228. ನನ್ನ ಕರ್ತವ್ಯ (1965)


ನನ್ನ ಕರ್ತವ್ಯ ಚಿತ್ರದ ಹಾಡುಗಳು 
  1. ಹಾಡಲೇನು ಗೀತೆ ನಾನು 
  2. ಹದಿನಾರರ ಹರೆಯದ  ಹುಡುಗಿ 
  3. ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ 
  4. ಬೆಳಗಿದೆ ಭೂಮಿಯ 
ನನ್ನ ಕರ್ತವ್ಯ (1965) - ಹಾಡಲೇನು ಗೀತೆ ನಾನು
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಜಿ.ಕೆ.ವೆಂಕಟೇಶ್ ಹಾಡಿದವರು: ಎಸ್.ಜಾನಕಿ

ಹಾಡಲೇನು ಗೀತೆ ನಾನು ಹೃದಯ ಮಿಡಿವ ಗಾನವ
ಹಾಡಲೇನು ಗೀತೆ ನಾನು ಹೃದಯ ಮಿಡಿವ ಗಾನವ
ತೊರೆದು ನಾನೀ ಮೌನವ
ಹಾಡಲೇನು ಗೀತೆ ನಾನು ಹೃದಯ ಮಿಡಿವ ಗಾನವ
ತೊರೆದು ನಾನೀ ಮೌನವ ಹಾಡಲೇನು

ಅಂತರಂಗ ಹೇಳಲು ಅಂತರಂಗ ಹೇಳಲು
ಕಂಗಳೆರಡು ತುಂಬಲು ಅಂತರಂಗ ಹೇಳಲು
ಕಂಗಳೆರಡು ತುಂಬಲು ಭಾವದಲೆಯು ಹೊಮ್ಮಲು
ಹಾಡಲೇನು, ಹಾಡಲೇನು

ತ್ಯಾಗ ಪ್ರೇಮ ಬಾಳಿಗೆ ತ್ಯಾಗ ಪ್ರೇಮ ಬಾಳಿಗೆ
ರಾಗ ತಾಳ ಹಾಡಿಗೆ ತ್ಯಾಗ ಪ್ರೇಮ ಬಾಳಿಗೆ
ರಾಗ ತಾಳ ಹಾಡಿಗೆ ಜೀವನೀಡೋ ದೀವಗೆ
ಹಾಡಲೇನು ಹಾಡಲೇನು ಗೀತೆ ನಾನು
ಹೃದಯ ಮಿಡಿವ ಗಾನವ ತೊರೆದು ನಾನೀ ಮೌನವ
ಹಾಡಲೇನು
------------------------------------------------------------------------------------------------------------------------

ನನ್ನ ಕರ್ತವ್ಯ (೧೯೬೫)......ಹದಿನಾರರ ಹರೆಯದ ಹುಡುಗಿ
ಗಾಯನ : ಆರ್.ಎನ್.ಜಯಗೋಪಾಲ್ ಸಂಗೀತ : ಜಿ.ಕೆ.ವಂಕಟೇಶ್ ಗಾಯನ : ಡಾ.ಪಿ.ಬಿ.ಶ್ರೀನಿವಾಸ್


ಹದಿನಾರರ ಹರೆಯದ ಹುಡುಗಿ ಹುಡುಗಾಟದ ವಯಸಿನ ಹುಡುಗ
ಹೊಸ ಬಾಳಿನ ಗಾಡಿಯ ಹೂಡಿ ಹೊರಟಿಹರು ಒಂದು ಗೂಡಿ
ಹದಿನಾರರ ಹರೆಯದ ಹುಡುಗಿ ಹುಡುಗಾಟದ ವಯಸಿನ ಹುಡುಗ

ಹೊಸ ಬಾಳಿನ ಗಾಡಿಯ ಹೂಡಿ ಹೊರಟಿಹರು ಒಂದು ಗೂಡಿ
ತನ್ನನ್ನೇ ಮರೆತು ಅವಳಲ್ಲೇ ಬೆರೆತು ಕೆನೆಗಲ್ಲ ಚಿವುಟೆ ಹುಡುಗ
ತಲೆಬಾಗಿ ಕುಳಿತು ನಸುನಾಚಿ ಬೆವೆತು ನೆಲ ನೋಡುತಿಹಳು ಹುಡುಗಿ
ಇವ ಬೇರೆ ಅಲ್ಲ ನಿನ್ನ ಬಾಳ ನಲ್ಲ ಬಿಗಿದಿಹನು ನಿನಗೆ ತಾಳಿ
ಈಗೆಲ್ಲ ಹರುಷ ಮುಂಬರುವ ವರುಷ ನೀ ಹಾಡಬೇಕು ಲಾಲಿ
ಲ್ಹಾಲಿ....ಲ್ಹಾಲಿ....ಲ್ಹಾಲಿ....
ಹದಿನಾರರ ಹರೆಯದ ಹುಡುಗಿ ಹುಡುಗಾಟದ ವಯಸಿನ ಹುಡುಗ
ಹೊಸ ಬಾಳಿನ ಗಾಡಿಯ ಹೂಡಿ ಹೊರಟಿಹರು ಒಂದು ಗೂಡಿ

ಯಜಮಾನ ಮನೆಗೆ ಅವನಾದರೇನು ಯಜಮಾನಿ ಮನೆಗೆ ನೀನು
ನೀ ನುಡಿದ ಸ್ವರಕೆ ಕುಣಿದಾಗ ಅವನು ಸಂಸಾರ ಸವಿಯ ಜೇನು
ಯಜಮಾನ ಮನೆಗೆ ಅವನಾದರೇನು ಯಜಮಾನಿ ಮನೆಗೆ ನೀನು
ನೀ ನುಡಿದ ಸ್ವರಕೆ ಕುಣಿದಾಗ ಅವನು ಸಂಸಾರ ಸವಿಯ ಜೇನು
ಈ ಮೌನವೇಕೆ ಬಿಗುಮಾನವೇಕೆ ಸಂತಸದೆ ಬಾಳಿ ನೀವು
ನೀ ಅವನ ದೇವಿ ಅವ ನಿನ್ನ ದೈವ ಜೀವನವೇ ನಗುವ ಹೂವು
ಹದಿನಾರರ ಹರೆಯದ ಹುಡುಗಿ ಹುಡುಗಾಟದ ವಯಸಿನ ಹುಡುಗ
ಹೊಸ ಬಾಳಿನ ಗಾಡಿಯ ಹೂಡಿ ಹೊರಟಿಹರು ಒಂದು ಗೂಡಿ
--------------------------------------------------------------------------------------------------------------------------

ನನ್ನ ಕರ್ತವ್ಯ (1965) - ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಸಂಗೀತ: ಜಿ.ಕೆ.ವೆಂಕಟೇಶ್, ಸಾಹಿತ್ಯ: ನಂಜು ಕವಿ,  ಹಾಡಿದವರು: ಎಸ್.ಜಾನಕಿ, ಪಿ.ಬಿ.ಎಸ್. 

ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈಮರೆವಾ
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈಮರೆವಾ

ಕಾಲ ನವೀನ ಕಲೆಯು ನವೀನ 
ಕಾಡಿಗೆ ಕಣ್ಣಿನ ಭಾವ ನವೀನ 
ಉಡಿಗೆ ನವೀನ ತೊಡಿಗೆ ನವೀನ 
ಮದನನ ಬಾಣ ಸಹಿಸೆನು ನಾ 
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈಮರೆವಾ 

ಮೊಡವ ತೂರಿ ಮುಗಿಲನು ಏರಿ 
ಬಾನಲಿ ಚಂದ್ರನ ಸೀಮೆಯ ಸೇರಿ 
ಬಾಳಿನ ಬೆಳಕ ಚೆಲ್ಲುತಾ ಬಾರೆ 
ಜೇನಿನ ಹೊಳೆಯಲಿ ಮೀಯುವ ಬಾ 
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ
ಕಣ್ಣಲ್ಲಿ ಕಣ್ಣಾಗಿ ಮೈಮರೆವಾ 
--------------------------------------------------------------------------------------------------------------------------

ನನ್ನ ಕರ್ತವ್ಯ (1965) - ಬೆಳಗಿದೆ ಭೂಮಿಯ 
ಸಂಗೀತ: ಜಿ.ಕೆ.ವೆಂಕಟೇಶ್, ಸಾಹಿತ್ಯ: ಜಿ.ಕೆ.ವೆಂಕಟೇಶ,  ಹಾಡಿದವರು: ಜಿ.ಕೆ.ವೆಂಕಟೇಶ 

--------------------------------------------------------------------------------------------------------------------------

No comments:

Post a Comment