ಎರಡು ರೇಖೆಗಳು ಚಿತ್ರದ ಹಾಡುಗಳು
- ಗಂಗೆಯ ಕರೆಯಲಿ
- ನೀಲ ಮೇಘ ಶ್ಯಾಮ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಎಂ.ಎಸ್.ವಿಶ್ವನಾಥನ್ ಗಾಯನ : ಎಸ್.ಪಿ.ಬಿ., ವಾಣಿ ಜಯರಾಮ್
ಗಂಡು : ಓ ರೀ ಯೋ ಓ ಓ.... ಓ ರೀ ಯೋ ಓ ಓ
ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಎದೆಯಲಿ ಅರಿಯದ ನೂತನಾ ಸಂಭ್ರಮ
ಹೆಣ್ಣು : ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಎದೆಯಲಿ ಅರಿಯದ ನೂತನಾ ಸಂಭ್ರಮ
ಗಂಡು : ಬಂದೆ ನೀನು ತಂಗಾಳಿಯಲಿ, ಈ ಬಾಳಲೀ
ಪ್ರೀತಿ ಹೂವ ಸೌರಭ ಚೆಲ್ಲಿ, ಈ ನಗೆಯಲಿ,
ಹೆಣ್ಣು : ಅಚ್ಚಾ, ಕಾಶಿ ಮಡಿಲ ಕನ್ಯೆ ಮನದ, ಹೂ ತೋಟದೀ
ಕಸ್ತೂರಿ ಕನ್ನಡದಿಂಪು, ನೀ ಸೂಸಿದೆ
ಗಂಡು : ನಿನ್ನ ಹೃದಯ ಸೌಧದಲ್ಲಿ, ನಾ ನೆಲಸಿದೆ
ನಿನ್ನ ಹೃದಯ ಸೌಧದಲ್ಲಿ, ನಾ ನೆಲಸಿದೆ
ಹೆಣ್ಣು : ನಿನ್ನ ಒಲವ ಅಲೆಯ ಮೇಲೆ, ನಾ ತೇಲಿದೆ
ನಿನ್ನ ಒಲವ ಅಲೆಯ ಮೇಲೆ, ನಾ ತೇಲಿದೆ
ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಎದೆಯಲಿ ಅರಿಯದ ನೂತನಾ ಸಂಭ್ರಮ
ಗಂಡು : ಹೇ..ಹೇ..ಹೇ ..ಹೇ..ಹೇ..ಹೇ ..ಹೇ..ಹೇ..ಹೇ ..
ಜೀವ ಜೀವ ಒಂದಾದಾಗ, ಆನಂದವೂ
ಜನ್ಮ ಜನ್ಮ ಬಂಧವು ಮಿಡಿದ, ಸಂಗೀತವು,
ಹೆಣ್ಣು : ಅಚ್ಚಾ, ಇಂದು ಕಂಡ ಈ ಸುಖವೆಂದು, ಸ್ಥಿರವಾಗಲಿ
ಕಾಲದೋಟ ಹೀಗೇ ನಿಂತು, ಸುಖ ನೀಡಲಿ
ಗಂಡು : ವಿಶ್ವನಾಥ ಸಾಕ್ಷಿ ನಮ್ಮ, ಈ ಪ್ರೇಮಕೆ
ಹೆಣ್ಣು : ಸೂರ್ಯ ಚಂದ್ರ ಸಾಕ್ಷಿ ನಮ್ಮ, ಮಧುರ ಬಂಧಕೆ
ಸೂರ್ಯ ಚಂದ್ರ ಸಾಕ್ಷಿ ನಮ್ಮ, ಮಧುರ ಬಂಧಕೆ
ಗಂಡು : ಗಂಗೆಯಾ ಕರೆಯಲಿ ಹೃದಯದಾ ಸಂಗಮ
ಹೆಣ್ಣು : ಎದೆಯಲಿ ಅರಿಯದ ನೂತನಾ ಸಂಭ್ರಮ,
ಗಂಡು : ಅಚ್ಚಾ, ... ಅಹ್ಹಹ್ಹಹ್ಹಾ..
-------------------------------------------------------------------------------------------------------------------------
ಎರಡು ರೇಖೆಗಳು (೧೯೮೪) - ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಎಂ.ಎಸ್.ವಿಶ್ವನಾಥನ್ ಗಾಯನ : ಪಿ.ಸುಶೀಲಾ, ವಾಣಿ ಜಯರಾಮ್
ಗೀತಾ : ನವರಾತ್ರಿ ಸಂಜೆಯಲಿ ನನ್ನದೆಯ ಹಾಡಿನಲ್ಲಿ
ಪ್ರಶ್ನೆಯೊಂದು ಮೂಡಿಹುದು ನೋಡಮ್ಮಾ
ಸರಿತಾ : ನವರಾತ್ರಿ ಸಂಜೆಯಲಿ ನಾ ನುಡಿವ ಮಾತಿನಲಿ
ಉತ್ತರವೂ ಅಡಗಿರುವುದು ಕೇಳಮ್ಮಾ..
ಗೀತಾ : ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ
ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ
ಅವನ ಮಧುರ ಮುರುಳಿಯೂ ಮಿಡಿವ ಸವಿಯ ನವಲಿಯು
ಆ ಸತಿಗಾಗೆ ಕುಲಸತಿಗಾಗೆ
ಸರಿತಾ : ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ
ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ
ಇಬ್ಬರಿಗಾಗೇ ಎಂದು ಇಬ್ಬರಿಗಾಗೇ
ಸೊಬಗಿ ಸತ್ಯಭಾಮೆ ರುಕ್ಮಿಣಿಯರು ಇಬ್ಬರು
ಒಬ್ಬನಿಗಾಗೇ ಅವನೊಬ್ಬನಿಗಾಗೇ
ಗೀತಾ : ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ
ಗೀತಾ : ತನ್ನ ಪೂಜೆಗೈದ ಗಿರಿಜೆ ತಪಕೆ ಮೆಚ್ಚಿದ
ಮೆಚ್ಚಿ ಒಲಿದು ಮನಸು ತಂದು ಹರನು ವರಸಿದ
ಸರಿತಾ : ಪ್ರೀತಿ ಇಂದ ಬಂದ ಗಂಗೆ ಅಂದ ಮೆಚ್ಚಿದ
ತನ್ನ ಶಿರದ ಮೇಲೆ ಅವಳ ಹರನು ಇರಿಸಿದ
ಗೀತಾ : ಒಂದೇ ಮಾಲೆ ಒಂದೇ ಮದುವೆ ಬಾಳಿಗೆ ಅದೇ ನೀತಿ
ಸರಿತಾ : ಒಂದೇ ಮಾಲೆ ಇಬ್ಬರಿಗಿಯುವುದು ದೇವರ ನಿಜ ನೀತಿ
ಗೀತಾ : ಅದು ಅಂದಿನ ಕಥೆಯಮ್ಮಾ..
ಸರಿತಾ : ಇದು ನಿತ್ಯದ ಕಥೆಯಮ್ಮಾ
ಗೀತಾ : ಅದು ಬೋಂಬೆ ಮದುವೆಯಮ್ಮಾ
ಸರಿತಾ : ಇದು ಸತ್ಯದ ಮದುವೆಯಮ್ಮಾ
ಗೀತಾ : ನೀಲ ಮೇಘ ಶ್ಯಾಮ್ .... ಅಹ್ಹಹ್ಹ.. ಉಂಉಂ ಉಂ
ಸರಿತಾ : ಯಾಕಮ್ಮ ನಿಲ್ಲಿಸಿಬಿಟ್ಟೇ... ಹಾಡೂ
ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ
ಗೀತಾ : ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ
ಗೀತಾ : ಮಲ್ಲೆ ಹೂವ ನಲ್ಲೆ ಮುಡಿಗೆ ಇಟ್ಟ ನಲ್ಲನು
ಎಂದು ಅವಳ ಬಿಟ್ಟು ನೋಡ ಬೇರೆ ಯಾರನು
ಸರಿತಾ : ನಲ್ಲ ನೆಟ್ಟ ಪ್ರೀತಿ ಬಳ್ಳಿ ಎರಡು ತೋಟದಿ
ಎರಡು ಬಳ್ಳಿ ತಂದ ಹೂವು ಎಲ್ಲ ಅವನದೇ
ಗೀತಾ : ಒಂದೇ ಒಡಲ ಎರಡು ಪ್ರಾಣ ಒಟ್ಟಿಗೆ ಇರಬಹುದೇ
ಸರಿತಾ : ಒಂದೇ ಮುಖಕೆ ಎರಡು ಕಣ್ಣು ಸೃಷ್ಟಿಯ ತಪ್ಪುಹುದೇ
ಗೀತಾ : ಇದಕುತ್ತಾರಾ ಏನಿದೆಯೋ...
ಸರಿತಾ : ಕಂಬನಿಗೆ ಕೊನೆಯಿದೆಯೋ
ಗೀತಾ : ಇದು ವಿಧಿಯ ಚೆಲ್ಲಾಟ
ಸರಿತಾ : ಇದು ಬಾಳಿನ ಹೋರಾಟ
ಗೀತಾ : ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ
ರುಕ್ಮಿಣಿಗಾಗಿ ಈ ರುಕ್ಮಿಣಿಗಾಗಿ
ಸರಿತಾ : ನೀಲ ಮೇಘ ಶ್ಯಾಮ ನಿತ್ಯಾನಂದ ಧಾಮ
ಗೀತಾ : ರುಕ್ಮಿಣಿಗಾಗಿ.. ಅಹ್ಹಹ್ಹಹ್ಹ.. ಈ ರುಕ್ಮಿಣಿಗಾಗಿ

No comments:
Post a Comment