210. ಆದಿ (2005)




ಆದಿ ಚಲನಚಿತ್ರದ ಹಾಡುಗಳು 
  1. ಎಲ್ಲೇ ಇರು ನೀನು ನಿನ್ನ ನೆನಪು
  2. ಹೇಳೆ, ಓ ಒಲವೆ ಹೇಳೆ
  3. ರಂಗೀಲಾ ರಂಗೀಲಾ 
  4. ನೀನೇ ನನ್ನ ಡ್ರೀಮಲೀ 
  5. ಏನು ಮಜಾನೋ 
ಆದಿ (2005) - ಎಲ್ಲೇ ಇರು ನೀನು ನಿನ್ನ ನೆನಪು
ಸಂಗೀತ : ಗುರುಕಿರಣ, ಸಾಹಿತ್ಯ: ವೀ ಮನೋಹರ,  ಗಾಯನ : ಗುರುಕಿರಣ & ನಂದಿತಾ

ಎಲ್ಲೇ ಇರು ನೀನು ನಿನ್ನ ನೆನಪು
ನನ್ನ ಮನದಲ್ಲಿ ಎಂದೆಂದೂ ಸದಾ ಹಸಿರು
ಕುಶಾಲ ಮಾತುಗಳ ನುಡಿದೆ, ನನ್ನಾಸೆ ಹೂವು ನೀನಾದೆ
ನಿಧಾನ ದೂರ ನೀ ಸರಿದೆ, ಇನ್ನೆಲ್ಲೋ ಹಾರುತ ಹೋದೆ
ಮುಂಜಾನೆ ಸಂಜೆ ಮಂಜೆಲ್ಲ, ನನ್ನ ಚುಚ್ಚಾಯ್ತು ನಂಜಾಗಿ
ಪ್ರತಿ ದಿನವು ಹೊಸ ನೋವು, ವಿಷಾದ ಗೀತೆಯಾಗಿರಲು
ಕಹಿ ನೆನಪಾದ ಈ ಕಥೆಯು ಸದಾ ಹಸಿರು..
ವಿಶಾಲ ಬಾನಿನಲಿ ಬರೆದ ಅಮೋಘ ಮೇಘ ರಂಗೋಲಿ
ನಿನ್ನೆ ಕಂಡಂಥ ಚಿತ್ತಾರ ಇಂದೇಕೋ ಇಲ್ಲಾ ಇನ್ನೆಲ್ಲೂ
ಕಣ್ಣ ಮುಂದಾಡಿದ ನೆನಪು, ಸದಾ ಹಸಿರಾಗಿದೆ ಇಂದು
ಅದೇ ಚಿಗುರು ಅದೇ ನವಿರು ನಿಧಾನ ಬಾಡಿತು ಹಸಿರು
ನಿಜ ಬಿರಿದಾಗಲೇ ಅರಿತೆ ಹುಸಿ ಬಸಿರು..
-------------------------------------------------------------------------------------------------------------------------

ಆದಿ (೨೦೦೫) - ಹೇಳೆ, ಓ ಒಲವೆ ಹೇಳೆ
ಸಂಗೀತ: ಗುರುಕಿರಣ, ಸಾಹಿತ್ಯ: ಕವಿರಾಜ್, ಗಾಯನ: ಉದಿತ್ ನಾರಾಯಣ್, ನಂದಿತಾ

ಹೇಳೆ, ಓ ಒಲವೆ ಹೇಳೆ  ಹೇಳೆ, ಓ ಮನವೆ ಹೇಳೆ
ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ
ಹೇಳೆ, ಓ ಒಲವೆ ಹೇಳೆ ಹೇಳೆ, ಓ ಮನವೆ ಹೇಳೆ
ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ

ನಾನೇನು ಹೇಳಲಾರೆ ನೀ ಕೇಳು ನಿನ್ನನೆ
ಕ್ಷಣ ಕ್ಷಣವು ನಂಗೇತಕೆ, ನಿನ ಯೋಚನೆ
ನಂಗೂನು ಹಾಗೆ ತಾನೆ ಏನೇನೋ ಕಲ್ಪನೆ
ಮುಚ್ಚಿಡದೆ ಬಾ ಹೇಳಿಕೊ, ನಿನ್ನ ಭಾವನೆ
ಹೇಳೋದಕೆ ಮಾತೆಲ್ಲಿದೆ ನಿನ್ನೊಲವಲಿ ಮೂಕಾಗಿದೆ
ಹೇಳೆ, ಓ ಒಲವೆ ಹೇಳೆ ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ

ನಕ್ಕಾಗ ಒಮ್ಮೆ ನೀನು ನಾ ತೇಲಿ ಹೋದೆನು
ಆ ನಗುವ ನಶೆಯೇರಿ ನಾ, ವಶವಾದೆನು
ಕಂಡಂದೆ ನಿನ್ನ ನಾನು ಕಣ್ಣಲ್ಲೆ ಅಂದೆನು
ಈ ಹುಡುಗ ನನ ಜೀವದ, ಜೊತೆಗಾರನು
ಎಲ್ಲಿದ್ದರು ಹೇಗಿದ್ದರು ನನ್ನೆದೆಯಲಿ ನೀ ತುಂಬಿರು
ಹೇಳೆ, ಓ ಒಲವೆ ಹೇಳೆ ಹೇಳೆ, ಓ ಮನವೆ ಹೇಳೆ
ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ
------------------------------------------------------------------------------------------------------------------

ಆದಿ (2005) - ರಂಗೀಲಾ ರಂಗೀಲಾ 
ಸಂಗೀತ : ಗುರುಕಿರಣ, ಸಾಹಿತ್ಯ: ಕವಿರಾಜ,  ಗಾಯನ : ಗುರುಕಿರಣ 


-----------------------------------------------------------------------------------------------------

ಆದಿ (2005) - ನೀನೇ ನನ್ನ ಡ್ರೀಮಲೀ 
ಸಂಗೀತ : ಗುರುಕಿರಣ, ಸಾಹಿತ್ಯ: ಕವಿರಾಜ,  ಗಾಯನ : ವಿದ್ಯಾ 


-----------------------------------------------------------------------------------------------------

ಆದಿ (2005) - ಏನು ಮಜಾನೋ 
ಸಂಗೀತ : ಗುರುಕಿರಣ, ಸಾಹಿತ್ಯ: ಶ್ರೀರಂಗ,  ಗಾಯನ : ಗುರುಕಿರಣ 


-----------------------------------------------------------------------------------------------------

No comments:

Post a Comment