223. ಮಿಸ್ಟರ್|| ರಾಜಕುಮಾರ್ (1970)

ಮಿಸ್ಟರ್ ರಾಜಕುಮಾರ ಚಿತ್ರದ ಹಾಡುಗಳು 
  1. ಗಂಗಿ ನಿನ್ ಮೇಲೆ ನಂಗೆ 
  2. ಬಳ್ಳಿಯೊಂದು ಬಳುಕುತಿದೆ 
  3. ರೋಜಾ ಎನ್ನಿ ಗುಲಾಬಿ ಎಂದು 
  4. ಕುಡಿಯೋಣ ಬಾರಾ ಕುಣಿಯೋಣ ಬಾ 
  5. ಉಂಟೆ ಉಂಟೇ ಅಮ್ಮಯ್ಯ 
  6. ಪ್ರೇಮ ಪುತ್ಥಳಿ ಆಯ್ ಲವ್ ಯು 
  7. ಬಾ ಬಾ ಬಾ ಬೆಂಗಳೂರು - ಸಾಹಿತ್ಯ ಲಭ್ಯವಿಲ್ಲ 
ಮಿಸ್ಟರ್|| ರಾಜಕುಮಾರ್ (1970) - ಗಂಗಿ ನಿನ್ ಮೇಲ್ ನಂಗೆ ಮನಸೈತೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಸ್.ರಾಜೇಶ್ವರರಾವ್ ಗಾಯನ: ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ

ಗಂಡು : ಗಂಗಿ ನಿನ್ ಮೇಲ್ ನಂಗೆ ಮನಸೈತೆ ( ಹೂಂ )
            ಕಣ್ ತುಂಬ ನಿನ್ನ ಬೊಂಬೆ ತುಂಬೈತೆ
            ನನ್ನ ಕಣ್ ತುಂಬ ನಿನ್ನ ಬೊಂಬೆ ತುಂಬೈತೆ
ಹೆಣ್ಣು : ಅಹ್ಹಹ್ಹಹ್ಹ .. ರಂಗಾ ನಿನ್ ಚಿಂತೆಲಿ ಬಡವಾದೆ (ಹ್ಹುಹೂಂ)
          ಕನ್ಸು ಮನ್ಸೊಳಗೇ ನೀನಾದೆ ನನ್  ಕನ್ಸು ಮನ್ಸೊಳಗೇ ನೀನಾದೆ..

ಗಂಡು : ಹೇ ಊರ ದಾರಿಲಿ ನೀನು ನೀರೀಗೆ ಬರುವಾಗ ಸೀರೆಯ ಎಳೆದದ್ದು ನೆನಪಿದೆಯಾ ಗೆಳತಿ
            ಸೀರೆಯ ಎಳೆದದ್ದು ನೆನಪಿದೆಯಾ (ಅಹ್ಹಹ್ಹಹ್ಹ)
ಹೆಣ್ಣು : ಸೀರೆ ಎಳೆದದ್ದು ಏಕೆ ಮೋರೆ ಸವರಿದ್ದು ಏಕೆ ಊರಿಂದ ಏನ್ ತಂದೆ ಉಡುಗೊರೆಯಾ ಗೆಳೆಯಾ
           ಊರಿಂದ ಏನ್ ತಂದೆ ಉಡುಗೊರೆಯಾ
ಗಂಡು : ಓಹೋ...(ಅಹಾ)..ಅಹಾ...(ಒಹೋ) .ಓಹೊಹೊಹೊಹೊ
            (ಅಹಾಹಹಹ) ಅಹ್ಹಹ್ಹಹ್ಹ (ಅಹ್ಹಹ್ಹಹಹ )
ಗಂಡು : ಗಂಗಿ ನಿನ್ ಮೇಲ್ ನಂಗೆ ಮನಸೈತೆ ( ಹೂಂ )
            ಕಣ್ ತುಂಬ ನಿನ್ನ ಬೊಂಬೆ ತುಂಬೈತೆ
            ನನ್ನ ಕಣ್ ತುಂಬ ನಿನ್ನ ಬೊಂಬೆ ತುಂಬೈತೆ

ಗಂಡು : ಹೋ ಗಂಗೆ ನಾಲ್ಕಾರು ಕಣ್ಣು ನಂಗೆ ಕಾವ್ಲಾಗೈತೆ ಹೆಂಗೆ ನೀಡಲಿ ನಿಂಗೆ ಕಾಣಿಕೆಯ
           ಗಿಣಿಯೆ ಹೆಂಗೆ ನೀಡಲಿ ನಿಂಗೆ ಕಾಣಿಕೆಯಾ
ಹೆಣ್ಣು : ಕತ್ತಲು ಬಂದ ಮೇಲೆ ಮೆತ್ತಗೆ ಓಡಿ ಬಂದು ಹಿತ್ತಾಲ ಬಾಗಿಲ ಓರೆ ಮಾಡುವೆ ಬಾರೋ
          ಹಿತ್ತಾಲ ಬಾಗಿಲ ಓರೆ ಮಾಡುವೆ

ಗಂಡು : ಓಹೋ...(ಅಹಾ)..ಅಹಾ...(ಒಹೋ) .ಓಹೊಹೊಹೊಹೊ
             (.ಅಹಾಹಹಹ) ಅಹ್ಹಹ್ಹಹ್ಹ (ಅಹ್ಹಹ್ಹಹಹ )
ಹೆಣ್ಣು : ಅಹ್ಹಹ್ಹಹ್ಹ .. ರಂಗಾ ನಿನ್ ಚಿಂತೆಲಿ ಬಡವಾದೆ (ಹ್ಹುಹೂಂ)
          ಕನ್ಸು ಮನ್ಸೊಳಗೇ ನೀನಾದೆ ನನ್  ಕನ್ಸು ಮನ್ಸೊಳಗೇ ನೀನಾದೆ..

ಗಂಡು : ಮೆತ್ತಾನೆ ಹುಲ್ಲು ರಾಶಿ ಮೆತ್ತೇಲಿ ಮಲಗಿ ಮತ್ತೇರುವಂತಾಟ ಆಡಿಸುವೆ ನಿನಗೆ
           ಮತ್ತೇರುವಂತಾಟ ಆಡಿಸುವೇ
ಹೆಣ್ಣು : ಮುತ್ತೀನ ಹೊದ್ದಿಕೆ ಸುತ್ತಾಲು ಹೊದ್ದಿಸಿ ಹೊತ್ತಾರೆವರೆಗೂ ಮಲಗಿಸುವೆ
          ನಿನ್ನಾ ಹೊತ್ತಾರೆವರೆಗೂ ಮಲಗಿಸುವೆ
ಗಂಡು : ಓಹೋ...(ಅಹಾ)..ಅಹಾ...(ಒಹೋ) .ಓಹೊಹೊಹೊಹೊ
             (.ಅಹಾಹಹಹ) ಅಹ್ಹಹ್ಹಹ್ಹ (ಅಹ್ಹಹ್ಹಹಹ )
ಹೆಣ್ಣು : ಅಹ್ಹಹ್ಹಹ್ಹ .. ರಂಗಾ ನಿನ್ ಚಿಂತೆಲಿ ಬಡವಾದೆ (ಹ್ಹುಹೂಂ) 
ಗಂಡು : ಗಂಗಿ ನಿನ್ ಮೇಲ್ ನಂಗೆ ಮನಸೈತೆ ( ಹೋಹ್ಹೋ )
            ಕಣ್ ತುಂಬ ನಿನ್ನ ಬೊಂಬೆ ತುಂಬೈತೆ ನನ್ನ ಕಣ್ ತುಂಬ ನಿನ್ನ ಬೊಂಬೆ ತುಂಬೈತೆ
-------------------------------------------------------------------------------------------------------------------------

ಮಿಸ್ಟರ್|| ರಾಜಕುಮಾರ್ (1970) - ಬಳ್ಳಿಯೊಂದು ಬಳುಕುತಿದೆ 
ಸಂಗೀತ: ಎಸ್.ರಾಜೇಶ್ವರರಾವ್ ಸಾಹಿತ್ಯ: ಚಿ.ಉದಯಶಂಕರ್  ಗಾಯನ: ಪಿ.ಬಿ.ಶ್ರೀನಿವಾಸ್ 

ಹ್ಹಾ... ಬಳ್ಳಿಯೊಂದು ಬಳುಕುತಿದೆ
ಬಳ್ಳಿಯೊಂದು ಬಳುಕುತಿದೆ ಆಹಾ ಆಹಾ ನಡೆಯುತಿದೇ
ಅಂದದಾ ಹೂವೆರಡು ಬಾರೋ ಬಾರೋ ನನ್ನ ನಲ್ಲ ಎಂದಿದೇ
ಒಹೋ ಒಹೋ..ಒಹೋ..ಬಳ್ಳಿಯೊಂದು ಬಳುಕುತಿದೆ

ತುಂಬಿದಾ ಕೊಡವೆರಡು
ತುಂಬಿದಾ  ಕೊಡವೆರಡು ಜೇನಿನಾ ತುಟಿ ಎರಡು
ಮನಸನು ಕೆರಳಿಸಿದೆ ತನುವನು ಸೆಳೆಯುತಿದೆ
ನನ್ನೊಡನೆ ಆಡಲೆಂದೂ ಆಸೆ ಆಸೇ ಎಂದಿದೆ... ಅಆಆ
ಬಳ್ಳಿಯೊಂದು ಬಳುಕುತಿದೆ ಆಹಾ ಆಹಾ ನಡೆಯುತಿದೇ
ಅಂದದಾ ಹೂವೆರಡು ಬಾರೋ ಬಾರೋ ನನ್ನ ನಲ್ಲ ಎಂದಿದೇ
ಒಹೋ ಒಹೋ..ಒಹೋ..ಬಳ್ಳಿಯೊಂದು ಬಳುಕುತಿದೆ

ಊರ್ವಶಿಯ ಕಣ್ಗಳೋ
ಊರ್ವಶಿಯ ಕಣ್ಗಳೋ ಮೇನಕೆಯ ಕೆನ್ನೆಗಳೋ
ಹೃದಯವ ಕೆಣುಕುತಿದೆ ಸನಿಹಕೆ ಕೂಗುತಿದೆ
ಸುಖವಿದೆ ಹರುಷವಿದೆ ಇಗೋ ಇಗೋ ಎಂದಿದೇ....
ಒಹೋ ಒಹೋ..ಒಹೋ..
ಬಳ್ಳಿಯೊಂದು ಬಳುಕುತಿದೆ ಆಹಾ ಆಹಾ ನಡೆಯುತಿದೇ
ಅಂದದಾ ಹೂವೆರಡು ಬಾರೋ ಬಾರೋ ನನ್ನ ನಲ್ಲ ಎಂದಿದೇ
ಒಹೋ ಒಹೋ..ಒಹೋ..
------------------------------------------------------------------------------------------------------------------------

ಮಿಸ್ಟರ್|| ರಾಜಕುಮಾರ್ (1970) - ರೋಜಾ ಎನ್ನಿ ಗುಲಾಬಿ ಎನ್ನಿ
ಸಂಗೀತ: ಎಸ್.ರಾಜೇಶ್ವರರಾವ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಪಿ.ಬಿ.ಶ್ರೀನಿವಾಸ್

ಹೆಣ್ಣು : ರೋಜಾ ಎನ್ನಿ ಗುಲಾಬಿ ಎನ್ನಿ ಒಂದೇ ಹೂವಿನ ಹೆಸರು
          ರಾಜ ಎನ್ನೂ ಕುಮಾರ ಎನ್ನೂ ಒಬ್ಬರ ದೇಹ ಹೆಸರು 
          ಅವರು ಅವರು ಅವರೇ ನನ್ನವರೂ ಅಹ್ಹಹ್ಹಹ 
ಕೋರಸ್ : ರಾಜಕುಮಾರ್ ರಾಜಕುಮಾರ್ ಮಿ. ರಾಜಕುಮಾರ 
               ರೋಜಾ ಎನ್ನಿ ಗುಲಾಬಿ ಎನ್ನಿ ಒಂದೇ ಹೂವಿನ ಹೆಸರು
               ರಾಜ ಎನ್ನೂ ಕುಮಾರ ಎನ್ನೂ ಒಬ್ಬರ ದೇಹ ಹೆಸರು 

ಹೆಣ್ಣು : ಯೌವ್ವನ ಬಂದಿದೆ ನೋಡಿಕೋ ಎಂದೂ ಕಣ್ಣಲೇ ನುಡಿದವರೂ (ಹ್ಹಹ್ಹಹ್ಹಹ್ಹಹ್ಹಾ) 
          ಮೈಮನ ಅರಳಿತು ಎಂಬುದ ನಗೆಯಲೇ ತೋರಿಸಿ ಹೋದವರೂ (ಹ್ಹಹ್ಹಹ್ಹಹ್ಹಹ್ಹಾ) 
          ಅರಿಯದ ಆಸೆಯ ತಂದವರು ಮನಸನು ಹತ್ತಿರ ತಂದವರು 
          ಅರಿಯದ ಆಸೆಯ ತಂದವರು ಮನಸನು ಹತ್ತಿರ ತಂದವರು           
          ಇವರೇ .. ಇವರೇ.. ಇವರೇ ನನ್ನವರೂ ಅಹ್ಹಹ್ಹಹ್ಹ 
ಕೋರಸ್ : ರಾಜಕುಮಾರ್ ರಾಜಕುಮಾರ್ ಮಿ. ರಾಜಕುಮಾರ 
               ರೋಜಾ ಎನ್ನಿ ಗುಲಾಬಿ ಎನ್ನಿ ಒಂದೇ ಹೂವಿನ ಹೆಸರು
               ರಾಜ ಎನ್ನೂ ಕುಮಾರ ಎನ್ನೂ ಒಬ್ಬರ ದೇಹ ಹೆಸರು 

ಹೆಣ್ಣು : ನಿನ್ನೆದೆ ಹೂವಲಿ ಪ್ರಣಯದ ಜೇನ ತುಂಬುತ ಹೋದವರೂ (ಹ್ಹಹ್ಹಹ್ಹಹ್ಹಹ್ಹಾ) 
          ದುಂಬಿಯ ಹಾಗೇ ಆ ಮಧು ಹೀರಲು ಧಾವಿಸಿ ಬಂದವರೂ  (ಹ್ಹಹ್ಹಹ್ಹಹ್ಹಹ್ಹಾ) 
          ಇಚ್ಛಿಸಿ ಮನವನು ಕದ್ದವರೂ ಮುತ್ತಿನ ಬೆಲೆಯನು ಅರಿತವರೂ 
          ಇಚ್ಛಿಸಿ ಮನವನು ಕದ್ದವರೂ ಮುತ್ತಿನ ಬೆಲೆಯನು ಅರಿತವರೂ 
          ಇವರೇ .. ಇವರೇ.. ಇವರೇ ನನ್ನವರೂ ಅಹ್ಹಹ್ಹಹ್ಹ.. 
ಕೋರಸ್ : ರಾಜಕುಮಾರ್ ರಾಜಕುಮಾರ್ ಮಿ. ರಾಜಕುಮಾರ 
------------------------------------------------------------------------------------------------------------------------

ಮಿಸ್ಟರ್|| ರಾಜಕುಮಾರ್ (1970) - ಕುಡಿಯೋಣ ಬಾರಾ ಕುಣಿಯೋಣ ಬಾ 
ಸಂಗೀತ: ಎಸ್.ರಾಜೇಶ್ವರರಾವ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಪಿ.ಬಿ.ಎಸ್.

ಕುಡಿಯೋಣ ಬಾರಾ ಕುಣಿಯೋಣ ಬಾ
ಕುಡಿಯೋಣ ಬಾರಾ ಕುಣಿಯೋಣ ಬಾ ಕುಡಿಕುಡಿದು ಅಮಲೇರಿ ಹಾಡೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ
(ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ )
ಇದ್ದದ್ದೂ ಮುಗಿಸೋಣ ಇಲ್ಲದ್ದೂ ಮರೆಯೋಣ ಬಾರಾ
ಕಣ್ಣ ಮುಚ್ಚಿ ಹೊಂಗನಸ ಕಾಣೋಣ ಬಾ
(ಕುಡಿಕುಡಿದು ಅಮಲೇರಿ ಹಾಡೋಣ ಬಾ
ಕುಡಿಕುಡಿದು ಅಮಲೇರಿ ಹಾಡೋಣ ಬಾ )

ಕುಡಿಯೋಣ ಬಾರಾ ಕುಡಿಯೋಣ ಬಾ ಬೆಳಗಾಗ್ಗೇ ಗಂಗೆಯ್ ಕುಡಿಯೋಣ ಬಾ
ಬೆಳಗಾಗ್ಗೇ ಗಂಗೆನ್  ಕುಡಿಯೋಣ ಬಾ ದಿನವೆಲ್ಲಾ ಮೈಮುರಿದು ದುಡಿಯೋಣ ಬಾ
ದಿನವೆಲ್ಲಾ ಮೈಮುರಿದು ದುಡಿಯೋಣ ಬಾ ಶ್ರಮದಿಂದ ಹಣವನ್ನು ಬಳಿಸೋಣ ಬಾ
(ಏನೂ ಬೇಡಾ ಆಹಾ... ಒಹೋ..  ಆಹಾ... ಒಹೋ.ಹೇಹೇ )
ಕುಡಿಯೋಣ ಬಾರಾ ಕುಣಿಯೋಣ ಬಾ ಕುಡಿಕುಡಿದು ಅಮಲೇರಿ ಹಾಡೋಣ ಬಾ
(ಕುಡಿಕುಡಿದು ಅಮಲೇರಿ ಹಾಡೋಣ ಬಾ )

ಕುಡಿಯೋಣ ಬಾರಾ ಕುಡಿಯೋಣ ಬಾ ಬಿಸಿಲಲ್ಲಿ ಪಾನಕಾನ್ ಕುಡಿಯೋಣ ಬಾ 
ಹಸಿವೆಂಬ ಮಾತನ್ನೇ ಅಳಿಸೋಣ ಬಾ ಮಡದಿ ಮಕ್ಕಳನ್ನೂ ನಗಿಸುತ್ತ ಬಾಳೋಣ ಬಾ 
( ಆಹಾ... ಒಹೋ..  ಆಹಾ... ಒಹೋ.ಹೇಹೇ )
ಕುಡಿಯೋಣ ಬಾರಾ ಕುಣಿಯೋಣ ಬಾ ಕುಡಿಕುಡಿದು ಅಮಲೇರಿ ಹಾಡೋಣ ಬಾ
(ಕುಡಿಕುಡಿದು ಅಮಲೇರಿ ಹಾಡೋಣ ಬಾ )

ಕುಡಿಯೋಣ ಬಾರಾ ಕುಡಿಯೋಣ ಬಾ ಬಾಯಾರೇ ಎಳೆನೀರ ಕುಡಿಯೋಣ ಬಾ 
ಬಾಯಾರೇ ಎಳೆನೀರ ಕುಡಿಯೋಣ ಬಾ ಬಡತನವ ಹೊಡೆದಟ್ಟಿ ಬದುಕೋಣ ಬಾ 
ಬಡತನವ ಹೊಡೆದಟ್ಟಿ ಬದುಕೋಣ ಬಾ ಹುಳಿಯಿಂದ ಮಡಕೆನ್ ಒಡೆಯೋಣ ಬಾ (ಹೇಹೇ )
ಹುಳಿಯಿಂದ ಮಡಕೆನ್ ಒಡೆಯೋಣ ಬಾ  (ಹೇಹೇ )
ಹುಳಿಯಿಂದ ಮಡಕೆನ್ ಒಡೆಯೋಣ ಬಾ  (ಹೇಹೇ )
ಹುಳಿಯಿಂದ ಮಡಕೆನ್ ಒಡೆಯೋಣ ಬಾ  (ಹೇಹೇ )
ಹುಳಿಯಿಂದ ಮಡಕೆನ್ ಒಡೆಯೋಣ ಬಾ  (ಹೇಹೇ )
------------------------------------------------------------------------------------------------------------------------

ಮಿಸ್ಟರ್|| ರಾಜಕುಮಾರ್ (1970) - ಉಂಟೇ ಉಂಟೇ ಅಮ್ಮಯ್ಯ
ಸಂಗೀತ: ಎಸ್.ರಾಜೇಶ್ವರರಾವ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ.

ಅಬ್ಬಬ್ಬಾ... ಉಂಟೇ ಉಂಟೇ  ಅಮ್ಮಯ್ಯ ಬಿಡು ಬಿಡು ನನ್ನ ದಮ್ಮಯ್ಯ 
ಉಂಟೇ ಉಂಟೇ  ಅಮ್ಮಯ್ಯ ಬಿಡು ಬಿಡು ನನ್ನ ದಮ್ಮಯ್ಯ 
ರೂಪು ಸೊಗಸೂ ಒಳ್ಳೇ ವಯಸ್ಸೂ ಕೆಣಕಬೇಡಿರಿ ನನ್ನ ಮನಸೂ (ಅಹ್ಹಹ್ಹಹ್ಹಹ್ಹ ) ಅಬ್ಬಬ್ಬಾ 
ಉಂಟೇ ಉಂಟೇ  ಅಮ್ಮಯ್ಯ ಬಿಡು ಬಿಡು ನನ್ನ ದಮ್ಮಯ್ಯ 

ಮೊದಲೇ ಇರುಳೂ ಕತ್ತಲೂ ಡವ ಡವ ಈ ಎದೆಯಲೂ 
ಮೊದಲೇ ಇರುಳೂ ಕತ್ತಲೂ ಡವ ಡವ ಈ ಎದೆಯಲೂ 
ಮೈಯ್ ಮುಟ್ಟಲೂ ನಗುದಿ ತಡೆಯಲೂ 
ಮೈಯ್ ಮುಟ್ಟಲೂ ನಗುದಿ ತಡೆಯಲೂ ನಾ ಹೇಗೆ ಹೇಳಲಿ ಮಾತೋಳು ಅಬ್ಬಬ್ಬಾ.. ಹೂಂ 
ಉಂಟೇ ಉಂಟೇ  ಅಮ್ಮಯ್ಯ ಬಿಡು ಬಿಡು ನನ್ನ ದಮ್ಮಯ್ಯ 
(ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪ್ಪಪ್ಪಪ್ಪ) ಹ್ಹಾ..  
(ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪ್ಪಪ್ಪಪ್ಪ) ಹ್ಹೋ ..  

ಹೆಣ್ಣಿನಾಸೆ ಇಂಗಿದೇ ಸಾಕೂ ಮುಗಿಯತ್ತಮ್ಮ ಗಂಡಿಗೆ  ಷೋಕು 
ಹೆಣ್ಣಿನಾಸೆ ಇಂಗಿದೇ ಸಾಕೂ ಮುಗಿಯತ್ತಮ್ಮ ಗಂಡಿಗೆ ಷೋಕು 
ಐದು ಹೆಂಗಳು ಹತ್ತು ಕಣ್ಣಗಳೂ 
ಐದು ಹೆಂಗಳು ಹತ್ತು ಕಣ್ಣಗಳೂ ನನಗೇನೂ ತೋರದು ಮಾಡಲೂ .. ಅಬ್ಬಬ್ಬಾ 
ಉಂಟೇ ಉಂಟೇ  ಅಮ್ಮಯ್ಯ ಬಿಡು ಬಿಡು ನನ್ನ ದಮ್ಮಯ್ಯ 
(ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪ್ಪಪ್ಪಪ್ಪ) ಹ್ಹಾ..  
(ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪ್ಪಪ್ಪಪ್ಪ)...  ಹ್ಹಹ್ಹಾ ..  

ಕೆಂಪು ಕೆನ್ನೇ ಕಂಡರೇ ನನ್ನ ತುಟಿಗೇ ತೊಂದರೇ 
ಕೆಂಪು ಕೆನ್ನೇ ಕಂಡರೇ ನನ್ನ ತುಟಿಗೇ ತೊಂದರೇ 
ಚೆಲುವೇ ನಕ್ಕರೇ ಕೈಗೇ ಸಿಕ್ಕರೇ 
ಚೆಲುವೇ ನಕ್ಕರೇ ಕೈಗೇ ಸಿಕ್ಕರೇ ಈ ತೋಳ ಸೆರೆಯಲಿ ಆಸರೇ ಅಬ್ಬಬ್ಬಾ.. 
ಉಂಟೇ ಉಂಟೇ  ಅಮ್ಮಯ್ಯ ಬಿಡು ಬಿಡು ನನ್ನ ದಮ್ಮಯ್ಯ 
ರೂಪು ಸೊಗಸೂ ಒಳ್ಳೇ ವಯಸ್ಸೂ ಕೆಣಕಬೇಡಿರಿ ನನ್ನ ಮನಸೂ (ಅಹ್ಹಹ್ಹಹ್ಹಹ್ಹ ) ಅಬ್ಬಬ್ಬಾ 
ಉಂಟೇ ಉಂಟೇ  ಅಮ್ಮಯ್ಯ ಬಿಡು ಬಿಡು ನನ್ನ ದಮ್ಮಯ್ಯ 
ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪ್ಪಪ್ಪಪ್ಪ ಹ್ಹಾ..  
ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪ್ಪಪ್ಪಪ್ಪ...  ಹ್ಹಹ್ಹಾ ..  
ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪ್ಪಪ್ಪಪ್ಪ ಹ್ಹಾ..  
ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪಪ್ಪಪ್ಪರೇ ಪಪ್ಪ ಪ್ಪಪ್ಪಪ್ಪ...  ಹ್ಹಹ್ಹಾ ..  
--------------------------------------------------------------------------------------------------------------------------

ಮಿಸ್ಟರ್|| ರಾಜಕುಮಾರ್ (1970) - ಆಯ್ ಲವ್ ಯೂ
ಸಂಗೀತ: ಎಸ್.ರಾಜೇಶ್ವರರಾವ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ.

ಗಂಡು: ಆಯ್ ಲವ್ ಯೂ ಲವ್ ಲವ್ ಲವ್ ಲವ್ ಲವ್ ಲವ್ ಯೂ (ಆ..ರಾಮ ರಾಮ )
ಪ್ರೇಮ ಪುತ್ಥಳ್ಳಿ ಆಯ್ ಲವ್ ಯೂ (ಆ) ಪ್ರಣಯ ರಾಣಿಯೇ ಆಯ್ ಲವ್ ಯೂ (ಹೋಹೋ)
          ಹೃದಯದ ರಮಣೀ ಕದವ ತೆಗೆದಿದೆ ಒಳಗೇ ಬಾರೇ ನೀ  ಎಲ್.. ಓ..ವಿ..ಈ ಆಯ್ ಲವ್ ಯೂ (ಒಹೋ)
          ಪ್ರೇಮ ಪುತ್ಥಳ್ಳಿ ಆಯ್ ಲವ್ ಯೂ  (ಆ) ಪ್ರಣಯ ರಾಣಿಯೇ ಆಯ್ ಲವ್ ಯೂ (ಹೋಹೋ)
         ಹೃದಯದ ರಮಣೀ ಕದವ ತೆಗೆದಿದೆ ಒಳಗೇ ಬಾರೇ ನೀ   (ಏ ...) 

ಗಂಡು : ಮೇಲೆ ನೋಡಿ ನೀ ಮೋಸ ಹೋಗಿ ಇಲ್ಲಿಂದ ಓಡಬೇಡಾ.. (ಆಅ.. ಹ್ಹಹ್ಹಹ್ಹ )
            ಮೇಲೆ ನೋಡಿ ನೀ ಮೋಸ ಹೋಗಿ ಇಲ್ಲಿಂದ ಓಡಬೇಡಾ..
            ಒಳಗೆ ಅಡಗಿಹ ವಿಷಯ ತಿಳಿಯದೇ ಕಂಬಿ ಕೀಳಬೇಡಾ    (ಆಅ.. )
            ವಯಸು ದಾಡಿಗೆ (ಹ್ಹಾ) ಆಸೆ ಮನಸಿಗೇ (ಹ್ಹೋ ಹ್ಹೋ ) 
            ನಿನ್ನ ನೋಡಿದಾಗ ಮಾತಾಡಿದಾಗ ಹೊಸ ಯೌವ್ವನ ಅಂಗಾಗಕೇ (ಛೀಛೀಛೀ)   
           ಎಲ್.. ಓ..ವಿ..ಈ  ಪ್ರೇಮ ಪುತ್ಥಳ್ಳಿ ಆಯ್ ಲವ್ ಯೂ  (ಆ) ಪ್ರಣಯ ರಾಣಿಯೇ ಆಯ್ ಲವ್ ಯೂ (ಹೋಹೋ)
           ಹೃದಯದ ರಮಣೀ ಕದವ ತೆಗೆದಿದೆ ಒಳಗೇ ಬಾರೇ ನೀ   (ಏ ...) 

ಗಂಡು : ನಿನ್ನ ಕಂಡ ಮೇಲೆ ಎನ್ನ ಕಣ್ಗಳು ನೋಡವೇನೂ ಇನ್ನೂ (ಆ)
            ನಿನ್ನ ಕಂಡ ಮೇಲೆ ಎನ್ನ ಕಣ್ಗಳು ನೋಡವೇನೂ ಇನ್ನೂ (ಆಹಾ )
            ನನ್ನ ಬಾಚಿ ನೀ ಅಪ್ಪಿ ವರಿದರೇ ನಲಿಸಿ ನಗಿಸುವೆನೂ (ಅಯ್ಯೋ)
            ನಿನಗೇ ನಾ ಪತಿ (ಹೂಹೂ)  ನನಗೇ ನೀ ಸತಿ (ಅಮ್ಮಾ) 
            ಬಾ ಇಲ್ಲಿ ಚೆಲುವೇ ಸುಖವನ್ನು ಕೊಡುವೇ ಈ ರಸಿಕನಾ ನೀ ಅರಿಯುವೇ (ನಂಗೇ ಬೇಕಿಲ್ಲಾ)
           ಎಲ್.. ಓ..ವಿ..ಈ  ಪ್ರೇಮ ಪುತ್ಥಳ್ಳಿ ಆಯ್ ಲವ್ ಯೂ  (ಆಆ ) ಪ್ರಣಯ ರಾಣಿಯೇ ಆಯ್ ಲವ್ ಯೂ (ಆ )
           ಹೃದಯದ ರಮಣೀ ಕದವ ತೆಗೆದಿದೆ ಒಳಗೇ ಬಾರೇ ನೀ   ಆಯ್ ಲವ್ ಯೂ (ಓ)
--------------------------------------------------------------------------------------------------------------------------

No comments:

Post a Comment