225. ಎರಡು ನಕ್ಷತ್ರಗಳು (1983)


ಎರಡು ನಕ್ಷತ್ರಗಳು ಚಿತ್ರದ ಹಾಡುಗಳು 
  1. ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು 
  2. ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತಿಯೇ 
  3. ಗೆಳತೀ ಬಾರದು ಇಂಥಾ ಸಮಯ 
  4. ಅಮ್ಮ ಕಣ್ಣು ಬೀಡಮ್ಮಾ 
  5. ಹೌದು ಎಂದರೇ ಹೌದು ಹೌದು 
ಎರಡು ನಕ್ಷತ್ರಗಳು (1983) - ಗೆಳತಿ ಬಾರದು
ಸಾಹಿತ್ಯ : ಚಿ. ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಗಾಯನ: ಡಾ. ರಾಜ್

ಗೆಳತಿ ಬಾರದು ಇಂತಾ ಸಮಯಾಗೆಳತಿ ಬಾರದು ಇಂತಾ ಸಮಯಾ
ಅನುರಾಗಾ ಬೇಕೆಂದಿದೆ ಹೃದಯಾ
ಗೆಳತಿ ಬಾರದು ಇಂತಾ ಸಮಯಾ

ನೋಡು ಹಿತವಾಗಿ ತಂಗಾಳಿ ಬೀಸಿ ಹೂವ ಕಂಪನ್ನು ಎಲೆಲ್ಲೂ ಹಾಸಿ ... 
ನೋಡು ಹಿತವಾಗಿ ತಂಗಾಳಿ ಬೀಸಿ ಹೂವ ಕಂಪನ್ನು ಎಲೆಲ್ಲೂ ಹಾಸಿ ... 
ಮೈಗೆ ಸೋಕಿ ತಂಪನ್ನು ಬೆರಸೀ ಬಯಕೆ ಹೊಮ್ಮಿ ಹೊಮ್ಮಿ ಕಾಡುತಿರೆ
ಬಯಕೆ ಹೊಮ್ಮಿ ಹೊಮ್ಮಿ ಕಾಡುತಿರೆ ಹಿತವಾದ ನೋವಿಂದಾ ನಾ ಬೆಂದೇ
ಗೆಳತಿ ಬಾರದು ಇಂತಾ ಸಮಯಾ

ಮನದಾಸೆ ನೀನೇತಕೆ ಕಾಣೆ ನಿನ್ನಾಸೆ ಅದೇನಿದೆ ಜಾಣೆ ... 
ಮನದಾಸೆ ನೀನೇತಕೆ ಕಾಣೆ ನಿನ್ನಾಸೆ ಅದೇನಿದೆ ಜಾಣೆ ... 
ಚೆಲುವೆ ತಾಳೆನು ಇನ್ನು ವಿರಹಾ ಎದೆಯಾ ತುಂಬಿದೆ ನಿನ್ನಾ ಮೋಹಾ
ಒಲವಿಂದ ನೀ ಬಾರೆಯ ಸನಿಹ 
ಗೆಳತಿ ಬಾರದು ಇಂತಾ ಸಮಯಾ ಅನುರಾಗ ಬೇಕೆಂದಿದೆ ಹೃದಯ
ಗೆಳತಿ ಬಾರದು ಇಂತಾ ಸಮಯಾ
-----------------------------------------------------------------------------------------------------------------------

ಎರಡು ನಕ್ಷತ್ರಗಳು (1983)  - ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತೀಯೆ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಡಾ.ರಾಜ್‌ಕುಮಾರ್, ವಾಣಿ ಜಯರಾಮ್

ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತೀಯೆ ಭಯವು ಇನ್ನೇಕೆ
ಓ ಹೋ ಹೋ, ನೀನು ನನ್ನ ಮನಸನ್ನು ಅರಿತಾಗ ಎದೆಯಾಸೆ ತಿಳಿದಾಗ
ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತೀಯೆ ಭಯವು ಇನ್ನೇಕೆ

ಕಣ್ಣಿನ ಬಾಣ ಬಿಟ್ಟು ನನ್ನ ಏಕೆ ಕೊಲ್ಲುವೆಯೊ  ಬಣ್ಣದ ಮಾತಿನಿಂದ ಇನ್ನು ಏಕೆ ಸೆಳೆಯುವೆಯೊ
ಮಲ್ಲಿಗೆ ಹೂವ ಕಂಡು ಆಸೆ ನೂರು ಚಿಮ್ಮುತಿದೆ
ಮೆಲ್ಲಗೆ ನಿನ್ನ ಸೇರೋ ಬಯಕೆ ಈಗ ಹೊಮ್ಮುತಿದೆ
ಕೆಣಕೋ ಮಾತೇಕೆ, ಹೋಯ್  ಹಿಡಿವೆ ಸೆರಗೇಕೆ, ಹೋಯ್
ಚೆಲುವ ಚಪಲ ನಿನಗೇಕೆ  ಓ...ಹೋ.. ಹೋ..  ಬೆಡಗಿ ಹುಡುಗಿ
ಸಂಕೋಚ ನಿನಗೇಕೆ ಈ ದೂರ ಇನ್ನೇಕೆ
ಏಕೆ ಮಳ್ಳಿ ಹಂಗೆ ನನ್ನ ನೀನು ಕದ್ದು ಕದ್ದು ನೋಡುತೀಯೆ ಭಯವು ಇನ್ನೇಕೆ

ಕಣಿವೆಯ ಹಾದಿಯಲ್ಲಿ ಯಾರೂ ಈಗ ಇರುವುದಿಲ್ಲ
ಪ್ರಣಯದ ಆಟವನ್ನು ಯಾರೂ ಅಲ್ಲಿ ನೋಡೋರಿಲ್ಲ
ಎದೆಯಲಿ ಏಕೋ ಏನೋ ಢವ ಢವ ಎನ್ನುತಿದೆ
ಮೈಯಲ್ಲಿ ಏನೋ ಏಕೋ ಜುಮ್ಮು ಜುಮ್ಮು ಎನ್ನುತಿದೆ
ಬಳಸು ತೋಳಿಂದ, ಹೋಯ್..   ಕೊಡು ಬಾ ಆನಂದ, ಹೋಯ್..
ಬಿಸಿಯು ಏರಿ ಮೈಯೆಲ್ಲ ಓಹೋಹೋ...  ಮಾತು ಸಾಕು
ಬಾ ನಲ್ಲ ಹೋಗೋಣ ಆನಂದ ಹೊಂದೋಣ
-------------------------------------------------------------------------------------------------------------------------

ಎರಡು ನಕ್ಷತ್ರಗಳು (1983) - ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ಮಾ|| ಲೋಹಿತ 

ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು
ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು
ನಾನು ಹೊರಗೆ ಹೋಗುವೇ ಊರು ಸುತ್ತಿ ನೋಡುವೇ ಊರು ಸುತ್ತಿ ನೋಡುವೇ
ಹೂಂ... ಗೊತ್ತಾಯ್ತು ಗೊತ್ತಾಯ್ತು
ನಿನ್ನ ಉಡುಪು ನನ್ನದು  ನನ್ನ ಉಡುಪು ನಿನ್ನದು
ನಿನ್ನ ಉಡುಪು ನನ್ನದು  ನನ್ನ ಉಡುಪು ನಿನ್ನದು
ನನ್ನದಿನ್ನೂ ಅರಮನೆ ಇಲ್ಲೀ ಇರುವೇ ಜುಮ್ಮನೇ 
ಇಲ್ಲೀ ಇರುವೇ ಜುಮ್ಮನೇ

ಗೆಳೆಯರನ್ನು ಸೇರಿ ನಾನು ಕಬ್ಬಡ್ಡಿ ಆಟ ಆಡುವೆ
ಕಬ್ಬಡ್ಡಿ ಕಬ್ಬಡ್ಡಿ ಕಬ್ಬಡ್ಡಿ ಕಬ್ಬಡ್ಡಿ ಕಬ್ಬಡ್ಡಿ... ಹೇಹೇ
ಗೆಳೆಯರನ್ನು ಸೇರಿ ನಾನು ಕಬ್ಬಡ್ಡಿ ಆಟ ಆಡುವೆ
ಹರಿವ ನದಿಗೆ ದುಡುಂ ಎಂದು ಧುಮುಕಿ ನಾನು ಈಜುವೇ
ಹಾಗ್.. ನಾನೇನ್ ಮಾಡ್ತೀನಿ ಗೊತ್ತಾ...
ರಾಜಸಭೆಗೆ ರಾಜನಂತೆ ಠೀವಿಯಿಂದ ಹೋಗುವೇ
ಪಪಪಪ  ಪಪಪಪ ಪಪಪಪ ಪಪಪಪ ... ಆಹಾಂ...
ರಾಜಸಭೆಗೆ ರಾಜನಂತೆ ಠೀವಿಯಿಂದ ಹೋಗುವೇ
ಮೆತ್ತಗಿರುವ ಖುರ್ಚಿಯಲ್ಲಿ ದಬ್ಬಕೆಂದು ಕೂರುವೇ
ಅಲ್ಲಿ ನಾನು ಇಲ್ಲಿ ನೀನು ಎಂಥ ಚಂದ ಗೆಳೆಯನೇ
ಅಲ್ಲಿ ನಾನು ಇಲ್ಲಿ ನೀನು ಎಂಥ ಚಂದ ಗೆಳೆಯನೇ
ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು
ನಿನ್ನ ಉಡುಪು ನನ್ನದು  ನನ್ನ ಉಡುಪು ನಿನ್ನದು 

ಕಲ್ಲು ಸಕ್ಕರೆ ಬಾದಾಮಿ ಜಜ್ಜಿ ಜಜ್ಜಿ ತಿನ್ನುವೇ 
ಲೇ..ಲೇ..ಲೇ..ಲೇ..ಲೇ..ಲೇ  ಏನ್ ಮಾಡ್ತಾ ಇದ್ದೀಯಾ ನೀನು 
ಕಲ್ಲು ಸಕ್ಕರೆ ಬಾದಾಮಿ ಜಜ್ಜಿ ಜಜ್ಜಿ ತಿನ್ನುವೇ 
ಅಡುಗೆ ಮನೆ ಸೂರೆ ಮಾಡಿ ಓಬ್... ಎಂದು ತೇಗುವೇ 
ಒಳ್ಳೇ ಹುಡುಗ ನೀನು (ರಾಜಕುಮಾರ.... ರಾಜಕುಮಾರ )
ಜಿಂಕೆಯಂತೆ ಎಗರಿ ಎಗರಿ   ಅಲ್ಲಿ ಇಲ್ಲಿ ನೆಗೆಯುವೇ 
ಮಂಗನಂತೆ ಮರವವೇರಿ ಝರರ್... ಎಂದು ಜಾರುವೇ 
ಇಂಥ ಸುಖವು ಯಾರಿಗೆ ಉಂಟು ಓ..ಓ.ಹೊ 
ಲಾಲಾ ಲಾ  ಲಾಲಾ ಲಾ  ಲಾಲಾ ಲಾ  ಲಾಲಾ ಲಾ  
--------------------------------------------------------------------------------------------------------------------------

ಎರಡು ನಕ್ಷತ್ರಗಳು (1983) - ಅಮ್ಮ ಕಣ್ಣು ಬಿಡಮ್ಮಾ 
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ಮಾ|| ಲೋಹಿತ, ಸುಲೋಚನಾ 

ಮಗ : ಅಮ್ಮ ಕಣ್ಣು ಬಿಡಮ್ಮಾ  ಅಮ್ಮ ಕಣ್ಣು ಬಿಡಮ್ಮಾ
          ಮಾತಾಡಮ್ಮಾ ಕಣ್ಣಿರೇಕೆ ನಗುತಿರು ಅಮ್ಮಾ
          ಅಮ್ಮ ಕಣ್ಣು ಬಿಡಮ್ಮಾ  ಅಮ್ಮ ಕಣ್ಣು ಬಿಡಮ್ಮಾ

ಮಗು : ನೀನು ನೊಂದರೇ ನನಗು ನೋವು ಏಕೋ ಗೊತ್ತಿಲ್ಲಾ
          ನೀನು ನೊಂದರೇ ನನಗು ನೋವು ಏಕೋ ಗೊತ್ತಿಲ್ಲಾ
          ನೀನು ಅತ್ತರೇ ನಾನು ಅಳುವೇ ಕಾರಣ ಅರಿತಿಲ್ಲಾ
          ನಿನ್ನ ಬಿಟ್ಟು ನಾ ದೂರಕೆ ಹೋಗಲು ಏಕೋ ಮನಸ್ಸಿಲ್ಲಾ  
          ಅಮ್ಮಾ ಹೇಗಿರಲಮ್ಮಾ... ಬಾಳದೇ ನಿನ್ನ ಕಣ್ಣೀರಿಡುತಾ
          ನೊಂದೆನು ಅಮ್ಮಾ.. ಅಮ್ಮಾ ಹೇಗಿರಲಮ್ಮಾ...

ತಾಯಿ : ವಾತ್ಸಲ್ಯದಿಂದೆನ್ನ ನೋಡಿ ಜೇನಂಥ ಮಾತನ್ನು ಆಡಿ ಆನಂದವನ್ನು ಕಂಡೇ
            ವಾತ್ಸಲ್ಯದಿಂದೆನ್ನ ನೋಡಿ ಜೇನಂಥ ಮಾತನ್ನು ಆಡಿ ಆನಂದವನ್ನು ಕಂಡೇ
            ಇನ್ನೊಂದು ಬಾರಿ ನೀ ಪ್ರೇಮದಿಂದಾ   
            ಇನ್ನೊಂದು ಬಾರಿ ನೀ ಪ್ರೇಮದಿಂದಾ ನನ್ನನ್ನು ಅಮ್ಮಾ  ಎನ್ನು
            ನನ್ನನ್ನು ಅಮ್ಮಾ  ಎನ್ನು
ಮಗು : ಅಮ್ಮ ಪ್ರೀತಿಯ ಅಮ್ಮಾ.. ಅಮ್ಮ ಪ್ರೀತಿಯ ಅಮ್ಮಾ
ತಾಯಿ : ಬಂಗಾರದಂಥ ಈ ಒಂದೇ ಮಾತೇ ಸಾಕಿನ್ನೂ ಮುದ್ದು ಕಂದಾ 
ಮಗು : ಅಮ್ಮಾ..    ತಾಯಿ : ನನ್ನ ಕಂದಾ
ಮಗು : ಅಮ್ಮಾ..    ತಾಯಿ : ನನ್ನ ಕಂದಾ 
--------------------------------------------------------------------------------------------------------------------------

ಎರಡು ನಕ್ಷತ್ರಗಳು (1983) - ಹೌದು ಎಂದರೇ ಹೌದು... ಹೌದು... 
ಸಂಗೀತ: ಜಿ.ಕೆ.ವೆಂಕಟೇಶ್ ಸಾಹಿತ್ಯ: ಚಿ.ಉದಯಶಂಕರ್  ಗಾಯನ: ಮಾ|| ಲೋಹಿತ, ವಾಣಿಜಯರಾಂ,ಡಾ|| ರಾಜ 

ರಾಜ :ಇವರು ಬಾರಂದ ಪಾರ್ವತಿ ಪ್ರಸಾದ ಬ್ರಹ್ಮಾನಂದ ಶಿವಯೋಗಿಗಳು
ವಾಣಿ : ಅಗಸ್ತ್ಯರ ಮೊಮ್ಮಕ್ಕಳು    ರಾಜ : ವೈಕುಂಠದಲ್ಲಿ ನಿದ್ದೇ
ವಾಣಿ : ಕೈಲಾಸದಲ್ಲಿ ಊಟ        ರಾಜ : ಬ್ರಹ್ಮಲೋಕದಲ್ಲಿ ಆಟ
ವಾಣಿ ; ಭೂಲೋಕದಲ್ಲಿ ನೋಟ 
ರಾಜ: ಲೋಕ ಕಲ್ಯಾಣಕ್ಕೆ ದುಡುಂ.. ನಿಮ್ಮ ಉದ್ದಾರಕ್ಕೆ ಧಡುಂ
          ಸ್ವರ್ಗದಿಂದ ಪಾದಯಾತ್ರೆ  ಬಂದಿದ್ದಾರೇ....  
          ಇವರು ಹೌದು ಎಂದರೇ....   ಕೋರಸ್  : ಹೌದು... ಹೌದು.. ಹೌದು..
ವಾಣಿ : ಅಲ್ಲಾ  ಎಂದರೇ ...                ಕೋರಸ್ : ಅಲ್ಲಾ.... ಅಲ್ಲಾ... ಅಲ್ಲಾ... 
ರಾಜ : ಹೌದು ಎಂದರೇ ಹೌದು... ಹೌದು... 
ರಾಜ:  ಅಲ್ಲಾ... ಎಂದರೇ... ಅಲ್ಲಾ... ಅಲ್ಲಾ...  
ರಾಜ : ಹೌದು ಎಂದರೇ ...    ಕೋರಸ್ : ಹೌದು... ಹೌದು... 
ರಾಜ :   ಅಲ್ಲಾ... ಎಂದರೇ...   ಕೋರಸ್: ಅಲ್ಲಾ... ಅಲ್ಲಾ...  
ರಾಜ : ಬಾಲಯೋಗಿಯೂ ಇಲ್ಲಾ ಎಂದರೇ ಯಾರು ಇರುವುದೇ ಇಲ್ಲಾ
          ಇಲ್ಲಿ ಯಾರು ಇರುವುದೇ...  ಇಲ್ಲಾ... 
ಕೋರಸ್ : ಇಲ್ಲಿ ಯಾರು ಇರುವುದೇ...  ಇಲ್ಲಾ... 
ರಾಜ : ಹೌದು ಎಂದರೇ ...    ಕೋರಸ್ : ಹೌದು... ಹೌದು... 
ರಾಜ :   ಅಲ್ಲಾ... ಎಂದರೇ...   ಕೋರಸ್: ಅಲ್ಲಾ... ಅಲ್ಲಾ...  

ರಾಜ : ಸ್ವಾಮಿಗಳೊಮ್ಮೆ ಕಣ್ಣು ಬಿಟ್ಟರೇ ಬೋಳು ತಲೆಯಲಿ ಜುಟ್ಟು ಬರುವುದು 
          ಸ್ವಾಮಿಗಳೊಮ್ಮೆ ಕಣ್ಣು ಬಿಟ್ಟರೇ ಬೋಳು ತಲೆಯಲಿ ಜುಟ್ಟು ಬರುವುದು 
ಕೋರಸ್ : ಜುಟ್ಟು ಬರುವುದು... ಜುಟ್ಟು ಬರುವುದು
ವಾಣಿ : ಯೋಗಿಗಳೊಮ್ಮೆ ಮಂತ್ರ ಹೇಳಲು ಬೊಕ್ಕು ಬಾಯಲಿ ಹಲ್ಲು ಬರುವುದು 
           ಯೋಗಿಗಳೊಮ್ಮೆ ಮಂತ್ರ ಹೇಳಲು ಬೊಕ್ಕು ಬಾಯಲಿ ಹಲ್ಲು ಬರುವುದು 
ಕೋರಸ್ : ಹಲ್ಲು ಬರುವುದು... ಹಲ್ಲು ಬರುವುದು 
ರಾಜ : ಕೋಪಿಸಲು ಶಿವಯೋಗಿಗಳು ಈ ಗಂಡುಗಳು ಹೆಣ್ಣಾಗುವರೂ
ಕೋರಸ್ : ಈ ಗಂಡುಗಳು ಹೆಣ್ಣಾಗುವರೂ...
ಲೋಹಿತ್ : ಹೌದಪ್ಪಾ ಹೌದು... ಹೌದಮ್ಮಾ ಹೌದು
ರಾಜ : ಆಹ್ಹಹಹಾ.ಆಆಆ ..ಗುರು    ಲೋಹಿತ :   ಶಿಷ್ಯಾ
ರಾಜ : ಅಹಹಾ ಗುರುಗುರು  ಆಹಾ.. ಗುರುಗುರು
ಕೋರಸ್ : ಅಹಹಾ ಗುರುಗುರು  ಆಹಾ.. ಗುರುಗುರು
ರಾಜ : ಅಹಹಾ ಗುರುಗುರೂರು   ಆಹಾ.. ಗುರುಗುರೂರು 
ಕೋರಸ್: ಅಹಹಾ ಗುರುಗುರೂರು   ಆಹಾ.. ಗುರುಗುರೂರು
ರಾಜ : ಹೌದು ಎಂದರೇ ...    ಕೋರಸ್ : ಹೌದು... ಹೌದು... 
ರಾಜ :   ಅಲ್ಲಾ... ಎಂದರೇ...   ಕೋರಸ್: ಅಲ್ಲಾ... ಅಲ್ಲಾ...  

ರಾಜ : ಒಳಗಡೆ ಏನು ನಡೆದಿದೆ ಎಂದೂ ಸ್ವಾಮಿಗಳಿಲ್ಲೇ ಹೇಳ ಬಲ್ಲರು 
           ಒಳಗಡೆ ಏನು ನಡೆದಿದೆ ಎಂದೂ ಸ್ವಾಮಿಗಳಿಲ್ಲೇ ಹೇಳ ಬಲ್ಲರು 
ಕೋರಸ್ : ಹೇಳ ಬಲ್ಲರು...  ಹೇಳ ಬಲ್ಲರು
ವಾಣಿ : ಕೋಲವ ಹಿಡಿದು ಮಟ್ಟಹಾಕಲು ಮಂತ್ರದಂಡವ ಹಿಡಿದು ತಂದರು
          ಕೋಲವ ಹಿಡಿದು ಮಟ್ಟಹಾಕಲು ಮಂತ್ರದಂಡವ ಹಿಡಿದು ತಂದರು
ಕೋರಸ್ : ಹಿಡಿದು ತಂದರು.... ಹಿಡಿದು ತಂದರು
ರಾಜ : ಬಯಸಿದರೇ ಶುಭ ಸ್ವಾಗತವ ಈ ರಾಜ್ಯವನೇ ಇವರು ಉಳಿಸುವರೂ
ಕೋರಸ್ : ಈ ರಾಜ್ಯವನೇ ಇವರು ಉಳಿಸುವರೂ
ಲೋಹಿತ್ : ಹೌದಪ್ಪಾ ಹೌದು... ಹೌದಮ್ಮಾ ಹೌದು
ರಾಜ : ಆಹ್ಹಹಹಾ.ಆಆಆ ..ಗುರು    ಲೋಹಿತ :   ಶಿಷ್ಯಾ
ರಾಜ : ಅಹಹಾ ಗುರುಗುರು  ಆಹಾ.. ಗುರುಗುರು
ಕೋರಸ್ : ಅಹಹಾ ಗುರುಗುರು  ಆಹಾ.. ಗುರುಗುರು
ರಾಜ : ಅಹಹಾ ಗುರುಗುರೂರು   ಆಹಾ.. ಗುರುಗುರೂರು 
ಕೋರಸ್: ಅಹಹಾ ಗುರುಗುರೂರು   ಆಹಾ.. ಗುರುಗುರೂರು  
--------------------------------------------------------------------------------------------------------------------------

No comments:

Post a Comment