209. ಜೀವಕ್ಕೆ ಜೀವ (1981)

ಜೀವಕ್ಕೆ ಜೀವ ಚಿತ್ರದ ಗೀತೆಗಳು 
  1. ಎಲ್ಲೇ ಹಾಡಲಿ ಎಲ್ಲೇ ಹೋಗಲಿ 
  2. ತಾನಿ ತಂದಾನ ಜೋಡಿಯಾದೆನಾ 
  3. ಮಧುರ ಈ ಬಲ ಗೀತೆಯು 
  4. ತಂಗಾಳಿ ಬೀಸಿದೆ 
  5. ಪ್ರೀತಿ ಮಾಡಬೇಕು 
ಜೀವಕ್ಕೆ ಜೀವ (1981) - ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ ಇದೇ ರಾಗ ನಿನಗಾಗಿ, ನಾ ಹಾಡುವೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.

ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ
ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ ಇದೇ ರಾಗ ನಿನಗಾಗಿ, ನಾ ಹಾಡುವೆ
ನೆನಪಿನ ತಾಳ ಎದೆಯಲ್ಲಿ  ಹರುಷದ ಮೇಳ ಮನದಲ್ಲಿ
ನೆನಪಿನ ತಾಳ ಎದೆಯಲ್ಲಿ  ಹರುಷದ ಮೇಳ ಮನದಲ್ಲಿ
ಏನೇನೋ ಭಾವನೆಯು ಮೈ ಮರೆಯುವೆ ಕುಣಿದಾಡುವೆ ನಲಿದಾಡುವೆ
ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ ಇದೇ ರಾಗ ನಿನಗಾಗಿ, ನಾ ಹಾಡುವೆ
ನಾ ಹಾಡಲು, ನೀ ಹಾಡುವೆ

ಈ ರಾಗದಿ ಮೋಹವು ತುಂಬಿ  ಈ ಹಾಡಲಿ ಇಂಪನು ತುಂಬಿ
ಬಯಕೆಯ ತಂಪನ್ನು ಬೆರೆಸಿ
ಈ ರಾತ್ರಿಯ ಸೊಗಸನು ತುಂಬಿ  ಈ ಜೀವದ ಆಸೆಯು ತುಂಬಿ
ಸ್ನೇಹದ ಆನಂದ ಬೆರೆಸಿ
ದಿನವೂ ಕರೆವೆ ಒಲವಲಿ ನಾ ನಿನ್ನ
ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ  ಇದೇ ರಾಗ ನಿನಗಾಗಿ, ನಾ ಹಾಡುವೆ
ನಾ ಹಾಡಲು, ನೀ ಹಾಡುವೆ

ನವ ಯೌವನ ಮೂಡುವ ಹಾಗೆ   ನವ ಚೇತನ ತುಂಬುವ ಹಾಗೆ
ಹೊಸ ಹೊಸ ಕನಸಾಗುವಂತೆ 
ಉಲ್ಲಾಸವು ಉಕ್ಕುವ ಹಾಗೆ  ಸಂತೋಷವು ಚಿಮ್ಮುವ ಹಾಗೆ
ರಸಿಕರ ಮನ ತಣಿಸುವಂತೆ
ಇನ್ನೂ ಕೇಳೋ ಆಸೆಯು ಬರುವಂತೆ
ಎಲ್ಲೆ ಹಾಡಿಲೀ ಎಲ್ಲೆ ಹೋಗಲೀ  ಇದೇ ರಾಗ ನಿನಗಾಗಿ, ನಾ ಹಾಡುವೆ
ನೆನಪಿನ ತಾಳ ಎದೆಯಲ್ಲಿ  ಹರುಷದ ಮೇಳ ಮನದಲ್ಲಿ
ನೆನಪಿನ ತಾಳ ಎದೆಯಲ್ಲಿ  ಹರುಷದ ಮೇಳ ಮನದಲ್ಲಿ
ಏನೇನೋ ಭಾವನೆಯು
------------------------------------------------------------------------------------------------------------------------

ಜೀವಕ್ಕೆ ಜೀವ (1981) - ಪ್ರೀತಿ ಮಾಡಬೇಕು, ನಾನು ನೀನು, ನೀನು ನಾನು, ನಾನು ನೀನು, ನೀನು ನಾನು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.

ಪ್ರೀತಿ ಮಾಡಬೇಕು, ನಾನು ನೀನು, ನೀನು ನಾನು, ನಾನು ನೀನು, ನೀನು ನಾನು
ಸೇರಿ ಹಾಡಬೇಕು, ನೀನು ನಾನು, ನಾನು ನೀನು, ನೀನು ನಾನು, ನಾನು ನೀನು
ಮತ್ತೇರೋ ವೇಳೆಯಲ್ಲಿ ಜೋಡಿ ಹೂವಾಗಿ
ತಂಪಾದ ಗಾಳಿಯಲ್ಲಿ ಹಾಡಿ ಒಂದಾಗಿ

ಸ್ನೇಹದಲ್ಲಿ ಸಂತೋಷವೆನೋ    ಪ್ರೇಮದಲ್ಲಿ ಆನಂದವೇನೋ   ಮಾತಿನಲ್ಲಿ ಹೇಳಲಾರೆ
ನೋಡಿದಾಗ ಸಂಭ್ರಮವೆನೋ  ಕೂಡಿದಾಗ ಉಲ್ಲಾಸವೇನೋ  ಆಸೆಯನ್ನು ತಾಳಲಾರೆ
ಕಣ್ಣಲ್ಲೆ ಕಾತರ, ಮನದಲ್ಲೆ ಆತುರ
ಕಣ್ಣಲ್ಲೆ ಕಾತರ, ಮನದಲ್ಲೆ ಆತುರ ಸುಖವನ್ನು ಕಾಣೋಕೆ ಆಧಾರ
ಸುಖವನ್ನು ಕಾಣೋಕೆ ಆಧಾರವು
ಪ್ರೀತಿ ಮಾಡಬೇಕು, ನಾನು ನೀನು, ನೀನು ನಾನು, ನಾನು ನೀನು, ನೀನು ನಾನು
ಸೇರಿ ಹಾಡಬೇಕು, ನೀನು ನಾನು, ನಾನು ನೀನು, ನೀನು ನಾನು, ನಾನು ನೀನು
ಮತ್ತೇರೋ ವೇಳೆಯಲ್ಲಿ ಜೋಡಿ ಹೂವಾಗಿ  ತಂಪಾದ ಗಾಳಿಯಲ್ಲಿ ಹಾಡಿ ಒಂದಾಗಿ

ಅಂದವೆಲ್ಲೋ ಆನಂದವೆಲ್ಲೋ   ಚಂದವೆಲ್ಲೋ ಸೌಂದರ್ಯವೆಲ್ಲೋ   ಅಲ್ಲೆ ಮಾಯೆಯು ಉಂಟು
ತಾಳೆ ಹೂವ ಕಂಪನು ಕಂಡು    ಆಸೆ ಏಕೆ ನಿನಗೀಗ ಬಂತು             ಹಾವು ಕೂಡ ಅಲ್ಲಿ ಉಂಟು
ಸೌಂದರ್ಯ ನೋಡದೆ, ಬಲೆಯಲ್ಲಿ ಬೀಳದೆ
ಸೌಂದರ್ಯ ನೋಡದೆ, ಬಲೆಯಲ್ಲಿ ಬೀಳದೆ ಅವಳಾಟ ಸಾಗದಂತೆ ಮಾಡೋಣ
ಅವಳಾಟ ಸಾಗದಂತೆ ಮಾಡೋಣ ಬಾ ಬಾ
ಪ್ರೀತಿ ಮಾಡಬೇಕು, ನಾನು ನೀನು, ನೀನು ನಾನು, ನಾನು ನೀನು, ನೀನು ನಾನು
ಸೇರಿ ಹಾಡಬೇಕು, ನೀನು ನಾನು, ನಾನು ನೀನು, ನೀನು ನಾನು, ನಾನು ನೀನು
ಮತ್ತೇರೋ ವೇಳೆಯಲ್ಲಿ ಜೋಡಿ ಹೂವಾಗಿ
ತಂಪಾದ ಗಾಳಿಯಲ್ಲಿ ಹಾಡಿ ಒಂದಾಗಿ
-------------------------------------------------------------------------------------------------------------------------

ಜೀವಕ್ಕೆ ಜೀವ (1981) - ತಾನ ತಂದಾನ, ಜೋಡಿ ಆದೆ ನಾ ಎಂದೂ ಬಿಡಲಾರೆ ನಿನ್ನ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಪಿ.ಶೈಲಜಾ

ತಾನ ತಂದಾನ, ಜೋಡಿ ಆದೆ ನಾ ಎಂದೂ ಬಿಡಲಾರೆ ನಿನ್ನ
ತಾನ ತಂದಾನ, ಜೋಡಿ ಆದೆ ನಾ ಎಂದೂ ಬಿಡಲಾರೆ ನಿನ್ನ
ದಿನವೂ ನಿನ್ನ ಧ್ಯಾನ ನೀನೇ ನನ್ನ ಪ್ರಾಣ
ತಾನ ತಂದಾನ, ಮಾರು ಹೋದೆ ನಾ ಬಿಟ್ಟೂ ಇರಲಾರೆ ನಿನ್ನ
ತಾನ ತಂದಾನ, ಮಾರು ಹೋದೆ ನಾ ಟ್ಟೂ ಇರಲಾರೆ ನಿನ್ನ
ದಿನವೂ ನಿನ್ನ ಧ್ಯಾನ  ನೀನೇ ನನ್ನ ಪ್ರಾಣ
ತಾನ ತಂದಾನ, ಜೋಡಿ ಆದೆ ನಾ  ಎಂದೂ ಬಿಡಲಾರೆ ನಿನ್ನ

ವೀಣೆ ಮಿಡಿಯುವ ಹಾಡಂತೆ  ಜೀವ ಸ್ವರಗಳ ಇಂಪಂತೆ
ಜಾಣೆ ನಿನ್ನ ಮಾತೆಲ್ಲ
ಮಾತು ಅರಗಿಳಿ ನುಡಿದಂತೆ ಸ್ನೇಹ ಸೇರಿಸಿ ಬೆಸೆದಂತೆ
ನಿನ್ನ ಹಾಗೆ ಯಾರಿಲ್ಲ
ನೀನಿಂದು ತಂದ ಉಲ್ಲಾಸದಿಂದ ಹಿಗ್ಗಿ ಹಿಗ್ಗಿ ಹೂವಾದೆ ನಾ
ಹಿಗ್ಗಿ ಹಿಗ್ಗಿ ಹೂವಾದೆ ನಾ
ತಾನ ತಂದಾನ, ಮಾರು ಹೋದೆ ನಾ ಬಿಟ್ಟೂ ಇರಲಾರೆ ನಿನ್ನ
ತಾನ ತಂದಾನ, ಜೋಡಿ ಆದೆ ನಾ ಎಂದೂ ಬಿಡಲಾರೆ ನಿನ್ನ
ಏಕೆ ಬಳಸಿದೆ ತೋಳಿಂದ ಆಸೆ ಅರಳಿತು ನಿನ್ನಿಂದ
ಕೊಡುವೆ ಏನು ಒಲವಿಂದ
ಹೇಗೆ ನುಡಿಯಲಿ ಮಾತಿಂದ  ಹೇಳಲಾಗದ ಆನಂದ
ಪಡೆವೆ ತಾಳು ನನ್ನಿಂದ
ನೀ ಈಗ ತಂದ ಸಂತೋಷದಿಂದ  ನಾಚಿ ನಾಚಿ ಮೊಗ್ಗಾದೆ ನಾ
ನಾಚಿ ನಾಚಿ ಮೊಗ್ಗಾದೆ ನಾ
ತಾನ ತಂದಾನ, ಜೋಡಿ ಆದೆ ನಾ ಎಂದೂ ಬಿಡಲಾರೆ ನಿನ್ನ
ತಾನ ತಂದಾನ, ಮಾರು ಹೋದೆ ನಾ ಬಿಟ್ಟೂ ಇರಲಾರೆ ನಿನ್ನ
ದಿನವೂ ನಿನ್ನ ಧ್ಯಾನ ನೀನೇ ನನ್ನ ಪ್ರಾಣ
ತಾನ ತಂದಾನ, ಮಾರು ಹೋದೆ ನಾ 
ಎಂದೂ ಬಿಡಲಾರೆ ನಿನ್ನ ಬಿಟ್ಟೂ ಇರಲಾರೆ ನಿನ್ನ
-------------------------------------------------------------------------------------------------------------------------

ಜೀವಕ್ಕೆ ಜೀವ (1981) - ಮಧುರ ಮಧುರ ಈ ಬಾಳ ಗೀತೆಯು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಜಾನಕಿ 

ಮಧುರ ಮಧುರ ಈ ಬಾಳ ಗೀತೆಯು
ಮಧುರ ಮಧುರ ಈ ಬಾಳ ಗೀತೆಯು 
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು 

ಒಲವು ಮೂಡಿದಾಗ ಮನವು ಹಾಡಿದಾಗ 
ತನುವು ಹೂವಾಗಿ ಸುಖದಿ ತೇಲಾಡುವಾಗ 
ಬಯಕೆ ಬಾಳಿನಲ್ಲಿ ಸುಮವು ನೂರು ಅರಳಿ 
ದಿನವೂ ಹೊಸ ಕನಸು ಸರಸ ಸಂತೋಷ ತಂದು 
ಇಂದು ನನಗೆ ಜಗವೇ ಸುಂದರ 
ಮಧುರ ಮಧುರ ಈ ಬಾಳ ಗೀತೆಯು
ಮಧುರ ಮಧುರ ಈ ಬಾಳ ಗೀತೆಯು 
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು 
ಹಾಆಆ ಅಹ ಹಾಆಆ ಹಾಆಆ ಅಹ ಹಾಆಆ 

ಮಗುವು ನಗಲು ಚೆನ್ನ ಮಗುವು ಅಳುವು ಚೆನ್ನ 
ಮಗುವ ಸವಿ ನುಡಿಯು ಜೇನ ಸಿಹಿಗಿಂತ ಚೆನ್ನ 
ಬಾಳು ಬೆಳಕಾಯ್ತು ಬದುಕು ಸೊಗಸಾಯ್ತು 
ಸುಖವು ಜೊತೆಗೂಡಿ ಸ್ವರ್ಗದಾನಂದವಾಯ್ತು 
ಇಂದು ನನಗೆ ಜಗವೇ ಸುಂದರ 
ಮಧುರ ಮಧುರ ಈ ಬಾಳ ಗೀತೆಯು
ಮಧುರ ಮಧುರ ಈ ಬಾಳ ಗೀತೆಯು 
ಮಧುರ ಅತಿ ಮಧುರ ಈ ಪ್ರೇಮ ಗಾನವು
ಮಧುರ ಮಧುರ ಈ ಬಾಳ ಗೀತೆಯು 
------------------------------------------------------------------------------------------------------------------------

ಜೀವಕ್ಕೆ ಜೀವ (1981) - ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್ಪಿ.ಬಿ. ಎಸ್.ಜಾನಕಿ

ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಏನೋ ಹಾಯಾಗಿದೆ
ಆಸೆ ನನ್ನ ಮನವ ತುಂಬಿದೆ
ಬಯಸಿ ನಿನ್ನ ಬಳಿ ಬಂದೆ
ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಏನೋ ಹಾಯಾಗಿದೆ

ಮೋಹಕ ರೂಪವು ಎದುರಲ್ಲಿ ಮೋಹನ ರಾಗವು ಕಣ್ಣಲ್ಲಿ
ಮೋಹ ನನ್ನಲ್ಲಿ ತಂದು
ಹೃದಯ ವೀಣೆ ಮೀಟಿದೆ ಜಾಣೆ
ತುಂಬಿ ಅನುರಾಗವನ್ನೇ ...
ಮಾತನು  ಬಲ್ಲ ಚತುರನೆ ಪ್ರೀತಿಯ ಬಲ್ಲ ರಸಿಕನೇ
ನಿನ್ನ ಬಳಿಯಲ್ಲೇ ಬಂದು ನೋಡುತ ನಿನ್ನೆ ಮರೆತೇನು ನಾನೇ
ಕಂಡೆ ಹೊಸ ಲೋಕವನೆ
ಮುತ್ತಿನಂಥ ಹೆಣ್ಣಾ ನಾನು ಪಡೆದೆನೆ ಇನ್ನು ಬಿಡುವೆನೆ
ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಏನೋ ಹಾಯಾಗಿದೆ

ತಾರೆಯ ಚೆಲುವು ಬಾನಿಗೆ ತಾವರೆ ಒಲವು ನೀರಿಗೆ
ನಲ್ಲ ಎಂದೆಂದೂ ನನಗೆ ನಿನ್ನಲ್ಲೇ ಒಲವು ನಿನ್ನಲೇ ಮನವು
ನಿಂಗ ಈ ನನ್ನ ಚೆಲುವು
ಬಾನಿಗೆ ಮುಗಿಲ ಸ್ನೇಹವು ಬಳ್ಳಿಗೆ ಮರದ ಪ್ರೇಮವೂ
ಚಿನ್ನ ಎಂದೆಂದೂ ನನಗೆ ನಿನ್ನಲ್ಲೇ ಸ್ನೇಹ ನಿನ್ನಲೇ ಪ್ರೇಮ
ನೀನೇ ನನ್ನಾಸೆ ಹೂವು
ಕಾಣದಂತ ಕನಸು ಕಣ್ಣ ತುಂಬಿದೆ ಹೃದಯ ಸೋತಿದೆ
ತಂಗಾಳಿ ಬೀಸಿದೆ ಹೂಗಂಧ ಚೆಲ್ಲಿದೆ
ಉಲ್ಲಾಸ ತುಂಬಿದೆ ಆನಂದ ತಂದಿದೆ
ಸಂಜೆ ಸೊಗಸಾಗಿದೆ ಏನೋ ಹಾಯಾಗಿದೆ
ಆಸೆ ನನ್ನ ಮನವ ತುಂಬಿದೆ
ಬಯಸಿ ನಿನ್ನ ಬಳಿ ಬಂದೆ 
ಲಾಲಾ ಲಾಲಾ ಲಾಲಾ
--------------------------------------------------------------------------------------------------------------------------

No comments:

Post a Comment