203. ಸ್ವಯಂವರ (1973)


ಸ್ವಯಂವರ ಚಿತ್ರದ ಹಾಡುಗಳು 
  1. ಈ ಜಾಗವೊಂದು ನ್ಯಾಯಾಲಯಾ 
  2. ಪ್ರಿಯ ಸಖಿ ಪ್ರಿಯಂವದೇ 
  3. ಕೋಟಿಗೆ ಒಬ್ಬ ನಾಡಿಗೆ ಒಬ್ಬ 
  4. ನಿನ್ನ ಕಣ್ಣ ಕನ್ನಡಿಯಲ್ಲಿ 
ಸ್ವಯಂವರ (1973) - ಈ ಜಗವೊಂದು ನ್ಯಾಯಾಲಯ
ಸಾಹಿತ್ಯ: ಸೋರಟ್ ಅಶ್ವಥ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ


ಈ ಜಗವೊಂದು ನ್ಯಾಯಾಲಯ ಇದರ ಅಧಿಕಾರಿ ಅವನೇನಯ್ಯ
ಈ ಜಗವೊಂದು ನ್ಯಾಯಾಲಯ ಇದರ ಅಧಿಕಾರಿ ಅವನೇನಯ್ಯ
ನ್ಯಾಯವ ಅರೆಸುವ ಅನ್ಯಾಯವ ಮೆರೆಸುವ
ಈ ಜಗವೊಂದು ನ್ಯಾಯಾಲಯ ಇದರ ಅಧಿಕಾರಿ ಅವನೇನಯ್ಯ

ವಾತ್ಸಲ್ಯ ಮಮತೆಯ ತಲೆ ಇತ್ತು
ಒಲವಿಂದ ನಗುವಾಗ ತಾನೆ ಕಿತ್ತು
ವಾತ್ಸಲ್ಯ ಮಮತೆಯ ತಲೆ ಇತ್ತು
ಒಲವಿಂದ ನಗುವಾಗ ತಾನೆ ಕಿತ್ತು
ವ್ಯಥೆಯನೇ... ತುಂಬುವಾ...
ವ್ಯಥೆಯನೇ... ತುಂಬುವಾ...
ಕಥೆಯನೆ ನಡೆಸುವ ನಡೆಸುವ ನಡೆಸುವ
ಈ ಜಗವೊಂದು ನ್ಯಾಯಾಲಯ ಇದರ ಅಧಿಕಾರಿ ಅವನೇನಯ್ಯ
ನ್ಯಾಯವ ಅರಸುವ ಅನ್ಯಾಯವ ಮೆರೆಸುವ
ಈ ಜಗವೊಂದು ನ್ಯಾಯಾಲಯ ಇದರ ಅಧಿಕಾರಿ ಅವನೇನಯ್ಯ

ಬಾಳಲ್ಲಿ ಆಸೆ ಎಂಬ ದೀಪವಿಟ್ಟು ಛಲವೆಂಬ ಗಾಳಿಯಲಿ ಆರಬಿಟ್ಟು
ಬಾಳಲ್ಲಿ ಆಸೆ ಎಂಬ ದೀಪವಿಟ್ಟು ಛಲವೆಂಬ ಗಾಳಿಯಲಿ ಆರಬಿಟ್ಟು
ಅಳಿಸುವಾ...ಆಆಆ.... ನಗಿಸುವಾ....ಆಆಆ... 
ಅಳಿಸುವಾ ನಗಿಸುವಾ ಆಟವ ಆಡುವ ಆಡುವಾ ಆಡುವಾ
ಈ ಜಗವೊಂದು ನ್ಯಾಯಾಲಯ ಇದರ ಅಧಿಕಾರಿ ಅವನೇನಯ್ಯ
ಇದರ ಅಧಿಕಾರಿ ಅವನೇನಯ್ಯ
ಇದರ ಅಧಿಕಾರಿ ಅವನೇನಯ್ಯ

ಮಾನ ಅಭಿಮಾನ ಖನಿಕನಕೆ ಬೆಲೆ ಇಲ್ಲವೆ
ಇದಕೆ ಅಪಮಾನ ಕಣ್ಣೀರೆ ಪರಿಹಾರವೆ
ಸಿರಿತನಾ ಬಡತನಾ ಭೇದವ ತೋರುವ ತೋರುವ ತೋರುವ
ಈ ಜಗವೊಂದು ನ್ಯಾಯಾಲಯ  ಇದರ ಅಧಿಕಾರಿ ಅವನೇನಯ್ಯ
--------------------------------------------------------------------------------------------------------------------------

ಸ್ವಯಂವರ (೧೯೭೩) - ನಿನ್ನ ಕಣ್ಣ ಕನ್ನಡಿಯಲ್ಲಿ,
ರಚನೆ: ಆರ್. ಏನ್. ಜಯಗೋಪಾಲ್   ಸಂಗೀತ: ರಾಜನ್-ನಾಗೇಂದ್ರ   ಗಾಯಕ: ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ

ಗಂ: ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
      ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
     ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ
ಹೆ: ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ 
     ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ
    ನಗೆಯು ತಂದ ಮೋಡಿಯಲ್ಲಿ, ನಲಿಯುತೆನ್ನ ಜೀವ

ಹೆ: ಬಾನ ಹಕ್ಕಿ ಹಾಡೋ ವೇಳೆ, ಉದಯ ರವಿಯು ಮೂಡುವ ವೇಳೆ
     ಬಾನ ಹಕ್ಕಿ ಹಾಡೋ ವೇಳೆ, ಉದಯರವಿಯು ಮೂಡುವ ವೇಳೆ
     ನೀನು ಬರುವ ಹಾದಿಯಲ್ಲಿ ಹೃದಯ ಹಾಸಿ ನಿಲ್ಲುವೆ
ಗಂ: ಆಆಆ....  ಮರದ ನೆರಳ ತಂಪಿನಲ್ಲಿ, ನಿನ್ನ ಮಡಿಲ ಹಾಸಿಗೆಯಲ್ಲಿ
      ತಲೆಯು ಇಟ್ಟು ಮಲಗಿರುವಾಗ ಸ್ವರ್ಗ ಅಲ್ಲೆ ಕಾಣುವೆ
ಹೆ: ನನ್ನ ಮನವ ಆಳಬಂದ ನನ್ನವನೆ ಚೆನ್ನಿಗನೆ
ಗಂ: ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
       ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ
       ನಿನ್ನ ಕಣ್ಣ ಕನ್ನಡಿಯಲ್ಲಿ

ಗಂ: ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ
     ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ
     ಒಲಿದು ಬಂದ ವನದೇವತೆಯೋ, ಸೊಗಸು ಏನ ಹೇಳಲಿ
ಹೆ:  ಹೂವ ಸಂಗ ಕೂಡಿ ಆಡಿ ಕಂಪು ಕದ್ದು ಮೆಲ್ಲನೆ ಓಡಿ
      ತೂರಿ ಬಂದ ಗಾಳಿಯಲ್ಲಿ ಬಂದೆ ನನ್ನ ತೊಳಲಿ
ಗಂ: ನಿನ್ನ ಚೆಲುವ ಮೋಡಿ ನೋಡಿ ಮೈ ಮರೆತೆ ಮನ ಸೋತೆ
ಹೆ: ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ
     ನಗೆಯು ತಂದ ಮೋಡಿಯಲ್ಲಿ, ನಲಿಯುತೆನ್ನ ಜೀವ
ಜೊ: ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
--------------------------------------------------------------------------------------------------------------------------

ಸ್ವಯಂವರ (೧೯೭೩) - ಪ್ರಿಯಸಖೀ ಪ್ರಿಯಂವಧೇ ನೋಡೇ
ರಚನೆ: ಆರ್. ಏನ್. ಜಯಗೋಪಾಲ್   ಸಂಗೀತ: ರಾಜನ್-ನಾಗೇಂದ್ರ   ಗಾಯಕ: ಪಿ. ಸುಶೀಲ

ಹೆಣ್ಣು :  ಆಆಅ... ಆಆಅ... ಓಓಓ
           ಪ್ರಿಯಸಖೀ ಪ್ರಿಯಂವಧೇ ನೋಡೇ
           ವಸಂತ ಕಾಲ ಬಂದಿದೆ... ಆಆಆ
           ವಸಂತ ಕಾಲ ಬಂದಿದೆ
           ತರುಲತೆ ಹೊಸಕಥೆ ಹೇಳುತಿದೆ
           ಅಪ್ಪಿ ತಪ್ಪಿ ಒಂದನೊಂದು ಕೂಗುತಿದೆ
ಕೋರಸ್ : ಅತ್ತ ಇತ್ತ ಜಿಂಕೆ ಮರಿ ಓಡುತಿದೆ
               ತಕ್ಕ ಥೈಯಾ ನವಿಲು ನಾಟ್ಯ ಆಡುತಿದೇ
ಹೆಣ್ಣು : ಓ..ಡಿಯರ್ ಹಾಡುತಿದೇ ಹೂ... ಅರಳೀ ನಗುತಿದೆ
ಕೋರಸ್ : ಪ್ರಿಯಸಖೀ ಪ್ರಿಯಂವಧೇ
                ನೋಡೇ ವಸಂತ ಕಾಲ ಬಂದಿದೆ... ಆಆಆ
                ನೋಡೇ ವಸಂತ ಕಾಲ ಬಂದಿದೆ

ಹೆಣ್ಣು : ಪ್ರಿಯತಮನೇ ನಿರ್ಗಯ್ಯನೇ
          ಮರೆತೆಯೇನೇ ನಲ್ಲೆಯನು
          ವಿರಹದ ತಾಪದಲಿ ಬಳಲುತಿಹ ಕಾಂತೆಯನು
          ದಾರಿ ಕಾದು ಕಾದು ಸೋತೇ
          ಕಣ್ಣು ತುಂಬಿ ನೊಂದು ನಿಂತೇ
          ಬಾರಾ ನೀಗೂ ನನ್ನ ಚಿಂತೇ
ಕೋರಸ್ : ಪ್ರಿಯಸಖೀ ಪ್ರಿಯಂವಧೇ
                ಹೇಳೇ ಇವಳ ತಾಪ ತೀರದೆ ಓಓಓ

                ಹೇಳೇ ಇವಳ ತಾಪ ತೀರದೆ ಆಆಆ

ಕೋರಸ್ : ನೋ..ನೋಡಿ ಈ ಕೋಮಲೆ
                ಪ್ರಭು ನಿಮ್ಮ ಶಾಕುಂತಲೇ
                ಈಗೋ ನೋಡಿ ಈ ಕೋಮಲೆ
                ಪ್ರಭು ನಿಮ್ಮ ಶಾಕುಂತಲೇ
ಹೆಣ್ಣು : ಪುನೀತೇ ನಾ ಈ ಪಾದ ಧೂಳಿಂದಲೇ
          ರೋರಿ ನಾ ನಿಮ್ಮ ದಾಸಿ ಪ್ರೋಚಿ ಈಗಲೇ
          ಇದೋ ನಿಮ್ಮ ಶಾಕುಂತಲೇ
          ಪ್ರಭೋ ನೀಡಿ ಪ್ರೀತಿ ಎಲೇ
          ಅಂದು ಭ್ರಮರವ ಓಡಿಸುವಂತೇ ಬಂದು
          ಮುಗುದೇ ಮನತೆಳೆದುದನೆ ಮರೆತೀರಾ
          ಗಾಂಧರ್ವ ವಿಧಿಯಂತೆ   ಹೂಮಾಲೆ ತಂದು...
          ಎನ್ನ ವರಿಸಿದುದು ಮರೆತಿರಾ...
          ಎಂದೂ ನಾ ನಿನ್ನ ಕೈ ಬಿಡೇನು ಎಂದು
          ಉಂಗುರ ತೊಡಿಸಿದುದ ನೀವೇ ಮರೆತೀರಾ
          ಅಹ್ಹಹ ಅಹ್ಹಹ ಅಹ್ಹಹ
          ಪಾದ ಪೂಜೆಯದು ತನತಡವಾಗಲು
          ತಾಳಿದನಾ ಮುನಿ ಕೋಪಾ...
          ಬೇಡಿದರನಿತೂ ಕರುಣೆಯ ತೋರದೇ
         ನೀಡಿದ ಎನಗೇ ಶಾಪಾ...
          ನಯನುಡಿಗಳಲಿ ನಂಬಿಕೆ ಹಾರಿ
          ವಂಚನೆ ಮಾಡಿದ ಭೂಪಾ..
          ಅರಿಯದೇ... ಎನ್ನದೇ...
          ಕೈ ಹಿಡಿದವಳ ಕಂಬನಿ ಹೃದಯದ ತಾಪ
         ಅಬಲೆಗೆ ಈ ಅನ್ಯಾಯವೇ...  ನಿಮಗೀಯೋ ನ್ಯಾಯವೇ
        ಇದು ನ್ಯಾಯವೇ...
-------------------------------------------------------------------------------------------------------------------------

ಸ್ವಯಂವರ (೧೯೭೩) - ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ
ರಚನೆ: ಚಿ.ಉದಯಶಂಕರ ಸಂಗೀತ: ರಾಜನ್-ನಾಗೇಂದ್ರ   ಗಾಯಕ: ಪಿ. ಬಿ. ಶ್ರೀನಿವಾಸ್,ಎಸ್.ಜಾನಕೀ 

ಹೆಣ್ಣು : ಓಓಓ.... ಓಓಓಓ.... ಕೋಟಿಗೆ ಒಬ್ಬ ನಾಡಿಗೆ ಒಬ್ಬ
          ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ
ಕೋರಸ್:  ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ
ಹೆಣ್ಣು : ಸಾವಿಂದ ಪಾರಾಗಿ ಜಯ ಹೊಂದಿ ಬಂದ 
          ನಮ್ಮೂರ ಜನಕೆಲ್ಲಾ ಹೊಸ ಹಬ್ಬ ತಂದ             
ಕೋರಸ್ : ಸಾವಿಂದ ಪಾರಾಗಿ ಜಯ ಹೊಂದಿ ಬಂದ 
                 ನಮ್ಮೂರ ಜನಕೆಲ್ಲಾ ಹೊಸ ಹಬ್ಬ ತಂದ             
ಕೋರಸ್ : ಓಓಓ....ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ 

ಹೆಣ್ಣು : ಎಂದು ಎಂದೆಂದಿಗೂ ದುಡಿವ ಜನರ ಶಕ್ತಿಯಾಗಿ ನೀ ಬಾಳು
          ಎಲ್ಲರ ಪ್ರೇಮದ ಕಣ್ಣಾಗೂ ಎಲ್ಲರ ಬಾಳಿನ ಬೆಳಕಾಗೂ
          ನಿನ್ನಾ ಬಾಳಲಿ ನಲಿವು ಗೆಲುವು ಸರಸ ಹರುಷ ತುಂಬಿರಲೀ
          ಎಲ್ಲರ ಹರಕೆಯು ಒಂದಾಗಿ ನಿನ್ನನು ಸೇರಲಿ ಹೂವಾಗಿ
ಕೊರಸ: ಎಲ್ಲರ ಹರಕೆಯು ಒಂದಾಗಿ ನಿನ್ನನು ಸೇರಲಿ ಹೂವಾಗಿ
           
ಗಂಡು : ಓ..ಓ..ಓ.. ತಾಯಿ ತಂದೇ... ದೇವರ ಕಂಡೇ
            ತಾಯಿ ತಂದೇ... ದೇವರ ಕಂಡೇ ನಿಮ್ಮಲ್ಲೇ
           ನೀವೂ ತೋರಿದ ಸಂತೋಷದಲ್ಲಿ ನಿಮ್ಮೆಲ್ಲರ ಪ್ರೇಮ ಕಂಗಳಲ್ಲಿ
            ಓ..ಓ..ಓ.. ತಾಯಿ ತಂದೇ... ದೇವರ ಕಂಡೇ  ನಿಮ್ಮಲ್ಲೇ
ಕೋರಸ್ : ತಂದಾನ ತಾನಾ ತಾನಾ ತಾನಾ ತಾನಾ ತಾನಾ
                ತಂದಾನ ತಾನಾ ತಾನಾ ತಾನಾ ತಾನಾ ತಾನಾ ತಂದಾನ
ಗಂಡು : ನಿಮ್ಮ ಸ್ನೇಹದ ಭಾಗ್ಯವೊಂದೇ ಸಾಕು ನನಗೆ ಕಡೆತನಕ
            ಎಂದು ಬೇಡುವೇ ದೇವರಲಿ ಎಲ್ಲರೂ ನಲಿಯುತ ನಗುತಿರಲಿ
ಕೋರಸ್ : ಓಓಓ....ಕೋಟಿಗೆ ಒಬ್ಬ ನಾಡಿಗೆ ಒಬ್ಬ ಈ ರಾಜಾ 
--------------------------------------------------------------------------------------------------------------------------

No comments:

Post a Comment