್ಲಾ ಗಂಡೋ ಹೆಣ್ಣೋ ತಿಳಿಯೋಲ್ಲಾ 
          ಹಳ್ಳಿಯಿಂದಾನೆ ನಾಡೆಲ್ಲಾ ಹಳ್ಳಿಯಿಲ್ದಿದ್ರೆ ಹೊಟ್ಗಿಲ್ಲಾ ಊ... ಉಹ್ನೂ 

          ಹಳ್ಳಿಯೋರ ಕಂಡು ಹಲ್ ಹಲ್ ಕಿರಿದು 
         ಗೇಲಿ ಮಾಡಿ ನಗ್ತೀರಲ್ಲಾ ಹೆಣ್ಣಿನ ಘನತೆ ನಿಮ್ಮಲ್ಲಿಲ್ಲ 
        ಫ್ಯಾಷನ್ ಗಳ ಕಲ್ತು ಕೇಡ್ತಿರಲ್ಲ ತಿಳ್ವಳ್ಕೆಯಿಲ್ಲ ನಡವಳ್ಕೆಯಿಲ್ಲ 
        ನಿಮ್ಮಿ ಓದಿಗೆ ಬೆಲೆಯಿಲ್ಲಾ 
        ತಂದಾನ ತಾನ ತಾನ ತನಾ ತಂದಾನ ತಾಣ ಥೈ ಥೈಯ್ಯಾ 
------------------------------------------------------------------------------------------------------------------------

ಮೇಯರ್ ಮುತ್ತಣ್ಣ (೧೯೬೯)
ರಚನೆ: ಚಿ. ಉದಯಶಂಕರ್   ಸಂಗೀತ: ರಾಜನ್-ನಾಗೇಂದ್ರ  ಗಾಯಕ: ಪಿ. ಬಿ. ಶ್ರೀನಿವಾಸ್, ಎಲ್.ಆರ್.ಈಶ್ವರಿ 

ಗಂಡು : ಹಾವಿಗೆ ಮುಂಗುಸಿ ಉಂಟು ಆನೆಗೆ ಸಿಂಹ ಉಂಟು 
            ಹಾವಿಗೆ ಮುಂಗುಸಿ ಉಂಟು ಆನೆಗೆ ಸಿಂಹ ಉಂಟು 
           ಈ ಮನೆ ಹಾಳರ ಮುಗಿಸಲೆಂದು ಒಬ್ಬ ಉಂಟು 
           ಒಬ್ಬ ಉಂಟು ಒಬ್ಬ ಇಲ್ಲುಂಟು 
ಹೆಣ್ಣು : ಹಾವಿಗೆ ಮುಂಗುಸಿ ಉಂಟು ಆನೆಗೆ ಸಿಂಹ ಉಂಟು 
           ಈ ಮನೆ ಹಾಳರ ಮುಗಿಸಲೆಂದು ಒಬ್ಬ ಉಂಟು 
           ಒಬ್ಬ ಉಂಟು ಒಬ್ಬ ಇಲ್ಲುಂಟು 

ಗಂಡು : ಕೃಷ್ಣನು ಹುಟ್ಟಿದ ಕಂಸನ ಕೊಲ್ಲಲು 
           ನರಸಿಂಹ ಭೂಮಿಗೆ ಬಂದ ರಕ್ಕಸನ ಸಿಗಿಯಲು
           ಓಓಓ... ಆಆಆ... ಆಆಆ..ಅಹ್ಹಹ್ಹಹ..  
ಹೆಣ್ಣು : ಗಾಂಧಿಯು ಜನಿಸಿದ ಸ್ವಾರ್ಥವ ಅಳಿಸಲು 
          ಸತ್ಯ ಅಹಿಂಸೆಯ ತತ್ವವ ಸಾರಲು 
ಗಂಡು : ದ್ರೋಹವ ಮೋಸವ ತೊಲಗಿಸಲೊಬ್ಬ ಇಲ್ಲುಂಟು
ಕೋರಸ್ :  ಜುಬಿ ಜುಬಿ ಜುಬಿಜಾ ಜುಬಿಜಾ ಜುಬಿಜಾ 
ಹೆಣ್ಣು : ಹಾವಿಗೆ ಮುಂಗುಸಿ ಉಂಟು 
ಗಂಡು : ಆನೆಗೆ ಸಿಂಹ ಉಂಟು 
ಹೆಣ್ಣು : ಈ ಮನೆ ಹಾಳರ  ಮುಗಿಸಲೆಂದು ಒಬ್ಬ ಉಂಟು 
ಗಂಡು : ಒಬ್ಬ ಉಂಟು
ಇಬ್ಬರು : ಒಬ್ಬ ಇಲ್ಲುಂಟು ಆ..

ಹೆಣ್ಣು : ಸತ್ಯವ ನುಡಿವಗೇ ತಲೆಯನು ಬಾಗುವೆನು 
         ಧರ್ಮದೇ ನಡೆವಗೆ ಪ್ರಾಣವ ನಿಡುವೆನು
         ಒಹೋ... ಒಹೋ.. ಓಹೋಹೊಹೋ ಅಹ್ಹಹ
ಗಂಡು : ಬಡವರ ನೋಯಿಸುವ ಪಾಪಿಗೆ ಯಮ ನಾನು 
           ದೇಶ ದ್ರೋಹಿಯ ನಾಶಕೆ ಬಂದಿಹೆನು 
ಇಬ್ಬರು : ನೀಚರ ಪುಂಡರ ಅಡಗಿಸಲು ಒಬ್ಬ ಇಲ್ಲುಂಟು 
ಕೋರಸ್ : ಗೂಗುಳ ಗೂಗುಳ ವಿಲವಿಲ ಗುಬುರಾ
ಗಂಡು : ಹಾವಿಗೆ ಮುಂಗುಸಿ ಉಂಟು 
ಹೆಣ್ಣು : ಆನೆಗೆ ಸಿಂಹ ಉಂಟು 
ಗಂಡು : ಈ ಮನೆ ಹಾಳರ ಮುಗಿಸಲೆಂದು 
            ಒಬ್ಬ ಉಂಟು ಒಬ್ಬ ಉಂಟು ಒಬ್ಬ ಇಲ್ಲುಂಟು 
--------------------------------------------------------------------------------------------------------------------------

ಮೇಯರ್ ಮುತ್ತಣ್ಣ (೧೯೬೯)
ರಚನೆ: ಚಿ. ಉದಯಶಂಕರ್  ಸಂಗೀತ: ರಾಜನ್-ನಾಗೇಂದ್ರ  ಗಾಯಕ: ಪಿ. ಬಿ. ಶ್ರೀನಿವಾಸ್, 

ಹೂಂ... ಹೂಂ... ಹೂಂಹೂಂ... ಆಆಆ ಆಆಆ
ಹಳ್ಳಿಯಾದರೇನು ಶಿವಾ  ಡಿಲ್ಲಿಯಾದರೇನು ಶಿವಾ   
ಜನರೆಲ್ಲಾ ಒಂದೇ ಶಿವಾ ಎಲ್ಲಾ ನಿನ್ನಂತೆ ಶಿವಾ
ಜಗವೆಲ್ಲಾ ನಿನ್ನದೇ ಶಿವಾ

ಎಲ್ಲಾ ಸಂಪತ್ತನಿತ್ತೆ ಎಲ್ಲರಿಗೆಂದೇ ಕೊಟ್ಟೇ 
ಎಲ್ಲಾ ಸಂಪತ್ತನಿತ್ತೆ ಎಲ್ಲರಿಗೆಂದೇ ಕೊಟ್ಟೇ 
ಹಂಚಿಕೊಂಡು ಬಾಳಲರಿಯದ ದುರಾಸೆ ಜನ 
ವಂಚನೆ ಮಾಡುತಿರುವರೋ 
ಬಡವರನ್ನು ತುಳಿದು ಅಹಂಕಾರದಲ್ಲಿ ಮೆರೆದು 
ಅನ್ಯಾಯ ಮಾಡುತಿರುವರೋ 
ಹಳ್ಳಿಯಾದರೇನು ಶಿವಾ  ಡಿಲ್ಲಿಯಾದರೇನು ಶಿವಾ   
ಜನರೆಲ್ಲಾ ಒಂದೇ ಶಿವಾ ಎಲ್ಲಾ ನಿನ್ನಂತೆ ಶಿವಾ 
ಜಗವೆಲ್ಲಾ ನಿನ್ನದೇ ಶಿವಾ 

ಮಹಡಿಯಲ್ಲಿದ್ದರೇನು ಗುಡಿಸಲಲ್ಲಿದ್ದರೇನು 
ಮಹಡಿಯಲ್ಲಿದ್ದರೇನು ಗುಡಿಸಲಲ್ಲಿದ್ದರೇನು 
ಹಸಿವಿಗೆ ಅನ್ನ ತಿನ್ನದೇ ಚಿನ್ನವನು ತಿನ್ನಲು ಸಾಧ್ಯವೇನೂ
ಸ್ವಾರ್ಥದಿಂದ ಕೂಡಿ ಏನೇನೋ ಆಟವಾಡಿ
ಬರಿಗೈಲಿ ಕಡೆಗೇ  ನಡೆವರು
ಹಳ್ಳಿಯಾದರೇನು ಶಿವಾ  ಡಿಲ್ಲಿಯಾದರೇನು ಶಿವಾ   
ಜನರೆಲ್ಲಾ ಒಂದೇ ಶಿವಾ ಎಲ್ಲಾ ನಿನ್ನಂತೆ ಶಿವಾ 
ಜಗವೆಲ್ಲಾ ನಿನ್ನದೇ ಶಿವಾ
--------------------------------------------------------------------------------------------------------------------------

ಮೇಯರ್ ಮುತ್ತಣ್ಣ (೧೯೬೯)
ರಚನೆ: ಚಿ. ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಗಾಯಕ: ಎಲ್.ಆರ್. ಈಶ್ವರಿ


ಹಲೋ... ಎಸ್... ಯು ಪ್ಲೀಸ್.... ಯು ಪ್ಲೀಸ್....
ಹಲೋ ಹಲೋ.. ಹಲೋ ಹಲೋ..
ರಿಬಬಾ ಬಬ ರಿಬಬಾ ರಿಬಬಾ ಬಬ ರಿಬಾ
ನಿಲ್ಲೋ ನಿಲ್ಲೋ ನೀ ನೋಡುವೇ ಎಲ್ಲೋ
ನಿನ್ ನಲ್ಲೇ ಇಲ್ಲಿ ನಿಂತಿಹಳಲ್ಲೋ
ಅಯ್ಯ ಅಯ್ಯಾ...
ಹಲೋ ಹಲೋ.. ಹಲೋ ಹಲೋ..
ರಿಬಬಾ ಬಬ ರಿಬಬಾ ರಿಬಬಾ ಬಬ ರಿಬಾ
ನಿಲ್ಲೋ ನಿಲ್ಲೋ ನೀ ನೋಡುವೇ ಎಲ್ಲೋ
ನಿನ್ ನಲ್ಲೇ ಇಲ್ಲಿ ನಿಂತಿಹಳಲ್ಲೋ
ಅಯ್ಯ ಅಯ್ಯಾ...

ಈ ಅಂದವೆಲ್ಲಾ ನಿನಗಾಗಿ ನಲ್ಲಾ
ಸುಮ್ಮನೇ ನಿಂತೇಕೇ ಕಳೆಯುವೆ ಕಾಲ
ನಿನ್ನಾಸೆಯೆಲ್ಲಾ ನಾ ಬಲ್ಲೆ ನಲ್ಲ
ತುಂಬಿದೆ ಕಣ್ಣಲ್ಲಿ ಮೋಹದ ಜಾಲ
ಹೊತ್ತು ಮೀರಿದೆ ಕತ್ತಲಾಗಿದೇ
ಮೆತ್ತ ಮೆತ್ತಗೆ ಬಾ...
ಹಲೋ ಹಲೋ..ಹ್ಹಾಂ  ಹಲೋ ಹಲೋ..
ನಿಲ್ಲೋ ನಿಲ್ಲೋ ನೀ ನೋಡುವೇ ಎಲ್ಲೋ
ಅಯ್ಯ ಅಯ್ಯಾ...

ಸಂಕೋಚವೇಕೇ ನಾಚಿಕೆ ಏಕೇ
ಹತ್ತಿರ ಬರದಲ್ಲೇ ನೋಡುವೇ ಏಕೇ
ಮಧುವಿನ ಸಾಕೇ ಈ ವಧು ಬೇಕೇ
ಬೆಚ್ಚನೇ ಮತ್ತೊಮ್ಮೆ ಸಿಕ್ಕದು ಜೋಕೇ
ಹೊತ್ತು ಮೀರಿದೆ ಎತ್ತ ಹೋಗುವೇ
ಇತ್ತ ಇತ್ತ ನೀ  ಬಾ... 
 ಹಲೋ ಹಲೋ.. ಹಹ್ಹಹ್ ಹಲೋ ಹಲೋ..
ರಿಬಬಾ ಬಬ ರಿಬಬಾ ರಿಬಬಾ ಬಬ ರಿಬಾ
ನಿಲ್ಲೋ ನಿಲ್ಲೋ ನೀ ನೋಡುವೇ ಎಲ್ಲೋ
ನಿನ್ ನಲ್ಲೇ ಇಲ್ಲಿ ನಿಂತಿಹಳಲ್ಲೋ
ಅಯ್ಯ ಅಯ್ಯಾ... ಯ್ಯಾ....
--------------------------------------------------------------------------------------------------------------------------

ಮೇಯರ್ ಮುತ್ತಣ್ಣ (೧೯೬೯)
ರಚನೆ: ಚಿ. ಉದಯಶಂಕರ್  ಸಂಗೀತ: ರಾಜನ್-ನಾಗೇಂದ್ರ  ಗಾಯಕ: ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ

ಮೇಯರ್ ಮುತ್ತಣ್ಣ ಮೇಯರ್ ಮುತ್ತಣ್ಣ ಮೇಯರ್ ಮುತ್ತಣ್ಣ
ಮೇಯರ್ ಮುತ್ತಣ್ಣ ಮೇಯರ್ ಮುತ್ತಣ್ಣ ಮೇಯರ್ ಮುತ್ತಣ್ಣ
ಮೇಯರ್ ಮುತ್ತಣ್ಣ

ಲಾ ಲಾ ಲಾಲಾಲಾ ಲಾ ಲಾ ಲಾಲಾಲಾ ಲಾ ಲಾ ಲಾಲಾಲಾ
ಲಾ ಲಾ ಲಾಲಾಲಾ ಲಾ ಲಾ ಲಾಲಾಲಾ ಲಾ ಲಾ ಲಾಲಾಲಾ

ಮೇಯರ್ ಮುತ್ತಣ್ಣ ಮೇಯರ್ ಮುತ್ತಣ್ಣ ಮೇಯರ್ ಮುತ್ತಣ್ಣ
ಮೇಯರ್ ಮುತ್ತಣ್ಣ ಮೇಯರ್ ಮುತ್ತಣ್ಣ ಮೇಯರ್ ಮುತ್ತಣ್ಣ
ಮೇಯರ್ ಮುತ್ತಣ್ಣ ಮೇಯರ್ ಮುತ್ತಣ್ಣ ಮೇಯರ್ ಮುತ್ತಣ್ಣ
------------------------------------------------------------------------------------------------------------------------




























No comments:

Post a Comment