212. ಹಾಲುಂಡ ತವರು (1994)


ಹಾಲುಂಡ ತವರು ಚಲನಚಿತ್ರದ ಹಾಡುಗಳು 
  1. ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ (ಚಿತ್ರಾ)
  2. ನಾನು ನಿನ್ನನು ಮೆಚ್ಚಿದೆ ಗೊತ್ತ ?
  3. ಎಲೆ ಹೊಂಬಿಸಿಲೆ, ಎಲೆ ತಂಬೆರಲೆ ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ.      
  4. ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ
  5. ಒಲವಿನ ಋಣವ ತೀರಿಸಲೆಂತೋ 
  6. ತಾಯೀನೇ ಇಲ್ಲದಂಥ ತವರಯಾಕೆ ತಂಗಿ
  7. ಹಾಲುಂಡ ತವರನ್ನು ಮಗಳೇ ನೆನೆಯೇ 
  8. ಈ ಧರೆಗಿದೆ ರಾತ್ರಿ ಹಗಲು,
  9. ಈ ಬಾಳಿನ ಸೈಕಲ್ ನೀ ಕೂತರೇ ಘಲ್ ಘಲ್ 

ಹಾಲುಂಡ ತವರು (1994)
ಸಾಹಿತ್ಯ: ಹಂಸಲೇಖ   ಸಂಗೀತ: ಹಂಸಲೇಖ  ಹಾಡಿದವರು: ಚಿತ್ರಾ

ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ
ಹಾಡು ಶಿವ ಹಾಡು ಶಿವ, ಸುಪ್ರಭಾತ
ಹೇ ಪ್ರಭಾತ, ನಿನಗೆ ಸುಪ್ರಭಾತ
ಶರಣೂ ಶರಣೂ ಶರಣೂ
ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ

ಭೂಮಿ ನಮ್ಮ ಆಲಯ
ಭೂಮಿ ನಮ್ಮ ಆಲಯ
ಕಾಯಕವೇ ದೇವರು
ದೇವರಿಗೆ ಸೂರ್ಯನದೆ ಆರತಿ
ಗುಡಿಯ ಶಿವ ನಲಿಯೊ ಶಿವ
ಕಾಮ ಕ್ರೋಧ ಎಸೆದು ಮೇಲೆ
ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ

ಬಾಳ ಬಂಡಿ ಎಳೆಯಲು
ಬಾಳ ಬಂಡಿ ಎಳೆಯಲು
ಪ್ರೇಮವೆಂಬ ಭೂಮಿಗೆ
ಪಾಪಗಳ ವ್ಯಾಘ್ರಗಳ ಹೂಡದೆ
ಮನದ ಹೊಲ ಉಳುವ ಛಲ
ಕಣ್ಣ ತುಂಬ ತುಂಬಿ ಕೊಂಡು
ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ
ಹಾಡು ಶಿವ ಹಾಡು ಶಿವ, ಸುಪ್ರಭಾತ
ಹೇ ಪ್ರಭಾತ, ನಿನಗೆ ಸುಪ್ರಭಾತ
ಶರಣೂ ಶರಣೂ ಶರಣೂ
ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ
-----------------------------------------------------------------------------------------------------------------

ಹಾಲುಂಡ ತವರು (1994) - ನಾನು ನಿನ್ನನು ಮೆಚ್ಚಿದೆ ಗೊತ್ತ ?
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್ ಪಿ ಬಿ


ನಾನು ನಿನ್ನನು ಮೆಚ್ಚಿದೆ ಗೊತ್ತ ?
ನನ್ನ ಅರ್ಜಿಯು ಮನಸಲಿ ಬಿತ್ತದಯಮಾಡಿ ರುಜು ಮಾಡು
ಕಣ್ಣಿನ ಕಣ್ಣಿನ ಕುಂಚದೇ
ನೀನೊಂದು ಒಗಟಿನ ಚಿತ್ರ
ನಾ ನಿನ್ನ ಹೃದಯದ ಮಿತ್ರ
ಪ್ರೀತಿಯ ಒಂದು ಪುಟ ಹಾಡು
ಹೇಳೋಕೆ ನೋಡು ನನ್ನ ಪಾಡು
ದಯಮಾಡಿ ವರ ನೀಡು
ಹೆಣ್ಣಿನ ಹೆಣ್ಣಿನ ಹೃದಯದಿ
ನಾನಂತು ಒಂಟಿಯಾಗಿ ಇದ್ದೆ
ನೀ ನನ್ನ ಒಂಟಿತನ ಕದ್ದೆ
ನೂರಾರು ಆಸೆಗಳ ತಂದೆ
ನಾ ನಂಬಿ ನಿನ್ನ ಹಿಂದೆ ಬಂದೆ
ಕೃಪೆ ಮಾಡಿ ಕರೆ ನೀಡು
ಹೆಣ್ಣಿನ ಹೆಣ್ಣಿನ ಅಧರದಿ
-------------------------------------------------------------------------------------------------------------------------

ಹಾಲುಂಡ ತವರು (1994) - ಎಲೆ ಹೊಂಬಿಸಿಲೆ,
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಎಸ್ ಪಿ ಬಿ


ಹೆ: ಎಲೆ ಹೊಂಬಿಸಿಲೆ, ಎಲೆ ತಂಬೆರಲೆ ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ.   
     ಎಲೆ ನೀರಿನಲೆ, ಎಲೆ ಹಸಿರ ಸೀರೆ  ಇಂಥಾ ಜೋಡಿನಾ ಎಂದಾರಾ ಕಂಡಿರಾ ಓಓಓ...
ಗ : ಒಹೋ...  ಕೂಹೂ ಇಂಚರವೆ, ಸುಖಿ ಸಂಕುಲವೇ  ಇಂಥಾ ಹಿಂಗಾರಿನ ಮುಂಗಾರಿನ ಮಿಲನ ಕಂಡಿರಾ? 
     ಎಲೆ ಹೊಂಬಿಸಿಲೆ, ಎಲೆ ತಂಬೆರಲೆ ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ... 
     ಓಓ.ಹೋಓ... ಹಹಾ ...

ಗ :   ಓಓ... ತಾನನ. ನನ್ನವಳು ಚಂದನ ಹೆಂಗರುಳ ಹೂ ಮನ ಋತುವೆ ಸುರಿಸು ಇವಳಿಗೆ ಹೂಮಳೆ 
ಹೆ :  ಎದೆಯಲಿ ಆದರ ತುಂಬಿರುವ ಸಾಗರ ನನ್ನ ದೊರೆಯ ಹೃದಯ ನೀವಾಸಿ ನಾ 
ಗ : ಅರೆರೆ ನುಡಿದೆ ಕವನ    ಹೆ : ನುಡಿಸೋ ಕವಿಗೆ ನಮನ 
ಹೆ  : ಓಓಓ.ಮಹಾ ಮೇಘಗಳೆ ಅಷ್ಟು ದೈವಗಳೇ ಇಂಥಾ ಆಂತರ್ಯದ ಸೌಂದಯ೯ದ ಸೊಬಗು ಕಂಡಿರಾ? 
       ಎಲೆ ಹೊಂಬಿಸಿಲೆ, ಎಲೆ ತಂಬೆರಲೆ ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ? 
       ತನನನನಾ ತಾನನನ ಹೇ ಹೇ ಹೇಹೇ. ತಂದನನನಾ ತಾನನನ 

ಗ : ಹೂ ಹೂಹೂ... ಹುಣ್ಣಿಮೆಯ ಆಗಸ ಬೆಳಕಿನ ಪಾಯಸ ಸುರಿಸೆ ಸವಿದೆ ಸತಿಯೇ ಸವಿ 
ಹೆ:  ನಿಮ್ಮ ತುಟಿ ತೋರಿಸಿ, ನನ್ನ ತುಟಿ ಸೇರಿಸಿ ನೀವು ಸವಿದ ಸವಿಗು ಇದು ಸವಿ 
ಗ:  ಅರೆರೆ.ನುಡಿದೆ ಪ್ರಾಸಾ     ಹೆ : ಕವಿಯ ಜೊತೆಗೆ ವಾಸ 
ಗ :  ಓಓಓ... ಚುಕ್ಕಿ ತಾರೆಗಳೆ ಸುಖೀ ಮೇಳಗಳೇ. ಇಂಥಾ ಸಂಸಾರದ ಸವಿಯುಟದ ಸವಿಯ ಕಂಡಿರಾ. 
      ಎಲೆ ಹೊಂಬಿಸೆಲೆ, ಎಲೆ ತಂಬೆರಲೆ ಇಂಥಾ ಜೋಡಿನಾ ಎಲ್ಲಾರಾ ಕಂಡಿರಾ? 
      ಎಲೆ ನೀರಿನಲೆ ಎಲೆ ಹಸಿರ ಸೀರೆ ಇಂಥಾ ಜೋಡಿನಾ ಎಂದಾರ ಕಂಡಿರಾ 
      ಓಓಓ.ಕಹು ಇಂಚರವೇ, ಸುಖಿ ಸಂಕುಲವೇ ಇಂಥಾ ಹಿಂಗಾರಿನ ಮುಂಗಾರಿನ ಮಿಲನ ಕಂಡಿರಾ? 
ಹೆ: ಎಲೆ ಹೊಂಬಿಸಿಲೆ, ಎಲೆ ತಂಬೆರಲೆ ಇಂಥಾ ಜೋಡಿನಾ ಎಲ್ಲರಾ ಕಂಡಿರಾ. ಎಲೆ.
---------------------------------------------------------------------------------------------------------------------

ಹಾಲುಂಡ ತವರು (1994) - ಏಳು ಶಿವ ಏಳು ಶಿವ 
ಸಾಹಿತ್ಯ: ಹಂಸಲೇಖ   ಸಂಗೀತ: ಹಂಸಲೇಖ  ಹಾಡಿದವರು: ಎಸ್ ಪಿ ಬಿ

ಓ.. ಓ.. ಓ.. ಓ.. ಆಆಆಅ ...
ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ
ಹಾಡು ಶಿವ ಹಾಡು ಶಿವ, ಸುಪ್ರಭಾತ
ಹೇ ಪ್ರಭಾತ, ನಿನಗೆ ಸುಪ್ರಭಾತ
ಶರಣೂ ಶರಣೂ ಶರಣೂ
ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ

ಭೂಮಿ ನಮ್ಮ ಆಲಯಾ...ಆಆಆ  ಭೂಮಿ ನಮ್ಮ ಆಲಯ ಕಾಯಕವೇ ದೇವರು
ದೇವರಿಗೆ ಸೂರ್ಯನದೆ ಆರತಿ
ಮನದ ಹೊಲ ಉಳುವ ಛಲ  ಕಣ್ಣ ತುಂಬ ತುಂಬಿ ಕೊಂಡು
ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ

ಕಾಣದೊಂದು ಬಾಗಿಲೂ....  ಕಾಣದೊಂದು ಬಾಗಿಲೂ  ನಾವೂಬಂದು ಹೋಗಲು
ತೆರೆಯುವುದು ಮುಚ್ಚುವುದು ತಿಳಿಯದು
ಸಹಿಸು ಶಿವ ನಗಿಸು ಶಿವ ನೋವಿನಾಳದಿಂದ ಮೇಲೆ
ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ
ಹಾಡು ಶಿವ ಹಾಡು ಶಿವ, ಸುಪ್ರಭಾತ
ಹೇ ಪ್ರಭಾತ, ನಿನಗೆ ಸುಪ್ರಭಾತ
ಶರಣೂ ಶರಣೂ ಶರಣೂ
ಏಳು ಶಿವ ಏಳು ಶಿವ  ಬಾಳ ಬಂಡಿ ಹೂಡು ಶಿವ
----------------------------------------------------------------------------------------------------------------------

ಹಾಲುಂಡ ತವರು (1994) - ಒಲವಿನ ಋಣವ 
ಸಾಹಿತ್ಯ: ಹಂಸಲೇಖ   ಸಂಗೀತ: ಹಂಸಲೇಖ  ಹಾಡಿದವರು: ಎಸ್ ಪಿ ಬಿ

ಒಲವಿನ ಋಣವ ತೀರಿಸಲೆಂತೋ  ಹೃದಯದ ಸುಖವ ತೋರುವುದೆಂತೋ
ಮಾತಿಗೂ ಮೀರಿದ ಹಾಡಿಗೂ ನಿಲುಕದ  ಕರುಣೆಯ ಕಡಲು ಮಮತೆಯ ಮಡಿಲು
ಮಿಂದೇನು ನಾನಿಂದು ಅಭಿಮಾನದಿ...
ಒಲವಿನ ಋಣವ ತೀರಿಸಲೆಂತೋ  ಹೃದಯದ ಸುಖವ ತೋರುವುದೆಂತೋ

ನಾಕು ತುಟಿಯಲ್ಲಿಯೂ ಏಕ ತಾಂಬೂಲವೇ   ನಾಕು ಕಣ್ಣಲ್ಲಿ ಜೋಡಿ ತನುವಲ್ಲಿ
ಮೌನ ಸಂವಾದವೇ ಬೇಡ ಮರುಜನ್ಮವೇ    ಆಸೆಗೂ ಆಚೀನ ಪ್ರಣಯದ ಅಂಚಿನ
ಹರುಷದ ಹೊನಲು ಹರಿಯುತಲಿರಲು  ಮಿಂದೆನು ನಾನಿಂದು ಅಭಿಮಾನದಿ...
ಒಲವಿನ ಋಣವ ತೀರಿಸಲೆಂತೋ  ಹೃದಯದ ಸುಖವ ತೋರುವುದೆಂತೋ

ಬಾಳ ಕಾದಂಬರಿ ಕಾವ್ಯಮಯವಾಯಿತು  ಸಹಜ ಶೃಂಗಾರ ಹೃದಯ ಸಂಸ್ಕಾರಾ
ಮೂಲಧನವಾಯಿತು ಪ್ರೇಮ ವರವಾಯಿತು  ಮದಿರೆಗೂ ಮಾತಿನ ನಿದಿರೆಗೂ ಮುತ್ತಿನ
ಕನಸಿನ ಮಳೆಯ ನೆನೆಯುವ ಸಮಯ  ಮಿಂದೇನು ನಾನಿಂದು ಅಭಿಮಾನದಿ
ಒಲವಿನ ಋಣವ ತೀರಿಸಲೆಂತೋ  ಹೃದಯದ ಸುಖವ ತೋರುವುದೆಂತೋ
-----------------------------------------------------------------------------------------------------------------------

ಹಾಲುಂಡ ತವರು (1994) - ತಾಯೀನೇ ಇಲ್ಲದಂತ 
ಸಾಹಿತ್ಯ: ಹಂಸಲೇಖ   ಸಂಗೀತ: ಹಂಸಲೇಖ  ಹಾಡಿದವರು: ಎಸ್ ಪಿ ಬಿ

ತಾಯೀನೇ ಇಲ್ಲದಂಥ ತವರಯಾಕೆ ತಂಗಿ
ತಪ್ಪಿಯೂ ತಂಗಬ್ಯಾಡ  ಹಂಗಿನ ತುತ್ತಾನು ನುಂಗಬ್ಯಾಡ
ಓ ಮನೆ ಮಗಳೇ ಇದು ಬಾಳ ಕಟ್ಟಳೆ.. ಓ..  ಕುಲಮಗಳೇ... ಇದು ಬಾಳ  ಕಟ್ಟಳೆ
ತಾಯೀನೇ ಇಲ್ಲದಂಥ ತವರಯಾಕೆ ತಂಗಿ
ತಪ್ಪಿಯೂ ತಂಗಬ್ಯಾಡ  ಹಂಗಿನ ತುತ್ತಾನು ನುಂಗಬ್ಯಾಡ 

ಎಲೆ ಮೇಲೆ ಮುತ್ತಿನಂಗೆ ಅಂಟಿ ಅಂಟದಂತೆ ಇರಬೇಕು
ಊಟದಾಗೆ ಕರಿಬೇವ ಮಾಡಿ ಎಸೆದರು ನಗಬೇಕು
ಮನೆಮಗಳು ಬಾಗಿಲಲ್ಲಿ ಬಂದರೆ ಎದೆ ಬಾಗ್ಲು  ಮುಚ್ಚುತ್ತಾರೆ
ಬೀದಿ ಬಸವ ಬಂದು ನಿಂತರೆ  ಕಾಸು ಹಾಲು ಬಟ್ಟೇನಾರ  ಹಾಕುತ್ತಾರೆ..
ಬಂಧುಗಳ ಬಂಧುರ... ಬಂಧುಗಳ ಬಂಧುರ  ಬಂಧುಗಳ ಬಂಧುರ
ನಂಬಬೇಡ ಎಚ್ಚರ ತುಂಬಾ ಎಚ್ಚರ
ಅಮ್ಮಾನೇ ಇಲ್ಲದಿರೋ ಅರಮನೆ ಯಾಕೇ...
ಆಳಾಗಿ ಬಾಳಬ್ಯಾಡಾ  ಬಾಗಿಲ ಧೂಳಾಗಿ ಕುರಬ್ಯಾಡ
ಓ ಮನೆ ಮಗಳೇ ಇದು ಬಾಳ ಕಟ್ಟಳೆ.. ಓ..  ಕುಲಮಗಳೇ... ಇದು ಬಾಳ  ಕಟ್ಟಳೆ
ತಾಯೀನೇ ಇಲ್ಲದಂಥ ತವರಯಾಕೆ ತಂಗಿ
ತಪ್ಪಿಯೂ ತಂಗಬ್ಯಾಡ  ಹಂಗಿನ ತುತ್ತಾನು ನುಂಗಬ್ಯಾಡ 

ಬೆಲ್ಲವಿದ್ರೆ ಬರುತಾರೆ ಕಾಲನು ಕೈಯನ್ನು ನೆಕ್ಕುತಾರೇ
ನಮ್ಮ ಕೈಯ್ ಚಾಚಿದಾಗ ಕಾಲಿಗೇ ಬುದ್ದಿಯ ಹೇಳುತ್ತಾರೇ
ಅಮ್ಮನಿತ್ತ ಬಾಯಿ ತುತ್ತ ರುಚಿಯ ಸುಚಿಯಾ ನೆನಿಬೇಕು
ಲೋಕವಿತ್ತ ವಿಷಮುತ್ತ ಮಗಳೇ ಮರಿಯದೇ ಮರಿಬೇಕು
ಬಂಧುಗಳ ಬಂಧುರ... ಬಂಧುಗಳ ಬಂಧುರ  ಬಂಧುಗಳ ಬಂಧುರ
ನಂಬಬೇಡ ಎಚ್ಚರ ತುಂಬಾ ಎಚ್ಚರ
ಬಂಧುನೇ ಇಲ್ಲದಂಥ ಬೀಡ್ಯಾಕೆ ತಂಗೀ....
ಬೇಡಾಗಿ ಬಾಳಬೇಡ ಚಿಂತೆಗೆ ಈಡಾಗಿ ಅಳಬೇಡ
ಓ ಮನೆ ಮಗಳೇ ಇದು ಬಾಳ ಕಟ್ಟಳೆ.. ಓ..  ಕುಲಮಗಳೇ... ಇದು ಬಾಳ  ಕಟ್ಟಳೆ
ತಾಯೀನೇ ಇಲ್ಲದಂಥ ತವರಯಾಕೆ ತಂಗಿ
ತಪ್ಪಿಯೂ ತಂಗಬ್ಯಾಡ  ಹಂಗಿನ ತುತ್ತಾನು ನುಂಗಬ್ಯಾಡ.. ।।

-------------------------------------------------------------------------------------------------------------------------

ಹಾಲುಂಡ ತವರು (1994) - ಹಾಲುಂಡ ತವರನ್ನು  
ಸಾಹಿತ್ಯ: ಹಂಸಲೇಖ   ಸಂಗೀತ: ಹಂಸಲೇಖ  ಹಾಡಿದವರು: ಎಸ್.ಜಾನಕೀ

ಹಾಲುಂಡ ತವರನ್ನು ಮಗಳೇ ನೆನೆಯೇ  ನಿನ್ನಾ ಮನೆಗೆ ನೀ ನಡೆಯೇ ..
ಹಾಲುಂಡ ತವರನ್ನು ಮಗಳೇ ನೆನೆಯೇ  ನಿನ್ನಾ ಮನೆಗೆ ನೀ ನಡೆಯೇ.... ।।

ನೀ ನಕ್ಕರೇ ತವರಿಗೇ ಹಾಲು,  ನೀ ಅತ್ತರೇ ನಮಗೆಲ್ಲಾ ಪಾಲೂ..
ನೀ ಹೆತ್ತರೇ ನಮಗೇ ದಾನ, ನಿನ್ನಾ ನಡತೇ ತವರೂರ ಮಾನ..
ಹಾಲುಂಡ ತವರನ್ನು ಮಗಳೇ ನೆನೆಸೇ,  ನಿನ್ನಾ ಮನೆಯ  ನೀ ಉಳಿಸೇ..
ಹಾಲುಂಡ ತವರನ್ನು ಮಗಳೇ ನೆನೆಯೇ 

ನೆರೆಮನೆಗೆ ಹೊರೆಯಾಗಬೇಡಾ.., ನಿನ್ನಾ ಮನೆಗೇ  ಹಗೆಯಾಗಬೇಡಾ
ಬಾಳಿದರ ಮಾತೆಲ್ಲ ರಗಳೆ,  ಮನೆ ಒಡೆಯೋ  ಮಾತೇಕೆ  ಮಗಳೇ,
ಹಾಲುಂಡ ತವರನ್ನು ಮಗಳೇ ತ್ಯಜಿಸೇ...   
ಹಾಲುಂಡ ತವರನ್ನು ಮಗಳೇ ನೆನೆಯೇ 

ಮಗಳಾಗಿ ಸುಖವನ್ನು ತಂದೆ, ಸೊಸೆಯಾಗಿ ಸುಖ ಕಾಣೆ ಮುಂದೆ
ತವರೂರ ಬನದಲ್ಲಿ ಬೆಳೆದೆ, ಪತಿಯೂರ ಫಲವಾಗಿ ನಡದೇ
ಹಾಲುಂಡ ತವರೆಂದು ನಿನದೇ...  ನಿನದೇ... 
ನಿನ್ನಾ ನೆನಪು ದಿನ ನಮಗೆ
ಹಾಲುಂಡ ತವರನ್ನು ಮಗಳೇ ನೆನೆಯೇ  ನಿನ್ನಾ ಮನೆಗೆ ನೀ ನಡೆಯೇ ..
ಹಾಲುಂಡ ತವರನ್ನು ಮಗಳೇ ನೆನೆಯೇ 
------------------------------------------------------------------------------------------------------------------------

ಹಾಲುಂಡ ತವರು (1994) - ಈ ಧರೆಗಿದೆ   
ಸಾಹಿತ್ಯ: ಹಂಸಲೇಖ   ಸಂಗೀತ: ಹಂಸಲೇಖ  ಹಾಡಿದವರು: ಕೆ.ಎಸ್.ಚಿತ್ರಾ ಮತ್ತು ಎಸ್.ಪಿ.ಬಿ

ಈ ಧರೆಗಿದೆ ರಾತ್ರಿ ಹಗಲು, ನೀ ನನಗೆ ಅದಕು ಮಿಗಿಲು
ಈ ಧರೆಗಿದೆ ರಾತ್ರಿ ಹಗಲು, ನೀ ನನಗೆ ಅದಕು ಮಿಗಿಲು
ಈ ಜೀವನ ಅಳುವ ಕಡಲು, ನೀವಿರಲು ಇಲ್ಲಾ ದಿಗಿಲೂ....
ಸಿರಿತನದ ಮೇಲೆ ಬಡತನದ ಲೀಲೆ, ಒಲವ ದೋಣಿಯಲು ನೀನು ನಾನು
ಈ ಧರೆಗಿದೆ ರಾತ್ರಿ ಹಗಲು, ನೀವೆನಗೆ ಅದಕು ಮಿಗಿಲು

ಸಾಲದ ಸರಮಾಲೆಯನು ತೊಡಿಸಿದೆ ನಾನು
ಚಿಂತೆಯ ವರಮಾಲೆಯಲ್ಲಿ ವರಿಸಿದೇ ನಾನು
ಬಂಗಾರದ ಭಂಡಾರವೇ ಮಣ್ಣಾದರೇ ನೀ ಹೊಣೆಯೇ
ಇಡಗಾಯಿಗೂ ಸುಳಿವಿಲ್ಲದ ಕೊಡುಗೈಯಾದೇ ನೀ ಹೊರೆಯೇ
ಗೆಳೆತನದ ಮೇಲೆ ದುಡುಕುಗಳ ಲೀಲೆ  ಸಹನೆ ದೋಣಿಯಲಿ ನೀನು ನಾನು
ಈ ಧರೆಗಿದೆ ರಾತ್ರಿ ಹಗಲು, ನೀವೆನಗೆ ಅದಕು ಮಿಗಿಲು

ಲೋಕಕೆ ತಿಳಿದಿದೆ ಏನು ಹೃದಯದ ಈ ರಾಗ
ಹಸಿವಿಗೂ ಮುತ್ತನು ಸವಿಯೋ ಒಲವಿನ ಈ ಯೋಗ
ಕಣ್ಣಲಿನ ಪನ್ನೀರಿಗೂ ಕಸ್ತೂರಿಯ ಕಂಪಿರಲೂ
ಚಿಂತೆ ತರೋ ಏಕಾಂತಲೂ ಸಂತೈಸುವ ಮನಸಿರಲು
ಕನಸುಗಳ ಮೇಲೆ ಮುನಿಸುಗಳ ಲೀಲೆ, ಜೀವದೊಣಿಯಲಿ ನೀವು ನಾನು
ಈ ಧರೆಗಿದೆ ರಾತ್ರಿ ಹಗಲು, ನೀ ನನಗೆ ಅದಕು ಮಿಗಿಲು
ಈ ಜೀವನ ಅಳುವ ಕಡಲು, ನೀವಿರಲು ಇಲ್ಲಾ ದಿಗಿಲೂ.... 
ಸಿರಿತನದ ಮೇಲೆ ಬಡತನದ ಲೀಲೆ, ಒಲವ ದೋಣಿಯಲು ನೀನು ನಾನು
----------------------------------------------------------------------------------------------------------------------

ಹಾಲುಂಡ ತವರು (1994) - ಈ ಬಾಳಿನ ಸೈಕಲ್ ನೀ ಕೂತರೇ ಘಲ್ ಘಲ್ ಸಂಗೀತ: ಸಾಹಿತ್ಯ:  ಹಂಸಲೇಖ ಹಾಡಿದವರು: ಕೆ.ಎಸ್.ಚಿತ್ರಾ ಮತ್ತು ಎಸ್.ಪಿ.ಬಿ
ಈ ಬಾಳಿನ ಸೈಕಲ್ ನೀ ಕೂತರೇ ಘಲ್ ಘಲ್ 
ಈ ಬಾಳಿನ ಸೈಕಲ್ ನೀ ಕೂತರೇ ಘಲ್ ಘಲ್ 
ನನ್ನೊಲವ ಬಳ್ಳಿಯಲೀ ಚಿಗುರಲೇ ನನ್ನೆದೆಯಾ ತೋಟದಲಿ ಅರಳಲೇ .. ಈ ಬಾಳಿನ 

ಈ ಬಾಳಿನ... ಎಲ್ಲಾರೂ ತೂಗರುಜುವೆನಂತೇ ಪ್ರೀತಿ ಬಂದಾಗ ಹೂವೂ ತಂದಾಗ 
ಎಲ್ಲಾರೂ ತೂಗರುಜುವೆನಂತೇ ಎಲ್ಲಾರೂ ತೂಗುಮಜವೆನಂತೇ   
ಎಲ್ಲಾರೂ ತೂಗರುಜುವೆನಂತೇ ಪ್ರೀತಿ ಬಂದಾಗ ಹೂವೂ ತಂದಾಗ ನಗುತ ನಿಂದಾಗ 
ಎಲ್ಲಾ ಗಾಯ ಮಾಯಾ ನಿನ್ನ ಕಾಲಗುಣದಿಂದ ಕಾಲ ಎಂಬುದೇ ದಿವ್ಯ ವೇದಮ್ಮಾ 
ಈ ಬಾಳಿನ ಸೈಕಲ್ ನೀ ಕೂತರೇ ಘಲ್ ಘಲ್ 
ಈ ಬಾಳಿನ ಸೈಕಲ್ ನೀ ಕೂತರೇ ಘಲ್ ಘಲ್ 
ನನ್ನೊಲವ ಬಳ್ಳಿಯಲೀ ಚಿಗುರಲೇ ನನ್ನೆದೆಯಾ ತೋಟದಲಿ ಅರಳಲೇ... ಈ ಬಾಳಿನ 

ಓಓಓಓಓ ಹೇಹೇಹೇಹೇಹೇ ಲಲಲಲ ಹ್ಹಹ್ಹಹ್ಹಾ.. 
ನನ್ನ ನಿನ್ನ ಮನಸಿನ ಮನೆಯ ಮುಂದೆ ರಂಗೋಲೇ ಒಳಗೇ ಉಯ್ಯಾಲೇ 
ನನ್ನ ನಿನ್ನ ಮನಸಿನ ಮನೆಯ ನನ್ನ ನಿನ್ನ ಕನಸಿನ ಮನೆಯ 
ನನ್ನ ನಿನ್ನ ಮನಸಿನ ಮನೆಯ ಮುಂದೆ ರಂಗೋಲೇ ಒಳಗೇ ಉಯ್ಯಾಲೇ 
ಒಳಗೇ ಉಳಳಳಳ  ಸುವ್ವಾಲೇ .. ಅಹ್ಹಹ್ಹಹ್ಹ 
ಸ್ವರ್ಗ ಭೂಮಿಯೇ ತಾ ನಿನ್ನ ಪ್ರೀತಿಯ ಮುತ್ತಿನ್ದ ಮುತ್ತೇ ಬಾಳಿನ ಹರಿಗೋಲಮ್ಮಾ 
ಈ ಬಾಳಿನ ಸೈಕಲ್ ನೀ ಕೂತರೇ ಘಲ್ ಘಲ್ 
ಈ ಬಾಳಿನ ಸೈಕಲ್ ನೀ ಕೂತರೇ ಘಲ್ ಘಲ್ 
ನನ್ನೊಲವ ಬಳ್ಳಿಯಲೀ ಚಿಗುರಲೇ ನನ್ನೆದೆಯಾ ತೋಟದಲಿ ಅರಳಲೇ... ಉಳಳಳಳ ಅಹ್ಹಹ್ಹ .. 
----------------------------------------------------------------------------------------------------------------------

No comments:

Post a Comment