214. ಅಮರಶಿಲ್ಪಿ ಜಕಣಾಚಾರಿ (1964)



ಅಮರಶಿಲ್ಪಿ ಜಕಣಾಚಾರಿ ಚಲನಚಿತ್ರದ ಹಾಡುಗಳು 
  1. ಏನೋ ಎಂತೋ, ಜುಮ್ಮೆಂದಿತು ತನುವು, ಬೆಚ್ಚಿತು ಮನವು
  2. ನಿಲ್ಲು ನೀ ನಿಲ್ಲು ನೀ ನೀಲವೇಣಿ
  3.  ಚೆಲುವಾಂತ ಚೆನ್ನಿಗನೇ ನಲಿದಾಡು ಬಾ 
  4. ಮನಸೇ ಮುದುವಾಗಿದೆ 
  5. ಸುರಸುಂದರಾಂಗ ಕೃಷ್ಣ ನೀ ಬಾರೋ 
  6. ಜಂತರ ಮಂತರ ಮಾಟವೋ 
  7. ಮಲ್ಲಿಗೆಯ ಹೂವಿನಂಥ 
  8. ತನುವೂ ಮನವು 
ಅಮರಶಿಲ್ಪಿ ಜಕಣಾಚಾರಿ (1964) - ಏನೋ ಎಂತೋ, ಜುಮ್ಮೆಂದಿತು ತನುವು, ಬೆಚ್ಚಿತು ಮನವು
ಸಂಗೀತ: ಎಸ್.ರಾಜೇಶ್ವರ ರಾವ್  ಸಾಹಿತ್ಯ: ಚಿ.ಸದಾಶಿವಯ್ಯ    ಹಾಡಿದವರು: ಘಂಟಸಾಲ, ಪಿ.ಸುಶೀಲಾ


ಹೆಣ್ಣು : ಏನೋ ಎಂತೋ, ಜುಮ್ಮೆಂದಿತು ತನುವು, ಬೆಚ್ಚಿತು ಮನವು
          ಏಕೋ ಕಾಣೆನು, ಎಂದೂ ಅರಿಯೆನು, ಇಂತ ಸವಿ ನೋವ ಸುಖವಾಂತ ಅನುಭಾವ
ಗಂಡು : ಏನೋ ಎಂತೋ, ಜುಮ್ಮೆಂದಿತು ತನುವು, ಬೆಚ್ಚಿತು ಮನವು
           ಏಕೋ ಕಾಣೆನು, ಎಂದೂ ಅರಿಯೆನು, ಇಂತ ಸವಿ ನೋವ ಸುಖವಾಂತ ಅನುಭಾವ

ಹೆಣ್ಣು : ಪ್ರಣಯ ಗಾಳಿ ಬೀಸೆ, ತೆರೆಯಿತು ಕಣ್ಣ ಮನದೊಳಾಸೆ
ಗಂಡು : ಆಹಾಹಾಹಾ ಹಹಹಾ ಆಆಆ... ಆಹಾಹಾಹಾ ಹಹಹಾ ಆಆಆ...
ಹೆಣ್ಣು : ಪ್ರಣಯ ಗಾಳಿ ಬೀಸೆ, ತೆರೆಯಿತು ಕಣ್ಣ ಮನದೊಳಾಸೆ
         ನಿನ್ನ ಸೋಕಲು ಮೈ ಅರಳಿತು ಯೌವನವು ಸೂಸಿ
        ಏನೋ ಎಂತೋ

ಗಂಡು : ಕಣ್ಣು ಕಣ್ಣು ಕಲೆಯೆ, ಚಿನ್ನದ ಕನಸು ಮೂಡಿ ನಲಿಯೆ
ಹೆಣ್ಣು : ಆಹಾಹಾಹಾ ಹಹಹಾ ಆಆಆ... ಆಹಾಹಾಹಾ ಹಹಹಾ ಆಆಆ...
ಗಂಡು :  ಕಣ್ಣು ಕಣ್ಣು ಕಲೆಯೆ, ಚಿನ್ನದ ಕನಸು ಮೂಡಿ ನಲಿಯೆ
            ಹುಣ್ಣಿಮೆ ಚಂದ್ರನ ತಣ್ಣನೆ ಬೆಳಕಲಿ ಹಣ್ಣಾಯಿತು ಪ್ರೇಮ
           ಏನೋ ಎಂತೋ

ಹೆಣ್ಣು : ಗಾನ ಭಾವ ನೀನೆ, ನನ್ನ ಪ್ರಾಣ ದೇವ ನೀನೆ
          ಗಾನ ಭಾವ ನೀನೆ, ನನ್ನ ಪ್ರಾಣ ದೇವ ನೀನೆ
          ನನ್ನ ರೂಪಿಸಿ ವೀಣೆಯಾಗಿಸಿ ವಾಸಿಸುವವ ನೀನೆ
         ಏನೋ ಎಂತೋ

ಗಂಡು : ನಗುತ ನಲಿದು ಬಾರೆ, ನನ್ನ ಭವ್ಯ ಭಾಗ್ಯ ತಾರೆ
            ನಗುತ ನಲಿದು ಬಾರೆ, ನನ್ನ ಭವ್ಯ ಭಾಗ್ಯ ತಾರೆ
            ನನ್ನ ಕಲೆಗೆ ನವ ಕಳೆಯನಿತ್ತ ಸೌಂದರ್ಯ ನಿಧಿಯ ತೋರೆ
ಇಬ್ಬರು : ಏನೋ ಎಂತೋ, ಜುಮ್ಮೆಂದಿತು ತನುವು, ಬೆಚ್ಚಿತು ಮನವು
            ಏಕೋ ಕಾಣೆನು, ಎಂದೂ ಅರಿಯೆನು, ಇಂತ ಸವಿ ನೋವ
            ಸುಖವಾಂತ ಅನುಭಾವ
ಗಂಡು : ಏನೋ                   ಹೆಣ್ಣು : ಎಂತೋ
----------------------------------------------------------------------------------------------------------------------

ಅಮರಶಿಲ್ಪಿ ಜಕಣಾಚಾರಿ( ೧೯೬೪)......ನಿಲ್ಲು ನೀ ನಿಲ್ಲು ನೀ

ಸಂಗೀತ : ಎಸ್.ರಾಜೇಶ್ವರರಾವ್  ಸಾಹಿತ್ಯ : ಚಿ.ಸದಾಶಿವಯ್ಯ ಗಾಯನ : ಡಾ.ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಸುಶೀಲಾ


ಹೆಣ್ಣು : ಆಆಆ... ಆಆಆ...
ಗಂಡು : ನಿಲ್ಲು ನೀ ನಿಲ್ಲು ನೀ ನೀಲವೇಣಿ ಕoಗಳಿನ ಕಾಂತಿಯಲಿ ಹೊoಗನಸ ಕಾಣ್ವೆರಾಣಿ
           ನಿಲ್ಲು ನೀ ನಿಲ್ಲು ನೀ ನೀಲವೇಣಿ

ಗಂಡು : ಬೆಳುನಡುವಿನ ಬಳ್ಳಿಯು ತಾ ಬಾಗುತ ಬಳುಕಲಿ
           ಬೆಳುನಡುವಿನ ಬಳ್ಳಿಯು ತಾ ಬಾಗುತ ಬಳುಕಲಿ ಹೆಜ್ಜೆಯಾ ಗೆಜ್ಜೆಯಲಿ ಪ್ರಣಯನಾದ ತುoಬಲಿ
           ಹೆಜ್ಜೆಯಾ ಗೆಜ್ಜೆಯಲಿ ಪ್ರಣಯನಾದ ತುoಬಲಿ ಕಡೆಗಣ್ಣಿನ ಕುಡಿ ನೋಟ... ಆಆಆ
          ಕಡೆಗಣ್ಣಿನ ಕುಡಿ ನೋಟ ವೈಯ್ಯಾರದೆ ಹಾಡಲಿ (ಆಹಾಹಾಹಾಹಾ.. ಆಆಆ..ಆ ಆ   )
         ನವ ಯೌವ್ವನ ನಾಟ್ಯದಾ ಅಲೆಯುಲಿಯು ಆಡಲಿ
        ಒಲಿದು ಬಾ ನಲಿದು ಬಾ ನಾಗವೇಣಿ ಕoಗಳಿನ ಕಾಂತಿಯಲಿ ಹೊoಗನಸ ಕಾಣ್ವೆರಾಣಿ
        ಒಲಿದು ಬಾ ನಲಿದು ಬಾ ನಾಗವೇಣಿ

ಗಂಡು : ಸುಂದರಿಯೇ ...ಸುಂದರಿಯೇ ಚoದಿರನು ನಿನ್ನಂದವ ಕಾಣುತ
           ಮರೆಯಾದನು ಮೋಡದಲಿ ಮರೆಸಿ ಮುಖವ ನಾಚುತ
          ಮರೆಯಾದನು ಮೋಡದಲಿ ಮರೆಸಿ ಮುಖವ ನಾಚುತ
          ಸುರಕೋಗಿಲೆ ನೀನು ನಿನ್ನ ಗಾನ ಕೇಳುತ (ಆಆಆ ಆಆಆ )
         ಸುರಕೋಗಿಲೆ ನೀನು ನಿನ್ನ ಗಾನ ಕೇಳುತ ಆ ಕೋಗಿಲೆ ಮುಕಾಯಿತು ನಾಚಿ ಮಾನ ತಾಳುತ
         ಬಾರೇ  ನೀ ಕಾಮಿನಿ ನನ್ನ ಮೋಹಿನಿ
         ಬಾರೇ  ನೀ ಕಾಮಿನಿ ನನ್ನ ಮೋಹಿನಿ ಕoಗಳಿನ ಕಾಂತಿಯಲಿ ಹೊoಗನಸ ಕಾಣ್ವೆರಾಣಿ
         ಒಲಿದು ಬಾ ನಲಿದು ಬಾ ನಾಗವೇಣಿ
--------------------------------------------------------------------------------------------------------------------------

ಅಮರಶಿಲ್ಪಿ ಜಕಣಾಚಾರಿ (1964) - ಚೆಲುವಾಂತ ಚೆನ್ನಿಗನೇ
ಸಂಗೀತ: ಎಸ್.ರಾಜೇಶ್ವರ ರಾವ್ ಸಾಹಿತ್ಯ: ಚಿ.ಸದಾಶಿವಯ್ಯ  ಹಾಡಿದವರು: ಪಿ.ಸುಶೀಲಾ

ಚೆಲುವಾಂತ ಚೆನ್ನಿಗನೇ ನಲಿದಾಡು ಬಾ ಈ ಶೃಂಗಾರ ಶಿಲೆಯೊಡನೇ ಕುಣಿದಾಡು ಬಾರಾ
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ ಈ ಶೃಂಗಾರ ಶಿಲೆಯೊಡನೇ ಕುಣಿದಾಡು ಬಾರಾ
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ

ತಾಳಮೇಳದೊಲೂ ಕಲೆಯುವ ಬಾರಾ ಆಆಆ..
ತಾಳಮೇಳದೊಲೂ ಕಲೆಯುವ ಬಾರಾ ಗಾಳಿಗಂಧದೊಲು ಸೇರುವ ಬಾರಾ
ಭಾವ ಭಂಗಿಯೊಲು ಬೆರೆಯುವ ಬಾರಾ
ಭಾವ ಭಂಗಿಯೊಲು ಬೆರೆಯುವ ಬಾರಾ ಪ್ರೇಮಾನಂದವ ನೀ ತಾರಾ
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ

ನೀಲಿ ಗಗನದಿ ತೇಲಿಹೂದಿತಿದೇ
ನೀಲಿ ಗಗನದಿ ತೇಲಿಹೂದಿತಿದೇ ಕಾಮನಬಿಲ್ಲನು ಏರಿ ನೋಡಿದೇ
ಚಂದ್ರತಾರೆಗಳ ಸೇರಿ ಕೇಳಿದೇ ಎಲ್ಲಡಗಿರುವೇ ಬಳಿ ಬಾರಾ
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ

ಕಾರ್ಮೋಡವೂ ಕೂಡುತ ಬರಲೂ
ಕಾರ್ಮೋಡವೂ ಕೂಡುತ ಬರಲೂ ಘಲಿ ಘಲಿ ಕುಣಿವಾ ನೀಲಿನ ವಿಳಲು
ನಿನ್ನಲ್ಲೀ ಪರವಶಳಾಗಿಹೇ ನೀರಾ ದಯವ ತೋರಿ ನೀ ಬೇಗನೇ ಬಾರಾ
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ ಈ ಶೃಂಗಾರ ಶಿಲೆಯೊಡನೇ ಕುಣಿದಾಡು ಬಾರಾ
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ ಈ ಶೃಂಗಾರ ಶಿಲೆಯೊಡನೇ ಕುಣಿದಾಡು ಬಾರಾ
ಚೆಲುವಾಂತ ಚೆನ್ನಿಗನೇ ನಲಿದಾಡು ಬಾ
--------------------------------------------------------------------------------------------------------------------------

ಅಮರಶಿಲ್ಪಿ ಜಕಣಾಚಾರಿ (1964) - ಮನಸೇ ಮುದುವಾಗಿದೆ
ಸಂಗೀತ: ಎಸ್.ರಾಜೇಶ್ವರ ರಾವ್ ಸಾಹಿತ್ಯ: ಚಿ.ಸದಾಶಿವಯ್ಯ  ಹಾಡಿದವರು: ಪಿ.ಸುಶೀಲಾ, ಘಂಟಸಾಲ

ಹೆಣ್ಣು : ಆಆಆ... ಆಆಆ.. ಆಆಆ... ಆಆಆ.. ಆಆಆ... ಆ ಆ ಆ.. ಆ ಆ ಆ... ಆಆಆ..
          ಮನಸೇ ಮುದವಾಗಿದೇ... 
         ಮನಸೇ ಮುದವಾಗಿದೇ ಸಮ್ಮೋಹ ಚೆಲುವೇಕೇ ರಸ ತುಂಬಿದೇ... 
         ಮನಸೇ ಮುದವಾಗಿದೇ  

ಹೆಣ್ಣು : ಕೋಗಿಲೇ ಕೂಗಿತು ನೀವಿರುವಲ್ಲೇ.. ಆ.. ಓ... ಆಆಆ.... ಓಓಓ .. ಆಆಆಆಅ ..
          ಕೋಗಿಲೇ ಕೂಗಿತು ನೀವಿರುವಲ್ಲೇ ಜಗವರಳಿತೂ ಒಲವಿರುವಲ್ಲೀ..
          ಪ್ರೇಮದ ತಂಗಾಳಿ ಬೀಸಲೂ ಬಲ್ಲೇ ಇಹವೋ ಫಲವೋ ನೀನೇ ...
         ಮನಸೇ ಮುದವಾಗಿದೇ
ಗಂಡು : ಢಣಗರರ ದುಂಬಿ ನವನಾಟ್ಯದಂತೇ ಶೃಂಗಾರ ಮೂರ್ತಿ ನೀ ನನ್ನ ಸ್ಫೂರ್ತಿ 
           ನಿನ್ನ ನಡಿಗೆ ನುಡಿಗೇ ನನ್ನ ಕೃತಿಕ ಗುಡಿ ಈ ಮಧುರ ಸಂಧೀ ಹೊಸ ಸಲಿಗೆ ನಾಂದೀ 
           ಮನ್ಮಥನ ಪುಷ್ಪ ಸವಿಬಾಣದಂತೇ ಬಾ ಕವನವೇ ನೀ ಸುರಗಾನದಂತೆ 
          ಮನ್ಮಥನ ಪುಷ್ಪ ಸವಿಬಾಣದಂತೇ ಬಾ ಕವನವೇ ನೀ ಸುರಗಾನದಂತೆ (ಅಹ್ಹಹ .. ಅಹ್ಹಹ ..)
          ಈ ಹೃದಯದಲ್ಲಿ ನಾಟಿರುವೇ ನೀನೂ ತನುಮನಗಳಲ್ಲಿ ಬೆರೆತಿರುವೇ ನೀನೂ 
          ಅತೀ ಸುಂದರಾಂಗೀ ರತಿದೇವಿಯೂ ಮುಳ್ಳಿಲ್ಲದಂಥ ಸಿಹಿ ಮಲ್ಲೆಯೂ 
          ಕತ್ತಿ ನೋಟ ಬಿಗುತಲೇ ನೀನೂ ಕಲ್ಲುಗಳೂ ಕೂಡ ನವರತ್ನವಹೂದು 

ಹೆಣ್ಣು : ಝಳ ಝಳ ಝಳ ಝಳ ಹೂ ಮಳೆಗರೆಯಲೂ 
          ಕಿಲ  ಕಿಲ  ಕಿಲ  ಕಿಲ  ಕಿಲ  ಶಿಲೆಗಳೂ ನಗಲೂ 
         ಝಲ್ ಝಲ್  ಝಲ್  ಝಲ್  ಗೆಜ್ಜೆಯೂ ಇರಲೂ 
         ಚಂದ್ರಾಕಾರ ಭೂಮಿ ಕೂಡ ಕೊಂಡವು 
         ಚಂದ್ರಾಕಾರ ಭೂಮಿ ಕೂಡ ಕೊಂಡವು 
--------------------------------------------------------------------------------------------------------------------------

ಅಮರಶಿಲ್ಪಿ ಜಕಣಾಚಾರಿ (1964) - ಸುರಸುಂದರಾಂಗ ಕೃಷ್ಣ ನೀ ಬಾರೋ
ಸಂಗೀತ: ಎಸ್.ರಾಜೇಶ್ವರ ರಾವ್ ಸಾಹಿತ್ಯ: ಚಿ.ಸದಾಶಿವಯ್ಯ  ಹಾಡಿದವರು: ಪಿ.ಸುಶೀಲಾ. 

ಕೋರಸ್ : ಆಆಆ.. ಆಆಆ..ಆಆಆ.. ಆಆಆ..ಆಆಆ.. ಆಆಆ..
ಹೆಣ್ಣು : ಸುರಸುಂದರಾಂಗ ಕೃಷ್ಣ ನೀ ಬಾರೋ...
          ಸುರಸುಂದರಾಂಗ ಕೃಷ್ಣ ನೀ ಬಾರೋ ಎಳೇ ನಗು ಬೆಳಗುವಾ ಮುಖವನ್ನೂ ತೋರು
          ಸುರಸುಂದರಾಂಗ ಕೃಷ್ಣ ನೀ ಬಾರೋ... ಓಓಓಓಓ
ಕೋರಸ್ : ಸನಿದಮ ಗಸ ಗಮ ದನಿ ದಾನಿದಮಗರಿಸ ಗಾಗ ಮನಿದನಿಗಾರಿನಿದಸ
.
ಹೆಣ್ಣು : ಕೊಳಲ.. ಕೊಳಲ ಕರೆಯ ಕೇಳಿ ಮನದಿ ಮೋಹವ  ತಾಳಿ
          ಕೊಳಲ ಕರೆಯ ಕೇಳಿ ಮನದಿ ಮೋಹವ  ತಾಳಿ ಅರಸುತ್ತಾ ಬಂದೇ ಈ ವಿರಹ ನೀಗಿಸು ಎಂದೇ
          ಸುರಸುಂದರಾಂಗ ಕೃಷ್ಣ ನೀ ಬಾರೋ... ಓಓಓಓಓ

ಹೆಣ್ಣು : ಹೊರಗೆ ಚಂದ್ರನ ಕಾಂತಿ ಒಳಗೇ ಏನೋ ಭ್ರಾಂತಿ
          ಹೊರಗೆ ಚಂದ್ರನ ಕಾಂತಿ ಒಳಗೇ ಏನೋ ಭ್ರಾಂತಿ
           ನಾ ತಾಳಲಾರೇ  ವೀಣೆಯೇ ಜೀವನ ಶಾಂತೀ ...
          ಸುರಸುಂದರಾಂಗ ಕೃಷ್ಣ ನೀ ಬಾರೋ... ಓಓಓಓಓ

ಕೋರಸ್ : ಆಆಆ.. ಆಆಆ..ಆಆಆ.. ಆಆಆ..ಆಆಆ.. ಆಆಆ..
ಹೆಣ್ಣು : ಮನವ ಕದ್ದವ ನೀನೂ ಒಲಿದು ಬಂದೆನು ನಾನೂ
          ಮನವ ಕದ್ದವ ನೀನೂ ಒಲಿದು ಬಂದೆನು ನಾನೂ
          ಮನ ಬಿಟ್ಟು ಮೇಲಿಂದು ಬಿಗುಮಾನವೇಕಯ್ಯಾ
          ಸುರಸುಂದರಾಂಗ ಕೃಷ್ಣ ನೀ ಬಾರೋ... ಓಓಓಓಓ       
          ಸುರಸುಂದರಾಂಗ ಕೃಷ್ಣ ನೀ ಬಾರೋ ಎಳೇ ನಗು ಬೆಳಗುವಾ ಮುಖವನ್ನೂ ತೋರು
          ಸುರಸುಂದರಾಂಗ ಕೃಷ್ಣ ನೀ ಬಾರೋ... ಓಓಓಓಓ
--------------------------------------------------------------------------------------------------------------------------

ಅಮರಶಿಲ್ಪಿ ಜಕಣಾಚಾರಿ (1964) - ಜಂತರ ಮಂತರ ಮಾಟವೋ
ಸಂಗೀತ: ಎಸ್.ರಾಜೇಶ್ವರ ರಾವ್ ಸಾಹಿತ್ಯ: ಚಿ.ಸದಾಶಿವಯ್ಯ  ಗಾಯನ : ಬೆಂಗಳೂರ ಲತಾ, ಮಾಧವಪೆದ್ದಿ ಸತ್ಯಂ

ಇಬ್ಬರು : ಜಂತರ ಮಂತರ ಮಾಟವೋ ಇದೂ ಅಂತರಾಳದ ಆಟವೋ
             ಅಂತೂ ಇಂತೂ ದುಬ್ಬಕ್ಕ ಎಂದರೇ ಕಂತೇ ಒಗೆದಂತೇ
ಗಂಡು : ಧಾನಾಧನ್ ಜಂತರ ಮಂತರ ಮಾಟವೋ                ಹೆಣ್ಣು : ಓಓಓಓಓ ಹೋಯ್ ..

ಗಂಡು :ಆಡೋದೆಲ್ಲಾ ಆಚಾರ ಸರಿ ಮಾಡೋದೆಲ್ಲಾ ಅಪಚಾರ
ಹೆಣ್ಣು : ಆಡೋದೆಲ್ಲಾ ಆಚಾರ ಸರಿ ಮಾಡೋದೆಲ್ಲಾ ಅಪಚಾರ
ಗಂಡು : ಆಡಿದ್ದ ಮಾತೇ ಚಕ್ರಯಾಗಿ ಬಿದ್ದರೇ ತಪ್ಪಿದೆಲ್ಲಾ ಗ್ರಹಚಾರ
            ಕಣ್ಣಿಗೇ ಕಾಣದ ಕುರುಡಂಗ್ ಕೂಡ ಎಂಗಂಗೆದ್ರೇನೇ ಜೀಲ್  ... ಜೀಲ್... ಜೀಲ್.. ಯ್ಯಾ
ಇಬ್ಬರು : ಜಂತರ ಮಂತರ ಮಾಟವೋ ಇದೂ ಅಂತರಾಳದ ಆಟವೋ
             ಅಂತೂ ಇಂತೂ ದುಬ್ಬಕ್ಕ ಎಂದರೇ ಕಂತೇ ಒಗೆದಂತೇ
ಗಂಡು : ಧಾನಾಧನ್ ಜಂತರ ಮಂತರ ಮಾಟವೋ                ಹೆಣ್ಣು : ಓಓಓಓಓ ಹೋಯ್ ..

ಗಂಡು : ತಕ್ಕಡಿ ಬಿಕ್ಕರೀ ತಾಳಂಗು ತಧಗಿಣ ತಕದೊಂ ಎಲ್ಲಾ ನಾಟಕ
           ಶಂಕರಿ ತಿಂತರಿ ಕತ್ತರಿ ಕತ್ತರಿ ಕಾಣೋದೆಲ್ಲಾ ಭೂಟಕ
           ಕುಂಭದ ಗಡಿಗೆ ತುಳುಕೋದು ಹೆಚ್ಚು ಜಂಭದ ಕೋಳಿ ಬೋಗಳೋದು ಹೆಚ್ಚು
           ಸುಳ್ಳ ಮಾತನಲ್ಲಿ ಸಿಹಿಯೇ ಹೆಚ್ಚು ನಿಜದೆಲ್ಲೆಂತೂ ಕಹಿಯೇ ಹೆಚ್ಚೂ
ಹೆಣ್ಣು : ಆಆಆ.. ಆಆಆ.. (ಭಲೇ ಭಲೇ  ) ಕನಸಿನಲ್ಲಿ ಒಲಿದ ಚೆಲುವ ಮಾಯೆವಾದನು        
          ಕನಸಿನಲ್ಲಿ ಒಲಿದ ಚೆಲುವ ಮಾಯೆವಾದನು ಅವನಿಗಾಗಿ ಹುಡುಕುತಿರಲೂ
          ಅವನಿಗಾಗಿ ಹುಡುಕುತಿರಲೂ ಶಕ್ತನಿಲ್ಲಿ ಕಂಡೇನೂ ಕನಸಿನಲ್ಲಿ ಒಲಿದ ಚೆಲುವ ಮಾಯೆವಾದನು
ಗಂಡು : ಅಧಿಕಾರಕ್ಕೇ ದರ್ಪದ ರೋಗ               ಹೆಣ್ಣು : ಅನಜಾರಂಗೇ ದುಡ್ಡಿನ ರೋಗ
ಗಂಡು : ಇಲ್ಲದೋನಿಗೇ  ಹಸಿವಿನ ರೋಗ          ಹೆಣ್ಣು : ಇದ್ದಂಗಂತೂ ಅಧೀಮ್ ರೋಗ
ಗಂಡು : ಅಮ್ಮಯ್ಯಗೋಳಗೇ  ಊರಿನ ಹುಚ್ಚೂ   ಹೆಣ್ಣು : ಅಪ್ಪಯ್ಯಗೊಳಗೇ ಹೆಣ್ಣಿನ ಹುಚ್ಚೂ
ಇಬ್ಬರು : ಭಗವಂತಗೇ ಭಕ್ತರ ಹುಚ್ಚೂ ಜಗಪತಿರಾಘವ ರಾಮ ರಾಮ್ ರಾಮ್
ಇಬ್ಬರು : ಜಂತರ ಮಂತರ ಮಾಟವೋ ಇದೂ ಅಂತರಾಳದ ಆಟವೋ
             ಅಂತೂ ಇಂತೂ ದುಬ್ಬಕ್ಕ ಎಂದರೇ ಕಂತೇ ಒಗೆದಂತೇ
ಗಂಡು : ಧಾನಾಧನ್ ಜಂತರ ಮಂತರ ಮಾಟವೋ                ಹೆಣ್ಣು : ಓಓಓಓಓ ಹೋಯ್ ..
--------------------------------------------------------------------------------------------------------------------------

ಅಮರಶಿಲ್ಪಿ ಜಕಣಾಚಾರಿ (1964) - ಮಲ್ಲಿಗೆಯ ಹೂವಿನಂಥ
ಸಂಗೀತ: ಎಸ್.ರಾಜೇಶ್ವರ ರಾವ್ ಸಾಹಿತ್ಯ: ಚಿ.ಸದಾಶಿವಯ್ಯ  ಹಾಡಿದವರು: ಎಲ್.ಆರ್.ಈಶ್ವರಿ, ಪಿ.ಬಿ.ಎಸ್ 

ಗಂಡು : ಓಓಓಓ ... ಓಹೋಹೊಹೋ ಓಹೋಹೋ ಹೇ...
ಕೋರಸ್ : ಆಹಾಹಾಹಾಹಾ (ಓಹೋಹೊಹೋ ) ಆಹಾಹಾಹಾಹಾ (ಓಹೋಹೊಹೋ )
ಗಂಡು : ಹೇ.. ಮಲ್ಲಿಗೆಯ ಹೂವಿನಂಥ ಮಲ್ಲಿ ನೋಡೇ ಮನಸೆಲ್ಲಾ ನಿಂದೇನೇ ಅಯ್ತೆ ಕಳ್ಳೇ
ಕೋರಸ್ : ಹೇ.. ಮಲ್ಲಿಗೆಯ ಹೂವಿನಂಥ ಮಲ್ಲಿ ನೋಡೇ ಮನಸೆಲ್ಲಾ ನಿಂದೇನೇ ಅಯ್ತೆ ಕಳ್ಳೇ
ಹೆಣ್ಣು : ಕಾಡಿಗೆಯ ಕುಡಿಮೀಸೆ ಹೈದ ಕೇಳೋ ಮಾತುಗಳೆಲ್ಲಾ ಉದುರಿತೋ ಅಲ್ಲವೇನೋ
ಕೋರಸ್ : ಆಹ್ ..  ಕಾಡಿಗೆಯ ಕುಡಿಮೀಸೆ ಹೈದ ಕೇಳೋ ಮಾತುಗಳೆಲ್ಲಾ ಉದುರಿತೋ ಅಲ್ಲವೇನೋ

ಗಂಡು : ಯಾವ ಮಂತ್ರ ಹಾಕಲೇ...                      ಹೆಣ್ಣು : ಮಂತ್ರವೆಲ್ಲಾ ಸುಳ್ಳವೋ
ಗಂಡು : ಯಾವ ಮಂತ್ರ ಹಾಕಲೇ...                      ಹೆಣ್ಣು : ಮಂತ್ರವೆಲ್ಲಾ ಸುಳ್ಳವೋ
ಗಂಡು ಓ ಒಹೋ.. ಕೋಂಡೆಯನ್ನ ಕೊಡವಲೇ       ಹೆಣ್ಣು : ಹತ್ತದೇ ಜಾರದೂ
ಗಂಡು : ನನ್ನ ಗತಿ ಏನೂ ಅಂತಾ ಹೇಳೇ ಚೆನ್ನೀ      ಹೆಣ್ಣು : ಅಣ್ಣಣ್ಣನ ಕೇಳೋ ನನ್ನ ರನ್ನ
ಎಲ್ಲರು :  ಹೇ.. ಮಲ್ಲಿಗೆಯ ಹೂವಿನಂಥ ಮಲ್ಲಿ ನೋಡೇ ಮನಸೆಲ್ಲಾ ನಿಂದೇನೇ ಅಯ್ತೆ ಕಳ್ಳೇ
             ಕಾಡಿಗೆಯ ಕುಡಿಮೀಸೆ ಹೈದ ಕೇಳೋ ಮಾತುಗಳೆಲ್ಲಾ ಉದುರಿತೋ ಅಲ್ಲವೇನೋ

ಗಂಡು : ನಿನ್ನ ಬಿಟ್ಟು ಹೆಂಗ್ ಹೋಗಲೀ ನನ್ನ ಬಂಗಾರೀ ..
ಹೆಣ್ಣು : ಜನ ನೋಡಿ ನಕ್ತಾರೋ ಎಲೋ ಮಂಗಣ್ಣೆ ..
ಗಂಡು : ಮನಸೋತಮ್ಯಾಕೇ ಗೆಣಕೆಲ್ಲ ಬೆದರೇ.. ಏಏಏಏಏ (ಹೇಹೇ )
           ಮನಸೋತಮ್ಯಾಕೇ ಗೆಣಕೆಲ್ಲ ಬೆದರೇ.
ಹೆಣ್ಣು : ನನ್ನಾಸೇ ನೀ ತಿಳಿದೂ ನಡೆಯೋ ಮಾವ
          ನನ್ನಾಸೇ ನೀ ತಿಳಿದೂ ನಡೆಯೋ ಮಾವ
ಎಲ್ಲರು :  ಒಹೋ .. ಮಲ್ಲಿಗೆಯ ಹೂವಿನಂಥ ಮಲ್ಲಿ ನೋಡೇ ಮನಸೆಲ್ಲಾ ನಿಂದೇನೇ ಅಯ್ತೆ ಕಳ್ಳೇ
             ಕಾಡಿಗೆಯ ಕುಡಿಮೀಸೆ ಹೈದ ಕೇಳೋ ಮಾತುಗಳೆಲ್ಲಾ ಉದುರಿತೋ ಅಲ್ಲವೇನೋ
 
ಗಂಡು : ಪಟ್ಟೇ ಸೀರೇ ಜರಿ ರವಿಕೇ ಕಟ್ಟಿಸಿ ತರಲಾ...
ಹೆಣ್ಣು : ಕಟ್ಟಿಸೆನ್ನಾ ಉಂಗುರ ತಾಳಿ ಬಳೆಗಳ ತಾರೋ
ಗಂಡು : ಭಲೇ ಹೆಣ್ಣೇ ಮಾವಿನ ಹಣ್ಣೇ ಅತ್ತೇ ಮಗಳೇ.. ಸೋದರತ್ತೇ ಮಗಳೇ
ಕೋರಸ್ : ಭಲೇ ಹೆಣ್ಣೇ ಮಾವಿನ ಹಣ್ಣೇ ಅತ್ತೇ ಮಗಳೇ.. ಸೋದರತ್ತೇ ಮಗಳೇ
ಹೆಣ್ಣು :  ಮಾತಿನ ಮಲ್ಲ ನನ್ನ ನಲ್ಲ ಮದುವೇಯಾಗೂ ಬಾ ಸುಖದಿ ತೇಲಿ ಸಾಗೂ ಬಾ
ಎಲ್ಲರು :  ಒಹೋ .. ಮಲ್ಲಿಗೆಯ ಹೂವಿನಂಥ ಮಲ್ಲಿ ನೋಡೇ ಮನಸೆಲ್ಲಾ ನಿಂದೇನೇ ಅಯ್ತೆ ಕಳ್ಳೇ
             ಕಾಡಿಗೆಯ ಕುಡಿಮೀಸೆ ಹೈದ ಕೇಳೋ ಮಾತುಗಳೆಲ್ಲಾ ಉದುರಿತೋ ಅಲ್ಲವೇನೋ
--------------------------------------------------------------------------------------------------------------------------

ಅಮರಶಿಲ್ಪಿ ಜಕಣಾಚಾರಿ (1964) - ತನುವೂ ಮನವೂ
ಸಂಗೀತ: ಎಸ್.ರಾಜೇಶ್ವರ ರಾವ್ ಸಾಹಿತ್ಯ: ಚಿ.ಸದಾಶಿವಯ್ಯ  ಹಾಡಿದವರು: ಘಂಟಸಾಲ,  ಪಿ.ಸುಶೀಲಾ

ಗಂಡು : ಶ್ರೀ ವೇಣುಗೋಪಾಲ..... ಆಆಆ ಚಿನ್ಮಯಾನಂದ ಲೀಲಾ... ಆಅಅಆ
            ನಾರಾಯಣ ವಿಜಯನಾರಾಯಣ ನಾರಾಯಣ ಪಾಹೀ ....
            ತನವೂ ಮನವೂ ನೆರೆ ಧನ್ಯವಾಯಿತಿಂದೂ
            ತನವೂ ಮನವೂ ನೆರೆ ಧನ್ಯವಾಯಿತಿಂದೂ
            ದೊರೆಯೇ ದಯೇ ತೋರೇ ನೀ ಬಂದೂ
            ತನವೂ ಮನವೂ ನೆರೆ ಧನ್ಯವಾಯಿತಿಂದೂ

ಗಂಡು : ಬೆಂದ ಮನಗಳ ಬೇಗೆಯ ನೀಗಿ ಚಂದ್ರಿಕೆಯನೂ ಚೆಲ್ಲಿದೇ ನೀನೂ
ಹೆಣ್ಣು : ನಿನ್ನ ಮಂಗಳ ಕಣ್ಣಬೆಳಕನ್ನೇ ಕಾಣೋ ನೀ ಕರುಣಾಕರ ನೀ
ಇಬ್ಬರು : ತನವೂ ಮನವೂ ನೆರೆ ಧನ್ಯವಾಯಿತಿಂದೂ

ಇಬ್ಬರು : ಶರಣು ಚೆನ್ನಕೇಶವ ಶರಣು ದೀನ ಬಾಂಧವ
ಎಲ್ಲರು :  ಶರಣು ಚೆನ್ನಕೇಶವ ಶರಣು ದೀನ ಬಾಂಧವ
ಇಬ್ಬರು : ಗಾನ ನಾಟ್ಯ ಮೋಹನ ಸಕಲ ಲೋಕ ಪಾವನ
ಎಲ್ಲರು : ಗಾನ ನಾಟ್ಯ ಮೋಹನ ಸಕಲ ಲೋಕ ಪಾವನ
ಇಬ್ಬರು : ಶರಣು ಚೆನ್ನಕೇಶವ ಶರಣು ದೀನ ಬಾಂಧವ
ಎಲ್ಲರು :  ಶರಣು ಚೆನ್ನಕೇಶವ ಶರಣು ದೀನ ಬಾಂಧವ

ಇಬ್ಬರು : ನೀನೇ ತಾಯಿಯೂ ತಂದೆಯೂ ನೀನೇ ಜೀವನದಾತನೂ ನೀನೇ ಪ್ರಭೂ .. 
ಕೋರಸ್ : ಆಆಆ..ಆಆಆ....ಆಆಆ...ಆಆಆ 
ಇಬ್ಬರು : ನಿನ್ನ ಸೇವೆಯೇ ನಮ್ಮಯ ದೀಕ್ಷೆ ನಿನ್ನ ಪಾದವೇ ರಕ್ಷೆಯ ಪ್ರಭೂ 
ಕೋರಸ್ : ಓಓಓಓಓ..ಓಓಓಓಓ....ಓಓಓಓಓ...ಓಓಓಓಓ  
ಇಬ್ಬರು : ನಂದ ನಂದನ ಗೋವಿಂದ ಭಕ್ತ ಕಂದನ ಗೋವಿಂದ 
ಎಲ್ಲರು : ನಂದ ನಂದನ ಗೋವಿಂದ ಭಕ್ತ ಕಂದನ ಗೋವಿಂದ 
             ನಂದ ನಂದನ ಗೋವಿಂದ ಭಕ್ತ ಕಂದನ ಗೋವಿಂದ  
             ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
             ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
             ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
             ಚೆನ್ನಕೇಶವಾ ಪಾಹೀ ಚೆನ್ನಕೇಶವಾ 
             ಚೆನ್ನಿಗರಾಯ ಚೆನ್ನಿಗರಾಯ ಚೆನ್ನಿಗರಾಯ ಚೆನ್ನಿಗರಾಯ 
             ಚೆನ್ನಿಗರಾಯ ಚೆನ್ನಿಗರಾಯ ಚೆನ್ನಿಗರಾಯ ಚೆನ್ನಿಗರಾಯ 
ಗಂಡು : ಶಿವ ಶಿವ... ತನವೂ ಮನವೂ ನೆರೆ ಧನ್ಯವಾಯಿತಿಂದೂ  
--------------------------------------------------------------------------------------------------------------------------

No comments:

Post a Comment