221. ಚದುರಿದ ಚಿತ್ರಗಳು (೧೯೮೧)


ಚದುರಿದ ಚಿತ್ರಗಳು ಚಿತ್ರದ ಹಾಡುಗಳು
  1. ಗಂಗಾ ನನ್ನ ಗಂಗಾ 
  2. ಗಾಳಿಯೂ ಬೀಸಿದೆ 
  3. ನಾ ಹೇಗೆ ಸುಮ್ಮನಾಗಲೀ 
ಚದುರಿದ ಚಿತ್ರಗಳು (೧೯೮೧)
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ಚಿ.ಉದಯ ಶಂಕರ, ಗಾಯನ : ಎಸ್ಪಿ.ಬಿ. ಮತ್ತು ಎಸ.ಜಾನಕೀ

ಗಂಡು :  ಗಂಗಾ.. ಗಂಗಾ.. ಗಂಗಾ.. ಗಂಗಾ..
ಹೆಣ್ಣು : ಆ..ಆ..ಆ..ಆ..
ಗಂಡು : ಗಂಗಾ ನನ್ನ ಗಂಗಾ, ಆಆಆ.. ಗಂಗಾ ನನ್ನ ಗಂಗಾ,
           ಮುಗಿಲ ಮರೆಯಲ್ಲಿ ನೀ... ಅವಿತರು ಬಿಡಲಾರೆ ನಿನ್ನ ಸಂಗ...
          ಗಂಗಾ ನನ್ನ ಗಂಗಾ....
ಹೆ : ಓ..ಓ... ರಂಗಾ... ಮುದ್ದು ರಂಗಾ...
      ಕಾಮನ ಬಿಲ್ಲೇರಿ ನೀ.... ನಿಂತರೂ ಬಿಡಲಾರೆ ನಿನ್ನ ಸಂಗ
      ಓ..ಓ... ರಂಗಾ... ಮುದ್ದು ರಂಗಾ...
ಗ : ಓಓಓ.. ಗಂಗಾ ನನ್ನ ಗಂಗಾ,

ಗಂಡು : ಕೆಂಪು ತುಟಿಯ ತುಂಟಾಟ ಕಂಡು,
           ಆಸೆಯಿಂದ ಬಳಿ ಓಡಿ ಬರಲು ಏಕೆ ನೀ ಓಡಿದೆ...
ಹೆಣ್ಣು : ಓ.. ಪ್ರೀತಿಯಿಂದ ಕೈಚಾಚಿ ಬರಲು
          ನೋಡಿ ತನುವು ಜುಮ್ಮೆನ್ನುತಿರಲು.. ನಾಚಿ ನಾ ಓಡಿದೆ...
ಗಂಡು : ಓ..ಓ.. ಇನ್ನೇತಕೆ, ಈ ನಾಚಿಕೆ.. ಮನಸು ಒಂದಾದ ಮೇಲೆ ...
           ಮನಸು ಒಂದಾದ ಮೇಲೆ ...
ಹೆಣ್ಣು : ಓ..ಓ... ರಂಗಾ... ಮುದ್ದು ರಂಗಾ...
ಗ : ಆಆಆ.... ಗಂಗಾ ನನ್ನ ಗಂಗಾ,

ಹೆಣ್ಣು: ಬಳ್ಳಿ ಮರವು ಬೆರಗಾಗಿ ಹೋಯಿತು,
        ಗಾಳಿ ಗಂಧ ಮಂಕಾಗಿ ಹೋಯಿತು... ನಮ್ಮ ಈ ಸ್ನೇಹಕೆ..
ಗಂಡು : ಓ..ಓ... ಹೂವು ಮುದುರಿ ಗೊತ್ತಾಗಿ ಹೋಯಿತು
           ದುಂಬಿ ಹೆದರಿ ಮೂಕಾಗಿ ಹೋಯಿತು.. ನಿನ್ನೀ ಈ ಅಂದಕೆ
ಹೆಣ್ಣು : ಓ.. ಓ.. ಸಂಗಾತಿಯ ಕಿವಿ ಮಾತಿಗೆ, ಇಂದು ನಾ ಸೋತು ಹೋದೆ...
          ಇಂದು ನಾ ಸೋತು ಹೋದೆ...
ಗಂಡು : ಓ.. ಓ..  ಗಂಗಾ ನನ್ನ ಗಂಗಾ,
ಹೆಣ್ಣು : ಓ..ಓ... ರಂಗಾ... ಮುದ್ದು ರಂಗಾ...
ಗ : ಮುಗಿಲ ಮರೆಯಲ್ಲಿ ನೀ... ಆಆಆ.. ಅವಿತರು ಬಿಡಲಾರೆ ನಿನ್ನ ಸಂಗ...
ಇಬ್ಬರು : ನ..ನ..ನ... ಓ... ಓ... ಓ... ಓ... ಓ
--------------------------------------------------------------------------------------------------------------------------

ಚದುರಿದ ಚಿತ್ರಗಳು (೧೯೮೧) - ಗಾಳಿಯು ಬೀಸಿದೆ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ಚಿ.ಉದಯ ಶಂಕರ, ಗಾಯನ : ಎಸ್ಪಿ.ಬಿ. 

ಗಾಳಿಯು ಬೀಸಿದೆ ಹ್ಹ..  ನದಿಯೂ ಓಡಿದೆ ತೇಲುತ  ಮುಗಿಲು 
ಚಲಿಸಿದೆ ನೋಡು ಯಾರು ಹಿಡಿಯುವರಿಲ್ಲಾ.. ಅಹ್ಹಹ್ಹ ಯಾರು ತಡೆಯವರಿಲ್ಲಾ 
ಇಲ್ಲಿ ಲೋಕದಲ್ಲಿ ಯಾವುದು ಸ್ಥಿರವಲ್ಲಾ ಇಲ್ಲಿ ಕಾಣುವುದೂ ಯಾವುದೂ ನಿಜವಲ್ಲ 
ಅರಿಯದೇ ಏತಕೆ ಮೆರೆಯುವೇ..  ಮೂಢ  ಮೂಢ ಕುಡಿ ಸ್ವಲ್ಪ ಸೋಡಾ 
ಗಾಳಿಯು ಬೀಸಿದೆ ನದಿಯೂ ಓಡಿದೆ ತೇಲುತ  ಮುಗಿಲು 
ಚಲಿಸಿದೆ ನೋಡು ಯಾರು ಹಿಡಿಯುವರಿಲ್ಲಾ.. ಅಹ್ಹಹ್ಹ ಯಾರು ತಡೆಯವರಿಲ್ಲಾ .... 

ಕುಡಿದವರೆಲ್ಲಾ ಕೆಟ್ಟವರಲ್ಲ ಕುಡಿಯದ ಮನುಜ ದೇವರೇನಲ್ಲ .. ಹಹ  ಹೌದು ಹೇಹೇಹೇಹೇ 
ಕುಡಿತವು ಯಾರನು ಕೆಡಿಸುವುದಿಲ್ಲಾ ಕೆಟ್ಟರೇ ಮನಸು ಕುಡಿಯುವರೆಲ್ಲಾ 
ಮರೆಯಲು ನೋವಾ ಕುಡಿಯುವುದು ಆಗಲೇ ನಿಜವಾ ಹೇಳುವುದೂ ಅಹ್ಹಹ್ಹಹ್ಹ 
ಎಲ್ಲಾ ಭೂಮಿ ಮೇಲೆ ಸುತ್ತಾಡುತ್ತವೆ ಅಂತಾರೇ ಅಲ್ಲಾ ಭೂಮಿನೇ ನನ್ನ ಸುತ್ತಲು ಸೂತ್ತುತ್ತ ಇದೇ 
ಗಾಳಿಯು ಬೀಸಿದೆ ನದಿಯೂ ಓಡಿದೆ ತೇಲುತ  ಮುಗಿಲು 
ಚಲಿಸಿದೆ ನೋಡು ಯಾರು ಹಿಡಿಯುವರಿಲ್ಲಾ.. ಇಲ್ಲ ಇಲ್ಲ  ಯಾರು ತಡೆಯವರಿಲ್ಲಾ....  ಅಹ್ಹಹ್ಹ

ಮಹಡಿಯ ಮನೆಯ ಕಟ್ಟಿಸಿ ಮೆರೆವೇ ಹೆಂಡತಿ ಮಕ್ಕಳು ನಿನ್ನವರು ಏನುವೇ.. ಹೇಹೇಹೇಹೇ 
ಸಿಕ್ಕಿದ ಆಸ್ತಿಯ ಕಬಳಿಸಿ ಬಿಡುವೇ ಸತ್ತರೇ ನಾಳೇ ಮಣ್ಣಲ್ಲಿ ಬೆರೆವೆ 
ಸಾಯುವವರೆಗೂ ಕುಡಿಯಲೂ ಬಹುದೂ ಸತ್ತರೇ ಮತ್ತೇ ಕುಡಿಯಲು ಆಗದು 
ಆದ್ದರಿಂದ ಕುಡಿ ಕುಡಿ ನಾಯಿ ಕುಡಿದು ಸಾಯಿ 
ಗಾಳಿಯು ಬೀಸಿದೆ ನದಿಯೂ ಓಡಿದೆ ತೇಲುತ  ಮುಗಿಲು 
ಚಲಿಸಿದೆ ನೋಡು ಯಾರು ಹಿಡಿಯುವರಿಲ್ಲಾ.. ಅಹ್ಹಹ್ಹ ಯಾರು ತಡೆಯವರಿಲ್ಲಾ 
ಇಲ್ಲಿ  ಲೋಕದಲ್ಲಿ ಯಾವುದು ಸ್ಥಿರವಲ್ಲಾ ಇಲ್ಲಿ ಕಾಣುವುದೂ ಯಾವುದೂ ನಿಜವಲ್ಲ 
ನಿಜವಲ್ಲ ಅಹ್ಹಹ್ಹ ನಿಜವಲ್ಲ ಅಹ್ಹಹ್ಹ ಸ್ಥಿರವಲ್ಲಾ ಅಹ್ಹಹ್ಹ ನಿಜವಲ್ಲ ಅಹ್ಹಹ್ಹ ನಿಜವಲ್ಲ 
--------------------------------------------------------------------------------------------------------------------------

ಚದುರಿದ ಚಿತ್ರಗಳು (೧೯೮೧) - ನಾ ಹೇಗೆ ಸುಮ್ಮನಾಗಲೀ
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ಚಿ.ಉದಯ ಶಂಕರ, ಗಾಯನ : ಎಸ್ಪಿ.ಬಿ, ಎಸ್. ಜಾನಕೀ  

ಗಂಡು : ನಾ ಹೇಗೆ ಸುಮ್ಮನಾಗಲೀ ನಾನೀಗ ಏನು ಮಾಡಲೀ 
            ನೀ ನಗುತಾ ಬಳಿಗೆ ಬಂದಾಗ ಆಹ್ಹಾ ಮೈಯನ್ನೂ ಸೋಕಿ ನಿಂತಾಗ 
ಹೆಣ್ಣು : ಕಣ್ಣಲ್ಲಿ ಕೂಗುತಾ ಕಣ್ಣಲ್ಲಿ ತೋರುತ ಕಣ್ಣು ಕಣ್ಣು ಬೆರೆಸಿರಲೂ 
           ನಾ ಹೇಗೆ ಸುಮ್ಮನಾಗಲೀ ನಾನೀಗ ಏನು ಮಾಡಲೀ 
           ನೀ ನಗುತಾ ಬಳಿಗೆ ಬಂದಾಗ ಆಹ್ಹಾ ಮೈಯನ್ನೂ ಸೋಕಿ ನಿಂತಾಗ 

ಗಂಡು : ನಿನ್ನಾಣೆ ಸನ್ಯಾಸಿ ನಾನಲ್ಲಾ ನನ್ನಾಣೆ ವೈರಾಗ್ಯವೇನಿಲ್ಲಾ 
            ಹೊಸ ಹರೆಯದ ನವ ತರುಣಿಯು ಬಳು ಬಳುಕುತ ಬಳಿ ಬರುತಿರೇ 
           ಅಯ್ಯಯ್ಯೋ ಏನು ಮಾಡಲೀ 
ಹೆಣ್ಣು : ನಿನ್ನಂತೂ ಬಲು ಜಾಣ ಮಾತಲ್ಲಿ (ಅಹ್ಹಹ್ಹ ) ಆಕಾಶ ತೋರೋನು ಅಂಗೈಲೀ 
          ಬರಬೆಡಗಿನ ಸವಿ ನುಡಿಯಲಿ ಮನಕೆರಳಿಸಿ ತನು ಕುಣಿಸಲೂ 
          ಅಮ್ಮಮ್ಮ ಏನೂ ಮಾಡಲೀ.. ಅಮ್ಮಮ್ಮ ಏನೂ ಮಾಡಲೀ ಓ .. (ಓ ). ಓ  
ಗಂಡು : ನಾ ಹೇಗೆ ಸುಮ್ಮನಾಗಲೀ (ಆಹ್ಹ್ ) ನಾನೀಗ ಏನು ಮಾಡಲೀ (ಅಹ್ಹಹ್ಹ )
            ನೀ ನಗುತಾ ಬಳಿಗೆ ಬಂದಾಗ ಆಹ್ಹಾ ಮೈಯನ್ನೂ ಸೋಕಿ ನಿಂತಾಗ 
ಹೆಣ್ಣು : ಕಣ್ಣಲ್ಲಿ ಕೂಗುತಾ ಕಣ್ಣಲ್ಲಿ ತೋರುತ (ಓ)ಕಣ್ಣು (ಓ)ಕಣ್ಣು ಬೆರೆಸಿರಲೂ 
           ನಾ ಹೇಗೆ ಸುಮ್ಮನಾಗಲೀ 
ಗಂಡು : ನಾನೀಗ ಏನು ಮಾಡಲೀ 
ಹೆಣ್ಣು :ನೀ ನಗುತಾ ಬಳಿಗೆ ಬಂದಾಗ 
ಗಂಡು : ಹೊಯ್ ಹೊಯ್ ಮೈಯನ್ನೂ ಸೋಕಿ ನಿಂತಾಗ 

ಹೆಣ್ಣು : ಲಲಲ್ಲಲ್ಲ್ಲಾ (ಲಲಲ್ಲಲ್ಲ್ಲಾ ) ರರರರರ (ಲಲಲ್ಲಲ್ಲ್ಲಾ )
ಹೆಣ್ಣು : ಈ ಕೆನ್ನೇ ಸಿಹಿಯಾದ ಹಣ್ಣೇನು ತುಟಿಯಿಂದ ಸವರೋದು ಸರಿಯೇನೂ 
         ನಗುನಗುತಲೀ ನಿನ್ನ ತೋಳಲಿ ನಡು ಬಳುಕುತ ಬಳಿ ಸೆಳೆದರೇ 
         ನಾ ಹೆಣ್ಣು ಹೇಗೆ ತಾಳಲೀ.. 
ಗಂಡು : ಈ ವಯಸು ಹಿಂದುರಿಗಿ ಬರದೆಂದೂ ಈ ಸಮಯ ಬೇಡಿದರೂ ಸಿಗದೆಂದೂ 
            ಹೊಸ ಅನುಭವ ನಾ ಹೊಂದುವ ಹೊಸ ಹರುಷದ 
           ಈ ಸಮಯವ ಬೇಡೆಂದೂ ಹೇಗೆ ಹೇಳಲೀ... ಬೇಡೆಂದೂ ಹೇಗೆ ಹೇಳಲೀ.. ಹೊಯ್ 
          ( ಹ್ಹಾಂ ) ಹ್ಹಾಂ 
            
ಹೆಣ್ಣು :  ನಾ ಹೇಗೆ ಸುಮ್ಮನಾಗಲೀ ನಾನೀಗ ಏನು ಮಾಡಲೀ 
           ನೀ ನಗುತಾ ಬಳಿಗೆ ಬಂದಾಗ ಆಹ್ಹಾ ಮೈಯನ್ನೂ ಸೋಕಿ ನಿಂತಾಗ 
ಗಂಡು : ಕಣ್ಣಲ್ಲಿ ಕೂಗುತಾ (ಅಹ್ಹ) ಕಣ್ಣಲ್ಲಿ ತೋರುತ (ಅಹ್ಹ)  ಕಣ್ಣು ಕಣ್ಣು ಬೆರೆಸಿರಲೂ 
            ನಾ ಹೇಗೆ ಸುಮ್ಮನಾಗಲೀ 
ಹೆಣ್ಣು : ನಾನೀಗ ಏನು ಮಾಡಲೀ 
ಗಂಡು : ಲಾಲಲ್ಲಲ್ಲ   ಲಾಲಲ್ಲಲ್ಲ  ಲಾಲಲ್ಲಲ್ಲ 
ಹೆಣ್ಣು :  ಲಾಲಲ್ಲಲ್ಲ  ಲಾಲಲ್ಲಲ್ಲ  ಲಾಲಲ್ಲಲ್ಲ 
--------------------------------------------------------------------------------------------------------------------------

No comments:

Post a Comment