208. ಭಾಗ್ಯ ಜ್ಯೋತಿ(1975)

ಭಾಗ್ಯ ಜ್ಯೋತಿ ಚಿತ್ರದ ಹಾಡುಗಳು 
  1. ಕುಂಕುಮ ಹಣೆಯಲ್ಲಿ ಕರಗಿದೆ 
  2. ದಿವ್ಯ ಗಗನ ವನವಾಸಿನಿ 
  3. ಗುಡಿ ಸೇರದ ಮುಡಿಯೇರದ 
  4. ಎಲ್ಲೋ ನೀನು ನೋಡುತ ನಗುವೇ 
  5. ಹಿಂದೆ ನಡೆದುದು ಇಂದಿಗೂ ಉಂಟು 

ಭಾಗ್ಯ ಜ್ಯೋತಿ(1975) - ಗುಡಿ ಸೇರದ ಮುಡಿಯೇರದ
ಸಾಹಿತ್ಯ : ವಿಜಯ ನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ಕಸ್ತೂರಿ ಶಂಕರ್

ಗುಡಿ ಸೇರದ ಮುಡಿಯೇರದ ಕಡೆಗಾಣಿಸೋ ಹೂವಲ್ಲ
ಈಡೇರದ ಮನದಾಸೆಯ ಮನೆಯಾಕೆಗೆ ನೆಲೆಯಿಲ್ಲ
ಮನೆಯಾಕೆಗೆ ನೆಲೆಯಿಲ್ಲ
ಗುಡಿ ಸೇರದ ಮುಡಿಯೇರದ ಕಡೆಗಾಣಿಸೋ ಹೂವಲ್ಲ

ಸ್ನೇಹದ ಸೌರಭ ತುಂಬಿದ ಸೊಂಪಿಗೇ ಪ್ರೀತಿಯ ಕರಗಳ ತಾಣವಿದೆ
ಸ್ನೇಹದ ಸೌರಭ ತುಂಬಿದ ಸೊಂಪಿಗೇ ಪ್ರೀತಿಯ ಕರಗಳ ತಾಣವಿದೆ
ಮಮತೆಯ ಮಲ್ಲಿಗೆ ಬಾಡದ ಲತೆಯಲಿ ಕರೆದಿದೇ ನಿನ್ನನ್ನೂ ಬಾರಾ.. ಬಾರಾ ....ಬಾರಾ
ಗುಡಿ ಸೇರದ ಮುಡಿಯೇರದ ಕಡೆಗಾಣಿಸೋ ಹೂವಲ್ಲ

ಸೇವೆಯ ನೀಡಲೂ ಮೀಸಲು ಎನ್ನುತಾ ಒಲವಿನ ಸ್ವಾಗತ ತೋರುತಿದೆ
ಸೇವೆಯ ನೀಡಲೂ ಮೀಸಲು ಎನ್ನುತಾ ಒಲವಿನ ಸ್ವಾಗತ ತೋರುತಿದೆ
ಅಂದವೂ ತುಂಬಿದೆ ಆದರ ತೋರಿದೇ ಆಲಿಸೀ ಕರೆಯನೂ ಬಾರಾ.. ಬಾರಾ ....ಬಾರಾ
ಗುಡಿ ಸೇರದ ಮುಡಿಯೇರದ ಕಡೆಗಾಣಿಸೋ ಹೂವಲ್ಲ

ನಂದನವನದಲಿ ಸಾಟಿಯ ಹೂಗಳು ನಗುತಿವೆ ನೈದಿಲೆ ಅಳುತಿರಲು
ನಂದನವನದಲಿ ಸಾಟಿಯ ಹೂಗಳು ನಗುತಿವೆ ನೈದಿಲೆ ಅಳುತಿರಲು
ನೋವನು ನೀಗಿಸಿ ಬಾಳನು ಬೆಳಗಲು ಚಂದಿರ ನೀನೇ ಬಾರಾ ಬಾರಾ..ಬಾರಾ.ಬಾರಾ..
ಗುಡಿ ಸೇರದ ಮುಡಿಯೇರದ ಕಡೆಗಾಣಿಸೋ ಹೂವಲ್ಲ
ಈಡೇರದ ಮನದಾಸೆಯ ಮನೆಯಾಕೆಗೆ ನೆಲೆಯಿಲ್ಲ
ಮನೆಯಾಕೆಗೆ ನೆಲೆಯಿಲ್ಲ
ಗುಡಿ ಸೇರದ ಮುಡಿಯೇರದ ಕಡೆಗಾಣಿಸೋ ಹೂವಲ್ಲ
-------------------------------------------------------------------------------------------------------------------------

ಭಾಗ್ಯ ಜ್ಯೋತಿ(1975) - ಗುಡಿ ಸೇರದ ಮುಡಿಯೇರದ
ಸಾಹಿತ್ಯ : ವಿಜಯ ನಾರಸಿಂಹ ಸಂಗೀತ : ವಿಜಯಭಾಸ್ಕರ್ ಗಾಯನ : ಪಿ.ಬಿ.ಶ್ರೀನಿವಾಸ್, ವಾಣಿ ಜಯರಾಮ್

ಪಿ.ಬಿ. : ಕುಂಕುಮ ಹಣೆಯಲಿ ಕರಗಿದೆ ಏನೇನೊ ಕಥೆಯ ಹೇಳುತಿದೆ
ವಾಣಿ : ಹಣೆಯಲಿ ಕುಂಕುಮ ಕರಗಿದೆ ಏನೇನೊ ಕಥೆಯ ಹೇಳುತಿದೆ
ಪಿ.ಬಿ. : ಕುಂಕುಮ ಹಣೆಯಲಿ ಕರಗಿದೆ ಏನೇನೊ ಕಥೆಯ ಹೇಳುತಿದೆ
           (ಆ... ಆ... ಆ...  ಓ.... ಓ... ಓ... ಓ.. ಓ.. )
ವಾಣಿ : ಹಣೆಯಲಿ ಕುಂಕುಮ ಕರಗಿದೆ    ಏನೇನೊ ಕಥೆಯ ಹೇಳುತಿದೆ
          (ಆ... ಆ... ಆ...  ಓ.... ಓ... ಓ... ಓ.. ಓ.. )

ವಾಣಿ : ಕಣ್ಣಲಿ ಕಂಡ ಕನಸುಗಳೆನಿತೊ ಕಾಣದೆ ಬಂದ ನಿಟ್ಟುಸಿರೆನಿತೊ
          ಕಣ್ಣಲಿ ಕಂಡ ಕನಸುಗಳೆನಿತೊ ಕಾಣದೆ ಬಂದ ನಿಟ್ಟುಸಿರೆನಿತೊ
ಪಿ.ಬಿ.  ಆಡದೆ ಉಳಿದ ಮಾತುಗಳೆನಿತೊ ತೀರದೆ ಉಳಿದ ಬಯಕೆಯು ಎನಿತೊ
ವಾಣಿ : ಹಣೆಯಲಿ ಕುಂಕುಮ ಕರಗಿದೆ  ಏನೇನೊ ಕಥೆಯ ಹೇಳುತಿದೆ

ಪಿ.ಬಿ. : ಕುರುಳಿನ ಸುರುಳಿ ಬೀಸಿದೆ ಗಾಳ ತಲುಪಿದೆ ನನ್ನ ಹೃದಯದ ಆಳ (ಲಾಲ... ಲಾಲ... ಲಾಲ... ಲಾಲ..)
           ಕುರುಳಿನ ಸುರುಳಿ ಬೀಸಿದೆ ಗಾಳ  ತಲುಪಿದೆ ನನ್ನ ಹೃದಯದ ಆಳ
ವಾಣಿ : ಮೈ ಕೈ ಸೋಕಿ ನಡಸಿದ ಮೇಳ ಎದೆಯಲಿ ಏಕೋ ತಪ್ಪಿದೆ ತಾಳ
ಪಿ.ಬಿ.  ಕುಂಕುಮ ಹಣೆಯಲಿ ಕರಗಿದೆ ಏನೇನೊ ಕಥೆಯ ಹೇಳುತಿದೆ

ವಾಣಿ : ನಿನ್ನೀ ತೋಳು ಮೈ ಬಳಸಿರಲು  ಏನೋ ಆಸೆ ಏನೋ ದಿಗಿಲು
          ನಿನ್ನೀ ತೋಳು ಮೈ ಬಳಸಿರಲು  ಏನೋ ಆಸೆ ಏನೋ ದಿಗಿಲು
ಪಿ.ಬಿ.  : ನೀ ಬಳಿ ಇರಲು ನನ್ನೀ ಒಡಲು  ದಿಗಿಲನು ತೊರೆದ ಆಸೆಯ ಕಡಲು
ವಾಣಿ : ಹಣೆಯಲಿ ಕುಂಕುಮ ಕರಗಿದೆ  ಏನೇನೊ ಕಥೆಯ ಹೇಳುತಿದೆ
           (ಆ.. ಆ... ಆ.. ಆ..  ಓ... ಓ... ಓ... ಓ.. )
ಪಿ.ಬಿ. : ಕುಂಕುಮ ಹಣೆಯಲಿ ಕರಗಿದೆ ಏನೇನೊ ಕಥೆಯ ಹೇಳುತಿದೆ
           (ಆ... ಆ... ಆ...  ಓ.... ಓ... ಓ... ಓ.. ಓ.. )
-----------------------------------------------------------------------------------------------------------------------

ಭಾಗ್ಯ ಜ್ಯೋತಿ(1975) - ದಿವ್ಯ ಗಗನ ವನವಾಸಿನಿ
ಸಾಹಿತ್ಯ : ವಿಜಯ ನಾರಸಿಂಹ ಸಂಗೀತ : 
ಪಿ.ಬಿ.ಶ್ರೀನಿವಾಸ್ ಗಾಯನ : ಪಿ.ಬಿ.ಶ್ರೀನಿವಾಸ್, ವಾಣಿ ಜಯರಾಮ್

ಕೋರಸ್ : ಆಆಆ ಆಆಆ ಆಆಆ
ಗಂಡು : ದಿವ್ಯ ಗಗನ ವನವ ಆಸಿನಿ ಭವ್ಯ ರುಚಿರ ಧರ ಹಾಸಿನಿ
           ಪಂಕಜ ನೇತ್ರೀ ಮಧುಮಯಗಾತ್ರೀ  ಪ್ರಣಯ ಚಂದ್ರಿಕಾ ಧವಳಿತ ರಾತ್ರಿ
           ಪಂಕಜ ನೇತ್ರೀ ಮಧುಮಯಗಾತ್ರೀ  ಪ್ರಣಯ ಚಂದ್ರಿಕಾ ಧವಳಿತ ರಾತ್ರಿ

ಗಂಡು : ಏಹೀ ಪಾಹಿ ವೀರಹಾತಪ ಗಾತ್ರಂ ದೇಹಿ ದೇಹಿ ಮಧುರಾಧರ ಪಾತ್ರಂ
            ಏಹೀ ಪಾಹಿ ವೀರಹಾತಪ ಗಾತ್ರಂ ದೇಹಿ ದೇಹಿ ಮಧುರಾಧರ ಪಾತ್ರಂ
            ಸಿಂಚ ಸಿಂಚ ಮಮ ಹೃದಯ ಕ್ಷೇತ್ರಂ (ಓಓಓಓಓ) ಸ್ವೀಕುರು ಮಾತ್ಕ್ರುತ ರಾಗ ಸೋತ್ರಂ
           ದೇವಿ ಊರ್ವಶಿ ಪ್ರೇಯಸಿ

ಹೆಣ್ಣು : ಮಾಸ್ಪ್ರಶಮಾಂ ಮಾಸ್ಪ್ರಶಮಾಂ ಮಾಸ್ಪ್ರಶಮಾಂ ಮಾಸ್ಪ್ರಶಮಾಂ (ಕಿಂ ಕಾರಣಂ)
          ಮನ್ಮಾನಸ ರಸ ಸರೋಜ ಭೃಂಗ ಮಹಿತೌದಾರ್ಯ ಮಹೀಧರ ಶೃಂಗ
          ಚಿತಶತ ಮದನಾ ವರಗುಣ ಸದನಾ ಆತುಲ ಪರಾಕ್ರಮಾ ವಿಕ್ರಮಾ
          ಚಿತಶತ ಮದನಾ ವರಗುಣ ಸದನಾ ಆತುಲ ಪರಾಕ್ರಮಾ ವಿಕ್ರಮಾ

ಹೆಣ್ಣು : ಮೋಹನಾಂಗ ತ್ವಯಿ ಚಿರಾನುರಕ್ತಾಮ (ಆಆಆ..ಆಆಆ..) ಪಾಹಿ ಪಾಹಿ ವಿರಹಾನಲ ತಪ್ತಾಮ್ (ಆಆಆ...)
          ಮೋಹನಾಂಗ ತ್ವಯಿ ಚಿರಾನುರಕ್ತಾಮ ಪಾಹಿ ಪಾಹಿ ವಿರಹಾನಲ ತಪ್ತಾಮ್
          ಅನುರಾಗವತಿಮ್ ತತ್ವದ ದಾಸೀ ... (ಹೂಂಹೂಂ...)   ಅನುರೂಪವತೀ ಊರ್ವಶೀಯಂ
           ಸ್ವೀಕುರು ಪ್ರಿಯತಮಾ ವಿಕ್ರಮಾ

ಗಂಡು : ಗಾಢಾಲಿಂಗನ ಮಂದಿರ ವಾಸಂ (ಆಆಆ) ಸುಗಂಧಿತ ವಕ್ಷೋವಲಯ ನಿವೇಶಂ (ಆಆಆ)
           ಗಾಢಾಲಿಂಗನ ಮಂದಿರ ವಾಸಂ ಗಂಧಿತ ವಕ್ಷೋವಲಯ ನಿವೇಶಂ
           ಚುಂಬಿತ ನವಘನ ಹರ್ಷಾಕಾಶಂ (ಆಆಆ) ಸುಮುಖೀ.. ಸುಮುಖೀ.. ತನುಪರಿಚರ್ಯಾ ದಾಸಂ
           ಕುರುಮಾಂ ಊರ್ವಶಿ..  ಪ್ರೇಯಸಿ..
           ನಾನಾಮಸ್ಮರಾಮೀ .. ನಾ ಅನ್ಯೋಸ್ಮರಾಮೀ ... (ವಿಸ್ಮರ.. ವಿಸ್ಮರ.. ವಿಸ್ಮರ)

ಹೆಣ್ಣು :  ಸುಮಶರ ಚಾಪಂಕಿತ ತವ ಪುಷಿಂ (ಹೂಂಹೂಂ ) ಸಮರಹಿತ ಬಾಣ ಧೃತ ಧನುಷಿಂ (ಹೂಂಹೂಂ.. )
           ಸುಮಶರ ಚಾಪಂಕಿತ ತವ ಪುಷಿಂ  ಸಮರಹಿತ ಬಾಣ ಧೃತ ಧನುಷಿಂ
           ಪ್ರೇಮಾಂಗಾರ ಜಘನ ತೃಷ್ಣಾಂ (ಹೂಂ )  ಕಾಮ ಕ್ರೀಡಾ ಸುಖ ಸಂತೃಪ್ತಾಮ್
          ಕುರುಮಾಂ ರವಿಸಮಾ ವಿಕ್ರಮಾ..
ಕೋರಸ್ : ಆಆಆಅ...ಆಆಆ...ಆಆಆ....
ಹೆಣ್ಣು:  ವಿಕ್ರಮಾ .... (ಊರ್ವಶಿ)...ವಿಕ್ರಮಾ .... (ಊರ್ವಶಿ)...ವಿಕ್ರಮಾ (ಉರ್ವಶಿ ...).
----------------------------------------------------------------------------------------------------------------------

ಭಾಗ್ಯ ಜ್ಯೋತಿ(1975) - ಎಲ್ಲೋ ನೀನು ನೋಡುತ ನಗುವೇ 
ಸಾಹಿತ್ಯ : ವಿಜಯ ನಾರಸಿಂಹ ಸಂಗೀತ : ಪಿ.ಬಿ.ಶ್ರೀನಿವಾಸ್ ಗಾಯನ :  ವಾಣಿ ಜಯರಾಮ್

ಈ ಹಾಡಿನ ಸಾಹಿತ್ಯ ಲಭ್ಯವಿಲ್ಲ
----------------------------------------------------------------------------------------------------------------------

ಭಾಗ್ಯ ಜ್ಯೋತಿ(1975) - ಹಿಂದೆ ನಡೆದುದು ಇಂದಿಗೂ ಉಂಟು 
ಸಾಹಿತ್ಯ : ವಿಜಯ ನಾರಸಿಂಹ ಸಂಗೀತ : ಪಿ.ಬಿ.ಶ್ರೀನಿವಾಸ್ ಗಾಯನ :  ಪಿ.ಬಿ.ಎಸ್. ರವಿ 

ಈ ಹಾಡಿನ ಸಾಹಿತ್ಯ ಲಭ್ಯವಿಲ್ಲ
----------------------------------------------------------------------------------------------------------------------

No comments:

Post a Comment