211. ಜೀವನದಿ (1996)

ಜೀವನದಿ ಚಲನಚಿತ್ರದ ಹಾಡುಗಳು 
  1. ಕನ್ನಡ ನಾಡಿನ ಜೀವನದಿ ಈ ಕಾವೇರಿ (ಎಸ್.ಪಿ.ಬಿ)
  2. ಕನ್ನಡ ನಾಡಿನ ಜೀವನದಿ ಈ ಕಾವೇರಿ (ಯುಗಳಗೀತೆ)
  3. ಎಲ್ಲೋ ಯಾರೋ ಹೇಗೋ,
  4. ಶೇಷಾದ್ರಿವಾಸ ಶ್ರೀ ತಿರುಮಲೇಶಾ 
  5. ನವಮಾಸ ನಿನ್ನನ್ನು ಹೊರಲಿಲ್ಲ ಕಂದನೇ 
  6. ದೈವದ ಕರುಣೆಯೂ ನನಗೆ ನೀ ದೊರಕಿದ 
  7. ಅಂದದ ಚೆಂದದ ಮುದ್ದಿನ ಗೌರಿ 
ಜೀವನದಿ (1996) - ಕನ್ನಡ ನಾಡಿನ ಜೀವನದಿ ಕಾವೇರಿ
ಸಂಗೀತ: ಕೋಟಿ ಸಾಹಿತ್ಯ: ಆರ್.ಎನ್. ಜಯಗೋಪಾಲ್  ಗಾಯನ:  ಎಸ್. ಪಿ. ಬಾಲಸುಬ್ರಹ್ಮಣ್ಯಂ

ಗಂಡು :  ಆಆ.. ಆಆ.. ಆಆಆ.... ಆಆಆಅ .... ಅಅ...   ಅಅ... ಅಅ...  ಅಅ... 
             ಅಅ... ಅಅ... ಅಅ... ಅಅ... ಆಆಹ್ 
ಕೋರಸ್ :  ಗಂಗೆಯ ತುಂಗೆಯ ಪ್ರೀತಿಯ ಸೋದರಿ ಪಾವನಿ ಪುಣ್ಯನದಿ
                 ಬಳುಕುತ ಕಲುಕುತ ಹರುಷವ ಚೆಲ್ಲುತ ಸಾಗುವ ಪುಣ್ಯನದಿ
                 ತಾ ಇಟ್ಟ ಹೆಜ್ಜೆಗೆ ಅಮೃತ ಹರಿಸಿ ಕಾಯುವ ಭಾಗ್ಯನದಿ ...
ಗಂಡು : ಕನ್ನಡ ನಾಡಿನ ಜೀವನದಿ ಈ ಕಾವೇರಿ ಒಹ್.. ಒಹ್.. ಒಹ್.. ಜೀವನದಿ ಈ ಕಾವೇರಿ 
            ಅನ್ನವ ನೀಡುವ ದೇವನದಿ ಈ ವಯ್ಯಾರಿ ..  ಒಹ್.. ಒಹ್.. ಒಹ್.. ದೇವನದಿ ಈ ವಯ್ಯಾರಿ
            ಈ ತಾಯಿಯು ನಕ್ಕರೆ... ಸಂತೋಷದ ಸಕ್ಕರೆ..
            ಮಮತೆಯ ಮಾತೆಗೆ.. ಭಾಗ್ಯದ ಧಾತೆಗೆ...ಮಾಡುವೇ... ಭಕ್ತಿಯ ವಂದನೆ.. ಓಹ್ ಹ.. ಹ ..
            ಕನ್ನಡ ನಾಡಿನ ಜೀವನದಿ ಈ ಕಾವೇರಿ ಒಹ್.. ಒಹ್.. ಒಹ್.. ಜೀವನದಿ ಈ ಕಾವೇರಿ

ಕೋರಸ್ : ಹೂಹೂಹೂಹೂಹೂಹೂಹೂಹೂಹೂಹೂಹೂ ಹೂಹೂಹೂಹೂಹೂಹೂ
ಗಂಡು : ಕೊಡಗಲಿ ನೀ ಹುಟ್ಟಿ ಹರಿಯುವೆ ನದಿಯಿಂದ ತರುತಲಿ ಎಲ್ಲೆಲ್ಲೂ ಆನಂದ...
            ಹಸುರಿನ ಬೆಳೆ ತಂದು ಕುಡಿಯುವ ಜಲ ತಂದು ಚೆಲ್ಲಿದೆ ನಗೆ ಎಂಬ ಶ್ರೀಗಂಧ
            ಧುಮುಕುತ ವೇಗದ ಜಲಪಾತದಲಿ... ವಿದ್ಯುತ ನೀಡುವೇ
            ಬಯಲಲಿ ಕಾಡಲಿ ಕಲ ಕಲ ಹರಿಯುತ... ನಾಟ್ಯವ ಮಾಡುವೇ
            ಮಂದಗಾಮಿನಿ.. ಶಾಂತಿವಾಹಿನಿ ..
            ಚಿರ ನೂತನ ಚೇತನ ಧಾತೆಯು ನೀನೆ  ದಕ್ಷಿಣ ಮಂದಾಕಿನಿ
            ಕನ್ನಡ ನಾಡಿನ ಜೀವನದಿ ಈ ಕಾವೇರಿ  ಒಹ್.. ಒಹ್.. ಒಹ್.. ಜೀವನದಿ ಈ ಕಾವೇರಿ

ಕೋರಸ್ : ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ... ಆಆಆ...
ಗಂಡು : ಹುಟ್ಟುವ ಕಡೆ ಒಂದು.. ಫಲ ಕೊಡೊ ಕಡೆ ಒಂದು ಸಾಗರದಲ್ಲಿ ನದಿಗೆಂದು ಸಂಗಮವೂ...
            ತವರಿನ ಮನೆಯೊಂದು ಗಂಡನ ಮನೆಯೊಂದು ಹೆಣ್ಣಿಗೆ ಇದೆ ಎಂದು ಜೀವನವೂ
            ತಂದೆಯು ತಾಯಿಯು ಅಣ್ಣನು ತಂಗಿಯು ಎಲ್ಲಾ ದೂರವೂ...
            ಹೊಸ ಮನೆ ಹೊಸ ಜನ ಹೊಸ ಹೊಸ ಬಂಧವು ಅಲ್ಲೇ ಸಂತೋಷವೂ
            ಮನೆಯ ದೀಪವು.. ಬಾಳ ಸಂಗೀತವು
            ಮನ ಮೆಚ್ಚಿದ ಮಡದಿಯು ಸಿಕ್ಕಿದ ಮೇಲೆ ಸ್ವರ್ಗ ಸಂಸಾರವೂ
            ಕನ್ನಡ ನಾಡಿನ ಜೀವನದಿ ಈ ಕಾವೇರಿ  ಒಹ್.. ಒಹ್.. ಒಹ್.. ಜೀವನದಿ ಈ ಕಾವೇರಿ 
            ಅನ್ನವ ನೀಡುವ ದೇವನದಿ ಈ ವಯ್ಯಾರಿ .. ಒಹ್.. ಒಹ್.. ಒಹ್.. ದೇವನದಿ ಈ ವಯ್ಯಾರಿ
            ಈ ತಾಯಿಯು ನಕ್ಕರೆ... ಸಂತೋಷದ ಸಕ್ಕರೆ..
            ಮಮತೆಯ ಮಾತೆಗೆ.. ಭಾಗ್ಯದ ಧಾತೆಗೆ...
            ಮಾಡುವೇ... ಭಕ್ತಿಯ ವಂದನೆ.... ಓಹ್ ಹ.... ಹ ..       
-------------------------------------------------------------------------------------------------------------------------

ಜೀವನದಿ (1996) - ಕನ್ನಡ ನಾಡಿನ ಜೀವನದಿ ಕಾವೇರಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್ ಸಂಗೀತ: ಕೋಟಿ ಗಾಯನ: ಅನುರಾಧ ಪಡವಾಲ್, ಎಸ್.ಪಿ.ಬಾಲಸುಬ್ರಹ್ಮಣ್ಯಂ

ಹೆಣ್ಣು : ಆ....ಆ....ಆ....ಆ....ಆ....ಆ.... ಆ....ಆ....ಆ....ಆಆಆ.... ಆ....ಆ....ಆ....
          ಕನ್ನಡ ನಾಡಿನ ಜೀವನದೀ ಈ ಕಾವೇರಿ..  ಓಓಓ.. ಜೀವನದೀ ಈ ಕಾವೇರಿ
          ಅನ್ನವ ನೀಡುವ ದೇವನದಿ ಈ ವಯ್ಯಾರಿ.. ಓಓಓ  ಸುಖವ ತರೋ ಈ ಸಿಂಗಾರಿ
          ಈ ತಾಯಿಯೂ ನಕ್ಕರೇ ಸಂತೋಷದಾ ಸಕ್ಕರೇ ಮಮತೆಯಾ ಮಾತೆಗೆ
          ಭಾಗ್ಯದಾ ದಾತೆಗೆ ಮಾಡುವೆ ಭಕ್ತಿಯಾ ವಂದನೇ..  ಓಓಓ...
          ಕನ್ನಡ ನಾಡಿನ ಜೀವನದೀ ಈ ಕಾವೇರಿ ಓಓಓ.. ಜೀವನದೀ ಈ ಕಾವೇರಿ

ಹೆಣ್ಣು : ಪ್ರೇಮದಿ ಕಾವೇರಿ ಹರಿವಳು ನಲಿವಿಂದ ಸಾಗರದೆಡೆ ಓಡಿ ಸಂಗಮಕೆ
          ಹೃದಯದ ಹೊಲದಲ್ಲಿ ಒಲವಿನ ಬೆಳೆ ತಂದು ಜೀವಗಳೊಂದಾದ ಸಂಭ್ರಮದೀ
          ಸಾಗರ ಕಾಣದೆ ಎದೆಯಲಿ ವೇಗವು ಒಡಲಲಿ ಕಂಪನ
          ಸ್ಪರ್ಶದ ಆ ಸುಖದ ಕಲ್ಪನೆ ತಂದಿದೆ ಏನೋ ರೋಮಾಂಚನ
          ಯಾವಾ ಬಂಧವೋ, ಸೃಷ್ಟಿ ಸ್ಪಂದವೋ ಆಯಸ್ಕಾಂತದ ಸೆಳೆತವೋ
          ಹರೆಯದ ತುಡಿತವೋ ಮನಸೂ ತೇಲಾಡಿದೆ...
          ಕನ್ನಡ ನಾಡಿನ ಜೀವನದೀ ಈ ಕಾವೇರಿ..  ಓಓಓ.. ಜೀವನದೀ ಈ ಕಾವೇರಿ

ಗಂಡು : ಹೃದಯದ ಕಡಲಲ್ಲಿ ಆಸೆಯ ಅಲೆ ಎದ್ದು ಹೊಮ್ಮಿದೆ ಭೋರೆಂದೂ ವಿರಹದಲಿ
            ಬೆರೆಯುತ ತನ್ನಲ್ಲಿ ತಣಿಸುವ ನದಿಗಾಗಿ ಕಾದಿದೆ ನೋಡೆಂದೂ ತವಕದಲಿ
ಹೆಣ್ಣು :  ಲಜ್ಜೆಯು ಅಳಿಯದು ಮೀರುತಾ ಸಾಗಿಸಿ ಸಾಗರ ಹರಸಿದೆ ತನ್ನನೆ ಮರೆತು,
           ಕಡಲಲೆ ಬೆರೆತು ಧನ್ಯವು ತಾನಾಗಿದೆ
ಗಂಡು : ಪ್ರಕೃತಿ ನಿಯಮವೋ, ಪ್ರೇಮದ ಧರ್ಮವೋ
ಹೆಣ್ಣು : ಬಳಿ ಸೇರುತ ಓಡುವ ಅಲೆಯ ತಲೆಯಲಿ ಪ್ರೇಮಾ ಹಾಡಾಗಿದೆ
ಗಂಡು : ಕನ್ನಡ ನಾಡಿನ ಜೀವನದೀ ಈ ಕಾವೇರಿ ಓಓಓ ಜೀವನದೀ ಈ ಕಾವೇರಿ
ಹೆಣ್ಣು : ಅನ್ನವ ನೀಡುವ ದೇವನದಿ ಈ ವಯ್ಯಾರಿ ಓಓಓ ಸುಖವ ತರೋ ಈ ಸಿಂಗಾರಿ
ಗಂಡು : ಈ ತಾಯಿಯೂ ನಕ್ಕರೇ          ಹೆಣ್ಣು : ಸಂತೋಷದಾ ಸಕ್ಕರೇ
ಇಬ್ಬರು : ಮಮತೆಯಾ ಮಾತೆಗೇ  ಭಾಗ್ಯದಾ ದಾತೆಗೇ
             ಮಾಡುವೆ ಭಕ್ತಿಯಾ ವಂದನೇ....ಏ.... ಓಓಓಓಓ  .ಓ.....
--------------------------------------------------------------------------------------------------------------------------

ಜೀವನದಿ (1996) - ಎಲ್ಲೋ ಯಾರೋ ಹೇಗೋ,
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಕೋಟಿ ಹಾಡಿದವರು: ಸೋನು ನಿಗಮ್

ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ, ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲ, ನಿರಂತರ ನಿಂತೋರಿಲ್ಲ ಹೋಗೋರು ಎಂದು ಪುಣ್ಯವಂತರು
ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ ಹೋಗಲೆಂದು

ಚಿಂತೆ ಬಿಡು, ಎಂದೂ ಮುಂದೆ ನೋಡು ಇರುಳಾದ ನಂತರ, ಮತ್ತೆ ಸೂರ್ಯೋದಯವಿದೆ
ಶೃತಿ ತಪ್ಪಿ, ಹಾಡು ನಿಂತ ವೇಳೆ ಹೊಸ ತಂತಿನಾದದೆ, ನವ ಗಾನಾಮೃತವಿದೆ
ನೆನಪೆಂಬ ಹೂವು ಬಾಳಿನಲ್ಲಿ ಕಂಪು ಸೂಸಲಿ ನಂಬಿಕೆಯ ಕಿರಣವು, ಮನದಲ್ಲಿ ಮೂಡಲಿ
ಎಲ್ಲೋ ಯಾರೋ ಹೇಗೋ ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ ಹೋಗಲೆಂದು

ಮೇಲೆ ನಿಂತ, ಒಬ್ಬ ಸೂತ್ರಧಾರ ಚದುರಂಗ ಆಡುವ, ನೋಡು ನಮ್ಮ ಬಾಳಲ್ಲಿ
ಏನಾಗಲಿ, ಧೈರ್ಯ ನಮ್ಮಲ್ಲಿರೆ ಬಿರುಗಾಳಿ ಬೀಸಲಿ, ನೌಕೆ ದಾರಿ ತಪ್ಪದೆಂದೂ
ಈ ಕಣ್ಣ ನೀರು ನನ್ನ ಮನದೆ ರಕ್ತ ಸುರಿಸಿದೆ ನನ್ನೆದೆಯ ದುಃಖವನು, ಯಾರಲ್ಲಿ ಹೇಳಲಿ
ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ, ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲ, ನಿರಂತರ ನಿಂತೋರಿಲ್ಲ ಹೋಗೋರು ಎಂದು ಪುಣ್ಯವಂತರು
ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ ಆಟ ಆದ ಮೇಲೆ ಹೋಗಲೆಂದು
--------------------------------------------------------------------------------------------------------------------------

ಜೀವನದಿ (1996) - ಶೇಷಾದ್ರಿವಾಸ ಶ್ರೀ ತಿರುಮಲೇಶಾ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಕೋಟಿ ಹಾಡಿದವರು: ರಾಜೇಶ, ಮಂಜುಳಾಗುರುರಾಜ 

ಗಂಡು : ಒಹ್.. ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶ್ರೀ ಶ್ರೀನಿವಾಸ ಶ್ರೀ ವೆಂಕಟೇಶ ನಮೋ ನಮೋ 
            ಒಹ್...ಪದ್ಮಾವತೀಶ ಭಕ್ತಹೃದಯೇಶ ಸಂಕಟ ನಾಶ ಗರುಡಾದ್ರಿವಾಸ ನಮಹೋ ನಮೋ  
            ಶೇಷಾದ್ರಿವಾಸ ಶ್ರೀ ತಿರುಮಲೇಶಾ 
           ಶೇಷಾದ್ರಿವಾಸ ಶ್ರೀ ತಿರುಮಲೇಶಾ ಭಕ್ತ ಜನ ಮಂದಾರ ಹೇ ಶ್ರೀನಿವಾಸ 
ಹೆಣ್ಣು : ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ  ನೀ ನೀಗುವೆ ಜನರ ಸಂಕಷ್ಟವ 
ಗಂಡು : ನೀ ತರುವೆ ಮನಕೆ ಸಂತೋಷ
ಇಬ್ಬರು : ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ 
             ಶೇಷಾದ್ರಿವಾಸ ಶ್ರೀ ತಿರುಮಲೇಶಾ  ಶೇಷಾದ್ರಿವಾಸ ಶ್ರೀ ತಿರುಮಲೇಶಾ 

ಹೆಣ್ಣು : ನಂಬಿದೆ ನಾ ನಿನ್ನ ನೀನೆನ್ನ ಶರಣೆಂದು ಉಸಿರುಸಿರು ತವ ನಾಮವು 
ಗಂಡು : ಕಾವಲಿಗೆ ಗೋವಿಂದ ಇರುವಾಗ ನಮಗೆಲ್ಲ ಎಂದೆಂದೂ ಭಯ ದೂರವು 
ಹೆಣ್ಣು : ಜೀವನವೇ ಆನಂದ ಆಳಿಉಳಿವು ನಿನ್ನಿಂದ ಬಾಳಿಲ್ಲ ನೀನಿಲ್ಲದೇ 
ಗಂಡು : ಅರ್ಪಣೆಯ ಭಾವದಲಿ ನಿಂತಿರುಲು ಎದುರಿನಲಿ ನೀ ಇಂದು ಕೃಪೆ ತೋರಿದೆ 
ಹೆಣ್ಣು : ಭಾಗ್ಯದ ಮಳೆಯನ್ನು ನೀ ಕರೆಯುವೆ 
ಗಂಡು : ನಿಜ ಮುಕ್ತಿ ಬಾಗಿಲನು ನೀ ತೆರೆಯುವೆ ನಮಗೇ ...  ಒಲಿದೇ ...  ಪ್ರಭುವೇ... ಅರಿಯೇ..   
ಎಲ್ಲರು : ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ

ಗಂಡು : ಪದ್ಮಾವತಿದೇವಿ ಕೈ ಹಿಡಿದ ಮಹರಾಯ ಪಾಲಿಸೋ ಮಹನೀಯನೇ
ಹೆಣ್ಣು : ಅರಿಶಿನ ಕುಂಕುಮದ ಸೌಭಾಗ್ಯ ನೀ ನೀಡು ಕಾಪಾಡು ಲಕ್ಷಿಮೀಶನೇ
ಗಂಡು : ನಮಗೆಲ್ಲ ಶತ ವರುಷ ಬಾಳಿನಲಿ ನಿಜ ಹರುಷ ನೀಡಯ್ಯ ಪ್ರಭು ಎಂದಿಗೂ
ಹೆಣ್ಣು : ನಮ್ಮ ಮನೆ ಅಂಗಳದ ನಗೆ ಎಂಬ ಸೌರಭವು  ಸೂಸಿರಲಿ ಎಂದೆಂದಿಗೂ
ಗಂಡು : ಕವಿದಿದ್ದ ಇರುಳನು ನೀ ನೀಗಿದೆ
ಹೆಣ್ಣು : ಹೊಸದೊಂದು ನಂಬಿಕೆಯ ನೀ ನೀಡಿದೆ
ಗಂಡು : ನಮಗೇ...  ಒಲಿದೇ ...  ಪ್ರಭುವೇ....  ಅರಿಯೇ...
ಗಂಡು :   ಶೇಷಾದ್ರಿವಾಸ ಶ್ರೀ ತಿರುಮಲೇಶಾ 
           ಶೇಷಾದ್ರಿವಾಸ ಶ್ರೀ ತಿರುಮಲೇಶಾ ಭಕ್ತ ಜನ ಮಂದಾರ ಹೇ ಶ್ರೀನಿವಾಸ
ಹೆಣ್ಣು :  ನೀ ಒಲಿದರೆ ಮನೆಯು ಲಕ್ಷ್ಮಿ ನಿವಾಸ  ನೀ ನೀಗುವೆ ಜನರ ಸಂಕಷ್ಟವ 
ಗಂಡು : ನೀ ತರುವೆ ಮನಕೆ ಸಂತೋಷವ
ಇಬ್ಬರು  : ಕಾರುಣ್ಯ ನಿಧಿಯೇ ಶ್ರೀ ವೆಂಕಟೇಶ 
              ಶೇಷಾದ್ರಿವಾಸ ಶ್ರೀ ತಿರುಮಲೇಶಾ  ಶೇಷಾದ್ರಿವಾಸ ಶ್ರೀ ತಿರುಮಲೇಶಾ 
              ಶೇಷಾದ್ರಿವಾಸ ಶ್ರೀ ತಿರುಮಲೇಶಾ  ಶೇಷಾದ್ರಿವಾಸ ಶ್ರೀ ತಿರುಮಲೇಶಾ 
              ಶೇಷಾದ್ರಿವಾಸ ಶ್ರೀ ತಿರುಮಲೇಶಾ ಶೇಷಾದ್ರಿವಾಸ ಶ್ರೀ ತಿರುಮಲೇಶಾ 
--------------------------------------------------------------------------------------------------------------------------

ಜೀವನದಿ (1996) - ನವಮಾಸ ನಿನ್ನನ್ನು ಹೊರಲಿಲ್ಲ ಕಂದನೇ 
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಕೋಟಿ ಹಾಡಿದವರು: ರಾಜೇಶ, ಅನುರಾಧ ಪಡವಾಲಾ

ಹೆಣ್ಣು : ಆಆಆ... ಆಆಆ... ಆಆಆಆ..... ಲಲಲಲಲಲಲಾ
          ನವಮಾಸ ನಿನ್ನನ್ನು ಹೊರಲಿಲ್ಲ ಕಂದನೇ ಮಡಿಲನ್ನು ತುಂಬಿದೆ ಬೆಳಕಾಯ್ತು ಈ ಮನೆ
           ಹುಳಿಮಾವು ಕೇಳಲಿಲ್ಲ ಕೆಮಣ್ಣು ತಿನ್ನಲಿಲ್ಲ...ತಾಯಾದೆ ನಾ...  ನನ ಜೀವ ನೀ
          ನವಮಾಸ ನಿನ್ನನ್ನು ಹೊರಲಿಲ್ಲ ಕಂದನೇ

ಹೆಣ್ಣು : ಆಆಆ... ಆಆಆ... ಆಆಆಆ..... ಲಲಲಲಲಲಲಾ
          ನವ ಚಂದ್ರ ಚೆಲ್ಲಿದಾ ನೊರೆ ಹಾಲು ನಿನದೆ
ಗಂಡು : ಮನೆಯಲ್ಲಿ ಅರಳಿದಾ ಮಮತೆಯ ಮಲ್ಲಿಗೆ
ಹೆಣ್ಣು : ಕಣ್ಣು ನೀ ತುಂಬಿ ನಿಂತೇ ಮರೆಯಿತಲ್ಲಾ ಚಿಂತೆಯು
ಗಂಡು : ಜೋಗುಳವಾ ಹಾಡುವೆ ಜೊತೆಯಲಿ ಆಡುವೆ ಸುಖದೇ ಮೈಮರೆವೆ
ಹೆಣ್ಣು : ನಮ್ಮ ಬಾಳಿಗೆ ನೀ ದೀವಿಗೆ
          ನವಮಾಸ ನಿನ್ನನ್ನು ಹೊರಲಿಲ್ಲ ಕಂದನೇ

ಹೆಣ್ಣು : ಆಆಆ... ಆಆಆ... ಆಆಆಆ..... ಓಓಓಓಓ
         ಹೆತ್ತರೇನು ದೇವಕಿ ಧನ್ಯಮಾತೆ ಯೊಶೋದೆ
ಗಂಡು : ಬಾಳಗಾನ ತುಂಬಿದೇ  ಕಂದ ತಂದ ರಾಗವೇ
ಹೆಣ್ಣು : ಕಣ್ಣು ತಗುಲಿತು ಜೋಕೆ ದೃಷ್ಟಿ ಬೊಟ್ಟು ಈಡು ಕೆನ್ನೆಗೆ
ಗಂಡು : ಕಣ್ಣ ಮುಚ್ಚೆ ಆಡುವೆ ಉಯ್ಯಾಲೆಯ ತೂಗುವೆ ನಗುತ ದಿನ ಕಳೆವೆ
ಹೆಣ್ಣು : ಕನಸೆಲ್ಲವೂ ನನಸಾಗಿದೆ..
          ನವಮಾಸ ನಿನ್ನನ್ನು ಹೊರಲಿಲ್ಲ ಕಂದನೇ ಮಡಿಲನ್ನು ತುಂಬಿದೆ ಬೆಳಕಾಯ್ತು ಈ ಮನೆ
          ಹುಳಿಮಾವು ಕೇಳಲಿಲ್ಲ ಕೆಮಣ್ಣು ತಿನ್ನಲಿಲ್ಲ... ತಾಯಾದೆ ನಾ...  ನನ ಜೀವ ನೀ
-------------------------------------------------------------------------------------------------------------------------

ಜೀವನದಿ (1996) - ದೈವದ ಕರುಣೆಯೂ ನನಗೆ ನೀ ದೊರಕಿದ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಕೋಟಿ ಹಾಡಿದವರು: ರಾಜೇಶ, ಮಂಜುಳಾ ಗುರುರಾಜ 

ಹೆಣ್ಣು : ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ
          ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ
          ಹೋ... ಓಓಓಓಓ .. ನನಗೆ ಈ ದಿನ ಹೊಸದು ಆನಂದ ಬಾಳು ಜೇನಾಯಿತು
          ನನಗೆ ನಿನ್ನಿಂದ ಹೊಸದು ಆನಂದ ಬಾಳು ಜೇನಾಯಿತು
          ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ 

ಹೆಣ್ಣು : ಬೆಂಗಾಡಲಿ ದಾಹದಿಂದ ಅಲೆದಿರೇ ನಾನು ಅಮೃತದ ಹೊಳೆಯಾಗಿ ನೀ ಬಂದೆಯೋ... 
          ಇರುಳಲ್ಲಿ ಅಂಧಳಂತೆ ನಡೆದಿರೆ ನಾನು ನವ ಜ್ಯೋತಿ ಕಿರಣವ ನೀ ತಂದೆಯೋ.. 
          ನಾ ಬಂಜೆ ಎನ್ನೋ ತಪ್ಪು ನೀಗಿದೆ ಹೊಸ ತಾಯಿಯಾಗಿ ನನ್ನ ಮಾಡಿದೆ 
ಗಂಡು : ನಗುತ ನೀ ಬಂದೆ ಹರುಷ ನೀ ತಂದೆ ನಮಗೆ ಕಣ್ಣಾದೆಯೋ 
           ದೈವದ (ಲಲಲಲ)  ಕರುಣೆಯೂ (ಲಲಲಲ) ನನಗೆ ನೀ ದೊರಕಿದೆ
           ಮಮತೆಯ (ಲಲಲಲ) ಸರಿಗಮ (ಲಲಲಲ) ಹೃದಯದೀ ಮೀಟಿದೇ 

ಹೆಣ್ಣು : ದಿನವೆಲ್ಲ ನಿನ್ನ ಸಂಗ ಆಡಿ ನಾನು ನಲಿವೆ ಯುಗವೊಂದು ಕ್ಷಣವಾಗಿ ತಾ ಓಡಿತು
          ಬಾಡಿದ್ದ ಬಳ್ಳಿಯಲ್ಲಿ ಕಂದ ನಿನ್ನ ಪ್ರೀತಿ ಹೊಸದೊಂದು ಚೇತನವ ಇಂದು ತಂದಿತು
ಗಂಡು : ಕಂಡಂಥ ಕನಸು ಪೂರ್ತಿ ಆಯಿತು ಕವಿದಿದ್ದ ಮೋಡ ದೂರಾಯಿತು
ಹೆಣ್ಣು : ನಮ್ಮ ಕಣ್ಣಾಗಿ ಪ್ರೀತಿ ಹಣ್ಣಾಗಿ ಎಂದು ನೀ ಬಾಳಿರು
          ದೈವದ (ಲಲಲಲ) ಕರುಣೆಯೂ (ಲಲಲಲ)ನನಗೆ ನೀ ದೊರಕಿದೆ
          ಮಮತೆಯ (ಲಲಲಲ) ಸರಿಗಮ (ಲಲಲಲ)ಹೃದಯದೀ ಮೀಟಿದೇ
ಗಂಡು :  ಹೋ... ಓಓಓಓಓ ..
ಇಬ್ಬರು : ನಮಗೆ ನಿನ್ನಿಂದ ಹೊಸತು ಆನಂದ ಬಾಳು ಜೇನಾಯಿತು
--------------------------------------------------------------------------------------------------------------

ಜೀವನದಿ (1996) - ಈ ಅಂದದ ಚೆಂದದ ಮುದ್ದಿನ ಗೌರಿ
ಸಂಗೀತ: ಕೋಟಿ ಸಾಹಿತ್ಯ: ಆರ್.ಎನ್.ಜಯಗೋಪಾಲ್ ಹಾಡಿದವರು: ಎಸ್.ಪಿ.ಬಿ.

ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ
ಈ ಕೆನ್ನೆಯ ಮೇಲೆ ನೂತನ ಕಾಂತಿ ಏಕೆ ಹೇಳಮ್ಮಾ
ತೊಟ್ಟಿಲ ಕಟ್ಟೋಕೆ ಕಾಲ ಬಂತಂತೆ ಲಾಲಿ ಹಾಡೋಕೆ ವೇಳೆ ಬಂತಂತೇ
ಹೋಯ್ ಬಲು ಮುದ್ದು ತುಂಟನೊಬ್ಬ ಮನೆಗೆ ಬರ್ತಾನೇ
ಆವ್ ಈ ತಾಯಿ ಅಂದವೆಲ್ಲ ಕದ್ದು ತರ್ತಾನೆ
ಈ ಕಳೆಯು ಈ ಹೊಳಪು ಆ ಕಥೆಯ ಹೇಳುತಿದೆ
ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ
ಈ ಕೆನ್ನೆಯ ಮೇಲೆ ನೂತನ ಕಾಂತಿ ಏಕೆ ಹೇಳಮ್ಮಾ

ಬಂಗಾರಿ ಸಿಂಗಾರಿ ಆಯಾಸ ಬೇಡಮ್ಮಾ ಸುಕುಮಾರಿ ವಯ್ಯಾರಿ ಮೃದುವಾಗಿ ನಡೆಯಮ್ಮಾ 
ಮಲ್ಲಿಗೆಯ ಹಾಸುವೇನು ನಡೆಯುವ ದಾರಿಯಲಿ ಸೊಂಟವಿದು ಉಳುಕಿತು ಜೋಪಾನ 
ಹೆಜ್ಜೆಯಲಿ ಲಜ್ಜೆ ಇದೆ ಕಣ್ಣಿನಲಿ ಆಸೆ ಕಂಡೆ 
ಹ್ಹಾ.. ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ
ಈ ಮೌನದ ಮಿಂಚಿನ ನೋಟದ ಅರ್ಥ ಏನು ಹೇಳಮ್ಮಾ

ನಗುವಾಗ ಈ ಕಂದ ಮನೆಗೆಲ್ಲ ರಂಗೋಲಿ ನಮ್ಮೆಲ್ಲಾ ಹಾರೈಕೆ ನಿನಗುಂಟೂ ಬಾಳಲ್ಲಿ
ನಿನ್ನಯ ತೊದಲ ನುಡಿ ಜೇನಿನ ರಸ ಮಳೆಯೂ ಮನಸಿಗೆ ನೀ ತಂದೆ ಆನಂದ
ನಿನ್ನಿಂದ ಈ ಮನೆಯು ಗೋಕುಲಕೆ ಸಾಟಿಯಂತೆ
ಈ ಅಂದದ ಚೆಂದದ ಮುದ್ದಿನ ಗೌರಿ ಮೊಗವ ನೋಡಮ್ಮ
ಈ ನೂತನ ತಾಯಿಯ ಜಂಭದ ನೋಟ ಭಲ್ಲೆ ನಾನಮ್ಮಾ
ತೊಟ್ಟಿಲ ಕಟ್ಟೋಕೋ ಕಾಲ ಈಗಮ್ಮ ಲಾಲಿ ಹಾಡೋಕೆ ವೇಳೆ ನೋಡಮ್ಮ
ಹೋಯ್ ಬಲು ಮುದ್ದು ತುಂಟನೊಬ್ಬ ಮನೆಗೆ ಬಂದಾಯ್ತು
ಅವ್ ಈ ತಾಯಿ ಅಂದವೆಲ್ಲ ಕದ್ದು ತಂದಾಯ್ತು
ಈ ಕಳೆಯು ಈ ಹೊಳಪು ಈ ಕಥೆಯ ಹೇಳುತಿದೆ
--------------------------------------------------------------------------------------------------------------

ಜೀವನದಿ (1996) - ಎಲ್ಲೋ ಯಾರೋ ಹೇಗೋ,
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಕೋಟಿ ಹಾಡಿದವರು: ಸೋನು ನಿಗಮ್

ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ, ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲ, ನಿರಂತರ ನಿಂತೋರಿಲ್ಲ ಹೋಗೋರು ಎಂದು ಪುಣ್ಯವಂತರು

ಮೇಲೆ ನಿಂತಾ ಒಬ್ಬ ಸೂತ್ರಧಾರ ಚದುರಂಗ ಆಡುವಾ ನೋಡೋ ನಮ್ಮ ಬಾಳಿನಲೀ
ಏನಾಗಲೀ  ಧೈರ್ಯ ನಮ್ಮಲ್ಲಿರೇ ಬಿರುಗಾಳೀ ಬೀಸಲಿ ನೌಕೆ ದಾರಿ ತಪ್ಪದು
ಈ ಕಣ್ಣ ನೀರು ನಮ್ಮ ಮನದೇ ರಕ್ತ ಸುರಿಸಿದೇ .. ನನ್ನದೆಯಾ ದುಃಖವನೂ ಯಾರಿಗೇ ಹೇಳಲೀ

ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ
ಆಟ ಆದ ಮೇಲೆ, ವೇಷ ಬಿಚ್ಚಿ ಹೋಗಲು ದೂರಾಗಿ
ಹೋಗಬೇಕು ಬಂದೋರೆಲ್ಲ, ನಿರಂತರ ನಿಂತೋರಿಲ್ಲ ಹೋಗೋರು ಎಂದು ಪುಣ್ಯವಂತರು
ಎಲ್ಲೋ ಯಾರೋ ಹೇಗೋ, ಬಾಳಿನಲ್ಲಿ ಬಂದೆವು ಒಂದಾಗಿ

ಆಟ ಆದ ಮೇಲೆ, ವೇಷ ಬಿಚ್ಚಿ ಹೋಗಲು ದೂರಾಗಿ
--------------------------------------------------------------------------------------------------------------

No comments:

Post a Comment