231. ಮಲ್ಲಮ್ಮನ ಪವಾಡ (1969)

ಮಲ್ಲಮನ ಪವಾಡ ಚಿತ್ರದ ಹಾಡುಗಳು 
  1. ಹಾಡೋಣ ಒಲವಿನ ರಾಗ ಮಾಲೆ
  2. ಶರಣೆಂಬಿನಾ ಶಶಿಭೂಷಣಾ ಗೌರಿ ಪ್ರಿಯಾ ಜಗನ್ಮೋಹನಾ  
  3. ಹುಚ್ಚರಲ್ಲ ನೀವು ಹುಚ್ಚರಲ್ಲ ಈ ಪಚ್ಚೆಕಲ್ಲು ತಿಪ್ಪೆಯಲ್ಲಿ
  4. ಮರೆಯದ ಮಾತಾಡೋ ಜಾಣ
  5. ಆಶಾ ವಿಲಾಸಿ ಈ ರೂಪರಾಶಿ ಷೋಡಶೀ 
  6. ನಾನೂ ನಿಮ್ಮಂಗೇ .. 
ಮಲ್ಲಮ್ಮನ ಪವಾಡ (1969) - ಹಾಡೋಣ ಒಲವಿನ ರಾಗ ಮಾಲೆ
ಸಂಗೀತ: ವಿಜಯ ಭಾಸ್ಕರ್  ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ

ಹೆಣ್ಣು : ಆಹಾ...  (ಹೂಂ ಹೂಂ ಹೂಂ ಹೂಂ ) ಆಹಾ...  (ಹೂಂಹೂಂಹೂಂಹೂಂ ಓಓಓಓ )
          ಹೂಂ ಹೂಂ ಹೂಂ ಹೂಂ (ಒಹೋ) ಹೂಂ ಹೂಂ ಹೂಂ ಹೂಂ (ಅಹ್ಹಹ್ಹಹ್ಹಾ.. ) ಅಹ್ಹಹ್ಹಹ್ಹಾ..
          (ಓಹೋಹೋ ) ಓಹೋಹೋ ..
           ಓ.. ಹಾಡೋಣ ಒಲವಿನ ರಾಗ ಮಾಲೆ
ಗಂಡು : ಆಡೋಣ ಒಲವಿನ ರಾಸ ಲೀಲೆ
ಹೆಣ್ಣು : ಹಾಡೋಣ ಒಲವಿನ ರಾಗ ಮಾಲೆ
ಗಂಡು : ಆಡೋಣ ಒಲವಿನ ರಾಸ ಲೀಲೆ
ಇಬ್ಬರು : ಹಾಡೋಣ ಒಲವಿನ ರಾಗ ಮಾಲೆ

ಹೆಣ್ಣು : ಈ ಧರೆಯ ಆ ಗಿರಿಯ ಬೆಳ್ಮುಗಿಲ ಮೇಲೆ
ಗಂಡು : ಹೂ ಬಳ್ಳಿ ಹೂ ಗಾಳಿ ನದಿ ಅಲೆಯ ಮೇಲೆ
ಹೆಣ್ಣು : ಆಹ್ಹಾಹ್ಹಾ.. ಆಹಾ ಆಆಆ.. (ಓಹೋಹೊಹೋ ಓಓಓ)
ಹೆಣ್ಣು : ಈ ಧರೆಯ ಆ ಗಿರಿಯ ಬೆಳ್ಮುಗಿಲ ಮೇಲೆ
ಗಂಡು : ಹೂ ಬಳ್ಳಿ ಹೂ ಗಾಳಿ ನದಿ ಅಲೆಯ ಮೇಲೆ
ಹೆಣ್ಣು : ಮೈಮರೆಸೊ ಒಲವಿನ ನಾದ ಲೀಲೆ
         ಮೈಮರೆಸೊ ಒಲವಿನ ನಾದ ಲೀಲೆ ಒಲವೇ..
ಇಬ್ಬರು : ಬಾಡದ ಸಂಬಂಧ ಮಾಲೆ
ಗಂಡು : ಹಾಡೋಣ ಒಲವಿನ ರಾಗ ಮಾಲೆ
ಹೆಣ್ಣು : ಆಡೋಣ ಒಲವಿನ ರಾಸ ಲೀಲೆ
ಇಬ್ಬರು : ಹಾಡೋಣ ಒಲವಿನ ರಾಗ ಮಾಲೆ

ಗಂಡು : ಮನದನ್ನೆಯ ಮನವೊಲಿಸುವ ಮಧುಮಂಚದ ಮೇಲೆ
ಹೆಣ್ಣು : ಮಧುರಾಧರ ಮಧುಮೈತ್ರಿಯ ಮುಂದಾಗೋ ವೇಳೆ
ಗಂಡು  : ಆಹ್ಹಾಹ್ಹಾ.. ಆಹಾ ಆಆಆ.. (ಓಹೋಹೊಹೋ ಓಓಓ)
             ಮನದನ್ನೆಯ ಮನವೊಲಿಸುವ ಮಧುಮಂಚದ ಮೇಲೆ
ಹೆಣ್ಣು : ಮಧುರಾಧರ ಮಧುಮೈತ್ರಿಯ ಮುಂದಾಗೋ ವೇಳೆ
ಗಂಡು : ಮರೆಯದ ಒಲವಿನ ರಸಿಕ ಲೀಲೆ
           ಮರೆಯದ ಒಲವಿನ ರಸಿಕ ಲೀಲೆ ಒಲವೇ..
ಇಬ್ಬರು : ಬಾಡದ ಸಂಬಂಧ ಮಾಲೆ
             ಹಾಡೋಣ ಒಲವಿನ ರಾಗ ಮಾಲೆ ಆಡೋಣ ಒಲವಿನ ರಾಸ ಲೀಲೆ
             ಹಾಡೋಣ ಒಲವಿನ ರಾಗ ಮಾಲೆ
-------------------------------------------------------------------------------------------------------------------------

ಮಲ್ಲಮ್ಮನ ಪವಾಡ (1969) - ಶರಣೆಂಬಿನಾ ಶಶಿಭೂಷಣಾ ಗೌರಿ ಪ್ರಿಯಾ ಜಗನ್ಮೋಹನಾ  
ಸಂಗೀತ: ವಿಜಯ ಭಾಸ್ಕರ್, ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ ಹಾಡಿದವರು: ಪಿ.ಸುಶೀಲಾ

ಶರಣೆಂಬೆನಾ ಶಶಿಭೂಷಣ... ಶರಣೆಂಬೆನಾ ಶಶಿಭೂಷಣ ಗೌರಿ ಪ್ರಿಯಾ ಜಗನ್ಮೋಹನಾ
ಶರಣೆಂಬೆನಾ ಶಶಿಭೂಷಣಾ ಗೌರಿ ಪ್ರಿಯಾ ಜಗನ್ಮೋಹನಾ ಶರಣೆಂಬೆನಾ ಶಶಿಭೂಷಣಾ

ಕೆಂಜೆಡೆ ಮುಡಿಯ ಕಾಪಾಲಿಕನೇ ನಂಜು ನುಂಗಿದ ನಂಜುಂಡೇಶನೇ
ಕೆಂಜೆಡೆ ಮುಡಿಯ ಕಾಪಾಲಿಕನೇ ನಂಜು ನುಂಗಿದ ನಂಜುಂಡೇಶನೇ
ಅಂಜಿದ ಬಾಲನ ಅಪ್ಪಿ ಮುದ್ದಾಡಿದ
ಅಂಜಿದ ಬಾಲನ ಅಪ್ಪಿ ಮುದ್ದಾಡಿದ ಮೃತ್ಯುಂಜಯಾ ನೀ ದಯಾಮಯ
ಶರಣೆಂಬೆನಾ ಶಶಿಭೂಷಣಾ ಗೌರಿ ಪ್ರಿಯಾ ಜಗನ್ಮೋಹನಾ ಶರಣೆಂಬೆನಾ ಶಶಿಭೂಷಣಾ

ಬೇಡರ ಕಣ್ಣನ ಪೂಜೆಗೆ ನೀನೊಲಿದೆ ಅಲ್ಲಮ ಪ್ರಭುವಾಗಿ ಮಾಯೆಯ ಗೆಲ್ಲಿದೆ
ಬೇಡರ ಕಣ್ಣನ ಪೂಜೆಗೆ ನೀನೊಲಿದೆ ಅಲ್ಲಮ ಪ್ರಭುವಾಗಿ ಮಾಯೆಯ ಗೆಲ್ಲಿದೆ
ಬಲ್ಲಿದ ಬಸವಂಗೆ ಕುಲದೈವ ನೀನಾದೆ
ಬಲ್ಲಿದ ಬಸವಂಗೆ ಕುಲದೈವ ನೀನಾದೆ ಮಹಾದೇವಿಯಕ್ಕನ ಚೆನ್ನ ಮಲ್ಲಿಕಾರ್ಜುನ
ಶರಣೆಂಬೆನಾ ಶಶಿಭೂಷಣಾ ಗೌರಿ ಪ್ರಿಯಾ ಜಗನ್ಮೋಹನಾ
ಶರಣೆಂಬೆನಾ ಶಶಿಭೂಷಣಾ ಗೌರಿ ಪ್ರಿಯಾ ಜಗನ್ಮೋಹನಾ ಶರಣೆಂಬೆನಾ ಶಶಿಭೂಷಣಾ...
-------------------------------------------------------------------------------------------------------------------------

ಮಲ್ಲಮ್ಮನ ಪವಾಡ (1969) -  ಹುಚ್ಚರಲ್ಲ ನೀವು ಹುಚ್ಚರಲ್ಲ ಈ ಪಚ್ಚೆಕಲ್ಲು ತಿಪ್ಪೆಯಲ್ಲಿ
ಸಂಗೀತ: ವಿಜಯ ಭಾಸ್ಕರ್, ಸಾಹಿತ್ಯ: ವಿಜಯನಾರಸಿಂಹ ಹಾಡಿದವರು: ಪಿ.ಸುಶೀಲಾ

ಹುಚ್ಚರಲ್ಲ ನೀವು ಹುಚ್ಚರಲ್ಲ
ಹುಚ್ಚರಲ್ಲ ನೀವು ಹುಚ್ಚರಲ್ಲ ಈ ಪಚ್ಚೆಕಲ್ಲು ತಿಪ್ಪೆಯಲ್ಲಿ ಎಸೆದ ಅವರೇ ಹುಚ್ಚರು
ಹುಚ್ಚರಲ್ಲ ನೀವು ಹುಚ್ಚರಲ್ಲ

ಆಸೆ ಲತೆಯ ಚಿಗುರಿನಲ್ಲಿ ಚಿವುಟುವಂಥ ಹೀನರು
ಕಬ್ಬಿಣ ಜಲ್ಲೇ ಡೊಂಕ ಕಂಡು ರಸವೇ ಕಹಿ ಎನುವರು
ಆಸೆ ಲತೆಯ ಚಿಗುರಿನಲ್ಲಿ ಚಿವುಟುವಂಥ ಹೀನರು
ಕಬ್ಬಿಣ ಜಲ್ಲೇ ಡೊಂಕ ಕಂಡು ರಸವೇ ಕಹಿ ಎನುವರು
ನಂಜು ನಾಲಗೆಯಿಂದ ಮನವ ಚುಚ್ಚಿ ಚುಚ್ಚಿ ನಗುವರು
ಅವರ ಮನ್ನಿಸಿ ನಾನೇ ಹುಚ್ಚ ಎನುವ ನೀವೇ ದೇವರು
ಹುಚ್ಚರಲ್ಲ ನೀವು ಹುಚ್ಚರಲ್ಲ ಈ ಪಚ್ಚೆಕಲ್ಲ ತಿಪ್ಪೆಯಲ್ಲಿ ಎಸೆದ ಅವರೇ ಹುಚ್ಚರು
ಹುಚ್ಚರಲ್ಲ ನೀವು ಹುಚ್ಚರಲ್ಲ

ಸೋಲು ನಮ್ಮ ಬಾಳಿನಲ್ಲಿ ಗೆಲುವು ಗಳಿಸುವ ಮೆಟ್ಟಿಲು
ಒಂದು ಜೀವ ಎರಡು ದೇಹ ಆಗಿ ಅವರ ಮೆಟ್ಟಲು
ಸೋಲು ನಮ್ಮ ಬಾಳಿನಲ್ಲಿ ಗೆಲುವು ಗಳಿಸುವ ಮೆಟ್ಟಿಲು
ಒಂದು ಜೀವ ಎರಡು ದೇಹ ಆಗಿ ಅವರ ಮೆಟ್ಟಲು
ಸಮಯ ಸಾಧಕ ಜನರು ಆಗಿ ಮೆಟ್ಟಿ ಮೆಟ್ಟಿ ಹಾಡಲು
ಅವರ ಮನ್ನಿಸಿ ನಾನೇ ಹುಚ್ಚ ಎನುವ ನೀವೇ ದೇವರು
ಹುಚ್ಚರಲ್ಲ ನೀವು ಹುಚ್ಚರಲ್ಲ ಈ ಪಚ್ಚೆಕಲ್ಲ ತಿಪ್ಪೆಯಲ್ಲಿ ಎಸೆದ ಅವರೇ ಹುಚ್ಚರು
ಹುಚ್ಚರಲ್ಲ ನೀವು ಹುಚ್ಚರಲ್ಲ
--------------------------------------------------------------------------------------------------------------------------

ಮಲ್ಲಮ್ಮನ ಪವಾಡ (1969) - ಮರೆಯದ ಮಾತಾಡೋ ಜಾಣ
ಸಂಗೀತ: ವಿಜಯ ಭಾಸ್ಕರ್, ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ ಹಾಡಿದವರು:ಬಿ.ಕೆ.ಸುಮಿತ್ರಾ 

ಮರೆಯದ ಮಾತಾಡೋ...  ಜಾಣ
ಮರೆಯದ ಮಾತಾಡೋ...  ಜಾಣ
ಸರಸಮಯ ಈ ಸಮಯ ಮನ ಮೋಹನಾ
ಮರೆಯದ ಮಾತಾಡೋ...  ಜಾಣ

ಅಂದದ ಚೆಂದದ ಈ ನವಯೌವ್ವನ
ಅಂದದ ಚೆಂದದ ಈ ನವಯೌವ್ವನ ಮಧುರ ಸಮಾಗಮ ಸಂಧಾನ
ಮಧುರ ಸಮಾಗಮ ಸಂಧಾನ ಹೃದಯದೆ ಏನೇನೋ ಆಶಾ ತಾನಾ...
ಹೃದಯದೆ ಏನೇನೋ ಆಶಾ ತಾನಾ... ಅದುವೇ ಮೋಹದ ಪ್ರೇಮವಿತಾನ
ಅದುವೇ ಮೋಹದ ಪ್ರೇಮವಿತಾನ
ಮರೆಯದ ಮಾತಾಡೋ...  ಜಾಣ

ತನುಮನ ತಣಿಸುವ ನವರಸ ಔತಣ
ತನುಮನ ತಣಿಸುವ ನವರಸ ಔತಣ ರಸಿಕರಸಾನಂದ ಸಮ್ಮಿಲ್ಲನವ
ರಸಿಕರಸಾನಂದ ಸಮ್ಮಿಲ್ಲನವ ರತಿಪತಿ ಸ್ನೇಹದ ಈ ಆಹ್ವಾನ..
ರತಿಪತಿ ಸ್ನೇಹದ ಈ ಆಹ್ವಾನ ತಿಳಿಯೋ ಒಲಿಯೋ ಕನ್ನಡ ಜಾಣ
ತಿಳಿಯೋ ಒಲಿಯೋ ಕನ್ನಡ ಜಾಣ
ಮರೆಯದ ಮಾತಾಡೋ...  ಜಾಣ
ಸರಸಮಯ ಈ ಸಮಯ ಮನ ಮೋಹನಾ
ಮರೆಯದ ಮಾತಾಡೋ...  ಜಾಣ
--------------------------------------------------------------------------------------------------------------------------

ಮಲ್ಲಮ್ಮನ ಪವಾಡ (1969) - ಆಶಾ ವಿಲಾಸಿ ಈ ರೂಪರಾಶಿ ಷೋಡಶೀ
ಸಂಗೀತ: ವಿಜಯ ಭಾಸ್ಕರ್, ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ ಹಾಡಿದವರು: ಎಲ್.ಆರ್.ಈಶ್ವರಿ

ಆಶಾ ವಿಲಾಸಿ ಈ ರೂಪರಾಶಿ ಷೋಡಶೀ ಷೋಡಶೀ
ನಾ ಇನ್ನೂ ಷೋಡಶೀ... ಷೋಡಶೀ
ಆಶಾ ವಿಲಾಸಿ ಈ ರೂಪರಾಶಿ ಷೋಡಶೀ ಷೋಡಶೀ
ನಾ ಇನ್ನೂ ಷೋಡಶೀ.. ಷೋಡಶೀ

ಒಲವಿನ...  ಕಥೆಗಳ...  ಓದಿಹೇನು  ಪ್ರಣಯದ...  ಕಾವ್ಯಾವ...  ಕೇಳಿಹೆನು 
ಒಲವಿನ ಕಥೆಗಳ ಓದಿಹೇನು  ಪ್ರಣಯದ ಕಾವ್ಯಾವ ಕೇಳಿಹೆನು 
ನವರಸ ಲಾಸ್ಯದ ರಸಗಂಗೆ ನಾನೂ
ನವರಸ ಲಾಸ್ಯದ ರಸಗಂಗೆ ನಾನೂ ರಮಿಸುವ ರಸಋಷಿ... ಅಹ್ಹಹ್ಹ  ನೀನು 
ರಮಿಸುವ ರಸಋಷಿ ನೀ... ನೂ ..
ಆಶಾ ವಿಲಾಸಿ ಈ ರೂಪರಾಶಿ ಷೋಡಶೀ ಷೋಡಶೀ
ನಾ ಇನ್ನೂ ಷೋಡಶೀ... ಷೋಡಶೀ

ಹೃದಯದ...  ಕಿವಿಯಲಿ...  ಹಾಡುವೇನೂ  ಮೋಹದ...  ಅಮಲಲಿ...  ಆಡುವೆನೂ 
ಹೃದಯದ ಕಿವಿಯಲಿ ಹಾಡುವೇನೂ ಮೋಹದ ಅಮಲಲಿ ಆಡುವೆನೂ
ತುಂಬಿದೆ ತುಟಿಯಲಿ ಹಾಲಜೇನು
ತುಂಬಿದೆ ತುಟಿಯಲಿ ಹಾಲಜೇನು ಚುಂಬಿಸೋ....  ರಸಿಕ ನೀ .. ಅಹ್ಹಹ್ಹ.. ನೀನೂ
ಚುಂಬಿಸೋ ರಸಿಕನೂ ನೀನೂ 
ಆಶಾ ವಿಲಾಸಿ ಈ ರೂಪರಾಶಿ ಷೋಡಶೀ ಷೋಡಶೀ ನಾ ಇನ್ನೂ ಷೋಡಶೀ... ಷೋಡಶೀ
--------------------------------------------------------------------------------------------------------------------------

ಮಲ್ಲಮ್ಮನ ಪವಾಡ (1969) - ನಾನೂ ನಿಮ್ಮಂಗೇ ...
ಸಂಗೀತ: ವಿಜಯ ಭಾಸ್ಕರ್, ಸಾಹಿತ್ಯ: ಕಣಗಾಲ್ ಪ್ರಭಾಕರ ಶಾಸ್ತ್ರಿ ಹಾಡಿದವರು: ಪಿ.ಬಿ.ಎಸ್. 

ಶ್!.... ಗೇಹ ನಿಮನೂ ನಾನರೋಂಕಾ ನೀ ಬೇಗಂ  
ನಾನುನೂ ನಿಮ್ಮಂಗೇ ಗೊಂಬೆನೇ ಕಣ್ಣರೋ ನನಗಂತೂ ಏನೇನೋ ಗೊತ್ತಿಲ್ಲ ಕಣ್ಣರೋ
ನಿಮಗಿಂತ ನಾನೇನೋ ಹೆಚ್ಚಲ್ಲ ಬನ್ನರೋ ನಿಮ್ಮಸಂಗ ಸೇರೋದೇ ಸಂತೋಷ ಕಣ್ಣರೋ
ನಾನುನೂ ನಿಮ್ಮಂಗೇ ಗೊಂಬೆನೇ ಕಣ್ಣರೋ ನನಗಂತೂ ಏನೇನೋ ಗೊತ್ತಿಲ್ಲ ಕಣ್ಣರೋ
ನಿಮಗಿಂತ ನಾನೇನೋ ಹೆಚ್ಚಲ್ಲ ಬನ್ನರೋ ನಿಮ್ಮಸಂಗ ಸೇರೋದೇ ಸಂತೋಷ ಕಣ್ಣರೋ

ದಮ್ಮಯ್ಯ ಬೇಡಪ್ಪ ನಿನ್ನ ತಂಟೇ ಅಂದ್ರೇ .. ಆಗ್ಲನೂ ಬೆಪ್ಪಂತ ಕೊಡ್ತಾರೇ ತೊಂದ್ರೇ ..
ದಮ್ಮಯ್ಯ ಬೇಡಪ್ಪ ನಿನ್ನ ತಂಟೇ ಅಂದ್ರೇ .. ಆಗ್ಲನೂ ಬೆಪ್ಪಂತ ಕೊಡ್ತಾರೇ ತೊಂದ್ರೇ ..
ನನ್ನ ನೋಡಿ ಕಿಸಿಕಿಸಿ ನಗ್ತಾರೇ ನೋಡ್ರೋ ಸುಮ್ಮನಿರೋ ನೀವೇನೇ ಒಳ್ಳೆಯವರೂ ಕಣ್ಣರೋ
ನಾನುನೂ ನಿಮ್ಮಂಗೇ ಗೊಂಬೆನೇ ಕಣ್ಣರೋ ನನಗಂತೂ ಏನೇನೋ ಗೊತ್ತಿಲ್ಲ ಕಣ್ಣರೋ
ನಿಮಗಿಂತ ನಾನೇನೋ ಹೆಚ್ಚಲ್ಲ ಬನ್ನರೋ ನಿಮ್ಮಸಂಗ ಸೇರೋದೇ ಸಂತೋಷ ಕಣ್ಣರೋ

ಬಾಯಿ ಬಿಟ್ಟರೇ ಬೇಕೂಫ ಸುಮ್ಮನಿದ್ರೇ ಬೆಪ್ಪಾ.. ಹ್ಯಾಗಿರಲೀ ಹೇಳಪ್ಪಾ ಹನುಮಂತಪ್ಪಾ ..
ಬಾಯಿ ಬಿಟ್ಟರೇ ಬೇಕೂಫ ಸುಮ್ಮನಿದ್ರೇ ಬೆಪ್ಪಾ.. ಹ್ಯಾಗಿರಲೀ ಹೇಳಪ್ಪಾ ಹನುಮಂತಪ್ಪಾ ..
ನರಿರಾಯ ಹೇಳಯ್ಯಾ ಬಾಳೋ ಉಪಾಯ ಹುಲಿರಾಯ ನಿನಗಿಂತ ಇವರೇ ಅಪಾಯ
ನಾನುನೂ ನಿಮ್ಮಂಗೇ ಗೊಂಬೆನೇ ಕಣ್ಣರೋ ನನಗಂತೂ ಏನೇನೋ ಗೊತ್ತಿಲ್ಲ ಕಣ್ಣರೋ
ನಿಮಗಿಂತ ನಾನೇನೋ ಹೆಚ್ಚಲ್ಲ ಬನ್ನರೋ ನಿಮ್ಮಸಂಗ ಸೇರೋದೇ ಸಂತೋಷ ಕಣ್ಣರೋ

ಸೋಮಾರೀ ನಾನಲ್ಲಾ.. ನೀ ಕೇಳೋ ರಾಜ ನಿನ್ನ ಕೂಡೇ ನಾ ಸೇರಿ ಮಾಡ್ತಿನೀ ಮೋಜ
ಸೋಮಾರೀ ನಾನಲ್ಲಾ.. ನೀ ಕೇಳೋ ರಾಜ ನಿನ್ನ ಕೂಡೇ ನಾ ಸೇರಿ ಮಾಡ್ತಿನೀ ಮೋಜ
ನೀವೇನೋ ಜಗಳಾನೇ ಆಡಲ್ಲ ಆಲ್ವಾ.. ನಿಮ್ಮಂಗೇ ನಾನಾದ್ರೇ ಒಳ್ಳೆದೇ ಆಲ್ವಾ..
ನಿಮ್ಮಂಗೇ ನಾನಾದ್ರೇ ಒಳ್ಳೆದೇ ಆಲ್ವಾ..
ನಾನುನೂ ನಿಮ್ಮಂಗೇ ಗೊಂಬೆನೇ ಕಣ್ಣರೋ ನನಗಂತೂ ಏನೇನೋ ಗೊತ್ತಿಲ್ಲ ಕಣ್ಣರೋ
ನಿಮಗಿಂತ ನಾನೇನೋ ಹೆಚ್ಚಲ್ಲ ಬನ್ನರೋ ನಿಮ್ಮಸಂಗ ಸೇರೋದೇ ಸಂತೋಷ ಕಣ್ಣರೋ
--------------------------------------------------------------------------------------------------------------------------

No comments:

Post a Comment