206. ಆಲೆಮನೆ (1981)

ಆಲೆಮನೆ ಚಲನಚಿತ್ರದ ಹಾಡುಗಳು 
  1. ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ
  2. ಎಲ್ಲ ಮೇಲು ಕೀಳು, ಸುಳ್ಳು ಭೇದ ಭಾವ, ಬಗೆದ ಮನುಜ ಕಾಣೋ
  3. ಹೊತ್ತಾರೆ ಸೂರ್ಯನಂಗೆ ಹತ್ತೂರ ಶೂರನಂಗೆ
ಆಲೆಮನೆ (1981) - ನಮ್ಮೂರ ಮಂದಾರ ಹೂವೇ...
ಸಂಗೀತ : ಅಶ್ವತ್ಥ್ - ವೈದಿ ಸಾಹಿತ್ಯ: ದೊಡ್ಡರಂಗೆಗೌಡ  ಗಾಯನ: ಎಸ್.ಪಿ. ಬಾಲಸುಬ್ರಮಣ್ಯಮ್

ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ

ಕಣ್ಣಲ್ಲೇ ಕರೆದು ಹೊಂಗನಸ ತೆರೆದು ಸಂಗಾತಿ ಸಂಪ್ರೀತಿ ಸೆಳೆದೆ
ಅನುರಾಗ ಹೊಳೆದು ಅನುಬಂಧ ಬೆಳೆದು ಸಮ್ಮೋಹ ಸಂಬಂಧ ಮಿಡಿದೆ
ಮೂಡಿದ ಮೋಹದ ಸೊಗಸಾದ ಕಾರಂಜಿ ಬಿರಿದೆ
ಸೊಗಸಾದ ಕಾರಂಜಿ ಬಿರಿದೆ
ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ

ಒಡಲಾಳ ಮೊರೆದು ಒಡನಾಟ ಮೆರೆದು ಒಡನಾಡಿ ಬಾಂಧವ್ಯ ಕಂಡೆ
ಋತುಮಾನ ಮೀರಿ ಹೊಸಗಾನ ತೋರಿ ಹಿತವಾದ ಮಾಧುರ್ಯ ಮಿಂದೆ
ತೀರದ ಮೋಹದ ಇನಿದಾದ ಆನಂದ ತಂದೆ
ಇನಿದಾದ ಆನಂದ ತಂದೆ
ನಮ್ಮೂರ ಮಂದಾರ ಹೂವೆ ನನ್ನೊಲುಮೆ ಬಾಂದಳದ ಚೆಲುವೆ
ಬಳಿ ಬಂದು ಬಾಳನ್ನು ಬೆಳಗು ನನ್ನ ಬರಿದಾದ ಮನದಲ್ಲಿ ಮಿನುಗು
ನಮ್ಮೂರ ಮಂದಾರ ಹೂವೆ
-----------------------------------------------------------------------------------------------------------------------

ಆಲೆಮನೆ (1981) -ಎಲ್ಲ ಮೇಲು ಕೀಳು,ಸಂಗೀತ : ಅಶ್ವತ್ಥ್ - ವೈದಿ ಸಾಹಿತ್ಯ: ದೊಡ್ಡರಂಗೇ ಗೌಡ  ಹಾಡಿದವರು: ಸಿ.ಅಶ್ವಥ್

ಎಲ್ಲ ಮೇಲು ಕೀಳು, ಸುಳ್ಳು ಭೇದ ಭಾವ, ಬಗೆದ ಮನುಜ ಕಾಣೋ
ಬಿಡು ರಾಗ ದ್ವೇಷ, ಸುಡು ಕಾಮ ಕ್ರೋಧ, ಮಿತಿಯ ಅರಿತು ಬಾಳೋ
ಎಲ್ಲ ಮೇಲು ಕೀಳು, ಸುಳ್ಳು ಭೇದ ಭಾವ, ಬಗೆದ ಮನುಜ ಕಾಣೋ
ಬಿಡು ರಾಗ ದ್ವೇಷ, ಸುಡು ಕಾಮ ಕ್ರೋಧ, ಮಿತಿಯ ಅರಿತು ಬಾಳೋ

ಯಾಕೊ ಕುಟಿಲ ಕುಹಕ ಕಾರ್ಯ, ನೋಡ ಧವಳ ಚಂದ ಸೂರ್ಯ
ಯಾಕೊ ಕುಟಿಲ ಕುಹಕ ಕಾರ್ಯ, ನೋಡ ಧವಳ ಚಂದ ಸೂರ್ಯ
ದಿಟವಾಗಿ ನೀನು ಬದುಕು, ಬೆಳಗಯ್ಯ ನಿತ್ಯ ಸತ್ಯ
ದಿಟವಾಗಿ ನೀನು ಬದುಕು, ಬೆಳಗಯ್ಯ ನಿತ್ಯ ಸತ್ಯ

ಎಂದೂ ಇರಲಿ ನಡತೆ ಶುದ್ಧ, ಮುಂದೆ ಯಶದ ದಾರಿ ಸಿದ್ಧ
ಎಂದೂ ಇರಲಿ ನಡತೆ ಶುದ್ಧ, ಮುಂದೆ ಯಶದ ದಾರಿ ಸಿದ್ಧ
ಕಡಿವಾಣ ಕಂಡ ಮನಸು, ಇರಲಯ್ಯ ನಿಯಮ ಬದ್ಧ
ಕಡಿವಾಣ ಕಂಡ ಮನಸು, ಇರಲಯ್ಯ ನಿಯಮ ಬದ್ಧ
ಮೋಸ ಕಪಟ ಕಹಿಯ ಹೊಂಡ, ರೋಷ ಎಂದೂ ಬೆಂಕಿ ಕುಂಡ
ಮೋಸ ಕಪಟ ಕಹಿಯ ಹೊಂಡ, ರೋಷ ಎಂದೂ ಬೆಂಕಿ ಕುಂಡ
ಬಿಡಬೇಕು ನಿದ್ದೆ ಕುರುಡ, ಕಲಿಯಯ್ಯ ಸಹನೆ ಹಾಡ
ಬಿಡಬೇಕು ನಿದ್ದೆ ಕುರುಡ, ಕಲಿಯಯ್ಯ ಸಹನೆ ಹಾಡ
--------------------------------------------------------------------------------------------------------------------------

ಆಲೆಮನೆ(೧೯೮೧)......ಹೊತ್ತಾರೆ ಸೂರ್ಯನಂಗೆ ಹತ್ತೂರ ಶೂರನಂಗೆಸಂಗೀತ : ಅಶ್ವತ್ಥ್ - ವೈದಿ ಸಾಹಿತ್ಯ : ದೊಡ್ಡರಂಗೇಗೌಡ  ಗಾಯನ : ಎಸ್.ಪಿ.ಬಿ, ಎಸ್.ಜಾನಕಿ

ಹೆಣ್ಣು : ಹೊತ್ತಾರೆ ಸೂರ್ಯನಂಗೆ ಹತ್ತೂರ ಶೂರನಂಗೆ
          ಚಿತ್ತಾವ ಕಲಕಿ ನಿಂತ ಗೆಣೆಗಾರ ಹತ್ತಿರ ಬಾರೋ ನನ್ನ ಜೊತೆಗಾರ
ಗಂಡು : ಬಾನಿನ ಚಂದ್ರನಂಗೆ ಓಡುವಾ ಜಿಂಕೆಯಂಗೆ
            ಸುತ್ತಲೂ ಸುಳಿದೇ ನೀನು ಗೆಣೆಕಾತಿ ಹತ್ತಿರ ಬಾರೇ ನನ್ನ ಜೊತೆಗಾತಿ

ಹೆಣ್ಣು : ಕಾಡಾನೆ ಬೆಳೆದಹಂಗೆ ಬೆಳೆದು ಚೆಂಗುದುರೆ ಕೆನೆದಹಂಗೆ ಕೆನೆದು
          ಹಮ್ಮೀರ ನೀನಾಗಿ ಮನಸಾ ಕದ್ದೆ
ಗಂಡು : ಕೆಂದಾವರೆ ದಳದಹಂಗೆ ಹೊಳೆದು ಸಾರಂಗದ ನಡೆಯಂಗೆ ಸುಳಿದು
           ಒತ್ತಾಯ ಮಾಡದಹಂಗೆ ಹೃದಯಾ ಗೆದ್ದೆ
ಹೆಣ್ಣು :  ನೀನೆಂದೂ ವೀರಾ ಧೀರಾ                 
ಗಂಡು :   ಈ ನಮ್ಮಾ ಆಸೆ ಪೂರಾ
ಹೆಣ್ಣು :  ನೂರೆಂಟು ನೋಟದಿಂದ ನನ್ನ ಕರೆದೆ       
ಗಂಡು :  ಏನೇನೋ ಅಳುಕಿನಿಂದ ನನ್ನ ಸೆಳೆದೆ
ಹೆಣ್ಣು :ಹೊತ್ತಾರೆ ಸೂರ್ಯನಂಗೆ ಹತ್ತೂರ ಶೂರನಂಗೆ
             ಚಿತ್ತಾವ ಕಲಕಿ ನಿಂತ ಗೆಣೆಗಾರ ಹತ್ತಿರ ಬಾರೋ ನನ್ನ ಜೊತೆಗಾರ
ಗಂಡು :  ಹತ್ತಿರ ಬಾರೇ ನನ್ನ ಜೊತೆಗಾತಿ

ಗಂಡು :  ಮುಂಗಾರ ನವಿಲಂಗೆ ಕುಲಕಿ ಹೊಂಬಾಳೆ ಸುಳುಯಂಗೆ ಬಳುಕಿ
             ಕಣ್ಣಲ್ಲೇ ಮೋಜಿನಿಂದ ಸೊಬಗಾ ತಂದೆ
ಹೆಣ್ಣು :  ನಾಡಾಡಿ ಹುಲಿಯಂಗೆ ಮೆರೆದು ಸಿಂಹದಾ ಮರಿಯಂಗೆ ಸೆಟೆದು
           ನನ್ನಾಸೆ ಬನದಾಗೆ ನೆಲೆಯಾ ಕಂಡೆ
ಗಂಡು :  ನಿನ್ನೆಲ್ಲ ಮಾತೂ ಬೆಲ್ಲ
ಹೆಣ್ಣು :  ನಿನ್ನಲ್ಲ ಆಟ ಸಲ್ಲ
ಗಂಡು :  ಚೆಲ್ಲಾಟದ ಗೀಳಿನಿಂದ ನನ್ನ ಎಳೆದೆ
ಹೆಣ್ಣು :  ತುಂಟಾಟದ ಜೋರಿನಿಂದ ನನ್ನ ಹಿಡಿದೆ
ಗಂಡು  :  ಬಾನಿನ ಚಂದ್ರನಂಗೆ ಓಡುವಾ ಜಿಂಕೆಯಂಗೆ
              ಸುತ್ತಲೂ ಸುಳಿದೇ ನೀನು ಗೆಣೆಕಾತಿ ಹತ್ತಿರ ಬಾರೇ ನನ್ನ ಜೊತೆಗಾತಿ
ಹೆಣ್ಣು : ಹತ್ತಿರ ಬಾರೋ ನನ್ನ ಜೊತೆಗಾರ
--------------------------------------------------------------------------------------------------------------------------

No comments:

Post a Comment