220. ಮನೆ ಮನೆ ಕಥೆ (1981)


ಮನೆ ಮನೆ ಕಥೆ ಚಿತ್ರದ ಹಾಡುಗಳು 
  1. ಗಂಡು ಹೆಣ್ಣು ಪ್ರೀತಿಸಬೇಕು 
  2. ಹೇ.. ಹುಡುಗಿ ಅಲ್ಲೇ ನಿಲ್ಲೂ 
  3. ಮನೆಯ ಹಂಬಲ ನಿನಗೇಕೇ 
  4. ಸರಸಕೆ ಕರೆದರೇ 
ಮನೆ ಮನೆ ಕಥೆ (1981)
ಸಾಹಿತ್ಯ: ಚಿ.ಉದಯಶಂಕರ್   ಸಂಗೀತ: ಸತ್ಯಂ  ಹಾಡಿದವರು: ಎಸ್.ಪಿ.ಬಿ.


ಹೇಹೇಹೇ.. ಹ್ಹಹ್ಹಾಹ್ಹಾ ... ಬೂರವಾ ಹೂರ್ರಾ ಹೂ.. ಹೂ..ಹೂ..
ರಂಪಪ ರಂಪಪ ರಂಪಪ ರಂಪಪ ರಂಪಪ ರಂಪಪ ರಂಪಪ
ಗಂಡು ಹೆಣ್ಣು ಪ್ರೀತಿಸ ಬೇಕು ಪ್ರೀತಿಸಿ ಮದುವೆ ಆಗಲೆ ಬೇಕು
ಆಗಲೆ ಹೊಸ ಬಾಳು ವರುಷದ ನಂತರ ಬರಿ ಗೋಳು
ದಿನವೊಂದು ತರಲೆ  ತಲೆಯನ್ನು ತಿನ್ನಲು
ನನ್ನಲ್ಲಿ ಬರಬೇಕು, ನೀವು ನನ್ನಲ್ಲಿ ಬರಬೇಕು
ಗಂಡು ಹೆಣ್ಣು ಪ್ರೀತಿಸ ಬೇಕು  ಪ್ರೀತಿಸಿ ಮದುವೆ ಆಗಲೆ ಬೇಕು
ಆಗಲೆ ಹೊಸ ಬಾಳು  ವರುಷದ ನಂತರ ಬರಿ ಗೋಳು
ದಿನವೊಂದು ತರಲೆ ತಲೆಯನ್ನು ತಿನ್ನಲು
ನನ್ನಲ್ಲಿ ಬರಬೇಕು, ನೀವು ನನ್ನಲ್ಲಿ ಬರಬೇಕು ಹ್ಹಾಂ ಹ್ಹಹ್ಹ
(ಲಾಲಲಾ ಲಾಲಲಾ ಲಾಲಲಾ ಲಾಲಲಾ )

ಹೇ.. ಹೊಸದರಲ್ಲಿ ದಿನವೂ ಸರಸ ಬರುತ ಬರುತ ಬರಿ ವಿರಸ
ಬರುವ ಸಂಬಳ ಒಂದೇ ನಿಮಿಷ ಜಗಳ ಕದನ ಪ್ರತಿ ದಿವಸ
ಚಿಂತೆಯು ಏಕೆ,(ಆ.. ) ಶಾಂತಿಯು ಬೇಕೆ (ಆ.. )
ಚಿಂತೆಯು ಏಕೆ, (ಆ.. ) ಶಾಂತಿಯು ಬೇಕೆ (ಆ.. )
ನಾನೆ ಆಗ ನಿಮಗೆ ದಾರಿ ತೋರಬೇಕು
(ರಂಪಪ ರಂಪಪಪಪ )
ಗಂಡು ಹೆಣ್ಣು ಪ್ರೀತಿಸ ಬೇಕು  ಪ್ರೀತಿಸಿ ಮದುವೆ ಆಗಲೆ ಬೇಕು
ಆಗಲೆ ಹೊಸ ಬಾಳು  ವರುಷದ ನಂತರ ಬರಿ ಗೋಳು
ದಿನವೊಂದು ತರಲೆ ತಲೆಯನ್ನು ತಿನ್ನಲು
ನನ್ನಲ್ಲಿ ಬರಬೇಕು, ನೀವು ನನ್ನಲ್ಲಿ ಬರಬೇಕು
(ಲಾಲಲಾ ಲಾಲಲಾ ಲಾಲಲಾ ಲಾಲಲಾ )

ಅತ್ತೆಗೂ ಸೊಸೆಗೂ ಜಗಳ ಉಂಟು ನೆಮ್ಮದಿ ಬಾಳಲಿ ಎಲ್ಲುಂಟು
ಒಬ್ಬರನೊಬ್ಬರು ದೂರುವುದುಂಟು ನ್ಯಾಯವ ಹೇಳಲು ಭಯವುಂಟು
ಏನಾದರೇನು, (ಆ.. ) ನಾನಿಲ್ಲವೇನು (ಆ.. )
ಏನಾದರೇನು, (ಆ.. ) ನಾನಿಲ್ಲವೇನು (ಆ.. )
ಓ ನನ್ನಲ್ಲಾಗ ನೀವು ಓಡಿ ಬರಬೇಕು
(ರಂಪಪ ರಂಪಪಪಪ )
ಗಂಡು ಹೆಣ್ಣು ಪ್ರೀತಿಸ ಬೇಕು  ಪ್ರೀತಿಸಿ ಮದುವೆ ಆಗಲೆ ಬೇಕು
ಆಗಲೆ ಹೊಸ ಬಾಳು  ವರುಷದ ನಂತರ ಬರಿ ಗೋಳು
ದಿನವೊಂದು ತರಲೆ  ತಲೆಯನ್ನು ತಿನ್ನಲು
ನನ್ನಲ್ಲಿ ಬರಬೇಕು, ನೀವು ನನ್ನಲ್ಲಿ ಬರಬೇಕು..ಹೇಹೆಹೆ
(ರಂಪಪ ರಂಪಪಪಪ ) (ರಂಪಪ ರಂಪಪಪಪ ) (ರಂಪಪ ರಂಪಪಪಪ )
--------------------------------------------------------------------------------------------------------------------------

ಮನೆ ಮನೆ ಕಥೆ (೧೯೮೧)......ಹೇ ಹುಡುಗಿ ಅಲ್ಲೇ ನಿಲ್ಲು
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ್, ಗಾಯನ : ಎಸ್.ಪಿ.ಬಿ, ಎಸ್.ಜಾನಕಿ


ಗಂಡು : ಹ್ಹಾಂ..  ಹೇ ಹುಡುಗಿ ಅಲ್ಲೇ ನಿಲ್ಲು ಈ ಕಣ್ಣೇ ಕಾಮನ ಬಿಲ್ಲು
           ಬಿಡಲೇನೇ ಪ್ರೇಮದ ಬಾಣ ಈಗ
          ಇಂಪಾಗಿ ಹಾಡುವೆ ಆಗ ಸೊಗಸಾದ ಪ್ರೀತಿಯ ರಾಗ
          ನೀನಾಗ ಕಾಣುವೆ ಒಳ್ಳೆ ಯೋಗ
         ಓ ಭಾಮಾ ಸತ್ಯಭಾಮ   ಓ ಭಾಮಾ ಸತ್ಯಭಾಮ
ಹೆಣ್ಣು : ಹೇ..  ನೀ ಎಸೆದ ಪ್ರೇಮದ ಬಾಣ ನನ್ನೆದೆಗೆ ನಾಟಿತು ಜಾಣ
          ನನಗೀಗ ನಿನ್ನದೇ ಧ್ಯಾನ ಧ್ಯಾನ
         ಬಿಡಲಾರೆ ಇನ್ನೂ ನಿನ್ನ ಬಿಡಬೇಡ ನೀನೂ ನನ್ನ
         ಒಂದಾಗಿ ಸೇರಿ ನಲಿಯೋಣ
         ಓ ಜಾಣ ಮುದ್ದು ಜಾಣ  ಓ ಜಾಣ ಮುದ್ದು ಜಾಣ

ಗಂಡು : ನೀನೊಂದು ದಂತದ ಬೊಂಬೆ ಮೈ ಬಣ್ಣ ಚಿನ್ನದಾ ನಿoಬೆ
           ನನಗಾಗೆ ಹುಟ್ಟಿದ ಭೂಲೋಕ ರಂಭೆ
ಹೆಣ್ಣು : ಆಆಆ .. ನೀ ನನ್ನ ಲೈಫಲಿ ಹೀರೋ ನಿನ್ನಂಥ ಸುಂದರ ಯಾರೋ
          ನೀನಿಲ್ಲವಾದರೆ ನನ ಬಾಳೇ ಝೀರೋ
ಗಂಡು:  ಹ್ಹಾಂ .. ಬರಿ ಮಾತು ಆಡುತಿರುವೆ ಹೀಗೇಕೆ ಕಾಲ ಕಳೆವೆ
           ಬರಿ ಮಾತು ಆಡುತಿರುವೆ ಹೀಗೇಕೆ ಕಾಲ ಕಳೆವೆ
          ಬಾ ಬೇಗ ನನ್ನ ಮುದ್ದು ಭಾಮ
         ಓ ಭಾಮಾ (ಅಹ್) ಸತ್ಯಭಾಮ (ಅಹಹ್) ಓ ಭಾಮಾ (ಅಹ್ಹಹ್ ) ಸತ್ಯಭಾಮ.. ಅಹ್ಹಹ್ಹ 
ಹೆಣ್ಣು : ಹೇ ಹುಡುಗ ಅಲ್ಲೇ ನಿಲ್ಲು (ಅಹ್) ಈ ಕಣ್ಣೇ ಕಾಮನ ಬಿಲ್ಲು(ಅಹ್)
         ಬಿಡಲೇನು ಪ್ರೇಮದ ಬಾಣ ಈಗ
ಗಂಡು: ಅಹಹ್.. ಇಂಪಾಗಿ ಹಾಡುವೆ ಆಗ ಸೊಗಸಾದ ಪ್ರೀತಿಯ ರಾಗ
          ನೀನಾಗ ಕಾಣುವೆ ಒಳ್ಳೆ ಯೋಗ ಓ ಭಾಮಾ (ಅಹ್) ಸತ್ಯಭಾಮ (ಅಹಹ್)  
ಹೆಣ್ಣು :   ಓ ಜಾಣ (ಅಹ್) ನನ್ನ ಜಾಣ

ಹೆಣ್ಣು: ನೆರಳoತೆ ಏತಕೆ ಬರುವೆ ಕೈಯನ್ನು ಏತಕೆ ಹಿಡಿವೆ
         ನುಡಿಗೊಮ್ಮೆ ಏತಕೆ ಹೀಗೇಕೆ ನಗುವೆ
ಗಂಡು: ಆಆಆ... ಕಣ್ಣಲ್ಲಿ ನನ್ನನು ಸೆಳೆದೆ ನಿನ್ನಂದ ನೋಡಿ ನಾ ಕುಣಿದೆ
           ನಿನ್ನನು ಸೇರೆ ನಾ ಇಲ್ಲೋಡಿ ಬಂದೆ
ಹೆಣ್ಣು:  ಮದುವೇನೇ ಬೇಡವೆಂದೇ ಗಂಡನ್ನೇ ನೋಡೆನೆಂದೆ
          ಮದುವೇನೇ ಬೇಡವೆಂದೇ ಗಂಡನ್ನೇ ನೋಡೆನೆಂದೆ
          ನಿನ ಕಂಡು ನಾ ಸೋತು ಹೋದೆ
          ಓ ಜಾಣ (ಹೊಯ್ ಹೊಯ್ ಹೋಹೊಯ್ ) ನನ್ನ ಜಾಣ  (ಅಹ್ಹಹ್ಹ ಹ್ಹ )
         ಓ ಜಾಣ (ಆಹಾ ) ನನ್ನ ಜಾಣ
ಗಂಡು: ಆಹಾ.. ಹೇ ಹುಡುಗಿ ಅಲ್ಲೇ ನಿಲ್ಲು (ಹ್ಹಾ )ಈ ಕಣ್ಣೇ ಕಾಮನ ಬಿಲ್ಲು (ಹ್ಹಾ )
          ಬಿಡಲೇನೇ ಪ್ರೇಮದ ಬಾಣ ಈಗ
ಹೆಣ್ಣು : ಹ್ಹಾ..  ಇಂಪಾಗಿ ಹಾಡುವೆ ಆಗ (ಹೊಯ್) ಸೊಗಸಾದ ಪ್ರೀತಿಯ ರಾಗ
          ನೀನಾಗ ಕಾಣುವೆ ಒಳ್ಳೆ ಯೋಗ ಓ ಜಾಣ (ಒಹೋ ) ನನ್ನ ಜಾಣ (ಓಹೋಹೋ)
ಗಂಡು :  ಓ ಭಾಮಾ ಸತ್ಯಭಾಮ  (ಆ..ಆ )ಓ ಭಾಮಾ ಸತ್ಯಭಾಮ(ಅಹ್ಹಹ್ಹ)
--------------------------------------------------------------------------------------------------------------------------

ಮನೆ ಮನೆ ಕಥೆ (೧೯೮೧)......ಮನೆಯ ಹಂಬಲ ನಿನಗೇಕೆ
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ ಎಸ್.ಜಾನಕಿ


ಗಂಡು : ಮನೆಯ ಹಂಬಲ ನಿನಗೇಕೆ ಮನೆಯ ಹಂಬಲ ನಿನಗೇಕೆ
           ಬಾಳೆಲ್ಲ ಹೀಗೆ ಏಕಾಂತದಲ್ಲಿ ಒಂದಾಗಿ ನಾವೂ ಇರಬಾರದೇತಕೆ
           ಮನೆಯ ಹಂಬಲ ನಿನಗೇಕೆ.. ನಿನಗೇಕೆ.. ನನ್ನಾಕೆ
ಹೆಣ್ಣು : ಮನೆಯೇ ಹೆಣ್ಣಿಗೇ ಗುಡಿಯಂತೇ ಒಲವಿಂದ ನಾವೂ ಒಂದಾದ ಮೇಲೆ
         ಎಲ್ಲಿದ್ದರೇನು ಹಠವೇಕೇ ಈ ಬಗೆ
        ಮನೆಯೇ ಹೆಣ್ಣಿಗೇ ಗುಡಿಯಂತೇ..  ಗುಡಿಯಂತೇ ಬಿಡು ಚಿಂತೇ

ಗಂಡು : ಅಮ್ಮನ ಪರದಾಟ ಅಪ್ಪನ ಹಾರಾಟ ಹೇಗೆ ಕಾಣುವುದಲ್ಲಿ ಈ ನಿನ್ನ ಕುಡಿನೋಟ
            ಅಮ್ಮನ ಪರದಾಟ ಅಪ್ಪನ ಹಾರಾಟ ಹೇಗೆ ಕಾಣುವುದಲ್ಲಿ ಈ ನಿನ್ನ ಕುಡಿನೋಟ
ಹೆಣ್ಣು : ಹಗಲಿನಲ್ಲಿ ಜೊತೆಯಾಗಿ ನಾವೂ ದಿನ ಸರಸವಾಡುವುದೂ ನ್ಯಾಯವೇ
ಗಂಡು : ಇರುಳಿನಲ್ಲಿ ಸುಖನಿದ್ರೆಯನ್ನೂ ಬೀಡು ಎಂದೂ ಹೇಳುವುದೂ ಧರ್ಮವೇ
ಹೆಣ್ಣು : ಚಪಲವು ಹೀಗೇಕೇ ಓ ನನ್ನ ನಲ್ಲ  ಚಪಲವು ಹೀಗೇಕೇ ಓ ನನ್ನ ನಲ್ಲ
ಗಂಡು : ಸುಖವನೂ ಪಡುವಾಸೆ ನಿನಗೇಕೆ ಇಲ್ಲ
ಹೆಣ್ಣು : ಮನೆಯೇ (ಹ್ಹಾಂ ) ಹೆಣ್ಣಿಗೇ ಗುಡಿಯಂತೇ ಒಲವಿಂದ ನಾವೂ ಒಂದಾದ ಮೇಲೆ
         ಎಲ್ಲಿದ್ದರೇನು ಹಠವೇಕೇ ಈ ಬಗೆ 
ಗಂಡು: ಮನೆಯ ಹಂಬಲ ನಿನಗೇಕೇ..ಹೇಹೇ  ನಿನಗೇಕೆ ಹ್ಹಾ..  ಹ್ಹಾ .. ನನ್ನಾಕೆ 

ಹೆಣ್ಣು : ಅಪ್ಪನೂ ನೀವಾಗೋ ಕಾಲವೂ ಬಂದಾಯ್ತು (ಓಹೋಹೋ) 
          ಅಂದಿಗೂ ಇಂದಿಗೂ ನಮಗೂ ವಯಸ್ಸಾಯ್ತು   
          ಅಪ್ಪನೂ ನೀವಾಗೋ ಕಾಲವೂ ಬಂದಾಯ್ತು 
          ಅಂದಿಗೂ ಇಂದಿಗೂ ನಮಗೂ ವಯಸ್ಸಾಯ್ತು   
ಗಂಡು : ಹುಟ್ಟದಿರುವ ಮಗುವನ್ನು ನೆನೆದು ನಿನ್ನ ಬಿಟ್ಟು ಬಿಡಲು ನಾ ಮೂಢನೇ 
ಹೆಣ್ಣು : ಬೆಟ್ಟದಂಥ ನಿನ್ನ ಆಸೆಯನ್ನೂ ನಾ ತಡೆಯಲಾರೆನೂ  ಜಾಣನೇ 
ಗಂಡು : ಎಂದಿಗೂ ನಿನ್ನನ್ನೂ ಬಿಡಲಾರೇ ಚಿನ್ನಾ 
            ಎಂದಿಗೂ ನಿನ್ನನ್ನೂ ಬಿಡಲಾರೇ ಚಿನ್ನಾ 
ಹೆಣ್ಣು : ಇಂದಿನ ಮಾತಾಡೋ ಬಾ ನನ್ನ ಚೆನ್ನ 
ಗಂಡು : ಮನೆಯ ಹಂಬಲ ನಿನಗೇಕೆ ಮನೆಯ ಹಂಬಲ ನಿನಗೇಕೆ
           ಬಾಳೆಲ್ಲ ಹೀಗೆ ಏಕಾಂತದಲ್ಲಿ ಒಂದಾಗಿ ನಾವೂ ಇರಬಾರದೇತಕೆ
ಹೆಣ್ಣು : ಮನೆಯೇ ಹೆಣ್ಣಿಗೇ ಗುಡಿಯಂತೇ ಒಲವಿಂದ ನಾವೂ ಒಂದಾದ ಮೇಲೆ
         ಎಲ್ಲಿದ್ದರೇನು ಹಠವೇಕೇ ಈ ಬಗೆ 
        ಮನೆಯೇ ಹೆಣ್ಣಿಗೇ ಗುಡಿಯಂತೇ..  ಗುಡಿಯಂತೇ ಬಿಡು ಚಿಂತೇ 
--------------------------------------------------------------------------------------------------------------------------

ಮನೆ ಮನೆ ಕಥೆ (೧೯೮೧)...... ಆತುರವೇಕೇ ನಿನ್ನಲ್ಲಿ ಇಲ್ಲ 
ಸಂಗೀತ : ಸತ್ಯಂ, ಸಾಹಿತ್ಯ : ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ ಎಸ್.ಜಾನಕಿ

ಗಂಡು : ಆತುರವೇಕೇ ನಿನ್ನಲ್ಲಿ ಇಲ್ಲಾ ಹೆಣ್ಣಿನ ಬಯಕೆ ಕಾಣುವುದಿಲ್ಲ
ಹೆಣ್ಣು : ಹ್ಹಾಂ ... ಬಿಡ್ರೀ ..ಹೂಂ
ಗಂಡು : ಆತುರವೇಕೇ ನಿನ್ನಲ್ಲಿ ಇಲ್ಲಾ ಹೆಣ್ಣಿನ ಬಯಕೆ ಕಾಣುವುದಿಲ್ಲ
            ಏನೇ ಮಾಡೋ (ಹ್ಹ) ಇಂದು ನಿನ್ನ (ಅಹ್ಹಹ್ಹ ) 
            ಏನೇ ಮಾಡೋ ಇಂದು ನಿನ್ನ ನಾನು ಬಿಡುವುದೇ ಇಲ್ಲ 
            ಸರಸಕೇ (ಆ.. ಹ್ಹಾಂ )  ಕರೆದರೇ (ಬೀಡೀ ನನ್ನ) 
            ಕಲಹಕೆ (ಅಹ್ಹಹ್ಹಾ ) ಬರುವೆಯಾ (ಅಯ್ಯೋ ಏನ್ರೀ ನೀವೂ )
           ಬಿಡುವೇನೇ ಇನ್ನೂ ನಿನ್ನ  ಚಿನ್ನಾ.. ಶ್!... ಪ್ಲೀಸ್ (ಅಹ್ಹಾಂ) 

ಗಂಡು : ಈ ನವ ಯೌವ್ವನ ಬಂದಿದೇ ಏಕೇ ಹ್ಹಾಂ 
            ಈ ಸೌಂದರ್ಯ ಇರುವುದೂ ಏಕೇ (ಅಯ್ಯೋ ಏನಪ್ಪಾ ನೀವೂ )
           ಈ ನವ ಯೌವ್ವನ ಬಂದಿದೇ ಏಕೇ ಈ ಸೌಂದರ್ಯ ಇರುವುದೂ ಏಕೇ 
           ಇನ್ನೂ ಜೀವಾ (ಅದಕೇ ) ನಿಲ್ಲೋದಿಲ್ಲಾ (ಅಯ್ಯೋ ಮಾವಾ )
           ಇನ್ನೂ ಜೀವಾ ನಿಲ್ಲೋದಿಲ್ಲಾ ತಾಳಲಾರೇ ನಲ್ಲಾ 
           ಸರಸಕೇ (ಆ.. ಹ್ಹಾಂ )  ಕರೆದರೇ(ಆ.. ಹ್ಹಾಂ ) 
           ಕಲಹಕೆ (ಅಹ್ಹಹ್ಹಾ  ಬಿಡ್ರೀ ) ಬರುವೆಯಾ  (ಅಹ್ಹಾಂ) 
          ಬಿಡುವೇನೇ ನಿನ್ನ ಇನ್ನೂ ಚಿನ್ನಾ.. (ಅಹ್ಹಾಂ) 
--------------------------------------------------------------------------------------------------------------------------

No comments:

Post a Comment