215. ಗಡಿಬಿಡಿ ಗಂಡ (1993)


ಗಡಿಬಿಡಿ ಗಂಡ ಚಿತ್ರದ ಹಾಡುಗಳು 
  1. ಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈಯಿ 
  2. ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
  3. ನೀನು ನೀನೇ ಇಲ್ಲಿ ನಾನು ನಾನೇ 
  4. ಪಂಚರಂಗಿ ಪುಟ್ಟ ರಾಮನಾದ 
  5. ಬಿದ್ದೆ ಬಿದ್ದೆ ಬಾತರೂಮಲ್ಲಿ ಲವ್ವಲ್ಲಿ ಬಿದ್ದೆ
  6. ಬಂಚಿಕ ಚಿಕ್ ಬಂ ಚಿಕಬಂ ಬಂ ಹಾಡು ಬೇಗ 

ಗಡಿಬಿಡಿ ಗಂಡ (1993) - ಗಡಿಬಿಡಿ ಗಂಡ ನೀನು
ಸಾಹಿತ್ಯ, ಸಂಗೀತ: ಹಂಸಲೇಖ ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರ

ಆಹಾ ಹಾ ಹಾ ಹಾಹಾಹ ಹಾ ರಾರಾರಾ  ರಾರಾರಾ...
ಏನಾಯ್ತು, ಏನಾಯ್ತು ಅಂತ ಹೇಳ್ಬಾರ್ದಗಡಿಬಿಡಿ ಗಂಡ ನೀನು ಚಿನ್ನ ನಿನ್ನ ಕೈ
ಎಂಥ ಬಿಸಿ ಏಟು ನನ್ನ ಕೆನ್ನೆಗಿದು ಸ್ವೀಟು
ಸಿಡಿಮಿಡಿ ಹೆಂಡ್ತಿ ನೀನು ಹೂವ ನಿನ್ನ ಮೈ
ಎಂಥ ಬಿಸಿ ಏಟು ನನ್ನ ಕೈಗೆ ಇದು ಸ್ವೀಟು

ಕಾಲೇ ನಿಲ್ಲಲ್ಲ ಗಮನ ಎಲ್ಲೆಲ್ಲೊ ಮನಸೆ ಇನ್ನೆಲ್ಲೋ
ಭೂಮಿ ಮೇಲೆಲ್ಲೋ ಸ್ವರ್ಗ ಬೆಳಗೆಲ್ಲೊ ಮನಸು ಒಳಗೆಲ್ಲೋ
ಜಗವೆಲ್ಲ ಮೋಹಮಯ ಹೃದಯ ರಾಗಮಯ ನಿನ್ನ ಸ್ಪರ್ಶದಿಂದ
ಬದುಕೆಲ್ಲ ಪ್ರೇಮಮಯ ಸ್ನೇಹ ಮಧುರಮಯ ನಿನ್ನ ಅಧರದಿಂದ

ನಂದೇ ಈ ಸ್ವತ್ತು ಬಿಟ್ಟು ಇರಲಾರೆ ಪಾಲು ಕೊಡಲಾರೆ
ಒಂದೇ ಈ ಮುತ್ತು ನೀನು ಅದರರ್ಧ ನಾನು ಅದರರ್ಧ
ಉಳಿದರ್ಧ ಮಧುರ ಎಲೆ ಹೂವ ಮಂಚದಲಿ ಹಂಚಿಕೊಳ್ಳಬಹುದು
ನನ್ನ ಅರ್ಧನಾರಿ ಆ ದಿನದವರೆಗು ನಿನ್ನ ನೆಂಚಿಕೊಳ್ಳಬಹುದು
---------------------------------------------------------------------------------------------------------------------

ಗಡಿಬಿಡಿ ಗಂಡ (1993) - ಮುದ್ದಾಡೆಂದಿದೆ ಮಲ್ಲಿಗೆ ಹೂ
ಸಂಗೀತ/ಸಾಹಿತ್ಯ: ಹಂಸಲೇಖ ಗಾಯಕ/ಗಾಯಕಿ: ಎಸ್.ಪಿ.ಬಿ, ಚಿತ್ರ


ಎಸ್.ಪಿ.ಬಿ : ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
                 ಮಲ್ಲಿಗೆಯ..ಮೊದಲು ಸಂಪಿಗೆಯ  ಸಂಪಿಗೆಯ..ಮೊದಲು ಮಲ್ಲಿಗೆಯ
                 ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ
                 ಇಡಬೇಕೋ..ಮನಸು ಕೊಡಬೇಕೋ  ಕೊಡಬೇಕೋ..ಮನಸು ಇಡಬೇಕೋ
ಚಿತ್ರ : ಆ ಆ ಆ ......ಮುಡಿಯಲಿ ಮಲ್ಲಿಗೆಯ ಮುಡಿದವಳ ಮೊದಲು ಮುಡಿಯಬೇಕು
         ಮಡದಿಗೆ ಪ್ರತಿದಿನವೂ ಮೊದಲಿರುಳಿರಬೇಕು
ಎಸ್.ಪಿ.ಬಿ:  ಮನಸಿನ ಮಧುವಿನ ಮಹಲೊಳಗೆ ಮದನ ಮಣಿಯಬೇಕು
                ಸುರತಿಯ ಪರಮಾನ್ನ ಹಿತಮಿತವಿರಬೇಕು
ಚಿತ್ರ :  ವಿರಹಬಾಧೆ ದಹಿಸುವಾಗ..ಬಾಲಬೋಧೆ ಏಕೆ
ಎಸ್.ಪಿ.ಬಿ : ಪ್ರಣಯ ನದಿಯೆ ತುಳುಕುವಾಗ..ಮದನ ಮಳೆಯು ಬೇಕೆ
ಚಿತ್ರ : ಹಿಡುದುಕೊ..ಮೆಲ್ಲಗೆ     ಎಸ್.ಪಿ.ಬಿ : ತಡೆದುಕೊ..ಮಲ್ಲಿಗೆ
ಚಿತ್ರ: ಹರೆಯ..ನೆರೆಯ..ತಡೆಯೊ..ಇನಿಯ
        ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ  ಮಲ್ಲಿಗೆಯ..ಮೊದಲು ಸಂಪಿಗೆಯ
        ಸಂಪಿಗೆಯ..ಮೊದಲು ಮಲ್ಲಿಗೆಯ
ಎಸ್.ಪಿ.ಬಿ: ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ ಇಡಬೇಕೋ..ಮನಸು ಕೊಡಬೇಕೋ
                ಕೊಡಬೇಕೋ..ಮನಸು ಇಡಬೇಕೋ

ಚಿತ್ರ : ಆ ಆ ಆ ......ಘಮ ಘಮ ಸಂಪಿಗೆಯ ಸುಮತಿಯನು 
         ಕೆಣಕಿ ಕಾಯಿಸದಿರು ಕುಸುಮದ ಎದೆಯೊಳಗೆ  ಪ್ರಳಯವ ತಾರದಿರು
ಎಸ್.ಪಿ.ಬಿ :  ಹಿಡಿಯಲಿ ಹಿಡಿಯುವ ನಡುವಿನಲಿ ಬಳುಕಿ ಬೇಯಿಸದಿರು
                  ತುಂಬಿದ ನಿಶೆ ಒಲೆಗೇ  ಚಂದ್ರನ ಕೂಗದಿರು
ಚಿತ್ರ: ಎದೆಯ ಸೆರಗ ಮೋಡದಲ್ಲಿ..ನೀನೆ ಚಂದ್ರನೀಗ
ಎಸ್.ಪಿ.ಬಿ : ಹೃದಯ ಮೇರು ಗಿರಿಗಳಲ್ಲಿ..ಕರಗಬೇಕೆ ಈಗ
ಚಿತ್ರ:  ಬಳಸಿಕೊ..ಕಂಪಿಗೆ    ಎಸ್.ಪಿ.ಬಿ: ಸಹಿಸಿಕೊ..ಸಂಪಿಗೆ
ಚಿತ್ರ :  ಹರೆಯ..ಹೊರೆಯ..ಇಳಿಸೊ..ಇನಿಯ
          ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ ಮಲ್ಲಿಗೆಯ..ಮೊದಲು ಸಂಪಿಗೆಯ
          ಸಂಪಿಗೆಯ..ಮೊದಲು ಮಲ್ಲಿಗೆಯ 
ಎಸ್.ಪಿ.ಬಿ :  ಮುದ್ದಾಡೆಂದಿದೆ ಮಲ್ಲಿಗೆ ಹೂ..ಮನಸಿ ಎಂದಿದೆ ಸಂಪಿಗೆ ಹೂ ಇಡಬೇಕೋ..ಮನಸು ಕೊಡಬೇಕೋ
                 ಕೊಡಬೇಕೋ..ಮನಸು ಇಡಬೇಕೋ
--------------------------------------------------------------------------------------------------------------------------

ಗಡಿಬಿಡಿ ಗಂಡ (1993) - ನೀನು ನೀನೆ
ಸಾಹಿತ್ಯ, ಸಂಗೀತ: ಹಂಸಲೇಖ ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ


ನೀನು ನೀನೆ ಇಲ್ಲಿ ನಾನು ನಾನೆ
ನೀನು ನೀನೆ ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ (2) ||ನೀನು ನೀನೆ||

ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ನಾದದ ಶೃತಿ ನೀಡಿ ತುಂಬುರ ಸ್ಮೃತಿ ಹಾಡಿ
ಕೈಲಾಸವೆಲ್ಲ ನಾದೋಪಾಸನೆಯಾಗಿ
ಷಣ್ಮುಖ ಪ್ರಿಯರಾಗಾ.........................ಆಆಆಆಆಆ
ಷಣ್ಮುಖ ಪ್ರಿಯರಾಗ ಷಣ್ಮುಖ ಪ್ರಿಯರಾಗ
ಮಾರ್ಗಹಿಂದೋಳವಾಗಿ  ನಡೆಸಿದೆ ದರ್ಬಾರು ನೋಡು
ಹಾಡುವೆಯ ಪಲ್ಲವಿಯ ಕೇಳುವೆಯ ಮೇಲೆ ಏಳುವೆಯ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ ||ನೀನು ನೀನೆ||

ಈ ಸ್ವರವೇ ವಾದ್ಯ                       ಈಶ್ವರನೇ ನಾದ
ತೃತಿಗತಿಯ ಕಾಗುಣಿತ ವೇದ        ಶಿವಸ್ಮರಣೆ ಸಂಗೀತ ಸ್ವಾದ
ದಮಕಗಳ ಪಾಂಡಿತ್ಯ ಶೋಧ       ಸುಮತಿಗಳ ಸುಜ್ಞಾನ ಭೋಧ
ಬದುಕುಗಳ ವಿಚಾರಣೆ ಕ್ಷಮಾಪಣೆ ವಿಮೋಚನೆ    ಗೆಲುವುಗಳ ಆಲೋಚನೆ ಸರಸ್ವತಿ ಸಮರ್ಪಣೆ
ನವರಸ ಅರಗಿಸಿ ಪರವಸ ಪಳಗಿಸಿ ಅಪಜಯ ಅಡಗಿಸಿ ಜಯಿಸಲು ಇದು ಶಕುತಿಯ ಯುಕುತಿಯ ವಿಷಯಾರ್ಥ
ಗಣಗಣ ಶಿವಗಣ ನಿಜಗುಣ ಶಿವಮನ ನಲಿದರೆ ಒಲಿದರೆ ಕುಣಿದರೆ ಅದೇ ಭಕುತಿಯ ಮುಕುತಿಯ ಪರಮಾರ್ಥ  
|| ನೀನು ನೀನೇ||

ಸಾ ಸಮಗಸರಿ ನಿಗಸರಿಗ ಗಸನಿದಮ 
ಮಗಮದಾದದದಮ ದನಿನಿ ದದಾನಿ ಸಮಾಗ ಸನಿಸ ನಿಗಸರಿ ದಮಪಸ  ||ನೀನು ನೀನೆ||
ದನಿಸಗ ನಿಸ ದನಿಸಗ ನಿಸಗಮ ಗಮ ನಿಸಗಮ .ಗಾಗಾ ಮಾಮಾ 
ಗಸಗಸಗಸಗಸ ಮಗಮಗಮಗಮಗ ಗಸ್ಸಾ ಮಗಮಗಮಗ ಸನಿದಮದಸ ||ನೀನು ನೀನೆ||

ಮಗಮಗಮಗ ಗಮಗಮಗಮಗ ದಮದಮದಮ ಮನಿದನಿದನಿದ ಸಸಸಸಾಸಸಸಸ ಸದಸನಿ ನಿಸನಿದ ಸಸಾಸನಿದ ನಿಸಾನಿದಮ ದಮಪಸ ಸಗಮಗ ದಮದನಿ ಮದನಿಸ ಗಸನಿಸ ದನಿ ಮದ ಮದನಿಸದ || ನೀನು||

ಸಾ  ಪ ಸ ಸನಿಪಮಗಸನಿಪಸ
ಸಗಮಪಮಗ ಸಗಮಪಮಗ ಸಗಮಪಮಪ ಮಪನಿನಿಮಪಮ ಸರಿಗಮ ದಪಗಪ ದಾಪಗ ದಾದಪ ದಪಗರಿ ಸಸರಿಗರಿ ಸಾರಿಮಪನಿಸ ಸರಿಮಪನಿಸ ನಿಸ ರಿಪಮಾ ರಿಪಮಾ ರಿಸರಿ ಸ ಮಸಾ ಮಸಾ ಮಮದಸರಿನೀ ಸಾದಪಮ ಮಪದದಾಪ ಪದದಾಪಮ ಮಪದದಾಪಮ ಪಸದಾ ಪಮಪದಸಾ ಪಮಪದರೀ ಸರಿರಿ ಸರಿರಿ ಸರಿರಿ ಸರಿರಿ ಸರಿಸದಸರಿ ಮಸರಿ ಮದಸರಿ ಮಪದಸರಿ ರಿಮಪದಸರಿ ಸರಿಮಪದಸರಿ ಪನಿಸ ಗಪದ ರಿಮಪ ಸಗಮಗ ಸಮಗಸ ನಿದಮಗ ||
ನೀನು ನೀನೇ ಇಲ್ಲಿ ನಾನು ನಾನೇ.......
-------------------------------------------------------------------------------------------------------------------------

ಗಡಿಬಿಡಿ ಗಂಡ (1993) - ಪಂಚರಂಗಿ ಪುಟ್ಟ
ಸಾಹಿತ್ಯ, ಸಂಗೀತ: ಹಂಸಲೇಖ ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರ


ಪಂಚರಂಗಿ ಪುಟ್ಟ ರಾಮನಾದ... ರಾಮನಾದ ಪಂಚಪ್ರಾಣ ಕೊಟ್ಟು ಶಾಮನಾದ.. ಶಾಮನಾದ
ಒಲವಿನ ಮಳೆಯಲಿ ನೆನೆದಿರೊ ಮನದಲಿ
ಹರೆಯದ ಸಸಿಯಲಿ ಚಿಗುರೊಡೆದ

ಮದನ ಬೀದಿ ಮದನ ಸೆಳೆದ ರತಿಯ ಗಮನ
ಗಮಕ ಕಲಿಯೋ ನೆಪದಿ ಬಂದು ಗುಮಕ ಕಲಿತು ಹೊಡೆದ
ಬಸವ ಬೀದಿ ಬಸವ, ತೆರೆದ ಮನದ ಹಸಿವ
ನೊಗವ ಎಳೆಯೋ ನೆಪದಿ ಬಂದು, ಮನಸ ಎಳೆದು ಕರೆದ
ಪುಟ್ಟ ಪುಟ್ಟ ಪೋಲಿ ಪುಟ್ಟ ಸಂಗೀತ ಸ್ವರ ಕಲಿತ
ಹಾಡಲ್ಲಿಯೇ ಹೆಣ್ಣಾಡಿಸೋ ವಿದ್ಯೇಲಿ ಉಂಡುಗಲಿತ
ಕಿಟ್ಟ ಕಿಟ್ಟ ಪುಂಡ ಕಿಟ್ಟ ಪೋಲಿ ಕಟ್ಟೆಯ ಮರೆತ
ಮಾತಾಡದೆ ಮುದ್ದಾಡುವ ಗೋವಿಂದ ಕಲೆ ಕಲಿತ

ರತುನ ಬಂತು ರತುನ ಅಂದ್ರೆ ಬಂತು ಲಗ್ನ
ಕನ್ನ ಹೊಡೆಯೋ ಮುನ್ನ ನನ್ನ ಮನೆಗೆ ಬಂತು ಚಿನ್ನ
ಗಿಡುಗ ಬಂತು ಗಿಡುಗ ಅಂದ್ರೆ ಬಂದ ಹುಡುಗ
ಹುಡುಗ ಗುಡುಗೋ ಮೊದಲೆ ತುಟಿಗೆ ತೊಡಿಸೇ ಬಿಟ್ಟೆ ಕಡಗ
ಆಗುಂಬೆಯ ಕಾಡಲ್ಲಿನ ದಾಳಿಂಬೆ ಕೀಳ ಹೋದರೆ
ದಾಳಿಂಬೆಯ ರೆಂಬೆಯಲ್ಲಿ ಹೆಜ್ಜೇನು ಕೂಗಿ ಕೊಟ್ಟಿತು
ಆಕಾಶದ ನಕ್ಷತ್ರದ ಸಂಸಾರ ನೋಡುತಿದ್ದರೆ
ಮೈಗೂಡಲಿ ಶ್ರೀಚಂದ್ರನು ಸಂಚಾರ ಮಾಡುತಿದ್ದನು
--------------------------------------------------------------------------------------------------------------------------

ಗಡಿಬಿಡಿ ಗಂಡ (1993) - ಪಂಚರಂಗಿ ಪುಟ್ಟ
ಸಾಹಿತ್ಯ, ಸಂಗೀತ: ಹಂಸಲೇಖ ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರ


ಬಿದ್ದೆ ಬಿದ್ದೆ ಬಾತರೂಮಲ್ಲಿ ಲವ್ವಲ್ಲಿ ಬಿದ್ದೆ
ಗೆದ್ದೇ ಗೆದ್ದೇ ಬಾಯ್ ಫ್ರೆಂಡನ್ನ ಕಿಸ್ಸಲ್ಲಿ ಗೆದ್ದೇ
ಬಾಯೆಲ್ಲ ಒದ್ದೆ ಮೈಯೆಲ್ಲಾ ಮುದ್ದೆ ಇನ್ನೆಲ್ಲಿ ನಿದ್ದೆ ಮಾವಾ ..
ಬಿದ್ದೆ ಬಿದ್ದೆ ಬಾತರೂಮಲ್ಲಿ ಲವ್ವಲ್ಲಿ ಬಿದ್ದೆ
ಗೆದ್ದೇ ಗೆದ್ದೇ ಬಾಯ್ ಫ್ರೆಂಡನ್ನ ಕಿಸ್ಸಲ್ಲಿ ಗೆದ್ದೇ

ತಾ ಕಾಮಕೆ ದಿಗ್ಬಂದನ ಈ ಪ್ರಣಯ ರಾತ್ರಿಗೆ 
ಆ ಬಳ್ಳಿಗೆ ರೋಮಾಂಚನ ಈ ಮಧುರ ಮೈತ್ರಿಗೆ 
ಆ ಆಸೆಗೆ ಆಲಿಂಗನ ಈ ರಾಸಲೀಲೆಗೆ 
ಆ ಹೂವಲಿ ಭೂಕಂಪನ ಈ ವಿರಹ ಜ್ವಾಲೆಗೆ 
ಈ ಹರೆಯದ ನರಕೊಳಲಿ ಇದು ಸರಿಗಮ ಹೊಳ್ಳೆಗಳು 
ಈ ಮದನನ ಕಿರುಬೆರಳಲಿ ನವಿರೇಳದೆ ಗುಳ್ಳೆಗಳು 
ಲವ್ವು ಕಿಸ್ಸು ಸೇರುವಾಗ ಎದೇಲಿ ಸದ್ದೇ ಎದೇಲಿ ಸದ್ದೇ 
ಬಾಯೆಲ್ಲಾ ಒದ್ದೇ ಮೈಯೆಲ್ಲಾ ಒದ್ದೇ ಇನ್ನೆಲ್ಲಿ ನಿದ್ದೇ ಬೇಬಿ .. 
ಬಿದ್ದೆ ಬಿದ್ದೆ ಬಾತರೂಮಲ್ಲಿ ಲವ್ವಲ್ಲಿ ಬಿದ್ದೆ
ಗೆದ್ದೇ ಗೆದ್ದೇ ಬಾಯ್ ಫ್ರೆಂಡನ್ನ ಕಿಸ್ಸಲ್ಲಿ ಗೆದ್ದೇ 

ಈ ಸೀರೆಗೂ ಈ ನೀರೆಗೂ ಅದು ಏಕೆ ಸ್ನೇಹವೋ 
ಈ ನೀರಿಗೂ ಈ ನಡುಕಕು ಅದು ಏಕೆ ಮೋಹವೋ 
ಈ ಹರೆಯಕೂ ಈ ಪ್ರಣಯಕು ಅದು ಏನು ನಂಟಿದೆ 
ಹೊರ ಬೆವರಿಗೂ ಒಳ ಬಯಕೆಗೂ ಇದೆ ಮಿಥುನದ ಹುಸಿ ಕದನ 
ಹೊರ ಕಂಪಿಗೂ ಒಳ ಬೆಂಕಿಗೂ ಬಿಗಿ ಅಪ್ಪುಗೆ ಉಪಶಮನ 
ಲವ್ವು ಕಿಸ್ಸು ಸೇರುವಾಗ ಎದೇಲಿ ಸದ್ದೇ ಎದೇಲಿ ಸದ್ದೇ 
ಬಾಯೆಲ್ಲಾ ಒದ್ದೇ ಮೈಯೆಲ್ಲಾ ಒದ್ದೇ ಇನ್ನೆಲ್ಲಿ ನಿದ್ದೇ ಬೇಬಿ .. 
ಬಿದ್ದೆ ಬಿದ್ದೆ ಬಾತರೂಮಲ್ಲಿ ಲವ್ವಲ್ಲಿ ಬಿದ್ದೆ
ಗೆದ್ದೇ ಗೆದ್ದೇ ಬಾಯ್ ಫ್ರೆಂಡನ್ನ ಕಿಸ್ಸಲ್ಲಿ ಗೆದ್ದೇ 
-------------------------------------------------------------------------------------------------------------------------

ಗಡಿಬಿಡಿ ಗಂಡ (1993) - ಬಂಚಿಕ ಚಿಕ್ ಬಂ ಚಿಕಬಂ ಬಂ ಹಾಡು ಬೇಗ 
ಸಾಹಿತ್ಯ, ಸಂಗೀತ: ಹಂಸಲೇಖ ಹಾಡಿರುವವರು: ಚಿತ್ರಾ ಕೋರಸ್ 


ಬಂಚಿಕ ಚಿಕ್ ಬಂ ಚಿಕಬಂ ಬಂ ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ
ಲೇಜಿ ಆದರೆ ಬೊಜ್ಜು ರೋಗ ನಾಜೂಕಾಗಿ ಹಾಕು ಲಾಗ
ಇಜಿತಾನೆ ರಾಜಯೋಗ ಏಜನು ಮರೆಸೋ ಸುಯೋಗ
ತೂಕವಿರೋ ದೇಹ ಹೂ ಬಳ್ಳಿ
ಬಂಚಿಕ ಚಿಕ್ ಬಂ ಚಿಕಬಂ ಬಂ ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ

ಬ್ರಿಥಿಂಗ್ ಟೆಕನಿಕ್ ಹುರುಪು ತುಂಬಿಸುವುದು ಅಂಗಾಂಗ ಥಳಾಥಳಿಸಲು 
ಪ್ರಾಣಾಯಾಮ ಮೊದಲು ಮಾಡಿಸುವುದೂ
ಮೈಯೊಳಗಿನಾ ಮದವಿಳಿಸಲು  ಆಸನದೇ ಶಾಸನದೇ ಶಿಸ್ತಿನಲ್ಲಿ
ಮಳ್ಳಿ ದೇಹ ಎಲ್ಲ ಮಾತು ಕೇಳೋದು
ಹಂಪು ಬಂಪು ರಸ್ತೆಯನ್ನ ಕಡಿದಾಗ ಅಂದ ಚೆಂದ ಕೂಡ ಮುಪ್ಪ ಕಾಣೋದು
ಶೋಕ ಮರೆಸುವ ಲೋಕದಲ್ಲಿ ಯೋಗಾ
ಬಂಚಿಕ ಚಿಕ್ ಬಂ ಚಿಕಬಂ ಬಂ ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ

ಕೌಸಲ್ಯ ಸುಪ್ರಜಾ ರಾಮ ಪೂರ್ವ ಸಂಧ್ಯಾ ಪ್ರವರ್ತತೇ 
ಪಿ.ಟಿ.ಉಷಾಳ ಪಾಪ್ಯೂಲಾರಟಿಗೆ ಪ್ರಾರಂಭಿಸು ಓಟ ದಿನ 
ಭಾರದ ಬಾಡಿ ಹಗುರವಾಗಲೆಂದು ಕಸರತ್ತೇ ಆರಾಧನ
ಹಿಂದೆ ಹಿಂದೆ ಹೋಗಲೀಗ ಈ ಕೈಯಿ ಸುಲಭವಾಗಿ ನಿಲ್ಲಬೇಕು ಈ ಮೈಯಿ 
ಸೊಂಟ ಕಾಲು ರಂಭೆ ಹಾಗೇ ಮಿಂಚೋಕೆ 
ಅಯ್ಯೋ ಅಪ್ಪ ಅಮ್ಮ ಅನ್ನೋ ಭಯವೇಕೆ 
ಆಪ್ತ ನಮಗಿದು ಸಪ್ತ ಋಷಿಯೋಗಾ 
ಬಂಚಿಕ ಚಿಕ್ ಬಂ ಚಿಕಬಂ ಬಂ ಬಂಚಿಕ ಬಂಬಂ ಹಾಡು ಬೇಗ
ಹಾಡಿನ ಸಂಗ ಮಾಡು ಯೋಗ
 -------------------------------------------------------------------------------------------------------------------------

No comments:

Post a Comment